ಮೊದಲು ಓದುಗನಾಗು

ಹನಿಯೂರು ಚಂದ್ರೇಗೌಡರ “ಸೋಲಿಗರು: ಬದುಕು ಮತ್ತು ಸಂಸ್ಕೃತಿ” ಕೃತಿಯ- ಒಂದು ವಿಮರ್ಶೆ: ಡಾ. ಕೆ.ಮಧುಸೂದನ ಜೋಷಿ

  ಬಹುಮುಖಿಯಾಗಿ  ಬಹುರೂಪಿಯಾಗಿ ಬೆಳೆದು ಬಂದ ಕನ್ನಡ ಸಾಹಿತ್ಯ ಕಾಲದಿಂದ ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಪ್ರಸ್ತುತಗೊಳ್ಳುತ್ತ ಬಂದಿದ್ದರಿಂದಲೇ ಅದು ಜೀವಂತಿಕೆಯನ್ನು ಕಾಯ್ದುಕೊಂಡು 8 ಜ್ಞಾನಪೀಠಗಳನ್ನು ಏರಿ ಭರತೀಯ ಸಾಹಿತ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿಯಾಗಿ ಮೆರೆದಿದೆ; ಮೆರೆಯುತ್ತಿದೆ. ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ, ಆತ್ಮಚರಿತ್ರೆ, ಜೀವನಚರಿತ್ರೆ, ಗೀತನಾಟಕ, ಕಥನಕವನ, ಪ್ರವಾಸಕಥನ, ಜನಾಂಗೀಯ ಅಧ್ಯಯನ…. ಹೀಗೆ ಹತ್ತು ಹಲವು ಮುಖಗಳಲ್ಲಿ ಹೊಮ್ಮಿಬಂದ ಕನ್ನಡ ಸಾಹಿತ್ಯವಾಹಿನಿ ಮೈದುಂಬಿಕೊಳ್ಳುತ್ತ, ಮನಗಳನ್ನು ತುಂಬುತ್ತ ಸಾಗಿದೆ. ಆದರೆ ಈ ಎಲ್ಲ ಸಾಹಿತ್ಯದ ಪ್ರಕಾರಗಳಲ್ಲಿಯೇ ಅಪರೂಪ […]

ಮೊದಲು ಓದುಗನಾಗು

‘ಸೋಲು ಗೆದ್ದವನದ್ದು!’ ಕಾದಂಬರಿಯ ಒಂದು ಅಧ್ಯಾಯ: ಮಂಜು ಬನವಾಸೆ

ಅಮ್ಮ-ಅಪ್ಪ ಅದ್ಯಾರ ಕೈಕಾಲು ಹಿಡಿದು ದುಡ್ಡು ತಂದರೋ ಗೊತ್ತಿಲ್ಲ. ಫೀಸು ಎಷ್ಟೋ ಗೊತ್ತಿಲ್ಲ. ನನ್ನನ್ನು ಸಕಲೇಶಪುರದ ಗೌರ್ಮೆಂಟ್ ಪಿಯು ಕಾಲೇಜಿಗೆ ಅಡ್ಮಿಷನ್ ಮಾಡಿಸಲಾಗಿದೆ ಮತ್ತು ಮಡಿಕೆಯೊಂದಿಗೆ ನಾನೂ ಆಟ್ರ್ಸ್ ಫಸ್ಟ್ ಇಯರ್ ಪಿಯುಸಿಗೆ ಹೋಗುತ್ತಿದ್ದೇನೆ ಎಂದು ತಿಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಕಾಲೇಜಿನ ಮೊದಲ ದಿನ ಬಹುಶಃ ಅದು ಜುಲೈ 7ನೇ ತಾರೀಖಿರಬಹುದು ಎನ್ನಿಸುತ್ತದೆ. ಆಷಾಢದ ಗಾಳಿ ಜೋರಾಗಿ ಬೀಸುತ್ತಿತ್ತು. ನಮ್ಮ ಮನೆಗಳಂತೂ ಅಕ್ಷರಶಃ ಮಂಜಿನಲ್ಲಿ ಮುಳುಗಿ ಹೋಗಿದ್ದವು. ಮಳೆ ಸ್ವಲ್ಪ ಬಿಡುವು ನೀಡಿದಾಗ ಇದ್ದ ಒಂದು […]

ಮೊದಲು ಓದುಗನಾಗು

’ಪ್ರೇಮಕಾವ್ಯ’ ಕಾದಂಬರಿ ಕುರಿತು: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಕಾವ್ಯಶ್ರೀ ಮಹಾಗಾಂವಕರ್ ಅವರ ಸಾಮಾಜಿಕ ಕಾದಂಬರಿ ’ಪ್ರೇಮಕಾವ್ಯ’ ಜಾತಿಯೆಂಬ ಕಂದಾಚಾರದ ನಡುವೆ ಪ್ರೇಮಿಗಳಿಬ್ಬರೂ ಸಿಕ್ಕಿ ಬೀಳುವ ಕಥಾ ವಸ್ತು ಹೊಂದಿದೆ. ಸರಳ ನಿರೂಪಣೆ, ಸರಾಗವಾಗಿ ಓದಿಸಿಕೊಂಡು ಹೋಗುವ ಸಂಭಾಷಣೆ, ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ನಡೆಸುವ ಹೋರಾಟ ಮನ ಮುಟ್ಟುತ್ತದೆ. ಬಸ್ ಪ್ರಯಾಣದ ಮೂಲಕ ಎರಡು ಹೃದಯಗಳ ಮಧ್ಯೆ ಆಗುವ ತಲ್ಲಣಗಳು, ಅಲ್ಲಿಂದಲೇ ಶುರುವಾಗುವ ಪರಿಚಯ ಅರಿಯದೇ ಹುಟ್ಟಿಕೊಳ್ಳುವ ಪ್ರೀತಿ.  ಬ್ರಾಹ್ಮಣ ಜಾತಿಯ ಕಟ್ಟುಪಾಡುಗಳಿಗೆ ಕಟಿಬಿದ್ದು ಹೆತ್ತವರು ನಡೆಸುವ ದರ್ಪ, ತಾಯಿ ಭಾಗ್ಯಳ ಸಹಜ ಉಪದೇಶ, ಹಲವು ಕಷ್ಟ, […]

ಮೊದಲು ಓದುಗನಾಗು

ಎಮಿಲಿ ಎಂಬ ಅಮಲು: ಮಹೇಂದ್ರ ಎಂ. ನವೋದಯ

೧೯ನೇ ಶತಮಾನದ ಇಂಗ್ಲೀಷ್ ಸಾಹಿತ್ಯದಲ್ಲಿನ ಮಹಿಳಾ ಲೇಖಕಿಯರಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದವರಲ್ಲಿ ಎಮಿಲಿ ಬ್ರಾಂಟೆ ಕೂಡ ಒಬ್ಬರು. ಜುಲೈ ೩೦, ೧೮೧೮ ರಂದು ಜನಿಸಿ, ತೀರಾ ಸಂಕ್ಷಿಪ್ತವಾಗಿ ೩೦ ವರ್ಷಗಳ ಕಾಲ ಬದುಕಿದರೂ ಅವರ ಸಾಹಿತ್ಯ ಕೊಡುಗೆ ಅನನ್ಯ ಮತ್ತು ಅಜರಾಮರ. ಎಮಿಲಿ ಬೆಳೆದದ್ದು ದೂರದ ಇಂಗ್ಲೆಂಡ್, ಬರೆದದ್ದು ಇಂಗ್ಲೀಷ್ ನಲ್ಲಿ, ಎಮಿಲಿ ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ಕಠಿಣ ಸ್ವಭಾವದ ನೆಂಟನಬ್ಬೊಳ ಮನೆಯಲ್ಲಿ ಬೆಳೆದಳು. ಹೆಚ್ಚು ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ. ಆಕೆ ಯಾರೊಂದಿಗೂ ಬೆರೆತವಳಲ್ಲ, ಒಂಟಿತನವೇ […]

ಮೊದಲು ಓದುಗನಾಗು

ತಂತು: ಎಸ್.ಎಲ್.ಭೈರಪ್ಪನವರ ಕಾದಂಬರಿಯ ಬಗ್ಗೆ ಒಂದು ಅನಿಸಿಕೆ, ಟಿಪ್ಪಣಿ: ಸಂತೋಷ್ ಕುಮಾರ್ ಎಲ್.ಎಂ.

  ಬಸವನಪುರ ಎಂಬ ಊರಿನ ಪುರಾತನ ಚನ್ನಕೇಶವ ದೇವಾಲಯದಲ್ಲಿದ್ದ ದೊಡ್ಡ ಸರಸ್ವತಿಯ ವಿಗ್ರಹ ಕಳುವಾಗಿರುತ್ತದೆ. ಗ್ರಾಮದವರು ಇದರ ಬಗ್ಗೆ ಗಮನ ಹರಿಸುವುದಿಲ್ಲ. ಇದೇ ಊರಿನಲ್ಲಿ ಹುಟ್ಟಿ ತನ್ನ ಸ್ವಂತ ಪರಿಶ್ರಮದಿಂದ ದೊಡ್ಡ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಸಂಪಾದಕನಾಗಿರುವ ರವೀಂದ್ರನಿಗೆ ಈ ಸುದ್ದಿ ತಲುಪುತ್ತದೆ. ತನ್ನ ಹುಟ್ಟೂರು ಎಂಬ ಕರುಳಬಳ್ಳಿಯ ಮಮತೆಯಿಂದ ಬೇರಾರನ್ನು ಕಳುಹಿಸಲು ಮನಸ್ಸಾಗದೇ ತಾನೇ ಹುಟ್ಟೂರಿಗೆ ಬರುತ್ತಾನೆ. ಈ ವಿಷಯದ ಮೂಲ ಹುಡುಕುತ್ತಿರುವಾಗಲೇ ತನ್ನ ತಾತ ವೆಂಕಟಸುಬ್ಬಯ್ಯನವರು ಊರಿಗೆ ದಾನವಾಗಿ ಕಟ್ಟಿಸಿಕೊಟ್ಟಿದ್ದ ಆಸ್ಪತ್ರೆಯ ಫಲಕವನ್ನು ಯಾರೋ ತೆಗೆದು […]

ಮೊದಲು ಓದುಗನಾಗು

ಅಂಗೈ ರೇಖೆಗಳಲ್ಲಿ ನದಿಗಳನ್ನು ಹರಿಸುವ ಕಾವ್ಯ ಕಡಮೆ: ನಾಗರಾಜ್ ಹರಪನಹಳ್ಳಿ

ಯುವ ಪ್ರತಿಭೆ  ಕಾವ್ಯ ಕಡಮೆಗೆ ೨೦೧೪ನೇ ಸಾಲಿನ ಕೇಂದ್ರ  ಸಾಹಿತ್ಯ ಅಕಾಡೆಮಿ ಯುವಪುರಸ್ಕಾರ ದೊರೆತಿದೆ. ೫೦ ಸಾವಿರ ರೂ. ಬಹುಮಾನ ರೂಪದಲ್ಲಿ ಸಹ ಸಿಗಲಿದೆ. ಈ ಪುರಸ್ಕಾರಕ್ಕೆ ಕಾರಣವಾದುದು ಆಕೆಯ  ‘ಧ್ಯಾನಕೆ ತಾರೀಖಿನ ಹಂಗಿಲ್ಲ’ ಎಂಬ ಮೊದಲ ಕವಿತಾ ಸಂಕಲನ. ಕುತೂಹಲದಿಂದಲೇ ಆ ಕವಿತಾ ಸಂಕಲನವನ್ನು ಕೈಗೆತ್ತಿಕೊಂಡು ಓದಿದರೆ ಅಲ್ಲಿನ ಭಾವಲೋಕ ಮತ್ತು ಮನಸ್ಸೊಂದು ತನ್ನ ಸುತ್ತಲ ಜಗತ್ತಿಗೆ ತೆರೆದುಕೊಳ್ಳುವ ಬಗೆ ಒಡೆದು ಕಾಣಿಸುತ್ತದೆ. ಕವಿತೆಗಳನ್ನು ಕಟ್ಟುವ ಬಗೆಯಲ್ಲೂ ತಾಜಾತನ ಮತ್ತು ಪ್ರತಿಮೆಗಳನ್ನು ಕಟ್ಟುವ ಬಗೆ ಸೊಗಸಾಗಿದೆ. […]

ಮೊದಲು ಓದುಗನಾಗು

ಪ್ರತಿಮೆಗಳ ಮೂಲಕ ಹೊಸ ಲೋಕಕ್ಕೆ ಸವಾರಿ ಹೊರಟ ಕವಿತೆಗಳು: ಶ್ರೀದೇವಿ ಕೆರೆಮನೆ

ನಿನ್ನ ಕವನಗಳು ಓದುಗರನ್ನು ಬೆಚ್ಚಿ ಬೀಳಿಸದಿದ್ದರೆ ಅವುಗಳಿಂದೇನು ಪ್ರಯೋಜನ ಬೋದಿಲೇರ್ ಹೇಳಿದ ಮಾತುಗಳನ್ನು  ನೆನಪಿಸಲೆಂದೇ ಹೊಸದೊಂದು ಕವನ ಸಂಕಲನ ಹೊರಬಂದಿದೆ. ನಾನು ಪದೇ ಪದೇ ಬೋದಿಲೇರ್ ಎಂದೇ ಕರೆಯುವ ಗೆಳೆಯ ವಿ. ಆರ್ ಕಾರ್ಪೆಂಟರ್ ಕವನ ಸಂಕಲನ ಹೊರಬಂದಿದೆ. ಕವನ ಸಂಕಲನದ ಮೊದಲ ಓದುಗಳಾಗಿ ನಾನೀಗಾಗಲೇ ನನ್ನ ಅನುಭವವನ್ನು ದಾಖಲಿಸಿದ್ದಾಗ್ಯೂ ಕೂಡ ಕಂಪ್ಯೂಟರ್ ಪರದೆಯಲ್ಲಿ ಇಣುಕಿಣುಕಿ ಓದುವುದಕ್ಕೂ, ಕೈಯ್ಯಲ್ಲಿಯೇ ಪುಸ್ತಕ ಹಿಡಿದು ಓದುವ ಸುಖಕ್ಕೂ  ಇರುವ ವತ್ಯಾಸ ಅಗಾಧವಾದದ್ದು. ಹೀಗಾಗಿ ಈಗಿನ ಅನುಭವಗಳು ಮತ್ತೂ ಭಿನ್ನವಾಗಿಯೇ ಇದೆ. […]

ಮೊದಲು ಓದುಗನಾಗು

ಕರ್ಮ ಕಾದಂಬರಿ ವಿಮರ್ಶೆ: ಗಣೇಶ್ ಖರೆ, ಪ್ರಶಾಂತ್ ಭಟ್

ಮೊದಲಿನಿಂದಲೂ ನಾನು ಓದಿದ್ದು ಕಡಿಮೆಯೇ… ಅದರಲ್ಲೂ ಪುಣೆಗೆ ಬಂದಮೇಲೆ ಮುಗಿಯಿತು, ಇಲ್ಲಿ ಕನ್ನಡ ಪುಸ್ತಕವೂ ದೊರೆಯುವುದಿಲ್ಲ. ಆದರೆ ಇತ್ತೀಚೆಗೆ ಓದುವ ಹವ್ಯಾಸ ಬೆಳೆದಿದೆ. ಹಾಗಾಗಿ ಊರಿಗೆ ಹೋದಾಗೆಲ್ಲ ಬರುವಾಗ ಒಂದಿಷ್ಟು ಕಾದಂಬರಿಗಳನ್ನ ತಂದಿರುತ್ತೇನೆ. ಅವರಿವರಲ್ಲಿ ಕೇಳಿ ಯಾವ ಕಾದಂಬರಿಗಳು ಚೆನ್ನಾಗಿವೆ ಅಂತ ಖರೀದಿಸುವುದು ನನ್ನ ವಾಡಿಕೆ. ಮೊನ್ನೆ ಹೀಗೆ ಫೇಸ್ ಬುಕ್ ಲ್ಲಿ ಗೆಳತಿಯೊಬ್ಬಳು "ಕರಣಂ ಪವನ್ ಪ್ರಸಾದ್" ಬರೆದಿರುವ "ಕರ್ಮ" ಕಾದಂಬರಿ ತುಂಬಾ ಚೆನ್ನಾಗಿದೆ, ಓದಲೇಬೇಕಾದ ಪುಸ್ತಕ ಅಂದಾಗ ಇವರು ಯಾವ ಲೇಖಕರು ಇವರ ಹೆಸರನ್ನು […]

ಮೊದಲು ಓದುಗನಾಗು

ಹಂಗುಗಳಾಚೆಯ ’ಪಾಪಿ’ ಪದ್ಯಗಳು: ಜ್ಞಾನೇಂದ್ರ ಕುಮಾರ್

ಯಾವ ವಿಮರ್ಶಕನ ಪುತ್ಥಳಿಯನ್ನೂ  ಯಾವ ಊರ ಸರ್ಕಲಿನಲ್ಲೂ ಇಡುವುದಿಲ್ಲ – ಅನ್ನುತ್ತಲೇ ವಿಮರ್ಶೆಯ ಹಂಗಿನಾಚೆ ಬರೆಯುತ್ತಿರುವವರು ತಾವು ಎಂದು ಘೋಷಿಸಿಕೊಳ್ಳುವ ಕವಿ ಚಕ್ರವರ್ತಿ ಚಂದ್ರಚೂಡ್, ಪದ್ಯ ಹೆಣಿಗೆಯ ಖಚಿತ ಚೌಕಟ್ಟುಗಳಾಚೆಯೇ ನಿಂತು ಬರೆಯುತ್ತಿರುವವರು. ಇತ್ತೀಚೆಗೆ ಬಿಡುಗಡೆಯಾದ ಚಕ್ರವರ್ತಿಯವರ "ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮ ಪದ್ಯಗಳು)" ಕವನ ಸಂಕಲನ ಇದಕ್ಕೊಂದು ನಿದರ್ಶನ.  * ಇಲ್ಲಿನ ಪದ್ಯಗಳನ್ನು ಓದುವಾಗ ಸಾವಿನ ಮನೆಯ ಚಟುವಟಿಕೆಯಂತೆ ವಿಲಕ್ಷಣ ಅನುಭವ ಉಂಟಾಗುತ್ತದೆ. ಅದೊಂದು ಬಗೆಯ ಸತ್ಯದ ಮುಖಾಮುಖಿ, ನಿರಾಕರಿಸುತ್ತಲೇ ಒಪ್ಪಿಕೊಳ್ಳುವ ಬಗೆ ಹಾಗೂ ನಮಗೂ […]

ಮೊದಲು ಓದುಗನಾಗು

ಮು೦ಜಾವದ ಕಲರ್ ಫುಲ್ ಜಗತ್ತು-ವೆ೦ಡರ್ ಕಣ್ಣು: ವೆಂಕಟೇಶ್ ಪ್ರಸಾದ್

ಸುಮಾರು ೮-೧೦ ವರ್ಷಗಳ ಹಿ೦ದಿನ ಮಾತು, ನಾನಾಗ ೭ನೇ ಇಯತ್ತೆಯಲ್ಲಿ ಓದುತ್ತಿದ್ದೆ. ಒ೦ದು ದಿನ ಶಾಲೆಯಲ್ಲಿ ಕನ್ನಡ ಅಧ್ಯಾಪಕರು ದಿನ ಪತ್ರಿಕೆಗಳ ಬಗ್ಗೆ ಮಾತನಾಡುತ್ತಿದ್ದರು. ಮಾತಿನ ಕೊನೆಯಲ್ಲಿ ಯಾರೆಲ್ಲಾ ಮನೆಯಲ್ಲಿ ದಿನಪತ್ರಿಕೆ ಗಳನ್ನು ಓದುತ್ತೀರಿ ? ಎ೦ಬ ಪ್ರಶ್ನೆ ಕೇಳಿದರು. ಹೆಚ್ಚಿನವರು ಕೈ ಎತ್ತಿ ನಾವು ಓದುತ್ತೇವೆ ಸರ್ ಎ೦ದರು. ನಾನು ಕೈ ಎತ್ತಿರಲಿಲ್ಲ. ಕಾರಣ ನಮ್ಮ ಮನೆಯಲ್ಲಿ ಆಗ ದಿನ ಪತ್ರಿಕೆ ತರಿಸುತ್ತಿರಲಿಲ್ಲ. ಆ ದಿನ ಮನೆಗೆ ಬ೦ದ ನಾನು ದಿನಪತ್ರಿಕೆ ತರಿಸುವ೦ತೆ ಜಗಳ ಮಾಡಿದ್ದೆ […]

ಮೊದಲು ಓದುಗನಾಗು

ಡುಂಡಿ ಅರಣ್ಯಕನೊಬ್ಬ ಗಣಪತಿಯಾದ ಕಥೆ: ಮಂಜು ಅರ್ಕಾವತಿ

ಸುರರು ಹರಸಲೆಂದು ನಾನು ಕರಗಳೆತ್ತಿ ಬೇಡಿದೆ. ಅಸುರರು ಕೈಹಿಡಿದು ನನ್ನ ಜತನದಿ ಕಾಪಾಡಿದರು ಕಾಣದೆಲ್ಲೋ ಅವಿತಿರುವ ದೇವರುಗಳ ವಂದಿಸಿದೆ ಎದುರಿರುವ ನನ್ನಂತಹ ನರರುಗಳನೇ ನಿಂದಿಸಿದೆ ದೇವರುಗಳನು ಮಾಡಲು ಹೋದೆ ಅತಿಸನ್ಮಾನ ನನ್ನ ನಾನು ಮಾಡಿಕೊಂಡಿದ್ದು ಅತಿ ಅವಮಾನ ಸಾಕಿನ್ನು ಬೇಡುವ, ಕಾಡುವ ವ್ಯರ್ಥ ಕೆಲಸಗಳು ಜೋಡಣೆಯಾಗಲಿ ಹರಿದಿರುವ ಬದುಕುಗಳು  ತಾನು ಪೂಜಿಸಿದ ಆರ್ಯರ ಪಡೆಯಿಂದ ಸಾವಿನಂಚಿಗೆ ಹೋಗಿ ಡುಂಡಿಯ ಗಣದಿಂದ ಕಾಪಾಡಲ್ಪಟ್ಟ ಯಾಜ್ಞಿಕನ ನುಡಿ.  ಶಂಬರನೆನ್ನುವ ಅರಣ್ಯಕನೊಬ್ಬ ಯಾಜ್ಞಿಕನೆಂಬ ಭ್ರಾಹ್ಮಣನೊಬ್ಬನ ಜೊತೆ ಮರಣ ಶಯ್ಯೆಯಲ್ಲಿರುವ ಡುಂಡಿಯನ್ನು ನೋಡಲು […]

ಮೊದಲು ಓದುಗನಾಗು

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಪೀಸು: ದಿವ್ಯ ಆಂಜನಪ್ಪ

  ಹೊಸ ದಿಗಂತದೆಡೆಗೆ ಎಂಬ ತಲೆಬರಹದಡಿಯಲ್ಲಿ ಲೇಖಕರು ನವ್ಯ ಸಾಹಿತ್ಯದೆಡೆಗೆ ಅಸಮಧಾನಗೊಳ್ಳುತ್ತ ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅದಕ್ಕೆ ಅಸಾಧ್ಯವಾಗಿದೆ, ಎಂದು ಖಂಡಿಸುತ್ತ, ಅದಕ್ಕೆ ಅವರು ಮೂರು ಕಾರಣಗಳನ್ನು ಹೀಗೆ ನೀಡುತ್ತಾರೆ.  ಮೊದಲನೇಯದಾಗಿ, ಯಾಂತ್ರಿಕವಾಗಿರುವ ಸಾಹಿತ್ಯದ ಸಾಂಕೇತಿಕ ಸಿದ್ಧಶೈಲಿ ಮತ್ತು ತಂತ್ರಗಳು ಎರಡನೇಯದಾಗಿ ಕೇವಲ ಉಪಾಧ್ಯಾಯರಿಂದಲೇ ತುಂಬಿರುವ ಅದರ ಸಾಹಿತ್ಯ ವರ್ಗ ಮೂರನೇಯದಾಗಿ ಸಾಹಿತ್ಯದ ಮಟ್ಟಿಗೆ ಶ್ರೀಮಿತಹೊಂದಿರುವ ಅದರ ಕ್ರಾಂತಿಕಾರಕತನ.  ಈ ಮೂರು ಕಾರಣಗಳಿಂದ ನವ್ಯ ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ.  ಆದ್ದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೇ ಇದರ […]

ಮೊದಲು ಓದುಗನಾಗು

ಬೆಂಕಿಗೆ ಕೈ ಹಾಕಬಾರದು ಸುಡುತ್ತದೆ ಅಂತ ನಾವಂದರೆ…: ಡಾ. ಗವಿ ಸ್ವಾಮಿ

  ಹಿರಿಯ ಮಿತ್ರರಾದ ಡಾಕ್ಟರ್ .ನಟರಾಜು SM ರವರ ಪುಸ್ತಕ ‘ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ ಮತ್ತು ಖುಷಿ ನಗರಿಯ ಅವನ ನಲ್ಮೆಯ ಗೆಳತಿಯೂ ‘ ವನ್ನು ಓದಿ ಮುಗಿಸಿದೆ. ಆಶ್ಚರ್ಯವಾಯಿತು ಎಂದರೆ ಸುಳ್ಳಾಗುತ್ತದೆ. ಏಕೆಂದರೆ ಅವರ ಪ್ರತಿಭೆಯ ಝಲಕನ್ನು ಕಾಲೇಜಿನಲ್ಲೇ ನೋಡಿದ್ದೆ. ಕಥೆ, ಕಾದಂಬರಿ, ಆತ್ಮಕಥೆ, ಕವಿತೆ ಇವ್ಯಾವುದರಚೌಕಟ್ಟಿಗೂ ನಿಲುಕದ ಒಂದು ಹೊಸ ಪ್ರಯೋಗ. ಗೆಳೆಯ -ಗೆಳತಿಯ ಪಾತ್ರಗಳು ಕಾಡುತ್ತವೆ. ಮಾದರಿ ಸ್ನೇಹವೆಂದರೆ ಇದೇ ಇರಬಹುದಾ ಅನಿಸುತ್ತದೆ. ಗೆಳತಿ ವಯಸ್ಸಿಗೂ ಮೀರಿದ ಜೀವನಾನುಭವನ್ನುಳ್ಳವಳು. ಗಟ್ಟಿಗಿತ್ತಿ. ಆಕೆಯ […]

ಮೊದಲು ಓದುಗನಾಗು

ಡಾ. ಅನಸೂಯಾದೇವಿಯವರ ಕೃತಿ “ಪ್ರಕೃತಿ ಮತ್ತು ಪ್ರೀತಿ”: ಹನಿಯೂರು ಚಂದ್ರೇಗೌಡ

  ಕೃತಿ ವಿವರ: ಪುಸ್ತಕದ ಹೆಸರು        : ಪ್ರಕೃತಿ ಮತ್ತು ಪ್ರೀತಿ- ವೈಚಾರಿಕ ಲೇಖನಗಳ ಸಂಗ್ರಹ ಲೇಖಕಿ                    : ಡಾ.ಅನಸೂಯಾ ದೇವಿ ಬೆಲೆ                        :  ೩೫೦ ರೂ. ಪ್ರಕಾಶನ ಸಂಸ್ಥೆ         : ದೇಸಿ ಪುಸ್ತಕ, ವಿಜಯನಗರ, ಬೆಂ.-೪೦ ಪ್ರಕಟಣೆ […]

ಮೊದಲು ಓದುಗನಾಗು

ವೈದೇಹಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ಕ್ರೌಂಚ ಪಕ್ಷಿಗಳು’: ಮೋಹನ್ ಕೊಳ್ಳೇಗಾಲ

ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳನ್ನೊಳಗೊಂಡ ಒಂದು ಕಥಾಸಂಕಲನ. ಎಲ್ಲಾ ಕಥೆಗಳಲ್ಲಿಯೂ ಹೊಸ ಹುಡುಕಾಟವಿದೆ, ಅದ್ಭುತ ಮತ್ತು ನೈಜವೆನಿಸಿಕೊಳ್ಳುವ ಭಾವನೆಗಳನ್ನು ಎಳೆ ಎಳೆಯಾಗಿ ಹರಿಯಬಿಡುವ ನಿರೂಪಣೆಯಿದೆ, ಹೊಸ ಹೊಸ ಭಾವನೆಗಳ ಮಿಳಿತವಿದೆ, ನೋವಿನ ಜೊತೆಗೆ ನಲಿವಿದೆ, ನಂಬಿಕೆ ಅಪನಂಬಿಕೆಗಳ ನಡುವಿನ ಗುದ್ದಾಟವಿದೆ, ಅರ್ಧದಾರಿಗೇ ನಮ್ಮನ್ನು ನಿಲ್ಲಿಸಿಹೋಗುವ ಒಗಟುಗಳಿವೆ, ಪ್ರಶ್ನೆಯಾಗಿ ಕಾಡಿ ಪ್ರಶ್ನೆಯಾಗಿಯೇ ಉಳಿದುಕೊಳ್ಳುವ ಭಾವನೆಗಳಿವೆ, ಜೊತೆಗೆ ಕುಂದಾಪುರ ಕನ್ನಡದ ನವಿರು ಸೊಗಡಿನ ದುಡಿಮೆಯಿದೆ. ಇವೆಲ್ಲಕ್ಕಿಂತಲೂ ಈ ಕಥೆಗಳಲ್ಲಿ ಪ್ರಮುಖವಾಗಿ ಗ್ರಹಿಸಿಕೊಳ್ಳಬಹುದಾದ ಅಂಶವೆಂದರೆ ‘ಪ್ರತಿ ಕಥೆಯಲ್ಲೂ ವಿರುದ್ಧಭಾವಗಳು ಒಟ್ಟೊಟ್ಟಿಗೆ […]

ಮೊದಲು ಓದುಗನಾಗು

ಕವಿ ನಾಗರಾಜರವರ ಆದರ್ಶದ ಬೆನ್ನು ಹತ್ತಿ : ಪಾರ್ಥಸಾರಥಿ ನರಸಿಂಗರಾವ್

ಪುಸ್ತಕ ಪರಿಚಯ : ಆದರ್ಶದ ಬೆನ್ನು ಹತ್ತಿ….. ಪ್ರಕಾಶನ : ಕವಿಪ್ರಕಾಶನ, ಶಿವಮೊಗ್ಗ. 'ನಾನು ದೊಡ್ಡವನಾದ ಮೇಲೆ ಪೋಸ್ಟ್ ಕಾರ್ಡ್ ಮಾರುತ್ತೀನಿ" ಒಬ್ಬ ಪುಟ್ಟ ಬಾಲಕನ ಕನಸು ಆ ಕನಸಿಗೆ ಇರುವ ಪ್ರಾಮುಖ್ಯತೆ ಅರ್ಥವಾಗಿಯೋ ಏನೊ ದೇವರು ತಥಾಸ್ತು ಅನ್ನುತ್ತಾನೆ. ಆ ಬಾಲಕ ಯುವಕನಾದಾಗ ಪೋಸ್ಟ್ ಆಫೀಸಿನಲ್ಲಿಯೇ ಕೆಲಸವು ದೊರಕುತ್ತದೆ. ಬಹುಷಃ ಅಲ್ಲಿಯೇ ಮುಂದುವರೆಯುತ್ತಿದ್ದಲ್ಲಿ , ಪ್ರಾಮಾಣಿಕವಾಗಿ ದುಡಿಯುತ್ತ. ತನ್ನ ಕೆಲಸದಲ್ಲಿಯೆ ತೃಪ್ತಿ ಕಾಣುತ್ತ ಒಬ್ಬ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತನಾಗಿ ಶಾಂತ ಜೀವನ ನಡೆಸುತ್ತ ಇದ್ದನೇನೊ ಅವನು. ಆದರೆ ವಿಧಿಬಿಡಬೇಕಲ್ಲ, […]

ಮೊದಲು ಓದುಗನಾಗು

ವೀರ್ ಸಂತೋಷ್ ರವರ ರೆಡಿ ಟು ಫಾಲ್ ಇನ್ ಲವ್: ಶರತ್ ಚಕ್ರವರ್ತಿ

ಪುಸ್ತಕ ವಿಮರ್ಶೆ ಬರೆಯುವ ನನ್ನ ಮೊದಲ ಪ್ರಯತ್ನ,   ಪುಸ್ತಕ: ರೆಡಿ ಟು ಪಾಲ್ ಇನ್ ಲವ್ (ಇಂಗ್ಲೀಷ್) ಬರಹಗಾರ: ವೀರ್ ಸಂತೋಷ್.   ಪ್ರಿಯ ಸಂತೋಷ್ (Veer Santhosh)   ಸಿಡ್ನಿ ಶೆಲ್ಡಾನ್ ನಂತಹ ಮಹಾನ್ ಕಾದಂಬರಿಕಾರನ ಪುಸ್ತಕಗಳು ನನಗೆ ಉಡುಗೊರೆಗಳಾಗಿ ಬಂದಾಗ ಅವುಗಳನ್ನು ಸೀದಾ ನನ್ನ ಕಪಾಟಿನಲ್ಲಿ ತುರುಕಿ, ಮತ್ತೆಂದು ತೆರೆದು ನೋಡುವ ಉತ್ಸಾಹವನ್ನೇ ತೋರದ ನಾನು ನಿನ್ನ ಪುಸ್ತಕ 'Ready to fall in love' ಅನ್ನು ಕೊಂಡು ತಂದಿದ್ದೇನೆ. ಸಾಮಾನ್ಯವಾಗಿ ಇಂಗ್ಲೀಷ್ […]

ಮೊದಲು ಓದುಗನಾಗು

ಯು.ಆರ್. ಅನಂತಮೂರ್ತಿಯವರ ಭಾರತೀಪುರ

  ಇತ್ತೀಚಿಗೆ ನಾನು ಓದಿದ ಕಾದಂಬರಿ ಶ್ರೀ ಯು.ಆರ್. ಅನಂತಮೂರ್ತಿರವರ ‘ಭಾರತೀಪುರ’, ಈ ಕಾದಂಬರಿ ಈ ವರ್ಷದ ಕೆ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಪಠ್ಯವಸ್ತುವೂ ಆಗಿದೆ ಗೆಳೆಯರೊಬ್ಬರ ಸಲಹೆಯಂತೆ ಈ ಕಾದಂಬರಿಯನ್ನು ಓದಿದೆ. ಕಾದಂಬರಿಯ ನಾಯಕ ‘ಜಗನ್ನಾಥ ಭಾರತೀಪುರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನಾಗಿದ್ದು, ಉನ್ನತ ಶಿಕ್ಷಣವನ್ನು ‘ಇಂಗ್ಲೆಂಡಿನಲ್ಲಿ ಪಡೆದಿರುತ್ತಾನೆ. ಈತ ಇಂಗ್ಲೆಂಡಿನಲ್ಲಿ ‘ಬಂಡಾಯ’ ದ ಬಗ್ಗೆ ಮಾತನಾಡುತ್ತ ಎಲ್ಲರನ್ನೂ ಆಕರ್ಷಿಸಿರುತ್ತಾನೆ. ಆ ವೇಳೆಗೆ ಅವನಿಗೆ ‘ಮಾರ್ಗರೇಟ್’ ಗೆಳತಿಯಾಗಿ ಸಿಗುತ್ತಾಳೆ. ಅತೀ ಶೀಘ್ರದಲ್ಲೆ ಪ್ರೇಯಸಿಯಾಗಿರುತ್ತಾಳೆ. ಜಗನ್ನಾಥನ ಗೆಳೆಯ, ಸದಾಕಾಲ […]

ಮೊದಲು ಓದುಗನಾಗು

ಕಾರ್ನಾಡರ “ಹಯವದನ”

ಮನುಷ್ಯನ ಅಪೂರ್ಣತೆಯ ಬಗೆಗೆ ಆಲೋಚಿಸಲು, ಕಾರ್ನಾಡರ “ಹಯವದನ” ಓದಬೇಕು. ನಾಟಕ ಆರಂಭ ಆಗುವುದು ಗಣೇಶನ ಅಪೂರ್ಣತೆಯ ಉಲ್ಲೇಖನದಿಂದ. ಇಲ್ಲಿ ಕಂಡುಬರುವುದು ಬರೇ ಮೂರು ಮುಖ್ಯ ಪಾತ್ರಗಳು – ಪದ್ಮಿನಿ, ದೇವದತ್ತ ಹಾಗೂ ಕಪಿಲ. ಇಲ್ಲಿ ಅಪೂರ್ಣತೆಯ ಪ್ರತೀಕ ಅನ್ನುವಂತೆ ಹಯವದನನಿದ್ದಾನೆ.  ಇಲ್ಲಿನ ಕಥೆ ಸಾಮಾನ್ಯವಾಗಿ ಗೊತ್ತಿರುವಂತಹದೆ. ಯಾವುದೇ ಕಾರಣಕ್ಕೆ ಇಬ್ಬರು ಮನುಷ್ಯರ ತಲೆ ಅದಲು ಬದಲಾದರೆ, ತಲೆ ಇರುವವನನ್ನು ಅವನ ಹೆಸರಿನಿಂದ ಗುರುತಿಸುತ್ತೇವೆ, ಯಾಕೆಂದರೆ ತಲೆ ಮುಖ್ಯ. ಈ ಸಣ್ಣ ತುಣುಕನ್ನು ಹಿಡಿದುಕೊಂಡು ಕಾರ್ನಾಡರು ತುಂಬಾ ವಿಚಾರ […]

ಮೊದಲು ಓದುಗನಾಗು

ಕಾಡತೊರೆಯ ಜಾಡಿನಲ್ಲಿ ಜೀವನ ಪ್ರೀತಿಯ ಚಿಲುಮೆ…

ಕಡಿದಾಳು ಶಾಮಣ್ಣನವರ ಬಗ್ಗೆ ತೇಜಸ್ವಿಯವರ ಪುಸ್ತಕಗಳಲ್ಲಿ, ಆವಾಗಿವಾಗ ಪತ್ರಿಕೆಗಳಲ್ಲಿ ಓದಿದ್ದೆನಷ್ಟೇ. ಅವರ ಆತ್ಮಕಥೆಯ ಕೆಲವು ಭಾಗಗಳನ್ನು ಮಯೂರ ಮಾಸಪತ್ರಿಕೆಯಲ್ಲಿ ಓದಿ ಆಸಕ್ತಗೊಂಡಿದ್ದೆನಾದರೂ ಪುಸ್ತಕ ಖರೀದಿಸಿರಲಿಲ್ಲ. ಕುಪ್ಪಳ್ಳಿಯಲ್ಲಿ ‘ನಾವು ನಮ್ಮಲ್ಲಿ’ ತಂಡ ಏರ್ಪಡಿಸಿದ್ದ ‘ಕರ್ನಾಟಕ ಕಂಡ ಚಳುವಳಿಗಳು’ ಸಂವಾದಗೋಷ್ಠಿಯಲ್ಲಿ ಕಡಿದಾಳು ಶಾಮಣ್ಣನವರನ್ನು ಮುಖತಃ ಭೇಟಿಯಾದಾಗ ಅವರಲ್ಲಿದ್ದ ಲವಲವಿಕೆ, ಉತ್ಸಾಹ ಕಂಡು ಅಚ್ಚರಿಪಟ್ಟಿದ್ದೆ. ಚಳುವಳಿಗಳ ಬಗ್ಗೆ ಬಹುತೇಕರಲ್ಲಿ ಸಿನಿಕತೆಯ ಭಾವವೇ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಯಾವ ನ್ಯಾಯಯುತ ಹೋರಾಟವೂ ವ್ಯರ್ಥವಾಗುವುದಿಲ್ಲ ಎಂಬ ಶಾಮಣ್ಣನವರ ಮನಸ್ಥಿತಿ ಮೆಚ್ಚುಗೆಯಾಗಿತ್ತು. ಅವರ ಜೀವನಗಾಥೆಯನ್ನು ಸಂಪೂರ್ಣ […]