ಪಂಜು ಕವಿತೆ ಸ್ಪರ್ಧೆ-2024 ಫಲಿತಾಂಶ

ಪಂಜು ಅಂತರ್ಜಾಲ ಪತ್ರಿಕೆ ಏರ್ಪಡಿಸಿದ್ದ 2024ನೇ ಸಾಲಿನ ಕವಿತೆ ಸ್ಪರ್ಧೆಯಲ್ಲಿ ಒಟ್ಟು 188 ಕವಿಗಳು ಭಾಗವಹಿಸಿದ್ದರು. ಪ್ರಸಿದ್ಧ ಕವಿಗಳಾದ ಸವಿತಾ ನಾಗಭೂಷಣ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಪಂಜು ಕವಿತೆ ಸ್ಪರ್ಧೆಯಲ್ಲಿ ವಿಜೇತರಾದವರು:೧. ಪ್ರಥಮ ಬಹುಮಾನ: ಗುಜರಿ ಅಂಗಡಿಯ ಪುಸ್ತಕ (ಶರಣಗೌಡ ಬಿ ಪಾಟೀಲ ತಿಳಗೂಳ)೨. ದ್ವಿತೀಯ ಬಹುಮಾನ: ಮಾರ ನವಮಿ (ಲಿಂಗರಾಜು ಕೆ.)೩. ತೃತೀಯ ಬಹುಮಾನ: ಅಷ್ಟಾವಂಕನ ಸ್ವಗತ (ಪ್ರಶಾಂತ್ ಬೆಳತೂರು) ಸಮಾಧಾನಕರ ಬಹುಮಾನ ವಿಜೇತರು:೧. ಏಸುವಿನ ಗೊಂಬೆ (ಸವಿರಾಜ್ ಆನಂದೂರು)೨. ಕೊಳಲ ಹಿಡಿದ ಕೃಷ್ಣ.. … Read more

ಪಂಜು ಕವಿತೆ ಸ್ಪರ್ಧೆ 2024 ರ ಅಂತಿಮ‌ ಸುತ್ತಿಗೆ‌ ಆಯ್ಕೆಯಾದ ೫೦ ಕವಿಗಳ ಪಟ್ಟಿ

2024 ರ‌ ಪಂಜು ಕವಿತೆ ಸ್ಪರ್ಧೆಗೆ ಒಟ್ಟು 188 ಕವಿತೆಗಳು ಬಂದಿದ್ದು, ಆ ಪೈಕಿ 50 ಕವಿತೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಈ ಸ್ಪರ್ಧೆಯ ಅಂತಿಮ‌ ಸುತ್ತಿಗೆ‌ ಆಯ್ಕೆಯಾದ ೫೦ ಕವಿಗಳ ಹೆಸರುಗಳು ಈ ಕೆಳಗಿನಂತಿವೆ… ೧. ಚೇತನ್ ದೊಡ್ಡಯ್ಯ೨. ಡಾ. ಗುರುಸಿದ್ಧಯ್ಯಾ ಸ್ವಾಮಿ೩. ಮೋದೂರು ತೇಜ೪. ಲಿಂಗರಾಜು ಕೆ.೫. ನಿರಂಜನ ಕೇಶವ ನಾಯಕ೬. ಮಧು ಕಾರಗಿ೭. ನಾಗರಾಜ ಜಿ. ಎನ್. ಬಾಡ೮. ಶರಣಗೌಡ ಬಿ ಪಾಟೀಲ ತಿಳಗೂಳ.೯. ಅಶ್ಫಾಕ್ ಪೀರಜಾದೆ೧೦. ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ೧೧. ಮಂಜುನಾಥ್ … Read more

ಸಾರ್. ಪ್ಲೀಸ್ ಸಹಾಯ ಮಾಡಿ … !!!!!!!!!: ನಾಗಸಿಂಹ ಜಿ ರಾವ್

( ಈ ಘಟನೆಯನ್ನು ಘಟನೆಯ ಪ್ರಮುಖ ವ್ಯಕ್ತಿಯ ಅನುಮತಿ ಪಡೆದು ಬರೆಯಲಾಗಿದೆ.. ಗೋಪ್ಯತೆಯ ಉದ್ದೇಶದಿಂದ ಹೆಸರುಗಳನ್ನು ಬದಲಿಸಿ ಬರೆದಿದ್ದೇನೆ ) ಸಾಮಾನ್ಯವಾಗಿ ನಾನು ಹೆಸರಿಲ್ಲದೆ ಬರಿ ನಂಬರ್ ಬರುವ ಕರೆಗಳನ್ನ ಬೇಗ ತೆಗೆಯೊಲ್ಲ. ನನ್ನ ಮೊಬೈಲ್ ನಂಬರ್ ಪದೇ ಪದೇ ಪತ್ರಿಕೆಗಳಲ್ಲಿ, ಟಿವಿ ನಲ್ಲಿ ಬಂದು ಸುಮ್ಮನೆ ಕರೆ ಮಾಡುವವರ ಸಂಖ್ಯೆ ಜಾಸ್ತಿ. ಇದು ಏನು ? ಯಾಕೆ ಸಹಾಯ ಮಾಡ್ತೀರಾ ? ಅನ್ನೂ ಪ್ರಶ್ನೆಗಳೇ.. ಅದಕ್ಕೆ ನಾನು ಹೆಸರಿಲ್ಲದೆ ಬರುವ ಕರೆ ಸ್ವೀಕಾರ ಮಾಡಲ್ಲ. ಆದ್ರೆ … Read more

ಆಹಾರವೇ ವಿಷವಾಗಿ, ವಿಷವೇ ಆಹಾರವಾಗಿರುವ ಈ ಕಾಲಘಟ್ಟದಲ್ಲಿ…: ಚಂಸು ಪಾಟೀಲ

ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರಬಲ್ಲ, ನೀರಿನಲ್ಲಿ ಮೀನಿನಂತೆ ಈಜಬಲ್ಲ; ಆದರೆ, ಮನುಷ್ಯ ಮನುಷ್ಯನಂತೆ ಭೂಮಿಯ ಮೇಲೆ ಬದುಕುವುದನ್ನು ಕಲಿಯಲಿಲ್ಲ. ಎಂದುಡಾ. ರಾಧಾಕೃಷ್ಣನ್ ರು ಹೇಳಿದ ಮಾತು ನನಗಿಲ್ಲಿ ನೆನಪಾಗ್ತಾ ಇದೆ. ನಮ್ಮ ಹಿರಿಯರು ಎಷ್ಟು ಗಟ್ಟಿಮುಟ್ಟಾಗಿದ್ದರು, ದೀರ್ಘಾಯುಷಿಗಳಾಗಿದ್ದರು. ಬೇಸಿಗೆಯಿಂದ ಹಿಡಿದು ಮಾಗಿಯವರೆಗೂ ನಿರಂತರ ಎಷ್ಟೊಂದು ಕೃಷಿ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದರು. ನೀರಾವರಿ ಇಲ್ಲದ ಕಾಲದಲ್ಲಿ ಕೇವಲ ಮಳೆಯನ್ನೇ ನೆಚ್ಚಿ ಬೆಳೆದರು.ಟ್ರ್ಯಾಕ್ಟರ್ಗಳಿಲ್ಲದಾಗ ಬರಿ ಎತ್ತುಗಳನ್ನು ಹೂಡಿಯೆ ಹೊಲ ಉಳುಮೆ ಮಾಡಿದರು. ಒಕ್ಕುವ ಯಂತ್ರಗಳೇ ಇಲ್ಲದ ಸಂದರ್ಭದಲ್ಲಿ ಖಣದಲ್ಲಿ ತಿಂಗಳುಗಟ್ಟಲೇ ತೂರಿ, … Read more

ಮೂರು ಕವಿತೆಗಳು: ಮಂಜುನಾಥ ಚಿನಕುಂಟಿ

ವಿಷಾದ ದುಡಿಯುವುದಕ್ಕೆ ನೂರಾರು ದಾರಿಆಯ್ಕೆ ಯಾರದ್ದು ನಮ್ಮದಇಲ್ಲ ನಮ್ಮ ಓದಿನದ್ದ ಈಗಲೂಗೊಂದಲವಿದೆ ಯಾರನ್ನ ಕೇಳಲಿಕೇಳಿದರೆ ತಿಳಿದರು ಕೇಳಿದೆಎಂಬುವ ವಿಷಾದ ಕುಳಿತಲ್ಲಿ ಕುಳಿತು ಗಣಕಯಂತ್ರವನ್ನುಕುಟ್ಟುತ್ತ ನನ್ನನ್ನ ನಾನು ಮರೆತಿದ್ದೆಕೆಲಸ ಮುಖ್ಯವ ನೆಮ್ಮದಿ ಮುಖ್ಯವಮತ್ತೊಂದು ಪ್ರೆಶ್ನೆ ನಿದ್ದೆಯೆ ನನ್ನಮನಸನ್ನ ಕೇಳಿತು ಅದಕ್ಕೂಉತ್ತರಿಸುವುದಕ್ಕೂ ವಿಷಾದ ಬರಿ ದೂರುಗಳೇ ಅವರ ಮೇಲೆಇವರು ಇವರ ಮೇಲೆ ಅವರು ಯಾರದ್ದು ಸರಿದೂರು ಕೊಟ್ಟಿದ್ದಅದಕ್ಕೆ ತಕ್ಕ ಹಾಗೆಕಾರಣಗಳು ಹೇಳಿದ್ದ ಇದಕ್ಕೂ ತೆಲೆಕೆಡುವ ಗುದ್ದಾಟಗಳು ಟಾರ್ಗೆಟ್ ಎಂಬ ಕೊಂಡಿಗೆ ನೇತುಬಿದ್ದು ತೂಗಾಡುತ್ತಿದ್ದೇವೆಅದೂ ಎಲ್ಲರಿಗೂ ತಿಳಿದಿದೆಅದಕ್ಕೆ ಕಾರಣ ಹಣವೆಂಬಪೆಡಂಭೂತಆಗೆ ನೋಡಿದರೆ … Read more

ಕತ್ತಲ ಲೋಕದಲ್ಲಿ ಜರುಗುವ ನಿಕೃಷ್ಠ ಕಣ್ಕಟ್ಟುಗಳನ್ನು ತೆರೆದಿಡುವ ಸೃಜನಶೀಲ ಕಥೆಗಳು: ಎಂ.ಜವರಾಜ್

ಕನ್ನಡದ ಹಿರಿಯ ಕಥೆಗಾರ್ತಿ ಬಿ.ಟಿ. ಜಾಹ್ನವಿ ಅವರಿಗೆ, ಈಚೆಗೆ ಕೌದಿ ಪ್ರಕಾಶನ ಹೊರ ತಂದಿರುವ ನಿಮ್ಮ ಸಮಗ್ರ ಕಥೆಗಳ ಸಂಕಲನ “ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ…” ಕೃತಿ ಓದಿದೆ. ಈ ಸಂಕಲನದಲ್ಲಿ ಒಟ್ಟು ಇಪ್ಪತ್ತೊಂಭತ್ತು ಕಥೆಗಳಿವೆ. ಇಲ್ಲಿನ ಅರ್ಧದಷ್ಟು ಕಥೆಗಳನ್ನು ಈಗಾಗಲೇ ಪುಸ್ತಕ ರೂಪ ಹೊರತು ಪಡಿಸಿ ಕೆಲ ಪತ್ರಿಕೆಗಳಲ್ಲಿ ಬಹು ಹಿಂದೆಯೇ ಬಿಡಿಬಿಡಿಯಾಗಿ ಓದಿದ್ದೇನೆ. ಈಗ ಎಲ್ಲ ಕಥೆಗಳನ್ನು ಒಟ್ಟಿಗೆ ಇಟ್ಟುಕೊಂಡು ಇಲ್ಲಿನ ಒಂದೊಂದೇ ಕಥೆ ಓದುತ್ತಾ ಹೋದಂತೆ ಓದಿದ ಕಥೆಗಳ ವಿವರಗಳು ಭಾಗಶಃ ನೆನಪಿಗೆ … Read more

ಚಳಿಯಲ್ಲೊಂದು ಬೆಳಕು ….. !!!!!: ನಾಗಸಿಂಹ ಜಿ ರಾವ್

ಯಪ್ಪಾ.. ಬೆಂಗಳೂರಿನ ಚಳಿಯನ್ನೇ ತಡೆಯೋಕೇ ಆಗ್ತಾ ಇಲ್ಲಾ.. ಇನ್ನು ದೆಹಲಿ, ಹಿಮಾಲಯ ಅಲ್ಲಿನ ಚಳಿ ನನ್ನ ಊಹೆಗೂ ಮೀರಿದ್ದು. ಚಳಿ ಅಂದ್ರೆ ಬೀರು ಒಳಗಿದ್ದ ಶಾಲು, ಸ್ವೆಟರ್ ಎಲ್ಲಾ ಹೊರಕ್ಕೆ ಬರುತ್ತೆ, ದೇಹವನ್ನ ಬೆಚ್ಚಗೆ ಇಟ್ಟುಕೊಳ್ಳೋಕೆ ಹಲವಾರು ಕಸರತ್ತು ಮಾಡುತ್ತೇವೆ. ಬಿಸಿ ಬಿಸಿ ಕಾಫಿ, ಬಿಸಿ ಬಜ್ಜಿ ಬೋಂಡಾ ಹಲವಾರು ತೆರನಾದ ತಿಂಡಿ, ಮನೆಯ ವಾತಾವರಣವೇ ಬದಲಾಗಿ ಹೋಗುತ್ತದೆ. ಮನಶಾಸ್ತ್ರದ ಒಂದು ಅಂಶದ ಪ್ರಕಾರ ‘ಚಳಿಯಲ್ಲಿ ನಮ್ಮ ಯೋಚನೆ ಸಂಕುಚಿತವಾಗುತ್ತದೆ, ವಿಶಾಲವಾಗಿ ಯೋಚಿಸುವುದನ್ನು ನಿಲ್ಲಿಸಿಬಿಡುತ್ತೇವೆ’. ಇದು ನಿಜ. … Read more

ಪದ್ದಕ್ಕಜ್ಜಿ ಭಜನಾ ಮಂಡಳಿಯ ವಿಮಾನ ಯಾನ: ಡಾ. ವೃಂದಾ ಸಂಗಮ್

ಇವತ್ತ ನಮ್ಮ ಪದ್ದಕ್ಕಜ್ಜಿ ಹನುಮದ್ ವ್ರತ ಅಂತ ಶ್ರೀ ತಿಪ್ಪಣ್ಣಾರ್ಯರ ಹನುಮದ್ವಿಲಾಸದ ಭಜನಿಗೆ ಹೋಗಿದ್ದರ, ಅವರಿಗೆ ಈಗ ಮೊದಲಿನಂಗ ಒಂದೇ ದಿನ ಮೂರು ತಾಸು ಹನುದ್ವಿಲಾಸ ಹಾಡಿ, ಅದರ ಅರ್ಥದ ಸೊಗಸು ಹೇಳಲಿಕ್ಕಾಗುದಿಲ್ಲ ಅಂತ, ಮೂರು ದಿನದ ಭಜನಿ ಕಾರ್ಯಕ್ರಮ ಇತ್ತು. ಮೊದಲನೇ ದಿನಾನೇ, ಹನುಮಂತ ದೇವರ ವರ್ಣನಾ ಮಾಡಿ, ಸೀತಾ ಮಾತಾ, ಲಂಕಾದಾಗ ಇದ್ದಾಳ ಅನ್ನೂ ತನಾ ಬಂದ ಕೂಡಲೇ ನಿಲ್ಲಿಸಿದ್ದರು.ಎಲ್ಲಾರಿಗೂ ಕುಂಕುಮಾ ಕೊಡೂವಾಗ, ರುಕ್ಮಣೀ ಬಾಯಾರ ಕೈಯಾಗ, ಕುಂಕುಮದ ಭರಣಿ ತಂದಿದ್ದ ಹಾಳಿ ಚೀಲ, … Read more

ತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರದಲ್ಲಿ “ಪುಸ್ತಕ ಪರಿಶೆ ಹಾಗು ಸಂವಾದ”

 ಪುಸ್ತಕ ಪರಿಶೆ ಹಾಗು ಸಂವಾದ ಲಿಟ್ರರಿ ನೆಕ್ಸ್ಟ್ 1.0 ನೋಂದಾಣಿ ಶುಲ್ಕ: ₹೫೦೦/- (ವಿದ್ಯಾರ್ಥಿಗಳಿಗೆ ₹೨೫೦/-) ದಿನಾಂಕ: ಡಿಸೆಂಬರ್ 7 ರ ಶನಿವಾರ 2024 ಸಮಯ : ಬೆಳಗ್ಗೆ 9:30 ರಿಂದ ಸಂಜೆ 5:30 ರ ವರೆಗೆ ಸ್ಥಳ : ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಹೆಚ್ಚಿನ ಮಾಹಿತಿಗಾಗಿ: ಪೃಥ್ವಿ ಸೂರಿ 82775 89859 ನಂದೀಶ್ ಬಂಕೇನಹಳ್ಳಿ 96630 98873

ಜ್ವಾಳಾ ಕೊಳ್ಳಾಗ..: ಎಫ್ ಎಂ ನಂದಗಾವ

“ಅಂಕಲ್ ಅಂಕಲ್, ಈ ಕೇಕ್ ಟೇಸ್ಟ್ ಮಾಡಿ ನೋಡ್ರಿ.’’ ನಮ್ಮೂರಾಗ, ಎಲ್ಲಾರೂ ನನ್ನ ಅಜ್ಜಾರ ಅಜ್ಜಾರ ಅಂತಾರ. ಇದ್ಯಾರಪಾ, ಇಲ್ಲ ನನ್ನ ಅಂಕಲ್ ಅಂತ ಕರಿಲಿಕ್ಹತ್ತಾರ? ನಾ ಇಲ್ಲ ಬಂದ ಮ್ಯಾಲ, ಹರೆಯ ಹಿಂದಕ್ಕ ಬರಾಕಹತ್ತದ ಏನೋ? ಮೊನ್ನಿ, ಮಗಾ ತನ್ನ ಕೂದಲಿಗೆ ಬಣ್ಣಾ ಹಚ್ಚೂ ಮುಂದ ನನ್ನ ತಲಿ ಕೂದಲಿಗೂ ಸ್ವಲ್ಪ ಬಣ್ಣ ಬಳಿದಿದ್ದ, ಮೊದಲ ಮುದುಕರು ತದಕರು ಬಣ್ಣಾ ಹಚ್ಚಕೋತಿದ್ದರು. ಈಗ, ಅಲ್ಲೊಂದ ಇಲ್ಲೊಂದ ಬಿಳಿ ಕೂದಲ ಬಂದ ಹರೆದವರ ಬಾಳ ಮಂದಿ ಕರಿ … Read more

ಪುರುಷರಿಗೂ ಇದೆ ಆಚರಿಸುವ ಒಂದು ಅಂತರ ರಾಷ್ಟ್ರೀಯ ಪುರುಷ ದಿನ: ಚಂದ್ರು ಪಿ ಹಾಸನ್

ಈ ಭೂಮಿಯ ಮೇಲೆ ಜೀವ ರಾಶಿಗಳು ಉದಯವಾಗಬೇಕೆಂದರೆ ಅಲ್ಲಿ ಒಂದು ಗಂಡು ಕುಲ ಮತ್ತೊಂದು ಹೆಣ್ಣು ಕುಲವೆಂಬ ಎರಡು ಸಮಾನ ಗುಂಪುಗಳನ್ನು ಕಾಣಬಹುದಾಗಿದೆ. ಅಲ್ಲಿ ಮುಂದಿನ ಪೀಳಿಗೆಯ ಸೃಷ್ಟಿ ಇವೆರಡರ ಸಮ್ಮಿಲನದಿಂದ ಎಂಬುದು ತಿಳಿದಿರುವ ವಿಷಯವಾಗಿದೆ. ಇಲ್ಲಿ ಸ್ತ್ರೀ ಕುಲವು ಮುಂದಿನ ಪೀಳಿಗೆಯನ್ನು ತನ್ನ ಮಡಿಲಲ್ಲಿ ಸಾಕಿ ಸಲಹಿ ಪ್ರಪಂಚಕ್ಕೆ ಪರಿಚಯಿಸುವ ಒಂದು ಮಹತ್ವವಾದ ನಿಯಮವನ್ನು ಪಾಲಿಸುತ್ತಾ ಈ ಭೂಮಿಯಲ್ಲಿ ಹೊಸ ಹೊಸ ಜೀವಿಗಳ ಉಗಮಕ್ಕೆ ಕಾರಣವಾಗಿದೆ ಎಂಬುದನ್ನು ನಾವು ಪುಸ್ತಕಗಳಲ್ಲಿ ಓದುತ್ತಾ, ಪ್ರಕೃತಿಯನ್ನು ಗಮನಿಸುತ್ತಾ, ತಮ್ಮ … Read more

“ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂಬುದರ ವೈಚಾರಿಕ ಚಿಂತನೆ”: ರವಿತೇಜ.ಎಂ.ಎನ್

ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನ ಮತ್ತು ಸಂವಹನ ಮಾಧ್ಯಮ. ಇದು ಮಾತು,ಬರಹ ಮತ್ತು ಭಾವಾಭಿವ್ಯಕ್ತತೆ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ.ಭಾಷೆಗೆ ರೂಪ, ಆಕಾರ, ಭೌತಿಕ ಅಥವಾ ರಚನಾತ್ಮಕ ಗುಣಗಳೇನೂ ಇಲ್ಲ. ಇದು ಪ್ರಾದೇಶಿಕವಾಗಿ ಜನಜೀವನದ ನಿತ್ಯ ವ್ಯವಹಾರದ ಸನ್ನಿವೇಶವನ್ನು ಅರ್ಥೈಸುವ ಹೊಂದಾಣಿಕೆ ಕೆಲಸವನ್ನು ಪ್ರಾತಿನಿಧಿಕವಾಗಿ ನಿರ್ವಹಿಸುವ ಮಾಧ್ಯಮವಾಗಿರುತ್ತದೆ. ಮಾನವನಗಿರುವ ಚಿಂತಿಸುವ, ಪರಿಭಾವಿಸುವ , ಸದಾ ಚೈತನ್ಯದಾಯಕದಿಂದ ಮೌಖಿಕವಾಗಿ ಸ್ಪಂದಿಸುವ , ಪ್ರತಿಕ್ರಿಯಿಸುವ ಬೌದ್ಧಿಕ ಶಕ್ತಿಯೇ ಭಾಷೆಗೆ ಮೂಲ ಹಿನ್ನೆಲೆಯಾಗಿದೆ.ಈ ಪ್ರಕ್ರಿಯೆಯ … Read more

ಮೂವರ ಕವಿತೆಗಳು: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಕಲ್ಲು ಒಂದುಕಲ್ಲುಒಂಟಿಯಾಗಿ ಬಿದ್ದಿತ್ತುನೆಲದ ಮೇಲೆಮಳೆ ಬಿಸಿಲು ಚಳಿಎಲ್ಲವನ್ನೂಕಂಡಿದ್ದಅದರಅಂತರಂಗದಲ್ಲಿದ್ದಬುದ್ಧಿವಂತಿಕೆಯಅರಿವುಯಾರಿಗೂಇರಲಿಲ್ಲ ಹಿಂದೆನಡೆದದ್ದೆಲ್ಲಕ್ಕೂಸಾಕ್ಷಿಯಾಗಿತ್ತು ಆ ಕಲ್ಲುಭೂಮಿ ಹುಟ್ಟಿದ್ದನ್ನುಅದುಕಂಡಿತ್ತುಬೆತ್ತಲೆಯಾಗಿ ಹುಟ್ಟಿದಮನುಷ್ಯಜಾತಿಧರ್ಮಭಾಷೆ ದೇಶಗಳೆಂಬಕವಲು ಕವಲುಗಳಲ್ಲಿದಿಕ್ಕಾಪಾಲಾಗಿ ಚಲಿಸಿಕಾಮ ಕ್ರೋಧಮದ ಮತ್ಸರಗಳನ್ನುಎದೆಯೊಳಗೆ ತುಂಬಿಕೊಂಡಬಗೆ ಅದಕ್ಕೆ ತಿಳಿದಿತ್ತುಸಾಮ್ರಾಜ್ಯಗಳುಉದಯವಾದದ್ದನ್ನುಪತನಗೊಂಡದ್ದನ್ನುಅದು ನೋಡಿತ್ತು ಹೊಮ್ಮಿದ ನಗುಚಿಮ್ಮಿದಕಣ್ಣೀರುಎಲ್ಲದರ ಲೆಕ್ಕವೂಅದರ ಬಳಿಯಿತ್ತು ಆದರೆಕಲ್ಲಿಗೆಬಾಯಿ ಇರಲಿಲ್ಲಕಂಡದ್ದನ್ನು ಹೇಳುವುದಕ್ಕಾಗದಸಹಜತೆಯೇದುರ್ಬಲತೆಯಾಗಿಅದನ್ನು ತೆಪ್ಪಗಾಗಿಸಿತ್ತುಏನೂ ತಿಳಿಯದಪಾಮರನಂತೆಬಿದ್ದುಕೊಂಡಿತ್ತುನೆಲವನ್ನಪ್ಪಿಕೊಂಡು ಹೀಗಿರುವಾಗಲೇಬೊಬ್ಬೆ ಹೊಡೆಯುತ್ತಾಬಂದಗುಂಪೊಂದುಎತ್ತಿಅದನ್ನುಬೀಸಿದರು ಎದುರು ದಿಕ್ಕಿಗೆಹಣೆಯೊಂದರಲ್ಲಿಚಿಮ್ಮಿದರಕ್ತಇದರ ಮೈಮೇಲೂ ಹರಿಯಿತುಬಡಿಯಿರಿ! ಕೊಲ್ಲಿ!ಕೇಳಿಬರುತ್ತಿದ್ದ ಬೊಬ್ಬೆಗೆವಿರಾಮವೇಇರಲಿಲ್ಲ ಕಲ್ಲು ಸಾಕ್ಷಿಯಾಗತೊಡಗಿತು ಈಗಹೊಸತೊಂದು ವಿದ್ಯಮಾನಕ್ಕೆತಾನು ಬಯಸದ ವಿದ್ಯಮಾನಕ್ಕೆ ಮರದಿಂದ ಮೂರ್ತಗೊಂಡದೇವರಿಗೆ… ನೀನೇ ರೂಪಿಸಿದ ಮಳೆನೀನೇ ಸೃಜಿಸಿದ ಚಳಿಗಾಳಿಸೋಕದಂತೆ ನಿನ್ನರಕ್ಷಿಸುವ ಭಾರ ನಮ್ಮದುನಮ್ಮೊಳಗಿನ ಭಕ್ತಿಭಾವಹೊದಿಕೆಯಾಗಿ ಆವರಿಸಿದೆಒಂದಷ್ಟು … Read more

ಸಮಸ್ಯೆ ಸಣ್ಣದೇ.. ಆದ್ರೂ …… !!!!!!: ನಾಗಸಿಂಹ ಜಿ ರಾವ್

ಸಮಸ್ಯೆ ಸಣ್ಣದೇ. . ಆದ್ರೂ. . . . . . !!!!!! (ಮಕ್ಕಳ ಹಿತದೃಷ್ಟಿ ಇಂದ ಹೆಸರು, ಸ್ಥಳಗಳನ್ನು ಬದಲಿಸಲಾಗಿದೆ ) ” ಕ್ರಿಕೆಟ್ ನೋಡಿದ್ದು ಸಾಕು. . ರಿಮೋಟ್ ಕೊಡು, ಅಂತ ರೇಗಿದೆ ಸಾರ್. ರಿಮೋಟನ್ನ ಬಿಸಾಕಿ ಮನೆಯಿಂದ ಆಚೆ ಹೋದೋನು ಒಂದುವರುಷ ಆದ್ರೂ ಮನೆಗೆ ಬಂದಿಲ್ಲ, ಪೊಲೀಸ್ ಕಂಪ್ಲೇಂಟ್ ಕೊಟ್ವಿ ಏನೂ ಉಪಯೋಗ ಆಗಿಲ್ಲ ಸಾರ್. . ” ಮಗನನ್ನ ಕಳೆದುಕೊಂಡ ದಂಪತಿಗಳು ನನ್ನ ಎದುರಿಗೆ ಕುಳಿತ್ತಿದ್ದರು, ಅವರಿಗೆ ಸಮಾಧಾನ ಮಾಡೋಕೆ ನನ್ನಲ್ಲಿ … Read more

ನವೆಂಬರ್ ಮಕ್ಕಳ ಮಾಸ !!!!!!!!!: ನಾಗಸಿಂಹ ಜಿ ರಾವ್

‘ಕನ್ನಡ ಮಾತೆಗೆ ಜೈ , ಜೈ ಭುವನೇಶ್ವರಿ ” ಈ ಘೋಷಣೆಗಳು ನವೆಂಬರ್ ತಿಂಗಳ ಪ್ರತಿದಿನ ಕೇಳುತ್ತಿರುತ್ತವೆ . ಕನ್ನಡ ಭಾಷೆ ಕುರಿತಾಗಿ ಯಾವುದಾದರೂ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ . ನಮ್ಮ ರಾಜ್ಯಗಳು ಭಾಷೆಯನ್ನು ಆಧರಿಸಿ ವಿಂಗಡಣೆಯಾದರೂ ಕರ್ನಾಟಕ ಎಂದು ಹೆಮ್ಮೆ ಪಡುವನಾಡು ಇಷ್ಟು ವರುಷದಲ್ಲಿ ಎಷ್ಟು ಪ್ರಗತಿ ಸಾಧಿಸಿದೆ ? ಮಾನವ ಹಕ್ಕುಗಳು , ಮಕ್ಕಳ ಹಕ್ಕುಗಳು , ಮಹಿಳೆಯರ ಹಕ್ಕುಗಳು ಹೇಗೆ ಜಾರಿಯಾಗಿದೆ ಹಾಗೂ ರಕ್ಷಿಸಲ್ ಪಡುತ್ತಿವೆ ಎಂಬ ವಿಚಾರಡಾ ಬಗ್ಗೆ ವರುಷಕ್ಕೆ … Read more

ಪಂಜು ಕಾವ್ಯಧಾರೆ

ಧರಣಿಆಕಾಶ ನೋಡಿ ಮಳೆಯಾಗಲ್ಲಿಲ್ಲಎಂದು ಮುನಿಸಿಕೊಂಡರೇನುಪ್ರಯೋಜನ, ಮರ ಕಡಿದವನುನೀನಲ್ಲವೇ ಬತ್ತಿ ಹೋದ ಕೆರೆಯ ನೋಡಿಕಣ್ಣೀರು ಹಾಕಿದರೇನುಪ್ರಯೋಜನ, ಎರಡು ಹನಿಯಿಂದಬೊಗಸೆಯೂ ತುಂಬುವುದಿಲ್ಲ ಬಿರುಕು ಬಿಟ್ಟಿದೆ ಎಂದುಬೊಬ್ಬೆಹೊಡೆದರೇನುಪ್ರಯೋಜನ, ಬೆಂದ ಭೂಮಿಯುಎಷ್ಟು ನೊಂದಿರಬೇಕು ನೀರು, ಗಾಳಿಯನ್ನೆಲ್ಲಾಕಲುಷಿತ ಮಾಡಿಯಾಗಿದೆ,ಹಾಳು ಮಾಡಲು ಇನ್ನೇನುಉಳಿದಿದೆ ಮುಗಿಲು ಮುಟ್ಟುತ್ತಿದ್ದ ಬೆಟ್ಟಗಳನ್ನುಕೆಡವಿದ್ದಾಗಿದೆ, ದೊಡ್ಡ ಕಟ್ಟಡಗಳುಈಗಾಗಲೇ ಅವುಗಳನ್ನುಮುತ್ತಿಡುತ್ತಿದೆ. ಗುಬ್ಬಿಗಳ ಚಿಲಿಪಿಲಿಯರಿಂಗಣ ನಿಂತುಹೋಗಿದೆಆಧುನಿಕ ಜಂಗಮವಾಣಿಯತರಂಗಗಳಿಗೆ ಜಗವೇ ತ್ಯಾಜ್ಯ ಬಂಡಿಯಂತೆಗೋಚರಿಸುತ್ತಿದೆ,ಪ್ರಕೃತಿಯ ವಿಕೋಪಶುದ್ದಿಗೊಳಿಸಿ ಕಾಯುತ್ತಿದೆ. ತಾಯಿ ಧರಣಿಯ ಧಗೆಮಗುವಿಗೆ ನಷ್ಟಹೊರತು ತಾಯಿಗಲ್ಲಶುದ್ದಿಯಾಗಬೇಕಿದೆಮನುಷ್ಯನ ಅಂತರಂಗ. –ಅಜಿತ್ ಕೌಂಡಿನ್ಯ ನೆನಪುಗಳು ಈಗೀಗನೀರವರಾತ್ರಿಗಳುಬಿಕ್ಕುತ್ತಿವೆ,ನಿನ್ನನೆನಪುಗಳಂತೆ.ಕಣ್ಣೀರುಸಹ. ಎದೆಯಹೊಲಿದಹೊಲಿಗೆಗಳೂ,ನೀನೆಂಬನೆನಪುಗಳಗಾಯವಮಾಗಲುಬಿಡುತ್ತಿಲ್ಲ. ನಿನ್ನನೆನಪುಗಳೆಂಬಮಾರ್ಜಾಲಕಾಡಿಕೊಲ್ಲುತ್ತಿರಲು,ನಿನದೆಲ್ಲೊಖಿಲ್ಲನೆನಗುತಿರುವೆಯಲ್ಲ. ನನ್ನಕಣ್ಣ ಹಣತೆನಿನ್ನ ನೆನಪುಗಳೆಂಬತೈಲದಿಇನ್ನೆಷ್ಟು … Read more

ಒಂದು ಪ್ರೇಮ ಕತೆ: ಜೆ.ವಿ.ಕಾರ್ಲೊ

ಮೂಲ ಕತೆ: The Lady with the dog ಲೇಖಕರು: ಆಂಟೊನ್ ಚೆಕೊವ್ ಅನುವಾದ: ಜೆ.ವಿ.ಕಾರ್ಲೊ ಅಪರಿಚಿತ ಹೆಣ್ಣುಮಗಳೊಬ್ಬಳು ಒಂದು ಪುಟ್ಟ ನಾಯಿಯೊಂದಿಗೆ ಕಡಲತೀರದ ಮೇಲೆ ಅಡ್ಡಾಡುತ್ತಿರುವ ಬಗ್ಗೆ ಜನರು ಮಾತನಾಡತೊಡಗಿದರು. ಕಳೆದ ಹದಿನೈದು ದಿನಗಳಿಂದ ಯಾಲ್ಟಾದಲ್ಲಿ ತಂಗಿದ್ದ ಡಿಮಿಟ್ರಿ ಡಿಮಿಟ್ರಿಚ್ ಗುರೊವ್‌ನಿಗೆ ಹೊಸದಾಗಿ ಕಡಲ ತೀರಕ್ಕೆ ಬಂದಿರುವ ಈ ಹೆಣ್ಣುಮಗಳ ಬಗ್ಗೆ ಆಸಕ್ತಿ ಕೆರಳಿತು. ಕಡಲ ತೀರಕ್ಕೆ ಎದುರಾಗಿ ವೆರ್ನಿ ಹೋಟಲಿನ ಎತ್ತರದ ಮಂಟಪದ ಮೇಳೆ ಕುಳಿತಿದ್ದ ಅವನಿಗೆ ತಲೆಗೆ ಟೋಪಿ ಧರಿಸಿದ್ದ, ಮಧ್ಯಮ ಎತ್ತರದ … Read more

ನಮ್ಮ ಕನ್ನಡದ ನೋವು ನಲಿವು !: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ಮಾತುಗಳ ಮೂಲಕ ಭಾವನೆಗಳನ್ನು ಹೊರ ಹಾಕುವ ಸಾಮರ್ಥ್ಯ ಮಾನವನಿಗೆ ಮಾತ್ರ ಇದೆ. ಇದು ಪ್ರಕೃತಿ ಮಾನವನಿಗೆ ಕೊಟ್ಟಿರುವ ವರ! ಭಾಷೆಯ ಸೃಷ್ಟಿ ಮಾನವನ ಸೃಜನೆಗಳಲ್ಲಿ ಅಧ್ಬುತವಾದುದು. ಕೊಡಲು ಕೊಳ್ಳಲು, ಸಂವಹನ ಮಾಡಲು, ಭಾವನೆಗಳನ್ನು ಅಭಿವ್ಯಕ್ತಿಸಲು, ವ್ಯವಹರಿಸಲು ಭಾಷೆ ಅತಿ ಅವಶ್ಯಕ. ಹುಟ್ಟಿದ ಮನೆಯಲ್ಲಿ ನಡೆಯಂತೆ ನುಡಿಯನ್ನೂ ಕಲಿತಿರುತ್ತೇವೆ ಅದೇ ಆಗುವುದು ಮಾತೃಭಾಷೆ. ಎಲ್ಲರ ಮಾತೃಭಾಷೆಯಲ್ಲಿ ಎಲ್ಲಿ ಜ್ಞಾನ ಇರುವುದಿಲ್ಲ. ಹಾಗೆ ಅಲ್ಲಿ ಇಲ್ಲದ ಜ್ಞಾನವನ್ನು ಅನ್ಯ ಭಾಷೆಯಲ್ಲಿ ಕಲಿಯಬೇಕಾಗುತ್ತದೆ. ವಿಜ್ಞಾನ, ತಂತ್ರಜ್ಞಾನ, ಜೀವವಿಜ್ಞಾನ, ವೈದ್ಯವಿಜ್ಞಾನ ಮುಂತಾದವು ನಮ್ಮ … Read more

ಕನ್ನಡವೆಂದರೆ ಬರಿನುಡಿಯಲ್ಲ: ಸಂತೋಷ್‌ ಟಿ.

ಕನ್ನಡವೆಂದರೆ ಬರಿನುಡಿಯಲ್ಲ ಹಿರಿದಿದೆ ಅದರರ್ಥ ಎಂದು ನಲ್ಮೆಯ ಕವಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಆದ ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್ ಅವರ ನವೋಲ್ಲಾಸ ಕೃತಿಯ ಒಂದು ಕವಿತೆಯ ಉವಾಚ. ಕನ್ನಡವೆಂದರೆ ಬರಿ ನುಡಿಯಲ್ಲ ಅದರ ಅರ್ಥ ಬಹಳ ಹಿರಿದು ಎಂಬ ಕವಿಯ ಪರಿಕಲ್ಪನೆ ಮಹೋನ್ನತವಾದ ಧ್ಯೇಯ ಮತ್ತು ಅಧ್ಯಯನದಿಂದ ಕೂಡಿದೆ. ಕನ್ನಡ ಅಥವಾ ಕರ್ನಾಟಕವೆಂದರೆ ಭಾರತದಲ್ಲಿ ಮಹತ್ವದ ಸ್ಥಾನವಾಗಿದೆ. ಭೌಗೋಳಿಕ, ಭಾಷಿಕ, ಸಾಹಿತ್ಯಿಕ, ಸಾಂಸ್ಕೃತಿಕ ರಾಜಕೀಯ ಎಲ್ಲಾ ರೀತಿಯಿಂದಲೂ ಅದು ಉನ್ನತವಾದ ಚರಿತ್ರೆಯನ್ನು ತನ್ನ ಇತಿಹಾಸದ ಪುಟಗಳ … Read more