editor
ಕಳೆದುಕೊಂಡಾಗಲೇ ಪಡೆದುಕೊಳ್ಳುವುದು !: ಡಾ. ಹೆಚ್ ಎನ್ ಮಂಜುರಾಜ್,
ಸಾಧನೆ ಎಂದರೆ ಗಳಿಸಿಕೊಳ್ಳುವುದಲ್ಲ; ಕಳೆದುಕೊಳ್ಳುವುದು ಎಂದರು ಗುರುಗಳು. ನನಗೆ ಅಚ್ಚರಿಯಾಯಿತು. ಲೌಕಿಕಾರ್ಥದಲ್ಲಿ ಇದನ್ನು ಹೇಳುತ್ತಿಲ್ಲ ಎಂದೂ ಮನದಟ್ಟಾಯಿತು! ಮಗುವೊಂದು ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತ ಅಲ್ಪಮಾನವ ಆಗುತ್ತದೆ; ಮತ್ತೆ ಏನೆಲ್ಲ ಸಂಕೋಲೆಗಳನ್ನು ಕಳಚಿಕೊಂಡು ವಿಶ್ವಮಾನವರಾಗಬೇಕು ಎಂದು ಕುವೆಂಪು ಅವರು ಹೇಳುತ್ತಿದ್ದುದು ಈ ಅರ್ಥದಲ್ಲೇ ಎಂದುಕೊಂಡೆ!! ಆಗವರು ಹೇಳಿದರು. ಸರಿಯಾಗಿ ಗುರುತಿಸಿದೆ. ಹಾಗೆ ನೋಡಿದರೆ ಇರುವುದು ಒಂದೇ ಲೋಕ. ಲೌಕಿಕ, ಅಲೌಕಿಕ, ಪಾರಲೌಕಿಕ ಅಂತೆಲ್ಲ ಇರುವುದಿಲ್ಲ. ಇದು ನಮ್ಮ ಮಾನಸಿಕ ಭ್ರಮೆ. ಹೇಗೆ ನೋಡುವುದೆಲ್ಲ ಮತ್ತು ಕೇಳುವುದೆಲ್ಲ ಸತ್ಯವಲ್ಲವೋ ಹಾಗೆ. … Read more
ಪಂಜು ಕಾವ್ಯಧಾರೆ: ಆದಿತ್ಯಾ ಮೈಸೂರು, ವಿನಯಚಂದ್ರ, ಪ್ರಶಾಂತ್ ಬೆಳತೂರು
ನಮ್ಮ ಮಹಾ ನಗರದ ಬದುಕು ಇಂದುಒತ್ತಡದ ಜೀವನಯಾಂತ್ರಿಕತೆಯ ಬದುಕುಅಪ್ಪ ಅಮ್ಮನ ಇನಿದನಿಸಂಬಂಧ ಪ್ರೀತಿಯ ಛಾಯೆಒಂದ್ಹೊತ್ತಿನ ನೆಮ್ಮದಿಎಲ್ಲವು ಕಾಣದಾಗಿವೆ ಜನಜಂಗುಳಿಯ ಮುಂದೆಬಿಡುವಿಲ್ಲದ ಕೆಲಸಸಮಯ ಅರಿವಿದ್ದರುಬಿಡದ ಧಣಿ , ತಲೆ ಬಿಸಿಅವ ಇನ್ನೆಲ್ಲಿ ಕಾಣಲು ಸಾಧ್ಯ ಯಾರಾದೋ ಕೀಲಿಕೈಗೆಗಿರಗಿರಗುಟ್ಟುತ್ತಯಂತ್ರವಾಗಿ, ಚಕ್ರದಂತೆತಿರುಗಬೇಕಿದೆ ಎದ್ದಕೂಡಲೆ ಅವಸರದಲೆಇಸ್ತ್ರೀ ಕಾಣದ ಬಟ್ಟೆಪಾಲಿಶ್ ಇಲ್ಲದ ಬೂಟು ತೊಟ್ಟುಸ್ಕೂಟರೋ, ಬಸ್ಸೋ, ಟ್ಯಾಕ್ಸಿಯೋ ಹಿಡಿದು ನಡೆಅಲ್ಲಿ ಬಟ್ಟೆಗುಂಡಿ ಹಾಕಿದಿಯೊ ತಿಳಿಯದುಆದರೆ ಬಯೋಮೆಟ್ರಿಕ್ ಗುಂಡಿ ಹಾಕಬೇಕಿದೆಇಲ್ಲವಾದರೆ ಮೇಲವರ ಕಾಟಹೊಟ್ಟೆಗೆ ಅನ್ನ, ನೀರುಹೊತ್ತಿಗೆ ನಿದ್ರೆ, ಸೇರದು, ಬಾರದುಓಡು ಓಡು ಹಗಲು ಇರುಳೆನ್ನದೆನಿನ್ನಲ್ಲಿ ಶಕ್ತಿಯಿರೋತನಕ … Read more
ದೇವರ ಹುಂಡಿಯೂ ಮತ್ತು ರಾಚಪ್ಪನೂ…: ಶ್ರೀ ಕೊಯ.
ಈ ಬಾರಿಯ ಜಾತ್ರೆಯಲ್ಲಿ ಆ ದೇವರ ಹುಂಡಿಗೆ ಹೇರಳವಾಗಿ ಧನ, ಕನಕಗಳು ಬಂದು ಹುಂಡಿ ತುಂಬಿತ್ತು. ಇದು ದೇವಿಯ ಸನ್ನಿಧಾನಕ್ಕೆ ವರುಷದ ಕಾಣಿಕೆಯಾಗಿ ಬರುವ ಹುಂಡಿ ಆದಾಯ. ಇದಲ್ಲದೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹರಿದು ಬರುವ ಹಣ ಹೇರಳವಾಗಿ ಶೇಖರಣೆ ಆಗುತ್ತದೆ. ಇಲ್ಲಿಯ ಜನ, ದೇವರ ಕೈಂಕರ್ಯ ಕೈಗೊಂಡು ಪುಣ್ಯ ಪಡೆಯಲು ದೇವರ ಕಾಣಿಕೆಯನ್ನು ಎಣಿಸುವ ಮತ್ತು ವಿಂಗಡಿಸುವ ಕಾರ್ಯವನ್ನು ಮಾಡಲು ಕಾತರಿಸುತ್ತಾರೆ. ಆಡಳಿತ ಮಂಡಳಿ ಕಳೆದ ಬಾರಿ ಹುಂಡಿಯ ಎಲ್ಲಾ ಹಣವನ್ನು ಎಣಿಕೆ ಮಾಡಿ, ಒಟ್ಟು ಒಂದೂವರೆ … Read more
ಸತ್ಮೇಲೆ ಏನೈತಣ್ಣ ? ದೊಡ್ ಸೊನ್ನೆನೆ ! : ಮನು ಗುರುಸ್ವಾಮಿ
“ಯೆಂಡ, ಯೆಡ್ತಿ, ಕನ್ನಡ ಪದಗೊಳ್” ಎಂದ ತಕ್ಷಣ ನಮಗೆ ನೆನಪಾಗುವುದೇ ಕನ್ನಡದ ಪ್ರಸಿದ್ಧ ಬರಹಗಾರರಾದ ಜಿ ಪಿ ರಾಜರತ್ನಂರವರು. ಯೆಂಡ, ಹೆಂಡತಿ, ಕನ್ನಡದ ಬಗ್ಗೆ ಅಪಾರ ಒಲವಿದ್ದ ಕವಿ ತಮ್ಮ ಕವಿತೆಗಳಲ್ಲಿ ತಿಳಿಹಾಸ್ಯದ ಮೂಲಕ ಬದುಕನ್ನು, ಬದುಕುವ ರೀತಿಯನ್ನು ಬಹಳ ವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಭಾಷೆಯ ಸೊಗಡಿನಿಂದ ಕೂಡಿದ ಪದಪುಂಜಗಳು, ಪ್ರಾಸಗಳ ಸರಳ ಹೊಂದಿಕೆ, ವಾಸ್ತವಕ್ಕೆ ಹತ್ತಿರವಾದ ವಿಚಾರಗಳು ಈ ಎಲ್ಲವೂ ಒಟ್ಟಿಗೆ ಸೇರಿ ಕವಿತೆಗಳನ್ನು ಒಮ್ಮೆ ಓದಿದ ಸಹೃದಯನನ್ನು ಮತ್ತೆ ಮತ್ತೆ ತಮ್ಮತ್ತ ಆಕರ್ಷಿಸುತ್ತವೆ. ಈಗಾಗಲೇ … Read more
ಕಡಲ ಕಿನಾರೆಯಲಿ ನಿಂತು ನೀಲಾಕಾಶವ ಕಂಡಾಗ !: ಡಾ. ಹೆಚ್ ಎನ್ ಮಂಜುರಾಜ್
‘ಕಷ್ಟಕಾಲದಲಿ ಯಾರು ನಮ್ಮ ಜೊತೆ ಬಂದಾರು? ಕತ್ತಲಲಿ ನೆರಳು ಕೂಡ ನಮ್ಮನ್ನು ಬಿಟ್ಟು ಹೋಗುತ್ತದೆ!’ ಎಂಬ ಮಾತು ಸತ್ಯ. ಆದರೆ ಹಲವೊಮ್ಮೆ ನೆರಳು ಕೈ ಬಿಟ್ಟರೂ ಯಾರದೋ ಬೆರಳು ನಮ್ಮನ್ನು ಕಾಪಾಡುವಂಥ ಪವಾಡ ಈ ಜಗತ್ತಿನಲ್ಲಿ ಸದ್ದಿಲ್ಲದೆ ನಡೆಯುತ್ತಲೇ ಇರುತ್ತದೆ. ನಮ್ಮ ಜೀವಿತಾವಧಿಯಲ್ಲಿ ಇಂಥ ಅದೆಷ್ಟೋ ಅಪರಿಚಿತರು ಆಪದ್ಬಾಂಧವರಾಗಿ ಬಂದು ನಮ್ಮನ್ನು ನಿರಾಳಗೊಳಿಸಿರುತ್ತಾರೆ. ಆಪದ್ಬಾಂಧವ ಎಂದರೆ ಆಪತ್ತಿಗೆ ಆದವರೇ ನೆಂಟರು ಎಂದು. ಆಪತ್ತು ಎಂದರೆ ದಿಢೀರನೆ ಎದುರಾಗುವ ಕಷ್ಟಕಾಲ. ಇದು ಯಾರಿಗೆ ಬರುವುದಿಲ್ಲ? ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನಿಗೂ … Read more
“ಸನ್ಮಾರ್ಗ ತೋರುವ “ಸತ್ ಪಾತ” ಕವಿತೆಗಳು”: ಅನುಸೂಯ ಯತೀಶ್
“ಸತ್ ಪಾತ” ಎಸ್. ಬಿ. ಮಾಳಗೊಂಡ ವಿರಚಿತ ಕವನ ಸಂಕಲನವಾಗಿದ್ದು 66 ಕವಿತೆಗಳನ್ನು ಒಳಗೊಂಡ ಬೃಹತ್ ಹೊತ್ತಿಗೆಯಾಗಿದೆ. ನಾಡಿನ ಖ್ಯಾತ ಲೇಖಕರಾದ “ರಾಗಂ” ಎಂದೆ ಹೆಸರು ವಾಸಿವಾಸಿಯಾದ ರಾಜಶೇಖರ ಮಠಪತಿಯವರ ಬೆನ್ನುಡಿಯ ಕಳಶದೊಂದಿಗೆ ಚೆನ್ನಬಸವಣ್ಣ ಎಸ್.ಎಲ್. IPS. ರವರ ಮುನ್ನುಡಿಯ ಶುಭ ಹಾರೈಕೆ ಜೊತೆಗೂಡಿ 2022 ರಲ್ಲಿ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿದ ಕೃತಿ ಇದಾಗಿದೆ. ಎಸ್. ಬಿ. ಮಾಳಗೊಂಡರವರು ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಲಾಟಿ ಹಿಡಿದು ಸಮಾಜಘಾತುಕರ ವಿರುದ್ಧ ಚಾಟಿ ಬೀಸುವ ಹುದ್ದೆಯಲ್ಲಿ ಇರುವವರು. … Read more
ಕುವೆಂಪು ಯುವ ಮಂಥನ ಲೇಖನ ಸ್ಪರ್ಧೆಗೆ ಆಹ್ವಾನ
ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಬುಕ್ ಬ್ರಹ್ಮ ಸಂಸ್ಥೆ ಜಂಟಿಯಾಗಿ “ಕುವೆಂಪು: ಯುವ ಮಂಥನ” ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. ಕುವೆಂಪು ಅವರ ನಾಡು ನುಡಿ ಚಿಂತನೆ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ದೃಷ್ಟಿ, ಅಧ್ಯಾತ್ಮಿಕ ಮನೋಧರ್ಮಗಳನ್ನು ಅರಿಯುವ ಬಗೆಗಳನ್ನು ಈ ಲೇಖನಗಳು ಒಳಗೊಂಡಿರಲಿ. ನಿಯಮಗಳು: ಲೇಖನಗಳು ವಿಮರ್ಶಾತ್ಮಕ ಒಳನೋಟಗಳನ್ನು ಹೊಂದಿರಬೇಕು. 2000 ಪದಗಳನ್ನು ಮೀರದಂತಿರಲಿ. ಲೇಖಕರ ವಯಸ್ಸು 35 ವರ್ಷಗಳನ್ನು ಮೀರದಂತಿರಬೇಕು. ಲೇಖನಗಳು ಎಲ್ಲಿಯೂ ಪ್ರಕಟವಾಗಿರಬಾರದು. ಮೊದಲ ಬಹುಮಾನ 5 ಸಾವಿರ + 3 ಸಾವಿರ … Read more
“ಅವ್ವನೊಂದಿಗಿನ ಬದುಕಿನ ಒಡನಾಟವನ್ನು ಆಪ್ತವಾಗಿ ಮನಬಿಚ್ಚಿ ಹೇಳಿರುವ ಬಯೋಗ್ರಫಿ”: ಎಂ.ಜವರಾಜ್
ಈಚೆಗೆ ಒಂದು ಪುಟ್ಟ ಕೃತಿ ‘ನನ್ನವ್ವನ ಬಯೋಗ್ರಫಿ’ ಓದಿದೆ. ಬಯೋಗ್ರಫಿ – ಜೀವನ ಚರಿತ್ರೆ, ಜೀವನ ಚಿತ್ರ, ಲೈಫ್ ಸ್ಟೋರಿ, ದಿನಚರಿ, ಇದೆಲ್ಲಕ್ಕು ಮೀರಿದ ಆಪ್ತವಾದ ಗಾಢವಾದ ಆತ್ಮಕಥನ ಅನ್ನಬಹುದು. ಆತ್ಮಕಥನದ ಲಕ್ಷಣ- ಇರುವುದನ್ನು ಮತ್ತು ಇದ್ದು ಬದುಕಿದ್ದನ್ನು ಪ್ರಾಮಾಣಿಕವಾಗಿ ಹೇಳುವುದು; ನೋಡಿದ್ದನ್ನು ಕೇಳಿಸಿಕೊಂಡಿದ್ದನ್ನು ಯಥಾವತ್ ದಾಖಲಿಸುವುದು; ಅರ್ಥಾತ್ ‘ಇದ್ದದ್ದು ಇದ್ದ ಹಾಗೆ’! ಸಾಹಿತ್ಯ ಪ್ರಾಕಾರಗಳಲ್ಲಿ ಆತ್ಮಕಥನವೂ ಒಂದು. ಆತ್ಮಕಥನಗಳ ರಚನೆ ಅಷ್ಟು ಸುಲಭವಲ್ಲ. ಅಲ್ಲಿ ಮರೆಮಾಚುವುದಕ್ಕೆ ಅವಕಾಶವಿಲ್ಲ. ಹಾಗೇನಾದರು ಮರೆಮಾಚಿದರೆ ಅದು ಆತ್ಮಕಥನವೇ ಅಲ್ಲ. ಗಾಂಧಿಯ … Read more
ಪಂಜು ಕಥಾ ಸಂಕಲನ ಸ್ಪರ್ಧೆ ಫಲಿತಾಂಶ
ಪಂಜು ದಶಕದ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ್ದ 2021 ನೇ ಸಾಲಿನ ಪಂಜು ಕಥಾ ಸಂಕಲನ ಪ್ರಶಸ್ತಿಯ ವಿವರ ಈ ಕೆಳಗಿನಂತಿದೆ ಪಂಜು ಕಥಾ ಸಂಕಲನ ಪ್ರಶಸ್ತಿ ಪಡೆದ ಕೃತಿಬಯಲಲಿ ತೇಲುತ ತಾನು: ಅಕ್ಷಯ ಪಂಡಿತ್ ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು೧. ಅಗ್ಗಷ್ಟಿಕೆ: ರಾಜಶ್ರೀ ಟಿ. ರೈ, ಪೆರ್ಲ೨. ಪೂವಿ: ಮಲ್ಲೇಶ್ ಮಾಲಿಂಕಟ್ಟೆ೩. ದಶಕದ ಕತೆಗಳು: ಟಿ ಎಂ ರಮೇಶ೪. ನೀಲಕುರಿಂಜಿ: ದಾದಾಪೀರ್ ಜೈಮನ್೫. ಮಾರ್ಗಿ: ಲಿಂಗರಾಜ ಸೊಟ್ಟಪ್ಪನವರ ಒಟ್ಟು 25 ಕಥೆಗಾರರು ನಾಡಿನ ಮೂಲೆಮೂಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. … Read more
“ಉಪ್ಪುಚ್ಚಿ ಮುಳ್ಳು” ವಿಲಕ್ಷಣ, ವಿಕ್ಷಿಪ್ತ, ವಿಚಿತ್ರ ಎನಿಸಿದರೂ ವಿಶಿಷ್ಟ ಕೃತಿ: ಡಾ. ನಟರಾಜು ಎಸ್. ಎಂ.
ಕಳೆದ ವರ್ಷ ಅನಿಸುತ್ತೆ ಸಿರಾ ಸೀಮೆಯ ರಂಗಕರ್ಮಿ ಗೋಮಾರದಹಳ್ಳಿ ಮಂಜುನಾಥ್ ರವರು ತಾವು ಇಷ್ಟಪಟ್ಟು ಶುರು ಮಾಡಿರುವ Native nest ಎಂಬ ಯೂ ಟ್ಯೂಬ್ ಚಾನೆಲ್ ನಲ್ಲಿ ಕವಿತೆಯೊಂದನ್ನು ವಾಚನ ಮಾಡಿದ್ದರು. ಕವಿತೆಯ ಶೀರ್ಷಿಕೆ “ಮೊಲೆ” ಎಂದಾಗಿತ್ತು. ಕವಿಯ ಹೆಸರು ದಯಾ ಗಂಗನಘಟ್ಟ (ದಾಕ್ಷಾಯಿಣಿ). “ಮೊಲೆ” ಅನ್ನುವ ಕವನವನ್ನು ಅದಕ್ಕೂ ಮೊದಲು ಆಶಾ ಜಗದೀಶ್ ರವರು ಫೇಸ್ ಬುಕ್ ನಲ್ಲಿ ಬರೆದಿದ್ದರು. ಎರಡೂ ಕವಿತೆಗಳನ್ನು ನೋಡಿದ್ದ ನನಗೆ ದಯಾ ಗಂಗನಘಟ್ಟ, ಆಶಾ ಜಗದೀಶ್ ರವರಿಂದ ಸ್ಫೂರ್ತಿ ಪಡೆದರಾ? … Read more
ಆಡಿ ಬಾ ನನ ಕಂದ ; ಅಂಗಾಲ ತೊಳೆದೇನು!: ಡಾ. ಹೆಚ್ ಎನ್ ಮಂಜುರಾಜ್,
ಮಕ್ಕಳನ್ನು ಕುರಿತು ನಮ್ಮ ಜನಪದರು ಇನ್ನಿಲ್ಲದಂತೆ ಹಾಡಿ ಹರಸಿದ್ದಾರೆ. ಜನವಾಣಿ ಬೇರು; ಕವಿವಾಣಿ ಹೂವು ಎಂದು ಆಚಾರ್ಯ ಬಿಎಂಶ್ರೀಯವರು ಹೇಳಿದಂತೆ, ಜನಪದ ಹಾಡು, ಗೀತ ಮೊದಲಾದ ಸಾಹಿತ್ಯದ ಸೃಷ್ಟಿಕರ್ತರು ಬಹುತೇಕ ಹೆಣ್ಣುಮಕ್ಕಳೇ. ಅದರಲ್ಲೂ ತವರು, ದಾಂಪತ್ಯ, ಬಡತನ, ದೇವರು, ಸೋದರರು, ಗಂಡ, ಗಂಡನಮನೆ ಹೀಗೆ ಜನಪದ ತ್ರಿಪದಿಗಳನ್ನು ಗಮನಿಸಿದರೆ ಸಾಕು, ನಮಗೆ ಅರ್ಥವಾಗುತ್ತದೆ. ಏಕೆಂದರೆ ಭಾರತೀಯ ಕುಟುಂಬ ವ್ಯವಸ್ಥೆ ಹಾಗಿತ್ತು. ಈಗಿನದೆಲ್ಲ ಮೈಕ್ರೋ ಫ್ಯಾಮಿಲಿ ಯುಗ. ಕೂಡು ಕುಟುಂಬ ಮತ್ತು ಹಿರಿಯರ ಯಾಜಮಾನ್ಯಗಳು ನಮ್ಮ ಕೌಟುಂಬಿಕ ಪದ್ಧತಿಯನ್ನು … Read more
ಒಂದು ಪರ್ಸಿನ ಕತೆ…: ಅಮರದೀಪ್
ಆಗಾಗ ನಾವು ಗಂಡಸರು ಎದೆ ಮೇಲಿನ ಜೇಬು ಮುಟ್ಟಿ ನೋಡಿಕೊಳ್ಳುತ್ತೇವೆ. ಖಾತರಿಯಾದರೆ ಸಮಾಧಾನ; ಮೊಬೈಲ್ ಇದೆ ಅಂತ. ಪ್ಯಾಂಟಿನ ಹಿಂಬದಿಯ ಜೇಬು ಮುಟ್ಟುತ್ತೇವೆ.ಪರ್ಸ್ ಇದೆಯಾ?! ಇಲ್ಲವಾ?!! ಅಂತ. ಎದೆ ಜೇಬಿನಲ್ಲಿ ಮೊಬೈಲ್ ಬಿಟ್ಟು ಚೀಟಿ ಚಪಾಟಿ, ವಿಸಿಟಿಂಗ್ ಕಾರ್ಡ್, ಪೆಟ್ರೋಲ್ ಹಾಕಿಸಿದ ಬಿಲ್ಲು, ಎಟಿಎಂ ನಲ್ಲಿ ದುಡ್ಡು ಡ್ರಾ ಮಾಡಿದ ಪ್ರಿಂಟೆಡ್ ರಸೀತಿ, ಮೆಡಿಕಲ್ ಶಾಪಿಗೆ ಹೋಗಲೆಂದು ಇಟ್ಟುಕೊಂಡ ಡಾಕ್ಟರ್ ಬರೆದುಕೊಟ್ಟ ಗುಳಿಗೆ ಚೀಟಿ.. ಹಾಳು ಮೂಳು ಎಲ್ಲವನ್ನು ತುರಿಕೊಂಡಿರುತ್ತೇವೆ… ದುಡ್ಡೊಂದನ್ನು ಬಿಟ್ಟು. ಪರ್ಸಿನ ಕತೆಯೂ ಹಾಗೇ… … Read more
ಗ್ರಹಣ: ಡಾ. ವೃಂದಾ ಸಂಗಮ್
ಗ್ರಹಣ ಎಂದರೇನು? ಅಂತ ಐದನೇ ಕ್ಲಾಸಿನೊಳಗ ವಿಜ್ಞಾನದ ವಿಷಯದೊಳಗ ಒಂದು ಪ್ರಶ್ನೆ ಇತ್ತು. ಒಂದು ಆಕಾಶಕಾಯ ಇನ್ನೊಂದು ಆಕಾಶ ಕಾಯದ ನೆರಳಿನಿಂದ ಆಂಶಿಕವಾಗಿ ಇಲ್ಲವೇ ಪೂರ್ಣವಾಗಿ ಅಸ್ಫುಟವಾಗುವಿಕೆಯನ್ನು ಗ್ರಹಣ ಎನ್ನುವರು ಅಂತ ಬಾಯಿಪಾಠಾನೂ ಮಾಡಿಸಿದ್ದಳು, ನಮ್ಮವ್ವ. ಹಿಂದ ನಾವು ಬಾಯಿಪಾಠ ಕಲಿತಿದ್ದು ಈಗಲೂ ನೆನಪಿರತದ, ಮೂರು ವರುಷದ ುದ್ಧಿ ನೂರು ವರುಷದ ತನಕಾಂತ. ಆದರ, ಈಗ ಗ್ರಹಣ ಎಂದರೇನು? ಪ್ರಶ್ನೆ ಮುಂದ ನಿಮ್ಮ ಮಾತಿನಲ್ಲಿ ಬರೆಯಿರಿ ಅಂತ ಇತ್ತು, ನಾನೂ ಹಿಂದ ಮುಂದ ನೋಡಲಿಲ್ಲ, ನಮ್ಮವ್ವ ಬಾಯಿಪಾಠ … Read more
ಕುಗ್ಗಿದಾಗಲೆಲ್ಲಾ ಕಗ್ಗ ಓದಬೇಕು !: ಮನು ಗುರುಸ್ವಾಮಿ
ಹೌದು.. ಮನುಷ್ಯ ಕುಗ್ಗಿದಾಗಲೆಲ್ಲಾ ಮಂಕುತಿಮ್ಮನ ಕಗ್ಗ ಓದಬೇಕು. ಬಹುತೇಕ ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ, ಇರುವಷ್ಟು ಕಾಲ ಸೂರ್ಯನಂತೆ ಬೆಳಗಿ ಮರೆಯಾಗಬೇಕೆಂಬ ಸಂದೇಶವನ್ನು ಸಾರುವಲ್ಲಿ, ಬದುಕಿನ ಅಪರಿಮಿತ ಹೋರಾಟ, ಅನಿರೀಕ್ಷಿತ ಸವಾಲುಗಳನ್ನು ಹೇಗೆ ಎದುರುಗೊಳ್ಳಬೇಕೆಂಬ ವಿಚಾರವನ್ನು ಮನದಟ್ಟು ಮಾಡುವಲ್ಲಿ ಈ ಕೃತಿ ಮಹತ್ವದ ಪಾತ್ರವಹಿಸಿದೆ. ನಾನು, ನನ್ನದೆಂಬ ಭ್ರಮೆಯಲ್ಲಿ ಜೀವನವಿಡೀ ನಡೆದು, ಕೊನೆಗೆ ಎಲ್ಲವನ್ನು ಬಿಟ್ಟು ಮಣ್ಣು ಸೇರುವ ಮನುಷ್ಯನ ನಶ್ವರ ಬದುಕಿನ ಬಗ್ಗೆ ಇಲ್ಲಿನ ಚೌಪದಿಗಳು ಎಳೆ ಎಳೆಯಾಗಿ ತಿಳಿಸಿಕೊಡುತ್ತವೆ. ನಾಲ್ಕು ಸಾಲಿನ ಸಣ್ಣ ಸಣ್ಣ ಪದ್ಯಗಳಿಂದ … Read more
ಆತ್ಮಾನುಬಂಧದ ಸಖಿಯೊಡನೆ ಒಂದು ಸಹೃದಯ ಸಂವಾದ: ವರುಣ್ ರಾಜ್ ಜಿ.
ಕವಿ ಶ್ರೀ ರಾಘವೇಂದ್ರ ಡಿ. ತಳವಾರರ “ಆತ್ಮಾನುಬಂಧದ ಸಖಿ” ಕೃತಿಯ ಕುರಿತು ಇತ್ತೀಚೆಗೆ ತನುಶ್ರೀ ಪ್ರಕಾಶನದಿಂದ ಪ್ರಕಟಣೆಯಾಗಿದ್ದು ಅತ್ಯಲ್ಪ ಕಾಲದಲ್ಲಿಯೇ ಹಲವು ಸಹೃದಯರ ಮನಸ್ಸನ್ನು ಗೆದ್ದಿದೆ. ಈ ಕೃತಿಯು ರೂಪ – ಸ್ವರೂಪ ಮತ್ತು ವಿಷಯ ವ್ಯಾಪ್ತಿಯ ದೃಷ್ಠಿಯಿಂದ ಒಂದು ವಿಶಿಷ್ಟವಾದ ಕೃತಿ ಎನಿಸಿದ್ದು, ಓದುಗರನ್ನು ಎಲ್ಲಿಯೂ ನಿರಾಸೆಗೊಳಿಸದ ಗುಣ ಈ ಕೃತಿಯಲ್ಲಿದೆ. “ಆತ್ಮಾನುಬಂಧದ ಸಖಿ” ಕೃತಿಯ ಕವನದ ಸಾಲುಗಳು ಪದ್ಯದಂತೆ ಓದುವವರಿಂದ ಪದ್ಯವಾಗಿಯೂ, ಗದ್ಯದಂತೆ ಓದುವವರಿಂದ ಗದ್ಯವಾಗಿಯೂ ಓದಿಸಿಕೊಳ್ಳುತ್ತವೆ. ಪದ್ಯದಂತೆ ಹಾಡಿದರೂ ಗದ್ಯದಂತೆ ಓದಿದರೂ ಅರ್ಥ … Read more
ಯವ್ವಾ ಯವ್ವಾ “ಭೂಮಿಯ ಋಣ” ಚಂದ ಕಣವ್ವಾ: -ಡಾ. ನಟರಾಜು ಎಸ್. ಎಂ.
ಒಂದು ಪೇಜಿನ ಕತೆ, ಕವಿತೆ ಕಟ್ಟುವುದು ಸುಲಭ. ಹತ್ತಾರು ಪುಟಗಳ ಕಥೆ, ನೂರಾರು ಪುಟಗಳ ಕಾದಂಬರಿ ಬರೆಯುವುದು ಕಷ್ಟ. ಆ ಕಷ್ಟಕ್ಕೆ ಯುವ ಲೇಖಕರು ತೆರೆದುಕೊಂಡಂತೆ ಯುವ ಲೇಖಕಿಯರು ತೆರೆದುಕೊಂಡಿದ್ದು ಬಹಳ ವಿರಳ. ಆ ಕಾರಣಕ್ಕೆ ಯುವ ಲೇಖಕಿಯರ ಕವಿತೆಗಳು ನಮಗೆ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷಾಂಕಗಳಲ್ಲಿ ಹೆಚ್ಚಾಗಿ ಓದಲು ಸಿಗುತ್ತವೆ. ಲೇಖಕಿಯರು ಕಥಾಲೋಕಕ್ಕೆ ತೆರೆದುಕೊಳ್ಳಲು ಒಂದಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎನಿಸುತ್ತದೆ. ಬದುಕಿನ ಅನುಭವಗಳನ್ನು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕೆಲಸ ಅಷ್ಟು ಸುಲಭವಲ್ಲ. ಆ ಸುಲಭವಲ್ಲದ ಕೆಲಸವನ್ನು ಒಂದು … Read more
ಬಂಡಾಯ ಕಾವ್ಯ: ಗೋಲ್ಡನ್ ಅಶು, ಜಬೀವುಲ್ಲಾ ಎಂ. ಅಸದ್, ಪ್ರಶಾಂತ್ ಬೆಳತೂರು
ಗಾಂಧಿ ಮತ್ತು ಅವನ ಖಾಯಿಲೆ ಬಿದ್ದ ಸ್ವಾತಂತ್ರ್ಯ ಭವಿಷ್ಯವಿರದ ಸಾಲಿಯ ಗೋಡೆಗಳುಬದುಕು ಕಟ್ಟುವ ಕನಸು ಕಾಣುತ್ತವೆಹೆಗಲಿಗೆ ಐಡಿ ಕಾರ್ಡಿಲ್ಲದ – ಕೆಂಪು ಶಾಲಿನ ಪೋರಶಾಲೆಗೊರಟ ಒಂಟಿ ಸಾಬರ ಮನೆಯ ಹುಡುಗಿಗೆರಾಮ ನಾಮ ಹೇಳುತ್ತಿದ್ದಆ ಗಟ್ಟಿಗಿತ್ತಿಯೂ ಸುಮ್ಮನಿರಲಿಲ್ಲಬೀದಿ ಮಧ್ಯೆಯೇ ಆಜಾನ್ ಕೂಗಿದಳು ಆಗ –ಕಪ್ಪು ಕೋಮುವಿನ ಹಲಗೆಯ ಮೇಲೆಕಲಿಸುವವ ಸಂವಿಧಾನದ ಕೊಲೆಮಾಡುತ್ತಿದ್ದ ! ಸತ್ಯಕ್ಕೆ ಗಲ್ಲಾದ ಈ ಹೊತ್ತುಹಸಿಮೈಯ್ಯ ಅತ್ಯಾಚಾರಿ ಬಾಲೆಯೊಬ್ಬಳ ಮನೆಯಮುಂದೆ –ಸ್ವತಂತ್ರ್ಯದ ಸಂಭ್ರಮ ಮನೆ ಮಾಡಿತ್ತು ! ಹೌದುನವ ಭಾರತಕ್ಕೆ ಎಪ್ಪತ್ತೈದರಸಂಭ್ರಮ , ಅತ್ಯಾಚಾರಿಗೆ – … Read more
ಪರಿಮಳದ ಪಯಣದಲಿ ಜೀವ ಜೀವನ ಧನ್ಯ: ಡಾ. ಹೆಚ್ ಎನ್ ಮಂಜುರಾಜ್
ಪುಸ್ತಕದ ಹೆಸರು : ಪರಿಮಳಗಳ ಮಾಯೆಲಲಿತ ಪ್ರಬಂಧ ಸಂಕಲನಲೇಖಕಿ : ಶ್ರೀಮತಿ ಆರ್ ಸಮತಾಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗಮೊದಲ ಮುದ್ರಣ : 2022, ಬೆಲೆ: ರೂ. 140 ಶ್ರೀಮತಿ ಸಮತಾ ಅವರ ಈ ಲಲಿತ ಪ್ರಬಂಧಗಳ ಪುಸ್ತಕವು ಓದಲು ಸಿಕ್ಕಿದ್ದು ನನಗೆ ಆಕಸ್ಮಿಕವಾಗಿ. ಸಮತಾ ಅವರು ನನ್ನ ತಂಗಿಯ ಸಹಪಾಠಿಯಾಗಿದ್ದವರು. ನಿನ್ನೆ ನನ್ನ ಸೋದರಿ ಲಕ್ಷ್ಮಿ ಉರುಫ್ ಪಮ್ಮಿಯ ಮನೆಗೆ ಹೋದಾಗ ಅದೂ ಇದೂ ಮಾತಾಡುವಾಗ ಲೇಖಕಿಯ ವಿಚಾರ ಬಂತು. ಈಕೆ ನನ್ನ ತಂಗಿಯ ಸ್ನೇಹಿತೆ. ನನ್ನ … Read more
‘ಕಾಂತಾರ’ದೊಳಗೊಂದು ಸುತ್ತು: ಶ್ರೀಧರ ಪತ್ತಾರ, ವಿಜಯಪುರ.
ಕಾಡು, ಅದರ ಸುತ್ತಲಿನ ಜಗತ್ತು ಮತ್ತು ಭೂತಕೋಲದ ದೈವದೊಂದಿಗೆ ತಳಕು ಹಾಕಿಕೊಂಡಿರುವ ಕಾಂತಾರ ನೋಡುಗರಿಗೆ ತನ್ನೊಳಗಿನ ಭಾವವನ್ನು ಬಹಳ ಬೇಗನೆ ಬಿಟ್ಟುಕೊಡುವುದಿಲ್ಲ. ಕಾಂತಾರದ ಕತ್ತಲೆ ಬೆಳಕು, ರವ-ನಿರವಯತೆಯ ಚುಂಗುಹಿಡಿದು ಹೊರಟರೆ ಖಂಡಿತವಾಗಿಯೂ ಕಥೆಯ ಕಾಡಿನೊಳಕ್ಕೆ ಪಯಣಿಸುತ್ತೇವೆ. ನೋಡುನೋಡುತ್ತಲೇ ಅದರೊಳಗೆ ಕಳೆದುಹೋಗುತ್ತೇವೆ. ತನ್ನ ವಾದ್ಯ, ತಾಳಮೇಳದ ಸದ್ದುಗದ್ದಲದೊಂದಿಗೆ ನಮ್ಮನ್ನು ಆಗಾಗ ಬೆಚ್ಚಿಬೀಳಿಸುತ್ತ, ಮೈನವಿರೇಳಿಸುವ ಕಾಂತಾರವೆಂಬ ದೃಶ್ಯಕಾವ್ಯ ನಮ್ಮಲ್ಲಿ ನಿಜಕ್ಕೂ ಆಶ್ಚರ್ಯ ಅದ್ಭುತವೆನ್ನಬಹುದಾದ ಭಾವವೊಂದನ್ನು ಹುಟ್ಟುಹಾಕುತ್ತದೆ. ವಿಭಿನ್ನ ಮತ್ತು ವಿಶೇಷ ಎಂದೆನಿಸುವ ಕಾಡೆಂಬ ನಿಗೂಢ ಜಗತ್ತನ್ನು ತೆರೆದಿಡುವ ಕತೆ ನೋಡುಗರನ್ನು … Read more