ಪೋಸ್ಟ್ ಮ್ಯಾನ್ ಗಂಗಣ್ಣ (ಕೊನೆಯ ಭಾಗ)”: ಎಂ.ಜವರಾಜ್

-13- ಆ ಗುಡುಗು ಸಿಡಿಲು ಮಿಂಚು ಬೀಸುತ್ತಿದ್ದ ಗಾಳಿಯೊಳಗೆ ಉದರುತ್ತಿದ್ದ ಸೀಪರು ಸೀಪರು ಮಳೆಯ ಗವ್ಗತ್ತಲೊಳಗೆ ಮನೆ ಸೇರಿದಾಗ ಎಲ್ಲರೂ ನಿದ್ರೆಗೆ ಜಾರಿದ್ದರು. ಚಿಲಕ ಹಾಕದೆ ಟೇಬಲ್ ಒತ್ತರಿಸಿ ಹಾಗೇ ಮುಚ್ಚಿದ್ದ ಬಾಗಿಲು ತಳ್ಳಿ ಒಳ ಹೋಗಿ ಮೊಂಬತ್ತಿ ಹಚ್ಚಿದೆ. ಕರೆಂಟ್ ಬಂದಾಗ ಮೊಬೈಲ್ ಚಾರ್ಜ್ ಆಗಲೆಂದು ಪಿನ್ ಹಾಕಿ ಒದ್ದೆಯಾದ ಬಟ್ಟೆ ಬಿಚ್ಚಿ ಬದಲಿಸಿ ಕೈಕಾಲು ಮುಖ ತೊಳೆದು ಉಂಡು ಮಲಗಿದವನಿಗೆ ರಾತ್ರಿ ಪೂರಾ ಬಸ್ಟಾಪಿನಲ್ಲಿ ಷಣ್ಮುಖಸ್ವಾಮಿ ಗಂಗಣ್ಣನ ಬಗ್ಗೆ ಆಡಿದ ಮಾತಿನ ಗುಂಗು. ಆ … Read more

ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮ – ಒಂದು ವಿವೇಚನೆ: ಸಂತೋಷ್ ಟಿ

ಮೈಸೂರು ರಾಜ ಸಂಸ್ಥಾನದಲ್ಲಿ ಎಲೆ ಅಡಿಕೆ ನೀಡುವ ಸಂಚಿಯ ಕಾಯಕದ ಸಖಿಯಾಗಿ ವೃತ್ತಿಧರ್ಮದಲ್ಲಿದ್ದ ಹೊನ್ನಮ್ಮನ ಕೃತಿ ‘ಹದಿಬದೆಯ ಧರ್ಮ’ವಾಗಿದೆ. ಚಿಕ್ಕದೇವರಾಜ ಒಡೆಯರ್ ಕಾಲದ ಸರಿಸುಮಾರು ಕ್ರಿ.ಶ. ೧೬೭೨-೧೭೦೪ ನೇ ಶತಮಾನದ ಕಾಲಘಟ್ಟದಲ್ಲಿ ಸರಸ ಸಾಹಿತ್ಯದ ವರದೇವತೆ ಎಂಬ ಅಗ್ಗಳಿಕೆಗೆ ಪಾತ್ರಳಾದವಳು ಹೊನ್ನಮ್ಮ. ದೇವರಾಜಮ್ಮಣ್ಣಿಯ ರಾಣಿ ವಾಸದ ಸಖಿಯಾಗಿ ಎಳಂದೂರಿನಿಂದ ಬಂದು ಸೇರಿದ್ದ ಹೊನ್ನಮ್ಮನು, ಅರಮನೆಯ ಪರಿವಾರಕ್ಕೆ ತಾಂಬೂಲ ಅಥವಾ ಎಲೆಅಡಿಕೆ ನೀಡುವ ಕಾಯಕ ಮಾಡುತ್ತಿದ್ದಳು. ತನ್ನ ಬುದ್ಧಿ ಶಕ್ತಿಯಿಂದ ಅರಮನೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಾಹಿತ್ಯ ಪರಿಸರದಿಂದ … Read more

ಮಾತನಾಡುವ ಮಂಚ: ಡಾ. ಮಲರ್ ವಿಳಿ ಕೆ

ತಮಿಳು ಮೂಲ : ಪುದುಮೈಪಿತ್ತನ್ರಚಿಸಿದ ಕಾಲ: ೧೯೩೪ಅನುವಾದ : ಡಾ. ಮಲರ್ ವಿಳಿ ಕೆ, ಕನ್ನಡ ಪ್ರಾಧ್ಯಾಪಕರು,, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ. ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ವದ ಕಡೆಯ ವಾರ್ಡ್ ನ ಹಾಸಿಗೆಯಲ್ಲಿ, ನನ್ನ ರೋಗಕ್ಕೆ ಏನೋ ಒಂದು ಉದ್ದನೆಯ ಲ್ಯಾಟಿನ್ ಹೆಸರನ್ನು ಹೇಳಿ, ನನ್ನನ್ನು ಕರೆದುಕೊಂಡು ಹೋಗಿ ಮಲಗಿಸಿದರು. ನನ್ನ ಇಕ್ಕೆಲಗಳಲ್ಲಿಯೂ ನನ್ನಂತೆ ಹಲವು ರೋಗಿಗಳು ಗೋಳಿಡುತ್ತಾ, ಹೂಂಗುಡುತ್ತಾ ನರಕದ ಉದಾಹರಣೆಯಂತೆ.ಒಂದೊಂದು ಮಂಚದ ಪಕ್ಕದಲ್ಲಿಯೂ ಔಷಧಿಯನ್ನು ಗಂಜಿಯನ್ನು ಇಡಲು ಒಂದು ಚಿಕ್ಕ ಆಲಮಾರು, ಮಂಚದ ಕಂಬಿಯಲ್ಲಿ ಡಾಕ್ಟರ ಗೆಲುವು … Read more

ಓ ನನ್ನ ಚೇತನ ಆಗು ಅನಿಕೇತನ…:ಅಶ್ಫಾಕ್ ಪೀರಜಾದೆ

ಕೆಲ ವರ್ಷಗಳ ಹಿಂದಿನ ಮಾತು, ಹೆಸರಾಂತ ಲೇಖಕ ಅಬ್ಬಾಸ್ ಮೇಲಿನಮನಿಯವರು “ಲೋಕ-ದರ್ಶನ” ಸಾಪ್ತಾಹಿಕದಲ್ಲಿ ಬೆಳಕು ಕಂಡ ನನ್ನ ಕಥೆ “ಜನ್ನತ್” ಬಗ್ಗೆ ಪ್ರತಿಕ್ರಿಯಿಸಿ ಬೆನ್ನ ತಟ್ಟಿದ್ದರು. ಹಾಗೇ ನಾನು ಸಹ “ಪ್ರಜಾ-ವಾಣಿ”ಯಲ್ಲಿ ಪ್ರಕಟವಾದ ಅವರ ಕಥೆ “ಅಮಿನಾಳ ಹಝ್ ಯಾತ್ರೆ”ಯ ಬಗ್ಗೆ ಮಾತಾಡಿದ್ದೆ. ತನ್ನ ಗಂಡನ ಹಝ್ ಯಾತ್ರೆಯ ಕನಸು ಪರೋಪಕಾರದಲ್ಲಿ ಸಾಕಾರಗೊಳಿಸುವ ಒಂದು ಶೋಷಿತ ಹೆಣ್ಣಿನ ಕರಳು ಮಿಡಿಯುವ ಕಥೆ ತುಂಬಾ ಹೈದಯ ಸ್ರ‍್ಶಿಯಾಗಿ ಮೂಡಿ ಬಂದಿತ್ತು. ಆ ಕಥೆಯ ಬಗ್ಗೆ ಬರೆಯುವುದು ಈ ಲೇಖನದ … Read more

“ಸಿಎಮ್ಮೆನ್ ಎಂಬ ರಂಗ ರೂವಾರಿ”: ಎಂ.ಜವರಾಜ್

ಕೃಷ್ಣಮೂರ್ತಿ ಹನೂರರು “ಚಾಮರಾಜನಗರ ಸೆರಗಿನ ಇಲ್ಲವೇ, ತಿರುಮಕೂಡಲು ನರಸೀಪುರ ಸುತ್ತಮುತ್ತಲಿನ ಬದುಕು ಬವಣೆ ಹೇಳುವ..” ಎಂದು ನನ್ನ ಮೊದಲ ಕಥಾ ಸಂಕಲನದ ಮುನ್ನುಡಿಯಲ್ಲಿ ಬರೆಯುತ್ತಾರೆ. ಇದು ಮೈಸೂರು ಚಾಮರಾಜನಗರ ಜಿಲ್ಲೆಗಳ ಅವಿನಾಭಾವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಮನೋಸ್ಥಿತಿಯ ದ್ಯೂತಕದ ಬೆಸುಗೆಯಾಗಿದೆ. ಮೈಸೂರು ಜೆಲ್ಲೆಯ ಭಾಗವಾಗಿದ್ದ ಚಾಮರಾಜನಗರ, ರಾಜ್ಯದ ದಕ್ಷಿಣ ಗಡಿ ನೆಲವಾಗಿ ಆಳುವವರಿಂದ ನಿರ್ಲಕ್ಚ್ಯಕ್ಕೆ ಗುರಿಯಾಗಿ ಅಭಿವೃದ್ಧಿಹೀನವಾಗಿ ಅನಾಥವಾದಂತೆ ಕಾಣುತ್ತಿತ್ತು. ಇದನ್ನರಿತ ಸ್ಥಳೀಯ ಜನ ಸಮೂಹದಲ್ಲಿ ಪ್ರಭುತ್ವದ ವಿರುದ್ಧ ಅಸಹನೆಯ ಕಾರಣವಾಗಿ ಅದೊಂದು ಸಮಯ ಓಟ್ ಬ್ಯಾಂಕ್ … Read more

ಭ್ರಮಾ – ಸತ್ಯ – ಭಾಮಾ !: ಡಾ. ಹೆಚ್ ಎನ್ ಮಂಜುರಾಜ್

ನಾನು ಸಾಮಾನ್ಯವಾಗಿ ಪ್ರಶ್ನೆಗಳನ್ನು ಕೇಳುತ್ತಾ ಕೂರುವುದಿಲ್ಲ; ಆದರೆ ನನ್ನನ್ನೇ ಕೇಳಿಕೊಳ್ಳುತ್ತಿರುತ್ತೇನೆ. ಸಾಧ್ಯವಾದಷ್ಟೂ ಪ್ರಶ್ನೆಗಳೇ ಹುಟ್ಟದಂತೆ ನೋಡಿಕೊಳ್ಳುತ್ತಿರುತ್ತೇನೆ! ಇದೊಂದು ಸುಖವಾದ ಮತ್ತು ನಿರಾಯಾಸ ಸ್ಥಿತಿ. ಇದಕ್ಕೆ ವಿಶೇಷವಾದ ಜ್ಞಾನವೇನೂ ಬೇಡ; ಎಂಥದೋ ಅಲೌಕಿಕವೋ; ಅಧ್ಯಾತ್ಮಸಿದ್ಧಿಯೋ ಎಂಬಂಥ ಹೆಸರಿಡುವುದೂ ಬೇಡ. ಲೌಕಿಕದಲ್ಲೇ ಇದ್ದು, ಮುಳುಗಿ, ಎದ್ದು ಬದುಕು ನಡೆಸಿದರೂ ಸುಖ ಮತ್ತು ನೆಮ್ಮದಿಯನ್ನು ಹೊಂದಬಹುದು. ಅದಕ್ಕಾಗಿ ಪೂಜೆ, ಪುರಸ್ಕಾರ, ದೇವರು, ಧರ್ಮ, ಅಧ್ಯಾತ್ಮ ಅಂತ ಲೋಕೋತ್ತರಕೆ ಕೈ ಚಾಚುವ ಅಗತ್ಯವಿಲ್ಲ. ಕೈ ಚಾಚಿದರೆ ತಪ್ಪೇನೂ ಇಲ್ಲ. ಅವರವರ ಸ್ವಾತಂತ್ರ್ಯ. ನಿರ್ಬಂಧಗಳಿಗೆ … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 4)”: ಎಂ.ಜವರಾಜ್

-೪- ಅವತ್ತು ಸ್ಕೂಲಿಗೆ ರಜೆ ಅಂತ ಎಲ್ಲ ಮಾತಾಡುತ್ತಿದ್ದರು. ಸ್ಕೂಲಿಗೆ ಅಂತಲ್ಲ ಎಲ್ಲರಿಗೂ ಗೌರ್ಮೆಂಟ್ ರಜೆ ಅಂತ ಸಿಕ್ಕಸಿಕ್ಕವರು ಹೇಳ್ತಾ ಇದ್ದರೆ ನಮಗೆ ಹಿಗ್ಗೊ ಹಿಗ್ಗು. ಅದನ್ನು ಕೇಳ್ತಾ ಕೇಳ್ತಾ ಪಂಚಾಯ್ತಿ ಆಫೀಸ್ ಮುಂದಿದ್ದ ಮರಯ್ಯನ ಟೀ ಅಂಗಡಿ ಹತ್ತಿರ ಬಂದಾಗ ಆ ಟೀ ಅಂಗಡಿ ಮುಂದೆ ಒಂದಷ್ಟು ಜನ ಹೆಚ್ಚಾಗೇ ನಿಂತು ಟೀ ಕುಡಿತಾ ಬೀಡಿ ಸೇದುತ್ತಾ ಪೇಪರ್ ಓದುತ್ತಾ ರಾಜ್ ಕುಮಾರ್ ಬಗ್ಗೆ ಜೋರಾಗೇ ಮಾತಾಡ್ತ ಇದ್ದರು. ಎಲ್ಲರು ರಾಜ್ ಕುಮಾರ್ ಬಗ್ಗೆ ಮಾತಾಡುತ್ತಿದ್ದರೆ … Read more

ವಿಶ್ವಪ್ರಸಿದ್ಧ ಪಶುವೈದ್ಯರು: ಪ್ರೊ. ಎಂ. ನಾರಾಯಣಸ್ವಾಮಿ

ಪ್ರತಿ ವರ್ಷದ ಏಪ್ರಿಲ್ ತಿಂಗಳ ಕೊನೆಯ ಶನಿವಾರದಂದು ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ. ಕಳೆದ 25 ವರ್ಷಗಳಿಂದ ಅಂತಹ ಆಚರಣೆ ನಡೆಯುತ್ತಿದೆ. ಆದು ಆರಂಭವಾದದ್ದು 2000ನೇ ಇಸವಿಯಲ್ಲಿ. ಅಂತಹ ದಿನದ ಆಚರಣೆಗೊಂದು ಧ್ಯೇಯವಾಕ್ಯವನ್ನು ವಿಶ್ವ ಪಶುವೈದ್ಯಕೀಯ ಸಂಘವು ಕೊಡುತ್ತದೆ. ಅದರಂತೆ, 2024 ರ ವಿಶ್ವ ಪಶುವೈದ್ಯಕೀಯ ದಿನದ ಧ್ಯೇಯವಾಕ್ಯವು ‘ಪಶುವೈದ್ಯರು ಅತ್ಯಗತ್ಯ ಆರೋಗ್ಯ ಕಾರ್ಯಕರ್ತರಾಗಿದ್ದಾರೆ’ ಎಂಬುದಾಗಿದೆ. ಪಶುವೈದ್ಯರು ಪ್ರಾಣಿಗಳ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಅದಷ್ಟೇ ಅಲ್ಲದೆ ಮಾನವನ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ. ಪ್ರಾಣಿಗಳ ರೋಗಗಳನ್ನು ಹತೋಟಿಯಲ್ಲಿಟ್ಟಿದ್ದರಿಂದಾಗಿ ಮಾನವನ ದೈಹಿಕ, ಮಾನಸಿಕ … Read more

ಮನದ ಮೌನಕ್ಕೆ ಕೊನೆಯ ಪತ್ರ: ಪೂಜಾ ಗುಜರನ್ ಮಂಗಳೂರು..

ಮನಸ್ಸು ಮೌನವಾಗಿದೆ ಅಂದ್ರೆ ಯಾವುದು ಬೇಡ ಅಂತಲ್ಲ.‌ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ನಿರಾಳವಾಗಿರು ಅಂತ ಅರ್ಥ. ಒಂದೊಂದು ಸಲ ಇಂತಹ ಮೌನಗಳು ಬದುಕಿಗೆ ಅನಿವಾರ್ಯ.. ಎಲ್ಲ ನೋವುಗಳೂ ಖುಷಿಗಳು ಮರೆಯಾದಾಗ ಅಲ್ಲೊಂದು ನಿಶ್ಯಬ್ದವಾದ ಮೌನ ಆವರಿಸಿ ಬಿಡುತ್ತದೆ. ಅದನ್ನು ಅನುಭವಿಸಿ ನೋಡುವಾಗ ಮನಸಿಗೆ ಅನಿಸುವುದು ಇಷ್ಟೆ.ಇಲ್ಲಿ ಎಲ್ಲವೂ ಶೂನ್ಯ. ಯಾವುದು ಶಾಶ್ವತವಲ್ಲ‌. ನಾವು ಬಯಸಿದಂತೆ ಎಲ್ಲವೂ ಆಗುತ್ತದೆ ಅಂದುಕೊಳ್ಳುವುದು ಮೂರ್ಖತನ. ಬದುಕೆಂಬ ಕತೆಯನ್ನು ಬರೆಯುವ ಬರಹಗಾರರು ನಾವೇ ಆದರೂ ಅದರೊಳಗಿರುವ ಪಾತ್ರಗಳು ಮಾತ್ರ ಹಲವಾರು. ಈ ಬದುಕಲ್ಲಿ ನಮಗಾಗಿ … Read more

ಇಂದಿನ ಸಮಾಜದಲ್ಲಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ….: ಹರೀಶ್ ಕುಮಾರ್ ಎಸ್

ಪ್ರಸ್ತುತ ಸಮಾಜಕ್ಕೆ ಅವರ ಹೊನ್ನುಡಿಯನ್ನು ಅರ್ಥೈಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಬಹಳ ಇದೆ. ಸದಾ ಆತ್ಮವಿಶ್ವಾಸವಿಲ್ಲದ ಅಲೆದಾಡುವ ಮನಸಿಗೆ ಸಾಂತ್ವನ ಇದೆ. ಸಾಧಿಸಲು ಮುಂದಾಗುವವರಿಗೆ ಸ್ಫೂರ್ತಿ ಸೆಲೆಯಿದೆ. “ಜನರು ಮನಸಿಗೆ ಬಂದ ಹಾಗೆ ಅಂದುಕೊಳ್ಳಲಿ. ನಿಮ್ಮ ನಿರ್ಧಾರದಿಂದ ನೀವು ಕದಲದಿರಿ. ಆಗ ಮಾತ್ರ ಜಗತ್ತು ನಿಮ್ಮನ್ನು ಗೌರವಿಸುವುದು. ಸಮಾಜವು ಈ ಮನುಷ್ಯನನ್ನು ನಂಬು, ಆ ಮನುಷ್ಯನನ್ನು ನಂಬು ಎಂದು ಹೇಳುತ್ತದೆ. ಆದರೆ ನಿಮ್ಮಲ್ಲಿ ನಿಮಗೆ ಶ್ರದ್ಧೆಯಿರಲಿ. ಸಕಲ ಶಕ್ತಿಯೂ ನಿಮ್ಮಲ್ಲಿ ಅಡಗಿದೆ. ಇದನ್ನರಿತು ನಿಮ್ಮ ವ್ಯಕ್ತಿತ್ವದಲ್ಲಿ ಆ … Read more

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಶ್ರೀರಾಮಪಟ್ಟಾಭಿಷೇಕಂ – ಒಂದು ತೌಲನಿಕ ವಿವೇಚನೆ: ಸಂತೋಷ್ ಟಿ.

“ರಾಮಾಯಣ ಜಗತ್ತಿನ ಮಹಾಕಾವ್ಯಗಳಲ್ಲಿ ಒಂದು. ಭಾರತಕ್ಕಂತೂ ಅದು ಆದಿ ಕಾವ್ಯ. ಅದನ್ನು ಕಾವ್ಯವೆಂದು ಆಸ್ವಾದಿಸುವ, ಪುರಾಣವೆಂದು ಆರಾಧಿಸುವ ಜನ ಕೋಟಿ ಕೋಟಿ. ಸಾಮಾನ್ಯ ಭಾರತೀಯನಿಗೆ ರಾಮಾಯಣವೊಂದು ಐತಿಹಾಸಿಕ ಘಟನೆ. ಅದರ ಬಗೆಗೆ ಅವನಲ್ಲಿ ಯಾವ ಪ್ರಶ್ನೆಗೂ, ಶಂಕೆಗೂ ಆಸ್ಪದವಿಲ್ಲ. ಸಂಸ್ಕೃತದಲ್ಲಿಯೂ ನಮ್ಮ ದೇಶಭಾಷೆಗಳಲ್ಲಿಯೂ ರಾಮಾಯಣ ಸಾವಿರಾರು ಕೃತಿಗಳಿಗೆ ಆಕರವಾಗಿದೆ. ಸಾವಿರಾರು ಕವಿಗಳಿಗೆ ಸ್ಫೂರ್ತಿಯನ್ನೊದಗಿಸಿದೆ. ಅದರ ಪಾತ್ರಗಳು ಪ್ರಸಂಗಗಳು ಆದರ್ಶಗಳು ನಾನಾ ವಿಧದ ಕಲಾಕೃತಿಗಳಾಗಿ ರೂಪ ತಾಳಿವೆ. ರಾಮಾಯಣ ಎಷ್ಟರ ಮಟ್ಟಿಗೆ ಜನಪ್ರಿಯವಾಯಿತೆಂದರೆ, ಎಷ್ಟು ಕೃತಿಗಳು ಅದನ್ನು ಆಧರಿಸಿ … Read more

ಹಲ್ಮಿಡಿ ಶಾಸನ ಕ್ರಿ.ಶ.ಸುಮಾರು ೪೫೦ -ಒಂದು ಟಿಪ್ಪಣಿ: ಸಂತೋಷ್ ಟಿ

ಜಯತಿ ಶ್ರೀ ಪರಿಷ್ವಙ್ಗ ಶಾರ್ಙ್ಗ (ಮಾನ್ಯತಿ) ರಚ್ಯುತಃದಾನವಾಕ್ಷೋರ್ಯುಗಾನ್ತಾಗ್ನಿಃ (ಶಿಷ್ಟಾನಾನ್ತು) ಸುದರ್ಶನಃನಮಃ ಶ್ರೀಮತ್ಕದಂಬನ್ತ್ಯಾಗಸಂಪನ್ನನ್ಕಲಭೋರ(ನಾ)ಅರಿಕಕುಸ್ಥಭಟ್ಟೋರನಾಳೆ ನರಿದಾವಿ(ಳೆ) ನಾಡುಳ್ ಮೃಗೇಶನಾಗೇನ್ದ್ರಾಭೀಳರ್ಭ್ಭಟಹರಪ್ಪೋರ್ ಶ್ರೀಮೃಗೇಶನಾಗಾಹ್ವಯರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪಗಣಪಶುಪತಿಯಾ ದಕ್ಷಿಣಾದಿ ಬಹು ಶತವಹನಾಹವದು(ಳ್ ) ಪಶುಪ್ರದಾನ ಶೌರ್ಯ್ಯೋದ್ಯಮಭರಿತೊ(ನ್ದಾನ ) ಪಶುಪತಿಯೆನ್ದು ಪೊಗಳೆಪ್ಪೊಟಣ ಪಶುಪತಿನಾಮಧೇಯನಾ ಸರಕ್ಕೆಲ್ಲ ಭಟರಿಯಾ ಪ್ರೇಮಾಲಯಸುತನ್ಗೆ ಸೇನ್ದ್ರಕಬಣೋಭಯ ದೇಶದಾವೀರಾಪುರುಷ ಸಮಕ್ಷದೆ ಕೇಕೆಯಪಲ್ಲವರಂ ಕಾದೆರೆದು ಪೆತ್ತಜಯನಾ ವಿಜಅರಸನ್ಗೆ ಬಾಳ್ಗಚ್ಚು ಪಲ್ಮಿಡಿಉಂ ಮೂಳವಳ್ಳಉಂ ಕೊಟ್ಟಾರ್ ಬಟಾರಿಕುಲದೊನಳಕದಮ್ಬನ್ಕಳ್ದೋನ್ ಮಹಾಪಾತಕನ್ಇರ್ವ್ವರುಂ ಸಳ್ಬಙ್ಗದರ್ ವಿಜಾರಸರುಂ ಪಲ್ಮಿಡಿಗೆ ಕುರುಮ್ಬಿಡಿವಿಟ್ಟಾರ್ ಅದಾನಳೆವೊನ್ಗೆ ಮಹಾಪಾತಕಮ್ ಸ್ವಸ್ತಿಭಟ್ಟರ್ಗ್ಗಿಗಳ್ದು ಒಡ್ತಲಿ ಆಪತ್ತೊನ್ದಿವಿಟ್ಟಾರಕರ. ಕನ್ನಡನಾಡಿನ ಮೊತ್ತಮೊದಲ ಭಾಷಿಕ ಸಾಂಸ್ಕೃತಿಕ ದಾಖಲೆಯಾಗಿರುವ ಈ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೬): ಎಂ.ಜವರಾಜ್

ಭಾಗ – 6 ದಂಡಿನ ಮಾರಿಗುಡಿಲಿ ಹಾಕಿರೊ ಮೈಕ್ ಸೆಟ್ಟಿಂದ ಪರಾಜಿತ ಪಿಚ್ಚರ್ ನ ‘ಸುತ್ತ ಮುತ್ತಲು ಸಂಜೆ ಗತ್ತಲು..’ ಹಾಡು ಮೊಳಗುತ್ತಿತ್ತು. ಸುಣ್ಣಬಣ್ಣ ಬಳಿದುಕೊಂಡು ಹೊಳೆಯುತ್ತಿದ್ದ ಮಾರಿಗುಡಿ ಮುಂದೆ ಐಕ್ಳುಮಕ್ಳು ಆ ಹಾಡಿಗೆ ಥಕ್ಕಥಕ್ಕ ಅಂತ ಕುಣಿಯುತ್ತಿದ್ದವು. ಅವುಗಳೊಂದಿಗೆ ಕಿಸಿಕಿಸಿ ಅಂತ ಪಾಚಿ ಕಟ್ಟಿಕೊಂಡಿದ್ದ ಹಲ್ಲು ಬಿಡುತ್ತ ನೀಲಳೂ ಕುಣಿಯುತ್ತಿದ್ದಳು. ಈ ಐಕಳು ಕುಣಿಯುತ್ತಾ ಕುಣಿಯುತ್ತಾ ಗುಂಪು ಗುಂಪಾಗಿ ಒತ್ತರಿಸಿ ಒತ್ತರಿಸಿ ಅವಳನ್ನು ಬೇಕಂತಲೇ ತಳ್ಳಿ ಇನ್ನಷ್ಟು ಒತ್ತರಿಸಿ ನಗಾಡುತ್ತಾ ಎಂಜಾಯ್ ಮಾಡುತ್ತಿದ್ದವು. ನೀಲಳು ಆ … Read more

ಡಿಜಿಟಲ್ ಯುಗದಲ್ಲಿ ಕನ್ನಡ ಮತ್ತು ಸೃಜನಶೀಲತೆ: ವಿಜಯ್ ದಾರಿಹೋಕ

ಸುಮಾರು ಏಳು ಸಾವಿರ ಕಿಲೋ ಮೀಟರ್ ದೂರದ ಸ್ವೀಡನ್ ನಿಂದ, ಬಾಳೆಕಾಯಿಯ ಹಲ್ವಾ ಮಾಡುವ ವಿಧಾನ ತಿಳಿಸುವಂತೆ ಅಮ್ಮನಿಗೆ ಕರೆ ಮಾಡಿದಾಗ ಆಕೆ, ಯು ಟ್ಯೂಬ್ ಗೆ ಹೋಗಿ ಭಟ್ ಎನ್ ಭಟ್ ಎನ್ನುವ ಚಾನ್ನೆಲ್ ಹುಡುಕಿ, ಅಲ್ಲಿ ಕೊಟ್ಟ ಅಡುಗೆ ವಿಡಿಯೋ ನೋಡಿ ಮಾಡು, ಚೆನ್ನಾಗಿರುತ್ತೆ ಅಂದು ಬಿಡಬೇಕೇ?. ಕೇವಲ ಒಂದು ಸ್ಮಾರ್ಟ್ ಫೋನ್ ಹಾಗೂ 4G ಯ ನೆಟ್ವರ್ಕ್ ಜೊತೆಗೆ ಅಮ್ಮ ಈಗ ಡಿಜಿಟೀಕರಣದ ತೆಕ್ಕೆಗೆ ಬಂದಿರುವ ಬಗ್ಗೆ ನನಗೆ ಸ್ಪಷ್ಟ ಸಂದೇಶ ಸಿಕ್ಕಿತು. … Read more

ದೇಶ ದೇಶಗಳ ಗಡಿಗಳ ಗೂಗಲ್ ನೋಟ: ಎಫ್. ಎಂ. ನಂದಗಾವ

ಪ್ರಭುತ್ವಕ್ಕೆ ತನ್ನ ಆಡಳಿತಕ್ಕೆ ಒಳಪಟ್ಟ ಪ್ರದೇಶದ ನಿಗದಿಗೆ ನಕಾಶೆ ಬೇಕು. ಊರುಗಳ, ಹೋಬಳಿಗಳ, ತಾಲ್ಲೂಕುಗಳ, ರಾಜ್ಯಗಳ, ರಾಷ್ಟ್ರಗಳ ನಕಾಶೆ ಎಂದಾಗ ಅವುಗಳ ಭೌಗೋಳಿಕ ವ್ಯಾಪ್ತಿ ನಿಗದಿಯಾಗಬೇಕು, ಆ ವ್ಯಾಪ್ತಿಯನ್ನು ನಿಗದಿ ಮಾಡುವುದು ಎಂದರೆ ಗಡಿ ಅಥವಾ ಎಲ್ಲೆಯನ್ನು ಗುರುತಿಸುವುದು. ಗಡಿ ಗೆರೆಯು ಅಥವಾ ಎಲ್ಲೆಯ ರೇಖೆಯು ಆಯಾ ಭೌಗೋಳಿಕ ಪ್ರದೇಶದ ವ್ಯಾಪ್ತಿಯನ್ನು ಗುರುತಿಸುವ ಗೆರೆ. ಇದು ದೇಶ ದೇಶಗಳ ನಡುವಣ ಲಕ್ಷö್ಮಣ ರೇಖೆ. ಪರವಾನಿಗೆ, ರಹದಾರಿ ದಾಖಲೆ (ಪಾಸ್ ಪೋರ್ಟ) ಇಲ್ಲದೇ ಈ ಕಡೆಯವರು ಆ ಕಡೆಗೆ … Read more

ಪುಟ್ಟ ಆರತಿ ಕೊಟ್ಟ ಮಣ್ಣಿನ ಕೇಕು: ಸವಿತಾ ಇನಾಮದಾರ್

‘ಮೇಡಂ, ಇಂದು ಆಫೀಸಿಗೆ ಹೋಗುವಾಗ FM ರೇಡಿಯೋದಲ್ಲಿ ನಿಮ್ಮ GST ಜಾಹಿರಾತು ಕೇಳಿದೆ ‘ ಅಂತ ಮೊನ್ನೆ ನನ್ನ ಪರಿಚಯದವರು ಫೋನ್ ಕಾಲ್ ಮಾಡಿ ಹೇಳಿದಾಗ ತುಂಬಾ ಖುಷಿ ಆಯಿತು. ಮೊದಲೆಲ್ಲ ‘ಇಂದಿನ ರೇಡಿಯೋ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬಂತು ಕಣೆ ‘ ಅಥವಾ ‘ ಮೇಡಂ, ಇಂದಿನ ನಿಮ್ಮ ಕವನ ವಾಚನ ಕೇಳಿ ಕಂಗಳು ತುಂಬಿ ಬಂದವು’ ಅಂತ ಸ್ನೇಹಿತರು, ಪರಿಚಯದವರು ಹೇಳುತ್ತಿದ್ದಾಗ ತುಂಬಾ ಖುಷಿ ಆಗುತ್ತಿತ್ತು. ಕೇಳುಗರ ಪ್ರತಿಕ್ರಿಯೆಗಳು ತುಂಬಾ ಮುಖ್ಯ. ಹದಿನೈದು … Read more

“ದೇಶದಲ್ಲಿ ಅಭಿವೃದ್ಧಿಯಾಗಬೇಕಾದ ಶಿಕ್ಷಣ ವ್ಯವಸ್ಥೆ”: ವಿದ್ಯಾಶ್ರೀ ಭಗವಂತಗೌಡ್ರ

ಮಾನವನ ಮೂಲಭೂತ ಸೌಕರ್ಯಗಳಾದ ಗಾಳಿ, ನೀರು, ಆಹಾರ, ವಸತಿ ಜೊತೆಗೆ ಶಿಕ್ಷಣವೂ ಒಂದು ಎಂದರೆ ತಪ್ಪಾಗಲಾರದು. ಅನಾದಿ ಕಾಲದಿಂದಲೂ ವಿದ್ಯೆಗೆ ಮಹತ್ವದ ಸ್ಥಾನವಿದೆ. “ವಿದ್ಯೆ ಇರುವವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರು ಹದ್ದಿನಂತಿಕ್ಕು “ಎಂಬ ಸರ್ವಜ್ಞ ನ ಮಾತು ಇಂದಿಗೂ ಪ್ರಸ್ತುತ. ದೇಶ ୭೬ ನೇ ಸ್ವಾತಂತ್ರ ದಿನದ ಹೊಸ್ತಿಲಲ್ಲಿದೆ. ಆದರೆ ಬಡತನ, ನಿರುದ್ಯೋಗ, ಹಸಿವು, ಅನಕ್ಷರತೆ ಇನ್ನೂ ದೇಶದಿಂದ ತೊಲಗಿಲ್ಲ. ದೇಶದ ಹಲವಾರು ಸಮಸ್ಯೆಗಳಿಗೆ ಶಿಕ್ಷಣ ಮದ್ದಾಗಬಲ್ಲದು. “ಮನೆಯೇ ಮೊದಲ … Read more

ಹೃದಯದ ಭಾಷೆ –ಕನ್ನಡ ಉಳಿಸಿ ಬೆಳೆಸಿ: ನಾಗರೇಖಾ ಗಾಂವಕರ

ಕನ್ನಡ ಎನೆ ಕುಣ ದಾಡುವುದೆನ್ನೆದೆಕನ್ನಡವೆನೆ ಕಿವಿ ನಿಮಿರುವುದು!!ಕಾಮನ ಬಿಲ್ಲನು ಕಾಣುವ ಕವಿಯೊಳುತೆಕ್ಕನೆ ಮನ ಮೈ ಮರೆಯುವುದು- ಪ್ರಾಥಮಿಕ ಹಂತದಲ್ಲಿ ಕಲಿತ ಕುವೆಂಪು ಕವಿತೆಯ ಈ ಸಾಲುಗಳು ಬಾಯಲ್ಲಿ ಇಂದಿಗೂ ಮೆರೆದಾಡುತ್ತವೆ. ಯಾಕೆಂದರೆ ಅದು ಮಾತೃಭಾಷೆಯ ಬಗ್ಗೆ ನಮ್ಮಲ್ಲಿದ್ದ ಪ್ರೀತಿ ಅದರಲ್ಲಿದ್ದ ಸೊಗಡುತನ ಹಾಗೂ ಕನ್ನಡ ಎದೆಯ ಭಾಷೆಯಾಗಿರುವುದು ಅದಕ್ಕೆ ಕಾರಣ. ಆದರೆ ಇಂದು ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಕನ್ನಡವೆಂದರೆ ಯುವ ಜನರಲ್ಲಿ ಒಂದು ರೀತಿಯ ತಾತ್ಸಾರ ಬೆಳೆಯುತ್ತಿರುವಂತೆ ಅನಿಸುತ್ತಿದೆ. ಹಾಗಾಗಿ ಕನ್ನಡ ಕಟ್ಟುವ ಕೆಲಸವಾಗಬೇಕಿದೆ.ಮಾತೃಭಾಷೆ ಉಳಿಸುವ ನಿಟ್ಟಿನಲ್ಲಿ … Read more

ಕನ್ನಡದ ಕನ್ನಡಿ: ಡಾ. ಹೆಚ್ ಎನ್ ಮಂಜುರಾಜ್

ಪ್ರತಿ ವರುಷ ನವೆಂಬರ್ ಬಂದಾಗಲೆಲ್ಲ ನಮಗೆ ಕನ್ನಡ ನೆನಪಾಗುತ್ತದೆ ಅಥವಾ ನಾಡು-ನುಡಿ-ನೆಲ-ಜಲ-ಸಂಸ್ಕೃತಿಗಳನ್ನು ಕುರಿತು ಮಾತಾಡಲು ನೆಪವಾಗುತ್ತದೆ! ಅದರಲೂ ಕನ್ನಡ ಭಾಷಾಭಿಮಾನ ಮುಗಿಲು ಮುಟ್ಟುವ ಮಾಸವಿದು. ಕನ್ನಡಾಂಬೆಯನು ಪೂಜಿಸಿ ನಮ್ಮ ಅಸ್ಮಿತೆಯನ್ನು ಸ್ಮೃತಿಗೆ ತಂದುಕೊಳ್ಳುವ ಸಂದರ್ಭವಿದು. ಉಳಿದಂತೆ ನಮ್ಮದು ನಿತ್ಯದ ಬದುಕಿನ ಪಡಿಪಾಟಲು ; ಆಗೆಲ್ಲಾ ಕನ್ನಡತನ ಹಿನ್ನೆಲೆಗೆ ಸರಿಯುತ್ತದೆ. ನವೆಂಬರ್ ನಾಯಕರಾಗದೇ ಎಲ್ಲ ಮಾಸಗಳಲ್ಲೂ ಮಾಸದಂಥ ಕನ್ನಡದ ಕಾಯಕದಲ್ಲಿ ನಿರತರಾದ ಸದ್ದು ಸುದ್ದಿಯಿಲ್ಲದ ಸಾವಿರಾರು ಮಂದಿ ನಮ್ಮೊಡನಿದ್ದಾರೆ. ವೃತ್ತಿ ಯಾವುದಾದರೇನು? ಕಲಿತದ್ದು ಏನಾದರೇನು? ಕನ್ನಡದಲ್ಲಿ ಬರೆಯುವ, ನುಡಿಯುವ … Read more