ಒಂದು ದಿನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದೆ ದಾರಿಲಿ ಒಂದು ಡೈರಿ ಸಿಕ್ಕಿತು.
ಎತ್ತಿಕೊಂಡು ನೋಡಿದೆ ಅದರಲ್ಲಿ ಏನು ಬರೆದಿತ್ತು ಅದು ಹೀಗಿತ್ತು.
…..ಅವಳೇ ಕಾರಣ….
ಅಯ್ಯೋ ಯಾವುದೋ ಟ್ರ್ಯಾಜಿಡಿ ಲವ್ ಸ್ಟೋರಿ ಇರಬಹುದೆಂದು ಭಾವಿಸಿ ಬ್ಯಾಗಿನಲ್ಲಿ ಹಾಕಿಕೊಂಡೆ. ದಿನಾಲೂ ನಾನು ಬ್ಯಾಗಿನಿಂದ ಏನನ್ನಾದರೂ ತೆಗೆದರು ಅದೇ ಕಾಣಿಸುತ್ತಿತ್ತು
ಕೆಲವು ಪದಗಳು ಶಕ್ತಿ ಹೇಗಿರುತ್ತದೆಂದರೆ
ಬರಿಗಾಲಿನಲ್ಲಿ ನಡೆಯುತ್ತಿರುವಾಗ ಕಾಲಿಗೆ ಕಲ್ಲುಮಣ್ಣು ಒತ್ತಿ ಹೇಗೆ ಚಪ್ಪಲಿ ಬೇಕು ಅನ್ನಿಸುವುದೊ.ಹಾಗೆಯೇ ಡೈರಿ ನೋಡಿದಾಗೆಲ್ಲ ಕಣ್ಣಿಗೆ ಒತ್ತಿ ಯಾವಾಗ ಇದನ್ನು ಓದುವೆ ಎನ್ನಿಸುತ್ತಿತ್ತು.
ಒಂದು ದಿನ ಅದಕ್ಕೆ ಸಮಯ ಬಂದೇಬಿಟ್ಟಿತು
ಅಂದು ಭಾನುವಾರ ನಾನು ಬ್ಯಾಗನ್ನು ಕ್ಲಿನ್ ಮಾಡುತಿದ್ದೆ. ಆಗ ಕಣ್ಣಿಗೆ ಕಂಡಿದ್ದೇ ಈ ಡೈರಿ. ಒಂದು 30 ಪೇಜುಗಳಷ್ಟಿತ್ತು ಇದನ್ನೇನು ಒಂದರ್ಧ ಗಂಟೆಯಲ್ಲಿ ಓದಿ ಬಿಡುವೆ ಎಂದು ಬೇರೆಲ್ಲ ಕೆಲಸ ಬದಿಗೆ ಸರಿಸಿ ಕೊನೆಯ ಪುಟದಿಂದ ಓದಲು ಶುರು ಮಾಡಿದೆ.
ನಾನಿಂದು ತುಂಬಾ ಕಷ್ಟಪಡುತ್ತಾ ಇರೋದಕ್ಕೆ
..ಅವಳೇ ಕಾರಣ..
ಅವಳು” ದಿವ್ಯ”. ನಮ್ಮ ಅಕ್ಕನ ಮಗಳು ಹುಟ್ಟಿನಿಂದಲೂ ನಮ್ಮ ಮನೆಯಲ್ಲಿ ಬೆಳೆದ ಹುಡುಗಿ ನಮ್ಮ ಅಮ್ಮನೆಂದರೆ ಅವಳಿಗೆ ತುಂಬಾ ಇಷ್ಟ, ಹಾಗೇ ನಮ್ಮ ತಂದೆದು ಮತ್ತು ನನ್ನದು ಮಮಕಾರದ ಪ್ರೀತಿ ಅವಳ ಮೇಲೆ.
ಹೀಗೆ ಒಂದು ದಿನ ದಿವ್ಯ ನೋಡಲು ಅವಳ ತಂದೆ ಮತ್ತು ನಮ್ಮಕ್ಕ ನಮ್ಮೂರಿಗೆ ಬಂದರು. ರಾತ್ರಿ ಊಟ ಮಾಡಿದ ನಂತರ ನಮ್ಮ ಮಾವ ದಿವ್ಯಳ ಒಟ್ಟಿಗೆ ಸೇರಿ ಆಚೆ ಮಾತನಾಡುತ್ತ ಕುಳಿತರು. ಸ್ವಲ್ಪ ಸಮಯದ ನಂತರ ದಿವ್ಯ ಮಲಗುತ್ತೇನೆ ಎಂದು ಅವಳ ತಂದೆಗೆ ಹೇಳಿ ಒಳಗೆ ನಡೆದಳು. ದಿವ್ಯಳಿಗೆ ನಿಮ್ಮಮ್ಮನನ್ನು ಬರಹೇಳು ಎಂದು ಅಲ್ಲೇ ಹೊರಗಡೆ ಕುಳಿತರು.
ಅವರಿಬ್ಬರು ಹೊರಗಡೆ ಕುಳಿತಿದ್ದನ್ನು ನಮ್ಮ ತಂದೆ ನೋಡಿದ್ದರು ಸಹ
ಸಮಯ 10:00 ಗಂಟೆ ಬೀದಿದೀಪ ವೆಲ್ಲಾ ಆಫ್ ಆಗಿತ್ತು. ಅದು ಬೇರೆ ನಮ್ಮ ತಂದೆ ಮಲಗುವ ಸಮಯ ಅವರು ಮಲಗುವ ಬರದಲ್ಲಿ ಬಾಗಿಲನ್ನು ಮುಚ್ಚಿದರು.
ನಮ್ಮಕ್ಕ ಮತ್ತು ತಾಯಿ ಮಾತಾಡುತ್ತಾ ಕುಳಿತಿದ್ದರು ನೋಡದೆ ಸಮಯವನ್ನು ಅವರ ನೋಡುವಷ್ಟರಲ್ಲಿ ಹನ್ನೊಂದು ಗಂಟೆಯಾಗಿತ್ತು.
ಹೊರಗಡೆ ಬಂದು ನೋಡುತ್ತಾರೆ ದಿವ್ಯ ಮತ್ತು ನನ್ನ ತಂದೆ ಅಷ್ಟೇ ಮಲಗಿದ್ದರು. ಬಾಗಿಲು ತೆರೆದು ನೋಡುತ್ತಾರೆ ನಮ್ಮ ಮಾವ ಹೊರಗಡೆ ಇಲ್ಲವೇ ಇಲ್ಲ ನಮ್ಮಮ್ಮ ಮತ್ತು ನಮ್ಮ ಅಕ್ಕನಿಗೆ ಗಾಬರಿ. ನಾನು ಬೇರೆ ಆಗ ಊರಲ್ಲಿ ಇರಲಿಲ್ಲ, ಆಗ ನಮ್ಮಕ್ಕನ ಫೋನಿಗೆ ಒಂದು ಕರೆ ಬಂತು ರಿಸೀವ್ ಮಾಡಿದರೆ (ನೋಡು ಸರಿಯಾಗಿ ಕೇಳು ನಾಳೆ ಬೆಳಿಗ್ಗೆ ಆರು ಗಂಟೆ ಬಸ್ಸಿಗೆ ದಿವ್ಯ ಕರೆದುಕೊಂಡು ಬಂದು ಬಿಡು.)
ನಮ್ಮ ಮಾವ ಒಂದು ಚೂರು ಮುಂಗೋಪಿ,
ನಮ್ಮ ತಂದೆ ನೋಡದೆ ಬಾಗಿಲು ಮುಚ್ಚಿದ್ದರಿಂದ ನಮ್ಮ ಮತ್ತು ಅವರ ನಡುವೆ ಸಂಬಂಧವೆ ಮುರಿದು ಹೋಯಿತು ದಿವ್ಯ ಬಂದು ಅವರ ಅಮ್ಮನಿಗೆ ಮಾವ ಹೊರಗಡೆ ಇರುವ ವಿಷಯ ತಿಳಿಸಿದ್ರೆ ಹೀಗಾಗುತ್ತಿರಲಿಲ್ಲ
so ಅದಕ್ಕೆ ಅವಳೇ ಕಾರಣ..
ಹೀಗೆ ದಿನಗಳು ಉರುಳಿದ ನಂತರ ನನ್ನ ಮದುವೆ ಮಾಡಲು ನಿಶ್ಚಯಿಸಿದರು ನಮ್ಮ ತಾಯಿ ಮೊಮ್ಮಗಳನ್ನು ಮನೆತುಂಬಿಸಿಕೊಳ್ಳುವ ಆಸೆ.
ನಾನು ಕಾಸಿಗೆ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರಿಂದ. ನಮ್ಮ ತಂದೆಗೆ ಹೊರಗಡೆ ತುಂಬಾ ವರದಕ್ಷಿಣೆ ಪಡೆದು ಜೋರಾಗಿ ಮದುವೆ ಮಾಡಬೇಕೆಂಬ ಆಸೆ.
ನಾನು ಮಾತ್ರ ನನ್ನ ಸಹೋದ್ಯೋಗಿ (ಸುಮಾ) ಪ್ರೀತಿಸುತ್ತಿದ್ದೆ..
ಕೊನೆಗೆ ನಾನು ಸುಮಾಳನ್ನೆ ಮದುವೆಯಾಗಲು ನಿರ್ಧರಿಸಿದೆ. ಹೇಗೋ ಮನೆಯಲ್ಲಿ ಒಪ್ಪಿಸಿ
ಇನ್ವಿಟೇಶನ್ ಕಾರ್ಡ್ ಪ್ರಿಂಟ ಮಾಡಿಸಿಬಿಟ್ಟೆ.ಇನ್ನೇನೂ ಹಂಚೊದು ಮಾತ್ರ ಬಾಕಿ ಆಗ ನನ್ನ ಫೋನಿಗೆ ಒಂದು ಕಾಲ್ ಬಂತು ಅದು ದಿವ್ಯಾಳದು.
ನೋಡು ಮಾವ ನೀನು ಯಾರನ್ನೇ ಮದುವೆಯಾಗು ನಾನು ಮಾತ್ರ ನಿನ್ನನ್ನು ಅಜ್ಜಿಯನ್ನು ಬಿಟ್ಟಿರಲಾರೆ ಅದಕ್ಕೋಸ್ಕರ ನಾನೇನು ಬೇಕಾದರೂ ಮಾಡಲು ಸಿದ್ಧ.
ನಾನೊಂದು ಕ್ಷಣ ತಲೆಸುತ್ತು ಬಂತು ಕೆಳಗೆ ಬಿದ್ದೆ ಯಾರೋ ನೀರು ತಂದು ಹಾಕಿದರು ನಂತರ ಮೇಲೆದ್ದೆ ದಿವ್ಯಾ ನನಗೆ ಇದೇ ಮೊದಲೇನಲ್ಲ ಫೋನ್ ಮಾಡುವುದು
ಆಗಾಗ ಫೋನ್ ಮಾಡಿ ಅಮ್ಮನ ಬಗ್ಗೆ ಮಾತ್ರ ವಿಚಾರಿಸುತ್ತಿದ್ದಳು. ಓಹೋ ನನಗೀಗ ಅರ್ಥವಾಗುತ್ತಿದೆ. ಊಟಕ್ಕೆ ಅಂತಾನೆ ಬಂದವರು ಭಟ್ಟನ ಬಗ್ಗೆ ವಿಚಾರಿಸುವ ತರ. ಅಮ್ಮನ ಬಗ್ಗೆ ಕೇಳುತ್ತಿದ್ದಳು ಅಂತ.
ಇದನ್ನೆಲ್ಲ ಮೊದಲೇ ಯಾಕೆ ಹೇಳಲಿಲ್ಲ? ಅವಳು ನೊಂದುಕೊಂಡಿದ್ದಕ್ಕೆ
…. ಅವಳೇ ಕಾರಣ……
ಹುಚ್ಚು ಹುಡುಗಿ ಅವಳಿಗೇನು ಕಮ್ಮಿ ರೂಪವತಿ, ವಿದ್ಯಾವತಿ ಗುಣವತಿ ಅವರಪ್ಪ ಹಣವಂತನು ಕೂಡ ರಾಜಕುಮಾರ ಬಂದು ಅವಳನ್ನು ಮದುವೆಯಾಗಲು ಇನ್ನೇನು ಬೇಕು. ಏನ್ ಮಾಡಿಬಿಟ್ಟಳು ನಮ್ಮನ್ನಗಲಿ ಮೂರು ವರ್ಷವಾಯಿತಲ್ಲಾ ಹಾಗಾಗಿ ಏನೇನು ಮಾತನಾಡುತ್ತಿರುವುದು. ಎಂದುಕೊಂಡು ಸುಮ್ಮನೆ ಮನೆಗೆ ನಡೆದೆ
ನನ್ನ ಸಹೋದ್ಯೋಗಿಗಳು ಆಶಿಸಿದಂತೆ ಭಾನುವಾರ ನನ್ನ ಮದುವೆ ಮುಗಿದೇಹೋಯಿತು ಮದುವೆಯನು ವಿಜೃಂಭಣೆಯಿಂದ ನಡೆಯಿತಾದರೂ “ನಮ್ಮಕ್ಕ ,ಮಾವ” ಬರದ ಕಾರಣ ನಮ್ಮ ತಾಯಿ ಮಾತ್ರ ತುಂಬಾ ಅತ್ತರು. ಏನು ಮಾಡುವುದು ಹೇಳಿ ನಾವು ಎಲ್ಲ ತರ ಕರಿದೆವು ಬರಲಿಲ್ಲ. ಅಂದು ಊಟ ಮಾಡಿ 6:00 ಗಂಟೆಯ ಹೊತ್ತಿಗೆ ನೋಡಿದರೆ ನಮ್ಮ ಮನೆಯ ಹೊಸ್ತಿಲ ಮೇಲೆ ದಿವ್ಯ ಕೂತಿದ್ದಳು ಕೈಯಲ್ಲಿ ತಾಳಿ ಹಿಡಿದು ಹೇಗೆ ಬಂದಳೆಂದು ಯಾರಿಗೂ ಗೊತ್ತಿಲ್ಲ ಆದರೆ ಯಾರು ಹೇಳಿದರು ಮೇಲೇಳಲಿಲ್ಲ.
ಕೊನೆಗೆ ನಾನೇ ಹೋದೆ, ಏನು ನಿನ್ನ ಕಥೆ ಯಾಕೆ ಇತರ ಮಾಡುತ್ತಿದ್ದೀಯಾ ಎಂದು ಕೇಳಿದೆ ಆಗ ಅವಳು ನೋಡು ಮಾಮ ನಾನು ಅಂದೇ ಹೇಳಿದ್ದೆ ನೀನು ಯಾರನ್ನೇ ಮದುವೆಯಾಗು ನಾನು ಮಾತ್ರ ನಿನ್ನನ್ನು ಅಜ್ಜಿಯನ್ನು ಬಿಟ್ಟಿರಲಾರೆ ಅಂದಿದ್ದೆ
ಆ ಪ್ರಕಾರನೀವು ಈ ತಾಳಿಯನ್ನು ಕಟ್ಟಿ ನಿಮ್ಮ ಮನೆಯಲ್ಲಿ ಎಲ್ಲೋ ಒಂದು ಕಡೆ ಇರುತ್ತೆನೆ ಅಂದಳು. ತಕ್ಷಣವೇ ನನ್ನ ಕೈ ಹಿಡಿದಿದ್ದ ನನ್ನ ಸಂಗಾತಿ ತನ್ನ ಕೈಯ ಬೇರ್ಪಡಿಸಿಕೊಂಡು ಅವರಮ್ಮನ ಬಳಿಗೆ ಓಡಿ ಹೋದಳು ಅಳುತ್ತಾ..
…ಅದಕ್ಕೂ ಅವಳೇ ಕಾರಣ…
ಇಂದು ನಾನು ಹಗಲು-ರಾತ್ರಿಯೆನ್ನದೆ ತುಂಬಾ ಶ್ರಮ ವಹಿಸಿ ದುಡಿಯಬೇಕಾಗಿದೆ ಯಾಕೆಂದರೆ
ಅರುಣ, ಕಿರಣ ಅಂತ “ಸಮಾನ “ಮಕ್ಕಳು
ಸೂರ್ಯ, ಚಂದ್ರ , ಭೂವಿ ಅಂತ “ದಿವ್ಯಾನ” ಮಕ್ಕಳು. 5 ಮಕ್ಕಳನ್ನು ಸಾಕುವುದು ಅಂದ್ರೆ ತಮಾಷೆಯ ಅದು ಬೆಂಗಳೂರಿನಲ್ಲಿ
ಆರಾಮಾಗಿ ಇರಬೇಕ್ ಎಂದುಕೊಂಡಿದ್ದೆ ನನ್ನ ಆಸೆ ಪಂಚರ್ ಆಗಿದ್ದಕ್ಕು
…ಅವಳೇ ಕಾರಣ…
-ಮಾಂತೇಶ
ಈ ಡೈರಿಯ ಬರೆದವರುನ್ನು ಹುಡುಕಿ ಇದ್ದನ್ನು ವಾಪಸ್ ಮಾಡುತ್ತೇನೆ ಇನ್ನು ಏನಾದರೂ ಇಂಟರೆಸ್ಟಿಂಗ್ ವಿಷಯಗಳನ್ನು ಬರೆದರು ಬರೆಯಬಹುದು…..