ಒಳತೋಟಿ: ಆನಂದ್ ಗೋಪಾಲ್
‘ಒಂದು ಶುಕ್ರವಾರ ಸರಿ; ಪ್ರತಿ ಶುಕ್ರವಾರವೂ ಕಾಲೇಜಿಗೆ ತಡ ಎಂದರೆ ಯಾವ ಪ್ರಿನ್ಸಿಪಾಲ್ ತಾನೆ ಸುಮ್ಮನಿರುತ್ತಾರೆ?’ – ಹೀಗೆ ಯೋಚಿಸುತ್ತಲೇ ಶೀಲಶ್ರೀ ಪ್ರಿನ್ಸಿಪಾಲರ ಕಚೇರಿಯೊಳಗೆ ಕಾಲಿಟ್ಟಳು. ಅದೇ ಅಲ್ಲಿಂದ ಎಲ್ಲಿಗೋ ಹೊರಟಿದ್ದ ಅವರು ಇವಳತ್ತ ನೋಡಲೂ ಸಮಯವಿಲ್ಲದವರಂತೆ ದುಡುದುಡು ನಡದೆಬಿಟ್ಟರು. ಶೀಲಶ್ರೀಗೆ ಇದು ತುಸು ಸಮಾಧಾನ ತಂದಿತು. ಆದರೂ ‘ವಾರದ ಮೀಟಿಂಗ್’ನಲ್ಲಿ ಇದನ್ನು ಅವರು ಪ್ರಸ್ತಾಪಿಸದೆ ಬಿಡುವವರಲ್ಲ ಎಂದು ಅವಳಿಗೆ ಗೊತ್ತಿತ್ತು! ಸದ್ಯ ಇವತ್ತಿಗೆ ಮುಜುಗರ ತಪ್ಪಿತು ಎಂದು ಹಾಜರಾತಿ ವಹಿಯಲ್ಲಿ ಸಹಿ ಹಾಕಿ ಕ್ಲಾಸ್ನತ್ತ ನಡೆದಳು. … Read more