ಭಾವಾಂತರಂಗದ ಓಲೆ…: ಮಾಂತೇಶ ಗೂಳಪ್ಪ ಅಕ್ಕೂರ

ನನ್ನ ಪ್ರಿಯತಮೆ ಚಿ. ಸೌ. ಕಣ್ಮಣಿ ನನ್ನ ಹಿಂದೆ ಮುಂದೆ ಹೆಜ್ಜೆ ಹಾಕಿ ಹೋದವರು ಹಲವರು, ಆದರೆ ನನ್ನ ಎದೆಯಲ್ಲಿ ಛಾಪು ಮೂಡಿಸಿದ್ದು ಮಾತ್ರ ನಿನ್ನ ಹೆಜ್ಜೆಯ ಗುರುತುಗಳೇ. ಆ ಗುರುತಿನ ಪಡಿತರ ಚೀಟಿಯನ್ನು ಹಿಡಿದು, ಪ್ರೀತಿ ನ್ಯಾಯ ಬೆಲೆ ಅಂಗಡಿಯ ಮುಂದೆ ಕ್ಯೂ ನಿಂತಿರುವೆ. ನಿನ್ನ ಒಲವು ರಿಯಾಯಿತಿ ದರದಲ್ಲಿ ಸಿಗುವ ಭರವಸೆಯೊಂದಿಗೆ.ನಿನ್ನ ಒಲವನು ತೂಗಿ ಕೊಡು ಗೆಳತಿ! ನನಗೇನು ಬೇಸರವಿಲ್ಲ ನೀ ಕೊಟ್ಟ ಅಷ್ಟೂ, ಇಷ್ಟು ಒಲವ ಕೆಲುವು ದಿನಗಳಿಗೆ ಮಾತ್ರ ಉಳಿಸಿಕೊಳ್ಳದೆ ; … Read more

ಒಂದು ಐ ಲವ್ ಯು ಗೆ ಒಂದು ಮುತ್ತು ಅಂದ್ರು…: ಮಾಲಾ ಕೆ.

ಬಾಗಿಲು ತೆಗೆದು ಒಳಗೆ ಬಂದೆ, ಸ್ಕೂಲ್ ನಿಂದ ಬಂದಿರೋ ನನಗೆ ಈಗ ವಿಶ್ರಾಂತಿ ಬೇಕು ಅಂತ ಅನಿಸ್ತು, ಕೆಲ ಗಳಿಗೆ ಕಾಲು ಚಾಚಿ ಕೂತೇ…. ನೀನು ಬೇಕು ಅನಿಸ್ತು, ಮನಸು ಖಾಲಿ ಅನ್ಸುದ್ರು ಆವರಿಸಿಕೊಂಡೇ ಇರೋ ಶಕ್ತಿ ಇರೋದು ನಿನ್ ಒಬ್ಬನಿಗೆ. ದಣಿದ ದೇಹಕ್ಕೆ ನಿನ್ನ ನೆನಪು ಹಿತ ಅನಿಸ್ತಾ ಇದೆ. ವಿಶಾಲ ಎದೆಯಲ್ಲೊಮ್ಮೆ ತಲೆ ಇರಿಸಿ, ನಿನ್ನ ಹೂ ಮುತ್ತೊಂದ ಬಯಸ್ತಾ ಇದ್ದೀನಿ ಒಂಥರಾ ಎನರ್ಜಿ ಟಾನಿಕ್. ನೀನು ನನ್ ಜೊತೆ ಇರೋ ಪ್ರತಿಗಳಿಗೇನೂ ಸಂಭ್ರಮ … Read more

“ಹೃದಯದ ಪ್ರಾರ್ಥನೆಗೆ ವರವೊಂದು ಸಿಗಲಾರದೆನೋ”..?: ಪೂಜಾ ಗುಜರನ್

ಏನೂ ಬರೆಯಲಿ. ಮನಸ್ಸು ನಿನ್ನ ಸಾಂಗತ್ಯದ ಹಾದಿಯಲ್ಲಿ ಕಾಯುತ್ತಿದೆ ಎಂದೋ..? ಅಥವಾ ಮನದ ನೋವನ್ನು ಒಮ್ಮೆ ನಿವಾರಿಸಿ ಜೊತೆಯಾಗು ಎಂದೋ..? ಇದೆಲ್ಲ ಮನದ ಕೋರಿಕೆ. ಆ ದೇವರಿಗೆ ಇಟ್ಟ ಹರಕೆ. ದೈವಾಂಶ ತುಂಬಿರುವ ಮಣ್ಣಲ್ಲಿ ಬದುಕುವ ನನಗೆ ನಂಬಿರುವ ನಂಬಿಕೆಗಳೆ ದಾರಿದೀಪ. ಇದೆಲ್ಲ ನಿನ್ನ ಅರಿವಿಗೆ ಬರದ ಸತ್ಯವೇನೋ.?ನನ್ನ ಪತ್ರದ ನಿರೀಕ್ಷೆ ನೀನು ಮಾಡುತ್ತಿಯೋ ಇಲ್ಲವೋ ನಾ ಅರಿಯೆನು.ಪತ್ರಗಳನ್ನೇ ಜೀವಾಳ ಅಂತ ತಿಳಿದು ಬದುಕಿದನನಗೆ ನಿನ್ನಿಂದ ಯಾವ ಉತ್ತರಗಳು ಬರಲೇ ಇಲ್ಲ. ಮುಂದೆ ಬರುವುದು ಇಲ್ಲ.‌ನಿನ್ನ ಆಗಾಧವಾದ … Read more

ನನ್ನೆದೆಯ ಗುಬ್ಬಚ್ಚಿ: ಸುರೇಖಾ ಕುಚನೂರ

ನನ್ನೊಲವಿನ ಜೀವವೇ……ನಿನ್ನೆದೆಯ ಗುಬ್ಬಚ್ಚಿಯ ಕಥೆ ಕೇಳು. ಹಗಲೆನ್ನದೇ, ಇರುಳೆನ್ನದೇ ನಿನ್ನೇ ನೆನಪಿಸಿಕೊಳ್ಳುವ ಹೃದಯದ ವ್ಯಥೆ ಕೇಳು. ಹಸಿವಿನ ಹಂಗಿಲ್ಲದೇ ನಿದಿರೆಯ ಗುಂಗಿಲ್ಲದೇ ನಿನ್ನ ಹೆಸರನ್ನೇ ಜಪಿಸುವ ಮನಸ್ಸಿನ ಗತಿ ಕೇಳು. ಆ ಒಂದು ದಿನ ನಿನ್ನ ನೋಡಿದಾಕ್ಷಣ ನನ್ನನ್ನೆ ನಾ ಮರೆತ ದಿನ. ನಿನಗರಿವಿಲ್ಲದೆ ನನ್ನನ್ನು ನೀ ಸೇರಿದ ದಿನ. ನನ್ನ ಉಸಿರೊಳಗುಸಿರಾದ ದಿನ. ಜಗವೇ ನನ್ನ ಮರೆತರೂ ನಾ ಹೇಗೆ ಮರೆಯಲಿ ಆ ದಿನವನ್ನು. ಅಂದಿನಿಂದ ಇಂದಿನವರೆಗೂ ಮರಳಿ ನೀ ನನಗೆ ಸಿಗುತ್ತಿಲ್ಲ. ಆದರೆ ನಾ … Read more

ನೇಸರನಿಲ್ಲದ ಬಾನ ಎದೆಯಲ್ಲಿನ ಮೌನ: ಚೇತನ್ ಪೂಜಾರಿ, ವಿಟ್ಲ.

ನೀನೊಂತರ ಹವಳದ ಮುತ್ತು. ಬಳಿ ಇಲ್ಲದೆಯೂ ಏರಿಸುತ್ತಿರುವೆ ನಿನ್ನದೇ ಮತ್ತು. ನಗು ನಗುತ ನನ್ನೆದೆ ಹೊಕ್ಕು ಬಾಳ ಕಣ್ಣಾದವಳು ಇಂದು ಕಣ್ಣಂಚಲಿ ನೆನಪಾಗಿ ಕುಳಿತಿರುವೆ. ಕರೆವೆನೆಂದರೂ ಕೇಳಿಸದ ಊರಲಿ ನೀ ಕುಳಿತಿರುವೆ. ನಕ್ಕು ನಲಿವ ನಕ್ಷತ್ರವಾಗಿ ಮಿನುಗುತ ಎಲ್ಲರಿಗೂ ಮೆರುಗು ತರುತ್ತಿರುವೆ ಎಂದು ಭಾವಿಸುವೆ. ಏಕೆಂದರೆ ನೀ ಎನಗೆ ಕಲಿಸಿದ ಮೊದಲ ಪ್ರೇಮವೇ ನಗು. ನೋವಿನಲ್ಲೂ ನಗು. ನೋವ ಮರೆಸಲು ನಗು. ಮಗುವಾಗಿಸೋ ನಗು. ಪೆದ್ದು ಪೆದ್ದು ಮಾತಿನಲೂ ಪ್ರಬುದ್ಧೆ ನೀ.ತಿದ್ದಿ ಬುದ್ಧಿ ಹೇಳೋ ತಿಳುವಳಿಕೆಯಲಿ ಬುದ್ಧೆ … Read more

ಮಳೆ ಊರಿನ ಹುಡುಗಿಗೆ: ವೃಶ್ಚಿಕ ಮುನಿ (ಪ್ರವೀಣಕುಮಾರ ಸುಲಾಖೆ)

ನೆನಪಾಗುತ್ತೀಯ ಎಂದು ಪತ್ರ ಬರೆಯುತ್ತಿಲ್ಲ, ಪತ್ರ ಬರೆಯುತ್ತಿರುವುದು ನೆಪವಷ್ಟೆ ನೆನಪಿಗೆ ಉತ್ತರಿಸಲು.ಗೆ. .ಮಳೆ ಊರಿನ ಹುಡುಗಿಗೆರಥ ಬೀದಿಯ ಕೊನೆಯ ತಿರುವುಕೆಂಪು ಹೆಂಚಿನ ಮನೆಫೋಸ್ಟ :ಮಳೆಊರು ಇಂದ. .ಅಲೆಮಾರಿಯ ನೆಲೆಯಿಂದಖಾಸಾಕೋಣೆಯ ಬಿಸಿಯುಸಿರುಶಾಯಿಯಲ್ಲಿ. ಕ್ಷೇಮ ವಿಚಾರವಾಗಿ ಬರೆದ ಸಾಲುಗಳಲ್ಲಿ ಸಾಕಾಗುವಷ್ಟು ನೆನಪುಗಳಿವೆ. ಜಗದ ಯಾವ ಖಜಾನೆಯಲ್ಲಿ ತುಂಬಿ ಇಡಲು ಆಗದಷ್ಟು ಖಜಾನೆ ಲೂಟಿ ಗೆ ಕಳ್ಳರ ಭಯವಿಲ್ಲ. ನಾನು ನೀನು ಮಾತ್ರ ಜೀವಿತದ ಚಿತ್ರ ಶಾಲೆಯಲ್ಲಿ. ನೋಡು. . . ನಾನು ಎಷ್ಟು ಪೆದ್ದು ಅಂತಾ. . . ! … Read more

ಕಣ್ಣೆರಡೂ ಲವಂಗದಂತೆ…….: ಪಿ.ಎಸ್. ಅಮರದೀಪ್.

ಪ್ರೀತಿಯ ಬಿ…… ಅದೆಷ್ಟು ಹೇಳಿದರೂ ‍ನೀನು ನನ್ನನ್ನು ನಂಬುವುದಿಲ್ಲವೆಂದು ಗೊತ್ತು…. ಗೊತ್ತು ಮಾಡಿಸಲೇಬೇಕೆಂಬ ಹಠವೂ ನನಗಿಲ್ಲ. ಅದ್ಯಾವಾಗ ಧಾರವಾಡದ ಮಳೆಯಂತೆ ಇರ್ತೀಯೋ. ಒಣ ಬಿಸಿಲ ಬಳ್ಳಾರಿಯಂತಾಗುತ್ತಿಯೋ…. ತಿಳಿಯುವುದಿಲ್ಲ. ಒಮ್ಮೊಮ್ಮೆಯಂತೂ ಚಾರ್ಮಡಿ ಘಾಟಿನಲ್ಲಿ ಸದಾ ತೊಟ್ಟಿಕ್ಕುವ ಮಳೆಯ ನಡುವೆ ಮುಸುಕಿನ ಮಂಜೋ ಮಂಜು. ಹೆಂಗೇ ನಿನ್ನ ಅರ್ಥ ಮಾಡಿಕೊಳ್ಳೋದು? ಬರೀ ಸಂಜೆ, ಮುಂಜಾನೆ ಸೂರ್ಯಾನ ಫೋಟೋ ತೆಗೆದು ಹಂಚಿಕೊಳ್ಳುತ್ತಿದ್ದೆ ನಾನು. ನೀನು ಬಂದೆ ನೋಡು. ಒಳ್ಳೆಯ ಸೌಂದರ್ಯ ಪ್ರಜ್ಞೆ ಕಾಡಲು ಶುರು ಮಾಡಿದೆ. ಅಷ್ಟು ಫೋಟೋ ಹಾಕಿದರೂ ಒಂದೇ … Read more

“ಗೆಳೆಯ ನಿನ್ನ ಅದಮ್ಯ ಪ್ರೀತಿಯ ಸಾಂಗತ್ಯ ಸುಖವ ಮತ್ತೆ ಗುನುಗುತ್ತ”. .: ಡಾ. ಶ್ವೇತಾ ಬಿ.ಸಿ.

ನಲ್ಮೆಯ ದೀಪ್ˌನಮ್ಮಿಬ್ಬರ ಪ್ರೀತಿಯ ಅನುಸಂಧಾನಕ್ಕೆ ಮತ್ತೆ ಮತ್ತೆ ನೆಪವೊಡ್ಡುತ್ತ ನಿನ್ನ ಪ್ರೀತಿಯ ಬೀಜ ನನ್ನ ಮನಸ್ಸಿನ ಕನ್ನೆಲದ್ದಲ್ಲಿ ಬಿದ್ದು ಗಿಡವಾದ ಕ್ಷಣವನ್ನು ಸರಳವಾಗಿ ವಿವರಿಸಲಾಗುತ್ತಿಲ್ಲ, ಮದುವೆಯಾಗಿ ಪ್ರೀತಿಸಿದವರು ನಾವು. ನಮ್ಮ ಒಂದು ದಶಕದ ಹಾದಿಯ ದಿನಗಳು ಬರಿ ದಿನಗಳಲ್ಲˌ ಮಳೆಯ ಹನಿಗಳು. ಅದನ್ನು ನಾನ್ನಲ್ಲದೆ ಇನ್ಯಾರು ಸಂಭ್ರಮಿಸುತ್ತಾರೆ. ನನ್ನ ಬದುಕಿನ ಪ್ರತಿ ನಿಮಿಷದ ಉಲ್ಲಾಸ ನೀನುˌ ಪ್ರತಿ ದಿನ ಎದ್ದ ಕೂಡಲೆ ನನ್ನ ಮನದಲ್ಲಿ ಮೂಡುವ ಪ್ರೀತಿಯ ಗೀತೆ ನೀನುˌ ನೀನು ಜೊತೆಯಲ್ಲಿದ್ದರೆ ಪೂರ್ಣ ಎಂಬ ಭಾವ … Read more

ಖಾಲಿ ಜೇಬು ಫಕೀರನ ಪ್ರೇಮದೋಲೆ..: ಆನಂದ ವೀ ಮಾಲಗಿತ್ತಿಮಠ

ಬಹಳ ದಿನಗಳ ನಂತರ ಓಲೆ ಬರೆಯುತಿಹೆನೆಂದು ಬೇಜಾರು, ಗಾಬರಿಯಾಗಬೇಡ ಗೆಳತಿ. ನನ್ನ ಚರ್ಮ ಸುಕ್ಕುಗಟ್ಟಿದರೂ ನಿನ್ನ ಮ್ಯಾಲಿನ ಪ್ರೀತಿಗೆ ತುಕ್ಕು ಹಿಡಿಯದು. ಕಡಲು ಬತ್ತಿದ ಉದಾಹರಣೆಯುಂಟೇನು? ಹುಚ್ಚಿ..ಸಣ್ಣ ಸಣ್ಣ ಹಳ್ಳ ತೊರೆ ನದಿಗಳು ಬತ್ತಿ ಹೋಗಬಹುದು. ನನ್ನ ಪ್ರೀತಿ ಆ ಸುಂದರ ಸುವಿಶಾಲ ನೀಲ್ಗಡಲಿನಂತೆ ಕಣೆ, ಸದಾ ನಿನಗಾಗಿ ಪುಟಿಯುತ್ತಲೇ ಇರುವುದು. ಚುಮುಚುಮು ಚಳಿಯಲ್ಲಿ ನಿನ್ನ ನೆನಪಾದರೆ ಸಾಕು, ಈಗಲೂ ಬೆಚ್ಚನೆಯ ಭಾವ ಚಿಗುರೊಡೆಯುವುದು. ನನಗೆ ವಯಸ್ಸಾಗಿದೆಯೆಂದು ಮೂಗು ಮುರಿಯಬೇಡ. ನೀ ಮೂಗು ಮುರಿದಾಗಲೆಲ್ಲ ಮತ್ತಷ್ಟು ಮುದ್ದಾಗಿ … Read more

ನೀನೇ ನನ್ನವಳಾದ ಮೇಲೆ ನಿನ್ನ ಸಿಹಿ ಕಹಿಗಳು ಇನ್ನೂ ನನ್ನದೇ: ಆರ್‌ ಸುನಿಲ್‌, ತರೀಕೆರೆ

ಗೆಳತಿ ಈ ಪ್ರೀತಿಯೆಂದರೇನು. . !?ಅಕ್ಷರಶಃ ಮೂಕ ನಾ. . ! ನಿನ್ನ ನೋಡಿ ಬಂದಾಗಿನಿಂದ ನಿಜಕ್ಕೂ ಮಾತುಗಳೆಲ್ಲಾ ಕಳೆದುಹೋಗಿದ್ದವು. ಅಕ್ಷರಗಳು ಮುನಿಸಿಕೊಂಡಿದ್ದವು. ನಿನ್ನೊಲವ ದಾಳಿಯಲ್ಲಿ ನನಗಾಗ ರಕ್ಷಣೆಯೇ ಇರಲಿಲ್ಲವಲ್ಲೇ. ಮದುವೆಯೆಂದರೆ ಮಾರುದೂರ ಓಡುತ್ತಿದ್ದವನಿಗೆ ಅಯಸ್ಕಾಂತದಂತೆ ಸೆಳೆದವಳು ನೀನು. ಆದರೆ ಒಂದಂತೂ ನಿಜ ನಾನು ನಿನಗೆ ಸಂಪೂರ್ಣ ಶರಣಾಗಿಹೋಗಿದ್ದೆ. ಎಲ್ಲೋ ಏನೋ ಕಳೆದುಕೊಂಡತಿದ್ದ ನನಗೆ ಸದಾ ನಿನ್ನ ನೆನಪುಗಳೇ ನನಗೆ ಹುರುಪು ತುಂಬುತ್ತಿದ್ದವು. ಹೊಸ ಕನಸುಗಳಿಗೆ ನಾಂದಿ ಹಾಡುತಿದ್ದ್ತವು. ಅದೇನೋ ಹೊಸ ಹುರುಪು ಹೊಸ ಮುದ. . … Read more

ನನ್ನ ಅಂತರಾಳಕ್ಕೆ ನೀನಿಳಿದು, ನಾನು ನಿನ್ನಂತರಾಳವಾ ಹೊಕ್ಕು: ಶ್ರೀ ಕೊ ಯ

ನನ್ನ ಪ್ರಿಯೆ,ಮುಂಬರುವ ‘ಪ್ರೇಮಿಗಳ ದಿನ’ ಕ್ಕೆ ನನ್ನ ಪ್ರೀತಿಯ ಶುಭಾಶಯಗಳು. ನೀನು ಸಾಗರದಾಚೆಯ ಆ ದೇಶದಲ್ಲಿ ಇದ್ದರೆ ನಾನು ಇಲ್ಲೇ, ನಮ್ಮ ತಾಯ್ನಾಡಿನಲ್ಲಿ ಇರುವ ಪರಿಸ್ಥಿತಿ ನಮಗಿಂದು. ಅದರ ಕಾರಣಗಳು ಇಲ್ಲಿ ಅಪ್ರಸ್ತುತ. ಪ್ರಿಯೆ, ನಿನಗೆ ನೆನಪಿದೆಯೇ ನಾವು ಕಳೆದ ವರುಷ ಕೊಂಡಾಡಿದ ಆ ‘ಪ್ರೇಮಿಗಳ ದಿನ’. ಇಗೋ ಆ ನೆನಪಿನೊಡನೆ ಮತ್ತಷ್ಟು ನೆನಪುಗಳ ಸರಮಾಲೆ ನಿನ್ನ ಕೊರಳಿಗೆ. ನಿನ್ನನ್ನು ಬಣ್ಣಿಸಲು ಹೊರಟರೆ ಬಹುಶಃ ನಿಘಂಟಿನ ಗುಣವಾಚಕಗಳೆಲ್ಲವೂ ಖಾಲಿಯಾಗಬಹುದೇನೋ ಎಂಬ ಗುಮಾನಿ ನನ್ನನ್ನು ಕಾಡುತ್ತಿದೆ ಪ್ರಿಯೆ. ಹೀಗೆ, … Read more

ಒಲವಿನ ಹೋಂ-ಕ್ವಾರಂಟೈನು!: ಸಂತೆಬೆನ್ನೂರು ಫೈಜ್ನಟ್ರಾಜ್

ಗಂಧ ಲೇಪಿತ ಸುರಭಿ ಘಮವಾಗಿ ಮನ ಮನ ವ್ಯಾಪಿಸಿದವಳೇ…ಒಲವೆಂದರೆ ಮುಳ್ಳುಎದೆಗೆ ಚುಚ್ಚಿದರೂ ಹಿತ ಹಿತಸುರಿದ ರಕುತ ಲೆಕ್ಕವಿಲ್ಲ ಸಾಕಿಮದಿರೆಯ ಬಟ್ಟಲ ತುಂ-ತುಂಬಿ ಕೊಡುಇಷ್ಟು ಗಾಯಕ್ಕೆ, ಮತ್ತಿಷ್ಟು ಒಲವ ಉತ್ಪಾದಿಸುವ ಹೃದಯಗೂಡಿಗೆ ಸುರಿದು ನಗುವೆ! ಅದ್ಯಾರೋ ಬರೆದ ಪದ್ಯವಿದು ಅದೆಷ್ಟು ಬಾರಿ ಓದಿಕೊಂಡೆನೋ ಸಖಿ.. ..ಮುಳ್ಳ ಒಲವೇ ನಮ್ಮದು, ಚುಚ್ಚಿದರೇನಂತೆ ಹಿತ ಇದೆಯೆಂದ ಮೇಲೆ ಆಹಾ ಆನಂದವೇ ಸರಿ! ವಿರಹಕ್ಕೂ ಪ್ರೇಮ ಶಾಸ್ತ್ರದಲ್ಲಿ ಒಂದು ಒಲವ ಚೌಕಟ್ಟಿದೆ. ಇದ್ಯಾವುದೋ ವಿಚಿತ್ರ ಹೆಸರಿನ ಕಾಯಿಲೆ ಬಂದು ನೋಡು, ಬರೋಬ್ಬರಿ ಹತ್ತು … Read more

ನಾನು ಭಾವನೆಗಳನ್ನು ಬಚ್ಚಿಟ್ಟ ಮಹಾ ಮೌನಿ..!: ಆಶಾ ಆರ್ ಸುರಿಗೇನಹಳ್ಳಿ

ಓ.‌. ನನ್ನ ಹೃದಯ ನಿವಾಸಿಯೇ..! ಹೇ, ಹೃದಯವೇ..! ನೀ ನನ್ನ ಹೃದಯದಲಿ ನೆಲೆಸಿ ಹಲವು ವರ್ಷಗಳೇ ಸರಿದಿವೆ.. ಇನ್ನಷ್ಟು ವಸಂತಗಳು ಕಳೆದರೂ ಅದೇ ಪ್ರೀತಿ, ಮತ್ತಷ್ಟು ಪಜೀತಿ…! ಪ್ರೀತಿ ಓಕೆ ಪಜೀತಿ ಯಾಕೆ ಅಂತ ಯೋಚ್ನೆ ಮಾಡ್ತಿದ್ದೀಯಾ? ಒಂದು ತಗೊಂಡ್ರೆ ಮತ್ತೊಂದು ಫ್ರೀ ಅನ್ನೋ ಹಾಗೆ ಈ ಪ್ರೇಮಯಾನದಲಿ ಬರೀ ಸುಖವೇ ತುಂಬಿರೊಲ್ಲ ; ರೊಮ್ಯಾನ್ಸ್, ಆತ್ಮೀಯತೆ, ಒಂದಷ್ಟು ಕಾಳಜಿ, ಲೆಕ್ಕಕ್ಕೆ ಸಿಗದಷ್ಟು ಕೋಳಿ ಜಗಳಗಳು, ಕುಸಿದು ಬೀಳುವಂತಹ ಕ್ಲಿಷ್ಟ ಪರಿಸ್ಥಿತಿಗಳು ಎಲ್ಲದರ ಸಮ್ಮಿಶ್ರಣವೀ ಒಲುಮೆಯ ದಾರಿ. … Read more

ನಾನಂತೂ ಆ ಕ್ಷಣ ಯಾವಾಗ ಬರುತ್ತೋ ಅಂತಾ ಕಾಯ್ತಾ ಇದ್ದೀನಿ: ಪರಮೇಶ್ವರಪ್ಪ ಕುದರಿ

ಪ್ರೀತಿಯ ವಿಜಯಾ, ನಾನಿಲ್ಲಿ ಕ್ಷೇಮ, ನಿನ್ನ ಕ್ಷೇಮದ ಬಗ್ಗೆ ತಿಳಿಯುವ ಹಂಬಲ. ಹೇಗಿದ್ದಿಯಾ ವಿಜು? ಅಂದು ನೀ ನನ್ನಿಂದ ಅಗಲಿದ ಮೇಲೆ ತುಂಬಾ ಹೊತ್ತು ನಿನ್ನದೇ ಧ್ಯಾನ – ನಿನದೇ ನೆನಪು ! ನನ್ನ ಜೀವನದ ಕೊನೆಯವರೆಗೂ ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯುವ ಪರಮ ಇಚ್ಚೆ ನನಗೆ. ನಮ್ಮಿಬ್ಬರ ಪ್ರೇಮದ ಹಾದಿಗೆ ಅದ್ಯಾರೇ ಅಡ್ಡ ಬಂದರೂ, ನಾನು ಜಯಿಸಿ ನಿನ್ನನ್ನು ಪಡೆದೇ ಪಡೆಯುತ್ತೆನೆ ಎಂಬ ಬಲವಾದ ನಂಬಿಕೆ ನನಗಿದೆ ಚಿನ್ನಾ. ನೀನು ಬಡವಿ ನಾನು ಶ್ರೀಮಂತ … Read more

ಮಳೆ ಊರಿನ ಹುಡುಗಿ…: ವೃಶ್ಚಿಕ ಮುನಿ

ನೆನಪಾಗುತ್ತೀಯ ಎಂದು ಪತ್ರ ಬರೆಯುತ್ತಿಲ್ಲ, ಪತ್ರ ಬರೆಯುತ್ತಿರುವುದು ನೆಪವಷ್ಟೆ ನೆನಪಿಗೆ ಉತ್ತರಿಸಲು.ಗೆ..ಮಳೆ ಊರಿನ ಹುಡುಗಿಗೆರಥ ಬೀದಿಯ ಕೊನೆಯ ತಿರುವುಕೆಂಪು ಹೆಂಚಿನ ಮನೆಫೋಸ್ಟ :ಮಳೆಊರು ಇಂದ..ಅಲೆಮಾರಿಯ ನೆಲೆಯಿಂದಖಾಸಾಕೋಣೆಯ ಬಿಸಿಯುಸಿರುಶಾಯಿಯಲ್ಲಿ. ಕ್ಷೇಮ ವಿಚಾರವಾಗಿ ಬರೆದ ಸಾಲುಗಳಲ್ಲಿ ಸಾಕಾಗುವಷ್ಟು ನೆನಪುಗಳಿವೆ. ಜಗದ ಯಾವ ಖಜಾನೆಯಲ್ಲಿ ತುಂಬಿ ಇಡಲು ಆಗದಷ್ಟು ಖಜಾನೆ ಲೂಟಿ ಗೆ ಕಳ್ಳರ ಭಯವಿಲ್ಲ. ನಾನು ನೀನು ಮಾತ್ರ ಜೀವಿತದ ಚಿತ್ರ ಶಾಲೆಯಲ್ಲಿ . ನೋಡು… ನಾನು ಎಷ್ಟು ಪೆದ್ದು ಅಂತಾ …! ಸರಿಯಾದ ಒಕ್ಕಣಿಕ್ಕೆಯನ್ನು ಕೊಟ್ಟು ಬರೆಯಲು ಆಗುವುದಿಲ್ಲ … Read more

ನಿನ್ನ ಕೆಳತುಟಿಯ ಪಕ್ಕ ಇರುವ ಮಚ್ಚೆಯ ಮೇಲಾಣೆ..: ಡಾ. ಪ್ರೀತಿ. ಕೆ. ಎ

ಬೆಳದಿಂಗಳ ನಗುವಿನ ಹುಡುಗಿಯೇ, ಮೊನ್ನೆ ನಿನ್ನನ್ನು ಭೇಟಿಯಾದ ನಂತರ ನಾನು ನಾನಾಗಿ ಉಳಿದಿಲ್ಲ. ನಿನ್ನ ನೆನಪುಗಳನ್ನು ಎಷ್ಟೇ ಕೊಡವಿಕೊಂಡು ಎದ್ದರೂ ಮತ್ತೆ ಮತ್ತೆ ನಿನ್ನೆಡೆಗೇ ವಾಲುತ್ತಿದ್ದೇನೆ. ಮೊದಲಿಗೆ ಇದು ನಿನ್ನೆಡೆಗಿನ ಆಕರ್ಷಣೆಯಷ್ಟೇ ಅಂದುಕೊಂಡಿದ್ದೆ. ಹೆಚ್ಚೆಂದರೆ ಯಾವುದೋ ಗಳಿಗೆಯಲ್ಲಿ ಹುಟ್ಟಿ ಕೆಲವು ದಿನಗಳವರೆಗೆ ಕಾಡಬಹುದಾದ ಮೋಹವೆಂದುಕೊಂಡೆ. ಉಹುಂ.. ನನ್ನೆಣಿಕೆ ತಪ್ಪಾಯಿತು. ನೀನು ನನ್ನನ್ನು ಆವರಿಸಿಕೊಂಡ ಪರಿಗೆ ಬೆರಗಾಗುತ್ತಿರುವಾಗಲೇ ನಿನ್ನ ನೆನಪುಗಳ ಬಂಧದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದೇನೆ. ಯಾರೋ ಗೀಚಿದ ಕವಿತೆಯ ಸಾಲುಗಳಲ್ಲಿ, ಓದಲು ಕೈಗೆತ್ತಿಕೊಂಡ ಕಥೆಯಲ್ಲಿ, ರಫಿಯ ಸಂಗೀತದ ಅಮಲಿನಲ್ಲಿ… … Read more

ನನ್ನ ಪ್ರೀತಿಯೆಂಬ ನಿಷ್ಕಲ್ಮಶ ತೇರಿಗೆ…: ಕಾವ್ಯ ಎಸ್.‌

ನನ್ನ ಆತ್ಮದಂಥವನೇ……. ನಾ ನಿನ್ನೊಳಗಿನ ಅಂತರಾತ್ಮದಲ್ಲಿ ಹುದುಗಲು ಈ ಜನಮದಲ್ಲಿ ಸಾಧ್ಯವಾಗಲಿಲ್ಲ, ಕ್ಷಮಿಸೆಂದು ಕೇಳಲು ಒಳಮನಸ್ಸಿನ ಮುಖವಿಲ್ಲ. ಅರಿವಿರದ ಅವಧಿಯಲ್ಲಿ ನೀ ನನ್ನೊಳಗಿದ್ದಾಗ ನಾ ಅದನ್ನು ಅರಿಯದೇ ಅನಾಥಳಾದೆ. ನೀ ನನ್ನೊಳಗೆ ಅಂತರಂಗ ಬೆಳಗುವ ಆತ್ಮ ಶಕ್ತಿ. ನೀ ಪ್ರತಿಕ್ಷಣದಲ್ಲೂ ಆವಿರ್ಭವಿಸುವ ಬೆಳಕು. ನಿನ್ನ ಬೆಳಕಲ್ಲಿ ಹುಟ್ಟಿದ ಒಂದು ಪುಟ್ಟ ಕಿಡಿ ನಾನು. ನಿನ್ನನ್ನು ನಾ ಅಪ್ಪಿಯಾಗಿ ನನ್ನ ಮನಸ್ಸಿನಲ್ಲಿ ನಿನ್ನಂತೆ ಹಸಿರಿನ ಜಾಗ ಕೊಟ್ಟಿದ್ದೇನೆ. ಇಂದಿನ ಆಗು -ಹೋಗುಗಳ ವಾಸ್ತವಿಕತೆಯ ನೆಲೆಗಟ್ಟನ್ನು ಅರೆಕ್ಷಣ ಮರೆವಿನ ಗುಳಿಗೆಯಂತೆ … Read more

ಬದುಕು ಬರೀ ಇವೇ ಅಲ್ಲ ಎಂದು ನಾ ಬಲ್ಲೆ: ಸಹನಾ ಪ್ರಸಾದ್

ನನ್ನ ನಲ್ಲ, ಪ್ರಿಯತಮ, ಇನಿಯ, ಪ್ರಾಣಸ್ನೇಹಿತ, ಗೆಳೆಯ, ನನ್ನೊಲವೇ, ಜೀವವೇ, ಸ್ಪೂರ್ತಿಯೇ, ಮನದಲ್ಲಿ ಭದ್ರವಾಗಿ ತಳವೂರಿರುವ ಮೂರ್ತಿಯೇ…ಲವ್ ಯೂ…ತುಂಬಾ ತುಂಬಾ… ಉಮ್ಮ್…ನಿನ್ನ ಪ್ರೀತಿಯಲ್ಲಿ ಕೊಚ್ಚಿ ಹೋಗುತ್ತಿರುವ ನಿಮ್ಮ ಮನದನ್ನೆಯ ಪತ್ರ ಬರೀ ಪದಗಳ ಜೋಡನೆಯಲ್ಲ. ಹೃದಯದ ತಂತಿಗಳ ಮಿಡಿತ, ಧಮನಿಗಳಲ್ಲಿ ಸೇರಿ ಹೋಗಿರುವ ನಿಮ್ಮ ಪ್ರೀತಿಯ ತುಡಿತ,ಮನಸ್ಸಿನಲ್ಲಿ ಉಕ್ಕುತ್ತಿರುವ ಭಾವೆನೆಗಳನ್ನು ಪದಪುಂಜದಲ್ಲಿ ಹಿಡಿಯಲು ಮಾಡುತ್ತಿರುವ ಪ್ರಯತ್ನ! ಜೀವನದ ಸೆಲೆ ನೀವು, ಆಮ್ಲಜನಕದ ತರಹ ಅತ್ಯಾವಶ್ಯಕ ನನಗೆ. ನಿಮ್ಮ ಇರುವಿಕೆ ಬಹಳ ಮುಖ್ಯ. ಎದೆಬಡಿತ ನಿಮ್ಮದೇ ರಾಗ, ನಿಮ್ಮದೇ … Read more

ನಿನ್ನ ಕಣ್ಣುಗಳಲ್ಲಿನ ಉತ್ಸಾಹದ ಜಲಪಾತವ ಕಾಣುವಾಸೆಯೆನಗೆ: ಕೆ. ಎನ್‌ ಶ್ರೀವಲ್ಲಿ

ನನ್ನೊಲವಿನ ಇನಿಯಾ, ಸವಿನೆನಪೆಂಬ ರೇಷಿಮೆ ದಾರದಿಂದ ಕನಸೆಂಬ ಹೊನ್ನಿನ ಬಟ್ಟೆಯ ನೇಯ್ದಂತೆ ನನ್ನ ಮನದಲಿ ನಿನ್ನದೇ ರೂಪ ಅಚ್ಚೊತ್ತಿದೆ. ಪಿಸುಮಾತಿನ ಸಮಾಗಮದ ಕಲೆಯನ್ನು ನನ್ನಲ್ಲಿ ಅರಳಿಸಿದ್ದು ನೀನಲ್ಲವೆ. ನನ್ನ ಕಡೆಗಣ್ಣಿನ ಮಿಂಚಿನ ನೋಟ, ಚೆಂದುಟಿಯ ಮುಗುಳುನಗೆ, ಕಿರುಬೆರಳ ಸ್ಪರ್ಶ, ನನ್ನ ಮನದ ಭಾವನೆಯನ್ನು ನಿನಗೆ ತಿಳಿಸಿಲ್ಲವೆ. ನನ್ನ ಅನಿಸಿಕೆಗಳು ನಿನಗೇಕೆ ಅರಿವಾಗಲೇ ಇಲ್ಲ. ಮೋಡದ ಮುಸುಕಿನಲಿ ಪೂರ್ಣಚಂದ್ರ ಮರೆಯಾದ ಆ ಬೆಳದಿಂಗಳ ರಾತ್ರಿಯಲಿ, ನಿನ್ನ ಕಣ್ಣೋಟದ ಬೆಳ್ಳಿ ಬೆಳಕಿಗೆ ನಾ ಸೋತು ಕಣ್ಮುಚ್ಚಿದ್ದು ನಿನಗೇಕೆ ಅರಿವಾಗಲೇ ಇಲ್ಲ … Read more

ಏನಂತ ಸಂಭೋದಿಸಲಿ ನಾ ನಿನ್ನ?: ಮಧು ಅಕ್ಷರಿ

ಏನಂತ ಸಂಭೋದಿಸಲಿ ನಾ ನಿನ್ನ? ಇದೇ ಪ್ರಶ್ನೆಯೊಂದಿಗೆ ಅದೆಷ್ಟು ಪತ್ರಗಳು ನಿನ್ನ ಮನೆಯಂಗಳವನ್ನಿರಲಿ, ಅಂಚೆಪೆಟ್ಟಿಗೆಯ ಮುಖವನ್ನೂ ಕಾಣದೆ, ಹರಿದು ಬರಿದಾಗಿ ಕಸದ ಬುಟ್ಟಿಯಲ್ಲಿ ಮೋಕ್ಷ ಪಡೆದಿವೆಯೋ? ಸಿಕ್ಕಿಬೀಳುವ ಭಯಕ್ಕೆ ಹೆದರಿ, ಅವಶೇಷವನ್ನೂ ಬಿಡದಂತೆ ಸುಟ್ಟು ಸಂಸ್ಕಾರ ಮಾಡಿದ್ದೂ ಆಯ್ತು. ಅಲ್ಲಿಗೆ ಎದೆಯಲ್ಲೋ, ತಲೆಯಲ್ಲೋ, ಅಸಲು ಸರಿಯಾದ ವಿಳಾಸವಿಲ್ಲದೇ, ನನ್ನಲ್ಲಿ ಉದಯಿಸಿದ ನವಿರಾದ ಭಾವನೆಗಳಿಗೆ ಕಾರಣನಾದ ನಿನ್ನ ಪರಿಚಯಿಸುವ ಮೊದಲೇ ಸಂಸ್ಕಾರವಾದದ್ದಾಯಿತು. ಮತ್ತೆ ಕುಳಿತಿರುವೆ ಉಕ್ಕಿಬರುವ ಭಾವಗಳ‌ ಅದುಮಿಡಲಾಗದೇ. ನಿನ್ನೆದೆಗೆ ತಲುಪಿಸಿ ನಿರುಮ್ಮಳವಾಗಿ ಬಿಡುವ ಹಂಬಲದಿಂದ. ವಾಟ್ಸಪ್, ಟಿಂಡರ್, … Read more