ಸಂದಿಗ್ಧತೆ: ಬಂಡು ಕೋಳಿ

ರಾಂ ಪಹರೆ ಬರೊಬ್ಬರಿ ಐದರ ಅಂಕಿಯ ಮೇಲೆ ಹೊಂದಿಸಿಟ್ಟಿದ್ದ ಅಲರ‍್ಮನೇ ರಿಂಗಣಿಸಿತೇನೋ ಅಂತಿಳಿದು ಬಾಪೂ ನಿದ್ದೆಯಿಂದ ಎಚ್ಚರಾಗಿ ಗೊಣಗುತ್ತ ತಲೆದಿಂಬಿನ ಬುಡಕ್ಕೆ ಕೈಯ್ಯಾಡಿಸಿದ; ಮೊಬೈಲ್ ಕೈಗತ್ತಿತು. ಅದರ ಮಗ್ಗುಲಿನ ಗುಂಡಿಯ ಮೇಲೆ ಹೆಬ್ಬೆಟ್ಟೂ ಹಿಚುಕಿದ. ಮೊಬೈಲ್ ಬಾಯಿ ಬಂದಾತು. ಹಾಳಾದ ಕಿಣಿಕಿಣಿ ಸಪ್ಪಳ ಸುಖ ನಿದ್ದೆಯ ಮಜಾನೆಲ್ಲಾ ಕೆಡಿಸಿತು ಎನ್ನುತ್ತ ಮನಸ್ಸಿನಲ್ಲೇ ಬೈದ. ತನ್ನಿಷ್ಟದ ಭಂಗಿಯಾಗಿದ್ದ ನೆಲದ ಹೊಟ್ಟೆಯ ಮೇಲೆ ಹೊಟ್ಟೆಯೂರಿದ್ದ ನಿದ್ರಾಸನ ಬದಲಿಸಿದ. ಎಡ ಕಪಾಳು ಹೊಳ್ಳಿಸಿ ಬಲಕಿನದು ಊರಿದ. ಸೊಂಟದ ಕೆಳಗ ಜಾರಿದ್ದ ದುಬ್ಟಿಯನ್ನು ಸರಕ್ಕನೆ ಜಗ್ಗಿ ಮಾರಿ ಮುಚ್ಚಿಕೊಂಡ. ಮತ್ತದೇ ಜೋಂಪು. ತುಂಡಾಗಿದ್ದ ಕನಸಿನ ಕೊಂಡಿಯನ್ನು ಮತ್ತೇ ಬೆಸೆಯಲಿಕ್ಕೆ ಪ್ರಯತ್ನ ಮಾಡಿದ. ಇನ್ನೇನು ಕೊಂಡಿ ಬೆಸೆಯಿತು ಅನಬೇಕು ಅಷ್ಟರಲ್ಲಿ ಮತ್ತೇ ಕಿಣಿಕಿಣಿ ಕಿರಿಚಿತು. ‘ಇದ್ರೌವ್ವನ್..!’ ಅಂದವನೇ ಸಿಟ್ಟಿನಿಂದ ಹೊದ್ದಿದ್ದ ದುಬ್ಟಿಯನ್ನು ಜಾಡಿಸಿದ. ಒಮ್ಮಿಂದೊಮ್ಮೆಲೆ ಸಂಶಯ ಕಾಡಿತು. ‘ಅಲಾ! ಇಧ ಅಲರ‍್ಮ ಟೋನ್ ಅಲ್ಲಲಾ!’ ಅನೋದು ನೆನಪಾಗಿ ಅವಕ್ಕಾದ. ಈ ಸರಹೊತ್ತಿನ್ಯಾಗ ಯಾರ್ ಫೋನ್ ಮಾಡ್ಯಾರೋ ಯಪ್ಪಾ? ಅನು ಗಾಬರಿ. ಪೋನಿಗೆ ಮುಖಾಮುಖಿ ಆದ. ತಾನೇ ಫೀಡ್ ಮಾಡಿದ್ದ ‘ಮದರ-ಇನ್-ಲಾ’ ಎನ್ನುವ ಹೆಸರು ಸ್ಕಿçÃನ್ ಮೇಲೆ ಕುಣಿಯುತ್ತಿತ್ತು. ಒಂದು ಗಳಿಗೆ ಅವನ ಎದೆ ಝಲ್ ಅಂದಿತು.

ನಾಲ್ಕು ದಿವಸದ ಹಿಂದಷ್ಟೆ ಪಮ್ಮಿ ಪೋನ್ ಮಾಡಿದ್ದು ನೆನಪಾಯಿತು. ‘‘ಇಧ ವರ‍್ದಾಗ ಡೆಲಿವರಿ ಡೇಟ್ ಕೊಟ್ಟಾರ ಯಾಡ್ಡ ದಿನ್ದಾಗ ಬಂದ ಅಡ್ಮಿಟ್ ಆಗ್ರಿ ಅಂತ ಡಾಕ್ಟç ಹೇಳ್ಯಾರ. ದಿವ್ಸ ತುಂಬಿ ತಿಂಗ್ಳ ಮ್ಯಾಲ ಆಗೇತಿ ಆದ್ರೂ ಡೆಲಿವರಿ ಯಾಕ ಆಗಿಲ್ಲ ಅಂತ ಅವ್ವಾ ಕೇಳಿದ್ದಕ; ಕೂಸಿನ ತಲಿ ಧಾಡ್ಸಿ ಆಗೇತಿ ಮತ್ತ ನೀರೂ ಕಮ್ಮಿ ಆಗ್ಯಾವು, ನರ‍್ಮಲ್ ಆಗೋದು ಡೌಟ್ ಅಂದಾರ’.

ಹೆಂಡತಿ ಅಂದಿದ್ದು ನೆನಪಿಗೆ ಬಂದಿತು. ಯಾವ್ದೋ ಒಂದು ಅಪಶಕುನದ ಅಳಕು ಮನಸ್ಸಿನ ಮೂಲೆಯಲ್ಲಿ ಹರಿದಾಡಿ ಒಂದು ಗಳಿಗೆ ಮೈಯೆಲ್ಲ ಅದರಿತು. ರಿಸೀವರ ಗುಂಡಿ ಒತ್ತಬೇಕೋ ಬೇಡವೋ ಎಂದು ಅನುಮಾನಿಸಿದ. ಆದರೂ ಮನಸು ತಡೆಯಲಿಲ್ಲ, ಹಸಿರು ಗುಂಡಿಯ ಮೇಲೆ ಬಟ್ಟಿಟ್ಟ.

‘‘ತಮ್ಮಾ, ಪಮ್ಮಿಗಿ ಭಾಳ ತ್ರಾಸ ಆಗೇತಿ. ಬ್ಯಾನಿ ಚಾಲೂ ಆಗ್ಯಾವ ಆದ್ರ ಡೆಲಿವರಿ ಆಗವಾಲ್ತು. ಸೂಲ್ಗಿತ್ತಿ ಮಾಯವ್ವಾನೂ ತಾಸ್ತನಾ ಗೊತ್ತಿಕುಡದ್ಳು; ಖರೇ ಯಾನೂ ಭೇಸಿ ಆಗಿಲ್ಲ. ಕಳಿ ಸಂಭಾಳ್ಸಾಕ ಆಗಲ್ದ ಪೋರಿ ಹೆಡ್ಕ ಚೆಲ್ಲಿ ಬಿದೈತಿ. ನನ್ನ ಕೈಕಾಲ ಆಡಲ್ದಂಗ ಆಗ್ಯಾವ. ಬಾಡ್ಗಿ ರಿಕ್ಷಾ ತರಾಕ ಶಂಕ್ರು ಹೋಗ್ಯಾನ ದಾವಾಖಾನಿಗಿ ಹೊಂಟೇವಿ. ಒಂಚೂರ ಲಗೂನ ರ‍್ರಿಪಾ!’’ ಆ ಕಡೆಯಿಂದ ಅತ್ತೆಯ ಆತಂಕದ ಅಳು ಕೇಳಿ ಬಾಪೂನ ಜಂಘಾಬಲವೇ ಅದರಿತು. ಕಣ್ಣಿನ ಪಕಳೆ ತುಂಬಿ ಎರಡು ಹನಿಗಳು ಗಳಕ್ಕಂತ ಜಾರಿದವು. ‘‘ನೀವ್ ದಾವಾಖಾನಿಗಿ ನಡೀರಿ ನಾ ಸಧ್ಯ ಬನ್ನಿ’’ ಅಂತಂದು ಆತಂಕದಲ್ಲಿ ಗೊಂದಲ ಮನಸ್ಕನಾಗಿ ಎದ್ದು ನಿಂತ. ಎದೆಯಲ್ಲಿನ ದುಗುಡ ನಿಲ್ಲುತ್ತಿಲ್ಲ. ಹಾಸಿಗೆ ಮುದುಡಿ ಮಾಡಿ ಮೂಲೆಗಾಣಿಸಿದ. ತಾಬ್ಡತೋಬ ಕರ್ಮಗಳನ್ನು ತೀರಿಸಿಕೊಂಡು ಮೈ ಮೇಲೆ ನಾಕು ಚರಿಗೆ ತಣ್ಣೀರು ಸುರಿದುಕೊಂಡು ತಯ್ಯಾರಾದ.
ತಿಂಗಳ ಹಿಂದಷ್ಟೆ ಪದ್ಮಾಳ ಅವ್ವ ಬಂದಿದ್ದಳು. ‘‘ತಮ್ಮಾ, ಚೊಚ್ಲ ಹಡ್ಯಾನ ತವ್ರ ಮನ್ಯಾಗ ಅನ್ನೋದ ಶಾಸ್ತç. ಬಸ್ರಿ ಬಯ್ಕಿ ಕಳೀಬೇಕಾಗ್ತೆöÊತಿ. ಯೋಳ್ರ್ ಕುಬ್ಸಂತೂ ಮಾಡೋದ ಆಗ್ಲಿಲ್ಲ. ದಿನದ ಕುಬಸ್ಸಾದ್ರೂ ಮಾಡಿ ಬಸ್ರಿ ಶಾಸ್ತç ಮುಗ್ಸತೇವಿ ಅದ್ಕ ಹಚ್ಗೂಡಪಾ’’ ಅಂತಂದಿದ್ದಳು. ಬಾಪೂನಿಗೆ ಹೆಂಡತಿಯನ್ನು ಹೆರಿಗೆಗೆ ತವರು ಮನೆಗೆ ಕಳುಹಿಸುವ ಮನಸ್ಸಿದ್ದಿರಲಿಲ್ಲ; ಆದರೂ ಅತ್ತೆಯ ಜಬರಿಗೆ ಮಣಿಯಬೇಕಾಗಿತ್ತು. ಪಮ್ಮಿ ಸೈತ ‘‘ಹೋಕ್ಕೂನು’’ ಅಂದಿದ್ದಕ್ಕೆ ಬಾಪೂ ಒಲ್ಲದ ಮನಸ್ಸಿನಿಂದ ಅವಳನ್ನು ತವರಿಗೆ ಕಳುಹಿಸಿದ್ದ.

ದಿನ ತುಂಬಿದ್ದ ಬಸಿರು ಹೆಂಡತಿ ಹೋಗಿದ್ದೇ ಹೋಗಿದ್ದು, ಬಾಪೂನಿಗೆ ಎದೆಯಲ್ಲಿ ಎದೆ ಇದ್ದಿರಲಿಲ್ಲ. ತಿಂದ ಕೂಳು ಸಿವಿ ಹತ್ತಿರಲಿಲ್ಲ. ಹೆಂಡತಿಯ ಕಾಳ್ಜಿ ಅವನನ್ನು ಒಳಗೊಳಗೇ ಕೊರೆಯಲು ಸುರುಮಾಡಿತ್ತು. ರಾತ್ರಿ ನಿದ್ದೆಯಲ್ಲಿ ಎಂಥೆಂಥದ್ದೋ ಕಸುಗಳು ಬೆಚ್ಚಿ ಬೀಳಿಸಲು ಹಿಡಿದಿದ್ದವು. ‘‘ನಾ ಇಲ್ಲಿ ಅರಾಮ ಅದೂನ್ ನೀವ್ಯಾನೂ ಚಿಂತಿ ಮಾಡಾಕ ಹೋಗಬ್ಯಾಡ್ರಿ’’ ಎನ್ನುವ ಪದ್ಮಾಳ ಮಾತುಗಳನ್ನು ಫೋನಿನಲ್ಲಿ ಕೇಳಿದ ಬಳಿಕ ರಾತ್ರಿ ಒಂದೆರಡು ಗಳಿಗೆ ಕಣ್ಣು ಹತ್ತುತ್ತಿತ್ತು.
ಪದ್ಮಾಳ ಬೆನ್ನ ಮೇಲೆ ನಿರ್ಮಲ ಮತ್ತು ಶಂಕ್ರು ಹುಟ್ಟಿದ ಬಳಿಕ ಅಪ್ಪನಿಗೆÀ ಭೂಮಿಯ ಹಂಗು ಹರಿದಿತ್ತು. ಮನೆಯ ಹರ‍್ಯಾನs ಹೋದ ಬಳಿಕ ನಿಂಗವ್ವನಿಗೆ ಮನೆಯ ತೊಲಿಗಂಬ ಕತ್ತರಿಸಿ ತಲೆ ಮೇಲೆ ಬಿದ್ದಂತೆ ಆಗಿತ್ತು. ಪದರಾಗ ಮೂರು ಕೂಸುಗಳನ್ನು ಕಟ್ಟಿಕೊಂಡು ಅವುತರ ಹೊಟ್ಟೆ ನೆತ್ತಿ ಕಟ್ಟಿ ಇಷ್ಟು ವರ್ಷ ಜ್ವಾಕಿ ಮಾಡಬೇಕಾದರೆ ನಿಂಗವ್ವನಿಗೆ ಏಳು ಜಲ್ಮದ ಶಾಪಗಳೆಲ್ಲ ನೆನಪಾಗಿದ್ದವು. ‘ಮಕ್ಳಾದು ಭಾಳ ಮನ್ಯಾಗಿಲ್ಲ ಜ್ವಾಳ’ ಎನ್ನುವ ಮಾತಿನಂತೆ ಬರೀ ನಿಂಗವ್ವನ ಹೆಣ್ಣಾಳು ದುಡಿಮೆಗೆ ತಿನ್ನುವ ನಾಲ್ಕು ಬಾಯಿಗಳ ಕಾವು ಆರಿಸುವಷ್ಟು ತಾಕತ್ತು ಇದ್ದಿರಲಿಲ್ಲ. ಪರಾದ ವಯಸ್ಸಿಗೆ ಬಂದಿದ್ದ ಪೋರಿಗಳು ಮತ್ತೊಬ್ಬರ ಹೊಲದ ಬೋದು ಕೆತ್ತುತ್ತಿದ್ದರೆ ಹೆತ್ತ ಕಳ್ಳಿಗೆ ಕೊಳ್ಳಿ ಇಟ್ಟಂತೆ ಆಗುತ್ತಿತ್ತು. ಅದರೂ ನರ‍್ವಾ ಅಂತೂ ಇದ್ದಿರಲಿಲ್ಲ.

ಸಂತೆಯಲ್ಲಿ ಒಂದ್ಸಲ ಬಾಪೂ ಪಮ್ಮಿಯನ್ನು ನೋಡಿದ್ದ. ಗಂಧದ ಕಡ್ಡಿಯಿಂದ ತೀಡಿದಂತೆ ಸಬಳ ಮೈಮಾಟದ ಚಂದಾನ ಚೆಲ್ವಿ ಪಮ್ಮಿ. ಆಕೆಯ ರೂಪ ಹುಣ್ವಿ ಚಂದ್ರಾಮನ ಪ್ರತಿರೂಪ ಆಗಿತ್ತು. ಬಾಪೂನಿಗೆ ಆಕೆಯ ಮಾರಿಯ ಮೇಲಿನ ಕಳೇ ಕಣ್ಣು ಕುಕ್ಕಿತ್ತು ಹೊರತಾಗಿ ಅಕೆ ಉಟ್ಟಿದ್ದ ಲಂಗಾ ದಾವನಿಯ ಮೇಲಿದ್ದ ತೂತುಗಳಿಗೆ ಅದೆಷ್ಟು ತ್ಯಾಪಿಗಳು ಮೆತ್ತಿದ್ದವು ಅನೋದು ಕಾಣಿಸಿರಲಿಲ್ಲ. ಬಾಪೂನ ಮನಸ್ಸಿನಲ್ಲಿ ಅವಳ ಮುಗ್ದ ಮಾರಿಯು ಹಂಚಿಯ ಬಟ್ಟಿನಂತೆ ತೀಡಿಬಿಟ್ಟಿತ್ತು. ಒಂದಿಬ್ಬರು ಹಿರಿ ದೋಸ್ತರ ಕಡೆಯಿಂದ ತಪಾಸು ತಗೆಯಿಸಿ ಪಮ್ಮಿಯನ್ನು ಲಗ್ನ ಆಗುವ ನಿರೂಪ ಮುಟ್ಟಿಸಿದ್ದ. ಹೈಸ್ಕೂಲ್ ಮಾಸ್ರ‍್ಕಿ ಕೋರ್ಸ ಮಾಡಿದ್ದ ಹುಡಗನ ಮನೆ ಬಂದೈತಿ ಅನೋದು ಗೊತ್ತಾಗಿ ನಿಂಗವ್ವ ನಿಂತ ಜಾಗದಲ್ಲಿ ನಿಂತಂತೆ ಕುಣಿದಾಡಿದ್ದಳು.
ಬರೀ ಮಾಸ್ತರ ಅನೋದು ಅಷ್ಟೇ ಗೊತ್ತಿತ್ತು ಹೊರತಾಗಿ ಸರಕಾರಿ ಅಥವಾ ಖಾಸಿಗಿ ಎನ್ನುವ ಯಾವುದೇ ಚೌಕಾಸಿಯ ಗುಮ್ಮಿಗೆ ಹೋಗಿರಲಿಲ್ಲ ನಿಂಗವ್ವ. ಬಿಟ್ಟರೆ ಕೆಟ್ಟೀನು ಅಂತಿಳಿದು ತಾಬ್ಡತೋಬ ಪಮ್ಮಿಯ ಕೈಯನ್ನು ಬಾಪೂನ ಕೈಲಿಟ್ಟು ಕೈ ತೊಳೆದುಕೊಂಡಿದ್ದಳು.
ಬಾಪೂನ ಮನಸ್ಸಿನಲ್ಲಿ ಪಮ್ಮಿಯ ಚೆಲುವು ಕುಂತು ಬಿಟ್ಟಿತ್ತು, ಆದರೆ ಅವ್ವನಿಗೆ ಮಾತ್ರ ಆಕೆಯ ಕುಂಡಿಲಿಯ ಚಿಂತೆಯೇ ಕಾಡಲು ಸುರುಮಾಡಿತ್ತು. ಅವಳು ಭಡಜೀಯ ಕಡೆಯಿಂದ ಹೊತ್ತಿಗೆ ತಗೆಸಿ ಚೌಕಾಸಿ ಮಾಡಿದ್ದಳು. ವರಾ ಕೂಡ್ತೆöÊತಿ ಆದರೆ ಸುಖಾ ಮಾತ್ರ ಕನಸ್ ಆದೋತು ಅಂದಿದ್ದ ಭಡಜೀ. ಆ ಮಾತಿಗೆ ಕಳವಳಿಸಿದ್ದಳು. ಅವ್ವ ಅದೆಷ್ಟೇ ಒಡಕುಟ್ಟಿದರೂ ಬಾಪೂ ಹಟಕ್ಕೆ ಬಿದ್ದು ಪಮ್ಮಿಯನ್ನು ಹೆಂಡತಿ ಮಾಡಿಕೊಂಡು ಮನೆಗೆ ತಂದಿದ್ದ.

‘ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು’ ಎನುವಂತೆ ಬರರ‍್ತಾ ಅತ್ತೆ ಸೊಸೆಯರ ಸಾರ್ವತ್ರಿಕ ಸಂಪ್ರದಾಯ ಬಾಪೂನ ಮನೇಯಲ್ಲೂ ಚಾಲೂ ಆಗಿತ್ತು. ಅದಕ್ಕೆ ಒಂದು ಅಸಲು ಕಾರಣ ಸೈತ ಇತ್ತು. ಲಗ್ನಾಗಿ ಎರಡು ವರ್ಷ ಆಗುತ್ತ ಬಂದಿದ್ರೂ ಪಮ್ಮಿಗೆ ಮುಟ್ಟು ನಿಂತಿಲ್ಲ ಅನೋದು ಆಗಿತ್ತು. ‘ಬ್ಯಾಡ ಬ್ಯಾಡ ಅಂತ ಶಂಖಾ ಹಚ್ಚಿದ್ರೂ ನನ್ನ ಮಾತ್ನಾ ಕಿಮ್ಮತ್ತಗೇಡಿ ಮಾಡಿ ಬಿಕನಾಸಿ ಗೊಡ್ಡ ಹೆಂಗ್ಸನಾ ಮಾಡ್ಕೊಂಡ ತಂದಾನ ಭಾಡ್ಯಾ. ಯಾಡ್ಡ ಯಾಡ್ಡೂವರಿ ರ‍್ಸ ಆದ್ರೂ ಇಕಿ ಬಸ್ರ ಕಟ್ಟವಾತು. ‘ಬಂಜೇರ’ ಅನು ಪದವಿ ನಮ್ಮ ವೋಸಕ್ಕ ಹೊಸಾದ್ಯಾನಲ್ಲ. ‘ಮನಿ ಹೆಸ್ರೂ’ ಅದ ಆಗೇತಲ್ಲ. ಹಂತಾದ್ರಾಗ ಇದೂ ಒಂದ ಹಿಂತಾಧ ಸಿಗ್ಬೇಕ? ಸುಡ್ಲಿ ವೋದ’ ಅಂತೇಳಿ ಪಮ್ಮಿನ ಅತ್ತೆ ಓಣಿಯ ಹೆಂಗಸರ ಮುಂದೆಲ್ಲ ಪಮ್ಮಿಗೆ ಮಕ್ಕಳು ಆಗುತ್ತಿಲ್ಲ ಎನ್ನುವ ಸುದ್ದಿಯನ್ನು ಜಾಹೀರು ಮಾಡುತ್ತ ತಿರುಗಾಡಿದ್ದಳು.

ಸಹನೆ ತಿನ್ನುವರೆಗೆ ತಿಂದು ಕಡೆಗೆ ಪಮ್ಮಿನೂ ತಲೆ ಜಾಡಿಸಿ ಗಟ್ಟಿಯಾಗಿದ್ದಳು. ತಾಳ್ಮೆಗೂ ಒಂದು ಮಿತಿ ಇರುತ್ತದೆ ಅದು ಮೀರಿದರೆ ಎಂತಹ ಇರುವೆ ಕೂಡ ತಿರುಗಿ ನಿಲ್ಲುತ್ತದೆ. ‘‘ನಂಗ ನಿಮ್ಮವ್ವನ ಗುಡೆ ಈ ಮನ್ಯಾಗ ಇರೋದ ಆಗುಲ್ಲ. ಬ್ಯಾರಿ ಮನಿ ಮಾಡ್ರಿ ಇಲ್ದಿದ್ರ ನಾ ನಮ್ಮವ್ವನ ಮನಿಗಿ ಹೊಕ್ಕೂನ’’ ಅಂತಂದು ಪಮ್ಮಿ ಗಂಡನ ಮುಂದೆ ಅಟ್ಟಿ ಹಿಡಿದಿದ್ದಳು. ಬಾಪೂನಿಗೆ ಧರ್ಮ ಸಂಕಟ. ಹೆಂಡತಿಗೆ ಸಮಾಧಾನ ಹೇಳಲು ಅಗದೆ; ಅವ್ವನನ್ನು ಗದರಿಸಲೂ ಆಗದೆ ಒದ್ದಾಡಿದ್ದ. ಕಡೆಗೆ ಹೆಂಡತಿಯ ಮೇಲಿನ ಲಬ್ದಿಗೆ ಸೋತಿದ್ದ. ಅವಳನ್ನು ಕರೆದುಕೊಂಡು ಸಿಟಿಗೆ ಬಂದು ಬಿಟ್ಟಿದ್ದ. ಅಲ್ಲೇ ಒಂದು ಖಾಸಗಿ ಶಾಲೆಯಲ್ಲಿ ತಿಂಗಳಿಗೆ ಎಂಟು ಸಾವಿರ ಪಗಾರ ತರುವ ಮಾಸ್ರ‍್ಕಿ ಮಾಡುತ್ತ ಸಂಸಾರ ಹೂಡಿದ್ದ.
ಇಬ್ಬರೇ ಇರುವ ಸಂಸಾರಕ್ಕೆ ಎಂಟು ಸಾವಿರ ಬಾಪೂನಿಗೆ ಕಮ್ಮಿ ಅನಿಸಿರಲಿಲ್ಲ. ಆದರೆ ತನ್ನ ಮೇಲೆ ಜೀವವೇ ಇಟ್ಟುಕೊಂಡಿದ್ದ ತನ್ನ ಅವ್ವ ಮತ್ತು ಅಪ್ಪನ ಪರಿಸ್ಥಿತಿ ಬಾಪೂನ ಮುಗ್ದ ಮನಸ್ಸನ್ನು ಹಿಂಸಿಸಲು ಹಿಡಿದಿತ್ತು. ದುಡಿದು ಮನೆಯನ್ನು ನಿಲ್ಲಿಸಿದ್ದ ಅಪ್ಪನಿಗೂ ವಯಸ್ಸಾಗಿತ್ತು. ಒಂದಿನ ಊರ ಗೌಡರ ಹೊಲದಲ್ಲಿ ಜಾಲಿಮರ ಕಡಿಯುವಾಗ ಎದೆಯಲ್ಲಿ ಚುಚ್ಚಿದಂತಾಗಿ ಕಣ್ಣಿಗೆ ಕತ್ತಲೆ ಬಂದು ಬಿದ್ದು ಬಿಟ್ಟಿದ್ದ. ಸರೀಕ ಕೂಲಿ ಮಂದಿ ಹೊತ್ತುಕೊಂಡು ಹೋಗಿ ದಾವಾಖಾನೆಗೆ ಸೇರಿಸಿದ್ದರು. ಅಪ್ಪನಿಗೆ ಹರ‍್ಟ ಅಟ್ಯಾಕ ಆಗಿದೆ ಎನ್ನುವ ಸುದ್ದಿ ಕೇಳಿ ಬಾಪೂ ಗಾಬಿರಿ ಬಿದ್ದು ಓಡೋಡಿ ಬಂದಿದ್ದ. ಮಿರಜ ಶಹರಿನ ದವಾಖಾನೆಯಲ್ಲಿ ವಾರಗಟ್ಟಲೆ ಅಡ್ಮಿಟ್ ಮಾಡಿ ಎಂಜೋಪ್ಲಾಸ್ಟ ಮಾಡಿಸಿದ್ದ. ಹಸಿರು ಪಡಿತರ ಕಾರ್ಡು ಇದ್ದಿದ್ದರಿಂದ ಆಫರೇಷನ್ ಪುಕ್ಕಟ್ಟೆ ಆಗಿತ್ತು; ಅದರ ಜೊತೆ ತನ್ನ ಕಿಸೆಯಿಂದಲೂ ಸಾವಿರಾರು ರೊಕ್ಕಾನೂ ಖರ್ಚು ಮಾಡಿದ್ದ.

ಈಕಡೆ ಪಮ್ಮಿಯ ಅವ್ವನ ಮನೆ ಪರಿಸ್ಥಿತಿಯೂ ಬೇರೆ ಇದ್ದಿರಲಿಲ್ಲ. ಹತ್ತು ಹದಿನೈದು ವರ್ಷದ ತನಕ ದುಡಿದು ಗಂಟು ಮಾಡಿದ್ದನ್ನೆಲ್ಲ ಹಿರಿ ಮಗಳ ಲಗ್ನಕ್ಕೆ ಅಂತೇಳಿ ಸುರಿದು ನಿಂಗವ್ವನ ಕೈನೂ ಖಾಲಿಯಾಗಿತ್ತು. ಒಬ್ಬ ಮಗಳ ದುಡಿಮೆನೂ ಕಮ್ಮಿಯಾಗಿ ಮೂರು ಮಂದಿಯ ಹೊಟ್ಟೆಹೊರೆ ದುಸ್ತರವಾಗಿತ್ತು. ಅಳಿಯ ಹೈಸ್ಕೂಲ್ ಮಾಸ್ತರ್ ಅಂತಿಳಿದು ತಿಂಗಳಿಗೋ ಅಥವಾ ಎರಡು ತಿಂಗಳಿಗೋ ಒಮ್ಮೊಮ್ಮೆ ಮಗಳನ್ನು ನೋಡಿಕೊಂಡು ಬರುವ ನೆವ ಮಾಡಿ ಸಿಟಿಗೆ ಬರುತ್ತಿದ್ದಳು. ಹೊಡಮಳ್ಳಿ ಹೋಗುವಾಗ ಮನೆಯ ಕಷ್ಟ ಹೇಳಿಕೊಂಡು ಕಣ್ಣೀರು ತೆಗೆಯುತ್ತಿದ್ದಳು. ಮಗಳ ಹವಾಲ್ತಿಯಲ್ಲಿ ಐದುನೂರೋ ಅಥವಾ ಸಾವಿರೋ ಕಡ್ನಾ ಅಂತೇಳಿ ಇಸಿದುಕೊಂಡು ಹೋಗುತ್ತಿದ್ದಳು. ಬಾಪೂ ‘ಗರ‍್ಯಾಳ್ಕ ಹ್ವಾದ ಹೆಣಾ ಬೀರ‍್ಗಿ ಕೊಟ್ಟ ಹಣಾ ಯಾಡ್ಡೂ ಒಂದs’ ಎನ್ನುವ ಮಾತನ್ನು ನೆನೆಪಿಸಿಕೊಳ್ಳುತ್ತ ಗಟ್ಟಿಯಾಗುತ್ತಿದ್ದ. ಹೆಂಡತಿಯ ತವರಿನ ತಾಪತ್ರೆಗೆ ತನ್ನ ಕಡೆಯಿಂದ ಇಷ್ಟು ಮಜೂತು ಅಂತಿಳಿದು ಸುಮ್ಮನಾಗುತ್ತಿದ್ದ.

ಬಾಪೂ ಕೋಲಿಯ ಹೊರಸಿಲು ದಾಟಿ ಬಾಗಿಲಿಗೆ ಕೀಲಿ ಜಡಿದ. ಚಪ್ಪಲಿ ಸಿಕ್ಕಿಸಿಕೊಂಡು ಇನ್ನೇನು ಹೆಜ್ಜೆ ಕಿತ್ತಬೇಕು ಎನ್ನುವಷ್ಟರಲ್ಲಿ ಮನೆಯ ಓನರ್ ಎದುರಿಗೆ ಬಂದ. ‘‘ಅಲಾ ಇವ್ನ, ಇಷ್ಟ ರ‍್ಯಾ ರ‍್ಯಾಗ ಇಂವ್ಯಾಕ ತೆಳಗ ಬಂದ್ನೋ ಯಪ್ಪಾ!’’ ಎಂದು ಬಡಬಡಿಸುತ್ತ ಓನರನ ಸಿಡಕು ಮಾರಿ ನೋಡಿದ. ಅವನಿಗೆ ಸಂಶಯ ಬಂದಿತು. ಮನೆ ಬಾಡಿಗೆ ಕಟ್ಟಿ ತಿಂಗಳ ಮೇಲಾಗಿತ್ತು. ‘ಇನ್ನೂ ಪಗಾರ ಆಗಿಲ್ಲ, ಆದ ಬಳ್ಕ ಪಹಲೇ ನಿಮ್ಮ ಬಾಡ್ಗೀನs ಕಟ್ತುನರಿ’ ಅಂತೇಳಿ ಮತ್ತೊಂದು ವಾರದ ವಾಯಿದೆ ಕೇಳಿದ್ದ. ಎರಡು ದಿನದ ಹಿಂದಷ್ಟೆ ಪೇಮೇಂಟ್ ಬೈಹ್ಯಾಂಡ ಆಗಿತ್ತು. ನಾಳೆಗೆ ಬಾಡಿಗೆ ಕಟ್ಟಿದರಾಯ್ತು ಬಿಡು ಅಂತಂದು ಉಪೇಕ್ಷೆ ಮಾಡಿದ್ದ. ಆದರೆ ಅದೇ ಸಂಜೆಗೆ ಊರಿಂದ ಫೋನ್ ಬಂದಿತ್ತು.
‘‘ನಿಮ್ಮಪ್ಪಾಗ ಮತ್ತ ಎದಿ ನೂವ್ ಜಾಸ್ತಿ ಆಗೇತಿ. ದಾವಾಖಾನಿಗಿ ಒಯ್ಯಬೇಕಾಗೇತಿ ಲೌಕರ ಬಂದ್ಬಿಡ’’ ಅವ್ವ ತುಸು ಬಿರುಸಾಗೇ ಅವಾಜು ಮಾಡಿ ರೇಗಿದ್ದಳು. ಬಾಪೂನಿಗೆ ಕಳವಳ ಹೆಚ್ಚಾಗಿ ಮೂರು ಸಂಜೆಯ ಗಾಡಿ ಏರೇ ಬಿಟ್ಟಿದ್ದ.

ಊರಿಗೆ ಹೋದ ಬಳಿಕ ಗೊತ್ತಾಗಿತ್ತು; ಅಪ್ಪ ನೆಟ್ಟಗೆ ಔಷಧಿ ಪಂತೆಯನ್ನು ಮಾಡದೇ ಇದ್ದಿದ್ದಕ್ಕೆ ಎದೆ ನೋವು ಹೆಚ್ಚಾಗಿತ್ತು ಅನೋದು. ಅಪ್ಪನೂ ಒಂತರಹ ಹುಂಬ. ಒಂದೆರಡು ದಿನ ಭೇಷಿ ಅನಿಸಿದರೆ ಸಾಕು ಔಷಧಿಯನ್ನು ನುಂಗುವುದನ್ನೇ ನಿಲ್ಲಿಸಿ ಬಿಡುತ್ತಿದ್ದ. ಬಸವ್ವ ಅದೆಷ್ಟೇ ಲಬ್ಬಿ ಹಚ್ಚಿದರೂ ಕೇಳುವ ಭೂಪನಲ್ಲ. ‘‘ನಂಗ್ಯಾನ ಆಗೇತಿ ಗುಳಿಗಿ ನುಂಗಾಕ? ಅರಾಮs ಅದುನ್ಲಾ? ಗುಳ್ಗಿ ಬಿಟ್ರ ಯಾನ್ ಸಾಯ್ತುನು? ಡಾಕ್ಟç ಮಕ್ಳೆಲ್ಲಾ ಹಂಗ ಹೇಳ್ತಾರ ಅವ್ರದ್ಯಾನ ನೂಸ್ತೀತಿ? ಅವ್ರ ಗುಳ್ಗಿ ಯಾಪಾರ ನಡೀಬೇಕ್ಲಾ ನಮ್ಮಂಥಾವ್ರನ್ನ ಸುಲಿಗಿ ಮಾಡಲ್ದ ಮತ್ತಾö್ಯನ ಮಾಡ್ಯಾರು? ಹಿಂಗs ದುಡದಿದ್ನೆಲ್ಲ ತಂದ ಸುರೀರಿ ಅಂತಾರ. ನಾ ಯಾನ್ ಇಷ್ಟ ಲೌಕರ ಸಾಯುಲ್ಲ ನೀ ಬಾಯ್ಮುಚ್ಕೊಂಡ ಸುಮ್ಮಿರ’’ ಅಂತಂದು ದೇಶಾವರಿ ಮಾತಾಡಿ ಹೆಂಡತಿಯ ಬಾಯಿ ಬಡಿಯುತ್ತಿದ್ದ. ಹೆಚ್ಚು ಕಡಿಮೆ ತ್ರಾಸು ಆದಾಗ ಮಾತ್ರ ನೆಲ ಮುಗಿಲು ಒಂದು ಮಾಡಿ ಎಲ್ಲರನ್ನು ಹೌಹಾರಿಸುತ್ತಿದ್ದ.

ಬಾಪೂ ಮನೆಗೆ ಹೋದಾಗ ಕಾಳ್ಜಿಯಿಂದ ಅಪ್ಪನನ್ನು ತುಸು ಗದರಿದ್ದ. ಅದಕ್ಕೆ ಅಪ್ಪ, ‘‘ಹೂಂ ದೊಡ್ಡಾವ್ರ ಆಗೇರಿ, ಅಪ್ಪಗ ಗದರುವಷ್ಟ ಶ್ಯಾಣ್ಯಾನೂ ಆಗೇರಿ. ಅನ್ರಿಪಾ ಅನ್ರಿ. ದುಡ್ದ ನಮ್ಮ ಹೊಟ್ಟಿಗಿ ಹಾಕಿ ಸಾಕಾಕ್ಹತ್ತೀರಿ ನೋಡ; ಅನಲ್ದ ಮತ್ತಾö್ಯನ ಮಾಡೀರಿ? ನಾ ಸೆಟದ ಹ್ವಾದ್ರನs ನಿಮ್ಗ ಸಮಾಧಾನ ಹೌಂದಿಲ್ಲ?’’ ಅಂದಿದ್ದ.
ಅಪ್ಪನ ಅಸಂಬದ್ಧ ಅಳಾಪ ಕೇಳಿ ಬಾಪೂನಿಗೆ ಸಹಜ ಸಿಟ್ಟೇರಿತ್ತು. ಆದರೆ ಅವನ ತಿಳಿವಳಿಕೆ ಮತ್ತು ತಾಳ್ಮೆ ಎಚ್ಚರಾಗಿ, ‘ಆರವತ್ತಕ್ಕೆ ಅರು ಮರುವು’ ಅಂತಿಳಿದು ತನ್ನಷ್ಟಕ್ಕೆ ತಾನೇ ಸಮಾಧಾನಿಸಿಕೊಂಡಿದ್ದ. ಅಪ್ಪನ ಅಸಂಬದ್ಧತೆಗೆ ಸಿಡುಕಿ ತಾನೂ ಹಾಗೇ ಮಾಡುವುದು ಸರಿಯಲ್ಲವೆಂದು ಸುಮ್ಮನಾಗಿದ್ದ.

ಮತ್ತೇ ನಾಕಾರು ಟೆಸ್ಟು; ಎಕ್ಷರೇ, ಇಸಿಜಿ, ಸಲಾಯಿನ್ ಹೀಗೆ ಬಾಪೂನ ಕಿಸೇಗೆ ಹತ್ತಿರ ಹತ್ತಿರ ಒಂದು ಸಾವಿರ ಕತ್ತರಿ ಬಿದ್ದಿತ್ತು. ಊರಿಗೆ ತಿರುಗುವ ಹೊತ್ತಿನಲ್ಲಿ ಮನೆಯ ಖರ್ಚಿಗೆಂದು ಅವ್ವನ ಕೈಗೆ ಸಾವಿರ ಇಟ್ಟು ಬಂದಿದ್ದ. ಎಂಟರ ಗಂಟು ಕರಗಿ ಆರಕ್ಕೆ ಇಳಿದಿತ್ತು. ಹದಿನೈದ್ ನೂರು ಮನೆ ಬಾಡಿಗೆ ಕಟ್ಟಿದರೆ ನಾಲ್ಕೂವರೆ ಮಿಕ್ಕಂತಾಗಿ, ತಿಂಗಳ ತನಕ ನಿವಾಂತ ಜಗ್ಗಬೌದೆಂದು ದೇನಿಸಿದ್ದ. ಆದರೆ ರಾಂ ಪಹರೆ ಹೊತ್ತಿನಲ್ಲಿ ಹೆಂಡತಿಯ ಸುದ್ದಿ ಕೇಳಿ ದಿಗಿಲು ಬಡಿದು ದಿಮ್ಮಾಗಿ ಹೋಗಿದ್ದ. ಸಧ್ಯ ರೊಕ್ಕದ ಕಿಸೇಗೆ ಹೊಲಿಗೆ ಹಾಕಿ ಕುಂತಿದ್ದ. ಆದರೆ ಓನರ್‌ನ ಸಿಡುಕು ಮಾರಿಯನ್ನು ನೋಡಿ ತಳಮಳಿಸಿದ್ದ. ಬಾಡಿಗೆ ಕಟ್ಟದಿದ್ದರೆ ಮತ್ತೇನಾದರೂ ಅನಘಡ ಆದೀತು ಎಂದು ಅಂದಾಜಿಸಿ ತನ್ನ ಕೆಸೇಯ ಹೊಲಿಗೆಯನ್ನು ಬಿಚ್ಚಿದ. ನೋಟು ಹಿರಿದು ಓನರನ ಕೈಲಿಟ್ಟ. ಓನರ ಹಲ್ಲು ಕಿಸಿದ; ಬಾಪೂ ಕಿರಿಲಿಲ್ಲ.
ಲಗಲಗ ಬಸ್‌ಸ್ಟಾö್ಯಂಡ ಹಾದಿ ತುಳಿದ.
ದಾವಾಖಾನೆಗೆ ಬಂದಾಗ ಬಾಪೂನಿಗೆ ಸಿಡಿಲು ಬಡಿಯುವ ಸುದ್ದಿಯೊಂದು ಕಾದು ಕುಳಿತ್ತಿತ್ತು. ಪದ್ಮಾನ ಹೊಟ್ಟೆಯಲ್ಲಿ ಕೂಸು ಸುರುಳಿ ಸುತ್ತಿ ಕರುಳಿಗೆ ತಿಡಿ ಬಿದ್ದಿದೆ ಎನುವ ಮಾತು ಡಾಕ್ಟರನ ಬಾಯಿಂದ ಕೇಳಿ ಮೈಯೆಲ್ಲ ಅದರಿ ಗಾರಚೋಳ ಆಯಿತು. ಮೈಯೀನ ರಕ್ತವೆಲ್ಲ ನೆತ್ತಿಗೇರಿ ಕಾಲಲ್ಲಿನ ಶಕ್ತಿಯೇ ಕುಸಿದಂತಾಗಿ ಹಣೆ ಮೇಲೆ ಹನಿಗಳು ಉಬ್ಬಿ ನಿಂತವು.
‘‘ನರ‍್ಮಲ್ ಡೆಲಿವರಿಯಂತೂ ಸಾಧ್ಯವೇ ಇಲ್ಲ. ಸಿಸೇರಿನ್ ಮಾಡಿದ್ರೂ ಇಬ್ಬರಲ್ಲಿ ಒಬ್ಬರನ್ನು ಉಳಿಸಾಕ ಆಗತೈತಿ. ಕೂಸಿನ ಜೋಡಿ ರ‍್ಭ ಚೀಲಾನೂ ತೆಗಿಬೇಕಾಗತೈತಿ. ಟೈಮ್ ಈಸ್ ಶರ‍್ಟ್ ಡಿಸೈಡ್ ಇಮ್ಮಿಜೇಟ್ಲಿ’’ ಅಂತಂದು ಡಾಕ್ಟುç ನೆತ್ತಿಯ ಮೇಲೆ ಕುಡುಗೋಲು ಇಟ್ಟಂತೆ ಮಾತಾಡಿದ.

ಬಾಪೂವಿನ ಮನಸು ಅಡಕೊತ್ತಿನಲ್ಲಿ ಸಿಕ್ಕು ಒದ್ದಾಡಿತು.
ನಿಂಗವ್ವಳಿಗೆ ಮಾತ್ರ ಏನೊಂದೂ ಗೊತ್ತಿಲ್ಲ.
‘‘ಹೆಂಗಾರೆ ಮಾಡಿ ನರ‍್ಮಲ್ ಮಾಡ್ರಿ ಸಾಹೇಬ್ರ, ನಿಮ್ಗ ಕಾಲಿಗಿ ಬೀಳ್ತೂನು’’ ಅಂತಂದು ಗೋಳಾಡುತ್ತಿತ್ತು ಮುದುಕಿ. ಆಕೆಯ ಒರಾತದ ಹಿಂದಿದ್ದ ಕಾರಣ ಒಂದೇ, ‘ಆಪರೇಶನ್ ಮಾಡಿದರೆ ಕಂಡಾಪ್ಪಟ್ಟಿ ಬಿಲ್ ಮಾಡ್ತಾರ ಎಲ್ಲೇದ ತರೋದು? ದುಡಿದಿದ್ದೆಲ್ಲಾ ಯಾಡ್ಡ ಹೊತ್ತಿನ ಕೂಳಿಗೂ ಸಾಕಾಗ್ವಾತು, ಅಂಥಾದ್ರಾಗ ಅಪ್ರೇಶನ್ ಬಿಲ್ ಯಾರ ಕುಡಾವ್ರು?’ ಅನೋದು ಚಿಂತೆಯಾಗಿತ್ತು. ಅದೇ ಚಿಂತೆಯಲ್ಲಿ ಮೊದಲೇ ಬಂದು ಅಡ್ಮಿಟ್ ಆಗರಿ ಅಂತಂದು ಡಾಕ್ಟರು ಡೇಟ್ ಕೊಟ್ಟಿದ್ದರೂ ಸೈತ ಮನೆಯಲ್ಲೇ ಡೆಲಿವರಿ ಮಾಡಿಸುವ ಉಮೇದಿನಿಂದ ಗೊತ್ತಿಕುಡಿದಿದ್ದಳು ನಿಂಗವ್ವ.
ಪಾಪಾ ಈಗ ಪಮ್ಮಿಯ ಪರಿಸ್ಥಿತಿ ಏನಾಗಿದೆ ಎನ್ನುವ ಖರೇ ಹಕೀಕತ್ತು ಸೈತ್ ಮುದುಕಿಗೆ ಗೊತ್ತಿಲ್ಲ.

ಬಾಪೂ ಅಲ್ಲೇ ಒಂದು ಬಾಕಿನ ಮೇಲೆ ಕುಸಿದು ಕುಂತ. ಅವನಿಗೆ ದಿಕ್ಕೇ ತೋಚಲಿಲ್ಲ. ಹೆಂಡತಿ ಬೇಕೋ ಅಥವಾ ಕೂಸು ಬೇಕೋ ಎಂಬ ಆಯ್ಕೆ ಅವನನ್ನು ಇಡಿಯಾಗಿ ಹಿಡಿದು ಗೋಳಾಡಿಸಿತು. ತುಸು ಹೊತ್ತು ಕಣ್ರೆಪ್ಪೆ ಮುಚ್ಚಿ ಹಿಂದಿದ್ದ ಗೋಡೆಗೆ ತಲೆಕೊಟ್ಟ. ಕಣ್ಣಿಂದ ಬಿಸಿ ಹನಿಗಳು ಟಿಬಕಿಸಲು ಹಿಡದವು. ಒಂದೊಂದು ಹನಿಯಲ್ಲೂ ಪಮ್ಮಿಯ ಬಗೆಗಿನ ಕಾಳ್ಜೀ, ದುಗುಡ ಹಾಗೆಯೇ ಜಾರುತ್ತಿತ್ತು. ತಾನಾಗೇ ಬೇಕೂಂತ ದುಂಬಾಲು ಬಿದ್ದು ಕೈಹಿಡಿದಿದ್ದ ಹೆಣ್ಣನ್ನು ಬಿಟ್ಟು ಬದುಕುವುದಾದರೂ ಹೇಗೆ? ಎನ್ನುವ ಕಲ್ಪನೆ ಸೈತ ಅವನ ಎದೆಯನ್ನು ಹಿಂಡಲು ಸುರುಮಾಡಿತು.

ಮದುವೆಯಾದ ಎರಡು ವರ್ಷದ ತನಕ ಪಮ್ಮಿ ಬಸಿರಾಗಿದ್ದಿಲ್ಲಲಾ, ಹೀಗಾಗಿ ಬಾಪೂನ ಅವ್ವ ಕಿರಿಕಿರಿ ಮಾಡಿದ್ದಳು. ಬಾಪೂ ಅವ್ವನ ಮಾತಿಗೆ ಕಿವಿ ಮುಚ್ಚಿದ್ದ. ಬಸವ್ವಳಿಗೂ ಸೈತ ಲಗ್ನಾಗಿ ಹತ್ತು ವರ್ಷದ ಮೇಲಾಗಿದ್ದರೂ ಮಕ್ಕಳೇ ಆಗಿರಲಿಲ್ಲವಂತೆ. ಊರವರೆಲ್ಲ ‘ಬಂಜೀ ಬಸವ್ವ’ ಅಂತಂದು ಹೆಸರಿಟ್ಟು ನಗಾಡಿದ್ದರು. ಬಸವ್ವ ಉಂಡಿದ್ದ ಮಾನಸಿಕ ಯಾತನೆ ನೆನಪಾದರೆ ಈಗಲೂ ಸೈತ ಅವಳಿಗೆ ಮೈ ನಡುಗುತ್ತಿತ್ತು. ಹತ್ತಾರು ದೇವರು ದಿಂಡ್ರು ಅಂತೇಳಿ ವ್ರತ, ಹರಕೆಗಳು ಮುಗಿದಿದ್ದವು. ಕಡೆಗೆ ಬಾಪೂ ಒಬ್ಬನೇ ಒಬ್ಬ ಹವಳ ಕುಮಾರನಾಗಿ ಮಡಿಲು ತುಂಬಿದ ಬಳಿಕ ಬಸವ್ವನಿಗೆ ಅಂಟಿದ್ದ ‘ಬಂಜಿ’ಯ ಹಣೆಪಟ್ಟಿ ಹರಿದಿತ್ತು.

ಈ ಎಲ್ಲಾ ಹಕೀಕತ್ತಿನ ಇತಿಹಾಸ ಬಾಪೂನಿಗೂ ಗೊತ್ತು. ಅದೇ ಅಂಜಕೆಯಿಂದ ಎಲ್ಲಿ ತನ್ನ ಸೊಸಿನೂ ಬಂಜೆಯಾಗಿ ಉಳಿದು ಬಿಡುತ್ತಾಳೋ ಎಂಬ ಆತಂಕದಲ್ಲಿ ಬಸವ್ವ ಗುಡಾಚಾರಕ್ಕೆ ಬಿದ್ದಿದ್ದಳು. ಮನೆಯವರು ಅಷ್ಟೇ ಅಲ್ಲದೆ ಊರ ಮಂದಿ ಸೈತ್ ‘‘ನಿಮ್ಮವ್ವನಂಗ ಭಾಳ ರ‍್ಸತನ್ಕ ನಿನ್ನ ಹ್ಯಾಣ್ತಿಗೂ ಮಕ್ಳ ಆಗೂ ಚಿನ್ಹs ಇಲ್ಲೋ ಬಾಪ್ಯಾ. ನೀ ಖರೇ ಖರೇನ ಬಂಜೇರ ಬಾಪ್ಯಾನ ನೋಡ’’ ಅಂತಂದು ಹಂಗಿಸಿ ಮಾತಾಡಿದ್ದರು. ಆದರೂ ಬಾಪೂ ಯಾವುದಕ್ಕೂ ತಲೆ ಕೊಟ್ಟಿರಲಿಲ್ಲ. ಹೆಂಡತಿಯೊಡನೆ ಸಿಟಿಗೆ ಹೊರಟು ಬಂದಿದ್ದ. ಇಲ್ಲಿಗೆ ಬಂದು ವರ್ಷ ಕಳೆದರೂ ಸೈತ್ ಪದ್ಮಾಳ ಬಸುರಿನಲ್ಲಿ ಯಾವುದೇ ಫರಕು ಕಾಣಿಸಿರಲಿಲ್ಲ. ಆವಾಗ ಖರೇನ ಬಾಪೂಗೂ ಚಿಂತೆ ಕಾಡಿಸಿತ್ತು.

ಡಾಕ್ಟರು ಅವರಿಬ್ಬರನ್ನೂ ಚೆಕ್‌ಪ್ ಮಾಡಿದ ಬಳಿಕ ಗೊತ್ತಾಗಿತ್ತು; ಮಕ್ಕಳಾಗದ ಬಂಜೇತನ ಇದ್ದಿದ್ದು ಪದ್ಮಾನಲ್ಲಿ ಅಲ್ಲ ಬದಲಾಗಿ ಬಾಪೂನಲ್ಲಿ ಅನ್ನೋದು. ತನ್ನಲ್ಲಿ ಬೀಜಗಳು ಫಲವತ್ತಿಲ್ಲ, ತನ್ನ ದೆಸೆಯಿಂದ ಪದ್ಮಾಳಿಗೆ ಮಕ್ಕಳಾಗುವ ಸಾಧ್ಯವಿಲ್ಲ ಅನೋದು ಗೊತ್ತಾಗಿ ಬಾಪೂ ಅತಿಯಾಗಿ ಮನಸ್ಸಿಗೆ ಏರಿಸಿಕೊಂಡು ಕೊರಗಲು ಸುರುಮಾಡಿದ್ದ. ತನ್ನ ಹೆಂಡತಿಯ ಮಾರಿಯನ್ನು ನೋಡುವುದಕ್ಕೂ ಅವನಿಗೆ ಕಳವಳ ಆಗುತ್ತಿತ್ತು. ಆದರೆ ಪಮ್ಮಿಗೆ ಈ ವಿಚಾರದಲ್ಲಿ ಯಾವ ಹಳಾಳಿನೂ ಇದ್ದಿರಲಿಲ್ಲ. ಯಾವತ್ತಿನಂತೆ ಗಂಡನ ಜೊತೆ ನಗು ನಗುತ್ತಲೇ ಹೊಂದಿಕೊಂಡು ನಡೆದಿದ್ದಳು.
ಬಾಪೂವಿನ ಸೊರಗಿದ್ದ ಮಾರಿಯನ್ನು ನೋಡಿ ಒಂದಿನ ಅವನ ಕೊಲೀಗ್ ಒಬ್ಬ ಅನುಮಾನಿಸಿ ಆತ್ಮೀಯವಾಗಿ ಕೆಣಕಿದ್ದ. ಬಾಪೂವಿನ ಕತೆ ಕೇಳಿ ಅವನ ಮನಸ್ಥಿತಿ ಅರ್ಥ ಮಾಡಿಕೊಂಡು ಕೊಲೀಗ್ ಒಂದು ಸಲ್ಲಾಹ ಸೈತ್ ಕೊಟ್ಟಿದ್ದ. ‘

‘‘ನಿಂಗ ಮಕ್ಳ ಬೇಕಂದ್ರ ಮತ್s ವೈಣಿಗಿ ಬಂಜಿ ಅನು ಹೆಸ್ರ ಕಳೀಬೇಕಂದ್ರ ಯಾಕ ನೀವ ಬಾಡಿಗಿ ಬೀಜ ಟ್ರೆöÊ ಮಾಡ್ಬರ‍್ದು? ವರ‍್ಯದಾನ ಮತ್ತ್ ಬಾಡಿಗೆ ತಾಯ್ತನ ಅನ್ನೋದ ಇತ್ತಿತ್ಲಾಗ ಭಾಳ ಕಾಮನ್ ಆಗೇತಿ. ಇಂಥಾ ಪ್ರಾಬ್ಲೆಮ್ ಇದ್ದ ಭಾಳಷ್ಟ ಗಂಡ ಹೆಂಡ್ತಿ ಇದನ್ನ ಟ್ರೆöÊ ಮಾಡಿ ಸಕ್ಸೆಸ್ಸೂ ಆಗ್ಯಾರ’’ ಅಂದಿದ್ದ.
ಕೊಲೀಗ್‌ನ ಮಾತ್ಕೇಳಿ ಬಾಪೂನಿಗೆ ಗೌ ಮಾಡಿನಲ್ಲಿ ಭರವಸೆೆಯ ಮಿಂಚೊಂದು ಝಳಪಿಸಿದಂತೆ ಆಗಿತ್ತು. ಈ ವಿಚಾರವನ್ನು ಹೆಂಡತಿಯ ಎದುರಿಗೆ ತುಸು ಅಳುಕಿನಿಂದಲೇ ಪ್ರಸ್ತಾಪಿಸಿದ್ದ. ‘‘ನಿಮ್ಗs ತಕ್ರಾರ ಇಲ್ಲಂದ್ರ ಇದ್ರಾಗ ನಂದ್ಯಾನೇತಿ?’’ ಅಂದಿದ್ದಳು ಪಮ್ಮಿ ಸಹಜವಾಗಿ.

ಜಗತ್ತಿನ ಕಣ್ಣಿಗೆ ಗಂಡಸಿನ ಕೊರತೆ ಮತ್ತು ತಪ್ಪುಗಳು ಯಾವತ್ತೂ ಎದ್ದು ಕಾಣಿಸುವುದಿಲ್ಲ. ಆದರೆ ಗಂಡಿನ ದೆಸೆಯಿಂದ ಹೆಂಗಸು ಅನುಭೋಗಿಸುವ ಯಾವುದೇ ಕೊರತೆಯೂ ಸಂಸಾರದ ಕಣ್ಣಿಗೆ ಬಹಳ ಬೇಗ ಎದ್ದು ಕಾಣಿಸುತ್ತದೆ. ಗಂಡಸು ಮಾಡುವ ತಪ್ಪಿಗೆ ಹೆಂಗಸು ಶಿಕ್ಷೆ ಉಣಬೇಕಾಗುತ್ತದೆ. ಆಗ ಅವಳು ಸಮಾಜದ ಕಣ್ಣಿಗೆ ಪಾಪವಾಗಿ ಕಾಣಿಸುತ್ತಾಳೆ. ಇದರಲ್ಲಿ ಅವಳ ತಪ್ಪು ಎಳ್ಳಷ್ಟೂ ಇರದಿದ್ದರೂ ಸೈತ್ ಬೇರೆಯವರ ದರ‍್ಬಲ್ಯವನ್ನು ತಮ್ಮ ನಾಲಿಗೆಯ ಬಂಡವಾಳ ಮಾಡಿಕೊಂಡು ಆಡಿಕೊಳ್ಳುವ ಮಂದಿಯ ನಾಲಿಗೆಯ ಚೀಜಾಗಬೇಕಾಗುತ್ತದೆ. ಅಂತವರ ಬಾಯಿ ಕಟ್ಟುವುದು ಅಷ್ಟು ಸುಲಭವಲ್ಲ. ಬರೀ ತಮ್ಮ ಬಾಯಿಚಪಲಕ್ಕೆ ಹಿಂದೆ ಮುಂದೆ ಗೊತ್ತಿಲ್ಲದೆ ಮಾತಾಡುವ ಮಂದಿನೂ ತಪ್ಪು ಎನ್ನಲು ಬರುವುದಿಲ್ಲ. ಏಕೆಂದರೆ ಅದು ಅವರ ಸಹಜ. ಹಾಗಾದರೆ ಹೆಣ್ಣಿನ ಜಲ್ಮಕ್ಕೆ ಹಿಂಥಾ ಅನಿವರ‍್ಯದ ದಂದುಗ ಅಂಟಿಸಿದ ತಪ್ಪು ಯಾರದು? ಅವಳಿಗೆ ಹಿಂಥಾ ಪ್ರಕೃತಿಯನ್ನು ಹೊದಿಸಿ ಸಂಸಾರದ ಬಾಯಿಗೆ ನೂಕಿರುವ ಆ ಸೃಷ್ಟಿರ‍್ತನದೇ? ಇದರ ಹೊಣೆ ಹೊರಬೇಕಾದವನೂ ಅವನೇ..! ಹಾಂಗಂತ ಯಾವ ಹೆಂಗಸೂ ಎಂದಿಗೂ ಯಾವ ದೇವರನ್ನು ಶಪಿಸುವಷ್ಟು ನಾಸ್ತಿಕವಾದಿ ಅಂತೂ ಆಗಲು ಸಾಧ್ಯವೇ ಇಲ್ಲ್ಲ. ಬದಲಾಗಿ ಇದೆಲ್ಲ ತನ್ನ ಪದರಿನ ಕರ್ಮದ ಬುತ್ತಿ ಅಂತಿಳಿದು ಬಂದಿದ್ದು ರ‍್ಲಿ ಶಿವನ ದಯೆ ಒಂದರ‍್ಲಿ ಎನ್ನುವ ದೊಡ್ಡ ಮನಸ್ಸಿನ ಸಾದ್ವಿ ಹೆಣ್ಣು. ಇಂದಲ್ಲ ನಾಳೆ ದೇವರು ಕಣ್ಣು ಬಿಟ್ಟು ನೋಡ್ಯಾನು, ತನ್ನ ಬಯಕೆಯನ್ನೆಲ್ಲ ಇಡೇರಿಸ್ಯಾನು ಎನ್ನುವ ನಂಬಿಕೆಯಿಂದ ಅವಳು ಹರಕೆ ಹೊರದೆ ಇರುವ ದೇವರಿಲ್ಲ, ಮಾಡದೇ ಇರುವ ವ್ರತವಿಲ್ಲ. ತನ್ನ ಮನೆಯನ್ನೇ ಗುಡಿ ಮಾಡಿ, ಗಂಡನನ್ನೇ ದೇವರೆಂದು ತಿಳಿದು ಸಂಸಾರವನ್ನು ಸ್ವರ್ಗ ಮಾಡುವ ಅಂತಃಕರುಣಿ ಹೆಂಗಸು.
ಕೊಲೀಗ್ ಕೊಟ್ಟಿದ್ದ ಸಜ್ಜೇಷನ್ ಟ್ರೆöÊಯಾದರೂ ಮಾಡೋಣವೆಂದು ನಿರ್ಧರಿಸಿ ಬಾಪೂ ಪದ್ಮಾಳನ್ನು ಕರೆದುಕೊಂಡು ಸ್ಪೇಷಿಯಾಲಿಸ್ಟನನ್ನು ಭೆಟ್ಟಿ ಮಾಡಿದ್ದ. ತುಸು ಖರ್ಚಾದರೂ ಹರಕತ್ತಿಲ್ಲ ಬಾಡಿಗೆ ಬೀಜ ಖರೀದಿ ಮಾಡಬೇಕೆಂದು ತರ‍್ಮಾಣ ಮಾಡಿದ್ದ. ಸಕ್ಸೆಸ್ ಆಗುತ್ತೋ, ಬಿಡತ್ತೋ ಗೊತ್ತಿಲ್ಲ; ಆದರೆ ತನ್ನ ಗಂಡನಿಗೆ ಮಕ್ಕಳು ಆಗುವುದಿಲ್ಲ ಎನ್ನುವ ಹಣೆಪಟ್ಟಿ ಕಳೆದರೆ ಸಾಕೆನುವ ಉಮೇದಿನಿಂದ ಪದ್ಮಾ ಸೈತ ಗಂಡನ ಇರಾದೆಗೆ ಎದೆ ಗಟ್ಟಿಸಿಕೊಂಡಿದ್ದಳು. ಒಂದು ವಾರದ ಬಳಿಕ ಡಾಕ್ಟರು ಸೂಚಿಸಿದ್ದ ಪಂತೆಯನ್ನು ಪಾಲಿಸಿ ಮತ್ತೇ ದವಾಖಾನೆಗೆ ಭೆಟ್ಟಿ ಕೊಟ್ಟಿದ್ದರು. ಪದ್ಮಾ ತನ್ನ ಬಸುರಿನಲ್ಲಿ ಬಾಡಿಗೆ ಬೀಜ ಬಿತ್ತುಕೊಂಡು ಬಂದಿದ್ದಳು.

ಮರ‍್ನಾಲ್ಕು ತಿಂಗಳ ತನಕ ನೇಮದಂತೆ ಗುಳಿಗೆ, ಔಷಧಿ ನುಂಗಿದ್ದಳು. ಅದೇನು ಪವಾಡವೋ ಅಥವಾ ಪದ್ಮಾಳ ಭಾಗ್ಯವೋ ಇಲ್ಲಾ ಬಾಪೂವಿನ ಒಳ್ಳೆಯತನವೋ ಏನೋ!; ಪದ್ಮಾಳ ಹೊಟ್ಟೆಯಲ್ಲಿ ಬಳ್ಳಿ ಚಿಗುರಿತ್ತು. ಬಾಪೂವಿನ ಖುಷಿಗೆ ಪಾರವೇ ಇದ್ದಿರಲಿಲ್ಲ. ‘ತಾಯಿ’ ಆಗುತ್ತಿದ್ದೇನೆ ಎನ್ನುವ ಸತ್ಯ ಪದ್ಮಾಳಿಗೆ ಇನ್ನಿಲ್ಲದ ಸಂತೃಪ್ತಿ ತಂದಿತ್ತು.
ಸೊಸೆ ಗರ್ಭಿಣಿ ಅನ್ನೋದು ಗೊತ್ತಾಗಿ ಪದ್ಮಾಳ ಅತ್ತೆ ಸೈತ ಎದೆ ಅಡ್ಡಾಗಲು ಮಾಡಿಕೊಂಡು ಗಾರ್ವಾ ತಯ್ಯಾರಿಸಿ ಓಣಿ ತುಂಬೆಲ್ಲ ಬೀರಿದ್ದಳು. ಅವ್ವ ಮತ್ತು ಅಪ್ಪ ಅತ್ಯಂತ ಹೌಸಿನಿಂದ ಸಿಟಿಗೆ ಓಡಿ ಬಂದು ಮಗನ ಹೆಂಡತಿಗೆ ಒಳಕುಬ್ಸ ಮಾಡಿ ಮನಸು ಹಂಚಿಕೊಂಡು ಹೋಗಿದ್ದರು. ನಿಂಗವ್ವ ಸೈತ ಮಗಳು ಅಳಿಯನಿಗೆ ಅಂತಂದು ತನ್ನ ಹೈಸಿಯೆತ್ತು ಮೀರಿ ಆಯಾರಿ ಮಾಡಿ ಒಂದು ವಾರ ಮಗಳ ಮನೆಯಲ್ಲಿ ವಸತಿ ನಿಂತು ಕೆಲಸ ಕ್ಯಾಮೆ ಮಾಡಿ ಹಾರೈಸಿ ಹೋಗಿದ್ದಳು. ಆದರೆ ಪದ್ಮಾಳ ಬಸಿರಿನ ಒಳಗುಟ್ಟಿನ ಅಸಲಿಯತ್ತು ಗಂಡ ಮತ್ತು ಹೆಂಡಿತಿಯನ್ನು ಹೊರತು ಮತ್ತಾರಿಗೂ ಕಿವಿಯಿಂದ ಕಿವಿಗೂ ಸೈತ್ ಗುಂಯ್ ಗುಟ್ಟಿರಲಿಲ್ಲ.

ಗೌ ಮುಗಿಲಿನಲ್ಲಿ ಮಿಂಚಿನಂತೆ ಮಿಂಚಿ ಆಸೆ ತೋರಿಸಿದ್ದ ಬೆಳಕು ಈ ರೀತಿ ಬರಸಿಡಿಲಾಗಿ ಬಣ್ಣ ಬದಲಿಸಿ ಮೋಸ ಮಾಡೀತು ಅನ್ನೋದು ಪಾಪ ಮುಗ್ದ ಗಂಡ ಹೆಂಡತಿಗೆ ಕನಸು ಮನಸಿನಲ್ಲೂ ಕಂಡಿರಲಿಲ್ಲ. ಇಂತಹ ಇಕ್ಕಟ್ಟಿನ ಪರಿಸ್ಥಿತಿ ಬಾಪೂನ ಪಾಲಿಗೆ ಈಗ ದೇವರು ಇಟ್ಟಿದ್ದ ಘೋರ ಸತ್ವ ಪರೀಕ್ಷೆ. ಅವನ ತಲೆಯಲ್ಲಿ ವಿಚಾರಗಳ ಸುನಾಮಿಯೇ ಎದ್ದಿದೆ. ಈಗ ಬಾಪೂ ಆಯ್ಕೆ ಮಾಡಿಕೊಳ್ಳುವ ಸತ್ಯ ಅವನಿಗೆ ಭವಿಷ್ಯತ್ತಿನ ಕಟು ವಾಸ್ತವಗಳು ಆಗಿದ್ದವು. ಅವೆಲ್ಲ ಕಣ್ಮುಂದೆ ನಿಂತು ಕುಣಿಯಲು ಸುರುಮಾಡಿದ್ದವು.
ಬಾಪೂ ಹೆಂಡತಿಯನ್ನು ಆರಿಸಿಕೊಂಡರೆ ಮುಂದೆ ಮತ್ತೇ ಅವಳಿಗೆ ಮಕ್ಕಳಾವುಗುದಿಲ್ಲ ಎನ್ನುವ ಹಕೀಕತ್ತು ಗೊತ್ತಾಗಿ ಮನೆಯವರು ಮತ್ತೊಂದು ಮದುವೆಗೆ ಜೀವ ಹಿಂಡಭೌದು. ತನ್ನಲ್ಲಿ ಬೀಜಗಳ ಕೊರತೆ ಇದೆ ಎನ್ನುವ ಅಸಲೀಯತ್ತು ಎಲ್ಲರಿಗೂ ಗೊತ್ತಾದರೆ ಗತಿಯೇನು? ಮುಂದೆ ಆ ಹಿಂಸೆಯನ್ನು ಸಹಿಸಿಕೊಂಡು ಜೀವಂತ ಇರುವುದಾದರೂ ಹೇಗೆ? ಎನ್ನುವ ಕಲ್ಪನೆ ಅವನನ್ನು ಒಳಗೊಳಗೆ ಪೀಡಿಸಲು ಹಿಡಿಯಿತು. ಒಂದು ಪಕ್ಷ ಹೆಂಡತಿಯನ್ನು ಉಳಿಸಿಕೊಂಡರೆ ಆಕೆ ಜೀವಂತ ಇರುವ ತನಕ ಬಂಜೆ ಎನ್ನುವ ಮುಳ್ಳಿನ ಕಿರೀಟ ಹೊತ್ತುಕೊಂಡೇ ಜೀವನ ನಡೆಸಬೇಕು. ಈ ಕಟು ಸತ್ಯ ಬಾಪೂವಿನ ಮನಸ್ಸು ಮತ್ತು ಹೃದಯವನ್ನು ಹಿಂಡಿ ಹಿಪ್ಪೆ ಮಾಡಲು ಹಿಡಿಯಿತು. ಕೂಸು ಸತ್ತರೂ ಹರಕತ್ತಿಲ್ಲ ಮತ್ತೊಂದು ಸಲ ಬಾಡಗೆ ಬೀಜ ಪ್ರಯತ್ನಿಸಬಹುದ್ಲಾ! ಎನ್ನುವ ಭರವಸೆ ಸೈತ ಸತ್ತು ಹೋಗುತ್ತದೆ. ಒಂದು ಹಾದಿ ಮುಚ್ಚಿದರೂ ಮತ್ತೊಂದು ಇದೆ ಎನ್ನುವ ಸಮಾಧಾನ ಸೈತ ಇಲ್ಲದಾಗಿತ್ತು.

ಪಮ್ಮಿಗಂತೂ ಜೀವಂತ ಇರುವ ತನಕ ಬಂಜೆಯ ಬಿರುದು ಖಾಯಂ ಆದಂತಾಗಿತ್ತು. ಅವಳು ನಿಷ್ಟುರವಾಗಿ ಇದನ್ನೆಲ್ಲ ನುಂಗಿ ನಿಲ್ಲಬಲ್ಲ ಗಟ್ಟಿಗಿತ್ತಿ. ಆದರೆ ತನಗೂ ಒಂದು ಮನಸ್ಸಿದೆ, ಆ ಮನಸ್ಸಿಗೂ ಆತ್ಮಸಾಕ್ಷಿ ಅನ್ನೋದು ಒಂದಿದೆ. ಅದನ್ನು ಕೊಂದು ತಾನಾದರೂ ಹೇಗೆ ನೆಮ್ಮದಿಯ ದಿನಗಳನ್ನು ತಳ್ಳಲು ಆದೀತು? ಇಂತಹ ಉತ್ತರವಿಲ್ಲದ ಹತ್ತಾರು ಗೊಂದಲಗಳು ಬಾಪೂವಿನ ಎದೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದವು.
ಮನೆಯವರ ಸಮಾಧಾನಕ್ಕೆ ಕೂಸು ರ‍್ಲಿ ಅಂತಾದರೆ ತಾನು ಯಾವ ಘನಂಧಾರಿ ಸಾಧನೆ ಮಾಡಿದಂತಾಗುತ್ತದೆ ಅಂತನ್ನಿಸಿತು ಬಾಪೂನಿಗೆ. ಗಂಡನಿಗೆ ಮಕ್ಕಳನ್ನು ಹುಟ್ಟಿಸುವ ತಾಕತ್ತಿಲ್ಲ ಅನೋದು ಗೊತ್ತಿದ್ದರೂ ಪಮ್ಮಿಯ ಮಾರಿಯ ಮೇಲೆ ಬೇಸರದ ಒಂದು ಸಣ್ಣ ನೆರಿಗೆ ಸೈತ್ ಮೂಡಿರಲಿಲ್ಲ. ಅಂತಹ ದೊಡ್ಡ ಮನಸ್ಸಿನ ಹೆಂಡತಿಯ ವಿಷಯದಲ್ಲಿ ತಾನೆಂತಹ ಕ್ಷÄಲ್ಲಕ ಮನುಷ್ಯನಾಗಭೌದು ಅಂತನಿಸಿತು. ಬಾಪೂವಿನ ಮನಸ್ಸಿನಲ್ಲಿ ಪಮ್ಮಿಯ ಬಗ್ಗೆ ಇನ್ನಿಲ್ಲದ ಅಭಿಮಾನ ಸೈತ ಹೆಚ್ಚಾಗಿತ್ತು. ಗಂಡನ ಕಿಮ್ಮತ್ತು ತನ್ನದೆಂದು ತಿಳಿದು ಅವನ ಜಲ್ಮಕ್ಕೆ ಹೆಗಲು ಕೊಟ್ಟಿದ್ದ ಸಾದ್ವಿಗೆ ತಾನು ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಊರವರ ನೆದರಿಗೆ ತನ್ನ ದರ‍್ಬಲ್ಯ ಅಜ್ಞಾತವಾಗಿ ಉಳಿದರೂ ಸೈತ ಮನಸ್ಸಾಕ್ಷಿಯ ದೃಷ್ಟಿಯಲ್ಲಿ ತಾನು ಹೆಜ್ಜೆ ಹೆಜ್ಜೆಗೂ ಕಿರಕುಳನಾಗುವುದು ನಿಕ್ಕಿ ಅಂತ ಅವನಿಗೆ ಮನವರಿಕೆಯಾಗಿತ್ತು.

ಅದು ಸೈತ ಎಷ್ಟು ದಿನ? ಆತ್ಮದ ಹಿಂಸೆಗೆ ಸೋತು ಸುಣ್ಣಾಗಿ ಒಳಗೊಳಗೆ ಕೊರಗಿ ಅಸು ಬಿಡಬೇಕಾಗುತ್ತದೆ. ಗಂಡನ ಸಲ್ವಾಗಿ ಹಿಂದೆ ಮುಂದೆ ಗೊತ್ತಿಲ್ಲದ ಯಾರೋ ಒಬ್ಬ ಪುರುಷನ ಬೀಜವನ್ನು ತನ್ನ ಗರ್ಭದಲ್ಲಿ ಬಿತ್ತಿಕೊಂಡು ಮನೆತನದ ಕಿಮ್ಮತ್ತನ್ನು ಎತ್ತಿ ಹಿಡಿದವಲ್ಲವೇ ಪದ್ಮಾ? ತನ್ನತನವನ್ನೂ ಸೈತ ಲೆಕ್ಕಿಸದೆ ಮನೆತನದ ಗೌರವಕ್ಕೆ ಗೌರಮ್ಮನಾಗಿ ನಿಂತಿದ್ದ ಹೆಂಗಸಿಗೆ ಅನ್ಯಾಯ ಮಾಡಿದರೆ ಅದು ಬರೀ ಪಮ್ಮಿಗಷ್ಟೇ ಅಲ್ಲ ಹೊರತಾಗಿ ಇಡೀ ಹೆಣ್ಣು ಕುಲಕ್ಕ ತಾ ಮಾಡುವ ದೊಡ್ಡ ಅಪಚಾರ ಆದೀತು.

ಇಂತಹ ಹತ್ತಾರು ತುಮುಲಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಬಾಪೂವಿನ ಹೃದಯ ಮತ್ತು ಮನಸ್ಸನ್ನು ಗುದ್ದಿ ಗುದ್ದಿ ಚೂರು ಮಾಡಲು ಹಿಡಿದವು.
ಒಂದು ಪಕ್ಷ ಪಮ್ಮಿ ಬದುಕಿದರೂ ಸೈತ ಮನೆಯವರು ಮತ್ತೊಂದು ಮದುವೆಗೆ ಜಬರದಸ್ತಿ ಮಾಡುತ್ತಾರೆ. ಇದಕ್ಕೆ ಪಮ್ಮಿನೂ ಕಬೂಲ್ ಆಗಬಹುದು. ಆದರೆ ಆ ಬರುವ ಮತ್ತೊಬ್ಬಾಕೆನೂ ಪಮ್ಮಿ ಆಗಿರಬೇಕ್ಲಾ? ತನ್ನ ಯೋಗ್ಯತೆಯನ್ನು ಸೆರಗಿನಲ್ಲಿ ಗಂಟಾಕಿ ಮುಚ್ಚಿಟ್ಟು ಸಂಸಾರದ ಗುಟ್ಟಿನ ಟ್ರಂಕಿಗೆ ಕೀಲಿ ಜಡಿದು ಮನೆಯ ಮಾನ ಕಾಯುವ ಹೆಂಗಸಾಗಿರಬೇಕ್ಲಾ? ಪಮ್ಮಿಯನ್ನು ಬಿಟ್ಟರೆ ಬದುಕಿಲ್ಲ; ಆದರೆ ಮಕ್ಕಳಿಲ್ಲದೆ ಜೀವನವೂ ಇಲ್ಲವಲ್ಲ? ಈಗ ಬಾಪೂವಿನ ಆಯ್ಕೆ ಅವನ ಭವಿಷ್ಯದ ಆಯ್ಕೆ ಆಗಿತ್ತು ಅನ್ನೋದು ಅಷ್ಟೇ ಖರೇ ಆಗಿತ್ತು.

ಬಾಪೂವಿನ ತಲೆ ಕಾದ ಹೆಂಚಿನಂತೆ ಸುಡುತ್ತಿತ್ತು. ಬಾಜೂಕಿನ ಬಾಕಿನ ಮೇಲೊಂದ ಧ್ವನಿ ಸಪ್ಪಿಲ್ಲದೆ ಮೊರೆಯಿಡುತ್ತಿತ್ತು, ‘ದೇವ್ರ ನರ‍್ಮಲ್ ಆಗೂವಂಗ ಮಾಡೋ ಯಪ್ಪಾ!’. ಬಾಪೂ ಅತ್ತೆಯ ಕಡೆ ಕುತ್ತಿಗೆ ಹೊಳ್ಳಿಸಿ ನೋಡಿದ. ಅವನ ಕರಳು ಕಿತ್ತು ಬಂದಂತಾಯಿತು. ಒಂದು ಕಡೆ ಬಸವ್ವನಿಗೆ ತನ್ನ ಮಗ, ಮೊಮ್ಮಕ್ಕಳು ಎನ್ನುವ ಮನೆತನ ಕಿಮ್ಮತ್ತಿನ ಸ್ವಾರ್ಥ, ಅದು ಸಹಜ. ಮತ್ತೊಂದು ಕಡೆ ನಿಂಗವ್ವನಿಗೆ ಮಗಳ ಮೇಲಿನ ತೀರದ ಕಕ್ಕುಲಾತಿ. ಆಕೆಯ ದುಸ್ಥಿತಿಯನ್ನು ಕಣ್ಮುಟ ನೋಡಿ ಹಳಾಳಿಸುತ್ತಿದ್ದ ಮಾಯಾ ಮಮತೆಯ ಕರಳು. ಅವಳ ಬದುಕು ಮತ್ತು ಭವಿಷ್ಯದ ಬಗ್ಗೆ ಅದೇನೇನು ಕನಸುಗಳನ್ನು ಹೆಣೆದು ಕುಂತಿದೆ ಯಾರಿಗೆ ಗೊತ್ತು?

ಬಾಪೂ ಏನೇ ಆರಿಸಿಕೊಂಡರೂ ಪಾಪ ಪ್ರಜ್ಞೆಯ ಒಂದು ಬರ್ಚಿ ಮಾತ್ರ ಅವನ ಅಂತರಾತ್ಮದ ಕನ್ನಡಿಯಿಂದ ತೂರಿಬಂದು ಚುಚ್ಚಿ ಚುಚ್ಚಿ ಹಿಂಸಿಸುವುದಂತೂ ಸುಳ್ಳಲ್ಲ. ಇದೆಲ್ಲ ತನ್ನ ಪದರಿನ ಪ್ರಾರಬ್ಧ ಅಂತಿಳಿದು ಬಾಪೂ ಗಟ್ಟಿಯಾಗಿ ಚಿಂತೆಮನೆ ಬಿಟ್ಟು ಹೊರ ಬಂದ. ಬಾಕ್ ಬಿಟ್ಟು ಎದ್ದು ನಿಂತ.
ನೆಟ್ಟಗೆ ಕನಸಲ್ಟನ್ಸ ರೂಂಗೆ ನಡೆದ.
‘‘ಸರ್, ನಂಗ ನನ್ನ ಹ್ಯಾಣ್ತಿನs ಬೇಕ್ರಿ. ಅಕೀ ಜೀವಾ ಉಳ್ಸಿ ಕುಡ್ರಿ’’ ಅಂದ.
ಡಾಕ್ಟರು ಆಪ್ರೇಶನ್ ಸಿದ್ದತೆ ನಡೆಸಿದ. ಹೆಚ್ಚು ಕಡಿಮೆ ಎರಡು ತಾಸು ಡೋರ್ ಲಾಕಾಗಿತ್ತು. ಹೊರಗಿನಿಂದ ನೋಡಿದರೆ ಥಿಯೇಟರ್‌ನಲ್ಲಿ ಮನುಷ್ಯರೇ ಇಲ್ಲವೇನೋ ಎನ್ನುವಂತೆ ಬಿಕೋ ಎನುತ್ತಿತ್ತು. ಯಾವ ಡಾಕ್ಟರೂ ಅಥವಾ ರ‍್ಸೂ ಒಳ ಹೊರಗೆ ಸುಳಿದಾಡಲು ಇಲ್ಲ.
ಒಮ್ಮಿಂದೊಮ್ಮೆಗೆ ಕಡ್ಕಂತ ಬಾಗಿಲ ಕೊಂಡಿ ತಗೆದ ಆವಾಜಾಯಿತು.

ಬಾಪೂ ಗಡಬಡ್ಸಿ ಎದ್ದು ನಿಂತ. ಕಣ್ಣು ಮಿಟಿಕಿಸದೆ ಡಾಕ್ಟರನನ್ನೇ ದಿಟ್ಟಿಸಿ ನೋಡಿದ.
‘‘ಕಂಗ್ರಾö್ಯಚುಲೇಶನ್ ಆಪರೇಶನ್ ಸಕ್ಸೆಸ್. ಆಫ್ಟರ್ ಹಾಪ್ ಆನ್ ಆರ್ ಶಿಪ್ಟ್ ಟು ದಿ ವರ‍್ಡ. ಭೇಟಿ ಆಗ್ರಿ’’ ಅಂತಂದು ಡಾಕ್ಟç ಮಾರಿ ಅಗಲಿಸಿ ಮುಂದೆ ನಡೆದ.
ನಿಂಗವ್ವ ದುಗುಡದ ಎದೆ ಹೊತ್ತು ಬಾಪೂನಿಗೆ ಎದುರಾದಳು.
‘’ತಮ್ಮಾ, ಯಾನಂದ್ರು? ನರ‍್ಮಲ್ ಆತಂತ? ಪಮ್ಮಿ ಹ್ಯಂಗಾಳಂತ? ಕೂಸ..?’ ಒಂದೇ ಉಸಿರಿಂದ ಕೇಳಿದಳು.
ಬಾಪೂವಿನ ಕಣ್ಣಿಂದ ದಳದಳ ಹನಿಗಳು ಉದುರಿದವು. ಅವು ದುಃಖ, ಖುಷಿ, ನೋವು, ಸಂಕಟ, ತೊಳಲಾಟ ಎಲ್ಲವನ್ನೂ ಕಲಿಸಿಕೊಂಡು ಜಾರಿದವು.
‘‘ಅತ್ತಿ, ಕೂಸ ಜೀವಂತ ಇಲ್ಲಂತ. ಕೂಸ್ನಾ ಮ್ಯಾಲಿಂದ ತಗ್ದಾರ. ಪಮ್ಮೀ ಅರಾಮ ಅದಾಳ ಒಂತಾಸಿನ್ಯಾಗ ಹೊರಗ ರ‍್ತಾರ ಭೇಟಿ ಆಗ್ರಿ ಅಂದಾರ’’ ಅಂತಂದ.
‘‘ಅಯ್ಯೋ! ದೇವ್ರ, ಇದ್ಯಾನ ಮಾಡಿಬಿಟ್ಳೋ ಯಲ್ಲವ್ವಾ?’’ ನಿಂಗವ್ವ ಧ್ವನಿ ತಗೆದು ಸೂರು ಹಿಡಿದಳು.
ಬಾಪೂ ಬಾಕಿನ ಮೇಲೆ ಇಡಿಯಾಗಿ ಕುಳಿತು ನಿಟ್ಟುಸಿರು ಬಿಟ್ಟ.

ಬಂಡು ಕೋಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x