ಅಮಾಸ ಎಂಬ ದೇವನೂರು ಮಹಾದೇವ: ಸಂತೋಷ್ ಟಿ
ನಮ್ಮ ನಡುವಿನ ಸವ್ಯಸಾಚಿ ಲೇಖಕರಲ್ಲಿ ವಿಶಿಷ್ಟವಾದ ಪ್ರತಿಭೆಯ ಛಾಪನ್ನು ಮೂಡಿಸಿದ ಬರಹಗಾರ ದೇವನೂರು ಮಹಾದೇವ ಅವರು. ಜನಸಾಮಾನ್ಯರ ಆಶೋತ್ತರಗಳಿಗೆ ಬಂಡಾಯ ಮನೋಭಾವದ ಮೂಲಕ ಸ್ವಂದಿಸಿದ ಅವರ ಹೋರಾಟ ಮತ್ತು ಭಾಷಣಗಳು ಸಾಮಾಜಿಕವಾಗಿ ಸಾಂಸ್ಕೃತಿಕ ರಾಜಕಾರಣದಲ್ಲಿ ಪರಿಣಾಮಕಾರಿ. ಅವರು ಕೃತಿಗಳ ಮೂಲಕ ಕಟ್ಟಿಕೊಡುವ ಒಳನೋಟಗಳು ಪ್ರಾದೇಶಿಕ ಸ್ಥಳೀಯ ಗ್ರಾಮೀಣರ ಜೀವನವನ್ನು ತಲಸ್ವರ್ಶಿಯಾಗಿ ಕಂಡ ಅನುಭವ ಮತ್ತು ಭಾಷೆಯ ಸ್ವರೂಪ ವಿನೂತನ ಮಾದರಿ. ಕೃತಿಗಳು ತನ್ನ ಗಾತ್ರದಲ್ಲಿ ಕಿರಿದಾದರೂ ಅವು ಉಂಟುಮಾಡಿದ ಸಾಮಾಜಿಕ ಪಲ್ಲಟಗಳ ಪರಿಣಾಮಕಾರಿ ವಿಸ್ಮಯ ಸೋಜಿಗ ಪಡುವಂತದ್ದು. … Read more