ಪ್ರತಿಮೆಗಳ ಮೂಲಕ ಹೊಸ ಲೋಕಕ್ಕೆ ಸವಾರಿ ಹೊರಟ ಕವಿತೆಗಳು: ಶ್ರೀದೇವಿ ಕೆರೆಮನೆ
ನಿನ್ನ ಕವನಗಳು ಓದುಗರನ್ನು ಬೆಚ್ಚಿ ಬೀಳಿಸದಿದ್ದರೆ ಅವುಗಳಿಂದೇನು ಪ್ರಯೋಜನ ಬೋದಿಲೇರ್ ಹೇಳಿದ ಮಾತುಗಳನ್ನು ನೆನಪಿಸಲೆಂದೇ ಹೊಸದೊಂದು ಕವನ ಸಂಕಲನ ಹೊರಬಂದಿದೆ. ನಾನು ಪದೇ ಪದೇ ಬೋದಿಲೇರ್ ಎಂದೇ ಕರೆಯುವ ಗೆಳೆಯ ವಿ. ಆರ್ ಕಾರ್ಪೆಂಟರ್ ಕವನ ಸಂಕಲನ ಹೊರಬಂದಿದೆ. ಕವನ ಸಂಕಲನದ ಮೊದಲ ಓದುಗಳಾಗಿ ನಾನೀಗಾಗಲೇ ನನ್ನ ಅನುಭವವನ್ನು ದಾಖಲಿಸಿದ್ದಾಗ್ಯೂ ಕೂಡ ಕಂಪ್ಯೂಟರ್ ಪರದೆಯಲ್ಲಿ ಇಣುಕಿಣುಕಿ ಓದುವುದಕ್ಕೂ, ಕೈಯ್ಯಲ್ಲಿಯೇ ಪುಸ್ತಕ ಹಿಡಿದು ಓದುವ ಸುಖಕ್ಕೂ ಇರುವ ವತ್ಯಾಸ ಅಗಾಧವಾದದ್ದು. ಹೀಗಾಗಿ ಈಗಿನ ಅನುಭವಗಳು ಮತ್ತೂ ಭಿನ್ನವಾಗಿಯೇ ಇದೆ. … Read more