ಪಂಜು ಕಾವ್ಯಧಾರೆ
ನುಡಿ ಸಿರಿ ಕನ್ನಡವೇ ಶಕ್ತಿ ಕನ್ನಡವೇ ಯುಕ್ತಿಕನ್ನಡವೇ ದೇವರಿಲ್ಲಿ ಕನ್ನಡವೇ ಭಕ್ತಿ..! ಚಂದದಾ ಚಂದನವುಕನ್ನಡಿಗರ ಮನಸು‘ಛಂದ’ದಾ ಹಂದರವುಕನ್ನಡದಲೆ ರಮಿಸು..! ಸಕ್ಕರೆಗು ಸಿಹಿ ನೀಡೋನುಡಿಯಂತೆ ನಾಡುಅಕ್ಕರೆಗು ಮುದ ನೀಡೋಅಚ್ಚರಿಯ ನೀನಾಡು..! ಸ್ವರ್ಗದಾ ಸಾಂಗತ್ಯ ,ಖುಷಿಯಿಂದ ಕುಣಿದಾಡುಬೇರೇನಿಲ್ಲ ಕನ್ನಡವನೆತೆರಿಗೆಯಾಗಿ ನೀಡು..! ತುಟಿತೆರೆದರೆ ಉಲಿದಂತೆಬಂಗಾರದ ವೀಣೆಗರಿಬಿಚ್ಚಿದ ನವಿಲಂತೆಅಕ್ಷರದ ಜೋಡಣೆ..! ಇಲ್ಲಿ ಜನಿಸಿದ್ದೆ ಪುಣ್ಯವುನನ್ನವ್ವ ನಿನ್ನಾಣೆನೆಮ್ಮದಿಗೆ, ನಿನ್ನಂತ ಉಪಮೆಯಬೇರೆಲ್ಲೂ ನಾ ಕಾಣೆ..! –ಮನು ಪುರ. ಬಾಲ್ಯ.. ಆ ದಿನಗಳೆಷ್ಟು ಚಂದನಾನಾಗಿನ್ನೂ ಮುಗ್ಧ ಕಂದನಿತ್ಯ ತುಂಬಿ ತುಳುಕುವ ಆನಂದಮರೆಯಾದ ನೆನಪು ಗಾಯದಗುರುತಿನಿಂದ.. ಜೇನಿನಂತಹ ಮಧುರ … Read more