ದಿಕ್ಕುಗಳು (ಭಾಗ 2): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅಷ್ಟೊತ್ತಿಗೆ ಹತ್ತಾರು ಜನರು ಸೇರಿ ಬಿಟ್ಟಿದ್ದರು. ಮಲಕಾಜಪ್ಪ ದೋತರ ಚುಂಗನ್ನು ಹಿಡಿದುಕೊಂಡು ಬೆವರುತ್ತಿದ್ದ ಅಂಗೈಯನ್ನು ಅಲ್ಲೇ ಒರೆಸಿಕೊಳ್ಳುತ್ತಾ, “ನೋಡ್ರಪ್ಪಾ ಸಾಲ ವಾಪಸ್ ಕೊಡ್ರಿ ಅಂದ್ರ ಈ ಹೆಣ್ಮಗಳು ಹಿಂಗ ಮಾಡೀದ್ಲು” ಎಂದನು. ಕೆಲವರು ಆತನ ಪರವಾಗಿ ಮಾತಾಡಿದರು. ತಿಮ್ಮಣ್ಣಜ್ಜ ಮತ್ತು ಉಳಿದ ಮೂರ್ನಾಲ್ಕು ಜನರು ಅನುಶ್ರೀ ಪರವಾಗಿ ಮಾತಾಡಿದರು. ಅನುಶ್ರೀ ಹೇಳಿದಳು, “ನೋಡ್ರಪಾ ನಾವು ಹೊಲ ಮರ್ಬೇಕಂತ ನಿರ್ಧಾರ ಮಾಡೀವಿ. ಚಾಲ್ತೀ ರೇಟಿಗೆ ಯಾವುದೂ ಕಿರಿಕಿರಿ ಮಾಡ್ದ ಕೊಂಡುಕೊಳ್ಳಾರಿದ್ರ ಮುಂದ ಬರ್ಬೋದು”. “ಹೌದೇನ್ಬೆ ತಂಗಿ” ಸೇರಿದ ಜನರಲ್ಲಿ … Read more

ಮಗು, ನೀ ನಗು (ಭಾಗ ೧): ಸೂರಿ ಹಾರ್ದಳ್ಳಿ

ಪ್ರಿಯ ಗೆಳತಿ,ನನ್ನ ಅರವತ್ತನೆಯ ವಯಸ್ಸಿನಲ್ಲಿ, ಅರೆ, ನಾನು ಇಷ್ಟು ಬೇಗ ಮುದುಕಿ ಎಂಬ ಕೆಟಗರಿಗೆ ಸೇರಿಬಿಟ್ಟೆನೇ?, ನಾನು ಮೊಮ್ಮಗಳೊಂದರ ಅಜ್ಜಿಯಾದೆ. ಮೊದಲು ಯಾವುದಾದರೊಂದು ಮಗು ‘ಅಜ್ಜಿ’ ಎಂದು ಸಂಬೋಧಿಸಿದರೆ ರೇಗುತ್ತಿದ್ದವಳು ಈಗ ಈ ಪುಟ್ಟಿ, ತನ್ನ ತೊದಲು ನುಡಿಯಲ್ಲಿ ಎಂದು ‘ಅಜ್ಜಿ’ ಎಂದು ಕರೆಯುತ್ತದೆಯೋ ಎಂದು ಕಾಯುವಂತಾಗಿದೆ. ತೊಡೆಯ ಮೇಲೆ ಮಲಗಿಸಿಕೊಂಡು, ಅದರ ಕಣ್ಣಲ್ಲೇ ಕಣ್ಣು ನೆಟ್ಟು, ‘ಪುಟ್ಟ, ನಾನು ನಿನ್ನ ಅಜ್ಜಿ, ಅವಳು ನಿನ್ನ ಅಮ್ಮ, ಅವರು ನಿನ್ನ ಅಜ್ಜ, ಮಗೂ, ಅಜ್ಜಿ ಅನ್ನು,’ ಎನ್ನುತ್ತಾ … Read more

ಪಂಜು ಕಾವ್ಯಧಾರೆ

ನಿರೀಕ್ಷೆಸುಂದರ ವದನದಲ್ಲಿ ನಿರೀಕ್ಷೆಯ ಗೆರೆಫ಼ಲಿಸುವವರೆಗೂ ಚಿಂತೆಯ ನೆರೆಸ್ವಾರ್ಥವೇ ಪರಾರ್ಥವೇ; ಜ್ಞಾನವೇ ಸತ್ಯವೇನೀತಿಯ ಬೋಧೆಯ ಶಾಂತಿ ಸುಭಿಕ್ಷಕ್ಕೆಕಾದಿರುವೆ ನೀ..ಕಾಯುವ ಶಕ್ತಿಯಿರುವವರೆಗೆ! ದ್ವೇಷ ಅಹಂಕಾರಗಳ ಅಂಧಕಾರದ ಜಗದೊಳಗಿನಸ್ವಾರ್ಥನಿವಾರಣೆಗೆ, ಪುನರ್ ಸೃಷ್ಟಿಗೆಭ್ರಷ್ಟತೆಯ ನೀಗಿ ಸಮಾನತೆಯ ಸಮಷ್ಟಿಗೆಮಿಥ್ಯೆಯ ಮೀರಿ ಸತ್ಯವೇ ನಿತ್ಯವೆಂದು ಸಾರುವಹೊಸ ಸೂರ್ಯನ ಉದಯಕ್ಕೆಕಾದಿರುವೆ ನೀ ಕಾಯುವ ಶಕ್ತಿಯಿರುವವರೆಗೆ! ಬಾಹ್ಯದಲ್ಲಿ ಆಕರ್ಷಕವಿರಬಹುದೀ ಮೊಗಆದರೆ ಮಡುಗಟ್ಟಿದೆ ಕಂಗಳಲ್ಲಿ ಹತಾಶೆಯ ದುಃಖಅದುರುತ್ತಿರುವ ಅಧರಗಳಲಿ ತುಡಿಯುತ್ತಿರುವಹೇಳಿಯೂ ಹೇಳೆನೆಂಬ ಮನದೀನೋವ ಕಿತ್ತೊಗೆಯುವ ನೈಜ ಮಹಾಶಕ್ತಿಗಾಗಿಕಾದಿದ್ದೀಯ ಯಾರಿಗೋ.. ಕಾಯುವ ಶಕ್ತಿಯಿರುವವರೆಗೆ! -ಡಾ.ಗಣೇಶ ಹೆಗಡೆ ನೀಲೇಸರ ಕರುನಾಡು ಕನ್ನಡ……….. ಕನ್ನಡ … Read more

ವಿಭಾವರಿ (ಭಾಗ 1): ವರದೇಂದ್ರ ಕೆ ಮಸ್ಕಿ

                                     ಅದೊಂದು ದಿನ ನಿಸ್ತೇಜತೆ ಮೈಯಲ್ಲಿ ಹೊಕ್ಕು, ತನ್ನೆಲ್ಲ ಸಂತೋಷವನ್ನು ಸಮಾಧಿಗೊಳಿಸಿ.. ತಲೆ ಮೇಲೆ ಕೈ ಹೊತ್ತು ಕೂಡುವಂತೆ ಮಾಡಿತ್ತು. ನಡೆದ ಇತಿಹಾಸವೆಲ್ಲ ಕಣ್ಣಿನ ಹನಿಗಳು ಬೇಡವೆಂದರೂ ನೆನಪಿಸುತ್ತಿವೆ… ಅರೆ ಘಳಿಗೆಯೂ ಸುಮ್ಮನಿರದ ಮನಸು ಇಂದೇಕೋ ಸ್ಮಶಾನ ಮೌನಕ್ಕೆ ಬಲಿಯಾಗಿದೆ. ಹೌದು… ಹೌದು….. ಅವನೇಕೆ ಹೀಗೆ ಮಾಡಿದ…!! ಸುಖಾಸುಮ್ಮನೆ ಕೋಪಗೊಳ್ಳದವನು ಇಂದೇಕೆ ಮೃಗದಂತಾದ, ಗೋವಿನಂತಹ ಮನಸ್ಸುಳ್ಳ ನನ್ನ ತೇಜು, ಏಕೆ ಈ ದಿನ ಹೆಬ್ಬುಲಿಯಂತಾಡಿದ. ಸದಾ ಹಸನ್ಮುಖಿ ಲವಲವಿಕೆಯ ಗಣಿ ನೂರು ಮಾತಿಗೆ ಒಂದು ಮಾತನಾಡುವವ ಒಂದು … Read more

ಅವಳೇ ಕಾರಣ: ಮಾಂತೇಶ

ಒಂದು ದಿನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದೆ ದಾರಿಲಿ ಒಂದು ಡೈರಿ ಸಿಕ್ಕಿತು.ಎತ್ತಿಕೊಂಡು ನೋಡಿದೆ ಅದರಲ್ಲಿ ಏನು ಬರೆದಿತ್ತು ಅದು ಹೀಗಿತ್ತು. …..ಅವಳೇ ಕಾರಣ…. ಅಯ್ಯೋ ಯಾವುದೋ ಟ್ರ್ಯಾಜಿಡಿ ಲವ್ ಸ್ಟೋರಿ ಇರಬಹುದೆಂದು ಭಾವಿಸಿ ಬ್ಯಾಗಿನಲ್ಲಿ ಹಾಕಿಕೊಂಡೆ. ದಿನಾಲೂ ನಾನು ಬ್ಯಾಗಿನಿಂದ ಏನನ್ನಾದರೂ ತೆಗೆದರು ಅದೇ ಕಾಣಿಸುತ್ತಿತ್ತುಕೆಲವು ಪದಗಳು ಶಕ್ತಿ ಹೇಗಿರುತ್ತದೆಂದರೆಬರಿಗಾಲಿನಲ್ಲಿ ನಡೆಯುತ್ತಿರುವಾಗ ಕಾಲಿಗೆ ಕಲ್ಲುಮಣ್ಣು ಒತ್ತಿ ಹೇಗೆ ಚಪ್ಪಲಿ ಬೇಕು ಅನ್ನಿಸುವುದೊ.ಹಾಗೆಯೇ ಡೈರಿ ನೋಡಿದಾಗೆಲ್ಲ ಕಣ್ಣಿಗೆ ಒತ್ತಿ ಯಾವಾಗ ಇದನ್ನು ಓದುವೆ ಎನ್ನಿಸುತ್ತಿತ್ತು.ಒಂದು ದಿನ ಅದಕ್ಕೆ … Read more

ಟೈಮ್ ಪಾಸ್ ಆಗ್ತಿಲ್ವ…: ಮಧುಕರ್ ಬಳ್ಕೂರು

‘ಯಾಕೋ ಬೋರು. ಹ್ಯಾಗೆ ಟೈಂ ಪಾಸ್ ಮಾಡಬೇಕೋ ಗೊತ್ತಾಗ್ತ ಇಲ್ಲ.’‘ಸುಮ್ಮನೆ ಟೈಂಪಾಸ್ ಗೆ ಅಂತ ಕೆಲಸಕ್ಕೆ ಹೋಗ್ತಿದೀನಿ. ಇದರಿಂದ ನನಗೇನು ಆಗಬೇಕಾಗಿಲ್ಲ.’‘ಯಾಕೋ ಟೈಂ ಪಾಸ್ ಆಗ್ತಿಲ್ಲ ಕಣೋ. ಅದಕ್ಕೆ ಕಾಲ್ ಮಾಡ್ದೆ. ಮತ್ತೆ ಫುಲ್ ಫ್ರೀನಾ..?’‘ಅವನು ಜೊತೆ ಇದ್ದರೆ ತಲೆ ಬಿಸಿನೇ ಇಲ್ಲ. ತಮಾಷೆ ಮಾಡೋಕೆ ಕಾಲೆಳೆಯೋಕೆ ಒಳ್ಳೆ ಟೈಂ ಪಾಸ್ ಗಿರಾಕಿ.’‘ಹಾಳಾದ್ದು ಟೈಮು, ನಿದ್ದೆ ಮಾಡಿ ಎದ್ದರೂ ಮುಂದುಕ್ಕ್ ಹೋಗಲ್ಲ ಅನ್ನುತ್ತೆ.’ಓಹೋ, ಇದ್ಯಾಕೋ ತುಂಬಾ ದೊಡ್ಡ ಪ್ರಾಬ್ಲಮ್ಮೆ ಆಯಿತು. ನಿದ್ದೆ ಮಾಡಿ ಎದ್ರುನೂ ಟೈಂ ಮುಂದಕ್ಕೆ … Read more

ಸಿಂಹಾವಲೋಕನ 1: ನಾಗಸಿಂಹ ಜಿ ರಾವ್

ರಂಗಭೂಮಿ ಅನುಭವಗಳು ಹತ್ತನೇ ತರಗತಿಯ ನಂತರ ಮೈಸೂರಿಗೆ ಕಾಲಿಟ್ಟಾಗ, ಒಂದು ಹೊಸ ಜಗತ್ತಿನ ದ್ವಾರ ತೆರೆಯುವ ಸೂಕ್ಷ್ಮ ಗುಂಗಿನಲ್ಲಿದ್ದೆ. ಚಿಕ್ಕ ವಯಸ್ಸಿನಿಂದಲೂ ನಾಟಕದ ಮೇಲಿನ ಒಲವು ನನ್ನಲ್ಲಿ ಒಡಮೂಡಿತ್ತು. ಸಿನಿಮಾ ನೋಡಿಕೊಂಡು ಮನೆಗೆ ಬಂದ ಮೇಲೆ, ನಾನು ಮತ್ತು ನನ್ನ ಅಕ್ಕ ತಮ್ಮಂದಿರೊಂದಿಗೆ ಆ ದೃಶ್ಯಗಳನ್ನು ಮನೆಯ ಅಂಗಳದಲ್ಲಿ ಅಭಿನಯಿಸುತ್ತಿದ್ದೆವು. ಆ ಕ್ಷಣಗಳಲ್ಲಿ, ನಾನೇ ಒಬ್ಬ ನಾಯಕನಂತೆ, ಖಳನಾಯಕನಂತೆ, ಒಂದು ಕಾಲ್ಪನಿಕ ಜಗತ್ತಿನಲ್ಲಿ ಮಿಂದೇಳುತ್ತಿದ್ದೆ. ಆದರೆ, ನಿಜವಾದ ನಾಟಕದ ರುಚಿಯನ್ನು ನಾನು ಮೊದಲ ಬಾರಿಗೆ ಸವಿದದ್ದು ಹತ್ತನೇ … Read more

ಸಂದಿಗ್ಧತೆ: ಬಂಡು ಕೋಳಿ

ರಾಂ ಪಹರೆ ಬರೊಬ್ಬರಿ ಐದರ ಅಂಕಿಯ ಮೇಲೆ ಹೊಂದಿಸಿಟ್ಟಿದ್ದ ಅಲರ‍್ಮನೇ ರಿಂಗಣಿಸಿತೇನೋ ಅಂತಿಳಿದು ಬಾಪೂ ನಿದ್ದೆಯಿಂದ ಎಚ್ಚರಾಗಿ ಗೊಣಗುತ್ತ ತಲೆದಿಂಬಿನ ಬುಡಕ್ಕೆ ಕೈಯ್ಯಾಡಿಸಿದ; ಮೊಬೈಲ್ ಕೈಗತ್ತಿತು. ಅದರ ಮಗ್ಗುಲಿನ ಗುಂಡಿಯ ಮೇಲೆ ಹೆಬ್ಬೆಟ್ಟೂ ಹಿಚುಕಿದ. ಮೊಬೈಲ್ ಬಾಯಿ ಬಂದಾತು. ಹಾಳಾದ ಕಿಣಿಕಿಣಿ ಸಪ್ಪಳ ಸುಖ ನಿದ್ದೆಯ ಮಜಾನೆಲ್ಲಾ ಕೆಡಿಸಿತು ಎನ್ನುತ್ತ ಮನಸ್ಸಿನಲ್ಲೇ ಬೈದ. ತನ್ನಿಷ್ಟದ ಭಂಗಿಯಾಗಿದ್ದ ನೆಲದ ಹೊಟ್ಟೆಯ ಮೇಲೆ ಹೊಟ್ಟೆಯೂರಿದ್ದ ನಿದ್ರಾಸನ ಬದಲಿಸಿದ. ಎಡ ಕಪಾಳು ಹೊಳ್ಳಿಸಿ ಬಲಕಿನದು ಊರಿದ. ಸೊಂಟದ ಕೆಳಗ ಜಾರಿದ್ದ ದುಬ್ಟಿಯನ್ನು … Read more

ಬೊಮ್ಮವಾರದ ಶಾಸನ: ಸಂತೋಷ್ ಟಿ

ಕಾಲ: ಶಕವರ್ಷ ೧೨೭೭ಕ್ರಿ.ಶ ೧೩೫೪ರಾಜವಂಶ:ವಿಜಯನಗರ ಸಾಮ್ರಾಜ್ಯರಾಜ: ಹರಿಯಪ್ಪ ಓಡೆಯರು ಶಾಸನ ಪಾಠ ಈ ಕೆಳಕಂಡತೆ ೧. ಶ್ರೀ ಮತು ಸಕ ವರುಷ ೧೨೭೭ಜ೨. ಯ ಸಂವತ್ಸರದ (ಕಾ) ಸು ೧೫ ಶ್ರೀ ಮನು೩. ಮಹಾ ಮಂಡಳೇಶ್ವರಂ ಅರಿರಾಯ ವಿಭಾಡ೪. ಭಾಷೆಗೆ ತಪ್ಪುವ ರಾಯರ ಗಂಡ ಚತುಸಮು೫. ದ್ರಾಧಿಪತಿ ಶ್ರೀ ವೀರ ಹೇ೬. ರಿಯಪ್ಪ ಒಡೆಯರು ಪುತಿ೭. ವಿ ರಾಜ್ಯವಂ ಶ್ರೀ ಮನು ಮಹಾ೮. ಎಲಹಕ್ಕನಾಡ ಪ್ರಭುಗಳು ಸೊಣಪ.. ದೇ೯. ಣನ.. ಸರುರ ಬಯಿರಿದೇವ.. ವಾಗಟ೧೦. ದ ಮಾರದೇವಯ … Read more

ಭಗ್ನ ಪ್ರೇಮಿಗಳು: ಎಲ್.ಚಿನ್ನಪ್ಪ, ಬೆಂಗಳೂರು.

“ಮಾರ್ಗರೆಟ್, ನಾವು ಮೊದಲು ಹೇಗಿದ್ದೆವು ಈಗ ಹೇಗಾಗಿದ್ದೇವೆ ನೋಡು . . . ! ನಾವೀಗ ನಿರ್ಜರ ಆತ್ಮಗಳು. ಭೂಲೋಕದಲ್ಲಿ ಶಾರೀರಿಕ ಆತ್ಮಗಳಾಗಿ ಜೀವಿಸಬೇಕಾದವರು ಇಲ್ಲಿ ಆಕಾರವಿಲ್ಲದ ನಿರ್ವಿಕಾರ ಆತ್ಮಗಳಾಗಿದ್ದೇವೆ. ದಂಪತಿಯರಾಗಿ ಬಾಳಬೇಕಾಗಿದ್ದವರು ಬಾಳಿಗೆ ಮುಕ್ತಾಯ ಹಾಡಿದ್ದೇವೆ. ಪ್ರೀತಿ ಎಂಬ ನೌಕೆಯಲ್ಲಿ ಸಾಗುತ್ತಿದ್ದ ನಾವು ಸಾಗರದಲ್ಲಿ ಮುಳುಗಿ ಈಜಿ ಜೈಸಲಾಗದೆ ಹೋದವರು. ಪ್ರೇಮ ವೈಪಲ್ಯಕ್ಕೆ ತುತ್ತಾಗಿ ‘ಭಗ್ನ ಪ್ರೇಮಿಗಳು’ ಎಂಬ ಹಣೆಪಟ್ಟಿಯನ್ನು ತೊಟ್ಟುಕೊಂಡವರು. ನಾವು ಹುಟ್ಟಿ ಬೆಳೆದ ಜಾತಿ ಧರ್ಮಗಳೇ ನಮಗೆ ಆತ್ಮಹತ್ಯೆಯ ಹಾದಿ ತೋರಿಸಿದವು. ಅದರೊಟ್ಟಿಗೆ … Read more

ಮಕ್ಕಳಿಗೆ ಬೋಧಿಸಬೇಕಾದ ಕುವೆಂಪು ತತ್ವ: ಶಿವಕುಮಾರ ಸರಗೂರು.

“ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು, ಜೀವಧಾತೆಯನಿಂದು ಕೂಗಬೇಕು” ಎಂಬ ಯುಗದ ಕವಿಯ ಕೂಗು ಇವತ್ತಿನವರೆಗೆ ಕೇಳಿಸಿಕೊಂಡರೂ ಕೂಡ ಮೈನವಿರೇಳದಿರುವುದು ವಿವೇಕವೇ ಬತ್ತಿ ಹೋಗುವುದರ ಸೂಚಕವೆಂದು ಕಾಣುತ್ತದೆ. ಕನ್ನಡ ನವೋದಯ ಕಾಲದಲ್ಲಿ ಸಮಸ್ತ ಜನ ಸಮುದಾಯವನ್ನು ಪ್ರತಿನಿಧಿಸುವ ಕುವೆಂಪು ಅವರ ಸಾಹಿತ್ಯ ಪರಿಮಾಣ ಮತ್ತು ಮೌಲ್ಯ ಎರಡರಲ್ಲೂ ಅತ್ಯುತ್ಕೃಷ್ಟ ಎಂಬುದರಲ್ಲಿ ಮರುಮಾತಿಲ್ಲ. ಜೀವನದ ಎಲ್ಲಾ ಮಗ್ಗುಲುಗಳನ್ನು ಹತ್ತಿರದಿಂದ ಕಂಡ ಅನುಭಾವದ ಅವರ ಕವಿತೆ, ಕತೆ, ಕಾದಂಬರಿ, ನಾಟಕ, ಪ್ರಬಂಧ, ವೈಚಾರಿಕ ಲೇಖನ ಕನ್ನಡ ಸಾಹಿತ್ಯಕ್ಕೆ ಅನನ್ಯ … Read more

ರಮಾಬಾಯಿಯ ಸೇಡು: ಕೊಳ್ಳೇಗಾಲ ಶರ್ಮ

ರೋಬಾಟು ಸೇವಕಿ ಮಾಡಿದ ತಪ್ಪುಗಳು ರಮಾಬಾಯಿಯನ್ನು ದೋಷಿಯಾಗಿಸಿವೆ. ರಕ್ಷಣೆ ಹೇಗೆ? ರಮಾಬಾಯಿ ತಲೆ ಕೊಡವಿದಳು. ಅವಳ ಒದ್ದೆ ಕೈಗಳು ಸುತ್ತಲೂ ನೀರನ್ನು ಸಿಂಪಡಿಸಿದುವು. ತೊಳೆದ ಕೈಗಳು ಇನ್ನೂ ಕೆಸರಾಗಿದೆಯೋ ಎನ್ನುವಂತೆ ಮತ್ತೊಮ್ಮೆ ಅವನ್ನು ಕೊಡವಿದಳು. ಅವಳಿಗೆ ಹಾಗೆಯೇ ಅನ್ನಿಸುತ್ತಿತ್ತು.ತನ್ನ ಕೈ ಕೊಳೆಯಾಗಿದೆ ಎಂಬ ಭಾವನೆ ಅವಳಿಗೆ ಬಂದಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಈ ರೀತಿ ಆಗಾಗ್ಗೆ ಆಗುತ್ತಿರುತ್ತದೆ. ಇದು ಆರಂಭವಾಗಿದ್ದೂ ಇತ್ತೀಚೆಗಷ್ಟೆ..ಇವೆಲ್ಲ ಆರಂಭವಾಗಿದ್ದು ಯಾವಾಗ ಎನ್ನುವುದನ್ನು ರಮಾಬಾಯಿ ಮರೆತಿಲ್ಲ. ಸರಿಯಾಗಿ ನಾಲ್ಕೂವರೆ ವರ್ಷಗಳ ಹಿಂದೆ, ದೀದೀ ಸೈಬರ್‌ಬಾಯಿಯನ್ನು … Read more

ಬಾಗಿಲು ತೆಗೆಯೇ ಪುಟ್ಟಕ್ಕ !!!!: ನಾಗಸಿಂಹ ಜಿ ರಾವ್

ಒಂದು ರಾತ್ರಿ, ಸುಮಾರು ಹತ್ತು ಗಂಟೆಯ ವೇಳೆಗೆ, ನನ್ನ ಮೊಬೈಲ್‌ನಲ್ಲಿ ಒಬ್ಬ ಪರಿಚಿತರ ಕರೆ ಬಂತು. ಆ ಧ್ವನಿಯಲ್ಲಿ ಆತಂಕ, ಭಯ ಮತ್ತು ಅಸಹಾಯಕತೆಯ ಛಾಯೆ ಸ್ಪಷ್ಟವಾಗಿತ್ತು. ಕರೆ ಮಾಡಿದವರು ಶಾಂತಿ (ಬದಲಾಯಿಸಿದ ಹೆಸರು), ಒಂಟಿ ತಾಯಿಯಾಗಿ ತನ್ನ ಹದಿಹರೆಯದ ಮಗಳು ಸುಮಿತಾಳನ್ನು (ಬದಲಾಯಿಸಿದ ಹೆಸರು) ಬೆಳೆಸುತ್ತಿದ್ದವರು. “ಸಾರ್, ದಯವಿಟ್ಟು ಸಹಾಯ ಮಾಡಿ! ಸುಮಿತಾ ತಡವಾಗಿ ಮನೆಗೆ ಬಂದಿದ್ದಕ್ಕೆ ಬೈದೆ. ಕೋಪದಲ್ಲಿ ರೂಮ್‌ಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡಿದಾಳೆ. ಎಷ್ಟು ಕರೆದರೂ ತೆಗೆಯುತ್ತಿಲ್ಲ. ಏನಾದರೂ ಮಾಡಿಕೊಂಡರೆ ಅಂತ … Read more

ಹಾಸ್ಟೆಲಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ದೆವ್ವ!: ಲಿಂಗರಾಜು ಕೆ ಮಧುಗಿರಿ

ಹನುಮಂತಪುರ ಡಿಗ್ರಿ ಹಾಸ್ಟೆಲ್ ಡಾಕ್ಯುಮೆಂಟರಿ 2 ಹಾಸ್ಟೆಲ್ ನಲ್ಲಿ ನನ್ನಂತಹ ಜ್ಯೂನಿಯರ್ಸ್ಗಳನ್ನು ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲೋಸುಗವೋ ಅಥವಾ ಮಾಮೂಲಿಯಂತೆ ಆಗಿನ ಕಾಲದಲ್ಲಿ ಚಾಲ್ತಿಯಲ್ಲಿದ್ದಂತೆ SC/ST ಹಾಸ್ಟೆಲ್ ಗಳಲ್ಲಿ ದೆವ್ವಗಳಿವೆ ಎಂಬ ಮೂಢನಂಬಿಕೆಯಂತೆಯೋ ಏನೋ ಅಂತೂ ಹಾಸ್ಟೆಲ್ನಲ್ಲಿ ದೆವ್ವಗಳಿವೆ ಎಂಬುದನ್ನು ನಮ್ಮ ಸೀನಿಯರ್ಸ್ಗಳು, ಆಗಾಗ ನಮ್ಮ ಕಿವಿಗೆ ರಸವತ್ತಾಗಿ, ಭಯಂಕರವಾಗಿ ತುಂಬುತ್ತಿದ್ದರು; ಉದಾ (ನಾನು ಹಿಂದೆ ಹೈಸ್ಕೂಲ್ ಓದುವಾಗ ಇದ್ದ ಮಧುಗಿರಿಯ ‘ಗುಟ್ಟೆ ಹಾಸ್ಟೆಲ್’ PU, ಹಾಸ್ಟೆಲ್ ನಲ್ಲೂ ದೆವ್ವದ ಕಥೆಗಳು ಚಾಲ್ತಿಯಲ್ಲಿದ್ದವು; ಮೊದಲು ಇಲ್ಲಿ ಸತ್ತ ಹೆಣಗಳನ್ನು … Read more

ಮರ ಗಿಡು ಬಳ್ಳಿ – ಬಸವಣ್ಣನ ದೃಷ್ಟಿಯಲ್ಲಿ ಜೀವಜಾಲದ ಮಹತ್ವ: ರೋಹಿತ್ ಜಿರೋಬೆ

ಇಂದು ಮಾನವನು ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶಮಾಡುತ್ತಾ ಹೋಗುತ್ತಿರುವುದು ಹೊಸದೇನಲ್ಲ. ಮರ ಕಡಿತ, ಗಿಡಗಳ ತುಳಿವು, ಧಾನ್ಯಗಳ ಹತೋಟಿ – ಇವೆಲ್ಲವೂ ನಾವು ಸಾಧಾರಣವಾಗಿ ಗಮನಿಸದ ಪ್ರಪಂಚದ ದೈನಂದಿನ ಕ್ರಿಯೆಗಳು. ಆದರೆ, ಸಾವಿರ ವರ್ಷಗಳ ಹಿಂದೆಯೇ ಬಸವಣ್ಣನವರು ಸಸ್ಯಜಗತ್ತಿಗೆ ಜೀವವಿದೆ ಎಂಬುದನ್ನು ತಮ್ಮ ತತ್ತ್ವದಿಂದಲೇ ಸಾರಿದ್ದರು. ಅವರು ತಮ್ಮ ಈ ವಿಖ್ಯಾತ ವಚನದಲ್ಲಿ ಹೇಳುತ್ತಾರೆ: “ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದುಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆಇನ್ನಾವುದು ವಿಧಿಯಯ್ಯಾಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದಜೀವಜಾಲದಲ್ಲಿದೆ ಚರಾಚರವೆಲ್ಲ.ಅದು ಕಾರಣ,ಕೂಡಲಸಂಗನ … Read more

‘ಫಣಿಯಮ್ಮ’ ಕಾದಂಬರಿ ಮತ್ತು ಸಿನಿಮಾ : ಒಂದು ಕಥೆ ಎರಡು ದೃಷ್ಟಿ: ಡಾ. ಸುಶ್ಮಿತಾ ವೈ.

ಎಂ.ಕೆ. ಇಂದಿರಾ ಅವರ ‘ಫಣಿಯಮ್ಮ’ ಕಾದಂಬರಿಯನ್ನು ಆಧರಿಸಿ ರಚನೆಯಾದ ‘ಫಣಿಯಮ್ಮ’ ಸಿನಿಮಾ ೧೯೮೩ರಲ್ಲಿ ಬಿಡುಗಡೆಯಾಗಿದೆ. ಫಣಿಯಮ್ಮ ಸಿನಿಮಾದ ಯಶಸ್ಸಿಗೆ ಮುಖ್ಯವಾಗಿ ಕಾದಂಬರಿಯ ಕಥೆ ಹಾಗೂ ವಸ್ತುವೇ ಕಾರಣವಾದರೂ ಪ್ರೇಮಾ ಕಾರಂತರ ಚಿತ್ರಕತೆ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಕಾದಂಬರಿಯ ಅರ್ಥ ವಿಸ್ತಾರತೆಯನ್ನು ಸಾಧಿಸಿತು. ಸಿನಿಮಾ ಅನಕ್ಷರಸ್ಥರನ್ನೂ ತಲುಪಿ ಸಂಚಲನವನ್ನುಂಟು ಮಾಡಿತು. ಇಲ್ಲಿ ನಿರ್ದೇಶಕಿಯ ಮುಖ್ಯ ಗಮನವಿರುವುದು ಫಣಿಯಮ್ಮನ ಜೀವನದ ಕಥೆಯ ಜೊತೆಗೆ ಬ್ರಾಹ್ಮಣ ಸಮುದಾಯವು ಮಹಿಳೆಯರನ್ನು, ಅದರಲ್ಲೂ ವಿಧವೆಯರನ್ನು ವ್ಯವಸ್ಥಿತವಾಗಿ ಶತಮಾನಗಳಿಂದ ಶೋಷಿಸುತ್ತ ಬಂದಿದ್ದನ್ನು ಹೇಳುವುದು … Read more

ದಿಕ್ಕುಗಳು (ಭಾಗ ೧): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀಯ ತಾಯಿಯ ಖಾಯಿಲೆ ಗುಣ ಆಗಲಿಲ್ಲ. ಸಕ್ಕರೆ ಕಾಯಿಲೆ ಪೀಡಿತಳಾಗಿದ್ದ ಆಕೆಯ ಕಾಲಿಗೆ ಏನೇನೋ ಔಷಧ ಕೊಡಿಸಿದರೂ ಗಾಯ ಮಾಯಲೇ ಇಲ್ಲ. ಏಳೆಂಟು ವರ್ಷಗಳಿಂದ ಕೀವು ಸೋರಿ ಸೋರಿ ಶಾಂತಮ್ಮ ಕಡ್ಡಿಯಂತಾಗಿದ್ದಳು. ಕೊನೆಗೂ ಆ ದಿನ ಆಕೆಯ ಜೀವ ಹಾಸಿಗೆಯಲ್ಲೇ ಹೋಗಿತ್ತು. ತಾಯಿಗೆ ಮಣ್ಣು ಕೊಟ್ಟು ಮನೆಗೆ ಬಂದ ಅನುಶ್ರೀಗೆ ಜೀವನ ಶೂನ್ಯವೆನ್ನಿಸಿತ್ತು. “ಜಡ್ಡಾಗ್ಲಿ ಜಾಪತ್ರಾಗ್ಲಿ ಅವ್ವ ಇರಬೇಕಾಗಿತ್ತು” ಅಂತ ಮೊಣಕಾಲ ಮೇಲೆ ಮುಖವಿರಿಸಿಕೊಂಡು ಹುಡುಗಿ ಕಂಬನಿ ಸುರಿಸುತ್ತಾ ಇತ್ತು. ಆಜೂಬಾಜೂದವರು ಹೇಳುವಷ್ಟು ಸಮಾಧಾನ ಹೇಳಿದರು. ನಿಧಾನಕ್ಕೆ … Read more

ಪಂಜು ಕಾವ್ಯಧಾರೆ

ಋಣಿಯಾಗಿರು ಹೆತ್ತವಳು ಹಣ್ಣಣ್ಣು ಬದುಕಿಯಾದಾಗಅಕ್ಕರೆಯಿಂದಿರು ಸಾಕು…ಹಾಲುಣಿಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳು ಮುಪ್ಪಾಗಿ ಹೊಟ್ಟೆ ಹಸಿದಾಗಚೂರು ಅನ್ನವನಿಡು ಸಾಕು….ತುತ್ತುಣಿಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳ ಕೈ ಕಾಲಿಗೆ ಶಕ್ತಿ ಇಲ್ಲದಿದ್ದಾಗಕೈಕೋಲು ಕೊಡು ಸಾಕು…..ಬೆರಳಿಡಿದು ನಡೆಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳು ದುಃಖದ ಕಣ್ಣೀರಿಡುವಾಗಅವಳ ಕಣ್ಣೆದುರಿರು ಸಾಕು….ಚಂದ್ರನ ತೋರಿಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳು ವೃದ್ದೆಯಾಗಿ ಹಾಸಿಗೆ ಹಿಡಿದಾಗಚಾಪೆ ಚಾದರ ನೆಲಕಾಸು ಸಾಕು….ಜೋಗುಳದೊಳು ಮಲಗಿಸಿ ಋಣ ತೀರಿಸುವುದು ಬೇಕಿಲ್ಲ. -ಮೈನು ಐ.ಬಿ.ಎಮ್ ಬಾಳುತಿರು ನಶ್ವರದ ಜೀವನದಲಿ ನನ್ನದು ನನ್ನದೆಂದುನಾಚಿಕೆ … Read more

“ಎಸ್ತರ್ ಅವರ ‘ನೆನಪು ಅನಂತ”: ಡಾ. ಎಚ್. ಎಸ್. ಸತ್ಯನಾರಾಯಣ

ಅಕ್ಷರ ಪ್ರಕಾಶನದವರು ಶ್ರೀಮತಿ ಎಸ್ತರ್ ಅವರು ತಮ್ಮ ಪತಿ ಅನಂತಮೂರ್ತಿಯವರ ಬಗ್ಗೆ ಹಂಚಿಕೊಂಡ ನೆನಪಿನ ಮಾಲೆಯನ್ನು ‘ನೆನಪು ಅನಂತ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ. ಎಸ್ತರ್ ಅವರ ನೆನಪುಗಳನ್ನು ಬರಹ ರೂಪಕ್ಕಿಳಿಸಿದವರು ಪತ್ರಕರ್ತರೂ ಲೇಖಕರೂ ಆದ ಶ್ರೀ ಪೃಥ್ವೀರಾಜ ಕವತ್ತಾರು ಅವರು. ನಿರೂಪಣೆಯೇ ಈ ಪುಸ್ತಕದ ಶಕ್ತಿ. ಎಸ್ತರ್ ಅವರು ಹೇಳುತ್ತಾ ಹೋದುದ್ದನ್ನು ಬರಹದ ಸೂತ್ರಕ್ಕೆ ಒಗ್ಗಿಸುವುದು ಸುಲಭದ ಕೆಲಸವಲ್ಲ. ಎಸ್ತರ್ ಅವರ ವ್ಯಕ್ತಿತ್ವದ ಅನಾವರಣಕ್ಕೆ ಸ್ವಲ್ಪವೂ ಧಕ್ಕೆಬಾರದಂತೆ ಸೊಗಸಾಗಿ ನಿರೂಪಿಸಿರುವ ಪೃಥ್ವೀರಾಜ ಕವತ್ತೂರು ಅವರನ್ನು ಮೊದಲಿಗೆ ಅಭಿನಂದಿಸಿ … Read more

ಪುರಾಣ ಪರಿಕರಗಳು ಮತ್ತು ಚರಿತ್ರೆಯ ನಿರಚನೆ: ಸಂಗನಗೌಡ ಹಿರೇಗೌಡ

[ಎಚ್.ಎಸ್.ಶಿವಪ್ರಕಾಶರ ಮಹಾಚೈತ್ರ, ಮಂಟೆಸ್ವಾಮಿ, ಮಾದಾರಿ ಮಾದಯ್ಯ ನಾಟಕಗಳನ್ನು ಅನುಲಕ್ಷಿಸಿ] ಹನ್ನೆರಡನೇ ಶತಮಾನದಲ್ಲಿ ಶರಣರು ಸನಾತನದ ಒಂದಷ್ಟು ಎಳೆಗಳಿಂದ ಬಿಡಿಸಿಕೊಂಡು ವಿನೂತನದೆಡೆಗೆ ಹೊರಳಿದ್ದು ಈಗಾಗಲೇ ಚರಿತ್ರೆಯಲ್ಲಿ ದಾಖಲಾಗಿದೆ. ಅಂಥ ವಿನೂತನಕ್ಕೆ ಬರಗುಗೊಂಡ ಹರಿಹರ, ಚಾಮರಸ, ಪಾಲ್ಕುರಿಕೆ ಸೋಮನಾತ, ಬೀಮ ಕವಿಯನ್ನೂ ಒಳಗೊಂಡು ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಸಾಹಿತ್ಯದ ಮೇಲೆ ದಟ್ಟ ಪ್ರಭಾವವಾದ್ದರಿಂದ ಕನ್ನಡ ಸೃಜನಶೀಲ ಬರೆಹಗಾರರು ಮತ್ತೆ ಮತ್ತೆ ಆ ಕಾಲಕ್ಕೆ ತಿರುಗಿ ನೋಡುವಂತಾಯಿತು. ಹಾಗಾಗಿಯೇ ಕನ್ನಡ ಸಾಹಿತ್ಯದಲ್ಲಿ ಅನೇಕ ನಾಟಕಗಳು ಹಾಗೂ ಕಾದಂಬರಿಗಳು, ಕವಿತೆಗಳು … Read more

‘ಸಾಹಿತ್ಯದ ‘ರೂಪದರ್ಶಿ’: ಡಾ. ಭರತ್ ಭೂಷಣ್. ಎಮ್

ಕನ್ನಡದ ಪ್ರಖ್ಯಾತ ಪುಸ್ತಕಗಳಲ್ಲೊಂದಾದ ಕೆ.ವಿ.ಐಯ್ಯರ್ ವರ ಅವರ “ರೂಪದರ್ಶಿ” ನಾನು ಅಕಸ್ಮಾತಾಗಿ ಓದಿದ ಪುಸ್ತಕ. ಅದು ನನ್ನನ್ನು ಎಷ್ಟು ಪ್ರಭಾವಿಸಿತ್ತೆಂದರೆ, ಅಲ್ಲಿಂದ ಇಲ್ಲಿಯವರೆಗಿನ ಸುಮಾರು 350 ಕ್ಕೂ ಹೆಚ್ಚು ಕನ್ನಡ ಪುಸ್ತಕಗಳ ಓದಿಗೆ ಮುನ್ನುಡಿ ಇಟ್ಟು, ಚಾರಣ, ನಾಟಕ ಹಾಗೂ ಪುಸ್ತಕಗಳ ಒಡನಾಟದಿಂದ ನನ್ನ ಜೀವನದ ಏಳು-ಬೀಳುಗಳಿಗೆ ಸಮಾಧಾನ ನೀಡಿ ಈಗಲೂ ಸಾಹಿತ್ಯದ ಚಟುವಟಿಗಳಿಗೆ ಭಾಗಿಯಾಗಲು ಪ್ರೇರೇಪಿಸುತ್ತಿರುವ ಪುಸ್ತಕ. ಕನ್ನಡ ಏಕೆ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದು? ಎನ್ನುವುದನ್ನು ಅರಿಯಲು ಈ ರೀತಿಯ ಬರವಣಿಗೆಯನ್ನು ಎಲ್ಲರೂ ಓದಲೇ … Read more

“ಒಳಿತು ಕೆಡುಕಿನ ದಾರಿಯಲ್ಲಿ ಹೆಣ್ಣಿನ ಗೌಪ್ಯತೆ, ಸೂಕ್ಷ್ಮ ಚಿತ್ರಿಕೆಗಳ ಕಲಾತ್ಮಕ ಕೆತ್ತನೆ”: ಎಂ.ಜವರಾಜ್

ಯುವ ಕಥೆಗಾರ್ತಿ ಎಡಿಯೂರು ಪಲ್ಲವಿ ಅವರ “ಕುಂಡದ ಬೇರು” ಕಥಾ ಸಂಕಲನದ ಕಥೆಗಳ ಕಡೆ ಕಣ್ಣಾಡಿಸಿದಾಗ ಇದು ಇವರ ಮೊದಲ ಕಥಾ ಸಂಕಲನವೇ..? ಅನಿಸಿದ್ದು ಸುಳ್ಳಲ್ಲ! ಚ.ಸರ್ವಮಂಗಳ ಅವರು “ಅಮ್ಮನ ಗುಡ್ಡ” ಸಂಕಲನದಲ್ಲಿ ಬ್ರೆಕ್ಟ್ ನ The mask of the demon ನ ಪುಟ್ಟ ಅನುವಾದವೊಂದಿದೆ. ಅದು,“ನನ್ನ ಒಳಮನೆಯ ಗೋಡೆ ಮೇಲೊಂದು ಜಪಾನಿ ಕೆತ್ತನೆ:ಒಬ್ಬ ದುಷ್ಟ ರಾಕ್ಷಸನ ಮುಖವಾಡ.ಹೊಂಬಣ್ಣದ ಅರಗಿನಿಂದ ಮೆರಗಿಸಿರುವ ಮುಖ.ಹಣೆ ಮೇಲೆ ಉಬ್ಬಿರುವ ನರ.ನೋಡ್ತಾ ನೋಡ್ತಾ ಅಯ್ಯೋ ಪಾಪ ಅನ್ನಿಸುತ್ತೆ.ದುಷ್ಟನಾಗಿರೋದಕ್ಕೆ ಎಷ್ಟು ಸುಸ್ತು … Read more

ದಾರಿ ಯಾವುದಯ್ಯ: ಅಂಬಿಕ ರಾವ್

ಪ್ರಯಾಣಕ್ಕೆ ಹೊರಟಾಗ ದಾರಿಯ ಬಗ್ಗೆ ಒಮ್ಮೊಮ್ಮೆ ಗೊಂದಲ ಉಂಟಾಗುತ್ತದೆ. ಆಗ ಸಾಮಾನ್ಯವಾಗಿ ವಾಹನ ನಿಲ್ಲಿಸಿ ಸ್ಥಳೀಯ ಜನರನ್ನು ಅಂಗಡಿಯವರನ್ನು “ ದಾರಿ ಯಾವುದು?” ಎಂದು ಕೇಳುತ್ತೇವೆ. ನಮ್ಮದೇ ನಾಡಾಗಿದ್ದಲ್ಲಿ ನಮ್ಮ ಭಾಷೆಯಲ್ಲಿ ದಾರಿಯನ್ನು ಹೇಳುತ್ತಾರೆ. ಬೇರೆ ಜಾಗಕ್ಕೆ ಹೋದಾಗ ಅವರ ಭಾಷೆಯನ್ನು ಹರುಕು ಮುರುಕಾಗಿ ಉಪಯೋಗಿಸಿ ಅದರೊಂದಿಗೆ ಸಂಗಮ ಭಾಷೆಯನ್ನು ಬಳಸಿ ಕೇಳಬೇಕು. ಅವರು ಹೇಳಿದ ಮಾತು ಅರ್ಥವಾದರೆ ಪುಣ್ಯ, ಇಲ್ಲದಿದ್ದರೆ ಬಂದ ದಿಕ್ಕಿಗೆ ವಾಪಸ್ ಹೋದರು ಹೋಗಬಹುದು!! . ದಾರಿ ತೋರಿಸುವವರನ್ನು ಹಲವಾರು ವಿಧಗಳಿವೆ; ನನ್ನ … Read more

ಅಯ್ಯ..!!: ಡಾ. ಮಂಜುನಾಥ

‘ಲೈ ಮಂಜಾ, ಬಾರ್ಲಾ ಇಲ್ಲಿ ! ‘ ಅಯ್ಯನ ಕೂಗು. ಆಗಷ್ಟೇ ಸ್ಕೂಲಿಂದ ಕುಪ್ಪಳಿಸಿಕೊಂಡು ಬಂದ ನನ್ನ ಕಿವಿ ತಲುಪಿತು. ಒಂದೇ ಉಸುರಿಗೆ ನಡ್ಲುಮನೆಯಲ್ಲಿದ್ದ ಮಂಚದ ಮ್ಯಾಕೆ ಬ್ಯಾಗು ಎಸೆದವನೇ ಅಯ್ಯನ ಹತ್ತಿರ ಓಡೋಡಿ ಹೋದೆ. ನನಗೆ ಗೊತ್ತಿತ್ತು ಅಯ್ಯನ ಹತ್ರ ಹೋದ್ರೆ ಏನಾದ್ರೂ ಸಿಗುತ್ತೆ ಎಂದು. ‘ ಏನಯ್ಯಾ? – ಹೋಗ್ಬುಟ್ಟು ಭೋಜಯ್ಯನ ಅಂಗಡೀಲಿ ಒಂದು ಕಟ್ಟು ನಾಟಿ ಬೀಡಿ ತಗಬಾ ! ಎಂದು ಕೈಗೆ ಒಂದು ರೂಪಾಯಿ ಕೊಡ್ತು. ಒಂದು ರೂಪಾಯಿ ನೋಡಿ ನಿರಾಶೆಯಾಯಿತು. … Read more

ಮೂರು ಕವನಗಳು

ಪ್ರಕೃತಿ ಸೌಂದರ್ಯ ಭೂರಮೆಯ ಅಂದ ಚಂದದ ನೋಟಸವಿಯುವ ಬನ್ನಿ ಪ್ರಕೃತಿಯ ರಸದೂಟಪ್ರಕೃತಿಗೆ ವಿಕೃತಿಯಾಗಿ ಮೆರೆಯ ಬೇಡವೋ ಮರ್ಕಟಸಂಭ್ರಮಿಸೋಣ ಬನ್ನಿ ಪ್ರಕೃತಿಯಔತಣ ಕೂಟ ಧರೆಗಿಳಿದು ಬಂದ ರಮಣಿಯಂತೆನಿನ್ನ ಅರಮನೆಯ ದೃಶ್ಯಕ್ಕೆ ನಾಶರಣಾದಂತೆನೀನು ಹಚ್ಚ ಹಸಿರಿನ ಸೀರೆ ಹುಟ್ಟಂತೆನನ್ನ ನಯನಗಳಿಗೆ ಹಿತವಾದಂತೆ ಬೆಟ್ಟ ಗುಡ್ಡಗಳಿಂದ ಇಳಿದು ಬರುವಜಲಧಾರೆಯ ರೌದ್ರ ನರ್ತನನೋಡುಗರ ಕಣ್ಣಿಗೆ ಸೌಂದರ್ಯದ ದರ್ಶನಪ್ರಾಣಿ ಪಕ್ಷಿಗಳ ವಾಸಸ್ಥಳ ಕಾನನಪ್ರಕೃತಿ ಮತ್ತು ಮಾನವನ ಮಿಲನ ಝರಿ ತೊರೆಗಳಿಂದ ಇಣುಕುವ ಜಲಧಾರೆನೋಡಲು ಹಂಬಲಿಸುತ್ತಿರುವೆನು ಮನಸಾರೆಇಡೀ ಜೀವಸಂಕುಲಕ್ಕೆ ನೀ ಆಸರೆಹಸಿರಿನ ಸೌಂದರ್ಯಕ್ಕೆ ತಲೆಬಾಗಿಸುರಿಯುವುದು ವರ್ಷಧಾರೆ … Read more

”ಹಕ್ಕು ಇದ್ರೆ ನಾವು ಬದುಕುತ್ತೇವಾ ಸಾರ್ ? ”: ನಾಗಸಿಂಹ ಜಿ ರಾವ್

ಒಂದು ವಾರದ ಹಿಂದೆ ಮನೆಗೆ ಬಂದಾಗ, ಎದುರಿನ ತೋಟದಲ್ಲಿ ಏನೋ ಕಾಣೆಯಾಗಿದೆ ಎಂದು ಅನಿಸಿತು. ಕುತೂಹಲವನ್ನು ತಡೆಯಲಾಗದೆ ತೋಟದೊಳಗೆ ನಡೆದು, ಸುತ್ತಲೂ ಕಣ್ಣಾಡಿಸಿದೆ. ಆ ಕ್ಷಣದಲ್ಲಿ ಹೃದಯವೇ ನಿಂತ ಅನುಭವ ಆಯಿತು —ನಮ್ಮ ಪ್ರೀತಿಯ ನಲ್ಲಿಕಾಯಿ ಮರದ ಒಂದು ಭಾಗವನ್ನು ಕತ್ತರಿಸಲಾಗಿತ್ತು. ತೆಂಗಿನ ಮರ ಹಾಗೂ ಹೊಂಗೆಯ ಮರದ ತೋಳಿನಡಿಯಲ್ಲಿ ಹನ್ನೆರಡು ವರ್ಷಗಳಿಂದ ಗಗನಕ್ಕೆ ಎದ್ದು ನಿಂತಿದ್ದ ಆ ಮರದ ಕೊಂಬೆಗಳು ಈಗ ಕಾಂಪೌಂಡ್‌ನಾಚೆಗಿನ ವಿದ್ಯುತ್ ತಂತಿಗೆ ತಾಗದಂತೆ “ಟ್ರಿಮ್” ಮಾಡಲ್ಪಟ್ಟಿದ್ದವು. ಆದರೆ, ಆ ಮರದ ಕತ್ತರಿಯ … Read more

ನೀರಿನ ಪೊಟ್ಟಣಗಳು: ಕೋಡಿಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಗಡ್ಡಂ ದೇವೀ ಪ್ರಸಾದ್ಕನ್ನಡ ಅನುವಾದ: ಕೋಡಿಹಳ್ಳಿ ಮುರಳೀ ಮೋಹನ್ “ತಂಪಾದ ಕುಡಿಯುವ ನೀರು ಪ್ಯಾಕೆಟ್‌ಗಳು”, “ ಚಲ್ಲ ಚಲ್ಲನಿ ನೀಟಿ ಪೊಟ್ಲಾಲು””… ಬಸ್ಸಿನ ನಿಲ್ದಾಣಕ್ಕೆ ಬಂದು ನಿಂತ ದೂರದ ಊರಿನ ಬಸ್ಸಿನ ಸುತ್ತಲೂ ಎಡಗೈಯಲ್ಲಿ ಬಕೆಟ್ ಹಿಡಿದು, ಬಲಗೈಯಲ್ಲಿ ನೀರಿನ ಪ್ಯಾಕೆಟ್‌ಗಳನ್ನು ಮೇಲಕ್ಕೆತ್ತಿ ಹಿಡಿದುಕೊಂಡು ದಾಸಪ್ಪ ಕೂಗುತ್ತಿದ್ದ. ಅಷ್ಟರಲ್ಲಿ ಮತ್ತೊಂದು ಬಸ್ಸು ಬಂದರೆ, ತಕ್ಷಣ ಅದರೊಳಗೆ ಹೋಗಿ ಎರಡು ಭಾಷೆಗಳಲ್ಲಿ ಕೂಗುತ್ತಾ ಹತ್ತು ಪ್ಯಾಕೆಟ್‌ಗಳನ್ನು ಮಾರಿದ.ನೀರಿನ ಪ್ಯಾಕೆಟ್‌ಗಳನ್ನು ಬಕೆಟ್‌ನಲ್ಲಿ ಭತ್ತದ ಹೊಟ್ಟಿರುವ ಐಸ್ ದಿಮ್ಮಿಯ ಹತ್ತಿರ … Read more