ಪ್ರಕಟಣೆ

ಲೇಖನ ಕಳುಹಿಸಿ

ಸಹೃದಯಿಗಳೇ,

“ಪಂಜು” ಅಂತರ್ಜಾಲ ವಾರ ಪತ್ರಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ಪ್ರಕಟಣೆಗಳನ್ನು ನೀಡಲು ಸಹ ನಮ್ಮನ್ನು ಸಂಪರ್ಕಿಸಿ. ಹಾಗೆಯೇ ಪಂಜು ಪುಟಗಳಲ್ಲಿನ ಕತೆ, ಕವನ, ಲೇಖನಗಳಿಗೆ ನಿಮ್ಮ ಕುಂಚದ ಕೈಚಳಕದಿಂದ ಚಿತ್ರಗಳನ್ನು ರಚಿಸಿ ಪಂಜಿಗೆ ಮತ್ತಷ್ಟು ಮೆರಗು ನೀಡುಬಹುದಾದ ಕಲಾವಿದ ನಿಮ್ಮೊಳಗಿದ್ದರೆ ನಮಗೆ ತಿಳಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ನೀವು ಕಳುಹಿಸಿದ ಲೇಖನಗಳು ನಮಗೆ ತಲುಪಿದ ಒಂದು ವಾರದೊಳಗಾಗಿ ನಿಮಗೆ ಲೇಖನ ತಲುಪಿದೆ ಎಂಬಂತಹ ಪ್ರತಿಕ್ರಿಯೆ ನೀಡಿರುತ್ತೇವೆ. ತಾಂತ್ರಿಕ ತೊಂದರೆಗಳಿಂದ ನೀವು ಕಳುಹಿಸಿದ ಲೇಖನ ನಮಗೆ ತಲುಪದೇ ಇರಬಹುದು. ಆದ ಕಾರಣ ನೀವು ಕಳುಹಿಸುವ ಇ ಮೇಲ್ ಅನ್ನು editor.panju@gmail.com ಇ ಮೇಲ್ ಐಡಿಗೆ ಕಳುಹಿಸುವ ಜೊತೆಗೆ ಅದೇ ಇ ಮೇಲ್ ನ ಮತ್ತೊಂದು ಪ್ರತಿಯನ್ನು (ಸಿಸಿ ಯಾಗಿ) smnattu@gmail.com ಗೆ ಕಳುಹಿಸಬೇಕಾಗಿ ಈ ಮೂಲಕ ವಿನಂತಿ..

Pl note: ಪಂಜು ಅಪ್ರಕಟಿತ ಬರಹಗಳನ್ನಷ್ಟೇ ಸ್ವೀಕರಿಸುತ್ತದೆ. ಲೇಖಕರು ಕಳುಹಿಸುವ ಲೇಖನವು ಬ್ಲಾಗ್, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಬರಹವನ್ನು ಸ್ವೀಕರಿಸುವುದಿಲ್ಲ.

ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ನಾವು..

ಇತಿ

ಪಂಜು ಬಳಗ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *