ಚನ್ನಕೇಶವ ಜಿ ಲಾಳನಕಟ್ಟೆ ಕವಿತೆಗಳು

ಅಂದದ ನಾರಿಗೆ ಚೆಂದದ ಸೀರೆಯುಸುಂದರವಾಗಿ ಕಾಣುತಿದೆ ಬಿಂದಿಯು ಹಣೆಯಲಿ ತಂದಿದೆ ಚೆಲುವನುಬಂಧಿತನಾದೆ ಪ್ರೀತಿಯಲಿ ಕೆಂದನೆ ತುಟಿಯಲಿ ಕುಂದದ ಸೊಬಗಿದೆಅಂದುಗೆ ಸದ್ದು ಮಾಡುತಿವೆ ಚೆಂದಿರ ವದನೆಯ ಚೆಂದದ ಚೆಲುವೆಗೆಮುಂದಣ ಕೈಯ ಹಿಡಿಯುವೆನು ತಂದಳು ಹರುಷವ ಕುಂದದ ಚೆಲುವಲಿಬಂಧುವೆ ಆಗಿ ನಿಂತಿಹಳು ಬಂದಳು ಹೃದಯಕೆ ಬಂಧಿಸಿ ನನ್ನನುನಂದಿನಿ ಧೇನು ಸೊಬಗಿವಳು ವಂದಿಸಿ ಹೊಸಿಲಿಗೆ ಗಂಧವ ಹಚ್ಚುತತಂದಳು ಸಿರಿಯ ನನ್ನವಳು ಹಾಲಿನ ರೂಪದಿನೀಲಿಯ ಬಾನಲಿಬಾಲಕ ಚಂದಿರ ನಗುತಿಹನುತೇಲುತಲಿರುವನು‌ಗಾಳಿಯು ಬೀಸಲುಸೀಳುತ ಮೋಡವ ಮೂಡುವನು ಇಳೆಯನು ಸುತ್ತುತಹೊಳೆಯುತಲಿರುವನುಬೆಳಕನು ನೀಡುತಲಿರುಳೆಲ್ಲಸೆಳೆಯುತ ಮಕ್ಕಳತಿಳಿ ಬೆಳಕಿಳಿಸುತಹೊಳೆಯೊಳು ಬಿಂಬವನಿಳಿಸುತ್ತ ಧರೆಗಿವ … Read more

ತವಕ ತಲ್ಲಣಗಳ ತಾಜಾಭಿವ್ಯಕ್ತಿ ; ಮೊಗೆದ ಬಾನಿಯ ತುಂಬ ತಿಳಿನೀರ ಬಿಂಬ: ಡಾ. ಹೆಚ್ ಎನ್ ಮಂಜುರಾಜ್

ಛದ್ಮವೇಷ- ಕವನ ಸಂಕಲನಕವಯಿತ್ರಿ- ಎಂ ಕುಸುಮ, ಹಾಸನಪ್ರಕಾಶಕರು: ರಚನ ಪ್ರಕಾಶನ, ಮೈಸೂರುಮೊದಲ ಮುದ್ರಣ: 2012ಬೆಲೆ: 80 ರೂಗಳು, ಒಟ್ಟು ಪುಟ: 128 ಈ ಕವನ ಸಂಕಲನವನ್ನು ಕವಯಿತ್ರಿಯಾದ ಶ್ರೀಮತಿ ಎಂ ಕುಸುಮ ಅವರು ಹೃದಯ ಶ್ರೀಮಂತಿಕೆಯುಳ್ಳ ಎಲ್ಲ ಮನುಜರಿಗೆ ಅರ್ಪಿಸಿದ್ದಾರೆ. ಶುದ್ಧ ಮಾನವತಾವಾದದಲ್ಲಿ ನಂಬುಗೆಯಿಟ್ಟ ಇವರ ಧ್ಯೇಯ ಮತ್ತು ಧೋರಣೆಗಳು ಇದರಿಂದಲೇ ಮನವರಿಕೆಯಾಗುತ್ತವೆ. ಇದು ಇವರ ಎರಡನೆಯ ಕವನ ಸಂಕಲನ. ಮೂಲತಃ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡದಲ್ಲಿ ತಮ್ಮ ಸೃಜನಾತ್ಮಕವನ್ನು … Read more

ಮನುಷ್ಯರು ಪ್ರಕೃತಿಯನ್ನು ಮೀರಬಲ್ಲರೆ?: ಡಾ. ಶಿವಕುಮಾರ್ ಆರ್.

ಶಿವಕುಮಾರ್ ದಂಡಿನ ಅವರು ಸಾಮಾಜಿಕ ಕಳಕಳಿಯುಳ್ಳ ಅಭೂತಪೂರ್ವ ಯುವ ಸಾಹಿತ್ಯ ಪ್ರತಿಭೆ. ಇವರು ಬರೆದದ್ದು ನಲವತ್ತೆಂದು ಕವಿತೆಗಳ “ಮೋಹದ ಪಥವೋ ಇಹಲೋಕದ ರಿಣವೋ” ಎಂಬ ಒಂದು ಕವನ ಸಂಕಲನ. ಅವರ ಎಲ್ಲ ಕವಿತೆಗಳಲ್ಲಿ ಸಾಮಾಜಿಕ ಕಳಕಳಿ ಕಂಡು ಬಂದರೂ ಕೆಲವು ಕವಿತೆಗಳು ಪ್ರಕೃತಿ ಪರವಾಗಿ ಹೆಚ್ಚಾಗಿ ಚಿಂತಿಸಿವೆ. ಅವರ ಪ್ರಕೃತಿಯ ಮುನಿಸು, ಹನಿ, ಪ್ರಕೃತಿಯ ಒಡಲೂ ಸಮಾನತೆಯ ಪಾಠವೂ ಎಂಬ ಕವಿತೆಗಳು ನಿಸರ್ಗತತ್ತ್ವವನ್ನು ಹೇಳುತ್ತವೆ. ಮನುಷ್ಯರು ಮೂಲತಃ ಅರಣ್ಯವಾಸಿಗಳು ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಅವರಿಗೆ ಆರಂಭದಲ್ಲಿ … Read more

ಡಾ. ಶಾಂತಲಕ್ಷ್ಮಿಯವರ ಕಾವ್ಯ ಚಿಂತನೆ: ಸಂತೋಷ್ ಟಿ

ಅಭಿಜಾತ ಕನ್ನಡ ಲಲಿತಾಕಲಾ ಲೋಕದ ಕಾವ್ಯನ್ವೇಷಣೆಯಲ್ಲಿ ಹೊಸಚಿಂತನೆಗಳ ಬೆರಗು ಮೂಡಿಸಿದ ಕವಯತ್ರಿ ಡಾ. ಶಾಂತಲಕ್ಷ್ಮಿ. ಭಾವನೂಭೂತಿಯ ಅಭೀಪ್ಸೆಯ ಉತ್ಸುಕತೆಯಿಂದ ಸ್ರಜನಶೀಲ ಅಭಿವ್ಯಕ್ತಿ ಮಾಧ್ಯಮ ಕಾವ್ಯದಲ್ಲಿ ತಮ್ಮ ಧ್ವನಿಯನ್ನು ಅನುಸಂಧಾನ ಮಾಡುತ್ತಿರುವ ಮಹಿಳಾ ಸಾಧಕರಲ್ಲಿ ಈ ಕವಯತ್ರಿಯ ಕಾವ್ಯ ನವಿರಾದ ಭಾವಗಳಿಂದ ಜೀವತುಂಬಿ ಹರಿಯುವಂತದ್ದು. ವಾಸ್ತವದ ಬದುಕಿನ ನುಂಟು ಉಂಟು ಮಾಡಿದ ಸಹನೀಯತೆˌ ಕರುಳು ಮಿಡಿಯುವ ಭಾವಧಾರೆˌಪ್ರಕ್ರತಿಯ ಜೀವ ವೈವಿಧ್ಯ ದ್ರವ್ಯˌಬದುಕಿನ ಮೌಲ್ಯಗಳುˌ ಜಾಗತಿಕವಾಗಿ ಬದಲಾದ ಸನ್ನಿವೇಶಗಳುˌ ಕೃತಕತೆಯ ಮೋಡಿ ನಿಯೋನ್ ಸನ್ನೆಗಳು, ಸ್ವಾರ್ಥ ಪರಿಸ್ಥಿತಿಯ ಬಿಕ್ಕಟುಗಳ ಲಾಲಸೆಗಳು … Read more

ಮಿನಿ ಕತೆಗಳು: ಅರವಿಂದ. ಜಿ. ಜೋಷಿ.

“ಹರಿದ ಜೇಬು” ಸಂಜೆ, ಶಾಲೆಯಿಂದ ಮನೆಗೆ ಬಂದ ಹತ್ತರ ಪೋರ, ಗೋಪಿ ತನ್ನ ಏಳೆಂಟು ಗೆಳೆಯರೊಂದಿಗೆ ಸೇರಿ, ಮನೆಯ ಎದುರಿನ ರಸ್ತೆಮೇಲೆ ಲಗೋರಿ ಆಡುತ್ತಿದ್ದ. ಆಗ, ಆತನ ಪಕ್ಕದ ಮನೆ ಯಲ್ಲಿ ವಾಸವಾಗಿದ್ದ  ನಡುವಯಸ್ಸಿನ ಭಾಗ್ಯ (ಆಂಟಿ) ಮನೆಯಿದಾಚೆಗೆ ಬಂದು, ಜಗುಲಿ ಮೇಲೆ ನಿಂತು, “ಗೋಪೀ. . ಗೋಪೀ. . “ಎಂದು ಕೂಗಿ ಕರೆದು ಆತನ ಕೈಗೆ ಇನ್ನೂರು ರೂಪಾಯಿ ನೋಟು ಕೊಡುತ್ತ, “ಲೋ. . ಗೋಪೀ. ಇಲ್ಲೇ ಹಿಂದ್ಗಡೆ ಶೇಟ್ರ ಅಂಗ್ಡಿಗೆ ಹೋಗಿ ಒಂದ್ ಪ್ಯಾಕೆಟ್ … Read more

ತೇಲುವ ಗ್ರಾಮಗಳ ಮುಳುಗುವ ಬದುಕು: ಎಂ ನಾಗರಾಜ ಶೆಟ್ಟಿ

ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಸ್ವಲ್ಪವೇ ಚಿಕ್ಕದಾದ ದಕ್ಷಿಣ ಏಷ್ಯಾದ ಪುಟ್ಟ ರಾಷ್ಟ್ರ ಕಾಂಬೋಡಿಯಾ. ಕಾಂಬೋಡಿಯಾದ ಜನಸಂಖ್ಯೆ ಒಂದು ಕೋಟಿ ಎಂಬತ್ತು ಲಕ್ಷ. ಅದರಲ್ಲಿ ಸುಮಾರು ಒಂದು ಲಕ್ಷ ಜನರು ತೇಲುವ ಗ್ರಾಮಗಳಲ್ಲಿ ವಾಸಿಸುತ್ತಾರೆ. ಕಾಂಬೋಡಿಯಾದಲ್ಲಿ ಏಳುನೂರು ತೇಲುವ ಗ್ರಾಮಗಳಿವೆಯೆಂದು ಹೇಳಲಾಗುತ್ತಿದೆ. ಕಾಂಬೋಡಿಯಾಕ್ಕೆ ಬರುವ ಪ್ರಯಾಣಿಕರಿಗೆ ವಿಶ್ವದ ಅತಿ ಹೆಚ್ಚು ವಿಸ್ತೀರ್ಣದ ಅಂಗೋರವಾಟ್ ದೇವಾಲಯ ಹೇಗೋ, ಹಾಗೆಯೇ ತೇಲುವ ಗ್ರಾಮಗಳು ಕೂಡಾ ಆಕರ್ಷಣೆಯ ಕೇಂದ್ರಗಳು. ಲಕ್ಷಾಂತರ ಜನರನ್ನು ಬಲಿ ಪಡೆದ ಪೋಲ್‌ಪಾಟ್‌ರಂತಹ ಸರ್ವಾಧಿಕಾರಿಯನ್ನು ಕಂಡ ಕಾಂಬೋಡಿಯವನ್ನು ನೋಡಬೇಕೆಂದು ಬಹಳ ವರ್ಷಗಳಿಂದ … Read more

ಡಾ.ಜಿ.ಎನ್.ಉಪಾಧ್ಯರ ಸಮೀಕ್ಷೆಯಲ್ಲರಳಿದ ಡಾ.ಜನಾರ್ದನ ಭಟ್ ಅವರ “ವಾಙ್ಞಯ ವಿವೇಕ”: ಅನುಸೂಯ ಯತೀಶ್

ಡಾ. ಜನಾರ್ದನ ಭಟ್ ನಮ್ಮೊಳಗಿನ ಸಂವೇದನಾಶೀಲ ಲೇಖಕರು. ಇವರು ಯಾವುದೇ ಸಾಹಿತ್ಯ ಪ್ರಕಾರಗಳಿಗೆ ಅಂಟಿಕೊಳ್ಳದೆ ಸೃಜನ ಮತ್ತು ಸೃಜನೇತರ ಎರಡು ಪ್ರಕಾರಗಳಲ್ಲೂ ತಮ್ಮನ್ನು ಅವಿರತ ತೊಡಗಿಸಿಕೊಂಡು ಧಣಿವರಿಯದೆ ಸಾಹಿತ್ಯಾರಾಧನೆಯಲ್ಲಿ ತೊಡಗಿರುವ ಬಹುಶ್ರುತ ವಿದ್ವಾಂಸರು. ಬಹುಭಾಷಾ ಪ್ರವೀಣರಾದ ಇವರು ಕಥೆ, ಕಾದಂಬರಿ, ವೈಚಾರಿಕ ಕೃತಿಗಳು, ಅಂಕಣಗಳು, ವಿಮರ್ಶೆ, ಮಕ್ಕಳ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ ರಚನೆಯ ಜೊತೆಗೆ ಹಲವಾರು ಕೃತಿಗಳ ಸಂಪಾದನೆ ಕೂಡ ಮಾಡಿ ಆಡು ಮುಟ್ಟದ ಸೊಪ್ಪಿಲ್ಲ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಸಾಹಿತ್ಯದ … Read more

ಸಂವಿಧಾನದ ಮಹತ್ವವನ್ನು ಸಾರುವ ಮನೋಜ್ಞ ಸಿನಿಮಾ – 19.20.21: ಚಂದ್ರಪ್ರಭ ಕಠಾರಿ

ಹರಿವು, ನಾತಿಚರಾಮಿ, ಆಕ್ಟ್ 1978 ಸಿನಿಮಾಗಳಿಂದ ಸಂವೇದನಾಶೀಲ ನಿರ್ದೇಶಕರೆಂದು ಗುರುತಿಸಲ್ಪಟ್ಟಿರುವ  ಮಂಸೋರೆಯವರ ಹೊಸ ಸಿನಿಮಾ-19.20.21. ಟೈಟಲ್ ಸೇರಿದಂತೆ ಹಲವು ಕುತೂಹಲಗಳೊಂದಿಗೆ ಅವರು ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಹಾಗೆ ತರುವಾಗ ಹಲವು ಸವಾಲುಗಳನ್ನು ತಮ್ಮ ಸಿನಿಮಾ ತಯಾರಿಕೆಯ ಅನುಭವದಿಂದ, ಪ್ರತಿಭಾವಂತಿಕೆಯಿಂದ ನಿಭಾಯಿಸಿದ್ದಾರೆ.   ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಲ್ಲಿರುವ ಕುತ್ಲೂರು ಗ್ರಾಮದಲ್ಲಿ ಶತಮಾನಗಳಿಂದ ಬದುಕಿರುವ ಆದಿವಾಸಿ ಬುಡಕಟ್ಟು ಜನಾಂಗವಾದ ಮಲೆಕುಡಿಯರನ್ನು, ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಜಾರಿ ಮಾಡಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ, ಆಳುವ ಪ್ರಭುತ್ವದಿಂದ ನಡೆದ ದೌರ್ಜನ್ಯಗಳ … Read more

ನೀಚನ ಸಾವು: ಮಂಜು ಡಿ ಈಡಿಗೆರ್

ಓದೋಕ್ಕೆ ಅಂತ ರೂಮ್ ಮಾಡ್ಕೊಂಡು ಕೊಪ್ಪಳ ದಲ್ಲೇ ಇದ್ದೆ. ದಿನ ಬೆಳಗ್ಗೆ ರನ್ನಿಂಗು ವರಮಪ್ಪು ವರ್ಕೌಟು ಮಾಡೋದು ನನ್ನ ದಿನ ನಿತ್ಯದ ಅಭ್ಯಾಸ ಆಗಿತ್ತು. ಹಾಗಾಗಿ ದಿನ ಬೆಳಗ್ಗೆ ಸ್ಟೇಡಿಯಂಗೆ ಪ್ರಾಕ್ಟೀಸ್ ಗೆ ಹೋಗ್ತಾ ಇದ್ದೆ. ಸಂಡೇ ಪ್ರಾಕ್ಟೀಸ್ ಮುಗಿಸಿಕೊಂಡು ರೂಮ್ಗೆ ಬಂದೆ. ನನ್ನ ರೂಮಿನ ಪಕ್ಕ ಮನೆ ಖಾಲಿ ಆಗಿತ್ತು, ಅದಕ್ಕೆ ಯಾರೋ ಹೊಸಬರು ಬಂದಾಗೆ ಇತ್ತು. ನನ್ನ ರೂಮು ಮತ್ತೆ ಅವರ ಮನೆ ಎರಡು ಪಕ್ಕದಲೆ ಇರುವುದರಿಂದ ಯಾರು ಎಂದು ಗಮನಿಸಬೇಕಾಯಿತು. ಮನೆ ಇಂದ … Read more

ನಾ ಕಂಡಂತೆ: ಶೀತಲ್

ನಾನು ಈ ಮನೆಗೆ ಬಂದು ಈಗ ನಾಲ್ಕು ವರ್ಷವಾಯಿತು. ಮನೆಯೆಂದರೆ ಅಬ್ಬಾ! ಇವರ ಮನೆಯಂತೆ ಯಾವ ಮನೆಯೂ ಇಲ್ಲ ಆ ಲೇಔಟ್ ನಲ್ಲಿ ಎಂದು ಆಗಾಗ ಕೆಲಸದಾಕೆ ಸುಗುಣ ಮನೆಯೊಡತಿ ವೈದೇಹಿ ಯವರ ಬಳಿ ಹೇಳುವುದನ್ನು ಕೇಳಿದ್ದೇನೆ. ಇವರ ಮನೆಯಲ್ಲದೆ ನಾನು ಯಾವ ಮನೆಗೂ ಹೋಗುವ ಹಾಗಿಲ್ಲವಲ್ಲ ಹಾಗಾಗಿ ನನ್ನ ಸ್ವಂತ ಅಭಿಪ್ರಾಯವಲ್ಲ ಇದು. ಇವರ ಮನೆಯಿಂದ ಎದುರು ಕಾಣುವ ಎರಡು ಮನೆಗಳು, ಹಾಗೆ ಬಲಗಡೆಗೆ, ಇವರ ಮನೆಯ ಹೂದೋಟ ದಾಟಿದರೆ ಕಾಣುವ ಮನೆ ಕೂಡ ಇವರ … Read more

ಬೈಸಿಕಲ್ ಥೀವ್ಸ್ ವಿಮರ್ಶೆ: ಕಿರಣ್ ಕುಮಾರ್ ಡಿ

‘ಬೈಸಿಕಲ್ ಥೀವ್ಸ್’ ೧೯೪೮ರಲ್ಲಿ ಇಟಾಲಿಯನ್ ಭಾಷೆಯಲ್ಲಿ ತೆರೆಕಂಡ ಚಲನಚಿತ್ರ. ಇಟಾಲಿಯಲ್ಲಿ “ಲಾದ್ರಿ ದಿ ಬೈಸಿಕ್ಲೆಟ್” ಹೆಸರಿನಲ್ಲಿ ತೆರೆಕಂಡಿತು. ಚಲನಚಿತ್ರದ ಕಥೆಯನ್ನು ಸಿಸೇರ್ ಜವಟ್ಟಿನಿಯವರು ೧೯೪೬ರಲ್ಲಿ ಪ್ರಕಟಗೊಂಡ “ಲಾದ್ರಿ ದಿ ಬೈಸಿಕ್ಲೆಟ್” ಕಾದಂಬರಿಯಿಂದ ಅಳವಡಿಸಿಕೊಂಡು ಬರೆದಿದ್ದಾರೆ. ಈ ಚಲನಚಿತ್ರವನ್ನು ವಿಟ್ಟೋರಿಯಾ ಡಿ ಸಿಕಾ ಅವರು ನಿರ್ದೇಶಿಸಿದ್ದಾರೆ. ಈ ಚಲನಚಿತ್ರ ೨ನೇ ವಿಶ್ವಯುದ್ಧದ ನಂತರ ತೆರೆಕಂಡಿದ್ದು. ೨ನೇ ವಿಶ್ವಯುದ್ಧ ಮುಗಿದ ಮೇಲೆ ಇಟಾಲಿಯಲ್ಲಿ ಎದುರಾದ ಉದ್ಯೋಗದ ಸಮಸ್ಯೆಯನ್ನು ಮತ್ತು ಬಡತನವನ್ನು ಹಲವಾರು ಪಾತ್ರದ ಮೂಲಕ ಹೇಳುತ್ತದೆ ಈ ಚಲನಚಿತ್ರ. ಚಲನಚಿತ್ರದ … Read more

“ನೇರ ವ್ಯಕ್ತಿತ್ವ ಶಕ್ತಿಯೇ…?? “: ರೇಖಾ ಶಂಕರ್.

ಆತ್ಮೀಯ ಓದುಗರೇ, ನಾನಿವತ್ತು ಹೇಳ್ತಿರೊ ವಿಷ್ಯ ಅಂದ್ರೆ ನೇರ ವ್ಯಕ್ತಿತ್ವದ ಬಗ್ಗೆ, ಅದೇ ಇದ್ದಿದ್ದು ಇದ್ದಂಗೆ ಹೇಳುದ್ರೆ ಎದ್ ಬಂದ್ ಎದೆಗೆ ಒದ್ರಂತೆ ಅಂತ ಗಾದೆ ಹೇಳ್ತಾರಲ್ಲ. ಅದೇ ವಿಷಯ…., ಅದಕ್ಕೆ ನೇರ ನುಡಿಯ ವ್ಯಕ್ತಿತ್ವ ಅಂತ್ಲೂ ಹೇಳ್ಬೌದು. ನೋಡೋಕೆ ಮನುಷ್ಯ ಒಂದೆ ಥರ ಕಾಣ್ತಿದ್ರೂ ಅವನಲ್ಲಿ ಇರೊ ಗುಣ ಸ್ವಭಾವಗಳು ವಿಭಿನ್ನವಾಗಿರತ್ತೆ, ಅವ ನಡೆಯೊ ಹಾದಿ ಆಡುವ ಮಾತು ತನ್ನ ನೋಡುವ ನೋಟ ಒಟ್ಟಾರೆ ತನ್ನ ಬದುಕುವ ಶೈಲಿಯನ್ನೆ ವಿಭಿನ್ನವಾಗಿಟ್ಕೊಂಡಿರ್ತಾನೆ. ” ಲೋಕೊ ಭಿನ್ನ ರುಚಿಃ … Read more

ನಾಸಿಕ ಪುರಾಣ: ಡಾ.ವೃಂದಾ ಸಂಗಮ್,

ನಾಸಿಕದಾಗ ಅಂತ ನಮ್ಮ ಶೀನೂ ಮಾಮಾ ಮಾತು ಶುರು ಮಾಡಿದರೂಂದರ, ನಾವೆಲ್ಲಾ, ಮೂಗಿನ ಮೇಲೊಂದು ಬೆರಳಿಟ್ಟುಕೊಂಡು ಕೂತಿರಬೇಕು. ಯಾಕಂದರ ನಮ್ಮ ಶೀನೂ ಮಾಮಾ ಅಂದರ ಅಸಾಧಾರಣ ವ್ಯಕ್ತಿ. ಹಂಗಂತ, ಭಾಳ, ಭಾಳ ಸಾಧನಾ ಮಾಡ್ಯಾರ ಅಂತಲ್ಲ. ಸೀದಾ ಹಾದಿಯವರಲ್ಲ. ಸೊಟ್ಟ ಮೂಗಿನವರು. ಅಂದರ, ಹೀಂಗ, ಮಾತು ಶುರು ಮಾಡಿದಾಗ, ನಾವು ಯಾವ ರೀತಿ ವಿಚಾರ ಮಾಡಿದರೂ, ಇವರು ಈ ವಿಷಯದ ಹರಟಿ ಪ್ರಾರಂಭಿಸಬಹುದು ಅಂತ ಒಂದು ಅಂದಾಜು ಇಟ್ಟಕೊಂಡಿದ್ದರ, ಅದನ್ನೆಲ್ಲಾ, ಮುರದು, ಹೊಸಾ ದಾರಿಯೊಳಗೇನೇ ಹರಟೀ ಪ್ರಾರಂಭ … Read more

ಶಿವಧ್ಯಾನ: ಡಾ. ರಶ್ಮಿ ಕಬ್ಬಗಾರ

ಅಲ್ಲಿಗೆ ಹೋದ ಮೇಲೆ ಗೊತ್ತಾದದ್ದುನಮ್ಮೂರ ಶಿವ ಎಷ್ಟು ಸಿಂಪಲ್ಲು ಅಂತ !ಶಿವರಾತ್ರಿಯೋ- ಮಡಿಹುಡಿ ನೈವೇದ್ಯದತಲೆಬಿಸಿ ಎಳ್ಳಷ್ಟೂ ಇರದಶುದ್ಧ ಪ್ರೀತಿಯ ಸಮಾವೇಶವೇ ಸರಿಯೆನ್ನಿ ಆ ದಿನ ಯಾವ ಹೊಳೆಯೂ ಆದೀತು ಪಕ್ಕದಲ್ಲೊಂದು ಶಿಲೆಯಿದ್ದರಲ್ಲಿ ಶಿವರಾತ್ರಿ ನೀರೆಲ್ಲವೂ ಗಂಗೆ’ ಕಲ್ಲ ತಲೆಮೇಲೊಂದಿಷ್ಟು ಅಭಿಷೇಕಗೈದುನಿರುಮ್ಮಳವಾಗಿ ಬನ್ನಿ ಮನೆಗೆ’- ಹಿರಿಯರ ನುಡಿ ನಮ್ಮಜನ ಊರು-ಕೇರಿಯ ಗೆಳೆಯರನ್ನಸಹಜೀವಗಳನ್ನ ಕೂಡಿಸಿ,ಗೂಡ್ಸು, ಲಾರಿ ತುಂಬಿಕೊಂಡುಗಲ್ಲದ ಗೌಜುಗಳೊಂದಿಗೆಶಿವರಾತ್ರಿ ಪಿಕ್ ನಿಕ್ ಹೋಗಿದ್ದುಂಟು. ಪ್ರತಿವರ್ಷವೂ- ಮುಂದಿನ್ವರ್ಷ ನಿನ್ನ ಮುದ್ದಾಂ ಕರಕೊಂಡ್ಹೋಗ್ತೆವೇ ಅಂತ್ಹೇಳಿ ಕೈಕೊಟ್ಟು ಓಡಿದ ಅಕ್ಕ, ಅಣ್ಣ, ಚಿಕ್ಕಮ್ಮನ ನೆನೆದು,ಚಳ್ಳೇಪಿಳ್ಳೆಗಳಾದ … Read more

ಪಂಜು ಕಾವ್ಯಧಾರೆ

ಮಾನದಂಡ ! ಮಿಥಿಲಾಪುರದೊಳಗೆ ಪಂದ್ಯ;ಸೀತೆಗೆ ಸ್ವಯಂವರ….ಹರಧನುವ ಮುರಿಯುವುದೇಮಾನದಂಡ !ರಾಮ ಮುರಿದ; ಸೀತೆ ಒಲಿದಳುನಂತರದ ವಿಚಾರವೀಗ ಬೇಡ ! ಪಾಂಚಾಲನಂದನೆ ದ್ರೌಪದಿ;ಸ್ವಯಂವರದಿ ಗೆದ್ದವನ ಮಡದಿ !ಮತ್ಸ್ಯಯಂತ್ರವ ಭೇದಿಸುವುದೇಮಾನದಂಡ !ಪಾರ್ಥ ಬಾಣ ಹೂಡಿದ; ದ್ರೌಪದಿ ಒಲಿದಳುನಂತರದ ವಿಚಾರವೀಗ ಬೇಡ ! ಅಷ್ಟೋ ಇಷ್ಟೋ ಓದಿದ ಹೆಣ್ಣು,ಸ್ವಯಂವರ ಅನ್ನಬಹುದೆ ಇದನು ?‘ಸರ್ಕಾರಿ ನೌಕರಿ’ಯೇಮಾನದಂಡ !ಸಂ(ಗಿಂ)ಬಳ ತಂದವನ ಹುಸಿನಗೆಗೆ ಒಲಿದಾಳುನಂತರದ ಬದುಕು ? ಈಗ ಬೇಡ ! ಜನಕರಾಜನ ಮಗಳಿಗೆವನವಾಸ ವರವಾಯ್ತು;ದ್ರುಪದ ರಾಜನ ಮಗಳು ಬದುಕುಐವರ ಪಾಲಾಯ್ತು ! ಅತಿ ಆಸೆ ಪಟ್ಟಷ್ಟೂ … Read more

ನಾಲ್ವರ ಗಝಲ್‌ಗಳು: ಶಿವರಾಜ್. ಡಿ., ಜಯಶ್ರೀ ಭ ಭಂಡಾರಿ., ಜೊನ್ನವ, ರೇಣುಕಾ ಕೋಡಗುಂಟಿ

ಗಝಲ್. ನಾನು-ನೀನು ಅವನು-ಇವನು ಬೇರೆ-ಬೇರೆಯಿಲ್ಲ ನಾವು ಒಂದೇರಾಮ-ರಹೀಮ ಕೃಷ್ಣ-ಕರೀಮ ಭೇದ-ಭಾವವಿಲ್ಲ ನಾವು ಒಂದೇ ಸ್ವರ್ಗ ನರಕ ಪಾಪ ಪುಣ್ಯವೆಲ್ಲ ಮನುಜನ ಕರ್ಮದ ಫಲಗಳುಜಗತ್ತಿನ ಧರ್ಮ ಗ್ರಂಥಗಳ ಸಾರಗಳಲಿ ಭೇದವಿಲ್ಲ ನಾವು ಒಂದೇ ಆಲಯ ಬಯಲಾಗಿ ಬಯಲಲಿ ಬೆಳಕಾಗಿ ಬಾಳಬೇಕು ಮನುಜಮನುಷ್ಯ ಮನುಷ್ಯತ್ವದಲಿ ಮೇಲು-ಕೀಳುಗಳಿಲ್ಲ ನಾವು ಒಂದೇ ಅಜ್ಞಾನದ ತಮವಳಿದು ವಿಜ್ಞಾನದಿ ಮೌಡ್ಯವಳಿಯಲಿಜ್ಞಾನಜ್ಯೋತಿ ಬೆಳಗಲು ತರ-ತಮಗಳಿಲ್ಲ ನಾವು ಒಂದೇ ಜಾತಿ,ಧರ್ಮಗಳ ಗೋಡೆ ಕಟ್ಟಿ ವಿಶ್ವಗುರು ಆಗಲು ಹೊರಟಿದ್ದಾರೆ ಶಿವುಪರಿಶುದ್ಧ ಪ್ರೀತಿಗೆ ಕಾರುಣ್ಯದ ಮನಸಿಗೆ ಜಾತಿ-ಧರ್ಮಗಳಿಲ್ಲ ನಾವು ಒಂದೇ -ಶಿವರಾಜ್. … Read more

ಬರೆ: ಲಿಂಗರಾಜ ಸೊಟ್ಟಪ್ಪನವರ

ಆಡಿದ ಮಾತುಗಳೆಲ್ಲ ಮರೆತು ಹೋದವುಉಳಿದ ಮಾತುಗಳನುನೀನೆ ಆಡಬೇಕು ಈ ಬರೆ ಮೇಲೆ ಕೈ ಆಡಿಸುನಿನಗೆ ಏನಾದರೂ ದಕ್ಕಬಹುದುಪದ ನಾದ ನೋವುರಕ್ತ ಕೀವುಬಿರಿತ ಚರ್ಮ ಒಡೆದ ಮಾಂಸ ಖಂಡತೆರೆದ ಎದೆ ಗೂಡುಈ ಎಲ್ಲವನು ಪದ ಮಾಡಿ ಹಾಡಿಕೋ ಹಂಚುಬೇಕಿದ್ದರೆ ಮಾರಿಕೋ ತಾಕಬಹುದು ಎಲುಬಿನ ಹಂದರನೆತ್ತರ ವಾಸನೆಸಿಗದೇ ಹೋಗಬಹುದು ಹೆಣಗಳ ಲೆಕ್ಕಗುಳಿಬಿದ್ದ ಕಣ್ಣುಗಳಲಿ ಒಮ್ಮೆ ಇಳಿದು ಹೋಗುನೀನು ಗತಕೆ ಸರಿದು ಹೋಗುಚರಿತೆಯ ಚರ್ಮ ಸುಲಿದ ಕಥನಗಳಲ್ಲಿ ನಾನುಸಿಕ್ಕೆ ಸಿಗುತ್ತೇನೆಒಂದು ವಿನಂತಿ ಇಷ್ಟೇಇಷ್ಟು ಕಾಲವಾದ ನಂತರವಾದರೂ ಸರಿನೀನು ಯಾರು? ಎಂದು ಮಾತ್ರ … Read more

ಪ್ರೀತಿ ಹುಟ್ಟೀತು ಹೇಗೆ?: ಎಂ ನಾಗರಾಜ ಶೆಟ್ಟಿ

ಹುಟ್ಟು, ಬಣ್ಣ, ಬಟ್ಟೆಗಳ ಗುರುತಿನಲ್ಲಿತಿನ್ನುವ ಅನ್ನ, ಇರುವ ಜಾಗ, ಮಾಡುವ ಕೆಲಸಅವರಿವರಲ್ಲಿ ಹಂಚಿ,ಮುಟ್ಟದೆಯೇ ದೂರ ನಿಲ್ಲುವಲ್ಲಿಪ್ರೀತಿ ಹುಟ್ಟೀತು ಹೇಗೆ? ಮನೆಗೊಬ್ಬ ದೇವನ ಮಾಡಿಇಲ್ಲಿಗಿಂತ ಅಲ್ಲಿಯೇ ಸರಿಯೆಂದು ಹಾಡಿಇಂದಿನದಕ್ಕೆ ಅಂದಿನ ಕಾರಣ ಗಂಟು ಹಾಕಿತೊತ್ತುಗಳಾಗಿಸಿದವರ ನಡುವೆಪ್ರೀತಿ ಹುಟ್ಟೀತು ಹೇಗೆ? ಮನಸ್ಸುಗಳ‌‌ ಸುಟ್ಟು ಬೂದಿ ಮಾಡಿಶಾಖದ ಸುತ್ತ ಕುಣಿವವರಕರಕಲು ಎದೆಗಳಲ್ಲಿಪ್ರೀತಿ ಹುಟ್ಟೀತು ಹೇಗೆ? ಅವನು ನಾನೆಂದು, ನಾನು ಅವನೆಂದುಅವನೂ ಅವಳೂ ಒಂದೇ ಎಂದುನಮ್ಮನ್ನು ನಾವೇ ಅರಿಯದೆಪ್ರೀತಿ ಹುಟ್ಟೀತು ಹೇಗೆ? -ಎಂ ನಾಗರಾಜ ಶೆಟ್ಟಿ

ಪೋಲಿ ಹುಡುಗ: ವಿದ್ಯಾ ಗಾಯತ್ರಿ ಜೋಶಿ

ಭಾರತಿ ಮತ್ತು ಆರತಿಇಬ್ಬರದೂ ಬಾರಿ ಪ್ರೀತಿ ದೇಹ ಎರಡು ಅತ್ಮ ಒಂದೇಅಂತ ಎಲ್ಲರೂ ಅನ್ನುವುದೇ ದಿನವೂ ಒಬ್ಬ ಹುಡುಗಮುಗುಳ್ನಗುತ್ತಿದ್ದ ಕಾಲೇಜಲಿ ಪಾಠ ಕೇಳುವಾಗ ಆರತಿಗೆ ಹಿಡಿಸಿದ ಪೋರಕಾರಣ ಆತ ಭಾರೀ ಸುಂದರ ಭಾರತಿಗೆ ಹೇಳಿದಳು ಗುಟ್ಟುಭಾರತಿ ನೋಡಿದಳು ದುರುಗುಟ್ಟಿ ಅಂದಳು “ಆತ ನೋಡೋದು ನಿನ್ನನ್ನುಪ್ರೀತಿ ಮಾಡೋದು ನನ್ನನ್ನು!” ಹುಡುಗ ಬಂದನು ಇವರ ಹತ್ತಿರಹೆಚ್ಚಾಯ್ತು ಹುಡುಗಿಯರ ಕಾತರ ಕೇಳಿದರು “ಪ್ರೀತಿಸುವೆ ಯಾರನ್ನ?ನನ್ನನ್ನ ಇಲ್ಲಾ ಇವಳನ್ನ?” ಸುಂದರ ಅಂದ”ನಕ್ಕಿದ್ದು ನೋಡಿ ನಿಮ್ಮಿಬ್ಬರನ್ನನಾ ಪ್ರೀತಿಸುವದು ನಿಮ್ಮಿಬ್ಬರಲ್ಲಿ ಒಬ್ಬಳ ಅಕ್ಕನ್ನ!” -ವಿದ್ಯಾ ಗಾಯತ್ರಿ … Read more

ದೇವದೂತ ನನ್ನಪ್ಪ: ಶಕುಂತಲಾ ಪ್ರ. ಬರಗಿ

ಈ ಜಗವ ತೋರಲೆಂದೇ ಬಂದ ದೇವದೂತಈ ಜಗವ ತೋರಿ ತಾನೊಬ್ಬನೆ ದೂರ ನಿಂತನನ್ನಪ್ಪ ಈ ಜಗವ ತೋರಿಸಲು ಕರೆತಂದವಎನ್ನ ಕರೆದು ಜಗವ ತೋರಿ ಸುಮ್ಮನೆ ನಿಂತುಬಿಟ್ಟವ. ಈ ಜಗದ ಪೈಪೋಟಿ, ಅಂಕು ಡೊಂಕುನಾವು -ಅವರು -ಇವರು ಎಂಬುದನ್ನೇ ತಿಳಿಸದೆ ಸುಮ್ಮನೆ ನಿಂತುಬಿಟ್ಟವಅವನು ಈ ಭೂಮಿಗೆ ಕರೆತಂದ ಅಷ್ಟೇ,ಈ ಜಗವ ಏನೆಂದು ತಿಳಿಸಲಿಲ್ಲ ಎನಗೆ ಈ ಭೂಮಿಯ ಆಕಾಶದಲ್ಲಿ ಹಾರಾಡುವ ರೆಕ್ಕೆಯಾಗಿರೆಕ್ಕೆ ಕೊಟ್ಟು ಹಾರಲು ಹಚ್ಚಿ ದೂರ ನಿಂತವಅಪ್ಪನ ರೆಕ್ಕೆಗಿರುವ ಶಕ್ತಿಯೇ ನನ್ನೊಳಗೆ ಇದೆಅಪ್ಪನ ರೆಕ್ಕೆಗಿರುವ ಬಲವೇ ನನ್ನೊಳಗೆ … Read more