ಪದ್ದಕ್ಕಜ್ಜಿ ಫೇಸ್ ಬುಕ್ ಲೈವ್: ಡಾ. ವೃಂದಾ. ಸಂಗಮ್

ಹೆಂಗಿದೀರಿ ಎಲ್ಲಾರೂ. ಈ ಕರೋನಾ ಅಂತ ಎಲ್ಲಾರೂ ಭೇಟಿ ಆಗೋದ ಕಡಿಮಿ ಆಗೇದಲ್ಲ. ಏನು ಮಾಡೋದು. ನಮ್ಮ ಪದ್ದಕ್ಕಜ್ಜಿನೂ ಹೀಂಗ ಒದ್ದಾಡತಾರ. “ಹೂಂ ರೀ, ಭಾಳ ದಿನಾ ಆಗಿತ್ತಲ್ಲ, ಪದ್ದಕ್ಕಜ್ಜಿ ಬಗ್ಗೆ ಮಾತನಾಡಿ. ಏನು ಮಾಡೋದು, ಕಾಲಮಾನ ಕೆಟ್ಟ ಕೂತಾವ, ಸುಟ್ಟ ಬರಲೀ, ಈ ಕರೋನಾದಿಂದ ಒಬ್ಬರಿಗೊಬ್ಬರು ಒಂದ ಊರಾಗ, ಒಂದ ರಸ್ತೆದಾಗ, ಆಜೂ ಬಾಜೂ ಮನಿಯೊಳಗಿದ್ದರೂನೂ ಸೈತೇಕ, ಅಮೇರಿಕಾ – ಆಸ್ಟ್ರೇಲಿಯಾದಾಗ ಇದ್ಧಂಗ ಕಂಪ್ಯೂಟರಿನ್ಯಾಗ ಮಾರಿ ನೋಡೋ ಹಂಗಾದೇದ “ ಅಂತಾರ ನಮ್ಮ ಪದ್ದಕ್ಕಜ್ಜಿ. ನಿಮಗೆಲ್ಲಾರಿಗೂ … Read more

ಮಹಿಳಾ ಶಿಕ್ಷಣಕ್ಕೆ “ರಾಜ”ಮಾರ್ಗವನ್ನು ರೂಪಿಸಿದ ದಿನಗಳು: ಅಮೂಲ್ಯ ಭಾರದ್ವಾಜ್‌

ಒಂದು ದೇಶವನ್ನು ನಿರ್ಮಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಕ್ಷಣದ ಮಹತ್ವ ಎಂದೆದಿಗೂ ಅಳಿಯಲಾರದ್ದು. ಮಹಿಳೆಯರ ಶಿಕ್ಷಣದ ಜಾಗೃತಿಯು ಅನೇಕ ಸ್ಥರಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಹಾಗೆಯೇ ಹೆಣ್ಣು ಮಕ್ಕಳ ಶಿಕ್ಷಣ ಯಾವುದೇ ರಾಷ್ಟ್ರಕ್ಕೆ ಎಷ್ಟು ಮುಖ್ಯವೆಂದು ನಿರೂಪಿತವೂ ಆಗಿದೆ. ಪ್ರತಿ ದೇಶವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದೆ. ಮಹಿಳೆಯರ ಶಿಕ್ಷಣ ಯಾವುದೇ ಶೋಷಣೆಯಿಂದ ದೂರವಿರಲು ಮತ್ತು ತಮ್ಮನ್ನು ತಾವೇ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. 1848 ರಲ್ಲಿ ಪುಣೆಯ ಬಿದೆ ವಾಡಾದಲ್ಲಿ ಸಾವಿತ್ರಿಬಾಯಿ ಪುಲೆಯವರು ಪ್ರಪ್ರಥಮ ಹೆಣ್ಣು … Read more

ಗಟ್ಟಿಗಿತ್ತಿ: ಡಾ. ದೋ. ನಾ. ಲೋಕೇಶ್

2016 ಅಥವಾ 2017 ನೇ ಇಸವಿಯ ಮಳೆಗಾಲದ ಒಂದು ದಿನ, ನಮ್ಮ ಇಲಾಖೆಯ ಅರೆತಾಂತ್ರಿಕ ಸಿಬ್ಬಂದ್ಧಿಯೊಬ್ಬರು ಎಮ್ಮೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮಗೆ ತೋರಿಸಲು ಹೇಳಿದ್ದಾರೆ ಬನ್ನಿ ಸರ್ ಎಂದು ಅವರ ವಿಳಾಸ ಹೆಸರು ಎಲ್ಲ ಹೇಳಿದರು. ಅದು ನಾನು ಕೆಲಸ ಮಾಡುವ ಸ್ಥಳದಿಂದ ಬೇರೊಂದು ದಿಕ್ಕಿಗಿದ್ದು ನಮ್ಮ ಮನೆಯಿಂದ 6-7 ಕಿ. ಮೀ. ದೂರವಿದ್ದದ್ದರಿಂದ, ನಾನು ಸಂಜೆ ಕೆಲಸ ಮುಗಿಸಿ ಬಂದು ನಿಮ್ಮ ಎಮ್ಮೆಯನ್ನು ನೋಡುತ್ತೇನೆ ಎಂದು ಹೇಳಿದೆ. ಅದರಂತೆ ಸಂಜೆ ಸುಮಾರು 5.30 ಅಥವಾ 5.45 … Read more

ನಿಲುವಂಗಿಯ ಕನಸು (ಅಧ್ಯಾಯ ೧-೩): ಹಾಡ್ಲಹಳ್ಳಿ ನಾಗರಾಜ್

‌ ಅಧ್ಯಾಯ ೧: ಮೊಳಕೆಯೊಡೆಯಿತು ಎರಡೊಂದ್ಲ ಎರಡು…ಎರಡೇಡ್ರ್ಳ ನಾಲ್ಕು…ಊರ ಪ್ರಾಥಮಿಕ ಶಾಲೆಯ ಕಡೆಯಿಂದ ಸಮೂಹಗಾನದಂತೆ ರಾಗವಾಗಿ ಹೊರಟ ಮಕ್ಕಳ ಧ್ವನಿ ಪಶ್ಚಿಮದ ಕಾಡಲ್ಲಿ ಕ್ಷಣಕಾಲ ಅನುರಣಿಸಿ ಹಿಂತಿರುಗಿ ಸೀತೆಯ ಕಿವಿಯಲ್ಲಿಳಿದು ಹೃದಯದಲ್ಲಿ ದಾಖಲಾಗತೊಡಗಿತು. ಅದರಲ್ಲಿ ತನ್ನ ಮಗಳು ಪುಟ್ಟಿಯ ಧ್ವನಿಯೂ ಸೇರಿದಂತೆ ಕಲ್ಪಿಸಿಕೊಂಡು ಕ್ಷಣಕಾಲ ಪುಳಕಿತಳಾದಳು.ಪುಟ್ಟಿಗೆ ಈಗಾಗಲೇ ನಾಲ್ಕು ವರ್ಷ ತುಂಬಿದೆ. ಬರುವ ವರ್ಷ ಈ ದಿನಕ್ಕೆ ಅವಳೂ ಅಲ್ಲಿ ನಿಂತು ಮಕ್ಕಳೊಂದಿಗೆ ಮಗ್ಗಿ ಹೇಳುವಂತಾಗುತ್ತಾಳೆ. ‘ಅವ್ವನ ಮನೆಯಿಂದ ಅವಳನ್ನು ಕರೆತಂದು ಇದೇ ಶಾಲೆಗೆ ಸೇರಿಸಬೇಕು. ಹಳ್ಳಿಯ … Read more

ಕಾಲಕೋಶ ಎನ್ನುವ ಕಳೆದುಹೋದ ಕಾಲದ ಕನ್ನಡಿ: ಸತೀಶ್ ಶೆಟ್ಟಿ ವಕ್ವಾಡಿ

ಶಶಿಧರ ಹಾಲಾಡಿಯವರ ಕಾಲಕೋಶ ಕೈಸೇರುವ ಸಮಯದಲ್ಲಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾದ ಗ್ರಹಣವೆನ್ನುವ ವೆಬ್ ಸೀರೀಸ್ ಅನ್ನು ನೋಡಿ ಒಂದೆರಡು ದಿನವಾಗಿತ್ತಸ್ಟೆ. ಈ ಗ್ರಹಣ ಬಂದು 1984ರ ಇಂದಿರಾ ಗಾಂಧಿ ಹತ್ಯೆಯ ನಂತರ ನೆಡೆದ ಸಿಖ್ಖರ ಮೇಲಿನ ದಾಳಿಯ ಕುರಿತಾದ ವಸ್ತುವನ್ನು ಒಳಗೊಂಡ ವೆಬ್ ಸೀರೀಸ್ . ಕಾಲಕೋಶದಲ್ಲೂ ಸಹ ಅದೇ ವಸ್ತು ಇದೆ ಅನ್ನೋ ಅಂಶ ಪುಸ್ತಕದ ಬಗ್ಗೆ ಬಂದ ವಿಮರ್ಶೆಯಲ್ಲಿ ಓದಿದ್ದರಿಂದ ಪುಸ್ತಕವನ್ನು ಓದಲು ಆರಂಭಿಸಿದಾಗ ಅದೇ ವಿಷಯ ಪುನಃ ಇಲ್ಲಿ ಮತ್ತೆ ಮರುಕಳಿಸಿ … Read more

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಎರಡನೇ ಪದಕ ಖಾತ್ರಿ

ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡೆಯ ಬಾಕ್ಸಿಂಗ್ ನ ಕ್ವಾರ್ಟರ್ ಫೈನಲ್ ನಲ್ಲಿ (64-69 ಕೆ.ಜಿ. ವಿಭಾಗ) ಭಾರತದ ಲವ್ಲೀನ ಬೊರ್ಗೊಹೈನ್ ತನ್ನ ಎದುರಾಳಿ ಚೀನಾದ ಚೆನ್ ನೀನ್-ಚಿನ್ ರವರನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ. ಸೆಮಿ ಫೈನಲ್ ನಲ್ಲಿ ಗೆದ್ದರೆ ಚಿನ್ನದ ಪದಕಕ್ಕಾಗಿ ಸೆಣೆಸುವ ಅವಕಾಶ ಪಡೆಯುವ ಲವ್ಲೀನರವರು ಒಂದು ವೇಳೆ ಸೆಮಿ ಫೈನಲ್ ನಲ್ಲಿ ಸೋತರೆ ಕಂಚಿನ ಪದಕ ಪಡೆಯಲಿದ್ದಾರೆ. ಸೆಮಿಫೈನಲ್ ನಲ್ಲಿ … Read more

‘ಪಿಯುಸಿ ನಂತರ ಮುಂದೇನು?’ ಫೇಸ್ ಬುಕ್ ಲೈವ್ ಕಾರ್ಯಕ್ರಮ

ಸ್ನೇಹಿತರೆ,‘ಪಿಯುಸಿ ನಂತರ ಮುಂದೇನು?’ ಎಂಬ ವಿಷಯದ ಕುರಿತು ಫೇಸ್ ಬುಕ್ ಲೈವ್ ಕಾರ್ಯಕ್ರಮವನ್ನು ಭಾರತೀಯ ವಿದ್ಯಾರ್ಥಿ ಸಂಘ (BVS) ಏರ್ಪಡಿಸಿದೆ. ಈ ದಿನ ರಾತ್ರಿ ಎಂಟಕ್ಕೆ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮುಂದಿರುವ ಅವಕಾಶಗಳ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಣ. ಬಿ ಅವರು ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು BVS ಫೇಸ್ ಬುಕ್ ಪುಟವನ್ನು ಭೇಟಿ ನೀಡಿ.

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಕೊನೆಯ ಭಾಗ): ಎಂ. ಜವರಾಜ್

-೮೦- ‘ಏಯ್,ಗೊತ್ತಾಯ್ತ..ಈಗ್ಲಾದ್ರು ಗೊತ್ತಾಯ್ತಇಲ್ಲಿಗಂಟ ಹೇಳುದ್ದು ನಿನ್ನೆದ್ಗ ಇಳಿತಾ..’ ಗದುರ್ತು ನನ್ಗ ನಿದ್ರ ಮಂಪ್ರುತೂಕುಡ್ಕ ಆ ತೂಕುಡ್ಕಲೆಈ ಅಯ್ನೋರ್ ಕತ ಕೇಳ್ತ ಕೇಳ್ತಗುಡುಗುಡು ಗುಡಗಾ ಸದ್ದುಕಿವಿಗ ಅಪ್ಪುಳುಸ್ತು ‘ಏಯ್,ನಾ ಮಾತಾಡ್ತನೆ ಅವ್ನಿನಿ ತಲ ಬಗ್ಗುಸ್ಕಂಡುತೂಕುಡುಸ್ತನೆ ಇದ್ದಯಲ್ಲ..’ ಆಗ ಸುಂಯ್ಯಂತ ಸುಂಯ್ಗುಟ್ತಪಣ್ಕ ಪಣ್ಕಂತ ಪಣ್ಗುಡಮಿಂಚು ಮಿಂಚ್ತಾ..ಆ ಪಣ್ಗುಡ ಮಿಂಚು ಕಣ್ಗ ರಾಚ್ತನಿಧಾನುಕ್ಕ ಕಣ್ಬುಟ್ಟುಬೀದಿದಿಕ್ಕ ನೋಡ್ದಿ, ಆಗ ಆ ಮೆಟ್ಟು..ಆ ಮಿಂಚುನ್ ಸಂದಿಲೂದಗ ದಗ ದಗಾಂತಉರಿತಾ “ತೂ..ನಾ ಅಂಗ್ಳ ಹರ್ಕಂಡೂ..ಆಗ್ಗಿಂದ ಈಗ್ಗಂಟೂ..ನಿದ್ದನು ಮಾಡ್ದೇ..ಒನ್ನಂಕ್ರೂ ಬುಡ್ದೇ..ಈ ಅಯ್ನೋರ್ ಕತ ಒಪ್ಸುದ್ನಲ್ಲಾ..ನಂಗೇನ್ ತೀಟಿಡ್ದಿತ್ತೂ.. “ನೋಡು … Read more

ವಿರಹಕ್ಕೊಂದು ಪತ್ರ: ಪೂಜಾ ಗುಜರನ್. ಮಂಗಳೂರು.

“ಪ್ರೀತಿಸಿದ ತಪ್ಪಿಗೆ ವಿರಹಕ್ಕೊಂದು ಪತ್ರ”. ಇದು ನನ್ನೆದೆಯ ಬೀದಿಯಲ್ಲಿ ದಿನ ಬಂದು ಕಾಡಿಸುವ ನೋವಿಗೆ ಸಮಧಾನಿಸುವ ಸಲುವಾದರೂ ಬಿಡಿಸಿ ಕಣ್ಣಾಡಿಸು‌.ಇದು ನನ್ನ ಅಭಿಪ್ರಾಯವಷ್ಟೆ. ಸುಮ್ಮನ್ನೆ ಇದ್ದವಳ ಬದುಕಿನಲ್ಲಿ ನಿನ್ನ ಆಗಮನ ಒಂದು ವಿಶೇಷವಾದ ಚೈತನ್ಯವನ್ನು ನೀಡಿತ್ತು.ನಿನ್ನ ಮಾತಿನ ಚಾತುರ್ಯಕ್ಕೆ ಸೋತು ನನ್ನ ಹೃದಯವನ್ನೇ ನಿನ್ನ ಅಂಗೈಯಲ್ಲಿ ಇಟ್ಟು ನಿನ್ನ ಬೊಗಸೆಯೊಳಗೆ ಬೆಚ್ಚಗೆ ಶರಣಾಗಿದ್ದೆ.ನಿನ್ನ ಜೊತೆ ಬೆಸೆದುಕೊಂಡು ಬಂಧಕ್ಕೆ ನನಗೆ ಸಿಕ್ಕಿದ್ದು ಒಂದೇ. ಅದು ಕೊನೆವರೆಗೂ ನನ್ನ ಜೀವ ಜೀವನವನ್ನು ಕಿತ್ತು ತಿನ್ನುವ ಸಂಕಟವಷ್ಟೆ.. ನನ್ನ ಅತಿರೇಕದ ಪ್ರೀತಿಗೆ … Read more

ಪಂಜು ಕಾವ್ಯಧಾರೆ

ಮತ್ತೆ ಮಳೆಯಾಗಿದೆ ನಿನ್ನ ಕಣ್ಣ ಬಿಂಬಲಿನಾನು ಪ್ರತಿಬಿಂಬವಾದಾಗಮೋಡ ಕವಿದು ಪ್ರೀತಿಯ ಮಳೆಯಾಗಿದೆ ನಿನ್ನ ಮುಂಗುರಳ ಚಾಚಿನನ್ನ ಕೈ ಹಿಡಿದು ಕರೆದಾಗಮತ್ತೆ ಮಳೆಯಾಗಿದೆ ನಿನ್ನ ಸನಿಹ ನಾ ಬಂದು ನಿಂತಿರುವೆಬಿಸಿಯುಸಿರು ತಾಕಿಸಿದಾಗಹೃದಯ ಬಡಿತ ಜೋರಾಗಿಮತ್ತೆ ಮಳೆಯಾಗಿದೆ ತುಟಿಗೆ ತುಟಿಯು ಸೇರಿಸಿಪ್ರೀತಿಯ ಚುಂಬನ ನೀಡಿದಾಗಪ್ರೇಮಲೋಕದಲಿ ತೇಲಾಡುವಾಗಮತ್ತೆ ಮಳೆಯಾಗಿದೆ ಮುಖ ಕೆಂಪಾಗಿಸಿ ನಾಚಿದಾಗಅಕ್ಕರೆಯಿಂದ ಅಪ್ಪಿಕೊಂಡುಕಳ್ಳ ನೋಟದಿ ನೋಡುವಾಗಮತ್ತೆ ಮಳೆಯಾಗಿದೆ –ಉಮಾಸೂಗೂರೇಶ ಹಿರೇಮಠ…. ಹಳ್ಳಿ ಮತ್ತು ಅಪಾರ್ಟ್‍ಮೆಂಟು ಪ್ರತಿ ಮುಂಜಾನೆ ಕಾಫಿ ಹೀರುತ್ತಾಕಿಟಕಿಯಾಚೆಯ ನೂರಾರು ಮನೆಗಳುಳ್ಳಒಂದು ಅಪಾರ್ಟ್‍ಮೆಂಟನ್ನು ನೋಡುತ್ತಲೇ ಇರುತ್ತೇನೆಅಪಾರ್ಟ್‍ಮೆಂಟ್ ಏಕೆ ಒಂದು … Read more

ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದ್ರಮ: ಡಾ. ವೃಂದಾ. ಸಂಗಮ್

ನಾನು ಛಂದಾಗಿ ಓದಿ, ಶ್ಯಾಣ್ಯಾಕ್ಯಾಗಿ, ಛೊಲೋ ಕೆಲಸಾ ಹಿಡದು, ಅವ್ವಾ ಅಪ್ಪನ್ನ ಸುಖದಿಂದ ನೋಡಿಕೋಬೇಕು, ದಿನಾ ಇದ ಆಶೀರ್ವಾದ ಕೇಳಿ ಕೇಳಿ ನನಗ ಸಣ್ಣಕಿದ್ದಾಗ ಹೆಂಗನಸತಿತ್ತಂದರ, ಏನು ಮಾಡತಿದ್ದರೂ, ಅಯ್ಯೋ ಇದು ಬ್ಯಾಡ, ನಾನು ಬರೇ ಓದಕೋತ ಇರಬೇಕು, ಬ್ಯಾರೆ ಏನು ಮಾಡಿದರೂ ಅದು ತಪ್ಪು. ಆಮ್ಯಾಲೆ, ಆಮ್ಯಾಲೆ ನನಗ ಅರ್ಥ ಆತು. ಈ ಹಿರೇ ಮನಶ್ಯಾರಿಗೆ ಬ್ಯಾರೆ ಕೆಲಸಿಲ್ಲ. ಆಶೀರ್ವಾದ ಮಾಡೋದರಾಗೂ ತಮ್ಮ ಸುಖಾನ ನೋಡತಿರತಾರ. ನಾನು ಖರೇನ ಶಾಣ್ಯಾಕಿ ಆಗ ಬೇಕಂದ್ರ, ಆಟ ನೋಟ … Read more

ಪಂಜು ಕಾವ್ಯಧಾರೆ

ಸತ್ಯ-ಸುಳ್ಳಿನ ನಡುವೆ ಮನದ ಮಂಟಪ ಮನದಾಳದಲ್ಲಿ ಒಮ್ಮೊಮ್ಮೆ ಮತ್ತೇರಿಮಿಡಿದಭಾವನಾತ್ಮಕ ನುಡಿಗಳಿಗೆ ಕೊನೆಯಿಲ್ಲಅಲ್ಲಿ ಜನಿಸುವ ಭಾವಗಳೆಷ್ಟರ ಮಟ್ಟಿಗೆ ಸತ್ಯವೋ?ಸಂದರ್ಭಕ್ಕೆತಕ್ಕಂತೆ ಬಿಂಬಿಸುವ ಆಸೆಗಳೆಷ್ಟು ಮಿಥ್ಯವೋ? ಪ್ರತಿಬಾರಿ ಅದರ ಮೂಲ ಹುಡುಕುತ್ತಾ ಹೋದರೆಸತ್ಯ ಪ್ರಪಂಚದ ಅನಾವರಣ ಆದರೂ ಆಗಬಹುದುಇಲ್ಲವೇ ಸುಳ್ಳಿನ ಪ್ರಪಂಚದ ಕಗ್ಗತ್ತಲು ಆವರಿಸಿನಕಾರಾತ್ಮಕತೆಯನ್ನು ಸೃಷ್ಟಿಸಿ ನರ್ತಿಸಬಹುದು ಒಮ್ಮೊಮ್ಮೆ ಸತ್ಯ ಜೀವನದ ಸಂಬಂಧಗಳೆಲ್ಲಾಸತ್ಯವೆಂದು ಸಮರ್ಥಿಸುವ ಪ್ರಯತ್ನದಲ್ಲಿ ಬಿದ್ದರೆಮತ್ತೊಮ್ಮೆ ಭಾವಗಳಲೆಯಲ್ಲಿ ಸುಳ್ಳುಕೋಟೆ ನಿರ್ಮಿಸಿಅದರಲ್ಲಿ ಸಿಲುಕಿ ಒದ್ದಾಡುವಂತಾಗುವುದು ಕಲ್ಪನಾಲೋಕ ಪ್ರತಿಬಿಂಬಿಸುವ ಸತ್ಯ-ಸುಳ್ಳಿನನಡುವೆ ಸಿಲುಕಿ ಒಮ್ಮೆ ಆಸೆಯ ಆಶಾಗೋಪುರದತುತ್ತತುದಿಯಲ್ಲಿ ಕುಣಿದಂತೆ ಭಾಸವಾದರೆಮತ್ತೊಮ್ಮೆ ಕೆಳಗೆಬೀಳಿಸಿ ಮಣ್ಣುಪಾಲಾದಂತಾಗುವುದು ಕೊನೆಗೆ … Read more

ಗಜಲ್: ಜಯಶ್ರೀ.ಭ.ಭಂಡಾರಿ

ಗಜಲ್ 1 ಸುಂದರ ವದನ ಇಂದೇಕೆ ಬಾಡಿದೆ ಹೇಳು ಗೆಳತಿಕಣ್ಣುಗಳಲ್ಲಿ ಎಂದಿನ ಕಾವ್ಯ ಕಳೆ ಇಲ್ಲ ಗೆಳತಿ ನೀಳ ನಾಸಿಕ ಅದೇಕೆ ಕೆಂಪಾಗಿದೆ ಹೇಳಲಾರೆಯಾಅಳು ನುಂಗಿ ನಗುವ ಪ್ರಮೇಯ ಯಾಕೆ ಗೆಳತಿ ಹಣೆಯ ಕಾಸಿನಗಲ ಕುಂಕುಮದಲಿ ಸಂಭ್ರಮ ನಗುತ್ತಿಲ್ಲಬಾಗಿದ ಹುಬ್ಬುಗಳಲಿ ಕಾಮನ ಬಿಲ್ಲಿನಂದ ತೋರುತ್ತಿಲ್ಲ ಗೆಳತಿ ತೊಂಡೆಯ ತುಟಿಗಳಲ್ಲಿ ಜೇನು ವಸರುವದು ಕಾಣುತ್ತಿಲ್ಲಕೆನ್ನೆಯಲ್ಲಿ ಗುಲಾಬಿ ರಂಗು ಸೊರಗಿದೆ ಏಕೆ ಹೇಳು ಗೆಳತಿ ಭರವಸೆಯಲ್ಲಿ ಬೆಳಕು ಚೆಲ್ಲುವ ನೀನೇ ಹೀಗಾದರೆ ಹೇಗೆಜುಮಕಿಯ ನಾದದಲ್ಲಿಯೂ ಅದೇಕೊ ಇಂಪಿಲ್ಲ ಗೆಳತಿ ಕಪ್ಪಾದ … Read more

ಡೊಂಟ್ ವರಿ, ಒಮ್ಮೊಮ್ಮೆ ಹೀಗೂ ಆಗುವುದು: ಮಧುಕರ್ ಬಳ್ಕೂರ್

“ಏನ್ ಸರ್ ಸಮಾಚಾರ ? ಮತ್ತೇನ್ ಡ್ಯೂಟಿಗ್ ಹೊರಟ್ರಾ..? ಏನಿಲ್ಲ ಸರ್, ನೀವು ಯಾರನ್ನಾದ್ರು ಲವ್ ಮಾಡಿದೀರಾ..? ಇಲ್ವಾ…? ಹಾಗಿದ್ರೆ ನೀವು ವೇಸ್ಟ್ ಬಿಡಿ ಸಾರ್. ನಾನು ಈ ಪ್ರೀತಿ ಗೀತಿ ಅಂತೆಲ್ಲಾ ಅದೆಷ್ಟು ಸರ್ಕಸ್ ಮಾಡಿದೀನಿ ಗೊತ್ತಾ? ಬಿಡಿ, ನಿಮಗೆಲ್ಲಾ ಅದು ಎಲ್ಲಿ ಅರ್ಥ ಆಗ್ಬೇಕು? ಅನುಭವ ಇದ್ರೆ ತಾನೆ..” ಹಾಗಂತ ಅವನು ವ್ಯಂಗವಾಡುತ್ತಲೇ ಹೋದ. ಜೊತೆಗಿದ್ದವರು ಅದೇ ವ್ಯಂಗದಲ್ಲಿ ಜೋರಾಗಿ ನಗತೊಡಗಿದರು. ಆ ಒಂದು ಕ್ಷಣಕ್ಕೆ ಏನನ್ನಬೇಕೆನ್ನುವುದ ತಿಳಿಯದೆ ಮುಜುಗರಕ್ಕೊಳಗಾಗುತ್ತೀರಿ. ಮೊದಲೇ ಡ್ಯೂಟಿಗೆ ಹೊರಟಿದ್ದೀರಿ. … Read more

ನಾವು ಏನೂ ಅನುಭವಿಸಿದರೂ ಅದು ನಮ್ಮ ಕರ್ಮಫಲವಷ್ಟೆ: ಪೂಜಾ ಗುಜರನ್. ಮಂಗಳೂರು.

ಆವತ್ತು ಅತ್ಮೀಯ ಗೆಳೆಯರೊಬ್ಬರ ಸಂಬಂಧಿಕರ ಸಾವು ನಡೆದಿತ್ತು. ಅವರು ತುಂಬಾ ಬೇಜಾರಿನಲ್ಲಿ ನನ್ನಲ್ಲಿ ಒಂದು ಮಾತು ಹೇಳಿದರು. ಅಲ್ಲ ಏನಾಗುತ್ತಿದೆ ಇಂದು. ಎಲ್ಲಿ ನೋಡಿದರು ಸಾವು, ನೋವು, ಈಗ ಇದ್ದವರು ಮತ್ತೆ ಇಲ್ಲ. ನೋಡ ನೋಡುತ್ತಿದಂತೆ ಎದ್ದು ಹೋಗುತ್ತಿದ್ದಾರಲ್ವ. ಇದೆಂತಹ ಕ್ರೂರ ಸಮಯ,  ಇದನ್ನೆಲ್ಲ ನೋಡುವುದಕ್ಕಾಗಿಯಾ ನಾವಿನ್ನು ಬದುಕಿರೋದು. ಹೀಗೆ ಅವರ ನೋವಿನ ಮಾತುಗಳು ಸಾಗುತ್ತಿದ್ದವು. ಅವರ ಹಣೆಬರಹವೇ ಸರಿ ಇಲ್ಲವೇನೋ ಅದಕ್ಕೆ ವಿಧಿ ಹೀಗೆ ಮಾಡುತ್ತಿದ್ದಾನೆ. ಅಂದಾಗ ನನಗೆ ಏನೂ ಉತ್ತರಿಸಬೇಕೋ ತಿಳಿಯದಾಗಿತ್ತು. ಅಲ್ಲ ನಾವ್ಯಾಕೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 78 & 79): ಎಂ. ಜವರಾಜ್

-೭೮- ಆಗ..ಆಗ..ಆಗ ಏನಾಯ್ತು ಅಂದ್ರಾ..‘ಏ…ಯ್…’ಅಂತ ಅಬ್ರುಸ್ತಮರದ ಮ್ಯಾಲಿಂದ ಕೆಳಕಆಗ್ಲೆ ಕಂಡಆ ನೆಳ್ ರೂಪುದುತ್ತಂತ ಬಿದ್ದು ಎಗುರಿಮುಂದ ನಿಂತ್ಗಂಡೂ“ಏ..ಯ್..ಆಗ್ಲೆ ಬಿದ್ದೇಟ್ಗಹೆದ್ರಿ ಹೋಯ್ತಿದ್ದರಿ ಅನ್ಕಂಡಿಆದ್ರ..ಆದ್ರ..ಇಲ್ಲಿಗಂಟು ಬಂದಿದರಿ ಅಂದ್ರನಿಮ್ಮ ಬುಡಗಿದ್ದಾ..ಈ ನೀರಂಜಿ ಬುಡ್ಕೇಹಾರ ಮಾಡ್ದೆ ಬುಡಲ್ಲ” ಈ ಅಯ್ನೋರ್ ಕಾಲುಗಡಗಡ ನಡುಗ್ತಅವ್ರು ನಡ್ಗ ರೀತಿಗನಂಗೂ ಮೈಬಾರ ಆಯ್ತಿರಗಾಯ್ತು ಅಂವಅದೆ, ಎಳುರುಂಡಿ ಮಾದೇವಗರ ಬಡ್ದಿರತರ ನಿಂತನ.. ಅಂವ ನಿಂತಿರ ತರುಕ್ಕಇವ್ನ್ ಮ್ಯಾಗಆಗಿಂದ ಅನ್ಕಂಡದೆಲ್ಲಸರುಕ್ನ ಇಳ್ಕಂಡಗಾಯ್ತು ಈ ಅಯ್ನೋರು ಆಗ್ಗಿಂದ ಈಗ್ಗಂಟುಇಂತೆವ್ನ ಮುಂದಿಟ್ಗಂಡುಯವರ ಮಾಡ್ತಿದ್ರಲ್ಲಾ..ಇಂವ,ಇಂತಾ ಅಡ್ಕಸ್ಬಿ ಪುಕ್ಕುಲ್ನಾ..ತೂ..ಸೂಳಮಗನಾ.. ಅನ್ನುಸ್ತು ಎಳುರುಂಡಿ ಮಾದೇವ ಅಂದ್ರ,ಸುತ್ಮತ್ತು ಏಳೂರೂ … Read more

ಅಮ್ಮ ಅನ್ನೋ ಎರಡು ಅಕ್ಷರ: ದೀಪಾ ಜಿ. ಎಸ್.

ಅಮ್ಮ ಅಂದ್ರೆ ಒಂದು ಜೀವಕ್ಕೆ ಜೀವ ತುಂಬೋ ತ್ಯಾಗಮಯಿನೇ ಅಮ್ಮ. ನಾನು ಈ ಭೂಮಿಗೆ ಕಾಲಿಟ್ಟ ಕ್ಷಣದಿಂದ ಹಿಡಿದು ಇಲ್ಲಿಯವರೆಗೂ ನನ್ನ ಜೀವನದಲ್ಲಿ ಒಂದೊಂದು ಕ್ಷಣ ಒಂದೊಂದು ಕಲಿಕೆಯನ್ನು ಕಳಿಸಿದವಳೇ ಅಮ್ಮ. ನನ್ನ ಮೊದಲನೆಯ ಗುರು, ಮೊದಲನೆಯ ಸ್ನೇಹಿತೆ, ಎಲ್ಲಾನು ಅವಳೇ. ಜೀವನದಲ್ಲಿ ಕಷ್ಟಕ್ಕೆ ಎಡವಿ ಬಿದ್ದಾಗ ಮೊದಲು ನೆನಪಾಗೋದೇ ಅಮ್ಮ. ಅಮ್ಮ ಅನ್ನೋ ಪದದಲ್ಲೇ ಅಮೃತಾನೆ ತುಂಬಿರುವಾಗ ನನ್ನ ಹತ್ತಿರಾನೂ ಸಾವು ಅನ್ನೋ ಪದಾನೇ ಸುಳಿಯೋಲ್ಲ. ಅಮ್ಮ ಅನ್ನೋ ಒಂದು ಜೀವ ಇದ್ರೆ ಸಾಕು ಇಡೀ … Read more

ಹದಿಹರೆಯದ ಮಕ್ಕಳು ಮತ್ತು ಪೋಷಕರು: ಪ್ರವೀಣ ಶೆಟ್ಟಿ, ಕುಪ್ಕೊಡು

ದೃತಿ ಯಾಕೋ ತುಂಬಾ ಕಾಡ್ತಾ ಇದ್ದಾಳೆ. ಹೌದು ದೃತಿ “ದ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನ ಮುಖ್ಯ ಪಾತ್ರಧಾರಿ ಶ್ರೀಕಾಂತ್ ತಿವಾರಿಯ ಮಗಳು. ತಂದೆ – ತಾಯಿ ಇಬ್ಬರೂ ತಮ್ಮ ತಮ್ಮ ಕೆಲಸಗಳ ನಡುವೆ ಬ್ಯೂಸಿಯಾಗಿರುವಾಗ ಮಕ್ಕಳ ಮೇಲೆ ಗಮನ ಕಡಿಮೆಯಾಗಿ ಮಕ್ಕಳು ಕೆಟ್ಟ ಹಾದಿ ತುಳಿದರೂ ತಂದೆ ತಾಯಿಗೆ ಅದರ ಬಗ್ಗೆ ಕಿಂಚಿತ್ತೂ ಗಮನವಿರುವುದಿಲ್ಲ. ಮಗಳು ಬಾಯ್ ಫ್ರೆಂಡ್ ಎಂದು ಅಲೆಯುತ್ತಿರುವಾಗಲೂ, ಓದುವುದನ್ನು ಬಿಟ್ಟು ಇಡೀ ದಿನ ಮೊಬೈಲ್ ನಲ್ಲಿ ಚಾಟಿಂಗ್ ಮಾಡುವುದನ್ನೂ ಹೆತ್ತವರು … Read more

ನಾನಂತೂ ಆ ಕ್ಷಣ ಯಾವಾಗ ಬರುತ್ತೋ ಅಂತಾ ಕಾಯ್ತಾ ಇದ್ದೀನಿ: ಪರಮೇಶ್ವರಪ್ಪ ಕುದರಿ

ಪ್ರೀತಿಯ ವಿಜಯಾ, ನಾನಿಲ್ಲಿ ಕ್ಷೇಮ, ನಿನ್ನ ಕ್ಷೇಮದ ಬಗ್ಗೆ ತಿಳಿಯುವ ಹಂಬಲ. ಹೇಗಿದ್ದಿಯಾ ವಿಜು? ಅಂದು ನೀ ನನ್ನಿಂದ ಅಗಲಿದ ಮೇಲೆ ತುಂಬಾ ಹೊತ್ತು ನಿನ್ನದೇ ಧ್ಯಾನ – ನಿನದೇ ನೆನಪು ! ನನ್ನ ಜೀವನದ ಕೊನೆಯವರೆಗೂ ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯುವ ಪರಮ ಇಚ್ಚೆ ನನಗೆ. ನಮ್ಮಿಬ್ಬರ ಪ್ರೇಮದ ಹಾದಿಗೆ ಅದ್ಯಾರೇ ಅಡ್ಡ ಬಂದರೂ, ನಾನು ಜಯಿಸಿ ನಿನ್ನನ್ನು ಪಡೆದೇ ಪಡೆಯುತ್ತೆನೆ ಎಂಬ ಬಲವಾದ ನಂಬಿಕೆ ನನಗಿದೆ ಚಿನ್ನಾ. ನೀನು ಬಡವಿ ನಾನು ಶ್ರೀಮಂತ … Read more

ಗೋರಿಯ ಸುತ್ತ ಸಪ್ತಪದಿ ತುಳಿದಾಗ…: ಶಿವಲೀಲಾ ಹುಣಸಗಿ ಯಲ್ಲಾಪುರ

ಅವಳೊಮ್ಮೆ ನೋಡಿದಾಗ ಕರುಳು ಕಿವುಚಿದ ಅನುಭವ. ದೈವಕ್ಕೊಂದು ಹಿಡಿಶಾಪ ಹಾಕಬೇಕೆನ್ನಿಸಿತು. ಅವನಾದರೋ ಹೇಳ ಹೆಸರಿಲ್ಲದೇ ತರಗಲೆಯಂತೆ ಮಣ್ಣೋಳು ಮಣ್ಣಾಗಿ ಹೋದ. ಗೋರಿ ಮೇಲೊಂದಿಷ್ಟು ಗರಿಕೆ ಹುಲ್ಲು ಬೆಳೆದು ಅವನು ಪುನಃ ಚಿಗುರಿದನೆಂಬ ನಂಬಿಕೆ ಅವಳಲ್ಲಿ. ಪ್ರತಿನಿತ್ಯ ಗೋರಿಗೊಂದು ಹೂ ಇಟ್ಟು ಊದಿನಕಡ್ಡಿ ಹಚ್ಚಿ ಗರಿಕೆ ಹುಲ್ಲು ಕೊಯ್ದಕೊಂಡು ಎರಡು ಮೂರು ಸಲ ಕಣ್ಣಿಗೆ ಒತ್ತಿಕೊಂಡು ಹೀಗೆ ಹುಟ್ಟುವ ಮನಸ್ಸಿದ್ದರೆ ನನ್ಯಾಕೆ ಮದುವೆಯಾದೆ? ದಿಕ್ಕುದಿಸೆಯಿಲ್ಲದೆ ಮರೆಯಾಗಿ ಹೋದಿ ಏಕೆ? ಎಂಬ ಸಂಕಟವನ್ನು ಹೊರ ಚೆಲ್ಲುವ ಅವಳಿಗೆ ಸಂತೈಸುವ ಪರಿವೆಯ … Read more

ಮರಳಿ ಬಂದ ಪತ್ರ: ಅಶ್ಫಾಕ್ ಪೀರಜಾದೆ

ಇಂತಹದ್ದೊಂದು ತಿರುವು ನನ್ನ ಜೀವನದಲ್ಲಿ ಬರಬಹುದೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ತೃಪ್ತಿದಾಯಕ ಅಖಂಡ ಮೂವತ್ತೈದು ವರ್ಷಗಳ ವೈವಾಹಿಕ ಜೀವನದಲ್ಲಿ ಆಕಸ್ಮಿಕವಾಗಿ ಅಲೆಯೊಂದು ಹುಟ್ಟಿ ಬಂದು ಸುಂದರವಾದ ನನ್ನ ಸಂಸಾರದಲ್ಲಿ ಹೀಗೆ ಹುಳಿ ಹಿಂಡಬಹುದು ಎಂದು ಭಾವಿಸಿರಲಿಲ್ಲ. ಬದುಕಿನ ಈ ಮುಸ್ಸಂಜೆಯಲ್ಲಿ ಹೀಗೆ ಅಪರಾಧಿಯಾಗಿ ಅವಳ ಮುಂದೆ ನಿಲ್ಲಬೇಕಾಗುತ್ತೆ ಎಂದು ನನಗೆ ಯಾವತ್ತಿಗೂ ಅನಿಸಿರಲಿಲ್ಲ. ನನಗಿಂತ ವಯಸ್ಸಿನಲ್ಲಿ ಕೇವಲ ಐದು ವರ್ಷ ಚಿಕ್ಕವಳು ಅವಳು. ಅವಳಿಗೆ ಐವತ್ತೈದು ನನಗೆ ಕೇವಲ ಅರವತ್ತು. ಈ ಅರವತ್ತನೇಯ ವಯಸ್ಸಿನ ಇಳಿ … Read more

ಕಲಿಕೆ v/s ಕುಡಿತ: ಶೈಲಜ ಮಂಚೇನಹಳ್ಳಿ

ಈ ಹಿಂದೆ ನನ್ನ ಪುಟ್ಟ ಕಂಪ್ಯೂಟರ್ ಸೆಂಟರ್‌ಗೆ ಕಂಪ್ಯೂಟರ್ ಕಲಿಯಲೆಂದು ಸುಮಾರು ೨೫ ವರ್ಷದ ಒಬ್ಬ ವ್ಯಕ್ತಿ ಬಂದ, ಈಗ ಆತನ ಹೆಸರು ನೆನಪಿಗೆ ಬರುತ್ತಿಲ್ಲ, ತನ್ನನ್ನು ಪರಿಚಯಿಸಿಕೊಳ್ಳುವಾಗ ಆತ ನನಗೆ ಒತ್ತಿ ಒತ್ತಿ ಹೇಳಿದುದು ನನಗೆ ಕಂಪ್ಯೂಟರ್ ಕಲಿಯಬೇಕೆಂದು ತುಂಬಾ ಆಸೆ ಇದೆ ಎಂದು. ತಾವು ನನಗೆ ಹೇಳಿಕೊಡುವಿರ ಮೇಡಮ್? ಎಂದು ಕೇಳಿದ. ವಯಸ್ಸಿನ ವಯೋಮಿತಿ ಇಲ್ಲದೆ ಎಲ್ಲಾ ವಯಸ್ಸಿನವರಿಗೂ ನಾನು ಕಂಪ್ಯೂಟರ್ ಕಲಿಸುತ್ತಿದ್ದರಿಂದ ಆತನ ಈ ಕೇಳಿಕೆಯಿಂದ ನನಗೆ ಯಾವುದೇ ವಿಶೇಷವೆನಿಸಲಿಲ್ಲ. ನಾನು ಪ್ರತಿಕ್ರಿಯಿಸುವ … Read more

“ಬಸಿದ ಕಣ್ಣೀರ ಭಾಷೆಯೊಳಗಿನ ಮತಂಗ ಕುಲದ ಧ್ಯಾನಸ್ಥ ಪರಂಪರೆಯ ಜೀವ ಕಾರುಣ್ಯದ ಮೋಹಕ ನವಿಲುಗಳ ಹೆಜ್ಜೆ ಗುರುತು!”: ಎಂ.ಜವರಾಜ್

ಆರನಕಟ್ಟೆ ರಂಗನಾಥರ ‘ಕಾರುಣ್ಯದ ಮೋಹಕ ನವಿಲುಗಳೇ’ ಕವಿತೆಗಳ ಆಳವು “ಬೋಧಿಸತ್ವ ಮಾತಂಗನು ತನಗೆ ಸಿಕ್ಕ ಭಿಕ್ಷಾನ್ನವನ್ನು ತೆಗೆದುಕೊಂಡು ಒಂದು ಗೋಡೆಯನ್ನಾಶ್ರಯಿಸಿ ಜಗಲಿ ಮೇಲೆ ಕೂತು ತಿನ್ನ ಹತ್ತಿದ್ದನು.. ಆತನ ಗಮನ ಬ್ರಹ್ಮಲೋಕದಲ್ಲಿತ್ತು. ಉಣ್ಣುತ್ತಿದ್ದ ಬೋಧಿಸತ್ವ ಮಾತಂಗನನ್ನು ರಾಜಭಟರು ಖಡ್ಗದಿಂದ ಕತ್ತರಿಸಿ ಹಾಕಿದರು. ಆ ಚಂಡಾಲನು ಸತ್ತ ಕೂಡಲೆ ಬ್ರಹ್ಮಲೋಕದಲ್ಲಿ ಉದಯಿಸಿದನು. ದೇವತೆಗಳು ಕೋಪಗೊಂಡು ಮೇಧರಾಷ್ಟ್ರದ ಮೇಲೆ ಕೆಂಡದ ಮಳೆಗರೆದರು. ಇಡೀ ರಾಷ್ಟ್ರ ಮತ್ತು ಪರಿಷತ್ತು ಸುಟ್ಟು ನಷ್ಟವಾಯಿತು. ಮೆಜ್ಜಾರಣ್ಯ ಮಾತಂಗಾರಣ್ಯ ಎಂದಾಯಿತು. ಬುದ್ದನು ಹೇಳಿದನು ‘ನಾಯಿಯ ಮಾಂಸವನ್ನು … Read more

ಭಾವನೆಗಳ ರೋಲರ್-ಕೋಸ್ಟರ್: ಅಮೂಲ್ಯ ಭಾರದ್ವಾಜ್‌

“ಅದ್ಯಾಕೋ ನಿದ್ದೆನೆ ಬರ್ತಿಲ್ಲ ಕಣೆ”, ಎಂದು ಶ್ರೀಧರ ಇತ್ತಲಿಂದ ಅತ್ತ ತನ್ನ ಮಗ್ಗಲನ್ನು ಬದಲಿಸಿ ಪಕ್ಕದಲ್ಲಿ ಮಲಗಿದ್ದ ಸೀತಾಳಿಗೆ ಹೇಳಿದ. “ನಂಗೂನು ಅಷ್ಟೆ ರೀ”, ಅವಳು ಅವನ ಕಡೆ ತಿರುಗಿ ಹೇಳಿದಳು. “ಗಂಟೆ ಎಷ್ಟಾಯ್ತು ನೋಡು ಸ್ವಲ್ಪ” ಎಂದು ಕೇಳಿದ. ಸೀತಾ ದೀಪ ಹಚ್ಚಿಕೊಂಡು ಮಂಚದ ಕೆಳಗಿಟ್ಟಿದ್ದ ತನ್ನ ಮೊಬೈಲ್‌ಫೋನನ್ನು ಕೈಗೆತ್ತಿಕೊಂಡು- “ಓಹ್‌ ಆಗ್ಲೇ ೩.೩೦ ಆಗ್ಬಿಟಿದೆ, ಯೋಚ್ನೇಲಿ ಟೈಮಾಗಿದ್ದೇ ಗೊತ್ತಾಗ್ಲಿಲ್ಲ” ಎಂದು ಹುಬ್ಬೇರಿಸಿದಳು. “ಅದೇನ್‌ಯೋಚ್ನೆನೆ ನಿಂಗೆ? ಯಾವಾಗ್ಲು ಏನೋ ತಲೆಗ್‌ ಹಾಕೊತ್ಯಾಪ” ಶ್ರೀಧರನಿಗೆ ವಾಸ್ತವ ಗೊತ್ತಿದ್ದರೂ, … Read more

ಸಿದ್ಧಲಿಂಗಯ್ಯ ಎಂಬ ಬೇಲಿ ಮೇಗಳ ಹೂವು !: ಅಶ್ಫಾಕ್ ಪೀರಜಾದೆ

ಕವಿಯೆಂದರೆ ಹೇಗಿರಬೇಕು ಎನ್ನುವ ಪ್ರಶ್ನೆಗೆ ಇನ್ನೂವರೆಗೂ ಉತ್ತರ ಸಿಕ್ಕಂತಿಲ್ಲ. ತಥಾಗತಿತ ಸಮಾಜದ ಪ್ರತಿನಿಧಿಯಂದು ನಾವು ಭಾವಿಸುವ ಕವಿ ವಾಸ್ತವದಲ್ಲಿ ದೈವೀ ಗುಣಗಳಿಂದ ಕೂಡಿರಬೇಕು. ಗಾಂಧಿಯಂತೆ ಕ್ಷಮಾಗುಣ ಹೊಂದಿದ ಮಹಾತ್ಮನಾಗಿರಬೇಕು. ಪವಾಡ ಪುರಷನೋ.. ಪ್ರವಾದಿಯೋ ಅಥವಾ ಇದಕ್ಕಿಂತ ಮಿಗಿಲಾಗಿ ಸ್ವತಃ ದೇವರೇ ಆಗಿರಬೇಕೆಂದು ಬಯಸುವವರಿದ್ದಾರೆ. ಇನ್ನೂ ಅವನಿಗೆ ಸಂಸ್ಕೃತಿಕ ಲೋಕದ ಪ್ರತಿನಿಧಿ ಎನ್ನುವ ಹಣೆಪಟ್ಟಿ ಅಂಟಿದ ನಂತರವಂತೂ ಮುಗಿಯಿತು. ಅವನಾಡುವ ಒಂದೊಂದು ಮಾತೂ ತುಂಬ ಎಚ್ಚರಿಕೆಯಿಂದಿರಬೇಕಾಗುತ್ತದೆ. ಅವನಿಡುವ ಒಂದೊಂದು ಹೆಜ್ಜೆಗೂ ಸಾವಿರ ಸಲ ವಿಚಾರ ಮಾಡಬೇಕಾಗುತ್ತದೆ. ಅವನು ಸಾವಿರ … Read more

ಒಂದು ಪಲ್ಲವಿ ಎರಡು ಹಾಡು ಹಲವು ಚರಣ ಹಂಸಲೇಖರ ಪದ ಬೀಡು: ಜಯರಾಮ ಚಾರಿ

ಕಳೆದ ವಾರ ನಮ್ಮ ಅಡಕಸಬಿ ಅಡ್ಡದಲ್ಲಿ ಹಂಸಲೇಖರ ಬಗ್ಗೆ ಬರೋಬ್ಬರಿ ಆರು ದಿನಗಳ ಕಾಲ ಕೇವಲ ಅವರ ಸಾಹಿತ್ಯ ಕುರಿತು ಅದನ್ನು ಒಡೆದು ನೋಡುವ ಒಂದು ಸಣ್ಣ ಪ್ರಯತ್ನ ಮಾಡಿದ್ವಿ. ಆದರೆ ಹಂಸಲೇಖ ಬರೆದ ಹಾಡುಗಳ ಸಂಖ್ಯೆ ಕಮ್ಮಿಯಿಲ್ಲ 3500 ಕ್ಕೂ ಹೆಚ್ಚು ಹಾಡು ಬರೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಹಂಸಲೇಖ ತಟ್ಟದ ಪದಗಳಿಲ್ಲ, ಅವರು ನಾದಬ್ರಹ್ಮನು ಹೌದು, ಪದಪರಮಾತ್ಮನು ಹೌದು .ಆರು ದಿವಸ ನಡೆಸಿದರು ಎಷ್ಟೋ ಹಾಡುಗಳು ಎಷ್ಟೋ ಸಾಲುಗಳು ಹಾಗೆ ಉಳಿದುಬಿಟ್ಟವು. ಹಂಸಲೇಖರು ಒಂದೇ … Read more

ಕ್ಲಬ್‌ ಹೌಸ್‌ ನಲ್ಲಿ ಒಂದೊಂದು ಸಂಜೆ ಒಂದೊಂದು ಹಂಸಗೀತೆ

ನಾದಬ್ರಹ್ಮ ಹಂಸಲೇಖರವರ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಆಪ್‌ ಆದ ಕ್ಲಬ್‌ ಹೌಸ್‌ ನಲ್ಲಿ ಅಡ್ಡಕಸಬಿ ಅಡ್ಡ ಎಂಬ ಕ್ಲಬ್‌ ನಲ್ಲಿ ಸಂಜೆ 6.30 ಕ್ಕೆ ಪ್ರತಿದಿನ 23.06.2021 ರವರೆಗೆ ʼಹಂಸಮಯʼ ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳು ಈ ಕೆಳಗಿನ ಚಿತ್ರದಲ್ಲಿವೆ. ಕ್ಲಬ್‌ ಹೌಸ್‌ ನಲ್ಲಿ ಅಡ್ಡಕಸಬಿ ಅಡ್ಡ ಸೇರಲು ನಿಮ್ಮ ಮೊಬೈಲ್‌ ನಲ್ಲಿ ಕ್ಲಬ್‌ ಹೌಸ್‌ install ಮಾಡಿಕೊಂಡು ಲಾಗಿನ್‌ ಆದ ಮೇಲೆ ಈ ಲಿಂಕ್‌ ಕ್ಲಿಕ್ ಮಾಡಿ

ಮಳೆ ಊರಿನ ಹುಡುಗಿ…: ವೃಶ್ಚಿಕ ಮುನಿ

ನೆನಪಾಗುತ್ತೀಯ ಎಂದು ಪತ್ರ ಬರೆಯುತ್ತಿಲ್ಲ, ಪತ್ರ ಬರೆಯುತ್ತಿರುವುದು ನೆಪವಷ್ಟೆ ನೆನಪಿಗೆ ಉತ್ತರಿಸಲು.ಗೆ..ಮಳೆ ಊರಿನ ಹುಡುಗಿಗೆರಥ ಬೀದಿಯ ಕೊನೆಯ ತಿರುವುಕೆಂಪು ಹೆಂಚಿನ ಮನೆಫೋಸ್ಟ :ಮಳೆಊರು ಇಂದ..ಅಲೆಮಾರಿಯ ನೆಲೆಯಿಂದಖಾಸಾಕೋಣೆಯ ಬಿಸಿಯುಸಿರುಶಾಯಿಯಲ್ಲಿ. ಕ್ಷೇಮ ವಿಚಾರವಾಗಿ ಬರೆದ ಸಾಲುಗಳಲ್ಲಿ ಸಾಕಾಗುವಷ್ಟು ನೆನಪುಗಳಿವೆ. ಜಗದ ಯಾವ ಖಜಾನೆಯಲ್ಲಿ ತುಂಬಿ ಇಡಲು ಆಗದಷ್ಟು ಖಜಾನೆ ಲೂಟಿ ಗೆ ಕಳ್ಳರ ಭಯವಿಲ್ಲ. ನಾನು ನೀನು ಮಾತ್ರ ಜೀವಿತದ ಚಿತ್ರ ಶಾಲೆಯಲ್ಲಿ . ನೋಡು… ನಾನು ಎಷ್ಟು ಪೆದ್ದು ಅಂತಾ …! ಸರಿಯಾದ ಒಕ್ಕಣಿಕ್ಕೆಯನ್ನು ಕೊಟ್ಟು ಬರೆಯಲು ಆಗುವುದಿಲ್ಲ … Read more