ಸಮಾಜಮುಖಿ ಯುವ ಲೇಖನ ಸ್ಪರ್ಧೆ-2024

ಕನ್ನಡದ ಹೊಸ ಪೀಳಿಗೆಯ ಆಲೋಚನೆ ಮತ್ತು ಬರವಣಿಗೆಯನ್ನು ಉದ್ದೀಪಿಸುವ ಉದ್ದೇಶದಿಂದ ಬೆಂಗಳೂರಿನ ಸಮಾಜಮುಖಿ ಪ್ರಕಾಶನ 16 ರಿಂದ 32 ವಯಸ್ಸಿನ ಯುವಕ-ಯುವತಿಯರಿಗಾಗಿ ‘ಯುವ ಲೇಖನ ಸ್ಪರ್ಧೆ’ ಏರ್ಪಡಿಸಿದೆ. ಆಯ್ಕೆಯಾದ ಐದು ಲೇಖನಗಳಿಗೆ ತಲಾ ರೂ.5,000 ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಲೇಖನದ ವಿಷಯ: ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂದು ಹೇಳುವಲ್ಲಿನ ವೈಚಾರಿಕ ಮತ್ತು ಜಾಗತಿಕ ತಳಹದಿಯೇನು..?

ಲೇಖನ 1,600 ರಿಂದ 2,000 ಪದಗಳ ಮಿತಿಯಲ್ಲಿರಬೇಕು. ಲೇಖನದ ಜೊತೆಗೆ ಹುಟ್ಟಿದ ದಿನಾಂಕದ ಯಾವುದಾದರೂ ದಾಖಲೆಯ ಪ್ರತಿ, ಪೂರ್ಣ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರ ಕಳುಹಿಸಬೇಕು. ನುಡಿ/ಯುನಿಕೋಡ್ ಲಿಪಿಯಲ್ಲಿರುವ ಲೇಖನವನ್ನು ವರ್ಡ್ ಕಡತದಲ್ಲಿ 15 ಸೆಪ್ಟೆಂಬರ್ 2024ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ: samajamukhi2017@gmail.com
ದಯವಿಟ್ಟು ಈ ಸುದ್ದಿಯನ್ನು ಆದ್ಯತೆ ಮೇರೆಗೆ ಪತ್ರಿಕೆಯ ಎಲ್ಲಾ ಆವೃತ್ತಿಗಳಲ್ಲಿ ಪ್ರಕಟಿಸುವ ಮೂಲಕ ಆಸಕ್ತರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕೆಂದು ವಿನಮ್ರ ಕೋರಿಕೆ.

ವಿಶ್ವಾಸದಿಂದ,
ಚಂದ್ರಕಾಂತ ವಡ್ಡು
[ಸಮಾಜಮುಖಿ ಪ್ರಕಾಶನದ ಪರವಾಗಿ]


ಕನ್ನಡದ ಬರಹಗಳನ್ನು ಹಂಚಿ ಹರಡಿ
1 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x