ಈ ದಿನಗಳಲ್ಲಿ ನನ್ನನ್ನು ಹಲವಾರು ಜನರು ಕೇಳುತ್ತಿರುವುದು ಒಂದೇ ಪ್ರಶ್ನೆ , ಈಗ ರಾಜ್ಯದಲ್ಲಿ ಆಗುತ್ತಿರುವ ಗಲಭೆಯ ಹಿನ್ನಲೆಯಲ್ಲಿ ಮಕ್ಕಳ ಹಕ್ಕುಗಳು ಏನು ಹೇಳುತ್ತದೆ ? ಧರ್ಮದ ಬಗ್ಗೆ ಮಕ್ಕಳ ಹಕ್ಕುಗಳು ಇವೆಯೇ ? ವಿಶ್ವದ ಪ್ರತಿಯೊಂದು ಧರ್ಮಾದಲ್ಲೂ ಮಕ್ಕಳನ್ನು ಹಿರಿಯರ ಅಸ್ಥಿ ಎಂದೇ ಪರಿಗಣಿಸಲ್ಪಟ್ಟಿರುವುದು ಕಂಡು ಬರುತ್ತದೆ , ಪುರಾಣ ಪುಣ್ಯ ಕಥೆಗಳನ್ನು ವಿಮರ್ಶಿಸಿದರೆ ಕಂಡು ಬರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯೇ !
ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಜೀವಿಸುವ ಹಕ್ಕುಗಳು , ರಕ್ಷಣೆಯ ಹಕ್ಕುಗಳು , ಅಭಿರುದ್ದಿಯ ಹಕ್ಕುಗಳು ಹಾಗೂ ಭಾಗವಹಿಸುವ ಹಕ್ಕುಗಳು ಇವೆ , ಜೀವಿಸುವುದು , ರಕ್ಷಣೆ , ಅಭಿರುದ್ದಿ ಬಹಳ ಬೇಗ ಎಲ್ಲರಿಗೂ ಅರ್ಥ ವಾಗುತ್ತದೆ , ಭಾಗವಹಿಸುವ ಹಕ್ಕುಗಳು ಎಂದಾಗ ಆಟದಲ್ಲಿ ಭಾಗವಹಿಸುವುದು , ಕಾರ್ಯಕ್ರಮದಲ್ಲಿ ಭಾಗವಹಿಸುವುದು ಎಂಬುದಾಗಿ ಉತ್ತರ ಬರುತ್ತದೆ , ಆದರೆ ಭಾಗವಹಿಸುವ ಹಕ್ಕುಗಳು ಎಂದರೆ ” ಹಿರಿಯರು ಕಿರಿಯರ ಬಗ್ಗೆ ನಿರ್ಧಾರಗಳನ್ನು ತೆಗೆದು ಕೊಳ್ಳುವಾಗ ಕಿರಿಯರ ಅಭಿಪ್ರಾಯಗಳನ್ನು ತೆಗೆದುಕೊಳ್ಳ ಬೇಕು ಮತ್ತು ಅಳವಡಿಸಿಕೊಳ್ಳ ಬೇಕು ”
ಮಕ್ಕಳಿಗೇನು ತಿಳಿಯುತ್ತದೆ ? ಮಕ್ಕಳ ಪರವಾಗಿ ಹಿರಿಯರು ನಾವು ಮಾತಾಡಬೇಕು , ನಮ್ಮ ಮಕ್ಕಳ ವಿಚಾರಗಳಬಗ್ಗೆ ನಾವೇ ತೀರ್ಮಾನ ತೆಗೆದುಕೊಳ್ಳ ಬೇಕು ಎಂಬ ಮನೋಭಾವ ನಮ್ಮಲ್ಲಿ ಆಳವಾಗಿ ಬೇರುಬಿಟ್ಟಿದೆ , ಮನೆ , ಶಾಲೆ , ಕಾಲೇಜು ಗಳಲ್ಲಿ ಮಕ್ಕಳ ಅಭಿಪ್ರಾಯಕ್ಕೆ ಮನ್ನಣೆ ದೊರಕುವುದು ಬಹಳ ಅಪರೂಪ , ಮಕ್ಕಳ ಆಹಾರ , ಉಡುಗೆ ತೊಡಿಗೆ , ಧರ್ಮ, ಓದುವ ವಿಷಯ ಎಲ್ಲವೂ ಹಿರಿಯರಿಂದಲೇ ನಿರ್ಧಾರವಾಗುತ್ತದೆ
ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಮಕ್ಕಳ ಧರ್ಮದ ವಿಚಾರ ಬಂದಾಗ ” ಮಕ್ಕಳ ಧರ್ಮವನ್ನು ನಿರ್ಧರಿಸುವ ಅಧಿಕಾರ ಯಾರಿಗೂ ಇಲ್ಲ , ಮಕ್ಕಳು ತಮಗಿಷ್ಟ ಬಂದ ಧರ್ಮವನ್ನು ಆಚರಿಸಬಹುದು” ಎಂದು ಒಡಂಬಡಿಕೆಯ ಪರಿಛೇದ 14 ತಿಳಿಸುತ್ತದೆ . ಮಕ್ಕಳೇ ತಮ್ಮ ಧರ್ಮವನ್ನು , ತಮ್ಮ ಆಚರಣೆಗಳನ್ನು ನಿರ್ಧರಿಸಬಹುದು ಅಥವಾ ಯಾವುದೇ ಧರ್ಮ ಬೇಡವೆಂದು ನಿರ್ಲಿಪ್ತರಾಗಿರ ಬಹುದು , ಮಕ್ಕಳಿಗೆ ಧಾರ್ಮಿಕ ಹಕ್ಕನ್ನು ನೀಡಿದರೆ ಅವರಿಗೆ ಅರ್ಥವಾಗುವುದಿಲ್ಲ , ಮಕ್ಕಳು ಧರ್ಮಭ್ರಷ್ಟರಾಗಿ ಬಿಡಬಹುದು ಎಂಬುದು ಪೋಷಕರ ಭಯ , ಆತಂಕ . ಚರ್ಚಿಗೆ ಹೋಗಬೇಕಿದ್ದ ಮಕ್ಕಳು ದೇವಾಲಯಕ್ಕೆ ಹೋದರೆ , ಮಸೀದಿಗೆ ಹೋಗಿಬಿಟ್ಟರೆ ಘೋರ ಅಪರಾಧ ಮಾಡಿದ್ದಾರೆ ಎಂದು ಅನ್ನುವ ಪೋಷಕರು ನಮ್ಮಲ್ಲಿ ಇದ್ದಾರೆ , ಮಕ್ಕಳಿಗೆ ಹೊಡೆತ , ಬೈಗುಳಗಳ ಸುರಿಮಳೆಯೇ ಆಗುತ್ತದೆ . ಧರ್ಮ , ಸಂಪ್ರದಾಯ ಗಳ ಬಗ್ಗೆ ಮಕ್ಕಳು ”ಯಾಕೆ ” ಎಂದು ಕೇಳಲೇ ಬಾರದು , ನಾವು ಮಾಡಿದ್ದೇವೆ ನೀನೂ ಮಾಡು ಎಂಬ ಒತ್ತಡ ಮಕ್ಕಳಮೇಲೆ ಇರುತ್ತದೆ , ಧರ್ಮಗಳ ಮಾರ್ಗದರ್ಶನದಲ್ಲಿ ಬೆಳೆಯಬೇಕಿದ್ದ ಮಕ್ಕಳು ಒತ್ತಾಯ ಪೂರ್ವಕವಾಗಿ ಹೇರಿದ ಧರ್ಮಗಳಿಂದ ಸಂಕುಚಿತ ಮನೋಭಾವ ಬೆಳೆಸಿ ಕೊಳ್ಳುತ್ತಾರೆ. ಆಧರ್ಶಗಳನಲ್ಲ .
ಸುಮಾರು 156 ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಹಕ್ಕುಗಳ ಒಡಮಬಡಿಕೆಗೆ ಸಹಿ ಮಾಡಿ ಮಕ್ಕಳ ಬದುಕು , ರಕ್ಷಣೆ , ಅಭಿರುದ್ದಿ ಹಾಗೂ ಭಾಗವಹಿಸುವ ಹಕ್ಕುಗಳಿಗೆ ಬದ್ಧರಾಗಿದ್ದೇವೆ ಎಂದು ವಿಶ್ವದ ಮುಂದೆ ಒಪ್ಪಿಕೊಂಡಿವೆ . ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿದ ರಾಷ್ಟ್ರಗಳು ಮಕ್ಕಳ ಹಕ್ಕುಗಳನ್ನು ತಮ್ಮ ದೇಶದ ಮಕ್ಕಳ ಪರವಾದ ಕಾನೂನುಗಳಲ್ಲಿ , ನೀತಿ ನಿಯಮಗಳಲ್ಲಿ ಅಳವಡಿಸಿ ಕೊಳ್ಳ ಬೇಕು . ಹಲವಾರು ದೇಶಗಳು ಒಡಂಬಡಿಕೆಯ ಅಂಶಗಳನ್ನು ತಮ್ಮ ತಮ್ಮ ದೇಶಗಳ ಕಾನೂನು , ನಿಯಮಗಳಲ್ಲಿ ಅಳವಡಿಸಿ ಕೊಂಡರೂ ತಮ್ಮ ಪ್ರಜೆಗಳ ಮನಸಿಕ ಪರಿವರ್ತನೆ ಕುರಿತು ಯಾವುದೇ ಕ್ರಮ ಕೈ ಗೊಳ್ಳದಿರುವುದು ದುರಂತ
–ನಾಗಸಿಂಹ ಜಿ ರಾವ್
ಚೈಲ್ಡ್ ರೈಟ್ಸ್ ಟ್ರಸ್ಟ್
Nice information sir
it is well written. Eveyone should know this.
ಈ ಲೇಖನ ಮನಹಃ ಪಟಲ ಅರಳಿಸುವಂತದ್ದು ಇದ್ದು, ಮುಂದಿನ ಪೀಳಿಗೆಗೆ ಸಹಾಯಕಾರಿ ಮತ್ತು ಮಾರ್ಗದರ್ಶಿಯಾಗಲೂ ಬಹುದು. ಅಭಿನಂದನೆಗಳು.