ಮೇಷ್ಟ್ರು ರವಿ, ರಾಜಿ ಮತ್ತು ಮಗ ರವಿರಾಜ: ಲಿಂಗರಾಜು ಕೆ ಮಧುಗಿರಿ
ಅಗ್ರಹಾರಕ್ಕೆ ವರ್ಗವಾಗಿ ಬಂದ ರವಿಯನ್ನು, “ಆ ಶಾಲೆಯನ್ಯಾಕೆ ತೆಗೆದುಕೊಂಡೆ ಗುರು? ನೆಕ್ಸ್ಟ್ ಅಕಾಡೆಮಿಕ್ ಇಯರ್‌ಗೆ ನೀನು ಹೆಚ್ಚುವರಿ ಆಗೋದು ಪಕ್ಕಾ. ಆ ಹೆಸ್ರಿಗೂ ಆ ಊರ್ಗೂ ಸಂಬಂಧಾನೇ ಇಲ್ಲ. ಊರಿನ ತುಂಬೆಲ್ಲಾ ಇರೋದು ಮಾದಿಗ್ರು, ಹೊಲೇರು, ಕುರುಬ್ರು, ಮಡಿವಾಳ್ರೇ. ಗೊತ್ತಲ್ಲಾ ಅವ್ರೆಂಗೆ ಅಂತಾ?”, ಹೀಗೆ ತುಟಿಗೆ ಇಷ್ಟಿಷ್ಟೇ ವೋಡ್ಕಾನಾ ಮುತ್ತಿಡ್ತಾ, ರವಿಯ ಕಸಿನ್, ಕುಮಾರ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ. ರವಿ, ಅಗ್ರಹಾರದ ಹೆಸರಿನಿಂದ ಹಾಗೂ ಕೌನ್ಸೆಲಿಂಗ್ ನಲ್ಲಿ ಉಳಿದ ಒಂದೇ ಒಂದು ಶಾಲೆ ಇದಾಗಿದ್ದುದರಿಂದ ಅನಿವಾರ್ಯವಾಗಿ … Read more