ಪಂಜು-ವಿಶೇಷ

ಹೇಳಿ ಹೋಗು ಕಾರಣ: ಭಾರ್ಗವಿ ಜೋಶಿ

ನಾ ಓದಿದ್ದ ಕೆಲವೇ ಕೆಲವು ಕಾದಂಬರಿಗಳಲ್ಲಿ ತೀರಾ ಕಾಡಿ, ಅಳಿಸಿದ ಕಾದಂಬರಿ ಇದು. ಹಿಂದೆ ಒಮ್ಮೆ ಆವರಣ ಓದಿದಾಗ ವಿಚಿತ್ರ ಆವೇಶ, ಉದ್ವೇಗ. ಆದರೆ ಇದರ ಭಾವವೇ ಬೇರೆ. ಪ್ರೀತಿ ಪ್ರೀತಿ. ಹಿಮೂನ ಪ್ರೀತಿ ಉಕ್ಕಿ ಹರಿಯುತ್ತದೆ. ಹಿಮೂ ಎಂಬ ಪ್ರಾರ್ಥನಾ ಳ ದೇವರು, ತಂದೆಯಂತೆ ಅವಳಿಗೆ ಹೊಸ ಜೀವನ ಕೊಟ್ಟು ಶಿವಮೊಗ್ಗ ಕೇ ಕರೆದು ತರುತ್ತಾನೆ. ಸೋದರನಂತೆ ಯಾವತ್ತು ಅವಳ ಆರೈಕೆ ಮಾಡುತ್ತಾನೆ. ಗೆಳೆಯನಂತೆ ಅವಳ ಕನಸಿಗೆ ಬಣ್ಣ ತುಂಬುತ್ತಾನೆ, ಗುರುವಿನಂತೆ ದಾರಿ ತೋರುತ್ತಾನೆ. ಪ್ರಿಯಕರನಂತೆ […]

ಪಂಜು-ವಿಶೇಷ

ರವಿಬೆಳಗೆರೆಯವರನ್ನು ನೆಗ್ಲೆಕ್ಟ್ ಮಾಡಲಿಕ್ಕಂತೂ ಸಾಧ್ಯವಿಲ್ಲ: ನಟರಾಜು ಮೈದನಹಳ್ಳಿ

‘ರವಿ ಬೆಳಗೆರೆ’ ಈ ಹೆಸರು ಗೊತ್ತಿರದ ಕನ್ನಡಿಗನೇ ಇಲ್ಲ ಎನ್ನಬಹುದು. ಬಿಸಿಲು ನಾಡಿನ ಬಳ್ಳಾರಿಯಲ್ಲಿ ದಿನಾಂಕ: 15-03-1958 ರಂದು ಪಾರ್ವತಮ್ಮ ಟೀಚರ್ ಮಗನಾಗಿ ಹುಟ್ಟಿ, ಕಡು ಕಷ್ಟಗಳನ್ನು ಅನುಭವಿಸಿ, ಮುನ್ನೂರು ಚಿಲ್ಲರೆ ರೂ.ಗಳೊಂದಿಗೆ ಬೆಂಗಳೂರು ಎಂಬ ಮಾಯಾನಗರಿಗೆ ಬಂದು, ಅನೇಕ ಬವಣೆಗಳನ್ನು ಅನುಭವಿಸಿ, ಪತ್ರಿಕೋದ್ಯಮದ ದೈತ್ಯನಾಗಿ, ಅಕ್ಷರ ಮಾಂತ್ರಿಕನಾಗಿ ಬೆಳೆದಿದ್ದು ಒಂದು ಯಶೋಗಾಥೆ. ರವಿ ಬೆಳಗೆರೆ ಒಬ್ಬ ಬಹುಮುಖ ಪ್ರತಿಭೆ. ಇವರು ಪತ್ರಕರ್ತ, ಸಂಪಾದಕ, ಕತೆಗಾರ, ಕಾದಂಬರಿಕಾರ, ಸಿನಿಮಾ ನಟ, ಟಿವಿ ನಿರೂಪಕ ಇತ್ಯಾದಿ. ಪತ್ರಕರ್ತ ಆಗುವುದಕ್ಕೆ […]

ಪಂಜು-ವಿಶೇಷ

ರವಿ ಬೆಳಗೆರೆಯವರ ನೆನಪಿನ ವಿಶೇಷ ಸಂಚಿಕೆಗಾಗಿ ಲೇಖನಗಳ ಆಹ್ವಾನ

ಸಹೃದಯಿಗಳೇ, ಮಾರ್ಚ್ 15 ಖ್ಯಾತ ಬರಹಗಾರರಾದ ರವಿ ಬೆಳಗೆರೆಯವರು ಹುಟ್ಟಿದ ದಿನ. ಆ ದಿನ ಅವರ ನೆನಪಿನ ವಿಶೇಷ ಸಂಚಿಕೆಯನ್ನು ಪಂಜು ತರಲು ಬಯಸುತ್ತದೆ. ಅವರ ಕುರಿತ ಅವರ ಪುಸ್ತಕಗಳ ಕುರಿತ ನಿಮ್ಮ ಲೇಖನಗಳನ್ನು ಮಾರ್ಚ್ 14, 2021 ರ ಒಳಗೆ ನಮಗೆ ಕಳುಹಿಸಿ. ನಿಯಮಗಳು: ಲೇಖನಗಳು ನಿಮ್ಮ ಸ್ವಂತ ಬರಹವಾಗಿರಬೇಕು ಕನಿಷ್ಟ 500 ಪದಗಳ ಬರಹವಾಗಿರಬೇಕು ಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು. ಬರಹಗಳು ಯೂನಿಕೋಡ್ ನಲ್ಲಿದ್ದರೆ ಒಳ್ಳೆಯದು. ಪಿಡಿಎಫ್ ನಲ್ಲಿರುವ ಬರಹಗಳನ್ನು […]

ಪಂಜು-ವಿಶೇಷ

ರಾಷ್ಟ್ರೀಯ ವಿಜ್ಞಾನ ದಿನ: ಡಾ.ಅವರೆಕಾಡು ವಿಜಯ ಕುಮಾರ್

1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಶನ್(ಎನ್. ಸಿ. ಎಸ್. ಟಿ. ಸಿ.) ಭಾರತ ಸರ್ಕಾರಕ್ಕೆ ಫೆಬ್ರವರಿ 28 ರಂದು ‘ ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲು ಮನವಿಯನ್ನು ಸಲ್ಲಿಸಿತ್ತು.ಈ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರ ಪ್ರತಿ ವರ್ಷ ಫೆಬ್ರವರಿ 28 ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಿಸಿತು.ಮೊದಲ ಬಾರಿಗೆ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು 28 ಫೆಬ್ರುವರಿ 1987 ರಂದು ಆಚರಣೆಗೆ ತರಲಾಯಿತು.ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ […]

ಪಂಜು-ವಿಶೇಷ

ಮತ್ತೊಂದು ಮಹಾಭಾರತ (ಭಾಗ ೧): ಡಾ.ಸಿ.ಎಂ.ಗೋವಿಂದರೆಡ್ಡಿ

ಅರಿಕೆ ಹಸ್ತಿನಾವತಿ ಶಂತನು ಸತ್ಯವತಿಯರ ಪ್ರೇಮ ಪ್ರಸಂಗ -ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು.ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ.ಇಲ್ಲಿ ಚಂದ್ರವಂಶದ ಅರಸ ದುಷ್ಯಂತ ಹಾಗೂ ಶಕುಂತಲೆಯರ ಮಗನಾದ ಭರತನ ಪರಂಪರೆಯಲ್ಲಿ ಜನಿಸಿದಂತಹ ಪ್ರದೀಪನ ಮಗನಾದ ಶಂತನು ಮಹಾರಾಜನು ರಾಜ್ಯವಾಳುತ್ತಿದ್ದನು. ಇವನು ಒಮ್ಮೆ ಬೇಟೆಯಾಡಲಿಕ್ಕೆಂದು ಕಾಡಿಗೆ ಹೊರಟವನು ಆಯಾಸ ಪರಿಹಾರಾರ್ಥವಾಗಿ ಗಂಗಾನದಿಯ ತೀರದಲ್ಲಿ ವಿಶ್ರಮಿಸುತ್ತಿರುವಾಗ ಪರಮ ಸುಂದರಿಯಾದ ಗಂಗಾದೇವಿಯೆಂಬ ಹೆಣ್ಣನ್ನು ಕಂಡು ಅವಳ ರೂಪಸಂಪತ್ತಿಗೆ ಮರುಳಾದ- -ಡಾ.ಸಿ.ಎಂ.ಗೋವಿಂದರೆಡ್ಡಿ ಮುಂದುವರೆಯುವುದು.. […]

ಪಂಜು-ವಿಶೇಷ

ಪಂಜು ಹುಟ್ಟುಹಬ್ಬದ ಫೇಸ್ ಬುಕ್‌ ಚಾಲೆಂಜ್

ಜನವರಿ ೨೧ ಪಂಜು ಮ್ಯಾಗಜಿನ್‌ ಹುಟ್ಟಿದ ದಿನ.ಪಂಜುವಿನ ಒಂಬತ್ತನೇ ಹುಟ್ಟಹಬ್ಬದ ದಿನವನ್ನು ನಾವು ನೀವು ಎಲ್ಲರೂ ಸೇರಿ ಆಚರಿಸೋಣ.ಪಂಜುವಿನ ಕುರಿತು ನಿಮಗೆ ಅನಿಸಿದ್ದನ್ನು ಅಥವಾ ಪಂಜುವಿನಲ್ಲಿ ನೀವು ಓದಿದ/ಬರೆದ ಯಾವುದಾದರೊಂದು ಬರಹದ ಒಂದಷ್ಟು ಸಾಲುಗಳನ್ನು ಓದಿ ಪುಟ್ಟ ವಿಡಿಯೋ ಮಾಡಿಆ ವಿಡಿಯೋವನ್ನು ಫೇಸ್‌ ಬುಕ್‌ ನಲ್ಲಿ #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ಬಳಸಿ ಅಪ್‌ ಲೋಡ್‌ ಮಾಡಿಈ ಚಾಲೆಂಜ್‌ ಸ್ವೀಕರಿಸಲು #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ನೊಂದಿಗೆ ನಿಮ್ಮ ಗೆಳೆಯರನ್ನು ಟ್ಯಾಗ್‌ ಮಾಡಿ ನಾಮಿನೇಟ್‌ ಮಾಡಿ.‌ಕನ್ನಡದ ಬರಹಗಳು […]

ಪಂಜು-ವಿಶೇಷ

ನಮ್ಮ ಜಿಲ್ಲೆಯ ಗಜಲ್ ಕಾರರು… (ಭಾಗ ೧): ವೇಣು ಜಾಲಿಬೆಂಚಿ

ಗಜಲ್ ಬರೆಯುವ ವಿಷಯದಲ್ಲಿ ಬಹಳಷ್ಟು ಪಳಗಿದ ಕೈಗಳು ನಮ್ಮಲ್ಲಿ ಸಾಕಷ್ಟಿವೆ. . . . (ಇಲ್ಲಿ ಕೇವಲ ನಮ್ಮ ರಾಯಚೂರು ಜಿಲ್ಲೆಯನ್ನು ಸೀಮಿತವಾಗಿಟ್ಟುಕೊಂಡು ಹೇಳುವ ಪ್ರಯತ್ನ ಹಾಗೂ ಈ ಬರಹದ ಹಿಂದೆ ಯಾವ ಉದ್ದೇಶವೂ ಇಲ್ಲ. . . ಕೇವಲ ವಿಚಾರ ವಿನಿಮಯ ಮಾತ್ರ) ನಮ್ಮ ಭಾಗದ ಹೆಮ್ಮೆಯ ಗರಿಮೆ ದಿವಂಗತ ಶಾಂತರಸರನ್ನು ಈ ಗಜಲ್ ವಿಷಯದಲ್ಲಿ ಮೂಲ ಸಂಸ್ಥಾಪಕರಾಗಿ ನಾವು ಕಾಣುತ್ತೇವೆ. . ತರುವಾಯ ಶ್ರೀಮತಿ ಎಚ್. ಎಸ್ ಮುಕ್ತಾಯಕ್ಕ, ತರುವಾಯ ದಿವಂಗತ ಶ್ರೀ ಜಂಬಣ್ಣ […]

ಪಂಜು-ವಿಶೇಷ

ಪ್ರಾಣಿ ಪಕ್ಷಿಗಳಲ್ಲಿ ಸಂವಹನ: ಡಾ. ಯುವರಾಜ ಹೆಗಡೆ

ಆಧುನೀಕರಣದ ಕಪಿಮುಷ್ಠಿಗೆ ಸಿಕ್ಕು ನಲುಗಿದ ಪಶ್ಚಿಮ ಘಟ್ಟದ ಹೆಬ್ಬಾಗಿಲಿಗೆ ರಸ್ತೆ ಅಗಲೀಕರಣವೆಂಬ ನೆಪವೊಡ್ಡಿ ಟಿಂಬರ್ ಲಾಬಿಯವರು ಲಗ್ಗೆ ಇಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿಯ ಬೃಹದಾಕಾರದ ಮರಗಳು ನೆಲಕ್ಕುರುಳುತ್ತಾ ಇರುವಾಗ ಒಂದೂವರೆ ಶತಮಾನದಷ್ಟು ಹಳೆಯ ಮಾಮರದ ಸರದಿ ಬಂದೇ ಬಿಟ್ಟಿತು. ಮರದ ಬುಡಕ್ಕೆ ಮರ ಕಡಿಯುವ ಯಂತ್ರವನನ್ನಿಟ್ಟು ಗಿರ ಗಿರನೆ ಶಬ್ಧ ಮಾಡುತ್ತಿದ್ದಂತೆ ಮರದ ಪೊಟರೆಯಿಂದ ಹೊರಬಂದು ಗಿಳಿಗಳೆರಡು ಕಿಟಾರನೆ ಕೂಗುತ್ತಾ ಸಂಕಟಪಡುತ್ತಿದ್ದವು. ಕೆಲವೇ ನಿಮಿಷದಲ್ಲಿ ಮಾವಿನ ಮರ ದರೆಗುರುಳುತ್ತಿದ್ದಂತೆ ಪೊಟರೆಯಲ್ಲಿದ್ದ ಇನ್ನು ಪುಕ್ಕವೂ ಹುಟ್ಟದ 3 ಗಿಣಿ ಮರಿಗಳು […]

ಪಂಜು-ವಿಶೇಷ

ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಜನ್ಮದಿನ: ಡಾ. ಅವರೆಕಾಡು ವಿಜಯ ಕುಮಾರ್

ಸ್ವಾಮಿ ವಿವೇಕಾನಂದರು 1863 ಜನವರಿ 12 ರಂದು ಕಲ್ಕತ್ತಾ ನಗರದಲ್ಲಿ ಜನಿಸಿದರು. ನರೇಂದ್ರನಾಥ ದತ್ತ ಎಂಬುದು ಇವರ ಹುಟ್ಟಿದ ಹೆಸರು. ಕಾಲಕ್ರಮೇಣ ಅದು ಬದಲಾಗಿ ವಿವೇಕನಂದವಾಯಿತು. ತಂದೆ ವಿಶ್ವನಾಥ ದತ್ತ ಇವರು ಕಲ್ಕತ್ತದ ಉಚ್ಚನ್ಯಾಯಾಲಯದಲ್ಲಿ ಅಟಾರ್ನಿಯಾಗಿ ಸೇವೆಸಲ್ಲಿಸುತ್ತಿದ್ದರು. ತಾಯಿ ಭುವನೇಶ್ವರಿ ದೇವಿ. ಅಜ್ಜ ದುರ್ಗಾ ಚರಣ್ ದತ್ತ, ಇವರು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಸಾಹಿತಿಯಾಗಿದ್ದರು. ತನ್ನ 25ನೇ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಕೊಲ್ಕತ್ತ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಶಿಕ್ಷಣವನ್ನು ಪಡೆದರು. 1884 […]

ಪಂಜು-ವಿಶೇಷ

“ಸಮಾನತೆಯ ಹರಿಕಾರ” ಕುವೆಂಪು: ಡಾ. ಅವರೆಕಾಡು ವಿಜಯ ಕುಮಾರ್

ಪ್ರತಿಯೊಂದು ಮಗುವೂ ಹುಟ್ಟುತ್ತಲೇವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವ’ನನ್ನಾಗಿ ಮಾಡುತ್ತೇವೆ.ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ಶಿಕ್ಷಣದ ಕರ್ತವ್ಯವಾಗಬೇಕು. -ಕುವೆಂಪು ಪ್ರಕೃತಿಯ ತಾಣವಾದ ಮಲೆನಾಡಿನ ಅಪ್ರತಿಷ್ಠಿತ ಮನೆತನ ಒಂದರಲ್ಲಿ 1904, ಡಿಸೆಂಬರ್ 29ರಂದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ ಶ್ರೀ ವೆಂಕಟಪ್ಪ ಮತ್ತು ಶ್ರೀಮತಿ ಸೀತಮ್ಮ ಅವರ ಬಾಳಿನ ಬೆಳಕಾಗಿ ಪುಟ್ಟಪ್ಪನವರು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಗ್ರಾಮದಲ್ಲಿ ಬೆಳೆದವರು ವಿಶ್ವಮಾನವರಾಗಿ ವಿಜೃಂಭಿಸಿ ಇತಿಹಾಸ ಪುಟದ ಸ್ವರ್ಣ ಅಕ್ಷರಗಳಲ್ಲಿ ಸೇರ್ಪಡೆಯಾದರು. ಆಗಿನ ಕಾಲದ ಬಡತನ, ದಾರಿದ್ರ್ಯ, ಅಸಾಯಕತೆ ಇವುಗಳನ್ನು […]

ಕಥಾಲೋಕ ಪಂಜು-ವಿಶೇಷ

ಕಿರುಗತೆಗಳು: ಜಯಂತ್ ದೇಸಾಯಿ

ಬಣ್ಣದ ಬಾರಿಗೆ( ಬಣ್ಣದ ಪೊರಕೆ) ಬಾರಿಗೆಮ್ಮೋ ಬಾರಿಗೆ 30 ರೂಪಾಯಿಗೆ ಜೊತಿ ಬಾರಿಗೆ ಸ್ವಲ್ಪವೇ ಅವ ನೋಡ್ರೆಮ್ಮೋ ಅಂತ ಕೂಗುತ್ತಾ ಹಳ್ಳಿಯ ಸಂದಿಸಂದಿಯ ಒಳಗೆ ನುಗ್ಗಿ ಹೋಗುತ್ತಿದ್ದ ಶರಣಪ್ಪ ನ ದ್ವನಿ ಕೇಳಿ ನಿರ್ಮಲ ನುಡಿದಳು ಹೇ ನಿಂದ್ರಪ್ಪ ನಿಂದ್ರು ಹೆಂಗ್ ಕೊಟ್ಟಿ ಅಂದಿ, 30 ರೂಪಾಯಿಗೆ ಅಂದ್ರ ಭಾಳಾ ಫೀರೆ ಆತು ಕಡಿಮೆ ಮಾಡು, ನೋಡಿದ್ರ ನಾಕು ಕಡ್ಡಿ ಇಲ್ಲ ಇದ್ರಾಗ, ಅವ್ವ ಹಂಗನ್ನ ಬ್ಯಾಡ ಗಿರಿ ಗಿರಿ ಹಾಕಿ ಎಳೆದು ಎಳೆದು ತೀಡಿ ನೆಲಕ್ಕೆ […]

ಪಂಜು-ವಿಶೇಷ

ಇಹಕ್ಕೂ ಮನಕ್ಕೂ ಬೆಳಕ ಸುರಿವ ದೀಪಾವಳಿ: ಗೌರಿ.ಚಂದ್ರಕೇಸರಿ, ಶಿವಮೊಗ್ಗ

ಜಗದ ಕತ್ತಲೆಯನ್ನೆಲ್ಲ ಹೊಡೆದೋಡಿಸುವ ಬೆಳಕು ಯಾರಿಗೆ ತಾನೆ ಇಷ್ಟವಿಲ್ಲ? ಝಗಮಗಿಸುವ ದೀಪಗಳ ಹಬ್ಬವಾದ ದೀಪಾವಳಿ ಎಂದರೆ ಬಾಲ್ಯದಿಂದಲೂ ಏನೋ ಒಂದು ಆಕರ್ಷಣೆ. ಕಳೆದು ಹೋದ ಅದೆಷ್ಟೋ ದೀಪಾವಳಿಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ಈಗಿನ ತರಾವರಿ ಬಣ್ಣದ ಬಲ್ಬುಗಳ ದೀಪಗಳು ಹಿಂದಿನ ಮಣ್ಣಿನ ಹಣತೆಗಳ ಮುಂದೆ ಮಸುಕಾಗಿ ಬಿಡುತ್ತವೆ. ದೀಪಾವಳಿ ಇನ್ನೂ ತಿಂಗಳಿರುವಾಗಲೇ ಮನೆಯಲ್ಲಿ ಸಡಗರ ಪ್ರಾರಂಭವಾಗುತ್ತಿತ್ತು. ಸೊಂಟಕ್ಕೆ ಸೆರಗನ್ನು ಸಿಕ್ಕಿಸಿ ಉದ್ದವಾದ ಕೋಲೊಂದಕ್ಕೆ ಹಳೆಯ ಬಟ್ಟೆಯನ್ನು ಕಟ್ಟಿ ಜೇಡರ ಬಲೆಗಳನ್ನೆಲ್ಲ ಅವ್ವ ತೆಗೆಯುತ್ತಿದ್ದಳು. ನಂತರ ಅದೇ […]

ಪಂಜು-ವಿಶೇಷ

ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ..: ವಿನಾಯಕ ಅರಳಸುರಳಿ

ದೀಪಾವಳಿ ಮರಳಿ ಬಂದಿದೆ. ಆಫೀಸಿನ ಬಾಸಿನ ಟೇಬಲ್ ಮೇಲೀಗ ರಜೆಯ ಅರ್ಜಿಗಳೆಲ್ಲ ನಾ ಮೊದಲು, ತಾ ಮೊದಲು ಎಂದು ತಳ್ಳಾಡುತ್ತಾ ಸಾಲಾಗಿ ನಿಂತಿವೆ. ಯಾರಿಗೆ ಕೊಡುವುದು, ಯಾರಿಗೆ ಬಿಡುವುದು ಎಂದು ಯೋಚಿಸುತ್ತಿರುವಾಗಲೇ ಅವರ ಹೆಂಡತಿ ಕಾಲ್ ಮಾಡಿದ್ದಾರೆ. ‘ಹಬ್ಬಕ್ಕೆ ಊರಿಗೆ ಹೋಗಲಿಕ್ಕಿದೆ. ಟಿಕೇಟು ಬುಕ್ ಮಾಡೋದು ಮರೀಬೇಡಿ!” ಎಂದು ನೆನಪಿಸಿದ್ದಾಳೆ. ಹೀಗೆ ಬಾಸೆಂಬ ಬಾಸೇ ರಜೆ ಹಾಕಿ ಹೋದ ಆಫೀಸಿನಲ್ಲಿ ಕೆಲವರಿಗಷ್ಟೇ ರಜೆ ಮಂಜೂರಾಗಿದೆ. ಅವರೆಲ್ಲ ಸಂಭ್ರಮದಲ್ಲಿ ಊರಿನ ಬಸ್ಸು ಹತ್ತುತ್ತಿದ್ದರೆ ರಜೆ ಸಿಗದ ಹತಾಷರು ಹೊರಟವರಿಗೆ […]

ಪಂಜು-ವಿಶೇಷ

ದೀಪಾವಳಿ ವಿಶೇಷಾಂಕಕ್ಕೆ ಲೇಖನ ಆಹ್ವಾನ

ಸಹೃದಯಿಗಳೇ, ಈ ವರ್ಷದ ದೀಪಾವಳಿ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ನವೆಂಬರ್ 13 ರ ಸಂಜೆಯೊಳಗೆ ತಲುಪಲಿ… ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ… ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿಪಂಜು ಬಳಗhttps://panjumagazine.com/ ನಮ್ಮ ಇ ಮೇಲ್‌ ವಿಳಾಸ: editor.panju@gmail.com, smnattu@gmail.com ವಿ.ಸೂ.: ಪಂಜು ಅಪ್ರಕಟಿತ ಬರಹಗಳನ್ನಷ್ಟೇ ಸ್ವೀಕರಿಸುತ್ತದೆ. ಲೇಖಕರು ಕಳುಹಿಸುವ ಲೇಖನವು ಬ್ಲಾಗ್, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಬರಹವನ್ನು ಸ್ವೀಕರಿಸುವುದಿಲ್ಲ.

ಪಂಜು-ವಿಶೇಷ

ಡಾರ್ಕ್‍ವೆಬ್: ಸಾಮಾನ್ಯರಿಗೆ ನಿಲುಕದ ನಕ್ಷತ್ರ: ಚಾರು ಮಂಜುರಾಜ್

ನಮಗಿಷ್ಟವಾದುದನ್ನು ಆನ್‍ಲೈನ್‍ನಲ್ಲಿ ತರಿಸಿಕೊಳ್ಳುವಾಗಲೋ ಸ್ನೇಹಿತರಿಗಾಗಿ ಉಡುಗೊರೆಗಳನ್ನು ಕೊಳ್ಳುವಾಗಲೋ ಗೂಗಲ್‍ನಲ್ಲಿ ಕಾಣುವ ಪುಟಗಳು ಸರ್‍ಫೇಸ್ ವೆಬ್. ಅಂದರೆ ನಾವು ಗೂಗಲ್‍ನಲ್ಲಿ ಜಾಲಾಡುವಾಗ ಅದರಲ್ಲಿ ತೆರೆದುಕೊಳ್ಳುವ ಪ್ರತಿಯೊಂದು ಪುಟವೂ ಇಂಥ ಸರ್‍ಫೇಸ್ ವೆಬ್ಬೇ! ದಿನನಿತ್ಯ ನಾವು ಅಂತರ್ಜಾಲದೊಂದಿಗೆ ವ್ಯವಹರಿಸುವಾಗ ಕೇವಲ ಶೇಕಡ ಒಂದರಷ್ಟು ಮಾತ್ರ ಮಾಹಿತಿಯನ್ನು ಎಕ್ಸ್‍ಪ್ಲೋರ್ ಮಾಡುತ್ತಿರುತ್ತೇವೆ. ಉಳಿದ ಶೇಕಡ 96 ರಿಂದ 99 ರಷ್ಟು ಮಾಹಿತಿಗಳು ಡೀಪ್‍ವೆಬ್ ಮತ್ತು ಡಾರ್ಕ್‍ವೆಬ್‍ಗಳಲ್ಲಿ ಅಡಗಿರುತ್ತವೆ. ಎರಡಂತಸ್ತಿನ ಕಟ್ಟಡವೊಂದರಲ್ಲಿ ಮೇಲೆ ಕಾಣುವುದೇ ನಾವು ಜಾಲಾಡುವ ತಾಣಗಳು, ಆನಂತರದ್ದು ಡೀಪ್‍ವೆಬ್. ಅದರ ಕೆಳಗಿರುವುದೇ […]

ಪಂಜು-ವಿಶೇಷ

ಹೆಬ್ಬಲಸು : ಅಪರೂಪದ ಕಾಡುಹಣ್ಣು: ಚರಣಕುಮಾರ್ ಮತ್ತು ಡಾ. ಶ್ರೀಕಾಂತ್ ಗುಣಗಾ

ಹೆಬ್ಬಲಸು : ಅಪರೂಪದ ಕಾಡುಹಣ್ಣುArtocarpus hirsutus Lam.ಕುಟುಂಬ: ಮೊರೇಸಿ ವಿತರಣೆ: ಭಾರತೀಯ ಮೂಲದ ಬೃಹದ್ಧಾಕಾರದ ವೃಕ್ಷ ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣ ಮತ್ತು ಅರೆ-ನಿತ್ಯಹರಿಧ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಪರಿಚಯ: ನೇರವಾಗಿ ಬೆಳೆಯುವ ಎತ್ತರದ ಮರ. ಕಂದು ಬಣ್ಣದ ತೊಗಟೆ. ತೊಗಟೆಯ ಮೇಲೆ ಸಣ್ಣ ವಾತರಂದ್ರಗಳು. ಗಾಯವಾದ ತೊಗಟೆಯಿಂದ ಹೊರಸೂಸುವ ಹಾಲಿನಂತ ಅಂಟು ಸೊನೆ. ಅಗಲವಾದ ಹುರುಬುರುಕಿನ ಎಲೆಗಳು ಕಡು ಹಸಿರಿನಿಂದ ಕೂಡಿವೆ. ಎಲೆಗಳ ಮೇಲೆ ಅಚ್ಚಾಗಿ ಮೂಡಿರುವ ನರಗಳಿವೆ. ಗಂಡು ಮತ್ತು ಹೆಣ್ಣು ಹೂವುಗಳು ಬೇರೆ ಬೇರೆಯಾಗಿರುತ್ತವೆ. […]

ಪಂಜು-ವಿಶೇಷ

ಸಂಗೀತ ಲೋಕದ ಬೆರಗು ಎಸ್‍ಪಿಬಿ: ಡಾ. ಹೆಚ್ ಎನ್ ಮಂಜುರಾಜ್

‘ಮಲೆಗಳಲುಲಿಯುವ ಓ ಕೋಗಿಲೆಯೇಬಲು ಚೆಲ್ವಿದೆ ನಿನ್ನೀ ಗಾನಇಂಗ್ಲಿಷಿಗೆ ತರ್ಜುಮೆ ಮಾಡಿದರೆದೊರೆವುದು ನೊಬೆಲ್ ಬಹುಮಾನ’ ಕುವೆಂಪು ಅವರ ಕವಿತೆಯೊಂದರ ಸಾಲುಗಳಿವು. ಇದನ್ನು ಪ್ರಸ್ತಾಪಿಸುತ್ತಾ ಡಾ. ಹಾ ಮಾ ನಾಯಕರು, ‘ಕೋಗಿಲೆಯ ಹಾಡನ್ನು ಇಂಗ್ಲಿಷಿಗೆ ತರ್ಜುಮೆ ಮಾಡುವವರು ಯಾರು?’ ಎಂದು ಕೇಳುತ್ತಾ, ಪರೋಕ್ಷವಾಗಿ ಕುವೆಂಪು ಅವರ ಪ್ರತಿಭೆಗೆ ನೊಬೆಲ್ ಬಹುಮಾನ ಲಭಿಸುವುದು ಯಾವಾಗ? ಎಂಬ ದನಿಯಲ್ಲಿ ಬರೆದಿದ್ದರು. ಏಕೆ ಈಗ ಈ ಮಾತು ನೆನಪಾಯಿತೆಂದರೆ, ಇಂಥ ಸವಾಲನ್ನೂ ಸಾಹಸವನ್ನೂ ಅಪೂರ್ವ ರೀತಿಯಲ್ಲಿ ತಮ್ಮ ಬದುಕಿನುದ್ದಕ್ಕೂ ಕೈಗೊಂಡು ಗಾಯನ ರಸಯಾತ್ರೆಯಲ್ಲಿ ಸಹೃದಯರನ್ನು […]

ಕಾದಂಬರಿ ಪಂಜು-ವಿಶೇಷ

ಮರೆಯಲಾಗದ ಮದುವೆ (ಭಾಗ 10): ನಾರಾಯಣ ಎಮ್ ಎಸ್

-೧೦- ಬಹುಶಃ ಬದುಕಿನಲ್ಲಿ ಮೊದಲಬಾರಿಗೆ ಅಯ್ಯರಿಗೆ ತನಗೆ ವಯಸ್ಸಾಗುತ್ತಿರುವ ಅರಿವಾಯಿತು. ಕೊಮ್ಮರಕುಡಿಯಿಂದ ಗೂಡೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಅಯ್ಯರ್ ಒಂದೆರಡು ಮೈಲು ನಡೆಯುವಷ್ಟರಲ್ಲೇ ಹೈರಾಣಾಗಿ ಬಿಟ್ಟಿದ್ದರು. ಮೊದಲೇ ಅಯ್ಯರಿಗೆ ಒರಟು ರಸ್ತೆಯಮೇಲೆ ಚಪ್ಪಲಿಯೂ ಇಲ್ಲದೆ ಬರಿಗಾಲಲ್ಲಿ ನಡೆದು ಅಭ್ಯಾಸವಿರಲಿಲ್ಲ, ಸಾಲದ್ದಕ್ಕೆ ಏರುಬಿಸಿಲು ಬೇರೆ. ಅರೆಕ್ಷಣಕ್ಕೆ ಸುಮ್ಮನೆ ಕೊಮ್ಮರಕುಡಿ ರೈಲ್ವೇ ಸ್ಟೇಷನ್ನಿಗೆ ಮರಳಿ ಸಂಜೆ ನಾಲ್ಕೂಕಾಲಿನವರೆಗೂ ಕಾದು ವಿಜಯವಾಡಕ್ಕೆ ಹೋಗುವ ರೈಲಿನಲ್ಲಿ ನೆಲ್ಲೂರಿಗೆ ಹೋದರೆ ಹೇಗೆಂಬ ಯೋಚನೆ ಬಂತು. ಮರುಕ್ಷಣವೇ ಟಿಕೆಟ್ಟಿಗೆ ಹಣವಿಲ್ಲದ್ದು ನೆನಪಾಗಿ ಖೇದವಾಯಿತು. ಹಿಂದೆಯೇ ಆಪತ್ಕಾಲದಲ್ಲಿ ಅನಿವಾರ್ಯವಾಗಿ […]

ಪಂಜು-ವಿಶೇಷ

ನೆಲಕಿರುಬನೆಂಬ ಜೇಡ: ಚರಣಕುಮಾರ್

ನಾವು ಚಿಕ್ಕವರಿರುವಾಗ ನಮ್ಮ ತುಂಟಾಟಗಳನ್ನು ನಿಭಾಯಿಸುವುದು ಮನೆಮಂದಿಗೆಲ್ಲಾ ಬಲು ಕಷ್ಟವಾಗಿರುತ್ತಿತ್ತು. ನಮ್ಮನ್ನು ನಿಯಂತ್ರಿಸಲು ಭೂತದ ಕಥೆ, ಹುಲಿ, ಚಿರತೆ ಮತ್ತು ಮಂಗಗಳ ಚಿತ್ರಗಳನ್ನು ತೋರಿಸಿಯೋ ಅಥವಾ ಅವುಗಳ ಹೆಸರುಗಳನ್ನು ಹೇಳಿಯೋ ಹೆದರಿಸುತ್ತಿದ್ದರು. ನನ್ನೂರಿನಲ್ಲಿ ಅಜ್ಜಿಯು, ನೀನೊಬ್ಬನೆ ಮನೆಯಿಂದ ಆಚೆ ಹೋದರೆ ನೆಲಗುಮ್ಮ ಬಂದು ನಿನ್ನನ್ನು ನುಂಗಿಬಿಡುತ್ತದೆ ಎಂದು ಒಮ್ಮೆಯಾದರೆ, ನೋಡು ಆಚೆ ಹೋದರೆ ಆ ಗೋಡೆಯ ಪಕ್ಕದಲ್ಲಿ ನೆಲಪಟ್ಟು ಅಡಗಿ ಕುಳಿತಿದೆ ನಿನ್ನನ್ನು ಕಚ್ಚಿ ತಿಂದುಬಿಡುತ್ತದೆ ಎಂದು ಮತ್ತೊಮ್ಮೆಯಾದರೆ, ನಾವು ಊಟಮಾಡದೆ ಹಠಮಾಡುತ್ತಿರುವಾಗ ಒಂದು ಕೊಳವೆಯಾಕಾರದಲ್ಲಿ ಪಿ.ವಿ.ಸಿ […]