ಪಂಜು ಅಂತರ್ಜಾಲ ಪತ್ರಿಕೆ ವತಿಯಿಂದ ಕವಿತೆ ಸ್ಪರ್ಧೆಗೆ ನಿಮ್ಮ ಕವಿತೆಯನ್ನು ಆಹ್ವಾನಿಸಲಾಗಿದೆ.
ಸೂಚನೆಗಳು:
-ಕವಿತೆ ಸ್ವಂತ ರಚನೆಯಾಗಿರಬೇಕು.
-ಕವಿತೆ ಯೂನಿಕೋಡ್ ನಲ್ಲಿ ಇದ್ದರೆ ಒಳ್ಳೆಯದು.
-ಸ್ಪರ್ಧೆಗೆ ಅಪ್ರಕಟಿತ ಕವಿತೆಯನ್ನು ಮಾತ್ರ ಕಳುಹಿಸಬೇಕು. ಕವಿತೆಯು, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಕವಿತೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
-ಬೇರೆಯವರ ಕದ್ದ ಕವಿತೆಯನ್ನು ಕಳುಹಿಸಿದರೆ ಅಂತಹ ಲೇಖಕರನ್ನು ಪಂಜುವಿನ ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು.
ಕವಿತೆಯನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com
ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಕವಿತೆ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ.
ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ..
ಕವಿತೆ ತಲುಪಬೇಕಾದ ಕೊನೆಯ ದಿನಾಂಕ: 20.10.2024
ಮೊದಲ ಬಹುಮಾನ: 3000 ರೂಪಾಯಿ
ಎರಡನೇ ಬಹುಮಾನ: 2000 ರೂಪಾಯಿ
ಮೂರನೇ ಬಹುಮಾನ: 1000 ರೂಪಾಯಿ
ಹಾಗು ತೀರ್ಪುಗಾರರ ಮೆಚ್ಚುಗೆ ಪಡೆದ ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
ನಿಮ್ಮ ಕವಿತೆಯ ನಿರೀಕ್ಷೆಯಲ್ಲಿ…
ಇತಿ
ಪಂಜು ಬಳಗ 🙂