“ಕತ್ತಲ ಹೂವು” ನೀಳ್ಗತೆ (ಭಾಗ ೫): ಎಂ.ಜವರಾಜ್
ಭಾಗ 5 ಬೆಳಗಿನ ಜಾವದೊತ್ತಲ್ಲಿ ಮುಂಗಾರು ಬೀಸ್ತಿತ್ತು. ಶೀತಗಾಳಿ. ದೊರ, ವಾಟೀಸು, ಕಾಂತ, ಕುಮಾರ, ಚಂದ್ರ ಎಲ್ಲ ಶಿಶುವಾರದ ಜಗುಲಿ ಮೇಲೆ ಶೀತಗಾಳಿಗೆ ನಡುಗುತ್ತ ತುಟಿ ಅದುರಿಸುತ್ತ ಪಚ್ಚಿ ಆಡುತ್ತಿದ್ದವು. ಶೀತಗಾಳಿ ಜೊತೆಗೆ ಸಣ್ಣ ಸಣ್ಣ ಹನಿ ಉದುರಲು ಶುರು ಮಾಡಿತು. ಶಿಶುವಾರದ ಜಗುಲಿ ಕೆಳಗೆ ನೆಲ ಕೆಂಪಗಿತ್ತು. ಕೆಮ್ಮಣ್ಣು. ಕೆಂಪು ಅಂದ್ರೆ ಕೆಂಪು. ಹನಿ ಉದುರುವುದ ಕಂಡು ಪಚ್ಚಿ ಆಡುವುದನ್ನು ನಿಲ್ಲಿಸಿ ಕೆಳಗಿಳಿದು ಮೊನಚಾದ ಬೆಣಚು ಕಲ್ಲು, ಕಡ್ಡಿ ತೆಗೆದುಕೊಂಡು ಕೆಮ್ಮಣ್ಣು ಕೆದಕಿ ಅಲ್ಲೆ ಅವರವರದೇ … Read more