ಪ್ರಕಟಣೆ

ಪಂಜುವಿನ ವಿಶೇಷ ಸಂಚಿಕೆಗೆ ಬರಹಗಳ ಆಹ್ವಾನ

ಆತ್ಮೀಯರೇ,

ನೋಡ ನೋಡುತ್ತಿದ್ದಂತೆ ಇದೇ ಜನವರಿ ಇಪ್ಪತ್ತೊಂದರಂದು ಪಂಜು ಹತ್ತನೇ ವರ್ಷಕ್ಕೆ ಕಾಲಿಡುತ್ತಿದೆ. ಪಂಜು ದಶಕ ತಲುಪುತ್ತಿರುವ ಸಂಭ್ರಮಕ್ಕೆ ಒಂದು ವಿಶೇಷ ಸಂಚಿಕೆ ಮಾಡದಿದ್ದರೆ ಹೇಗೆ. ಹೀಗೆ ಬಂದು ಹಾಗೆ ಮರೆಯಾಗುವ ನೂರಾರು ವೆಬ್ ತಾಣಗಳ ನಡುವೆಯೂ ಪಂಜುವಿಗೆ ತನ್ನದೇ ಐಡೆಂಟಿಟಿ ಕೊಟ್ಟವರು ನೀವು. ಇವತ್ತಿಗೂ ಯಾರಿಗೂ ಪರ್ಸನಲ್ ಆಗಿ ಕರೆ ಮಾಡಿಯೋ ಮೆಸೇಜ್ ಹಾಕಿಯೋ ಪಂಜುವಿಗಾಗಿ ಬರೆಯಿರಿ ಅಂತ ಕೇಳಿದ್ದು ತುಂಬಾನೆ ಕಡಿಮೆ. ಪಂಜುವಿಗೆ ಬರೆಯಲೇಬೇಕೆಂಬುವವರು ತುಂಬು ಹೃದಯದಿಂದ ಇಲ್ಲಿಯವರೆಗೂ ಬರೆದಿದ್ದಾರೆ. ಇನ್ನು ಮುಂದೆಯೂ ಬರೆಯುತ್ತಾರೆ ಎನ್ನುವ ನಂಬಿಕೆ ನನ್ನದು. ಬನ್ನಿ ಪಂಜುವಿನ ಈ ವಿಶೇಷ ಸಂಚಿಕೆಗೆ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಪಂಜುವಿಗಾಗಿ ಬರೆದು ಕಳಿಸಿ.

ನಮ್ಮ ಇ ಮೇಲ್ ಐಡಿ: editor.panju@gmail.com, smnattu@gmail.com

ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ: ಜನವರಿ ೧೯, ೨೦೨೨

ಧನ್ಯವಾದಗಳೊಂದಿಗೆ

ಪಂಜು ಬಳಗ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *