ಕಣ್ಣೆರಡೂ ಲವಂಗದಂತೆ…….: ಪಿ.ಎಸ್. ಅಮರದೀಪ್.
ಪ್ರೀತಿಯ ಬಿ…… ಅದೆಷ್ಟು ಹೇಳಿದರೂ ನೀನು ನನ್ನನ್ನು ನಂಬುವುದಿಲ್ಲವೆಂದು ಗೊತ್ತು…. ಗೊತ್ತು ಮಾಡಿಸಲೇಬೇಕೆಂಬ ಹಠವೂ ನನಗಿಲ್ಲ. ಅದ್ಯಾವಾಗ ಧಾರವಾಡದ ಮಳೆಯಂತೆ ಇರ್ತೀಯೋ. ಒಣ ಬಿಸಿಲ ಬಳ್ಳಾರಿಯಂತಾಗುತ್ತಿಯೋ…. ತಿಳಿಯುವುದಿಲ್ಲ. ಒಮ್ಮೊಮ್ಮೆಯಂತೂ ಚಾರ್ಮಡಿ ಘಾಟಿನಲ್ಲಿ ಸದಾ ತೊಟ್ಟಿಕ್ಕುವ ಮಳೆಯ ನಡುವೆ ಮುಸುಕಿನ ಮಂಜೋ ಮಂಜು. ಹೆಂಗೇ ನಿನ್ನ ಅರ್ಥ ಮಾಡಿಕೊಳ್ಳೋದು? ಬರೀ ಸಂಜೆ, ಮುಂಜಾನೆ ಸೂರ್ಯಾನ ಫೋಟೋ ತೆಗೆದು ಹಂಚಿಕೊಳ್ಳುತ್ತಿದ್ದೆ ನಾನು. ನೀನು ಬಂದೆ ನೋಡು. ಒಳ್ಳೆಯ ಸೌಂದರ್ಯ ಪ್ರಜ್ಞೆ ಕಾಡಲು ಶುರು ಮಾಡಿದೆ. ಅಷ್ಟು ಫೋಟೋ ಹಾಕಿದರೂ ಒಂದೇ … Read more