ನಿಸರ್ಗದೊಡೆಯನ ನಿತ್ಯದರ್ಶನದ ವಿಶ್ವರೂಪ: ಜಹಾನ್ ಆರಾ ಕೋಳೂರು, ಕುಷ್ಟಗಿ
“ಪ್ರಯತ್ನಂ ಸರ್ವಸಿದ್ದಿ ಸಾಧನಂ ದೈರ್ಯಂ ಸರ್ವೇಕ್ಷಣ ಆಯುಧ “ಎಂಬ ಭಗವದ್ಗೀತೆಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸೂರ್ಯನನ್ನೇ ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ಬೆಳಗು ಕವಿತೆಗಳನ್ನು ಬರೆದ ಕವಿಗೆ ಅಭಿನಂದನೆಗಳು. ದಿನನಿತ್ಯ ಫೇಸ್ಬುಕ್ನಲ್ಲಿ ವಾಟ್ಸಪ್ ನಲ್ಲಿ ಬರುತ್ತಿದ್ದಂತಹ ಬೆಳಗು ಕವಿತೆಗಳು ಇಂದು ಸಂಕಲನವಾಗಿ ‘ವಿಶ್ವಾಸದ ಹೆಜ್ಜೆಗಳು’ ಎಂಬ ಶಿರೋನಾಮೆಯಲ್ಲಿ ಬಿಡುಗಡೆಗೊಂಡಿದೆ. ಅಂತಹ ಸುಂದರ ಕವಿತೆಗಳನ್ನು ಓದುವುದೇ ಒಂದು ಹರ್ಷ. ಹಾಗೂ ಅವುಗಳ ಬಗ್ಗೆ ಹೇಳುವುದು ಅಥವಾ ನಾಲ್ಕು ಜನರ ಮುಂದೆ ತೆರೆದಿಡುವುದು ನಿಜಕ್ಕೂ ಒಂದು ಖುಷಿಯೇ ಹೌದು. ಸೂರ್ಯನ ಹೃದಯಸ್ಪರ್ಶಿ ಬೆಳಗು, ಮಿಹಿರನ … Read more