ಹೊಸ ತನವನ್ನು ಹೇಳುವ ಮಕ್ಕಳೇ ಬರೆದ ಪುಸ್ತಕ: ಅಕ್ಕಿಮಂಗಲ ಮಂಜುನಾಥ

ಈಗ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿದು ತಾತ್ಸಾರದಿಂದ ನೋಡುವವರೇ ಹೆಚ್ಚು. ಆದರೆ ಅಲ್ಲೊಂದು ಇಲ್ಲೊಂದು ಸರ್ಕಾರಿ ಶಾಲೆಗಳು ಬೆಳೆಯುತ್ತಿರುವ ರೀತಿ ಮತ್ತು ಕ್ರಿಯಾಶೀಲತೆ ಗಮನಿಸಿದರೆ, ಈ ಶಾಲೆಗಳ ಮುಂದೆ ಲಕ್ಷಾಂತರ ಡೊನೇಶನ್ ದೋಚುವ ಕಾನ್ವೆಂಟುಗಳು ಏನೇನೂ ಅಲ್ಲ ಎನ್ನಿಸುತ್ತದೆ. ಅಂತಹ ಒಂದು ಸರ್ಕಾರಿ ಶಾಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಢ್ಲಘಟ್ಟ ತಾಲೂಕಿನ ಪುಟ್ಟ ಹಳ್ಳಿ ಕನ್ನಮಂಗಲದಲ್ಲಿದೆ ಎಂದರೆ ಎಂಥವರಿಗೂ ಆಶ್ಚರ್ಯಕರವಾಗಿ ಕಾಣಬಹುದು.

ಈ ಶಾಲೆಯ ಅಧ್ಯಾಪಕ ವೃಂದ  ವ್ಯವಸ್ಥಿತವಾಗಿ ವಿದ್ಯೆ ಕಲಿಸುವುದರ ಜೊತೆಗೆ ಕ್ರೀಡೆ ಮತ್ತು ಕಲೆಯನ್ನು ವಿಶೇಷವಾಗಿ ಮಕ್ಕಳಿಗೆ ಕಲಿಸುತ್ತ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದ್ದಾರೆ. ರಾಜ್ಯದಲ್ಲಿ ಬೆರಳೆತ್ತಿ ಗುರುತಿಸುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ಊರಿನ ಜನರ ಸಹಕಾರದಿಂದ ಮಹತ್ತರವಾದ ಕೆಲಸ ಮಾಡುತ್ತಿರುವ ಇಲ್ಲಿನ ಶಿಕ್ಷಕ ವೃಂದಕ್ಕೆ ಈ ಭಾಗದ ಜನ ಕೃತಜ್ಞತೆ ಅರ್ಪಿಸಲೇ ಬೇಕು.

p_20170203_213134

 

p_20170203_213210

p_20170204_185928
ಈ ಶಾಲೆಯಲ್ಲಿ ಸುಮಾರು ಆರು ವರ್ಷಗಳಿಂದ ಸತತವಾಗಿ ವರ್ಷಕ್ಕೊಂದರಂತೆ , ಅದೇ ಶಾಲೆಯ ಮಕ್ಕಳಿಂದ ಕತೆ,ಕವನ,ವಿಮರ್ಶೆ, ವಿಚಾರ, ಚಿತ್ರ ಕಲೆ…ಹೀಗೆ ಎಲ್ಲಾ ವಿಷಯಗಳನ್ನೊಳಗೊಂಡ ಮುದ್ದಾದ ಪುಸ್ತಕಗಳನ್ನು ನೀಡುತ್ತಾ ಬಂದಿದ್ದಾರೆ.

ಹಾಗೆಯೇ ಈ ವರ್ಷವೂ ಸಹ "ಶಾಮಂತಿ-6" ಎಂಬ ಹೆಸರಿನಲ್ಲಿ, ಈ ಶಾಲೆಯ ಮಾದರಿ ಶಿಕ್ಷಕರಾದ ಶ್ರೀ ಎಸ್. ಕಲಾದರ್ ರವರು ಸಂಪಾದಿಸಿ ಪ್ರಕಟಿಸಿದ್ದಾರೆ.
  
ನೋಡಿದೊಡನೆ ಸಂತೋಷವಾಗುವಷ್ಟು ಸೊಗಸಾಗಿರುವ ಈ ಪುಸ್ತಕದ ತುಂಬ ಮುದ್ದು ಮಕ್ಕಳ ಆಟ,ಪಾಠ,ನೋವು, ನಲಿವು ಮತ್ತು ಕಲೆಯ ಅನಾವರಣವಾಗಿದೆ. ಯಾವುದೇ ಒಂದು ಜಾಗದಲ್ಲಿಯೂ ಸಹ ಕೃತಕತೆ ಎಂಬುದು ಸೋಕಿಲ್ಲ. ತಮ್ಮ ಹೃದಯದಿಂದ ನೇರವಾಗಿ, ಮನಮುಟ್ಟುವಂತೆ ಬರೆದಿರುವ ಮಕ್ಕಳ ಮನಸ್ಸುಗಳನ್ನು, ಅವರದೇ ಕೈಬರಹದ ಲಿಪಿಯಲ್ಲಿ ಪ್ರಕಟಿಸಲಾಗಿದೆ. ಪುಸ್ತಕದ ಜೊತೆಗೆ, ಬರೆದ ಮಕ್ಕಳ ದ್ವನಿಯಲ್ಲೇ ಅವರ ಬರಹಗಳನ್ನೂ ಮುದ್ರಿಸಿರುವ ಆಡಿಯೋ ಸಿ.ಡಿ. ಯನ್ನೂ ತಂದಿದ್ದಾರೆ. ಮಕ್ಕಳಷ್ಟೇ ಅಲ್ಲದೆ ಹಿರಿಯರೂ ಓದಿ ,ಕೇಳಿ, ಆನಂದಿಸಿ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವ ಹಾಗಿದೆ. ಇಂತಹ ಪುಸ್ತಕವನ್ನು ಆದರದಿಂದ ಬರಮಾಡಿಕೊಂಡು ಆಶೀರ್ವದಿಸೋಣ.
-ಅಕ್ಕಿಮಂಗಲ ಮಂಜುನಾಥ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x