‘ಅವಳ ನೆನಪಲ್ಲೆ’ ಪುಸ್ತಕ ಪರಿಚಯ: ಸೂಗೂರಯ್ಯ.ಎಸ್.ಹಿರೇಮಠ

sugurayya-hiremath
ಆತ್ಮೀಯ ಹಿರಿಯರಾದ ಶ್ರೀಯುತ ಪ್ರಕಾಶ ಡಂಗಿ ಯವರ ಕವನ ಸಂಕಲನ "ಅವಳ ನೆನಪಲ್ಲೆ" ಕುರಿತು ನಿಮ್ಮೊಡನೆ ಒಂದಷ್ಟು ಅನಿಸಿಕೆಗಳು ಹಂಚಿಕೊಳ್ಳುವ ಮನಸಾಗಿದೆ… 

ಪುಸ್ತಕಬಿಡುಗಡೆಯ ದಿನ ಅದೆಷ್ಟು ಚಂದದ ಕಾರ್ಯಕ್ರಮವಿತ್ತೆಂದರೆ ಶ್ರೀಯುತ ಕುಂ.ವೀ ಸರ್ ರವರ ರುಚಿಕಟ್ಟಾದ ಹಾಸ್ಯಮಯ ಮಾತುಗಳು ಹಾಗೆಯೇ ಕವಯಿತ್ರಿ ಮಮತಾ ಅರಸಿಕೇರೆ  ಮೇಡಂ ಅವರು ಕೃತಿ ಪರಿಚಯ ಮಾಡಿಕೊಟ್ಟರು.

ಕವನ ಸಂಕಲನದ ಶಿರ್ಷೀಕೆಯೆ ಮನಸೆಳೆಯುವಂತಿದೆ. ನೋಡಿದ ತಕ್ಷಣವೆ ಇದೊಂದು ಪ್ರೇಮ ಕವಿತೆಗಳ ಸಂಕಲನವೆನ್ನುವುದು ಸರಿ. ಅವಳ ನೆನಪನ್ನು ಸುಂದರ ಭಾವಗಳನ್ನು ಶ್ರೀಯುತ ಪ್ರಕಾಶ ಡಂಗಿಯವರು ತುಂಬಾ ಭಾವನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ…

 ತುತ್ತಿಗೂ ಬರಾ ಇಲ್ಲ
 ಮುತ್ತಿಗೂ ಬರಾ ಇಲ್ಲ
 ಮೆತ್ತಗ ಬಾರಾ ನನಗೆಳತಿ
 ಮೆತ್ತಗ ಬಾರಾ ನನಗೆಳತಿ
 ನಿನ್ನ ದಾರಿಗಿ ಮೆತ್ತನ ಮಣ್ಣ ಹಾಸಿನಿ… 
ಎನ್ನುತ್ತಾ ಬೇಂದ್ರೆಯವರ "ನಾನು ಬಡವಿ ಆತ ಬಡವ" ಎಬ್ನುವ ಸಾಲುಗಳನ್ನ ನೆನಪಿಸುತ್ತಾರೆ ಕವಿ.

ಹಾಗೆಯೇ ಮೌನ ಎಂಬ ಕವಿತೆಯಲ್ಲಿ
'ಇನ್ನೆಷ್ಟು ದಾರಿ ನಡೆಯಬೇಕಿದೆ ಜೀವನದ ಪಯಣದಲ್ಲಿ
ಎಷ್ಟೋ ಕಠಿಣ ಕಾರಣಗಳಿದ್ದರೂ
ಮರೆಯಬಹುದು ಪ್ರೀತಿ ಪ್ರಣಯದಲ್ಲಿ' ಹೀಗೆ ಪ್ರೀತಿಯೇ ಜೀವನದ ಮುಖ್ಯ ಆಸ್ತಿ ಅದೆ ಆತ್ಮತೃಪ್ತಿಯೆಂದು ಹೇಳುತ್ತಾರೆ.
ಪ್ರೀತಿ ಇದ್ದರೆ ಏನನ್ನಾದರೂ ಸಹಿಸಬಹುದೆಂದು ತುಂಬಾ ಮಾರ್ಮಿಕವಾಗಿ ಹೇಳುತ್ತಾರೆ.

ಹಾಗೆಯೆ ಕಾಡದಿರು ಎಂಬ ಕವಿತೆಯಲ್ಲಿ ಚಂದ್ರನಿಗೆ ನಾಚಿಕೆಯಾದ ಭಾವವನ್ನು ಅತ್ಯಂತ ಸುಂದರವಾಗಿ ಕವಿ ಪ್ರಕಾಶ ಡಂಗಿಯವರು ಕಟ್ಟಿಕೊಟ್ಟಿದ್ದಾರೆ..
"ನೋಡಿ ನಾಚಿ ಕರಗಿ
ಕತ್ತಲೆಯ ಮರೆಗೆ ಒರಗಿ
ಆಗಿರುವ ಅರ್ಧಚಂದಿರ" ಇಲ್ಲಿ ಅವಳಿಂದ ಚಂದ್ರನೆ ನಾಚಿ ಮರೆಯಾದನೆಂದು ಕವಿ ಕಲ್ಪಿಸಿಕೊಳ್ಳುತ್ತಾರೆ.

"ಮುಸ್ಸಂಜೆಯ ಸಮಯದಲಿ
ಹುಣ್ಣಿಮೆಯ ಬೆಳಕಿನಲಿ
ಕಡಲ ತೀರದ ಬೆಳಕಿನಲಿ
ನೀ ಇರುವೆ ನನ್ನ 
ನೆನಪುಗಳ ನೆರಳಿನಲ್ಲಿ

ಆಸೆಗಳ ಅಂಗಳದಿ
ನನ್ನವಳು ಬಂದಾಗ
ಮೌನಗಳು ಮಾತಾಡಿದವು….

ಇಂತಹ  ತುಂಬು ಭಾವಗಳನ್ನೆ ಕವಿತೆಯಾಗಿ ಕವಿ ಹೊಸೆದಿದ್ದಾರೆ.

ನೀ ಇರದ ರಾತ್ರಿ ಎಂಬ ಕವಿತೆಯಲ್ಲಿ 
"ನೀ ಇರದ ರಾತ್ರಿ
ಏನು ಬರೆಯಲಿ ನಾ ಕವಿತೆ
ಬೆಳಗದ ಹಣತೆಯ ಮುಂದೆ
ಕತ್ತಲೆಯ ಚಿಂತೆ" 

ಅವಳೆ ಬರವಣಿಗೆಯ ಬೆಳಕು ಎನ್ನುತ್ತಾ ಕತ್ತಲು ಸುತ್ತಿದೆ ನೀ ಇರದೆ ಎನ್ನುತ್ತಾರೆ.

ಆತ್ಮೀಯ ಮೃದು ಮನಸಿನ ದಂತವೈದ್ಯರಾದ ಬಾಗಲಕೋಟೆಯವರಾದ ಶ್ರೀಯುತ ಪ್ರಕಾಶ ಡಂಗಿಯವರು ತಮ್ಮ ಮೊದಲ ಕವನ ಸಂಕಲನದಲ್ಲಿ  ತುಂಬಾ ಆಪ್ತಭಾವಗಳನ್ನ ಒಂದೆಡೆ ಸೇರಿಸಿ "ಅವಳ ನೆನಪನ್ನು" ಜೀವಂತವಾಗಿರಿಸಿದ್ದಾರೆ.
ತಮ್ಮದೆ ಆದ ವಿಶ್ವಖುಷಿ ಪ್ರಕಾಶನದಿಂದ ಕೃತಿಯನ್ನು ಹೊರತಂದಿರುತ್ತಾರೆ.

ಸೂಗೂರಯ್ಯ.ಎಸ್.ಹಿರೇಮಠ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Suresh Rajamane
Suresh Rajamane
7 years ago

ಕವನಸಂಕಲನದ ಜೀವದ್ವನಿಯ ಕವಿತೆಗಳು ಮತ್ತು ಪ್ರೀತಿಯ ಗುರುತು ಹಾಗು ನೆನಪೆಂಬ ಬಳ್ಳಿಯ ಬದುಕಿನ ಕುರಿತು

ಚಂದ ವಿವರಿಸಿದ್ದೀರಿ. 

Sugurayya S Hiremath
Sugurayya S Hiremath
7 years ago

ಧನ್ಯವಾದಗಳು ರಾಜಮಾನೆ ಸರ್

Shashikiran
Shashikiran
6 years ago

Nice writeup Suguresh????????

ಮೌನಿ
ಮೌನಿ
6 years ago

ಚನ್ನಾಗಿ ವಿವರಣೆ ಮಾಡಿದ್ದೀರಾ …. ಮುಂದುವರಿಯಲಿ

4
0
Would love your thoughts, please comment.x
()
x