ಪಿಸು ಮಾತು: ಶ್ರೀವಲ್ಲಭ ಕುಲಕರ್ಣಿ
ಎಲ್ಲೆಲ್ಲೂ ನೀರವ ಮೌನತಾಳಲಾರೆ ನಾ ವೇದನೆಬಳಿ ಒಮ್ಮೆ ನೀ ಬಂದುತೀರಿಸುವೆಯ ಮನದ ಕಾಮನೆ ಕಣ್ಣು ರೆಪ್ಪೆ ಆಲಂಗಿಸಿಕಳೆದಿವೆ ದಿನ ಸಾವಿರನೆಮ್ಮದಿಯ ತಾಣ ಹುಡುಕುತದಾಟಿರುವೆ ಸಪ್ತ ಸಾಗರ ಮನವೆಂದೋ ಕೊಟ್ಟಾಗಿದೆಈ ತನುವೂ ಎಂದಿಗೂ ನಿನಗೇನೀರವ ಈ ಮೌನದಲಿಸಖಿ ಗೀತದ ಜೊತೆಗೆ ಕದ್ದು ನೋಡದಿರು ಹೀಗೆಕಣ್ಣಂಚಿನಲಿ ಕೊಲ್ಲದಿರು ಹಾಗೆಬಂದು ಬಿಡು ಸುಮ್ಮನೇಪ್ರೇಮ ಲೋಕವೇ ನಮ್ಮನೆ ರಂಗೇರಲಿ ಮಾತಿನಾ ರಂಗೋಲಿಮುದ್ದಾದ ನಮ್ಮೀ ಸಾಂಗತ್ಯದಲಿಮೌನಕೂ ಪದವುಂಟುಅದಕಿದೆ ಪಿಸು ಮಾತಿನಾ ನಂಟು! -ಶ್ರೀವಲ್ಲಭ ಕುಲಕರ್ಣಿ