ವುಡೀ ಆಲೆನ್ ಮತ್ತು ವಾಸುಕಿ ರಾಘವನ್
ಕೆಲವು ಚಿತ್ರಗಳೇ ಹಾಗೆ. ಮೊದಲ ಬಾರಿ ನೋಡಿದಾಗ ಅಷ್ಟೊಂದು ಅದ್ಭುತ ಅಂತ ಅನ್ನಿಸಿರೋಲ್ಲ. ಅದಕ್ಕೆ ನಾವು ನೋಡಿದಾಗಿನ ಮನಸ್ಥಿತಿ ಕಾರಣ ಇರಬಹುದು, ಅಥವಾ ಅಷ್ಟೊಂದು ವೈವಿಧ್ಯಮಯ ಚಿತ್ರಪ್ರಕಾರಗಳ ಪರಿಚಯ ಇಲ್ಲದಿರುವುದು ಕೂಡ. ನಂತರದ ಮರುವೀಕ್ಷಣೆಗಳಲ್ಲಿ ಆ ಚಿತ್ರಗಳು ಹೊಸ ಹೊಸ ಡೈಮೆನ್ಶನ್ ಗಳನ್ನು ತೋರುತ್ತವೆ. “ಅಯ್ಯೋ, ಇದನ್ನ ನಾನು ಗಮನಿಸಿಯೇ ಇರಲಿಲ್ಲ ಅಲ್ವಾ” ಅಂತ ನಮ್ಮನ್ನು ಚಕಿತಗೊಳಿಸುತ್ತವೆ. ಅಂತಹ ಒಂದು ಅದ್ಭುತ ಚಲನಚಿತ್ರ "ಆನೀ ಹಾಲ್". ಇದು ನನಗೆ ವೈಯಕ್ತಿಕವಾಗಿ ತುಂಬಾ ಪ್ರಿಯವಾದ ಚಿತ್ರವೂ ಹೌದು! … Read more