ಎರಡು ಸಾವಿರ ವರ್ಷಗಳ ಹಿಂದಿನ ಸಂಗಂ ಸಾಹಿತ್ಯ ಪುರನಾನೂರು
ತಮಿಳು ಮೂಲ: ಪ್ರೊ. ಸಾಲಮನ್ ಪಾಪಯ್ಯಅನುವಾದ: ಡಾ. ಮಲರ್ ವಿಳಿ ಕೆಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಹಾಡು- ೧( ಧರ್ಮತಪ್ಪದ ರಾಜನ ಆಳ್ವಿಕೆ) ರಾಜನೇಬಾನ ಮಿತಿಯವನೇ! ದೇವನೇ!ನಿನ್ನ ಹೊಗಳದವರನ್ನು,ಅವರ ತಪ್ಪುಗಳನ್ನು,ನೀ ಸಹಿಸಿಕೊಳ್ಳುವೆ.ಅವರ ತಪ್ಪು,ಸಹಿಸಿಕೊಳ್ಳತಕ್ಕದ್ದಲ್ಲಎಂದು ಕಂಡರೆ,ಅವರನ್ನು ಅಳಿಸುವುದು ಹೇಗೆಂದುಯೋಚಿಸುವ ಜ್ಞಾನದಿ ನೀ ಆಗಸದಂತೆ ವಿಶಾಲವಾದವನು. ಹಗೆಗಳ ಅಳಿಸುವ ಸಾಮರ್ಥ್ಯದಲ್ಲಿನೀ ಆಗಸವ ತಾಕಿ ಬೀಸುವಗಾಳಿಯಂತಹವನು.ಅವರನ್ನು ಅಳಿಸುವುದರಲ್ಲಿಗಾಳಿಯೊಡನೆ ಬರುವ ಬೆಂಕಿಯಂತಹವನು. ಎಲ್ಲರಿಗೂ ಒಳಿತನ್ನುಂಟು ಮಾಡುವುದರಲ್ಲಿ ನೀನುನೀರಿನಂತಹವನು.ಬೆಳಗಿನ ಹೊತ್ತು ಪೂರ್ವದಲಿನಿನ್ನ ಕಡಲಲಿ (ಉದಯಿಸುವ)ಕಾಣುವ ಸೂರ್ಯಸಂಜೆಯಲಿ ಬೆಳ್ಳನೆಯ ಅಲೆಗಳಿರುವನಿನ್ನ ಪಶ್ಚಿಮ ಕಡಲಲಿ ಮುಳುಗುವುದು.ಇವುಗಳ ನಡುವೆ ಸದಾಹೊಸ ಹೊಸ … Read more