ಕಂಬಳ, ಕೃಷ್ಣಪ್ಪ ಮತ್ತು ಅಮರತ್ವ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಅಲೇ ಬುಡಿಯೆರಿಯೇ* ಎಂಬ ಕೂಗು ಕೇಳಿದ ತಕ್ಷಣವೇ ಎಂಟು ಕಾಲುಗಳನ್ನು ಅಟ್ಟಿಸಿಕೊಂಡು ಹೋಗಲಾರಂಭಿಸಿದ ಎರಡು ಕಾಲುಗಳು, ಎತ್ತರೆತ್ತರಕ್ಕೆ ಚಿಮ್ಮುತ್ತಿದ್ದ ನೀರು, ಕಬ್ಬಿಣಕ್ಕೂ ಕಠಿಣತೆಯೊಡ್ಡುವಂತಿದ್ದ ಮೈ ಎಲ್ಲವನ್ನೂ ನೋಡುತ್ತಲೇ ಇದ್ದ ಕೃಷ್ಣಪ್ಪನ ಕಣ್ಣುಗಳು ಕೊನೆಯ ಒಂದು ಬಿಂದುವಿನಲ್ಲಿ ಹೋಗಿ ನೆಲೆಸಿದವು. ತಮ್ಮ ತಮ್ಮ ಕಡೆಯ ಕೋಣಗಳನ್ನು ಕೈಬೀಸಿ ಕರೆಯುತ್ತಿದ್ದವರು ಹಲವರು. ಮತ್ತೀಗ ಕಂಬಳದ ಕರೆಯಾಚೆಗೆ ದೃಷ್ಟಿ ಬದಲಿಸಿದ ಕೃಷ್ಣಪ್ಪನಿಗೆ ಮುಂದೆ ಓಡುತ್ತಿದ್ದ ಎರಡು ಕೋಣಗಳು ಮತ್ತು ಹಿಂದೆ ಅಟ್ಟಿಸುತ್ತಿರುವ ಓಟಗಾರ ಈ ಇಡೀ ದೃಶ್ಯ ಹೊಸದು ಭಾವವೊಂದನ್ನು ಮೂಡಿಸಿತು. … Read more

ವಿಶ್ವಪ್ರಗತಿ?????: ನಾಗಸಿಂಹ ಜಿ ರಾವ್

ಹಾಸನದ ಮುನಿಸಿಪಲ್ ಹೈಸ್ಕೂಲ್, ಒಂಬತ್ತನೇ ತರಗತಿ ಮಕ್ಕಳು ಗಲಾಟೆ ಮಾಡ್ತಾ ಕೂತಿದ್ರು, ಸಮಾಜ ವಿಜ್ಞಾನದ ಶಿಕ್ಷಕ ಮರಿಯಪ್ಪ ತರಗತಿ ಪ್ರವೇಶ ಮಾಡಿದ ತಕ್ಷಣ ತರಗತಿಯಲ್ಲಿ ನಿಶ್ಯಬ್ದ. ಎಲ್ಲಾ ವಿದ್ಯಾರ್ಥಿಗಳನ್ನು ದಿಟ್ಟಿಸಿ ನೋಡಿ ಹೇಳಿದ್ರು “ಶಿಕ್ಷಣ ಇಲಾಖೆ ಹಾಗೂ ಯುನಿಸಿಫ್ ಒಟ್ಟಿಗೆ ಬೆಂಗಳೂರಲ್ಲಿ ಒಂದು ಸಮಾಲೋಚನೆ ಮಾಡ್ತಿದಾರೆ, ವಿಶ್ವಪ್ರಗತಿ ಮತ್ತು ವಿಶ್ವಶಾಂತಿಯ ಬಗ್ಗೆ ವಸ್ತುಪ್ರದರ್ಶನ, ರಾಜ್ಯದ ಯಾವುದೇ ಶಾಲೆಯಿಂದ ಮಕ್ಕಳು ಭಾಗವಹಿಸಬಹುದು, ವಿಶ್ವಪ್ರಗತಿ ಅಥವಾ ವಿಶ್ವಶಾಂತಿಯ ಬಗ್ಗೆ ಒಂದು ಮಾಡಲ್ ಸಿದ್ಧ ಮಾಡಿ ಪ್ರದರ್ಶನ ಮಾಡಬೇಕು. ಉತ್ತಮವಾದ ಮಾಡಲ್ಗೆ … Read more

ಅರ್ಥಾ ಅಯಿತ್ರೀಯಪ್ಪಾ: ಬಿ.ಟಿ.ನಾಯಕ್

ಅದೊಂದು ದಿನ ಮಾನ್ಯ ಜಿಲ್ಲಾಧಿಕಾರಿಗಳು ಒಂದು ಹಳ್ಳಿಯನ್ನು ಸರಕಾರಿ ಕರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡು ಅಲ್ಲಿಗೆ ಬಂದಿದ್ದರು. ಹೀಗಾಗಿ, ಅವರು ಹೆಮ್ಮೆಯಿಂದ ಮತ್ತು ಬಹಳೇ ಅನಂದದಿಂದ ಕರ್ಯಕ್ರಮ ಮಾಡಲು ತಮ್ಮ ಸಹೋದ್ಯೋಗಿಗಳಿಗೂ ಕೂಡ ತಿಳಿಸಿದ್ದರು. ಒಟ್ಟಿನಲ್ಲಿ ಆ ಹಳ್ಳಿಯ ಜನರ ಮನಸ್ಸು ಗೆದ್ದು ಹೋಗಲು ತವಕ ಪಡುತ್ತಿದ್ದರು. ಅಲ್ಲಿ ಕಾರ್ಯಕ್ರಮ ನಿಗದಿ ಪಡಿಸಿದಂತೆ ಮತ್ತು ವೇದಿಕೆಗೆ ಆಗಮಿಸಲು, ಅಲ್ಲಿ ಕಾರ್ಯಕ್ರಮ ಆಯೋಜಿಸಿದ್ದವರು ಮನವಿ ಮಾಡಿದಾಗ, ಅವರು ವೇದಿಕೆಗೆ ಅಲ್ಲಿಗೆ ಬಂದು ಕುಳಿತರು. ಅವರ ಪಕ್ಕದಲ್ಲಿ ಹಳ್ಳಿಯ ಮುಖ್ಯಸ್ಥರಾದ ನಾಗನಗೌಡರುಉಪಸ್ಥಿತರಿದ್ದರು. … Read more

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 8)”: ಎಂ.ಜವರಾಜ್

-೮-ಒಂಟೆತ್ತಿನ ಗಾಡಿಲಿ ಗೋದಿ ಉಪ್ಪಿಟ್ಟು ಬಂದಾಗ ಹತ್ತತ್ತಿರ ಒಂದು ಗಂಟೆಯಾಗಿತ್ತು. ಗೋದಿ ಉಪ್ಪಿಟ್ಟನ್ನು ದೊಡ್ಡ ದೊಡ್ಡ ಕ್ಯಾನ್ಗಳಿಂದ ಸ್ಕೂಲಲ್ಲಿದ್ದ ಎರಡು ದೊಡ್ಡ ಬಾಂಡಲಿಗೆ ಸುರಿವಾಗ ಗೋದಿ ಉಪ್ಪಿಟ್ಟು ಗಮಗಮ ಅಂತಿತ್ತು. ಬಿಸಿ ಗೋದಿ ಉಪ್ಪಿಟ್ಟು ತುಂಬಿದ್ದ ಬಾಂಡಲಿಯಿಂದ ಹೊಗೆ ಏಳುತ್ತಿತ್ತು. ಆ ಗಮಲು ಹೀರುತ್ತಿದ್ದರೆ ಮಜವಾಗುತ್ತಿತ್ತು.. ನಟರಾಜ ಮೇಷ್ಟ್ರು ಏಳನೇ ಕ್ಲಾಸಿನ ಗೌಡರ ಹುಡುಗರಿಂದ ಆ ಗೋದಿ ಉಪ್ಪಿಟ್ಟನ್ನು ಇಳಿಸಿಕೊಳುವುದು ಮತ್ತು ಮದ್ಯಾಹ್ನ ಬೆಲ್ಲು ಹೊಡೆದಾಗ ಕ್ಯೂ ನಿಲ್ಲಿಸಿ ಎಲ್ಲರಿಗೂ ಕೊಡುವ ಜವಾಬ್ದಾರಿ ವಹಿಸಿದ್ದರು. ಪೋಸ್ಟ್ ಮ್ಯಾನ್ … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 7)”: ಎಂ.ಜವರಾಜ್

-೭–ಅವತ್ತೇನೊ ಟಪಾಲುಗಳು ಜಾಸ್ತಿ ಇದ್ದವು ಅನ್ಸುತ್ತೆ. ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಹೋಟೆಲಿಗೆ ಹೋಗಿ ಟೀ ಕುಡಿದು ಬರೊ ತನಕ ಗಂಗಣ್ಣನ ಲೆಕ್ಕ ಮುಗಿದಿರದೆ ಕನ್ಫ್ಯೂಸ್ ಮಾಡಿಕೊಂಡು ಎಲ್ಲ ಲೆಟರುಗಳನ್ನು ಅತ್ತಿಂದಿತ್ತ ಇತ್ತಿಂದತ್ತ ಎತ್ತಿ ಎತ್ತಿ ಇಡುತ್ತ ಜೋಡಿಸುತ್ತಲೇ ಇದ್ದ. ನಾವು ಪೋಸ್ಟ್ ಮೇಷ್ಟ್ರು ಅತ್ತ ಹೋಗಿದ್ದನ್ನೇ ನೋಡಿಕೊಂಡು ಮೆಲ್ಲಗೆ ಬಂದು ಗಂಗಣ್ಣನ ಸುತ್ತ ನಿಂತು ನೋಡ್ತ ಮಾತಾಡ್ತ “ಅದು ತಿರುಮಕೂಡಲ್ದು. ಇದು ಬೈರಾಪುರುದ್ದು. ಇದಿದೆಯಲ್ಲ ಅದು ಗೋಪಾಲ್ಪುರುದ್ದು.. ಅದು ಅವ್ರದು ಇದು ಇವ್ರದು” ಅಂತ ಪೋಸ್ಟ್ ಮೇಷ್ಟ್ರು … Read more

ಭ್ರಮಾ – ಸತ್ಯ – ಭಾಮಾ !: ಡಾ. ಹೆಚ್ ಎನ್ ಮಂಜುರಾಜ್

ನಾನು ಸಾಮಾನ್ಯವಾಗಿ ಪ್ರಶ್ನೆಗಳನ್ನು ಕೇಳುತ್ತಾ ಕೂರುವುದಿಲ್ಲ; ಆದರೆ ನನ್ನನ್ನೇ ಕೇಳಿಕೊಳ್ಳುತ್ತಿರುತ್ತೇನೆ. ಸಾಧ್ಯವಾದಷ್ಟೂ ಪ್ರಶ್ನೆಗಳೇ ಹುಟ್ಟದಂತೆ ನೋಡಿಕೊಳ್ಳುತ್ತಿರುತ್ತೇನೆ! ಇದೊಂದು ಸುಖವಾದ ಮತ್ತು ನಿರಾಯಾಸ ಸ್ಥಿತಿ. ಇದಕ್ಕೆ ವಿಶೇಷವಾದ ಜ್ಞಾನವೇನೂ ಬೇಡ; ಎಂಥದೋ ಅಲೌಕಿಕವೋ; ಅಧ್ಯಾತ್ಮಸಿದ್ಧಿಯೋ ಎಂಬಂಥ ಹೆಸರಿಡುವುದೂ ಬೇಡ. ಲೌಕಿಕದಲ್ಲೇ ಇದ್ದು, ಮುಳುಗಿ, ಎದ್ದು ಬದುಕು ನಡೆಸಿದರೂ ಸುಖ ಮತ್ತು ನೆಮ್ಮದಿಯನ್ನು ಹೊಂದಬಹುದು. ಅದಕ್ಕಾಗಿ ಪೂಜೆ, ಪುರಸ್ಕಾರ, ದೇವರು, ಧರ್ಮ, ಅಧ್ಯಾತ್ಮ ಅಂತ ಲೋಕೋತ್ತರಕೆ ಕೈ ಚಾಚುವ ಅಗತ್ಯವಿಲ್ಲ. ಕೈ ಚಾಚಿದರೆ ತಪ್ಪೇನೂ ಇಲ್ಲ. ಅವರವರ ಸ್ವಾತಂತ್ರ್ಯ. ನಿರ್ಬಂಧಗಳಿಗೆ … Read more

ನನ್ನ ಗೊಂದಲ ಏನೆಂದರೆ: ಶೈಲಜ ಮಂಚೇನಹಳ್ಳಿ

AC ಅಂದರೆ Assistant Commissioner ಎನ್ನುವ ಪದಕ್ಕೆ ಸರಿಯಾದ ಕನ್ನಡ ಪದದ ಬಗ್ಗೆ . ಈ ಬಗ್ಗೆ ನನಗೆ ಗೊಂದಲ ಶುರುವಾಗಿದ್ದು ನಮ್ಮ ಜಮೀನುಗಳಲ್ಲಿ ಒಂದು ರಸ್ತೆ ಅನಧಿಕೃತವಾಗಿ ಹಾದು ಹೋಗಿ ಪಿ.ಎಂ.ಜಿ.ಎಸ್.ವೈ. ವತಿಯಿಂದ ಅಗಲೀಕರಣ ಕೂಡ ಆಗುತ್ತಿರುವುದರಿಂದ, ಭೂಸ್ವಾಧೀನವಾಗದೇ ರಸ್ತೆ ಇಲ್ಲದ ಖಾಸಗಿ ಜಮೀನುಗಳಲ್ಲಿ ರಸ್ತೆ ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ತಿಳಿಸಿದಾಗ ಪಿ.ಎಂ.ಜಿ.ಎಸ್.ವೈ. ಯ ಅಧಿಕಾರಿಗಳು ಕೆಲ ರಾಜಕೀಯ ಪುಡಾರಿಗಳನ್ನು ಮತ್ತು ಕೆಲ ಕೆಟ್ಟ ಹಳ್ಳಿ ಜನರನ್ನು ಸೇರಿಸಿಕೊಂಡು ನಮಗೆ ತೊಂದರೆ ಕೊಟ್ಟಿರುವ … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 6)”: ಎಂ.ಜವರಾಜ್

-೬- ಅವತ್ತು ಸುಡು ಬಿಸಿಲ ಒಂದು ಮದ್ಯಾಹ್ನ ಗಂಗಣ್ಣ ಸುಸ್ತಾದವನಂತೆ ಸೈಕಲ್ ಏರಿ ಬಂದವನು ಅಗಸ್ತೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಬಾಗಿಲ ಪಕ್ಕದ ಪಶ್ಚಿಮದ ಕಡೆ ಮುಖ ಮಾಡಿದ್ದ ಬಸಪ್ಪನ ವಿಗ್ರಹದ ಜಗುಲಿ ಅಂಚಿಗೆ ಕುಂತು ಕಾಗದ ಪತ್ರ ಚೆಲ್ಲಿಕೊಂಡು ತೊಟ್ಟಿಕ್ಕುತ್ತಿದ್ದ ಬೆವರು ಒರೆಸಿಕೊಳ್ಳುತ್ತ ಓದುತ್ತ ಜೋಡಿಸುತ್ತಿದ್ದ. ಬಿಸಿಲು ಧಗಧಗಿಸುತ್ತಿತ್ತು. ಅದೇ ಹೊತ್ತಿಗೆ ಭರ ್ರಂತ ಬಂದ ಅರ್ಚಕರು ಅವನಿಗೆ ಎದುರಾಗಿ ಕುಂತು “ಏನಪ್ಪ ಗಂಗ ಲೆಟ್ರು ಗಿಟ್ರು ಬಂದಿದಿಯಾ” ಅಂದರು. ಗಂಗಣ್ಣನ ಮುಖ ಇನ್ನಷ್ಟು ಬೆವರಿ … Read more

ನಾಗರಾಜಪ್ಪನ ನೆರಳು: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ನಾಗರಾಜಪ್ಪ ಠೀವಿಯಿಂದ ತನ್ನೂರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆರಡಿ ಎತ್ತರದ ಗಟ್ಟಿ ದೇಹ, ವಯಸ್ಸು ಅರುವತ್ತು ದಾಟಿದ್ದರೂ ಕುಂದದ ಕಸುವು, ತಲೆಯ ಮುಕ್ಕಾಲು ಭಾಗ ಆವರಿಸಿದ್ದ ಕಪ್ಪು ಕೂದಲು, ನೇರ ನಿಲುವು ಇವೆಲ್ಲಾ ನಾಗರಾಜಪ್ಪನನ್ನು ಯುವಕನಂತೆಯೇ ಕಾಣಿಸುತ್ತಿದ್ದವು. ಆದರೆ ನಾಗರಾಜಪ್ಪನ ಮನಃಸ್ಥಿತಿ ತೀರಾ ಭಿನ್ನವಾಗಿತ್ತು. ಮುಂದಿನ ಯುಗಾದಿಗೆ ಅರವತ್ತಾರಕ್ಕೆ ಕಾಲಿಡುವ ಆತಹತ್ತು ವರ್ಷ ಹೆಚ್ಚಾಗಿದೆ ತನಗೆ ಎಂದು ಭ್ರಮಿಸಿಕೊಂಡು ಖುಷಿಪಡುತ್ತಿದ್ದ. ವಯಸ್ಸಷ್ಟು ಹೆಚ್ಚಾದರೆ ಜೀವನಾನುಭವವನ್ನೂ ಹೆಚ್ಚಾಗಿ ಗಳಿಸಿಕೊಂಡಿದ್ದೇನೆ ಎಂಬ ಭಾವ ಆತನೊಳಗೆ ಮೂಡಿ, ಹೆಮ್ಮೆಪಟ್ಟುಕೊಳ್ಳುವಂತಾಗುತ್ತಿತ್ತು. ಇಂತಹ ನವಿರು … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 5)”: ಎಂ.ಜವರಾಜ್

-೫- ಒಂದ್ಸಲ ನಮ್ಮಣ್ಣ ಕೆಲಸದ ಅಪಾಯಿಂಟ್ಮೆಂಟ್ ಲೆಟರಿಗೆ ಕಾಯ್ತಾ ಇದ್ದ. ಟ್ರೈನಿಂಗ್ ಮಾಡಿ ಎರಡು ವರ್ಷವಾದರು ಕೆಲಸದ ಆಸೆಯಿಂದ ಇದ್ದವನಿಗೆ ಅಪಾಯಿಂಟ್ಮೆಂಟ್ ಲೆಟರ್ ಬರಲೇ ಇಲ್ಲ. ಅದೇ ಹೊತ್ತಿಗೆ ಸರ್ಕಾರದ ಕೃಷಿ ನೀರಾವರಿ ಯೋಜನೆಯಡಿ ಬಲದಂಡೆ ನಾಲೆ ಕೆಲಸ ಶುರುವಾಗಿತ್ತು. ಇದರಿಂದ ನಮಗಿದ್ದ ಎರಡು ಮೂರು ಎಕರೆ ಡ್ರೈಲ್ಯಾಂಡಿಗೆ ನೀರು ಸಿಕ್ಕಿ ಭತ್ತದ ಫಸಲು ಕಾಣುವ ಹಂಬಲದಿಂದ ರಂಗೋಲಿ ಕಲ್ಲಿನ ಹೊಲ ಅಗೆದು ಮಟ್ಟ ಮಾಡುವ ಕೆಲಸವೂ ನಡೆಯುತ್ತಿತ್ತು. ಇದರ ದೆಸೆಯಿಂದ ಅಪ್ಪ ಮತ್ತು ಇಬ್ಬರು ಅಣ್ಣಂದಿರ … Read more

ಬೆಟ್ಟದ ಭೂತದ ಕತೆ ಮೇದರದೊಡ್ಡಿ ಹನುಮಂತ

ನಮ್ಮೂರು ಕಾವೇರಿ ತೀರದಲ್ಲಿ ಬರುವ ಸುಮಾರು ನಲವತ್ತು ಮನೆಗಳಿರುವ ಪುಟ್ಟ ಊರು. ಊರಿನ ಸುತ್ತೆಲ್ಲಾ ಬಂಡೆಗಳೇ ಸುತ್ತುವರಿದಿರುವ ಕಾರಣ ಊರಿನ ಯಾವ ಕಡೆ ನಿಂತು ಪೋಟೋ ಕ್ಲಿಕ್ಕಿಸಿದರೂ ಸಹ ಯಾವುದೋ ಕಾಡಿನಿಂದ ಪೋಟೋ ತೆಗೆದಂತೆ ಕಾಣುವುದು ವಿಸ್ಮಯವೇ ಸರಿ.ಸಾರಿಗೆ ಸಂಪರ್ಕವಿಲ್ಲದ ಕಾರಣ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಹಾಗಾಗಿ ನಾನು ಹತ್ತನೇ ತರಗತಿಯಾಚೆಗಿನ ಮೆಟ್ಟಿಲು ತುಳಿಯಲಿಲ್ಲ.ಅತಿ ಹೆಚ್ಚು ಕರಡಿಗಳು ವಾಸಿಸುವ ಗವಿಗಳಿರುವ ಕಾರಣ ಊರಿನ ಸಮೀಪದ ಬಂಡೆ ಸಾಲಿಗೆ ಕರಡಿಕಲ್ಲು ಎಂಬ ಹೆಸರಿದೆ. ಊರಿಗೆ ಕರಡಿಕಲ್ ದೊಡ್ಡಿ ಎಂಬ … Read more

ಮದುವೆ ಅವರವರ ಭಾವ: ಬಿ.ಟಿ.ನಾಯಕ್

ಶಾಮುನ ತಂದೆ ತಾಯೀ ಅದಾಗಲೇ ಹಿರಿಯ ನಾಗರೀಕರಾಗಿದ್ದರು. ತಾವು ಮಾಡುತ್ತಿರುವ ಶ್ರಮದ ಕೆಲಸಗಳಿಂದ ಮುಕ್ತಿ ಹೊಂದಬೇಕೆಂದು, ತಮ್ಮ ಪುತ್ರನನ್ನು ಕರೆದು ಒಂದು ವಿಷಯ ಚರ್ಚಿಸೋದಿದೆ ಬಾ ಎಂದು ಕರೆದರು. ಆಗ ಆತ ಬಂದು;‘ಅದೇನಮ್ಮಾ ಚರ್ಚಿಸುವಂಥಹ ವಿಷಯ ?’ ಎಂದ.‘ಅಂದ ಹಾಗೆ ನಿನಗೆಷ್ಟು ವಯಸ್ಸು ?’ ಎಂದಳು ಅಮ್ಮ.‘ಹತ್ರ..ಹತ್ರ ಇಪ್ಪಂತ್ತೆಂಟು’ ಎಂದ.‘ನಿನ್ನಈ ವಯಸ್ಸಿಗೆ ಏನು ಆಗಬೇಕು ಅದು ಆಗಬೇಕಲ್ಲವೇ ?’ ಎಂದ ಅಪ್ಪ.‘ಉದ್ಯೋಗವಂತೂ ಸಿಕ್ಕಿದೆ, ಸರಿಯಾದ ಸಂಬಳ ಕೂಡ ಸಿಗುತ್ತಿದೆ, ಮತ್ತಿನ್ನೇನು ಬೇಕು ?’ ಎಂದ ಶಾಮು.‘ಅಲ್ವೋ.. ದಡ್ಡ.. … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 4)”: ಎಂ.ಜವರಾಜ್

-೪- ಅವತ್ತು ಸ್ಕೂಲಿಗೆ ರಜೆ ಅಂತ ಎಲ್ಲ ಮಾತಾಡುತ್ತಿದ್ದರು. ಸ್ಕೂಲಿಗೆ ಅಂತಲ್ಲ ಎಲ್ಲರಿಗೂ ಗೌರ್ಮೆಂಟ್ ರಜೆ ಅಂತ ಸಿಕ್ಕಸಿಕ್ಕವರು ಹೇಳ್ತಾ ಇದ್ದರೆ ನಮಗೆ ಹಿಗ್ಗೊ ಹಿಗ್ಗು. ಅದನ್ನು ಕೇಳ್ತಾ ಕೇಳ್ತಾ ಪಂಚಾಯ್ತಿ ಆಫೀಸ್ ಮುಂದಿದ್ದ ಮರಯ್ಯನ ಟೀ ಅಂಗಡಿ ಹತ್ತಿರ ಬಂದಾಗ ಆ ಟೀ ಅಂಗಡಿ ಮುಂದೆ ಒಂದಷ್ಟು ಜನ ಹೆಚ್ಚಾಗೇ ನಿಂತು ಟೀ ಕುಡಿತಾ ಬೀಡಿ ಸೇದುತ್ತಾ ಪೇಪರ್ ಓದುತ್ತಾ ರಾಜ್ ಕುಮಾರ್ ಬಗ್ಗೆ ಜೋರಾಗೇ ಮಾತಾಡ್ತ ಇದ್ದರು. ಎಲ್ಲರು ರಾಜ್ ಕುಮಾರ್ ಬಗ್ಗೆ ಮಾತಾಡುತ್ತಿದ್ದರೆ … Read more

ವಿಶ್ವಪ್ರಸಿದ್ಧ ಪಶುವೈದ್ಯರು: ಪ್ರೊ. ಎಂ. ನಾರಾಯಣಸ್ವಾಮಿ

ಪ್ರತಿ ವರ್ಷದ ಏಪ್ರಿಲ್ ತಿಂಗಳ ಕೊನೆಯ ಶನಿವಾರದಂದು ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ. ಕಳೆದ 25 ವರ್ಷಗಳಿಂದ ಅಂತಹ ಆಚರಣೆ ನಡೆಯುತ್ತಿದೆ. ಆದು ಆರಂಭವಾದದ್ದು 2000ನೇ ಇಸವಿಯಲ್ಲಿ. ಅಂತಹ ದಿನದ ಆಚರಣೆಗೊಂದು ಧ್ಯೇಯವಾಕ್ಯವನ್ನು ವಿಶ್ವ ಪಶುವೈದ್ಯಕೀಯ ಸಂಘವು ಕೊಡುತ್ತದೆ. ಅದರಂತೆ, 2024 ರ ವಿಶ್ವ ಪಶುವೈದ್ಯಕೀಯ ದಿನದ ಧ್ಯೇಯವಾಕ್ಯವು ‘ಪಶುವೈದ್ಯರು ಅತ್ಯಗತ್ಯ ಆರೋಗ್ಯ ಕಾರ್ಯಕರ್ತರಾಗಿದ್ದಾರೆ’ ಎಂಬುದಾಗಿದೆ. ಪಶುವೈದ್ಯರು ಪ್ರಾಣಿಗಳ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಅದಷ್ಟೇ ಅಲ್ಲದೆ ಮಾನವನ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ. ಪ್ರಾಣಿಗಳ ರೋಗಗಳನ್ನು ಹತೋಟಿಯಲ್ಲಿಟ್ಟಿದ್ದರಿಂದಾಗಿ ಮಾನವನ ದೈಹಿಕ, ಮಾನಸಿಕ … Read more

ಕವಿತೆ ಮತ್ತು ವಿಮರ್ಶೆ: ಅಜಿತ್ ಹರೀಶಿ, ಎನ್. ಎಸ್. ಶ್ರೀಧರ ಮೂರ್ತಿ

ಒಂದು ಸತ್ಯ ಕವಿತೆ ಕವಿಯೊಬ್ಬ ಬಯಸಿದ್ದ ಸತ್ತು ಹೋಗಲುಅದೂ ಹಾಡುಹಗಲುಜೇಡದ ಉದರದ ಎಳೆ ಕಾಣಲುದಾರಿಯೊಂದು ತೋರಲು ಹೇಳಿ ಹೋಗಬೇಕು ಕಾರಣನನ್ನ ಸಾವಿಗೆ ನಾನೇ ಕಾರಣಕೆಟ್ಟ ಸಂಯೋಗದಿಂದ ನಾನೀಗ ಬಸಿರುಲಜ್ಜೆಯಾಗಿದೆ ಬೇಡ ಉಸಿರು ಕುಣಿಕೆ ಬಿಗಿದು ಕುರ್ಚಿ ಒದ್ದುವಿದಾಯ ಹೇಳಬಯಸಿದ್ದುಪಾಪದ ಕೊಡ ಬಲು ಭಾರಅಂಗುಷ್ಟ ನೆಲ ತಾಗಿ ಹಗ್ಗ ಹಾರ ಜಗತ್ತು ಜಾಗೃತವಾಯಿತು ಜರೆಯಿತುಎಲ್ಲ ನಾಟಕ ಕವಿ ಕಟುಕದಯೆ ತೋರದಿರಿ ಹೂತುಹಾಕಿರಿಬೆಳೆಯದಿರಲಿ ರಕ್ಕಸ ಸಂತತಿ ಕರುಣೆ ಇದ್ದವರು ಲೇಖನಿ ಹಿಡಿದರುಕವಿ ಸಾಯಬಹುದು ಕವಿತೆ ಅಮರಬದುಕು ಬರಹ ಒಂದೆಯೋ ಬೇರೆಯೋಕೊಲ್ಲಬೇಡಿರೆಂದರು … Read more

ಮನದ ಮೌನಕ್ಕೆ ಕೊನೆಯ ಪತ್ರ: ಪೂಜಾ ಗುಜರನ್ ಮಂಗಳೂರು..

ಮನಸ್ಸು ಮೌನವಾಗಿದೆ ಅಂದ್ರೆ ಯಾವುದು ಬೇಡ ಅಂತಲ್ಲ.‌ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ನಿರಾಳವಾಗಿರು ಅಂತ ಅರ್ಥ. ಒಂದೊಂದು ಸಲ ಇಂತಹ ಮೌನಗಳು ಬದುಕಿಗೆ ಅನಿವಾರ್ಯ.. ಎಲ್ಲ ನೋವುಗಳೂ ಖುಷಿಗಳು ಮರೆಯಾದಾಗ ಅಲ್ಲೊಂದು ನಿಶ್ಯಬ್ದವಾದ ಮೌನ ಆವರಿಸಿ ಬಿಡುತ್ತದೆ. ಅದನ್ನು ಅನುಭವಿಸಿ ನೋಡುವಾಗ ಮನಸಿಗೆ ಅನಿಸುವುದು ಇಷ್ಟೆ.ಇಲ್ಲಿ ಎಲ್ಲವೂ ಶೂನ್ಯ. ಯಾವುದು ಶಾಶ್ವತವಲ್ಲ‌. ನಾವು ಬಯಸಿದಂತೆ ಎಲ್ಲವೂ ಆಗುತ್ತದೆ ಅಂದುಕೊಳ್ಳುವುದು ಮೂರ್ಖತನ. ಬದುಕೆಂಬ ಕತೆಯನ್ನು ಬರೆಯುವ ಬರಹಗಾರರು ನಾವೇ ಆದರೂ ಅದರೊಳಗಿರುವ ಪಾತ್ರಗಳು ಮಾತ್ರ ಹಲವಾರು. ಈ ಬದುಕಲ್ಲಿ ನಮಗಾಗಿ … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 3)”: ಎಂ.ಜವರಾಜ್

-೩-ಸೋಸಲೆ ಮೇಷ್ಟ್ರು ಹಸಿಹುಣಸೇ ಕಡ್ಡಿಲಿ ಹೊಡೆದ ಹೊಡೆತದ ನೆಪ ಮಾಡಿಕೊಂಡು ಮಲಗಿದ್ದವನು ಏಳದೆ ನರಳುತ್ತ ರಗ್ಗು ಮುದುಡಿ ಮಲಗಿದ್ದೆ. ರಾತ್ರಿ ಅಪ್ಪ ನನ್ನ ಕೈಲಿದ್ದ ಬಾಸುಂಡೆ ನೋಡಿ ಆ ಸೋಸಲೆ ಮೇಷ್ಟ್ರನ್ನು ಅವ್ವನಿಗೆ ಒಪ್ಪಿಸುತ್ತ “ಆ ಬೋಳಿಮಗ ಐಕುಳ್ಗ ಕೊಡೊ ಉಪ್ಪಿಟ್ನು ಕೊಡ್ದೆ ಕಳಿಸನ. ಉಪ್ಪಿಟೇನು ಅವ್ರಪ್ಪನ ಮನೆಯಿಂದ ತಂದಿದ್ನ” ಅಂತ ಅಪ್ಪ ಮೇಷ್ಟ್ರನ್ನು ಬೈತಿದ್ದರೆ ನನಗೆ ಒಳಗೊಳಗೆ ಹಿಗ್ಗು. ಹಂಗೆ “ಆ ಗಂಗ ಬೋಳಿಮಗ ಬರ‌್ಲಿ ಮಾಡ್ತಿನಿ ಅವುನ್ಗ. ಸಣ್ಮುಕಪ್ಪವ್ರು ಪೋಸ್ಟಾಪಿಸ್ ತಂದ್ರು. ಅವ್ರೆ ಇಲ್ಲಿಗಂಟ … Read more

ಪಂಜು ಕಾವ್ಯಧಾರೆ

ನಾಡು ನುಡಿ ಮಣ್ಣ ಪ್ರತಿಯ ಕಣದಿ ಪ್ರೇಮ ಭಾವದೇವನು ನೋಡಿಹ ಬೆರಗಲಿ ಈ ಸ್ವಭಾವಹಳದಿ ಕೆಂಪಿನ ಅಂದಕೆ ಸಮವಲ್ಲ ಹೊನ್ನ ಭಾರನಾಡ ದೇವಿಗೆ ಹೊನ್ನುಡಿಯ ಸಿಂಗಾರ. ನಾಡ ಹೃದಯ ತಬ್ಬಿರಲು ವಚನ ಗಾನಬಾಳ ಹಾದಿಗೆ ಬೆಳಕ ಚೆಲ್ಲಿದೆ ಸುಗಾನಕೀರ್ತನೆಯಲಿ ತುಂಬಿರಲು ಭಕ್ತಿಯ ರಸ ಸಾರತೊಳೆದಿಹಳು ಕಾವೇರಿ ಕಲ್ಮಷಗಳ ಭಾರ. ಇತಿಹಾಸ ಮರೆಯದು ನಾಡ ಚರಿತೆಯಬರಿಯ ಒನಕೆ ಬರೆದ ಸಾಹಸ ಗಾಥೆಯಕದಂಬರು ಪೋಣಿಸಿದ ನುಡಿಯ ಸಿರಿಯಜಲವು ಹಸಿರಿಗೊಲಿದ ಸೊಬಗ ರಾಜವೈಖರಿಯ. ಜ್ಞಾನದಿ ವಿಜ್ಞಾನವಿಂದು ಅರಿತು ಬೆರೆತಿದೆಪ್ರಗತಿಯ ಪಥದಿ ನಾಡನು … Read more

ನುಡಿವ ಬೆಡಗು: ಡಾ. ಹೆಚ್ ಎನ್ ಮಂಜುರಾಜ್

ನಮ್ಮಲ್ಲೊಂದು ವಿಚಿತ್ರವಾದ ಆದರೆ ಎಲ್ಲರೂ ಒಪ್ಪಿ ಆಚರಿಸುವ ನಡವಳಿಕೆಯ ಲೋಪವಿದೆ. ಇದು ಎಲ್ಲರ ಗಮನಕೂ ಬಂದಿರಬಹುದು. ಆದರೆ ಇದನ್ನು ಕುರಿತು ಬರೆದವರು ಕಡಮೆ. ಗೊತ್ತಿದ್ದರೆ ನೀವೇ ತಿಳಿಸಬೇಕು. ಯಾರನ್ನಾದರೂ ಭೇಟಿಯಾದಾಗ, ಲೋಕಾಭಿರಾಮ ಮಾತಾಡುವಾಗ, ಎದುರಿನವರು ಹೇಳುವುದನ್ನು ಕೇಳಿಸಿಕೊಳ್ಳುವಾಗ ಮತ್ತು ನಮ್ಮೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ನಾವು ಮಾಡುವ ಅತಿ ದುಷ್ಟವರ್ತನೆಯೆಂದರೆ ಪೂರ್ತ ಕೇಳಿಸಿಕೊಂಡು, ಪ್ರತಿಕ್ರಿಯಿಸುವ ಮುನ್ನವೇ ಅಂಥದೇ ಪ್ರಸಂಗ-ಪರಿಪರಿ ಪರಸಂಗಗಳನ್ನು ನಾವೇ ಮುಂದೊಡಗಿ ಹೇಳಲು ಉತ್ಸುಕರಾಗುವುದು; ಪೂರ್ತ ಕೇಳಿಸಿಕೊಳ್ಳದೇ ಆ ಸಂಬಂಧದ ನಮ್ಮ ಅನುಭವ ಮತ್ತು ನೆನಪುಗಳನ್ನು … Read more