ಸಮಾಜಮುಖಿ ಕಥಾಪ್ರಶಸ್ತಿ ಪ್ರದಾನ ಮತ್ತು ಕಥಾಸಂಕಲನ ಬಿಡುಗಡೆ
‘ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆ-2023’ ರಲ್ಲಿ ಬಹುಮಾನಿತರಾದ ಐವರು ಹಾಗೂ ಮೆಚ್ಚುಗೆ ಪಡೆದ ಹದಿನೈದು ಕಥೆಗಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 10.06.2023, ಶನಿವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತು ಆವರಣದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ “ಮುಝಫರ್ ಮತ್ತಿತರ ಇಪ್ಪತ್ತು ಕಥೆಗಳು” ಕೃತಿಯ ಜನಾರ್ಪಣೆ ಜರುಗಲಿದೆ. ಸಾಹಿತಿ, ತಂತ್ರಜ್ಞಾನಿ ವೈ.ಎನ್.ಮಧು, ಸಾಮಾಜಿಕ ಮಾಧ್ಯಮ ತಜ್ಞೆ ಚೈತ್ರಿಕಾ ನಾಯ್ಕ್ ಹರ್ಗಿ ಹಾಗೂ ಖ್ಯಾತ ನಾಟಕಕಾರರಾದ ಜಯರಾಮ್ ರಾಯಪುರ ಅವರು ಅತಿಥಿಗಳಾಗಿ … Read more