ಆತ್ಮಾನುಬಂಧದ ಸಖಿಯೊಡನೆ ಒಂದು ಸಹೃದಯ ಸಂವಾದ: ವರುಣ್ ರಾಜ್ ಜಿ.

ಕವಿ ಶ್ರೀ ರಾಘವೇಂದ್ರ ಡಿ. ತಳವಾರರ “ಆತ್ಮಾನುಬಂಧದ ಸಖಿ” ಕೃತಿಯ ಕುರಿತು ಇತ್ತೀಚೆಗೆ ತನುಶ್ರೀ ಪ್ರಕಾಶನದಿಂದ ಪ್ರಕಟಣೆಯಾಗಿದ್ದು ಅತ್ಯಲ್ಪ ಕಾಲದಲ್ಲಿಯೇ ಹಲವು ಸಹೃದಯರ ಮನಸ್ಸನ್ನು ಗೆದ್ದಿದೆ. ಈ ಕೃತಿಯು ರೂಪ – ಸ್ವರೂಪ ಮತ್ತು ವಿಷಯ ವ್ಯಾಪ್ತಿಯ ದೃಷ್ಠಿಯಿಂದ ಒಂದು ವಿಶಿಷ್ಟವಾದ ಕೃತಿ ಎನಿಸಿದ್ದು, ಓದುಗರನ್ನು ಎಲ್ಲಿಯೂ ನಿರಾಸೆಗೊಳಿಸದ ಗುಣ ಈ ಕೃತಿಯಲ್ಲಿದೆ. “ಆತ್ಮಾನುಬಂಧದ ಸಖಿ” ಕೃತಿಯ ಕವನದ ಸಾಲುಗಳು ಪದ್ಯದಂತೆ ಓದುವವರಿಂದ ಪದ್ಯವಾಗಿಯೂ, ಗದ್ಯದಂತೆ ಓದುವವರಿಂದ ಗದ್ಯವಾಗಿಯೂ ಓದಿಸಿಕೊಳ್ಳುತ್ತವೆ. ಪದ್ಯದಂತೆ ಹಾಡಿದರೂ ಗದ್ಯದಂತೆ ಓದಿದರೂ ಅರ್ಥ … Read more

ಯವ್ವಾ ಯವ್ವಾ “ಭೂಮಿಯ ಋಣ” ಚಂದ ಕಣವ್ವಾ: -ಡಾ. ನಟರಾಜು ಎಸ್.‌ ಎಂ.

ಒಂದು ಪೇಜಿನ ಕತೆ, ಕವಿತೆ ಕಟ್ಟುವುದು ಸುಲಭ. ಹತ್ತಾರು ಪುಟಗಳ ಕಥೆ, ನೂರಾರು ಪುಟಗಳ ಕಾದಂಬರಿ ಬರೆಯುವುದು ಕಷ್ಟ. ಆ ಕಷ್ಟಕ್ಕೆ ಯುವ ಲೇಖಕರು ತೆರೆದುಕೊಂಡಂತೆ ಯುವ ಲೇಖಕಿಯರು ತೆರೆದುಕೊಂಡಿದ್ದು ಬಹಳ ವಿರಳ. ಆ ಕಾರಣಕ್ಕೆ ಯುವ ಲೇಖಕಿಯರ ಕವಿತೆಗಳು ನಮಗೆ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷಾಂಕಗಳಲ್ಲಿ ಹೆಚ್ಚಾಗಿ ಓದಲು ಸಿಗುತ್ತವೆ. ಲೇಖಕಿಯರು ಕಥಾಲೋಕಕ್ಕೆ ತೆರೆದುಕೊಳ್ಳಲು ಒಂದಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎನಿಸುತ್ತದೆ. ಬದುಕಿನ ಅನುಭವಗಳನ್ನು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕೆಲಸ ಅಷ್ಟು ಸುಲಭವಲ್ಲ. ಆ ಸುಲಭವಲ್ಲದ ಕೆಲಸವನ್ನು ಒಂದು … Read more

ಪರಿಮಳದ ಪಯಣದಲಿ ಜೀವ ಜೀವನ ಧನ್ಯ: ಡಾ. ಹೆಚ್ ಎನ್ ಮಂಜುರಾಜ್

ಪುಸ್ತಕದ ಹೆಸರು : ಪರಿಮಳಗಳ ಮಾಯೆಲಲಿತ ಪ್ರಬಂಧ ಸಂಕಲನಲೇಖಕಿ : ಶ್ರೀಮತಿ ಆರ್ ಸಮತಾಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗಮೊದಲ ಮುದ್ರಣ : 2022, ಬೆಲೆ: ರೂ. 140 ಶ್ರೀಮತಿ ಸಮತಾ ಅವರ ಈ ಲಲಿತ ಪ್ರಬಂಧಗಳ ಪುಸ್ತಕವು ಓದಲು ಸಿಕ್ಕಿದ್ದು ನನಗೆ ಆಕಸ್ಮಿಕವಾಗಿ. ಸಮತಾ ಅವರು ನನ್ನ ತಂಗಿಯ ಸಹಪಾಠಿಯಾಗಿದ್ದವರು. ನಿನ್ನೆ ನನ್ನ ಸೋದರಿ ಲಕ್ಷ್ಮಿ ಉರುಫ್ ಪಮ್ಮಿಯ ಮನೆಗೆ ಹೋದಾಗ ಅದೂ ಇದೂ ಮಾತಾಡುವಾಗ ಲೇಖಕಿಯ ವಿಚಾರ ಬಂತು. ಈಕೆ ನನ್ನ ತಂಗಿಯ ಸ್ನೇಹಿತೆ. ನನ್ನ … Read more

ಕುಟುಂಬವೆಂದರೆ ಒಬ್ಬ ವ್ಯಕ್ತಿಯಲ್ಲ, ಅವನೊಡನೆ ನಿಲ್ಲುವ ಪ್ರಪಂಚವೇ ಕುಟುಂಬ ಎನ್ನುವ “ಅಜ್ಜನ ಕಮೋಡು”: ಡಾ. ನಟರಾಜು ಎಸ್.‌ ಎಂ.

ಈ ತಿಂಗಳ ಮೊದಲ ವಾರದಲ್ಲಿ ಹಾಸನಕ್ಕೆ ಹೋಗಿದ್ದೆ. ನಮ್ಮ ನಡುವಿನ ಅಧ್ಬುತವಾದ ಅನುವಾದಕರಾದ ಜೆವಿ ಕಾರ್ಲೊ ಸರ್‌, ಮೈಸೂರಿನ ಕಥೆಗಾರ ಗೆಳೆಯ ಡಾ. ಗವಿಸ್ವಾಮಿ ಸಿಕ್ಕಿದ್ದರು. ಅವರ ಜೊತೆ ಮಾತನಾಡಿ ಸಂಜೆ ಹಿರಿಯ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜು ರವರನ್ನು ಭೇಟಿಯಾದೆ. ಹಾಸನದ ಬಳಿ ಅತ್ತಿಹಳ್ಳಿಯ ತೋಟದ ಮನೆಯಲ್ಲಿ ವಾಸವಿರುವ ಹಿರಿಯರಾದ ನಾಗರಾಜುರವರನ್ನು ಭೇಟಿಯಾದ ದಿನ ಹೊರಗೆ ಸಣ್ಣನೆ ತುಂತುರು ಮನೆ ಹನಿಯುತ್ತಿತ್ತು. ಒಂದೆರಡು ಗಂಟೆ ಅವರೊಡನೆ ಹರಟೆ ಹೊಡೆದು ರಾತ್ರಿ ಊಟ ಮಾಡಿ ವಾಪಸ್ಸು ಬರುವಾಗ ನನ್ನ … Read more

“ಸಂಪ್ರೀತಿ ಲೋಕದಲ್ಲೊಂದು ರೋಚಕ ಪಯಣ”: ಅನುಸೂಯ ಯತೀಶ್

ಕಾವ್ಯವೆಂದರೆ ಕೇವಲ ಒಡಿಬಡಿ ಕೌರ್ಯಗಳ ಅನಾವರಣವಲ್ಲ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಬರಹಗಳ ಸೃಷ್ಟಿಯದು. ನೋಂದವರ ಪಾಲಿಗೆ ಅಳುವ ಮಗುವನ್ನು ಲಾಲಿಸಿ ಪಾಲಿಸಿ ಸಂತೈಸುವ ಹೆತ್ತವ್ವನ ಮಡಿಲು‌, ಅಂತಕರಣದ ತೊಟ್ಟಿಲು, ಭರವಸೆಯ ಬೆಳದಿಂಗಳು, ಅನುಭವಗಳ ಹಾರ, ಪ್ರೀತಿ ಪ್ರೇಮದ ಸಮ್ಮಿಲನ. ಒಟ್ಟಾರೆ ಜೀವ ಕಾರುಣ್ಯವೇ ಕಾವ್ಯವಾಗಿದೆ. ಜೀವನ ಎಂಬುದು ಸಮತಟ್ಟಾದ ನುಣ್ಣನೆಯ ದಾರಿಯಂತಲ್ಲ. ಹುಬ್ಬು ತಗ್ಗುಗಳನ್ನು, ಅಂಕುಡೊಂಕುಗಳನ್ನು ಒಳಗೊಂಡ ದುರ್ಗಮ ಹಾದಿಯದು. ನಮಗರಿವಿಲ್ಲದಂತೆ ತಿರುವುಗಳನ್ನು ಪಡೆದುಕೊಂಡು, ಅನಿರೀಕ್ಷಿತವಾಗಿ ಘಟಿಸುವ ಸವಾಲುಗಳ ಸರಮಾಲೆಯದು. ಕೆಲವೊಮ್ಮೆ ನಮ್ಮ ತೀರ್ಮಾನಗಳೇ ನಮಗೆ ತಿರುಮಂತ್ರಗಳಾಗಿ … Read more

“ಆಟಗಾಯಿ ಕಥೆಗಳು ಧ್ಯಾನಸ್ಥ ಸ್ಥಿತಿಗೆ ಜಾರಿ ಒಳಗಣ್ಣಿಂದ ನೋಡುವ ಪರೀಕ್ಷಿತ ಗುಣ ರೂಪದ್ದು”: ಎಂ.ಜವರಾಜ್

ಆನಂದ್ ಗೋಪಾಲ್ ಅವರ ‘ಆಟಗಾಯಿ’ ಕಥಾ ಸಂಕಲನ ನನ್ನ ಕೈಸೇರಿ ಸುಮಾರು ದಿನಗಳಾದರು ಓದಲು ಆಗದೆ ತಡವಾಗಿ ನೆನ್ನೆ ಬಿಡುವು ಮಾಡಿಕೊಂಡು ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಇಲ್ಲಿನ ಹನ್ನೊಂದು ಕಥೆಗಳಲ್ಲಿ ಐದಾರು ಕಥೆಗಳು ನನ್ನನ್ನು ಇನ್ನಿಲ್ಲದಂತೆ ಕಾಡಿದವು ಎಂಬುದಕ್ಕೆ ಅವುಗಳಲ್ಲಿನ ವಿಭಿನ್ನ ನಿರೂಪಣೆಯ ಕಥಾಧಾಟಿ! ‘ಆಟಗಾಯಿ’ ಗ್ರಾಮ್ಯ ಸೊಗಡಿರುವ ಪದ. ಇದರ ಮೂಲ ಭಾಷಾ ನುಡಿಗಟ್ಟು ‘ಪಗಡೆ’! ನನ್ನ ಕಾದಂಬರಿಗೆ ನಾನಿಟ್ಟ ಮೊದಲ ಹೆಸರು ‘ಪಗಡೆ’. ಕಾದಂಬರಿಯ ವಸ್ತು ವಿಷಯ ಮಾಸಾಳಿಗ ಮಾದಿಗರ ಕುಟುಂಬವೊಂದರ ಕುಲಕಸುಬು, … Read more

“ಅಣುವಿನಲ್ಲಿ ಸಮಷ್ಠಿಯನ್ನು ಕಟ್ಟಿಕೊಡುವ ಪ್ಯಾರಿ ಪದ್ಯಗಳು”: ಅನುಸೂಯ ಯತೀಶ್

ಕನ್ನಡ ಸಾಹಿತ್ಯ ಕ್ಷೇತ್ರ ಚಲನಶೀಲ ಗುಣವನ್ನು ಹೊಂದಿದ್ದು ಸೃಜನಶೀಲತೆಗೆ ನಿರಂತರವಾಗಿ ತನ್ನನ್ನು ತೆರೆದುಕೊಳ್ಳುತ್ತದೆ. ಇದರಿಂದ ಸಾಹಿತ್ಯ ರಚಿಸುವವರ ಸಂಖ್ಯೆ ಹೇರಳವಾಗುತ್ತಿದೆ. ನವ ನವೀನ ಪ್ರಯೋಗಗಳು ಸಾಹಿತ್ಯಕ್ಷೇತ್ರದಲ್ಲಿ ನಡೆಯುತ್ತಿರುತ್ತವೆ. ಇದು ನಮ್ಮ ಕನ್ನಡ ಭಾಷೆಗೆ ಇರುವ ಗಮ್ಮತ್ತು. ಅಂತಹುದೇ ಒಂದು ಹೊಸ ಪ್ರಯೋಗಕ್ಕೆ ನಾಂದಿ ಹಾಡಿದವರು ಎ.ಎಸ್. ಮಕಾನದಾರರವರು. ಇವರು ಪ್ಯಾರಿ ಪದ್ಯಗಳು ಎಂಬ ಹನಿಗವನ ಸಂಕಲನವನ್ನು ಸಖಿ‌ ಚೆಲ್ಲಿದ ಕಾವ್ಯಗಂಧ ಎಂಬ ಟ್ಯಾಗ್ ಲೈನ್ ನೊಂದಿಗೆ ಸಾಹಿತ್ಯಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ನಮ್ಮ ನಾಡಿನ ಹಿರಿಯ ಹಾಗೂ ಖ್ಯಾತ ಕವಿಗಳಾದ … Read more

ಸೇತುರಾಮ್.ಎಸ್.ಎನ್. ಇವರ ದಹನ ಪುಸ್ತಕದ ಬಗ್ಗೆ ಅನಿಸಿಕೆ: ದೀಪು ಹುಲ್ಕುಳಿ

ನಾನು ಓದಿದ ಪುಸ್ತಕ : ದಹನಲೇಖಕರು : ಶ್ರೀ ಸೇತುರಾಮ್ ಇಲ್ಲಿ ಬಂಡಾಯವಿಲ್ಲ … ಭಾವವಿದೆನೈತಿಕತೆಗೆ ಬಣ್ಣಗಳಿಲ್ಲ … ಒಳ ನೊಟವಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಸ್ತ್ರೀ ಸಂವೇದಿಶೀಲ ಸಾಹಿತಿಗಳಿದ್ದಾರೆ, ಆಗಿ ಹೋಗಿದ್ದಾರೆ, ಮುಂದೆ ಭವಿಷ್ಯದಲ್ಲಿ ಆಗುವರು ಇದ್ದಾರೆ. ಆ ಎಲ್ಲಾ ಸಾಹಿತಿಗಳ ಸಾಹಿತ್ಯ ಒಳಗೊಂಡ ಮಹಿಳಾ ಸಂವೇದನಾ ಶೀಲ ಸಾಹಿತ್ಯದ ವಿಮರ್ಷೆ ಸಂಪೂರ್ಣವೆನಿಸುವುದು ಶ್ರೀ ಸೇತುರಾಮರ ದಹನ ಹಾಗೂ ನಾವಲ್ಲ ಈ ಎರಡು ಪುಸ್ತಕಗಳ ಬಗ್ಗೆ ಉಲ್ಲೇಖಿಸಿದಾಗ ಮಾತ್ರ ಎಂಬುವುದು ನನ್ನ ದೃಢವಾದ ಅಭಿಮತ. … Read more

ಉತ್ತರ ಪುಸ್ತಕ ಪರಿಚಯ: ಪೂಜಾ ಮಂಗಳೂರು

ಮನಸ್ಸನ್ನು ಕಾಡಿಸುವ ಪ್ರಶ್ನೆಗಳು ಬದುಕಲ್ಲಿ ಬಂದಾಗ “ಉತ್ತರ” ದ ಮೂಲವನ್ನು ಹುಡುಕುವ ನಿರ್ಧಾರವನ್ನು ಮನಸ್ಸು ಮಾಡುತ್ತದೆ. ಆ “ಉತ್ತರ”ಕ್ಕಾಗಿಯೇ ಸುಪ್ರೀತ್ ಕೆ.ಎನ್. ಅವರು ಈ ಕೃತಿಯನ್ನು ಆಧ್ಯಾತ್ಮದ ಬೇರೆ ಬೇರೆ ಆಯಾಮದಲ್ಲಿ ರಚಿಸಿದ್ದಾರೆ.ಕೆಲಸದ ಒತ್ತಡದ ಮಧ್ಯೆಯೂ ಈ ಪುಸ್ತಕವನ್ನು ಓದಿ ಕೆಳಗಿಟ್ಟಾಗ ಮನಸ್ಸು ಒಮ್ಮೆ ಅಧ್ಯಾತ್ಮದತ್ತ ವಾಲಿದ್ದೂ ನಿಜ.‌ ಇದರ ಮೊದಲು ಸುಪ್ರೀತ್ ಅವರ ಎಲ್ಲ ಬರವಣಿಗೆಯನ್ನು ಓದಿದ್ದೇನೆ. ಕಳೆದ ಬಾರಿ ಅವರು ಬರೆದ “ಸಾವು” ಕಾದಂಬರಿಯು ತುಂಬಾ ಕಾಡಿಸಿತ್ತು. ಈಗ “ಉತ್ತರ” ದ ಮೂಲಕ ಅವರು … Read more

ಸೋಜಿಗದ ಬಳ್ಳಿ ಎಂಬ ನವಿರು ಪ್ರೇಮ ಕಥನ: ನಟರಾಜು ಎಸ್.‌ ಎಂ.

ಎಂ ಆರ್‌ ಭಗವತಿಯವರ ನಿರೂಪಣೆ ಮತ್ತು ಸಂಯೋಜನೆ ಇರುವ ಸೋಜಿಗದ ಬಳ್ಳಿ ಮೊನ್ನೆ ಮೊನ್ನೆಯಷ್ಟೇ ನನ್ನ ಕೈ ಸೇರಿತು. ಪುಸ್ತಕವನ್ನು ಒಂದೆರಡು ದಿನಗಳಲ್ಲಿ ಪಟ್ಟು ಹಿಡಿದು ಓದಿ ಮುಗಿಸಿದೆ. ಒಮ್ಮೊಮ್ಮೆ ಕುತೂಹಲದಿಂದಲೂ, ಒಮ್ಮೊಮ್ಮೆ ಆಲಸ್ಯದಿಂದಲೂ, ಒಮ್ಮೊಮ್ಮೆ ನಿದ್ದೆಗಣ್ಣಿನಿಂದಲೂ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಈ ಪುಸ್ತಕದ ಕುರಿತು ಬರೆಯಲೇಬೇಕು ಅನಿಸಿತು. ಆ ಕಾರಣಕ್ಕೆ ಈ ಲೇಖನ. ಸೋಜಿಗದ ಬಳ್ಳಿ ಪುಸ್ತಕ ನನಗೆ ಗಮನ ಸೆಳೆದಿದ್ದು ಅದರಲ್ಲಿ ಮಿಳಿತಗೊಂಡಿರುವ ನವಿರಾದ ಪ್ರೇಮದ ಕಾರಣಕ್ಕೆ. ಅದಕ್ಕೆ ಸಾಕ್ಷಿ ಎಂಬಂತೆ ನವಿರಾದ … Read more

ಕತ್ತಲ ಗರ್ಭಕ್ಕೆ ಬೆಳಕು ಹಿಡಿದ ಗಜಲ್ಗಳು: ಕಲ್ಲೇಶ್ ಕುಂಬಾರ್

ಕವಿಯಾದವನು ತಾನು ಬದುಕಿದ ಕಾಲದ ಸಂವೇದನೆಗಳಿಂದ ಪಾರಾಗಿ ಏಕಾಂತವಾಗಿ ಉಳಿಯಲಾರ ಏಕೆಂದರೆ ಅವನು ಬದುಕಿದ ಕಾಲಘಟ್ಟದಲ್ಲಿನ ವ್ಯವಸ್ಥೆ ಅವನ ಮೇಲೆ ಖಚಿತವಾದ ಪರಿಣಾಮವನ್ನು ಬೀರಿರುತ್ತದೆ. ಅಂತೆಯೇ ಕವಿಯು ತನ್ನ ಕಾಲದ ವ್ಯವಸ್ಥೆಯನ್ನು ತಾನೇ ರೂಪಿಸಿಕೊಂಡ ಆಕೃತಿ(ದೃಷ್ಟಿಕೋನ)ಯ ನೆಲೆಯಲ್ಲಿ ವಿಶ್ಲೇಷಿಸುತ್ತಿರುತ್ತಾನೆ. ಹಾಗೆಯೇ ಬದುಕು ಮತ್ತು ಮನುಷ್ಯನನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಮಾತು ಕೊಡುವ ಗುಣವನ್ನು ಬೆಳೆಸಿಕೊಂಡಿರುತ್ತಾನೆ. ಇದು ಒಂದು ರೀತಿಯಲ್ಲಿ ಕವಿಯ ಸಮಾಧಾನಕ್ಕೆ ದಾರಿ ಮಾಡಿಕೊಡುವಂತಹ ಸೃಜನಶೀಲ ಪ್ರಕ್ರಿಯೆ ಎನ್ನಬೇಕು. ಪ್ರಸ್ತುತ ಈ ಮಾತಿಗೆ ಪೂರಕವಾದ ಗುಣಗಳನ್ನು ಮೈಗೂಡಿಸಿಕೊಂಡಿರುವ … Read more

ಬದುಕಿನ ಗೆಲುವಿಗೆ ಹೊಸ ದಿಕ್ಕು ತೋರಿಸುವ ಮಧುಕರ್‌ ಬಳ್ಕೂರ್‌ ಅವರ ’ಆಸೆಗಳು ಕನಸಾಗಿ ಬದಲಾಗಲಿ’: ರಾಘವೇಂದ್ರ ಅಡಿಗ ಎಚ್ಚೆನ್

’ಆಸೆಗಳು ಕನಸಾಗಿ ಬದಲಾಗಲಿ’ ಎಂತಹಾ ಅದ್ಭುತ ಮಾತು! ಮಾನವನ ಆಸೆಗಳಿಗೆ ಕೊನೆ ಮೊದಲಿರುವುದಿಲ್ಲ. ಆದರೆ ಅದೇ ಆಸೆ ಕನಸುಗಳಾಗಿ ಬದಲಾಗುವುದು ಎನ್ನುವ ಹಾಗಿದ್ದರೆ ಅದೆಷ್ಟು ಚೆನ್ನ? ಇಷ್ಟಕ್ಕೂ ಇಲ್ಲಿ ಇದನ್ನು ಹೇಳುತ್ತಿರುವುದಕ್ಕೆ ಕಾರಣವಿದೆ. ಉದಯೋನ್ಮುಖ ಲೇಖಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿಯ ಹೆಸರು ’ಆಸೆಗಳು ಕನಸಾಗಿ ಬದಲಾಗಲಿ’ ಈ ಪುಸ್ತಕ ಸಹ ಶೀರ್ಷಿಕೆಯಷ್ಟೇ ಸುಂದರವಾಗಿದೆ. ಮೂಲತಃ ಉಡುಪಿಯ ಕುಂದಾಪುರದ ಬಳ್ಕೂರು ಗ್ರಾಮದವರಾದ ಮಧುಕರ್ ವಿದ್ಯಾಭ್ಯಾಸ, ವೃತ್ತಿ ಸಂಬಂಧ ನಾನಾ ಊರುಗಳಲ್ಲಿದ್ದು ಅನುಭವ ಹೊಂದಿದವರು. ಕಳೆದ ಆರೇಳು … Read more

ಖಾಕಿಯೊಳಗಿನ ಖಾದಿ ಕವಿತೆಗಳು: ಅಶ್ಫಾಕ್ ಪೀರಜಾದೆ

ಕೃತಿ; “ಗಾಂಧಿ ನೇಯಿದಿಟ್ಟ ಬಟ್ಟೆ”ಕವಿ; ರಾಯಸಾಬ ಎನ್. ದರ್ಗಾದವರ.ಪುಟ ಸಂಖ್ಯೆ; 80 ಬೆಲೆ; 90ಅನಾಯ ಪ್ರಕಾಶನ, ಕಟ್ನೂರ್, ಹುಬ್ಬಳ್ಳಿಸಂಪರ್ಕ ಸಂಖ್ಯೆ; 7259791419 ಕವಿತೆ ಸಶಕ್ತ ಸಕಾಲಿಕ ರೂಪಕಗಳ ಮೂಲಕವೇ ಓದುಗನ ಭಾವ ಪರಿಧಿಯಲ್ಲಿ ಬಿಚ್ಚಿಕೊಳ್ಳುತ್ತ ಹೊಸಹೊಸ ಅರ್ಥ ಆಯಾಮಗಳಲ್ಲಿ ಪಡೆದುಕೊಳ್ಳುತ್ತ ಸಾಗಿ ಹೃದಯಕ್ಕೆ ತಲುಪಬೇಕ ತಟ್ಟಬೇಕು. ಆಗಲೇ ಕವಿಗೂ ಬರೆಸಿಕೊಂಡ ಕವಿತೆಗೂ ಒಂದು ಘನತೆ. ಕವಿಯ ಮನದ ಚದುರಿದ ಭಾವಮೋಡಗಳು ಕವಿತೆಯನ್ನುವ ಒಂದು ನಿಖರವಾದ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಕಾವ್ಯಶಿಲ್ಪ ಕೆತ್ತಿದ್ದರೂ ಕೂಡ ಕಾವ್ಯಾಸಕ್ತ ಮನಮಸ್ತಿಕದಲ್ಲಿ ಭಿನ್ನವಾದ ಅರ್ಥಗಳು … Read more

ಬುದ್ಧ ಕಾಣದ ನಗೆ ಪುಸ್ತಕ ವಿಮರ್ಶೆ: ವರುಣ್ ರಾಜ್

ಪುಸ್ತಕದ ಹೆಸರು : ಬುದ್ಧ ಕಾಣದ ನಗೆಕೃತಿ ಪ್ರಕಾರ : ಕವನ ಸಂಕಲನಕವಿ : ಎಸ್. ರಾಜು ಸೂಲೇನಹಳ್ಳಿ.ಪ್ರಕಾಶಕರು : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.ಪುಟ : 86ಬೆಲೆ : 90 ಕವಿ ಹಾಗೂ ಕಾದಂಬರಿಕಾರರೂ ಆದ ರಾಜು ಎಸ್ ಸೂಲೇನಹಳ್ಳಿ ರವರು ತಮ್ಮ ಕೃತಿಗೆ ಕೊಟ್ಟಿರುವ ‘ಬುದ್ಧ ಕಾಣದ ನಗೆ’ ಎಂಬ ಶೀರ್ಷಿಕೆಯೇ ಬಹಳ ಆಕರ್ಷಕವಾಗಿದೆ. ಪುಟ ತಿರುಗಿಸುತ್ತಾ ಹೋದರೆ ಮತ್ತಷ್ಟು ಆಕರ್ಷಣೆ ಇವರ ಕವಿತೆಗಳಲ್ಲಿ ಕಂಡುಬರುತ್ತೆ. ಕೃತಿಯ ಮೊದಲ ಕವಿತೆಯಲ್ಲಿಯೇ ಕವಿಗಳು ಬುದ್ದಿವಂತಿಕೆ ಮತ್ತು ಹೃದಯಸಂಪನ್ನತೆಯ … Read more

ಸೀಮಾತೀತ ಸಿಮೊನ್‌ ದ ಬೋವಾ: ಸಂಗನಗೌಡ ಹಿರೇಗೌಡ

ಭಾರತೀಯ ಮತ್ತು ಭಾರತೇತರ ಪ್ರಮುಖ ಸಾಂಸ್ಕೃತಿಕ ನಾಯಕರು, ಕವಿಗಳು, ಲೇಖಕರು ಅವರ ಒಟ್ಟು ಬದುಕಿನಲ್ಲಿ ಘಟಿಸಿದ ಮುಖ್ಯ ಘಟನೆಗಳನ್ನಿಟ್ಟುಕೊಂಡು ಕನ್ನಡಕ್ಕೆ ತರ್ಜುಮೆಗೊಂಡ ನಾಲ್ಕು ಕೃತಿಗಳನ್ನು ನನ್ನ ಮಿತಿಯೊಳಗೆ ಓದಿಕೊಂಡಿದ್ದೇನೆ. ನಟರಾಜ ಹುಳಿಯಾರವರು ಸಂಪಾದಿಸಿರುವ “ಲೋಹಿಯಾ ಕಂಡ ಗಾಂಧಿ” ಇದರಲ್ಲಿ ಬಿ.ಎ ಸನದಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹಸನ್‌ ನಯೀಂ ಸುರಕೋಡ. ಸತ್ಯವ್ರತ, ರವೀಂದ್ರ ರೇಶ್ಮೆ, ಸಿ, ನಾಗಣ್ಣ, ನಟರಾಜ ಹುಳಿಯಾರ, ಈ ಏಳು ಜನ ಲೇಖಕರು ಲೋಹಿಯಾ ಅವರ ಬದುಕಿನ ಪ್ರಮುಖವಾದ ಭಾಷಣ, ಚಳುವಳಿ, ಹೋರಾಟಗಳಿನ್ನಿಟ್ಟುಕೊಂಡು, ಗಾಂಧಿಯ ಕುರಿತು … Read more