ದೇಶಪ್ರೇಮವೆನ್ನುವುದು ಪ್ರತಿಯೊಬ್ಬ ಪ್ರಜೆಗೂ ಆತ್ಮಾಭಿಮಾನದ ಸಂಕೇತ: ಶಿವಲೀಲಾ ಹುಣಸಗಿ ಯಲ್ಲಾಪುರ

“ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ನಿಜ ತಾನೆ? ಎದೆಯ ಸೀಳಿ ಹುಡುಕದಿರಿಮದ್ದು ಗುಂಡುಗಳ ಬಳಸದಿರಿಬಂದೂಕಿನ ಎದೆಗೂಡಲಿಪ್ರೀತಿ, ಅನುರಾಗ, ಅನುಬಂಧ ಚಿಗುರಿದೇಶವೆಂಬ ಆತ್ಮಾಭಿಮಾನ ಹೊಮ್ಮಿನರನಾಡಿಗಳಲಿ ಚೈತನ್ಯ ತುಂಬಲಿ. . . ದೇಶಪ್ರೇಮವೆನ್ನುವುದು ಪ್ರತಿಯೊಬ್ಬ ಪ್ರಜೆಗೂ ಆತ್ಮಾಭಿಮಾನದ ಸಂಕೇತ. ದೇಶ ರಕ್ಷಣೆಯಲ್ಲಿ ಇದರ ಪಾತ್ರ ಪ್ರಮುಖವಾದದ್ದು. ಕೇವಲ ದೇಶ ರಕ್ಷಣೆಯಷ್ಟೇ ಅಲ್ಲ ಸಮಾಜದ ರಕ್ಷಣೆಯಲ್ಲೂ ಮುಖ್ಯವಾದುದು. ಹಾಗಿದ್ದ ಮೇಲೆ ದೇಶಪ್ರೇಮ ಎಂದರೇನು? ಯಾಕಾಗಿ ದೇಶವನ್ನು ಪ್ರೀತಿಸಬೇಕು? ದೇಶ ಪ್ರೀತಿಸುವುದರ ಪ್ರತಿಫಲವೇನು? ವಿಶ್ವದಾದ್ಯಂತ ಅನೇಕ ದಾರ್ಶನಿಕರು ತಮ್ಮದೇ ಆದ ರೀತಿಯಲ್ಲಿ ದೇಶ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುಖಗಳು ಬೇಕಾಗಿವೆ: ವೃಂದಾ ಸಂಗಮ್

ಮುಖಗಳು ಬೇಕಾಗಿವೆ ಅಂತ ಮುಖಪುಟದಾಗ ಓದಿದ ಮಂದಿಗೆ ಸ್ವಲ್ಪ ಆಶ್ಚರ್ಯನಏ ಆತು. “ಇದೇನೋ ಮಾರಾಯ, ಕಣ್ಣುಗಳು ಬೇಕಾಗಿವೆ, ಕಿಡ್ನಿಗಳು ಬೇಕಾಗಿವೆ ಅಂತ ಡಾಕ್ಟರು ಹೇಳೋದು ಕೇಳಿದ್ದಿವಿ. ಇದೇನಿದು ಹೊಸಾ ವಿಷಯ. ಯಾರಿಗೆ ಏನು, ಯಾಕ, ಏನೇನೂ ಬರೆದಿಲ್ಲಪಾ, ಮುಖಗಳು ಅಂದರ ಈ ಸಿನಿಮಾದವರು ಹೇಳತಾರಲಾ ಹಂಗೇನರ ಹೊಸಾ ಮುಖಗಳು ಬೇಕಾಗಿವೆ ಅಂತೇನರೆ ಅದನೋ ಏನೋ, ಆದರ ಎಂತಾ ಮುಖಗಳು ಬೇಕಾಗ್ಯಾವ ಅಂತನೂ ಹೇಳಿಲ್ಲ ನೋಡ ಮತ್ತ”. ಅಂತ ರಾಮ್ಯಾ ಮುಂಜ ಮುಂಜಾನೆ ಮೊಬೈಲು, ಟೀವಿ ಬಿಟ್ಟು ಓಡಿಕೋತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಾರೆಂಟ್…!: ಶರಣಗೌಡ ಬಿ ಪಾಟೀಲ ತಿಳಗೂಳ

ಅಕ್ಟೋಬರ್ ನಾಲ್ಕರ ರಾತ್ರಿ ಹತ್ತು ಗಂಟೆ ಸುಮಾರಿಗೆ ವೆಂಕಟೆಮ್ಮ ಟಿ.ವಿ ಚಾಲು ಮಾಡಿದಾಗ ವಾರೆಂಟ ಅನ್ನುವ ಕಾರ್ಯಕ್ರಮ ಮೂಡಿ ಬರುತಿತ್ತು. ಅದನ್ನು ನೋಡಿ ಮುಗಿಸುತಿದ್ದಂತೆ ಇವಳ ಮೈ ಜುಮ್ ಎಂದು ಮುಖ ಸಂಪೂರ್ಣ ಬೆವರಿ ಹೋಯಿತು. ಕೈಕಾಲು ಶಕ್ತಿ ಹೀನವಾದವು. ಗಂಟಲು ಒಣಗಿ ಹೋಯಿತು. ಇಳಿ ವಯಸ್ಸಿನವಳಾದ ಇವಳ ಮೇಲೆ ದುಷ್ಪರಿಣಾಮ ಬೀರಿತು. ಮಾನಸಿಕ ನೆಮ್ಮದಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸಲು ಆರಂಭಿಸಿದಳು. ಅಂದು ಮನೆಯಲ್ಲಿ ಯಾರೂ ಇಲ್ಲದ ಕಾರಣ ಬೇಸರ ಕಳೆಯಲು ಟಿವಿ ಚಾಲು ಮಾಡಿದ್ದಳು. ಟಿವಿಯಲ್ಲಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಮ್ಮ ಶ್ರೇಷ್ಟತೆಯನ್ನು ಬೇರೆಯವರ ನಿಮ್ನತೆಯಲ್ಲಿ ಕಾಣುವವರ ಮೂಲಗುಣಗಳ ಅನಾವರಣ ಮಾಡುವ “ಸ್ನೇಕ್‌ ಟ್ಯಾಟೂ”: ಡಾ. ನಟರಾಜು ಎಸ್‌ ಎಂ

ಬೆಳ್ಕೆ ಮಹಾದೇವ ಗಿರಿರಾಜರವರು ಕಳೆದ ಒಂದು ದಶಕದಿಂದ ಎಫ್‌ ಬಿ ಗೆಳೆಯರು. ಸಿನಿಮಾ ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ ಹೆಸರು ಮಾಡಿದವರು. ಈಗ “ಕಥೆಗೆ ಸಾವಿಲ್ಲ” ಪುಸ್ತಕದ ಮೂಲಕ ಕಾದಂಬರಿಕಾರರಾಗಿದ್ದಾರೆ. ಜೊತೆಗೆ “ಸ್ನೇಕ್‌ ಟ್ಯಾಟೂ” ಎಂಬ ಹೊಸ ಕಥಾಸಂಕಲನದ ಮೂಲಕ ಕಥೆಗಾರರಾಗಿದ್ದಾರೆ. ಬಿ ಎಂ ಗಿರಿರಾಜರವರ “ನವಿಲಾದವರು” ಚಿತ್ರವನ್ನು ಯೂ ಟ್ಯೂಬ್‌ ನಲ್ಲಿ ನೋಡಿದ್ದೆ. ಆ ಚಿತ್ರದಲ್ಲಿನ ಅವರ ನಟನೆ ನನಗೆ ತುಂಬಾ ಇಷ್ಟವಾಗಿತ್ತು. ಒಬ್ಬ ಆತಂಕವಾದಿಯ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ನಂತರ ಬಂದ ಅವರ ಚಿತ್ರಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯು ನೀಡಿದ ಕಣ್ಣು: ಮನು ಗುರುಸ್ವಾಮಿ

ರಾಧಾ ಕೃಷ್ಣರ ಪ್ರೇಮವೆಂದರೆ ಅದೊಂದು ಅಪೂರ್ವ ಕಾವ್ಯಾ; ಭಾಗಶಃ ಹೊಸಗನ್ನಡ ಸಾಹಿತ್ಯದಲ್ಲಿ ಈ ಪ್ರೇಮ ಕಾವ್ಯದ ಬಗ್ಗೆ ಹಾಡಿ ಹೊಗಳದ ಕವಿಗಳಿಲ್ಲ. ಈ ಪ್ರೇಮಕಥೆಯನ್ನು ಕೇಳಿ ತಣಿಯದ ಕನ್ನಡ ಮನಗಳಿಲ್ಲ. ರಾಧೆ ಕೃಷ್ಣನೇ ಆಗಿ ಕೃಷ್ಣನನ್ನು ಆರಾಧಿಸುತ್ತಾ, ಪ್ರೇಮಿಸುತ್ತಾ, ಸಂಭ್ರಮಿಸುತ್ತಾ ಬಂದ ಕಥೆಯೇ ಈ ರಾಧಾಕೃಷ್ಣ ಪ್ರೇಮ. ಕುವೆಂಪು, ಪು.ತಿ.ನ, ಕೆಎಸ್ ನರಸಿಂಹಸ್ವಾಮಿ, ಜಿ ಎಸ್ ಶಿವರುದ್ರಪ್ಪ , ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ, ವೆಂಕಟೇಶಮೂರ್ತಿ ಮೊದಲಾದ ಹಲವಾರು ಕವಿಗಳು ತಮ್ಮ ಕಾವ್ಯಗಳಲ್ಲಿ ರಾಧಾಕೃಷ್ಣ ಪ್ರೇಮವನ್ನು ಬಹಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜುವಿನ ದಶಕದ ಸಂಭ್ರಮದ ವಿಶೇಷಾಂಕಕ್ಕೆ ಬರಹಗಳ ಆಹ್ವಾನ

ಸಹೃದಯಿಗಳೇ, ಇದೇ ಜನವರಿ ೨೧ನೇ ತಾರೀಖಿಗೆ ಪಂಜುವಿಗೆ ಹತ್ತು ವರ್ಷ ತುಂಬುತ್ತಿದೆ. ಪಂಜುವಿನ ದಶಕದ ಸಂಭ್ರಮದ ಆಚರಣೆಗಾಗಿ ವಿಶೇಷ ಸಂಚಿಕೆಯೊಂದನು ತರಲು ಬಯಸುತ್ತಿದ್ದೇವೆ. ಈ ವಿಶೇಷ ಸಂಚಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ನಮ್ಮ ಇ ಮೇಲ್ ವಿಳಾಸ editor.panju@gmail.com ಒಮ್ಮೊಮ್ಮೆ ತಾಂತ್ರಿಕ ತೊಂದರೆಗಳಿಂದ ನೀವು ಕಳುಹಿಸಿದ ಲೇಖನ ನಮಗೆ ತಲುಪದೇ ಇರಬಹುದು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಪು ಎಂದರೆ ನಿಲ್ಲುವುದಲ್ಲ: ಡಾ. ನಟರಾಜು ಎಸ್‌.ಎಂ.

ಕ್ಲಬ್ ಹೌಸ್ ನ ‘ಸಿನಿಮಾ ಓದು’ ಎಂಬ ಗುಂಪಿನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಕುರಿತು ಕಳೆದ ಗುರುವಾರ ಮಾತುಕತೆ ನಡೆಯುತ್ತಿತ್ತು. ಕೆ ಫಣಿರಾಜ್ ಅವರ ಸಾರಥ್ಯದಲ್ಲಿ ಪ್ರತಿ ಗುರುವಾರ ನಡೆಯುವ ಕಾರ್ಯಕ್ರಮಕ್ಕೆ ನಮ್ಮ ನಡುವಿನ ಕವಿ, ಕತೆಗಾರ, ಅಂಕಣ ಬರಹಗಾರರಾದ ಚಂದ್ರಪ್ರಭ ಕಠಾರಿಯವರ ಆಮಂತ್ರಣದ ಮೇರೆಗೆ ಕಳೆದ ವಾರ ನಾನೂ ಕೂಡ ಕೂಡಿಕೊಂಡಿದ್ದೆ. ಕಾರ್ಯಕ್ರಮದಲ್ಲಿ ಸಿನಿಮಾ ಕುರಿತ ಚರ್ಚೆಯನ್ನು ಕೇಳುತ್ತಾ ಅಲ್ಲಿನ ಮಾತುಗಾರರ ಸಿನಿಮಾ ಕುರಿತ ಪಾಂಡಿತ್ಯಕ್ಕೆ ನಿಜಕ್ಕೂ ಬೆರಗಾಗಿ ಹೋದೆ. ಆ ಗುಂಪಿನಲ್ಲಿದ್ದ ಅರ್ಪಣ ಎಚ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕುವೆಂಪು ಪುಸ್ತಕ ಮನೆಗೆ ಪುಸ್ತಕಗಳ ದೇಣಿಗೆ ನೀಡಿರಿ

ಬಡಮಕ್ಕಳ ಜ್ಞಾನಾರ್ಜನೆಯ ಉದ್ದೇಶಕ್ಕಾಗಿ ಗ್ರಾಮೀಣ ಭಾಗದಲ್ಲಿ ಸ್ಥಾಪನೆಗೊಂಡಿರುವ ‘ಕುವೆಂಪು ಪುಸ್ತಕ ಮನೆ’ ಗೆ ನಿಮ್ಮಲ್ಲಿರುವ ಯಾವುದೇ ಬಗೆಯ ಪುಸ್ತಕಗಳನ್ನು ದೇಣಿಗೆಯಾಗಿ, ದಾನವಾಗಿ ನೀಡಬಹುದಾಗಿದೆ.ನೀವು ನೀಡುವ ಒಂದು ಪುಸ್ತಕ ಒಂದು ಕೋಟಿಗೂ ಮಿಗಿಲು.ಮಕ್ಕಳಿಗೆ ಪುಸ್ತಕಗಳನ್ನು ಓದಲು ನೀಡಿ; ಸಹಕರಿಸಿ.ಪ್ರಕಟಣೆ : ಕುವೆಂಪು ಪುಸ್ತಕ ಮನೆಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿದೂ ಸಂ : 8549957444 ಅಂಚೆ ಮೂಲಕ ಪುಸ್ತಕ ತಲುಪಿಸಲುಕುವೆಂಪು ಪುಸ್ತಕ ಮನೆನಂ ೯೬/ಎ, ಪರಿಣಾಮಿಪುರ, ಕಾವೇರಿಪುರ ಅಂಚೆತಲಕಾಡು ಹೋಬಳಿ, ತಿ ನರಸೀಪುರ ತಾಲ್ಲೂಕು,ಮೈಸೂರು – ೫೭೧೧೨೩ ಕನ್ನಡದ ಬರಹಗಳನ್ನು ಹಂಚಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಮಿಠಾಯಿ ಮಾಮ ಕವಿತೆ ಸವಿಯೋಣ ಬಾ ತಮ್ಮ”: ಯಲ್ಲಪ್ಪ ಎಮ್ ಮರ್ಚೇಡ್, ರಾಯಚೂರು

ಮಕ್ಕಳ ಸಾಹಿತ್ಯ ಎಂದರೆ ಮಕ್ಕಳ ಮನಸ್ಸನ್ನು ತಣಿಸಿ, ಕುಣಿಸಿ, ಅವರ ಕುತೂಹಲವನ್ನು ಕೇರಳಿಸಿ ಅರಳಿಸಿ, ಅವರ ಭಾವನೆಗಳಿಗೆ ರೆಕ್ಕೆ ಕಟ್ಟಿ, ಗಾಳಿಯಲ್ಲಿ ತೇಲಾಡುವಂತೆ, ಅವರ ಮನಸ್ಸು ಸಂತುಷ್ಟಗೊಳಿಸುವುದಲ್ಲದೇ, ಅವರನ್ನು ಮಾನಸಿಕವಾಗಿ ದೈಹಿಕವಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹೋಗುವಂತೆ ಇರುವ ಸಾಹಿತ್ಯ. ಕನ್ನಡ ಸಾಹಿತ್ಯ ಲೋಕದೊಳಗೆ ಹಲವಾರು ಹಿರಿಯ ಸಾಹಿತಿಗಳು ಮಕ್ಕಳಿಗಾಗಿ ಬರೆದಿರುವಂತಹ ಕವಿಗಳನ್ನು ಸಹ ಕಾಣಬಹುದು. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಸೋಂಪುರದವರದಾ ಶಿಕ್ಷಕರು, ಕವಿಗಳು, ವಚನಕಾರರು, ಮಕ್ಕಳ ಸಾಹಿತಿಯು ಆಗಿರುವ ಶ್ರೀ ವೀರೇಶ ಬ ಕುರಿ ಸೋಂಪುರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಚಾರ ಮಂಟಪ ಸಾಹಿತ್ಯ ಬಳಗದ ಕವನ ಸಂಕಲನಕ್ಕೆ ಕವನಗಳ ಅಹ್ವಾನ

ವಿಚಾರ ಮಂಟಪ ಸಾಹಿತ್ಯ ಬಳಗವು ಯುವ ಕವಿಗಳ ಕವಿತೆಗಳನ್ನು ಸಂಕಲಿಸಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಆಸಕ್ತರು ಸಮಕಾಲೀನ ಸಮಸ್ಯೆಗಳ, ಸಾಮಾಜಿಕ ಪಿಡುಗುಗಳ ಕುರಿತಾಗಿ ಜಾಗೃತಿ ಮೂಡಿಸುವ ಆಶಯವುಳ್ಳ, 20-25 ಸಾಲುಗಳಿಗೆ ಮೀರದ ಎರಡು ಸ್ವರಚಿತ ಕವನಗಳನ್ನು ದಿನಾಂಕ: 30.01.2023 ರ ಒಳಗಾಗಿ 8217744886 ಈ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಲು ಕೋರಿದೆ. ಆಯ್ಕೆಯಾದ ಮೂರು ಅತ್ಯುತ್ತಮ ಕವನಗಳಿಗೆ ಮತ್ತು ಒಂದು ಉತ್ತಮ ಶೀರ್ಷಿಕೆಗೆ ಪ್ರಮಾಣಪತ್ರ ಹಾಗೂ ಪುಸ್ತಕ ಬಹುಮಾನವಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:ಧನುಷ್ ಎಚ್ ಶೇಖರ್ – … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆಗೆ ಆಹ್ವಾನ

ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆ-2023’ ಏರ್ಪಡಿಸಿದೆ. ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು ನೀಡಿ ಗೌರವಿಸಲಾಗುವುದು. ಜೊತೆಗೆ ಆಯ್ದ ಹದಿನೈದು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಅವಕಾಶ ಸಿಗಲಿದೆ. ಕಥೆಗಾರರು 2000 ಪದಮಿತಿಯ, ಯಾವ ಮಾಧ್ಯಮದಲ್ಲೂ ಪ್ರಕಟವಾಗದ, ನುಡಿ/ಯುನಿಕೋಡ್ ಲಿಪಿಯಲ್ಲಿರುವ ಕಥೆಯನ್ನು ವರ್ಡ್ ಕಡತದಲ್ಲಿ 15 ಜನೆವರಿ 2023ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ: samajamukhi2017@gmail.com ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶತಾವಧಾನಿ ಗಣೇಶರ ’ಮಣ್ಣಿನ ಕನಸು’ – ಆಧುನಿಕೋತ್ತರ ಕಾಲಘಟ್ಟದಲ್ಲಿ ತೆರೆದುಕೊಳ್ಳುವ ಪ್ರಾಚೀನ ಭಾರತದ ಕಥೆ: ರಾಘವೇಂದ್ರ ಅಡಿಗ ಎಚ್ಚೆನ್

‘ಮಣ್ಣಿನ ಕನಸು’ ಇದು ಒಂದು ಕಾದಂಬರಿ ಎಂದು ಹೇಳುವುದಕ್ಕಿಂತ 2022ರಲ್ಲಿ ಪ್ರಕಟವಾದ ಆಧುನಿಕೋತ್ತರ ಭಾರತೀಯ ಮಹಾಗದ್ಯ ಎಂದು ಹೇಳಲು ಅಡ್ಡಿ ಇಲ್ಲ. ಶತಾವಧಾನಿ ಗಣೇಶ್ ಅವರ ಸಾಕಷ್ಟು ಉಪನ್ಯಾಸಗಳನ್ನು ಕೇಳಿದ್ದ ನಾನು ಅವರ ಕಾದಂಬರಿಯನ್ನು ಓದಲೇಬೇಕೆನ್ನುವ ಆಸೆಯಿಂದ ಬೆಲೆ ದುಬಾರಿ ಎಂದೆನಿಸಿದರೂ ಖರೀದಿಸಿ ಓದಿದೆ. ಒಟ್ಟೂ 634 ಪುಟಗಳ ಗಾತ್ರ, 14 ಅಧ್ಯಾಯಗಳಿರುವ ’ಮಣ್ಣಿನ ಕನಸು’ ನಮ್ಮನ್ನು ಎರಡೂವರೆ ಸಾವಿರ ವರ್ಷಗಳ ಹಿಂದಿನ ಭಾರತದಲ್ಲಿ ಪಯಣಿಸುವಂತೆ ಮಾಡುತ್ತದೆ. ಅದರಲ್ಲಿಯೂ ನೀವು ಸಂಸ್ಕೃತ ನಾಟಕಗಳನ್ನು ಓದಿರುವಿರಾದರೆ ಖಂಡಿತವಾಗಿ ಇದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಷ್ಟು ಪ್ರೀತಿ ಇಷ್ಟು ಪ್ರೀತಿ ಎಣಿಸಿ ಕಷ್ಟಬಡದಿರು: ಮನು ಗುರುಸ್ವಾಮಿ

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇನೀಡುವೆನು ರಸಿಕ ನಿನಗೆಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆಆ ಸವಿಯ ಹಣಿಸು ನನಗೆ ಬೇಂದ್ರೆ… ಧಾರವಾಡ ಅಜ್ಜ, ಶಬ್ದಗಾರುಡಿಗ, ಬದುಕಿನ ಅನನ್ಯತೆಯನ್ನು ಪದ್ಯಗಳಲ್ಲಿ ಹಿಡಿದಿಟ್ಟ ಮಾಂತ್ರಿಕ. ಬಡತನದ ಬೇಗೆಯಲ್ಲೂ ದಾಂಪತ್ಯವೆಂಬುದು ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಕವಿ. ಕೆ ಎಸ್ ನರಸಿಂಹಸ್ವಾಮಿ ಒಂದುಕಡೆ “ಪ್ರೇಮವೆನಲು ಹಾಸ್ಯವೆ ?” ಎಂದ ಪ್ರಶ್ನಿಸುತ್ತಾರೆ. ಆಗಿದ್ದರೆ ? ಒಲವೆಂಬುದೇನು ? ಅದು ಹುಡುಗಾಟವಲ್ಲ. “ಒಲವೆಂಬುದು ಹೊತ್ತಿಗೆ” ಎನ್ನುವುದೇ ಬೇಂದ್ರೆಯವರ ನಿಲುವು. ಪ್ರೀತಿ ಮತ್ತು ದಾಂಪತ್ಯವನ್ನು ಒಂದುಗೊಳಿಸಿ ಕಾವ್ಯವನ್ನು ಕಟ್ಟಿಕೊಡುವ ಬೇಂದ್ರೆ, ತಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಳೆದುಕೊಂಡಾಗಲೇ ಪಡೆದುಕೊಳ್ಳುವುದು !: ಡಾ. ಹೆಚ್ ಎನ್ ಮಂಜುರಾಜ್,

ಸಾಧನೆ ಎಂದರೆ ಗಳಿಸಿಕೊಳ್ಳುವುದಲ್ಲ; ಕಳೆದುಕೊಳ್ಳುವುದು ಎಂದರು ಗುರುಗಳು. ನನಗೆ ಅಚ್ಚರಿಯಾಯಿತು. ಲೌಕಿಕಾರ್ಥದಲ್ಲಿ ಇದನ್ನು ಹೇಳುತ್ತಿಲ್ಲ ಎಂದೂ ಮನದಟ್ಟಾಯಿತು! ಮಗುವೊಂದು ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತ ಅಲ್ಪಮಾನವ ಆಗುತ್ತದೆ; ಮತ್ತೆ ಏನೆಲ್ಲ ಸಂಕೋಲೆಗಳನ್ನು ಕಳಚಿಕೊಂಡು ವಿಶ್ವಮಾನವರಾಗಬೇಕು ಎಂದು ಕುವೆಂಪು ಅವರು ಹೇಳುತ್ತಿದ್ದುದು ಈ ಅರ್ಥದಲ್ಲೇ ಎಂದುಕೊಂಡೆ!! ಆಗವರು ಹೇಳಿದರು. ಸರಿಯಾಗಿ ಗುರುತಿಸಿದೆ. ಹಾಗೆ ನೋಡಿದರೆ ಇರುವುದು ಒಂದೇ ಲೋಕ. ಲೌಕಿಕ, ಅಲೌಕಿಕ, ಪಾರಲೌಕಿಕ ಅಂತೆಲ್ಲ ಇರುವುದಿಲ್ಲ. ಇದು ನಮ್ಮ ಮಾನಸಿಕ ಭ್ರಮೆ. ಹೇಗೆ ನೋಡುವುದೆಲ್ಲ ಮತ್ತು ಕೇಳುವುದೆಲ್ಲ ಸತ್ಯವಲ್ಲವೋ ಹಾಗೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ: ಆದಿತ್ಯಾ ಮೈಸೂರು, ವಿನಯಚಂದ್ರ, ಪ್ರಶಾಂತ್ ಬೆಳತೂರು

ನಮ್ಮ ಮಹಾ ನಗರದ ಬದುಕು ಇಂದುಒತ್ತಡದ ಜೀವನಯಾಂತ್ರಿಕತೆಯ ಬದುಕುಅಪ್ಪ ಅಮ್ಮನ ಇನಿದನಿಸಂಬಂಧ ಪ್ರೀತಿಯ ಛಾಯೆಒಂದ್ಹೊತ್ತಿನ ನೆಮ್ಮದಿಎಲ್ಲವು ಕಾಣದಾಗಿವೆ ಜನಜಂಗುಳಿಯ ಮುಂದೆಬಿಡುವಿಲ್ಲದ ಕೆಲಸಸಮಯ ಅರಿವಿದ್ದರುಬಿಡದ ಧಣಿ , ತಲೆ ಬಿಸಿಅವ ಇನ್ನೆಲ್ಲಿ ಕಾಣಲು ಸಾಧ್ಯ ಯಾರಾದೋ ಕೀಲಿಕೈಗೆಗಿರಗಿರಗುಟ್ಟುತ್ತಯಂತ್ರವಾಗಿ, ಚಕ್ರದಂತೆತಿರುಗಬೇಕಿದೆ ಎದ್ದಕೂಡಲೆ ಅವಸರದಲೆಇಸ್ತ್ರೀ ಕಾಣದ ಬಟ್ಟೆಪಾಲಿಶ್ ಇಲ್ಲದ ಬೂಟು ತೊಟ್ಟುಸ್ಕೂಟರೋ, ಬಸ್ಸೋ, ಟ್ಯಾಕ್ಸಿಯೋ ಹಿಡಿದು ನಡೆಅಲ್ಲಿ ಬಟ್ಟೆಗುಂಡಿ ಹಾಕಿದಿಯೊ ತಿಳಿಯದುಆದರೆ ಬಯೋಮೆಟ್ರಿಕ್ ಗುಂಡಿ ಹಾಕಬೇಕಿದೆಇಲ್ಲವಾದರೆ ಮೇಲವರ ಕಾಟಹೊಟ್ಟೆಗೆ ಅನ್ನ, ನೀರುಹೊತ್ತಿಗೆ ನಿದ್ರೆ, ಸೇರದು, ಬಾರದುಓಡು ಓಡು ಹಗಲು ಇರುಳೆನ್ನದೆನಿನ್ನಲ್ಲಿ ಶಕ್ತಿಯಿರೋತನಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೇವರ ಹುಂಡಿಯೂ ಮತ್ತು ರಾಚಪ್ಪನೂ…: ಶ್ರೀ ಕೊಯ.

ಈ ಬಾರಿಯ ಜಾತ್ರೆಯಲ್ಲಿ ಆ ದೇವರ ಹುಂಡಿಗೆ ಹೇರಳವಾಗಿ ಧನ, ಕನಕಗಳು ಬಂದು ಹುಂಡಿ ತುಂಬಿತ್ತು. ಇದು ದೇವಿಯ ಸನ್ನಿಧಾನಕ್ಕೆ ವರುಷದ ಕಾಣಿಕೆಯಾಗಿ ಬರುವ ಹುಂಡಿ ಆದಾಯ. ಇದಲ್ಲದೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹರಿದು ಬರುವ ಹಣ ಹೇರಳವಾಗಿ ಶೇಖರಣೆ ಆಗುತ್ತದೆ. ಇಲ್ಲಿಯ ಜನ, ದೇವರ ಕೈಂಕರ್ಯ ಕೈಗೊಂಡು ಪುಣ್ಯ ಪಡೆಯಲು ದೇವರ ಕಾಣಿಕೆಯನ್ನು ಎಣಿಸುವ ಮತ್ತು ವಿಂಗಡಿಸುವ ಕಾರ್ಯವನ್ನು ಮಾಡಲು ಕಾತರಿಸುತ್ತಾರೆ. ಆಡಳಿತ ಮಂಡಳಿ ಕಳೆದ ಬಾರಿ ಹುಂಡಿಯ ಎಲ್ಲಾ ಹಣವನ್ನು ಎಣಿಕೆ ಮಾಡಿ, ಒಟ್ಟು ಒಂದೂವರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸತ್ಮೇಲೆ ಏನೈತಣ್ಣ ? ದೊಡ್ ಸೊನ್ನೆನೆ ! : ಮನು ಗುರುಸ್ವಾಮಿ

“ಯೆಂಡ, ಯೆಡ್ತಿ, ಕನ್ನಡ ಪದಗೊಳ್” ಎಂದ ತಕ್ಷಣ ನಮಗೆ ನೆನಪಾಗುವುದೇ ಕನ್ನಡದ ಪ್ರಸಿದ್ಧ ಬರಹಗಾರರಾದ ಜಿ ಪಿ ರಾಜರತ್ನಂರವರು. ಯೆಂಡ, ಹೆಂಡತಿ, ಕನ್ನಡದ ಬಗ್ಗೆ ಅಪಾರ ಒಲವಿದ್ದ ಕವಿ ತಮ್ಮ ಕವಿತೆಗಳಲ್ಲಿ ತಿಳಿಹಾಸ್ಯದ ಮೂಲಕ ಬದುಕನ್ನು, ಬದುಕುವ ರೀತಿಯನ್ನು ಬಹಳ ವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಭಾಷೆಯ ಸೊಗಡಿನಿಂದ ಕೂಡಿದ ಪದಪುಂಜಗಳು, ಪ್ರಾಸಗಳ ಸರಳ ಹೊಂದಿಕೆ, ವಾಸ್ತವಕ್ಕೆ ಹತ್ತಿರವಾದ ವಿಚಾರಗಳು ಈ ಎಲ್ಲವೂ ಒಟ್ಟಿಗೆ ಸೇರಿ ಕವಿತೆಗಳನ್ನು ಒಮ್ಮೆ ಓದಿದ ಸಹೃದಯನನ್ನು ಮತ್ತೆ ಮತ್ತೆ ತಮ್ಮತ್ತ ಆಕರ್ಷಿಸುತ್ತವೆ. ಈಗಾಗಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಡಲ ಕಿನಾರೆಯಲಿ ನಿಂತು ನೀಲಾಕಾಶವ ಕಂಡಾಗ !: ಡಾ. ಹೆಚ್ ಎನ್ ಮಂಜುರಾಜ್

‘ಕಷ್ಟಕಾಲದಲಿ ಯಾರು ನಮ್ಮ ಜೊತೆ ಬಂದಾರು? ಕತ್ತಲಲಿ ನೆರಳು ಕೂಡ ನಮ್ಮನ್ನು ಬಿಟ್ಟು ಹೋಗುತ್ತದೆ!’ ಎಂಬ ಮಾತು ಸತ್ಯ. ಆದರೆ ಹಲವೊಮ್ಮೆ ನೆರಳು ಕೈ ಬಿಟ್ಟರೂ ಯಾರದೋ ಬೆರಳು ನಮ್ಮನ್ನು ಕಾಪಾಡುವಂಥ ಪವಾಡ ಈ ಜಗತ್ತಿನಲ್ಲಿ ಸದ್ದಿಲ್ಲದೆ ನಡೆಯುತ್ತಲೇ ಇರುತ್ತದೆ. ನಮ್ಮ ಜೀವಿತಾವಧಿಯಲ್ಲಿ ಇಂಥ ಅದೆಷ್ಟೋ ಅಪರಿಚಿತರು ಆಪದ್ಬಾಂಧವರಾಗಿ ಬಂದು ನಮ್ಮನ್ನು ನಿರಾಳಗೊಳಿಸಿರುತ್ತಾರೆ. ಆಪದ್ಬಾಂಧವ ಎಂದರೆ ಆಪತ್ತಿಗೆ ಆದವರೇ ನೆಂಟರು ಎಂದು. ಆಪತ್ತು ಎಂದರೆ ದಿಢೀರನೆ ಎದುರಾಗುವ ಕಷ್ಟಕಾಲ. ಇದು ಯಾರಿಗೆ ಬರುವುದಿಲ್ಲ? ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನಿಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸನ್ಮಾರ್ಗ ತೋರುವ “ಸತ್ ಪಾತ” ಕವಿತೆಗಳು”: ಅನುಸೂಯ ಯತೀಶ್

“ಸತ್ ಪಾತ” ಎಸ್. ಬಿ. ಮಾಳಗೊಂಡ ವಿರಚಿತ ಕವನ ಸಂಕಲನವಾಗಿದ್ದು 66 ಕವಿತೆಗಳನ್ನು ಒಳಗೊಂಡ ಬೃಹತ್ ಹೊತ್ತಿಗೆಯಾಗಿದೆ. ನಾಡಿನ ಖ್ಯಾತ ಲೇಖಕರಾದ “ರಾಗಂ” ಎಂದೆ ಹೆಸರು ವಾಸಿವಾಸಿಯಾದ ರಾಜಶೇಖರ ಮಠಪತಿಯವರ ಬೆನ್ನುಡಿಯ ಕಳಶದೊಂದಿಗೆ ಚೆನ್ನಬಸವಣ್ಣ ಎಸ್.ಎಲ್. IPS. ರವರ ಮುನ್ನುಡಿಯ ಶುಭ ಹಾರೈಕೆ ಜೊತೆಗೂಡಿ 2022 ರಲ್ಲಿ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿದ ಕೃತಿ ಇದಾಗಿದೆ. ಎಸ್. ಬಿ. ಮಾಳಗೊಂಡರವರು ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಲಾಟಿ ಹಿಡಿದು ಸಮಾಜಘಾತುಕರ ವಿರುದ್ಧ ಚಾಟಿ ಬೀಸುವ ಹುದ್ದೆಯಲ್ಲಿ ಇರುವವರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ