ಕವಿ ಮನಸ್ಸಿನ ಭಾವಯಾನ ‘ಮೌನಸೆರೆ’ ಕಾದಂಬರಿ: ಅಶ್ಫಾಕ್ ಪೀರಜಾದೆ

ಒಂದು ಕಥೆ ಓದಿಸಿಕೊಳ್ಳಬೇಕು ಮತ್ತು ಓದುಗನನ್ನು ಕಾಡಬೇಕು. ಇಂತಹ ವಿಚಾರವುಳ್ಳ ಕಥೆಗಳು ಎಂದೆಂದಿಗೂ ಅಮರತ್ವ ಪಡೆದುಕೊಳ್ಳುತ್ತವೆ. ಈ ದಿಶೆಯಲ್ಲಿ ಇಲ್ಲಿರುವ ಕಥಾವಸ್ತು ಅಮರತ್ವ ಪಡೆದುಕೊಳ್ಳುವತ್ತ ಸಾಗಿರುವುದು ಉತ್ತಮ ಬೆಳವಣಿಗೆಯ ಹಂತವೆಂದು ಖ್ಯಾತ ಸಾಹಿತಿ ಕವಿ ಮುದಲ್ ವಿಜಯ್ ಬೆಂಗಳೂರು ಅವರು ಯುವ ಸಾಹಿತಿ ಗಣಪತಿ ಹೆಗಡೆ ಅವರ ಚೊಚ್ಚಲ ಕಾದಂಬರಿ ಮೌನಸೆರೆಗೆ ಮುನ್ನುಡಿಯ ರೂಪದಲ್ಲಿ ನೀಡಿರುವ ಪ್ರಮಾಣ ಪತ್ರ. ಈ ಹಿನ್ನಲೆಯಲ್ಲಿ ಕಾದಂಬರಿ ಮೊದಲಿನಿಂದ ಕೊನೆಯವರೆಗೂ ಯಾವುದೇ ಅಡೆತಡೆಗಳು ಇಲ್ಲದೇ ಓದಿಸಿಕೊಂಡು ಹೋಗುವುದರಿಂದ ಇಲ್ಲಿ ಮುದಲ್ ವಿಜಯ್ … Read more

‘ಕುಂದಾಪ್ರ ಕನ್ನಡ ನಿಘಂಟು’ ಪುಸ್ತಕದ ಕುರಿತು: ಸಾವಿತ್ರಿ ಶ್ಯಾನುಭಾಗ

ಪುಸ್ತಕ: ‘ಕುಂದಾಪ್ರ ಕನ್ನಡ ನಿಘಂಟು’ಪ್ರಧಾನ ಸಂಪಾದಕರು: ಪಂಜು ಗಂಗೊಳ್ಳಿಸಂಪಾದಕರು: ಸಿ. ಎ. ಪೂಜಾರಿ, ರಾಮಚಂದ್ರ ಉಪ್ಪುಂದಬೆಲೆ: ೬೦೦ ರೂಪಾಯಿ ಕರ್ನಾಟಕದಲ್ಲಿ ಕನ್ನಡವನ್ನು ಪ್ರಾದೇಶಿಕವಾಗಿ ೧೮ ಶೈಲಿಯಲ್ಲಿ ಬಳಸಲಾಗುತ್ತದೆ ಎಂದು ಕೇಳಿದ್ದೇನೆ. ಧಾರವಾಡ ಕನ್ನಡ, ಮಂಗಳೂರು, ಹಾಸನ, ಉತ್ತರ ಕನ್ನಡದ ಕನ್ನಡ ಹೀಗೆ ನಾನಾ ಶೈಲಿಗಳು. ಮಂಗಳೂರು ಭಾಷೆ ಶುದ್ಧ ವ್ಯಾಕರಣದಂತೆ ಎಲ್ಲಿಗೆ ಹೋಗುವುದು ಮಾರಾಯ ಎಂದು, ಧಾರವಾಡದಲ್ಲಿ ಎಲ್ಲಿಗ್ ಹೊಂಟಿ, ಉತ್ತರ ಕನ್ನಡದಲ್ಲಿ ಹವ್ಯಕ ಭಾಷೆಯಲ್ಲಿ ಒಂದು ರೀತಿ, ಹೀಗೆ ಬೇರೆ ಬೇರೆ ಶೈಲಿಯಲ್ಲಿ ಮಾತನಾಡಲಾಗುವುದು ಕನ್ನಡ … Read more

ಸಿದ್ರಾಮ್ ಪಾಟೀಲರ ಜಂಗಮಕ್ಕಳಿವಿಲ್ಲ ಪುಸ್ತಕದ ವಿಮರ್ಶೆ: ಭಾರ್ಗವಿ ಜೋಶಿ

ಇತ್ತೀಚಿಗೆ ಓದಿದ ಪುಸ್ತಕ. ಪುಸ್ತಕದ ಹೆಸರು ನೋಡಿದ ಕೂಡಲೇ ಓದಬೇಕು ಅನಿಸಿತು. ಜಂಗಮಕ್ಕಳಿವಿಲ್ಲ ಅನ್ನೋದೇ ಒಂದು ದೊಡ್ಡ ವಿಷಯ. ಅರ್ಥ ಮಾಡಿಕೊಳ್ಳೋಕೆ ತುಂಬಾ ವಿವೇಕ ಇರಬೇಕು. ಇನ್ನು ಆ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿನ ಕಥೆಗಳು ಹೇಗೆ ಇರಬಹುದು ಅನ್ನೋ ಕುತೂಹಲದಿಂದಲೇ ಪುಸ್ತಕ ಕೊಂಡುಕೊಂಡೆ. ಖಂಡಿತ ನನ್ನ ಊಹೆ ಸುಳ್ಳಾಗಲಿಲ್ಲ. ಹನ್ನೆರೆಡು ವೈವಿಧ್ಯಮಯ ಕಥೆಗಳನ್ನು ಹೊಂದಿದ ಈ ಪುಸ್ತಕ ನಿಜಕ್ಕೂ ತುಂಬಾ ಅರ್ಥ ಗರ್ಭಿತ ಕಥೆಗಳು. ಮೊದಲನೇ ಕಥೆ ಬಿಡಿ-ಕೊಂಡಿಗಳು. ತಂದೆ, ತಾಯಿ ಅಸೆ, ಕನಸುಗಳು, ಅವುಗಳನ್ನು ಮಿರಿ … Read more

ಅಂತರ ನಿರಂತರವಾಗದೆ ಕಾವ್ಯ ಹೂವುಗಳು ಪರಿಮಳಿಸುತಿರಲಿ: ಅನಿತಾ ಪಿ.ಪೂಜಾರಿ ತಾಕೊಡೆ

ಲೇಖಕರು: ಡಾ.ವಿಶ್ವನಾಥ ಕಾರ್ನಾಡ್ಪ್ರಕಾಶನ: ಗಾಯತ್ರೀ ಪ್ರಕಾಶನಮುದ್ರಕರು: ಅನಂತ ಪ್ರಕಾಶ ಕಿನ್ನಿಗೋಳಿಪುಟ: 96. ಬೆಲೆ: ರೂ 120/- ಡಾ. ವಿಶ್ವನಾಥ ಕಾರ್ನಾಡ್ ಅವರು ಸೌಮ್ಯಭಾವದ ಕವಿ. ಕಳೆದ ಹಲವಾರು ದಶಕಗಳಿಂದ ತಮ್ಮನ್ನು ಎಲ್ಲ ಪ್ರಕಾರದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರತೆಯನ್ನು ಕಾಯ್ದುಕೊಂಡಿದ್ದಾರೆ. ಇವರು ಕನ್ನಡದ ಬರವಣಿಗೆ ಆರಂಭಾವದದ್ದು ಕವಿತೆಯಿಂದಲೇ. ಅವರ ಮೊದಲ ಕವಿತೆ ‘ದಿಬ್ಬಣ’ ಮಾಸ್ತಿಯರ ‘ಜೀವನ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅದೇ ಅವರಿಗೆ ಇನ್ನಷ್ಟು ಕಾವ್ಯ ಬರೆಯುವಲ್ಲಿ ಪ್ರೇರಣೆಯಾಯಿತೆಂದು ಅವರೇ ಹೇಳಿಕೊಂಡಿದ್ದಾರೆ. “ಪ್ರತಿಯೊಬ್ಬನಲ್ಲಿಯೂ ಭಾವನೆ ಇದೆ. … Read more

ಮಕ್ಕಳನ್ನೂ ಅನ್ವೇಷಣಾ ಮನೋಭಾವದತ್ತ ಪ್ರೇರೇಪಿಸುವ ಆನಂದ ಪಾಟೀಲರ “ಬೆಳದಿಂಗಳು”: ರವಿರಾಜ್ ಸಾಗರ್. ಮಂಡಗಳಲೆ

ಸಣ್ಣ ಮಕ್ಕಳನ್ನೆ ದೃಷ್ಟಿಯಲ್ಲಿಟ್ಟುಕೊಂಡ ಸಿದ್ಧಮಾದರಿಯ ದಾರಿಯಿಂದ ದೂರ ನಿಂತು ಮಕ್ಕಳಿಗೆ ಕುತೂಹಲದ ವಸ್ತುವಿನೊಂದಿಗೆ ತಮ್ಮದೇ ಕಾಲ್ಪನಿಕತೆಗೆ ತೆರೆದುಕೊಳ್ಳಬಲ್ಲ, ಅನ್ವೇಷಣಾ ಮನೋಭಾವದತ್ತ ತೆರೆದುಕೊಳ್ಳುವಂತೆ ಮಾಡಬಲ್ಲ ವಸ್ತುವನ್ನಿಟ್ಟುಕೊಂಡು, ಸಣ್ಣ ಮಕ್ಕಳಿಗೆ ತುಸು ಗಂಭೀರ ಎನಿಸಿದರರೂ ಪ್ರೌಢ ಹಂತದ ಮಕ್ಕಳ ಮನೋಮಟ್ಟಕ್ಕೆ ಆಳವಾಗಿ ಇಳಿದು ತುಸು ಹೆಚ್ಚಾಗಿ ಪ್ರಭಾವ ಬೀರಬಲ್ಲ ಆನಂದ ಪಾಟೀಲರ ಬೆಳದಿಂಗಳು ಕಾದಂಬರಿಯನ್ನು ನೀವು ಒಮ್ಮೆ ಓದಿದರೆ ಅದು ಮತ್ತೊಮ್ಮೆ ಓದಿಸಿಕೊಳ್ಳುತ್ತದೆ. ಸರಳ ಸಂಭಾಷಣೆಯೊಂದಿಗೆ ಮಕ್ಕಳ ಮನಃಪಟಲದಲ್ಲಿ ತಾವು ಈಗಾಗಲೇ ನೋಡಿರುವ ಯಾವುದೋ ಬೆಟ್ಟಗುಡ್ಡ,ಕಣಿವೆ ಪರಿಸರ ಅಥವಾ ಈಗಾಗಲೇ … Read more

‘ರಾಗವಿಲ್ಲದಿದ್ದರೂ ಸರಿ’ ನಾಲಿಗೆ ಮೇಲೆ ನುಲಿಯುತಿರಲಿ: ಜಹಾನ್ ಆರಾ ಕೋಳೂರು

ಗಜಲ್ ಕಾವ್ಯ ನಿಜಕ್ಕೂ ಬಹಳ ನಿಯಮಬದ್ಧವಾದ ಸಾಹಿತ್ಯಪ್ರಕಾರ ಎಂದು ಹೇಳಬಹುದು ಇದು ಸಾಮಾನ್ಯವಾಗಿ ಒಂದೆರಡು ಪ್ರಯತ್ನಗಳಲ್ಲಿ ಒಲಿಯುವಂಥದ್ದಲ್ಲ ಉಮರ್ ರವರ ಕಠಿಣ ಪರಿಶ್ರಮ ಮತ್ತು ಅಧ್ಯಯನಶೀಲತೆಯಿಂದಾಗಿ ಇದು ಅವರಿಗೆ ಒಲಿಯಲು ಸಾಧ್ಯವಾಗಿರಬಹುದು. ” ರಾಗವಿಲ್ಲದಿದ್ದರೂ ಸರಿ” ಎಂದು ಹೇಳಿ ಭಾವ ತೀವ್ರವಾದ ಹೃದಯಸ್ಪರ್ಶಿಯಾದ ಪ್ರಾಮಾಣಿಕವಾದ ರಾಗಗಳನ್ನು ಕವಿ ನಮ್ಮ ಕೈಗೆ ಇಟ್ಟಿದ್ದಾರೆ. ಸೂಫಿ ಮಾದರಿಯ ಮುಖಪುಟ ದೊಂದಿಗೆ ಮಾನವೀಯತೆಯ ಗಜಲ್ ಗಳ ಅನಾವರಣಗೊಂಡಿವೆ. ಈ ಕೃತಿಗೆ ವಿಶಿಷ್ಟವಾದ ಶೈಲಿಯಲ್ಲಿ ಮುನ್ನುಡಿಯನ್ನು ಬರೆದಿರುವಂತಹ ಶ್ರೀಮತಿ ಮೆಹಬೂಬ್ ಬಿ ಶೇಕ್ … Read more

ವಿಷಾದ ನೋವು ಘರ್ಷಣೆ ಸಂಘರ್ಷ ತೊಳಲಾಟ ತಾಕಲಾಟದ ಒಳಗುದಿ ಹೇಳುವ ಕಥೆಗಳು: ಎಂ.ಜವರಾಜ್

“ನಿರುದ್ಯೋಗಕ್ಕೆ ಹೆಣವಾದ ಅಪ್ಪ” ಇದು ಆನಂದ್‌ ಎಸ್. ಗೊಬ್ಬಿ ಅವರ ಚೊಚ್ಚಲ ಕಥಾ ಸಂಕಲನ. “ನನ್ನೊಳಗಿನ ಒಬ್ಬ ಕಥೆಗಾರ ಹೊರಗೆ ಬರಲು ತುಂಬ ತಡಕಾಡಿದ. ಅಲ್ಲಿಂದ ಒಂದು ಘಳಿಗೆಗಾಗಿ ರಮಿಸಿಕೊಂಡು ಬಂದೆ. ಬೆಳಿತಾ ಬೆಳಿತಾ ನನಗೆ ನನ್ನ ಊರಿನ ಪರಿಸರ ಹೇಗಿದೆ, ನನ್ನ ಸ್ನೇಹಿತರು ಹೇಗಿದ್ದಾರೆ ಎಂಬುದು ಸ್ಪಷ್ಟವಾಗಿ ಅರಿವಿಗೆ ಬಂತು. “ನೊಂದವರ ನೋವು ನೊಂದವರೇ ಬರೆದರೆ ಗಟ್ಟಿಯಾಗಿರುತ್ತದೆ” ಎಂಬ ದೊಡ್ಡವರ ಮಾತನ್ನು ಕೇಳಿದ್ದೆ ಮತ್ತು ಅನುಭವಿಸಿದ್ದೆ” ಎಂದು ಲೇಖಕ ಆನಂದ್ ಎಸ್. ಗೊಬ್ಬಿ ತಮ್ಮ ಕಥಾಲೋಕ … Read more

ಅಶ್ಫಾಕರ ” ನನ್ನೊಳಗಿನ ಕವಿತೆ ” ಕವನ ಸಂಕಲನ ಕುರಿತ ಎರಡು ಅಭಿಪ್ರಾಯಗಳು

“ಪ್ರತಿಮೆಯೊಳಗೇ ಕರಗಿಹೋಗುವ ಕಲ್ಲಿನ ಗುಣ ಅಶ್ಫಾಕರ ” ನನ್ನೊಳಗಿನ ಕವಿತೆ ” ಯ ಮೂಲದ್ರವ್ಯ ನೆರಳಿನ ಹಾದಿಯ ಬಿಸಿಲಿನ ಮಂಟಪವೂ ಹೌದು. ಕಲ್ಪನೆಯ ಕನಸುಗಳಲ್ಲಿ ನೆನಪಿನ ಹೆಜ್ಜೆಗಳನ್ನು ಮೂಡಿಸುವ ಪದಪಾದಪಯಣವೂ ಹೌದು. ವಿಶೇಷ ಆಸ್ವಾದನೆಗೆ ಹದಗೊಂಡು ಮುದವೀವ ಪದಪಂಕ್ತಿಯ ಭೋಜನಾಲಯವೂ ಹೌದು. ಕಣ್ಣಿಗೆ ಕಾಣುವ ಅಕ್ಷರಗಳಿಗೆ ಧ್ವನಿನೀಡಿ ಭಾವಸ್ಪರ್ಶಕ್ಕೆ ಮನಸನ್ನು ತೆರೆದಿಡುವಲ್ಲಿ “ನನ್ನೊಳಗಿನ ಕವಿತೆ” ಗಳು ಸಾರ್ಥಕ್ಯವನ್ನು ಕಂಡಿವೆ. ಕಾವ್ಯದೊಳಗಿನ ಕನಸು; ಕನಸಿನೊಳಗಿನ ಕಾವ್ಯ; ಮೌನದೊಳಗಿನ ಮನಸು; ಮನಸಿನೊಳಗಿನ ಮೌನ, ವಾಸ್ತವದ ನೆರಳಿನಲೆಯೊಳಗೆ ಜೀವಂತಿಕೆಯನ್ನು ಪಡೆದುಕೊಳ್ಳುತ್ತವೆ. ಮಹತ್ವಪೂರ್ಣ … Read more

ವರ್ತಮಾನದ ಗಾಯಗಳಿಗೆ ಮುಲಾಮು ನೀಡುವ ಸಂಕಲನ -ಬಯಲೊಳಗೆ ಬಯಲಾಗಿ: ಡಾ ವೈ. ಎಂ. ಯಾಕೊಳ್ಳಿ, ಸವದತ್ತಿ

ಇಂದು ಕನ್ನಡದಲ್ಲಿ ತುಂಬ ಸದ್ದು ಮಾಡುತ್ತಿರುವ ಕಾವ್ಯ ಪ್ರಕಾರ ಗಜಲ್. ಕೆಲವಾರು ದಶಕಗಳ ಹಿಂದೆ ರಾಯಚೂರು ನಾಡಿನ ಕವಿ ಶ್ರೀ ಶಾಂತರಸ ರಂಥವರಿಂದ ಕನ್ನಡಕ್ಕೆ ಬಂದ ಈ ಕಾವ್ಯ ಪ್ರಕಾರ ಇಂದು ತನ್ನ ಸಮಸ್ತ ಬಾಹುಗಳನ್ನು ಚಾಚಿ ಘಮ ಘಮಿಸುತ್ತಿದೆ. ಗಜಲ್ ರಚನೆಯ ಹೃದಯವನ್ನು ಅರಿತವರು, ಅರಿಯದವರು ಗಜಲ್ ಗಳನ್ನು ಬರೆಯುತ್ತಿದ್ದಾರೆ. ಅವರದೇ “ಮುಷಾಯಿರಿ ಗಳು ನಡೆಯುತ್ತಿದ್ದು ಹಲವಾರು ಗಜಲ್ ಗ್ರೂಪ್ ಗಳೇ ನಿರ್ಮಾಣವಾಗಿವೆ. ಗಜಲ್ ಕುರಿತ ವಿಚಾರ ಗೋಷ್ಠಿ ಗಳು ಅಲ್ಲಲ್ಲಿ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ … Read more

ಸಿದ್ಧಾಂತಗಳು ಮರಿಚೀಕೆಯಾದಾಗ…: ಡಾ. ಮಲ್ಲಿನಾಥ ಎಸ್. ತಳವಾರ

‘ಅಕ್ಷರಗಳಿಂದ ಏನೂ ಆಗುವುದಿಲ್ಲ’ ಎಂಬ ಸಿನಿಕತನದ ಜೊತೆಗೆ ‘ಅಕ್ಷರಗಳಿಂದ ಏನೆಲ್ಲಾ ಆಗಬಹುದು’ ಎಂಬ ಸಕರಾತ್ಮಕ ಚಿಂತನೆಯು ವಾಗ್ದೇವಿಯ ಮಡಿಲಲ್ಲಿ ಹಚ್ಚ ಹಸಿರಾಗಿದೆ. ಇದು ನಿತ್ಯ ಹರಿದ್ವರ್ಣವಾಗಬೇಕಾದರೆ ಸಾಹಿತ್ಯವು ಮನುಷ್ಯನ ಅಂತರಂಗಕ್ಕೆ, ಅವನ ಅಂತರ್ಲೋಕಕ್ಕೆ ಸಂಬಂಧಪಟ್ಪಿರಬೇಕಾಗುತ್ತದೆ. ಇದು ಕೇವಲ ಉದರ ನಿಮಿತ್ತವಾಗಿ ಮಾಡುವ ಕೆಲಸವಂತೂ ಅಲ್ಲವೇ ಅಲ್ಲ. ಈ ಕಾರಣಕ್ಕಾಗಿಯೇ ‘ಸಾಹಿತ್ಯ ಅನಂತಕಾಲಕ್ಕೆ ಸಂಬಂಧಪಟ್ಟಿದ್ದು, ತತ್ಕಾಲಕಲ್ಲ’ ಎನ್ನಲಾಗುತ್ತದೆ. ಇದಕ್ಕೆ ಬೇಕಾಗಿರುವುದು ಮನುಷ್ಯತ್ವ. ಮನುಷ್ಯತ್ವವೇ ಈ ಜಗತ್ತಿನ ಅತ್ಯುತ್ತಮವಾದ ತಾತ್ವಿಕ ತಿರುಳು. ಇಲ್ಲಿ ತತ್ ಕ್ಷಣ ಫಲದ ಪ್ರಲೋಭನೆ ಸರಿಯಲ್ಲ. … Read more

ಮನದ ಗೋಡೆಗೆ ಒಲವ ಸಿಂಚನ- ಪನ್ನೀರು: ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಕೃತಿ- ಪನ್ನೀರು( ಹನಿಗವನ ಸಂಕಲನ)ಕವಿ- ಪರಮೇಶ್ವರಪ್ಪ ಕುದರಿಪ್ರಕಾಶನ- ಹರಿ ಪ್ರಕಾಶನಮುದ್ರಣ- ಸ್ವ್ಯಾನ್ ಪ್ರಿಂಟರ್ಸ್ಬೆಲೆ- ಒಂದು ನೂರು ರೂಗಳು ಎಲ್ಲ ನಲಿವಿಗೂಪ್ರೀತಿಯೇ ಪ್ರೇರಣೆಎಲ್ಲಾ ನೋವಿಗೂಪ್ರೀತಿಯೇ ಔಷಧಿ!ಮತ್ತೇಕೆ ಜಿಪುಣತನಕೈ ತುಂಬಾ ಹಂಚಿಎದೆ ತುಂಬಾ ಹರಡಿ( ಪ್ರೀತಿಯೇ ಔಷಧಿ) ಮಾನವೀಯ ಅಂತಃಕರಣ ಹೊಂದಿದ ಪ್ರತಿ ಮನುಷ್ಯ ನೂ ಕವಿಯೇ! ಹೀಗಿರುವಾಗ ಕವಿ ಮನದಿ ಇಂತಹ ದೇದಿಪ್ಯಮಾನದ ಹೊಳಹಿನ ಸಾಲೊಂದು ಹೊಳೆದರೆ ಅದು ಸ್ವಸ್ಥ ಸಮಾಜದ ಕುರುಹು.ಪರಮೇಶ್ವರಪ್ಪ ಕುದರಿ ಪ್ರೌಢಶಾಲಾ ಅಧ್ಯಾಪಕರಾಗಿ,ಗಾಯಕ ರಾಗಿ, ಮಿಮಿಕ್ರಿ ಕಲಾವಿದರು ಆಗಿ ನಾಡಿನಾದ್ಯಂತ ಪರಿಚಿತರಾಗಿದ್ದಾರೆ. ಬಹುಮುಖ ಪ್ರತಿಭೆಯಾದರೂ … Read more

ಕೆಂಡದ ಬೆಳುದಿಂಗಳು – ಸುಡುವ ಕೆಂಡದಲಿ ಅದ್ದಿ ತೆಗೆದ ಒಂದು ಅಪೂರ್ವ ಕಲಾಕೃತಿ: ಎಂ.ಜವರಾಜ್

“ವಿಮರ್ಶೆಯು ಒಂದು ಬೌದ್ಧಿಕ ಕ್ರಿಯೆ. ಯಾವುದೇ ಕೃತಿಯನ್ನು ತೂಗಿನೋಡಿ ಮೌಲ್ಯ ನಿರ್ಧರಿಸುವ ಸಾಮಥ್ರ್ಯ ಅಥವಾ ಕಲೆ – ಕ್ರಿಟಿಸಿಸಮ್. ಈ ಪದ ಗ್ರೀಕ್ ಮೂಲದ ಕ್ರಿನೈನ್‍ದಿಂದ ಬಂದದ್ದು. ಅಂದರೆ ಬೇರ್ಪಡಿಸು, ವಿವೇಚಿಸು, ವಿಶ್ಲೇಷಿಸು ಎಂದರ್ಥ. ಕ್ರಿಯಾಶೀಲ ಬರೆಹಗಾರರು, ಪ್ರಾರಂಭಿಕ ಬರೆಹಗಾರರು, ವೃತ್ತಿಶೀಲ ವಿಮರ್ಶಕರು ಎಲ್ಲರ ವಿಶ್ಲೇಷಣೆಯನ್ನು ವಿಮರ್ಶೆಯೆಂದೇ ಕರೆಯಲಾಗುತ್ತದೆ. ಇಂದು ಬಳಸುತ್ತಿರುವ ವಿಮರ್ಶೆ ಎಂಬ ಪದ ಇಂಗ್ಲಿಷ್‍ನ ಕ್ರಿಟಿಸಿಸಂ ಪದಕ್ಕೆ ಸಂವಾದಿ” ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ವಿಮರ್ಶಾ ಬರಹಗಳಲ್ಲಿ ವಿಶೇಷವಾಗಿ ಸಣ್ಣ ಅತಿಸಣ್ಣ ಕಥೆಗಳ … Read more

ಸ್ಪೂರ್ತಿಯ ಸುಮಗಳೊಂದಿಗೆ ಮನಸ್ಪೂರ್ತಿಯಾಗಿ ಮಾತಾದಾಗ…: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಕವನಸಂಕಲನ: ಸ್ಪೂರ್ತಿಯ ಸುಮಗಳುಲೇಖಕಿಯರು: ಶ್ರೀಮತಿ ದಾಕ್ಷಾಯಣಿ ಮಂಡಿ ‘ಸ್ಪೂರ್ತಿಯ ಸುಮಗಳು’ ಶ್ರೀಮತಿ ದಾಕ್ಷಾಯಿಣಿ ಮಂಡಿ ಅವರ ಮೊದಲ ಕವನ ಸಂಕಲನ ಈ ಸಂಕಲನದಲ್ಲಿ 60 ವಿಭಿನ್ನವಾದ ಕವಿತೆಗಳಿವೆ. ಪ್ರತಿಯೊಂದು ಕವಿತೆಯ ವಸ್ತುವು ವಿಭಿನ್ನತೆಯಿಂದ ಕುಡಿದೆ. ಮುಧೋಳ ತಾಲೂಕಿನ ರನ್ನಬೆಳಗಲಿಯಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ವಿಶೇಷವಾಗಿ ಮಹಾಕವಿ ರನ್ನ, ಹೆಣ್ಣಿನ ಕೋರಿಕೆ, ಮನದ ಹಂಬಲ, ಗುರುವಿನ ಮಹಿಮೆ, ಮಹಾತ್ಮ ಗಾಂಧೀಜಿ, ನೂತನ ಪಿಂಚಣಿ, ದೇಶ ರಕ್ಷಕ, ನಿಸರ್ಗ ರಮ್ಯತೆ, ಮತದಾನ, ಗೆಳೆತನದ ಮಾಧುರ್ಯ, ಕೃಷಿ, ಭ್ರಷ್ಟಾಚಾರ, ವೈಯಕ್ತಿಕ ಹೋರಾಟದ … Read more

“ಜ಼ೀರೋ ಬ್ಯಾಲೆನ್ಸ್- ಒಂದು ಚೌಕಟ್ಟಿನೊಳಗೆ ಹುದುಗಿರುವ ವಿಷಾದ ಹಾಗು ಜೀವಗಳ ತೀವ್ರ ಸತ್ಯದ ಶೋಧ”: ಎಂ.ಜವರಾಜ್

ಕವಿತೆ, ಕವನ, ಕಾವ್ಯ, ಪದ್ಯ, ಕಥನ ಕಾವ್ಯ, ನೀಳ್ಗಾವ್ಯ ಹೀಗೆ ಗುರುತಿಸುವ ವಿವಿಧ ರೂಪದ ಬಾಹ್ಯ ಮತ್ತು ಆಂತರಿಕ ಭಾವದ ರಚನೆ ಒಂದೇ ತರಹದ್ದೆನಿಸುವ ಕನ್ನಡದ ಸಾಂಸ್ಕೃತಿಕ ಆಸ್ಮಿತೆ ಹೆಚ್ವಿಸಿದ ಸಾಹಿತ್ಯ ಪ್ರಕಾರವಿದು. ಕಾಲಗಳುರುತ್ತ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾಯಿತು. ಜನರ ಭಾವನೆಗಳ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯ್ತು. ಧಾರ್ಮಿಕವಾದ ಜಟಿಲ ಸಮಸ್ಯೆಗಳೂ ಸೃಷ್ಟಿಯಾದವು. ಅಸಮಾನ ಸಾಮಾಜಿಕ ವ್ಯವಸ್ಥೆ ವಿರುದ್ಧ ಸಾಹಿತ್ಯದ ಮನಸ್ಸುಗಳು ಕವಿತೆಗಳನ್ನು ಬರೆದು ರಾಗ ಕಟ್ಟಿ ಕೆಚ್ಚೆದೆಯಲ್ಲಿ ದನಿಯೇರಿಸಿ ಹಾಡಿ ಜನ ಸಮೂಹವನ್ನು ಎಚ್ಚರಿಸಿದವು. … Read more

“ಧಣೇರ ಬಾವಿ”ಪುಸ್ತಕದ ಕುರಿತ ನನ್ನ ಸಣ್ಣ ವಿಮಶೆ೯: ಸುರೇಶ್ ಮಲ್ಲಿಗೆ ಮನೆ

ಈ ಕಥೆಗಳೇ ಹಾಗೆ ಅನಿಸುತ್ತೆ, ನಮ್ಮ ಮುಖದಲ್ಲಿನ ನವರಸಗಳನ್ನು ಹೊರಹಾಕಲು ಕಥೆಗಾರರು ಕಾಯುತ್ತಿರುತ್ತಾರೆ..!!? ನಮ್ಮ ತುಟಿಯ ಪಿಸು ನಗುವಿನಿಂದ ಪ್ರಾರಂಭವಾದ ಕೆಲ ಕಥೆಗಳು ಕೊನೆಗೆ ಕೊನೆಗೊಳ್ಳುವುದು ದುರಂತ ಕಣ್ಣೀರಿನ ಹನಿಗಳಿಂದ..!! ಕೆಲವು ಮೂಕವಿಸ್ಮಿತನನ್ನಾಗಿ ಮಾಡುತ್ತವೆ, ಕೆಲವು ಒಂದು ಬಗೆಯ ಮ್ಲಾನತೆಯ ಭಾವನೆಯನ್ನು ಮೂಡಿಸುತ್ತದೆ, ಕೆಲವಂತೂ ನಮ್ಮದೇ ಕಥೆಯೇ ಎನ್ನಿಸುವಂತಿರುತ್ತವೆ, ಕೆಲವು ನಮ್ಮ ಗತಕಾಲವನ್ನು ನೆನಪಿಸುವಂತಿರುತ್ತವೆ. ಹೀಗೆ ನಾನಾ ಬಗೆಯವು. ಕಥೆಗಳೇ ದಾರಿತಪ್ಪಿರುವ ಕಾಲದಲ್ಲಿ ಕಥೆಗಾರ ರಾಗುವುದು ಕಥೆಗಳಲ್ಲಿ ಮಾತ್ರ ನೋಡುವಂತಹ ಈ ಕಾಲದಲ್ಲಿ ಕಥೆಗಳು ಕಥೆಗಳಾಗಿ ಮಾತ್ರ … Read more

ರಾಜು ಸನದಿ ಅವರ “ದುಗುಡದ ಕುಂಡ”: ಅಶ್ಫಾಕ್ ಪೀರಜಾದೆ.

ಯುವ ಕವಿ “ರಾಜು ಸನದಿ” ತಮ್ಮ ಚೊಚ್ಚಿಲ ಕವಿತಾ ಗುಚ್ಚ “ದುಗುಡದ ಕುಂಡ” ತುಂಬ ಪ್ರೀತಿಯಿಂದ ಕಳಿಸಿಕೊಟ್ಟು ದಿನಗಳೇ ಕಳೆದವು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದುಕೊಂಡು ಪ್ರಕಟವಾಗಿರುವ ಈ ಪುಸ್ತಕವನ್ನು ಕೆಲಸದ ಒತ್ತಡದಲ್ಲಿ ಓದಿ ಪ್ರತಿಕ್ರಿಯಿಸಲು ಆಗಿರಲಿಲ್ಲ. ಕೆಲಸದ ನಡುವೆಯೇ ಒಂದಿಷ್ಟು ಬಿಡುವು ಮಾಡಿಕೊಂಡು ದುಗುಡದ ಕುಂಡ ಕೈಗೆತ್ತಿಕೊಂಡು ಈಗಷ್ಟೇ ಕೆಂಡದ ಕಾವು ಅನುಭವಿಸಿದ್ದೇನೆ. ಇಲ್ಲಿ ದಾಖಲಾದ ಪ್ರತಿ ಪದವೂ ಕಿಡಿಗಳಾಗಿ, ಪದಗಳು ಕೆಂಡದುಂಡೆಗಳಾಗಿ, ಮತ್ತು ಕವಿತೆಗಳು ಜ್ವಾಲಾಮುಖಿಯಾಗಿ ಹೊರಹೊಮ್ಮಿವೆ ಎಂದು ಹೇಳಬಹುದು. ಉತ್ತಮವಾದ … Read more

ಪ್ರಭಾವತಿ ದೇಸಾಯಿಯವರ ಗಜಲ್‌ ಸಂಕಲನ “ಭಾವಗಂಧಿ”: ಶಿವಕುಮಾರ ಮೋ ಕರನಂದಿ

ಕೃತಿ: ಭಾವಗಂಧಿ (ಗಜಲ್ ಸಂಕಲನ)ಲೇಖಕಿ: ಶ್ರೀಮತಿ ಪ್ರಭಾವತಿ ದೇಸಾಯಿಪ್ರಕಾಶನ: ಗಗನ ಪ್ರಕಾಶನ ವಿಜಯಪುರ ಸುಕೋಮಲವಾದ ಭಾವನೆಗಳ ಅಭಿವ್ಯಕ್ತಿಯೇ ‘ಗಜಲ್’ ಅರಬ್ಬಿ ಭಾಷೆಯ ಕಾವ್ಯರೂಪವಾದ ಇದು ಉರ್ದುವಿನಲ್ಲಿ ಅತ್ಯಂತ ಜನಪ್ರಿಯವಾದ ಕಾವ್ಯಪ್ರಕಾರವಿದು. ಉರ್ದುವಿನಲ್ಲಿ ಗಜಲ್ ಗೆ ಕಾವ್ಯರಾಣಿ ಎಂದು ಕರೆಯುತ್ತಾರೆ. ಕನ್ನಡ ಮಣ್ಣಿನೊಂದಿಗೆ ಬೆರೆತು ಸಮೃದ್ಧವಾಗಿ ಬೆಳೆಯುತ್ತಿರುವ ಗಜಲ್ ಕಾವ್ಯ ಪ್ರಕಾರವೂ ಹೈದ್ರಾಬಾದ್ ಕರ್ನಾಟಕದ ಶಾಂತರಸರಿಂದ ಕನ್ನಡಕ್ಕೆ ಪರಿಚಿತವಾಯಿತು, ಶಾಂತರರಸರು, ಎಚ್ ಎಸ್ ಮುಕ್ತಾಯಕ್ಕ, ಬಸವರಾಜ ಸಬರದ, ದಸ್ತಗಿರಸಾಬ್ ದಿನ್ನಿ, ಕಾಶಿನಾಥ ಅಂಬಲಿಗೆ, ಅಲ್ಲಾಗಿರಿರಾಜ್, ಗಿರೀಶ್ ಜಕಾಪುರೆ, ದೊಡ್ಡಕಲ್ಲಹಳ್ಳಿ … Read more

“ಬಯಲುಡುಗೆಯ ಬೊಂತಾ – ಕತ್ತಲ ಗರ್ಭದ ಬೇಗೆಯಲಿ ಬೇಯುವ ಸಾವಿರದ ಒಂದು ಚಿತ್ರಕಾವ್ಯ”: ಎಂ.ಜವರಾಜ್

“ಸಂಸಾರವೆಂಬುದೊಂದು ಗಾಳಿಯ ಸೊಡರು,ಸಿರಿಯೆಂಬುದೊಂದು ಸಂತೆಯ ಮಂದಿ, ಕಂಡಯ್ಯ!ಇದ ನೆಚ್ಚಿ ಕೆಡಬೇಡ ಸಿರಿಯೆಂಬುದ!ಮರೆಯದೆ ಪೂಜಿಸುಆಚಾರವೇ ಸ್ವರ್ಗ, ಅನಾಚಾರವೇ ನರಕ,ನೀವೇ ಪ್ರಮಾಣು ಕೂಡಲಸಂಗಮದೇವ”(-ಬಸವಣ್ಣ) ಲೇಖಕ, ತಾನು ಅನುಭಿಸಿದ ನೋವು, ಯಾತನೆ, ತುಮುಲ, ರಂಜನೆ, ಕಾಮ, ಭೋಗ, ಶೀಲ, ಶೋಷಣೆ, ಚಳುವಳಿ, ಹೋರಾಟ, ಧರ್ಮ, ದೇವರು, ಜಾತಿ, ಮತ, ಪಂಥ, ಕುರಿತಾದ ತನ್ನೊಳಗಿನ ಅನುಭವವನ್ನು ಹೊಸದೇ ಎನುವ ಸೃಜನಶೀಲ ಕತೆ ಕವಿತೆ ಕಾದಂಬರಿ ಮತ್ತು ಮಹಾಕಾವ್ಯವಾಗಿ ಚಿತ್ರಿಸಿದ್ದಿದೆ. ಇದರ ಆಚೆಗು ಲೇಖಕನೊಬ್ಬನ ಮೂಲಕ ತಾನು ಹುಟ್ಟುವ ಮುನ್ನಿನ – ಈಗಾಗಲೇ ನಡೆದು … Read more

ಹಾರುವ ಹಂಸೆಯ ಕಾವ್ಯಗುಣ: ವಿನಯಚಂದ್ರ

“ಹಾರುವ ಹಂಸೆ” ಇತ್ತೀಚಿನ ದಿನಗಳಲ್ಲಿ ನಾನು ಓದಿ ಮೆಚ್ಚಿದ, ಇತ್ತೀಚಿನ ತಲೆಮಾರಿನವರು ರಚಿಸಿದ ಕೃತಿಗಳಲ್ಲಿ ಬಹಳ ಉತ್ತಮವಾದ ಕೃತಿ ಎಂದು ನಿಸ್ಸಂಶಯವಾಗಿ ಹೇಳಿಬಿಡಬಹುದು. ಇದು ಚಾಮರಾಜನಗರದ ಆರ್ ದಿಲೀಪ್ ಕುಮಾರ್ ರವರ ಕವಿತೆಗಳ ಸಂಕಲನ. ಗಂಭೀರವಾದ ಸಾಹಿತ್ಯ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಯನದ ಆಧಾರದ ಮೇಲೆ, ಉತ್ತಮ ಕಾವ್ಯಗಳಲ್ಲಿ ಇರಬಹುದಾದ ಲಕ್ಷಣಗಳನ್ನು ಗುರುತು ಹಾಕಿಕೊಂಡು, ಅದಕ್ಕೆ ನಿಷ್ಠನಾಗಿ ಕಾವ್ಯ ರಚನೆ ಮಾಡಿದರೆ ಕವಿತೆಗಳು ಹೇಗೆ ಮೂಡಬಹುದೋ, ಕ್ವಚಿತ್ತಾಗಿ ಹಾಗೆಯೇ ಮೂಡಿವೆ ದಿಲೀಪರ ಕವಿತೆಗಳು. ಕಾವ್ಯದಲ್ಲಿ ಮುಖ್ಯವಾಗಿ ವಸ್ತು ವಿಷಯ, … Read more

ಚಿನ್ನಮ್ಮನ ಲಗ್ನದ ಪರಿಚಯ: ಡಾ. ಹೆಚ್ಚೆನ್ ಮಂಜುರಾಜ್

ಪುಸ್ತಕದ ಹೆಸರು: ಚಿನ್ನಮ್ಮನ ಲಗ್ನ-1893(ಮಲೆಗಳಲ್ಲಿ ಮದುಮಗಳು ಕುರಿತ ಟಿಪ್ಪಣಿಗಳು)ಲೇಖಕರು: ಕೆ ಸತ್ಯನಾರಾಯಣ, ಪ್ರಕಾಶಕರು: ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರುಮೊದಲ ಮುದ್ರಣ: 2020, ₹ 170, ಡೆಮಿ 1/8, ಪುಟಗಳು: 176 ಕೆ ಸತ್ಯನಾರಾಯಣ ಅವರು ನಮ್ಮ ಕನ್ನಡದ ಹೆಮ್ಮೆಯ, ಮಹತ್ವದ ಹಾಗೂ ಸುಸಂವೇದನಾಶೀಲ, ಸೃಜನಶೀಲ ಬರೆಹಗಾರರು. ಅವರ ಕತೆಗಳು ಮತ್ತು ಪ್ರಬಂಧಗಳು ನಮ್ಮ ಭಾಷೆ-ಸಮಾಜ ಮತ್ತು ಸಂಸ್ಕೃತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸುತ್ತಾ ಅದರ ಪರಿಧಿಯನ್ನು ವಿಸ್ತರಿಸಿವೆ, ಪುನಾರಚಿಸಿವೆ ಮತ್ತು ಆಪ್ಯಾಯಮಾನವಾಗಿ ನಿರ್ವಚಿಸಿವೆ. ಅವರ ಕತೆಗಳು ಮತ್ತು ಪ್ರಬಂಧಗಳ ಶೈಲಿ … Read more

ಊದ್ಗಳಿ ಕವನ ಸಂಕಲ: ನಂದಾದೀಪ, ಮಂಡ್ಯ

ಉದ್ಗಳಿ ಕವನ ಸಂಕಲನ ಪುಸ್ತಕದ ಹೆಸರೇ ವಿಭಿನ್ನ ಎನಿಸಿತು.. ಆ ಹೆಸರೇ ಕೇಳಿಲ್ಲ ಹಾಗಂದರೆ ಅರ್ಥ ಏನು ಎನ್ನುವ ಕುತೂಹಲದಲ್ಲೆ ಪುಸ್ತಕವನ್ನು ಕೈಗೆತ್ತಿಕೊಂಡಾಗ ಮೊದಲು ಪುಸ್ತಕದ ಮುಖಪುಟದಲ್ಲಿದ್ದ ಅಗ್ಗಿಷ್ಟಿಕೆ, ಕೊಳವೆ ನೋಡಿ ಇದಕ್ಕೂ ಹೆಸರಿಗೂ ಏನು ಸಂಬಂಧ ಎಂದು ಮುನ್ನುಡಿ ಓದಿದಾಗಲೇ ತಿಳಿದಿದ್ದು ‘ಊದ್ಗಳಿ’ ಎಂದರೆ ಒಲೆಯ ಊದುವ ಪುಟ್ಟದಾದ ಒಂದು ಕೊಳವೆ ಎಂದು..(ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ ಹಾಗಾಗಿ ಹೊಸ ಪದ ಎನಿಸಿದ್ದು) ನಿಜಕ್ಕೂ ಒಬ್ಬ ಹೆಣ್ಣು ಮಗಳು ಪುಟ್ಟ ಗ್ರಾಮದಲ್ಲಿ ಹುಟ್ಟಿ ಶಿಕ್ಷಣ … Read more

ತಡವಾಗಿ ಬಿದ್ದ ಮಳೆ: ನಂದಾದೀಪ, ಮಂಡ್ಯ

ಪುಸ್ತಕ ಯಾವುದೇ ಇರಲಿ ಮೊದಲು ಪುಸ್ತಕದ ಶೀರ್ಷಿಕೆ ಓದುಗರನ್ನ ಸೆಳೆಯಬೇಕು.. ಅಲ್ಲಿಗೆ ಆ ಪುಸ್ತಕ ಅರ್ಧ ಗೆದ್ದಂತೆಯೇ ಸರಿ..! ಆ ವಿಷಯದಲ್ಲಿ ಲೇಖಕರಾದ ಸಂತೋಷಕುಮಾರ್ ಮೆಹಂದಳೆಯವರು ಎಂದಿಗೂ ರಾಜಿಯಾದವರಲ್ಲ ಎನಿಸುತ್ತದೆ..!ಜೊತೆಗೆ ಅವರ ಪುಸ್ತಕ ಓದುಗನನ್ನು ತನ್ನೊಳಗೆ ಲೀನವಾಗಿಸಿಕೊಳ್ಳುತ್ತದೆ ಎಂಬುದಕ್ಕೆ ನಾ ಹಿಂದೆ ಓದಿದ್ದ ಅಘೋರಿಗಳ ಲೋಕದ ಪುಸ್ತಕದ ಬಗ್ಗೆ ಬರೆದಾಗಲೇ ಹೇಳಿದ್ದೆ ಎಂದರೆ ತಪ್ಪಾಗಲಾರದು. ತಡವಾಗಿ ಬಿದ್ದ ಮಳೆ ಮೊದಲು ಆಕರ್ಷಿಸಿದ್ದು ಶೀರ್ಷಿಕೆಯೇ.. ಅದೇ ಕುತೂಹಲದಿಂದ ಓದಲು ಶುರು ಮಾಡಿದ ನಾನು ಒಂದೇ ಗುಕ್ಕಿಗೆ ಓದಿ ಮುಗಿಸಿದೆ.. … Read more

ಗಜಲ್ ಹಾದಿಯಲ್ಲಿ: ‘ನೇರಿಶಾ’ಳ ಹೊಂಬೆಳಕು: ಯಲ್ಲಪ್ಪ ಎಮ್ ಮರ್ಚೇಡ್

ಪುಸ್ತಕ : ‘ನೇರಿಶಾ’ (ಗಜಲ್ ಸಂಕಲನ)ಗಜಲ್ ಕವಿ: ನಂರುಶಿ ಕಡೂರುಬೆಲೆ : 180/-ಸಂಪರ್ಕಿಸಿ: 8073935296, 8277889529 ಗಜಲ್ ಸಂಕ್ಷಿಪ್ತ ಪರಿಚಯ : ಗಜಲ್‌ ಎಂದರೆ ಪ್ರೀತಿ–ಪ್ರೇಮ ಕುರಿತಾಗಿಯೇ ಬರೆಯಲಾಗಿರುವ ಮತ್ತು ಬರೆಯಬೇಕಾಗಿರುವ ಕಾವ್ಯ ಪ್ರಕಾರ ಎನ್ನುವುದು ಸರಿಯಲ್ಲ. ಸಾಂಪ್ರದಾಯಿಕ ವಸ್ತು ಮತ್ತು ವ್ಯಾಪ್ತಿ ಮೀರಿ ಗಜಲ್‌ ತುಂಬಾ ದೂರ ಕ್ರಮಿಸಿದೆ. ಇದರ ಗೇಯತೆ, ಲಯ, ಕೋಮಲ ವಿನ್ಯಾಸದಲ್ಲಿ ವರ್ತಮಾನಕ್ಕೆ ‘ಮುಖಾಮುಖಿ’ ಆಗುವುದಿಲ್ಲ ಎನ್ನುವ ಮತ್ತೊಂದು ಆಕ್ಷೇಪವಿದೆ. ಆದರೆ ಗಜಲ್‌ಗಳಲ್ಲಿ ಬಂಡಾಯ ಮತ್ತು ಸಾಮಾಜಿಕತೆಯ ಧ್ವನಿಯೂ ಇದೆ. ನವ್ಯಕಾವ್ಯದ … Read more

‘ವಿಚಿತ್ರ ವಿಕ್ಷಿಪ್ತ ನಿಕೃಷ್ಠ ಬಿಸಿಯುಸಿರ ಬೇಗೆಯಲಿ ತಣ್ಣನೆ ರೋಧಿಸುವ ಕೆಂಗುಲಾಬಿ’: ಎಂ. ಜವರಾಜ್

ಹನುಮಂತ ಹಾಲಗೇರಿ ಅವರ “ಕೆಂಗುಲಾಬಿ” ಯ ವಯಸ್ಸು ಹತ್ತತ್ತಿರ ದಶಕಗಳೇ ಆಗಿವೆ. ಇದು ಪುಸ್ತಕ ರೂಪದಲ್ಲಿ ಇದುವರೆಗೆ ಐದು ಆವೃತ್ತಿ ಕಂಡಿದೆ. ಈ ‘ಕೆಂಗುಲಾಬಿ’ ಪುಸ್ತಕ ರೂಪ ತಾಳುವ ಮೊದಲು ಆನ್ ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡು ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ಈ ಕೃತಿಯ ಕುರಿತಾಗಿ ಪತ್ರಿಕೆಗಳಲ್ಲಿ ಒಂದೆರಡು ಬರಹ ಓದಿದ್ದು ಬಿಟ್ಟರೆ ನಾನು ಈ ಕೃತಿ ಓದಿರಲಿಲ್ಲ. ನನ್ನ ಕಿರಿಯ ಮಿತ್ರರೊಬ್ಬರು ಸಾಕಷ್ಟು ಪುಸ್ತಕಗಳನ್ನು ಅಂಚೆ ಮೂಲಕ ತರಿಸಿಕೊಳ್ಳುತ್ತಾರೆ. ಅವರಿಗೆ ಈ ಎಲ್ಲ ಪುಸ್ತಕ ಓದಲು ಸಮಯಾಭಾವ … Read more

ಅಜ್ಜನ ಹಲ್ಲು ಸೆಟ್ಟು ಮಕ್ಕಳಿಗಾಗಿ ಕವಿತೆಗಳು: ಸೂಗೂರೇಶ ಹಿರೇಮಠ

ಕವಿಗಳು: ಗುಂಡುರಾವ್ ದೇಸಾಯಿ ಪ್ರಕಾಶಕರು: ಜಿ ಜಿ ದೇಸಾಯಿ ಮಸ್ಕಿ ಅಜ್ಜನ ಹಲ್ಲು ಸೆಟ್ಟು ಮಕ್ಕಳ‌ಸಾಹಿತ್ಯದ ಮೂಲ ಪುರುಷರೆಂದರೆ ಅಜ್ಜ ಅಜ್ಜಿ ಮೊಬೈಲ್ ಟೀವಿಗಳಿಲ್ಲ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯರು ಕತೆ ಹೇಳಿತ್ತಾ ಮಕ್ಕಳಿಗೆ ಮೌಲ್ಯಗಳನ್ನೂ ಹಾಗೂ ಮನರಂಜನೆಯನ್ನು ನೀಡುತ್ತಾ ಶಾಲೆಗಳು ಕಲಿಸದಂತಹ ಸೃಜನಾತ್ಮಕತೆಯನ್ನು ಅಜ್ಜ ಅಜ್ಜಿಯರು ಹೇಳಿಕೊಡುತ್ತಿದ್ದರು. ಹೀಗಿರುವಾಗ ಮಕ್ಕಳಿಗೆ ಅಜ್ಜನೆಂದರೆ ಹಿಗ್ಗೊಹಿಗ್ಗು ಅಂತಹ ಹಿಗ್ಗು ಕೊಡುವಂತಹ ಕೃತಿ ಅಜ್ಜನ ಹಲ್ಲು ಸೆಟ್ಟು. ಸ್ವತಃ ಶಿಕ್ಷಕರಾಗಿರುವ ಹಾಸ್ಯ ಪ್ರಬಂಧಕಾರರಾಗಿರುವ ಶ್ರೀಯುತ ಗುಂಡುರಾವ್ ದೇಸಾಯಿ ಯವರು ಮಕ್ಕಳಿಗಾಗಿ … Read more

ಪದ್ಯಗಳೂ ಹೂನಗೆ ಬೀರಲಿ: ಹೆಚ್. ಷೌಕತ್ ಆಲಿ

ಬೆಣ್ಣೆನಗರಿಯ ಸರಿತ ಕೆ.ಗುಬ್ಬಿ ಹೊಸಪೇಟೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಂತೆ ಸಾಹಿತ್ಯಸಕ್ತಿ ಬೆಳೆಸಿಕೊಂಡ ಕವಯತ್ರಿಯು ಹೌದು ಅನೇಕ ವಿಷಯಗಳು ವಿಚಾರಗಳು, ಘಟನೆಗಳು ಕಣ್ಣಿನ ಮುಂದೆ ಘಟಿಸಿದಾಗ ಆ ಚಿತ್ರಗಳನ್ನು ಮನದಾಳದಲ್ಲಿ ರೂಪನೀಡಿ ಸುಂದರ ಕವಿತೆಗಳಿಗೆ ತಮ್ಮ ಲೇಖನಿಯ ಮುಖಾಂತರ ಬರೆಯುವ ಹವ್ಯಾಸಿ ಕನ್ನಡತಿ. ಬದುಕು ಸುಲಭದ ವಿಚಾರವಲ್ಲ ಇಲ್ಲಿ ಅನೇಕ ಹಂತಗಳಿವೆ, ಮಜಲುಗಳಿವೆ. ಸಂತಸ ಸಂಭ್ರಮ ನೋವು ಹಿಂಸೆ ಎಲ್ಲವನ್ನು ಮೆಟ್ಟಿನಿಲ್ಲಲ್ಲಿ ಸಮಾಜದ ವಕ್ರತೆಯಲ್ಲಿಯು ಗಮನಿಸಬೇಕಾದ ಜವಾಬ್ದಾರಿಯು ತಮ್ಮ ಕವನಗಳ ಮೂಲಕ ಓದುಗರ ಮುಂದೆ ಪ್ರಸ್ತುತ ಪಡೆಸುವಲ್ಲಿ ಸಫಲತೆಯನ್ನು … Read more

ಬಸು ಬೇವಿನಗಿಡದ ಅವರ “ನೆರಳಿಲ್ಲದ ಮರ”: ಅಶ್ಫಾಕ್ ಪೀರಜಾದೆ.

ನಾಡು ಕಂಡ ಪ್ರಮುಖ ಕಥೆಗಾರರಲ್ಲಿ ಬೇವಿನಗಿಡದ ಕೂಡ ಒಬ್ಬರು. ಅದರಲ್ಲೆ ವಿಶೇಷವಾಗಿ ಉತ್ತರ ಕರ್ನಾಟಕದ ಅತ್ಯಂತ ಪ್ರಖ್ಯಾತ ಕಥೆಗಾರರು ಬಸು ಅವರು. ತಾಯವ್ವ, ಬಾಳೆಂಬ ಕಂಬ, ಹೊಡಿ ಚಕ್ಕಡಿ, ಹಾಗು ಉಗುಳು ಬುಟ್ಟಿ ಹೀಗೆ ಒಟ್ಟು ಐದು ಕಥಾಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಬಸುಬೇವಿನ ಗಿಡದ ಅವರು ಇತ್ತೀಚೆಗೆ ಆರನೇಯ ಕಥಾ ಸಂಕಲನ “ನೆರಳಿಲ್ಲದ ಮರ” ಕತಾಪ್ರಿಯರ ಕೈಗಿಟ್ಟಿದ್ದಾರೆ. ಪ್ರತಿಷ್ಠಿತ ಪಲ್ಲವ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿ ತನ್ನ ಬಾಹ್ಯ ಸೌಂದರ್ಯದಿಂದ ಮನ ಸೆಳೆಯುವಂತೆ ಒಳ … Read more

ಸಾವನ್ ಕೆ ಸಿಂಧನೂರು ರವರ ಮಗರಿಬ್‌ ಗಜಲ್‌ ಸಂಕಲನ: ಶಿವಕುಮಾರ ಮೋ ಕರನಂದಿ

ಕೃತಿ: ಮಗರಿಬ್ ಗಜಲ್ ಸಂಕಲನ ಲೇಖಕರು: ಸಾವನ್ ಕೆ ಸಿಂಧನೂರು ಪ್ರಕಾಶನ: ಅಮ್ಮಿ ಪ್ರಕಾಶನ ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದು. ಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ. ಗಜಲ್ ರಾಣಿಯ ಹುಚ್ಚು … Read more

ಭಾವೈಕ್ಯತೆಯೆಂಬ ಬಳ್ಳಿಯ ಹೂವುಗಳು: ಹೆಚ್. ಷೌಕತ್ ಆಲಿ

ಯುವ ಕವಿ ಮೆಹಬೂಬ ಪಾಷ ಎ.ಮಕಾನದಾರ ಕೊಪ್ಪಳದವರು.ಸಮಾಜಶಾಸ್ತ್ರದಲ್ಲಿ ಎಂ.ಎ ಮತ್ತು ಬಿ.ಎಡ್ ಶಿಕ್ಷಣದ ಬಳಿಕ ಅತಿಥಿ ಉಪನ್ಯಸಕರಾಗಿ ಸೇವಾ ಕಾರ್ಯ ಆರಂಭ. ಕವಿಯ ಬಗ್ಗೆ ನಾನು ಒಂದಷ್ಟು ವಿಚಾರ ಹೇಳಬೇಕನ್ನಿಸುತ್ತೆ, ಬದುಕಿಗೆ ತುಂಬ ಹತ್ತಿರದನೆಂಟು ಮೆಹಬೂಬ ಪಾಷರವರ ಚಿಂತನೆಗಳು ಆಳಕ್ಕೆ ಹೋದರೂ ಅಲ್ಲಿಯು ಒಂದು ಚಿಗುರು ಕಾಣುವಂಥದ್ದು. ಜಾತಿ, ನೀತಿ, ರೀತಿ, ರೀವಾಜುಗಳಿಂದ ಆಚೆಗೆ ಇವರ ಹೃದಯ ಚಿಂತಿಸುತ್ತದೆ. ಬದುಕು ಅನೇಕ ಘಟ್ಟಗಳಲ್ಲಿ ಅನೇಕ ಅನುಭವ ನೀಡಿ ಅದರಿಂದ ಕಲಿತ ಪಾಠವೇ ಜೀವನದ ಸಾರ್ಥಕದ ಮುನ್ನೋಟವಾಗಿರುತ್ತೆ ಇಂತಹ … Read more