ಹಿಂದಿ ಚಿತ್ರಕಥಾ ಸಂವಾದದಲ್ಲಿ ಮಾಹಿರರಾಗಿದ್ದ ಕಾದರ್ ಖಾನ್ !: ಎಚ್ಚಾರೆಲ್

ಕಾದರ್ ಖಾನ್ : (೨೨, ಅಕ್ಟೋಬರ್ ೧೯೩೭-೩೧, ಡಿಸೆಂಬರ್, ೨೦೧೮) ನಿಧನರಾದಾಗ ಅವರ ವಯಸ್ಸು : ೮೧ ವರ್ಷ
ವಾಲಿದ್ ಹೆಸರು, : ಅಬ್ದುಲ್ ರೆಹ್ ಮಾನ್ ಖಾನ್,
ವಾಲಿದಾರ ಹೆಸರು, ಇಕ್ಬಾಲ್ ಬೇಗಂ
ಹೆಂಡತಿಯ ಹೆಸರು : ಅಜ್ರಾ ಖಾನ್
ಪಸ್ಟೂನ್ ಟ್ರೈಬ್, ಸುನ್ನಿ ಜಾತಿಗೆ ಸೇರಿದವರು.
ಓದಿದ ಕಾಲೇಜ್ : ಇಸ್ಮೇಲ್ ಯೂಸುಫ್ ಕಾಲೇಜ್, ಬೊಂಬಾಯಿ.
ಆಗಿನ ಕಾಲದ ಸಿವಿಲ್ ಇಂಜಿನಿಯರಿಂಗ್ ಶಾಖೆಯಲ್ಲಿ ಸ್ನಾತಕೋತ್ತರ ಪದವೀಧರ ಬೊಂಬಾಯಿನ ಸಾಬು ಸಿದ್ದಿಕಿ, ಇಂಜಿನಿಯರಿಂದ ಕಾಲೇಜ್, ಸಿವಿಲ್ ಇಂಜಿನಿಯರಿಂಗ ಶಾಖೆಯಲ್ಲಿ ಪ್ರೊಫೆಸರ್, (೧೯೭೦-೭೫ ರವರೆಗೆ)
ಹಫೀಜ್-ಎ-ಖುರಾನ್ ಎಂದು ಹೆಸರುಗಳಿಸಿದ್ದರು. (ಕುರಾನ್ ಮಹಾಗ್ರಂಥವನ್ನು ಕಂಠಪಾಠ ಮಾಡಿದ್ದರು)

ಅಫ್ಘಾನಿಸ್ತಾನ್ ನಿಂದ ಬೊಂಬಾಯಿಗೆ ವಲಸೆ ಬಂದರು :

ಅಫ್ಘಾನಿಸ್ತಾನ್ ನಿಂದ ಜನಾಬ್ ಅಬ್ದುಲ್ ರೆಹ್ಮಾನ್ ಖಾನ್ ಮತ್ತು ಇಕ್ಬಾಲ್ ಬೇಗಂ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಬೊಂಬಾಯಿಗೆ ಬಂದರು. ಆ ಮಗುವೇ ಕಾದರ್. ಹಿಂದೆ ಕಾದರ್ ಹುಟ್ಟುವ ಮೊದಲ ಮೂರು ಜನ ಮಕ್ಕಳು ಕಾಬುಲ್ ನಲ್ಲೆ ತೀರಿಕೊಂಡಿದ್ದರು. ಹಾಗಾಗಿ ಇಕ್ ಬಾಲ್ ಬೇಗಂಗೆ ಕಾಬುಲ್ ನ ಪರಿಸರದಲ್ಲಿ ಮಕ್ಕಳು ಬದುಕುಳಿಯುವುದಿಲ್ಲವೆಂಬ ಚಿಂತೆ ಮನೆಮಾಡಿತ್ತು, ಬೊಂಬಾಯಿನಲ್ಲಿ ಪರಿಚಯಸ್ತರ್ಯಾರೂ ಇರಲಿಲ್ಲ. ಬಡತನ. ಬೊಂಬಾಯಿಯ ಕೊಳೆಗೇರಿ, ಧಾರಾವಿಯ ಕಾಮಾಟಿಪುರದಲ್ಲಿ ಮೂರನೆಯ ಅಂತಸ್ತಿನಲ್ಲಿದ್ದ ಚಾಲ್ ಒಂದನ್ನು ಹುಡುಕಿಕೊಂಡರು. ಮಗುವನ್ನು ಡೊಂಗ್ರಿಯ ಬಳಿಯ ಮಸೀದಿಯೊಂದರ ಮುಂದೆ ಕುಳಿತು ಭಿಕ್ಷೆ ಬೇಡಲು ಕಳಿಸುತ್ತಿದ್ದರು. ದಿನಕ್ಕೆ ೩-೪ ರೂಪಾಯಿ ದೊರಕುತ್ತಿತ್ತು. ಇಕ್ ಬಾಲ್ ಬೇಗಂ ಸಹಿತ ಚಿಕ್ಕ-ಪುಟ್ಟ ಕೆಲಸಮಾಡಿ ಪರಿವಾರದ ಜೀವನನ್ನು ನಡೆಸಿಕೊಂಡು ಹೋಗುತ್ತಿದ್ದರು.

ಕಾದರ್ ಖಾನ್ ತಂದೆ, ಅಬ್ದುಲ್ ರೆಹ್ ಮಾನ್ ಖಾನ್ ರಿಗೆ ಮನೆಯನ್ನು ತೂಗಿಸಿಕೊಂಡು ಹೋಗಲು ಆಗುತ್ತಿರಲ್ಲ. ಕುಡಿದು ಬಂದು ಹೆಂಡತಿ ಮಗನನ್ನು ಹೊಡೆಯುತ್ತಿದ್ದರು. ಎಷ್ಟೋ ದಿನ ತಾಯಿ ಮಗ ಉಪವಾಸದಿಂದಿರುತ್ತಿದ್ದರು. ಪ್ರತಿದಿನವೂ ಗಂಡ-ಹೆಂಡತಿ ಜಗಳವಾಡುತ್ತಿದ್ದರು. ಕೊನೆಗೆ ‘ತಲಾಕ್’ ಮಾಡಿಕೊಂಡರು. ಇದಾದ ನಂತರ ಧಾರಾವಿಯಂತಹ ಪರಿಸರದಲ್ಲಿ ಒಬ್ಬಪ್ರಾಯದ ಹೆಣ್ಣುಮಗಳು ಚಿಕ್ಕ ಮಗನೊಂದಿಗೆ ವಾಸಿಸುವುದು ಅಪಾಯಕರವೆಂದು ಮನಗಂಡ ಮನೆಯ ಹಿರಿಯರು, ಆಕೆಗೆ ಮರುಮದುವೆ ಮಾಡಿದರು. ಆದರೆ ಮಲ-ಗಂಡನೂ ಹಿಂದಿನವನ ತರಹ ಕ್ರೂರಿಯಾಗಿ ನಡೆದುಕೊಳ್ಳುತ್ತಿದ್ದನು. ಹಾಗಾಗಿ ಕಾದರ್ ಕಾಲೇಜಿಗೆ ಹೋಗುವ ವಯಸ್ಸಾದಮೇಲೂ, ರಾತ್ರಿಹೊತ್ತು ಮನೆಯಲ್ಲಿ ವಾಸಿಸುವುದು ಅಸಂಭವವಾಗತೊಡಗಿತು. ಈ ಕಷ್ಟ ಪರಿಸ್ಥಿತಿಯನ್ನು ಕಾಲೇಜಿನ ಪ್ರಿನ್ಸಿಪಾಲರ ಮುಂದೆ ಅಮ್ಮ-ಮಗ ಹೇಳಿಕೊಂಡಾಗ, ಅವರು ಕಾಲೇಜಿನ ಸ್ಟಾಫ್ ಕ್ವಾರ್ಟರ್ಸ್ ನ ಕೋಣೆಯೊಂದರಲ್ಲಿ ಒಂದು ಖಟಿಯ ಹಾಕಿಕೊಟ್ಟು, ಮಲಗಲು ನೆರವಾದರು. ಹೀಗೆ, ಬಹಳ ಸಮಯ ಕಾದರ್ ಖಾನ್ ಕಾಲೇಜಿನ ಸ್ಟಾಫ್ ಕ್ವಾರ್ಟರ್ಸ್ ನಲ್ಲೇ ಮಲಗಿ ಕಾಲಹಾಕಿದರು. ಅತಿಯಾದ ಬಡತನ, ಅಲ್ಲಲ್ಲಿ ವೇಶ್ಯಾ ವಾಟಿಕೆಗಳು ಕಣ್ಣಿಗೆ ಬೀಳುತ್ತಿದ್ದವು. ಸುತ್ತಲೂ ಚಿಕ್ಕಪುಟ್ಟ ಬಟ್ಟೆ ಗಿರಣಿಗಳಿಗೆ ಬೇಕಾದ ವಸ್ತುಗಳನ್ನು ತಯಾರಿಸುವ ವರ್ಕ್ಷಾಪ್ ಗಳಿದ್ದವು. ಸುತ್ತಲೂ ಕೊಳಕು, ತ್ಯಾಜ್ಯವಸ್ತುಗಳ ವಿಲೇವಾರಿಗೆ ತಕ್ಕ ವ್ಯವಸ್ಥೆಯಿಲ್ಲ. “ಇಂತಹ ಏಷಿಯಾದ ಅತ್ಯಂತ ಅಪರಾಧಗಳ ಜಗತ್ತಿನ ಕೆಟ್ಟ ಪರಿಸರದಲ್ಲಿ ಬೆಳೆದರೂ, ತಮ್ಮ ಮಾನ ಸಮ್ಮಾನಗಳನ್ನು ಬಲಿಕೊಡದೆ, ಪರಿಶುದ್ಧ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಹೆಸರುಮಾಡಿದ ಶ್ರೇಯಸ್ಸು ತಮ್ಮ ವಾಲಿದಾರವರಿಗೆ ಸೇರಬೇಕು”, ಎಂದು ಹೆಮ್ಮೆಯಿಂದ ಖಾನ್ ಹೇಳಿಕೊಳ್ಳುತ್ತಾರೆ. ಬಾಲ್ಯದಲ್ಲಿ ತಮ್ಮ ಎರಡನೇ ಅಂತಸ್ತಿನಲ್ಲಿದ್ದ ಚಾಲ್ ನ ಏಣಿಯಲ್ಲಿ ಕೆಳಗೆ ಇಳಿಯುತ್ತಿದ್ದಾಗ ಒಂದು ಕೈ ಅವರ ಬೆನ್ನನ್ನು ಹಿಂದಿನಿಂದ ಸವರುತ್ತಿತ್ತು. ಹಿಂತಿರುಗಿ ನೋಡಿದಾಗ, ಅವರ ವಾಲಿದಾ ಮುಗುಳ್ನಗುತ್ತಾ ಹೇಳಿದರು, “ಬೇಟಾ ನೀನು ಎಲ್ಲಿಗೆ ಹೋಗುತ್ತೀಯೆ, ಎನ್ನುವುದು ನನಗೆ ಗೊತ್ತು. ಪಕ್ಕದ ಫ್ಯಾಕ್ಟರಿಗೆ ಹೋಗಿ ದಿನವೆಲ್ಲಾ ಕೂಲಿಮಾಡಿ ೩ ರೂಪಾಯಿ ಸಂಪಾದಿಸಿತರುವೆ ಅಲ್ಲವೇ ? ಹೀಗೆ ನೀನು ಅಲ್ಲಿಗೆ ಹೋಗುತ್ತಿದ್ದರೆ ನಿನ್ನ ಇಡೀ ಜೀವನದಲ್ಲಿ ೩ ರೂಪಾಯಿಗಳನ್ನಷ್ಟೇ ಸಂಪಾದಿಸುವೆ. ಆದರೆ ಶಾಲೆಗೆ ಹೋಗಿ ಓದಿದೆಯಾದರೆ ಅದರ ನೂರುಪಟ್ಟು ಗಳಿಸಿ ದೊಡ್ಡ ಮನುಷ್ಯನಾಗುವೆ. ಶಾಲೆಗೆ ಸೇರಿಕೋ” ಎಂದು ಪುಸಲಾಯಿಸಿದರು. ಹತ್ತಿರದಲ್ಲೇ ಇದ್ದ ಮುನಿಸಿಪಲ್ ಶಾಲೆಗೆ ಕಾದರ್ ನನ್ನು ಭರ್ತಿಮಾಡಿದರು.

ಕಾದರ್ ಖಾನರ ಜೀವನವನ್ನು ರೂಪಿಸಿದ್ದು ಅವರ ಪ್ರೀತಿಯ ವಾಲಿದರವರು !

ತಾಯಿಯ ಆಜ್ಞೆಯನ್ನು ಶಿರಸಾವಹಿಸಿ ಕಾದರ್ ದಿನ-ರಾತ್ರಿಯೆಲ್ಲಾ ಕಷ್ಟಪಟ್ಟು ಓದಿ, ಮೊದಲು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮ ಪಾಸ್ ಆದರು. ಮುಂದೆ ಅದೇ ವಿಷಯದಲ್ಲಿ ಪದವಿ, ನಂತರ ಸ್ನಾತಕೋತ್ತರ ಪದವಿ ಗಳಿಸಿ, ಕಾಲೇಜಿನ ಒಬ್ಬ ಪ್ರೊಫೆಸರ್ ಆದರು. ಕಿತ್ತು ತಿನ್ನುವ ಬಡತನ, ಮತ್ತು ಅಸಹಾಯಕತೆ, ಅವರ ಬಾಲ್ಯದ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಅವರ ಬಳಿ, ಪೆನ್, ನೋಟ್ ಬುಕ್ ಕೊಳ್ಳಲೂ ಹಣವಿರಲಿಲ್ಲ ಸೀಮೆಸುಣ್ಣದ ಡಬ್ಬವನ್ನು ಖರೀದಿಸಿ ನೆಲದಮೇಲೆ ಬರೆದು ಅಳಿಸಿ ಪ್ರಾಬ್ಲಮ್ ಗಳನ್ನು ಸಾಲ್ವ್ ಮಾಡುತ್ತಿದ್ದರು. ಬೆಳಿಗ್ಯೆ ಹೊತ್ತೇನೋ ಶಾಲೆಯಲ್ಲಿ ಕಾಲ ಕಳೆದುಹೋಗುತ್ತಿತ್ತು. ಆದರೆ ಇಡೀ ರಾತ್ರಿಯನ್ನು ಕಳೆಯುವುದು ಅವರಿಗೊಂದು ದೊಡ್ಡ ಸವಾಲೇ ಆಗಿತ್ತು. ಮನೆಯ ಹತ್ತಿರದಲ್ಲೇ ಇದ್ದ ಯಹೂದಿ ಖಬರಿಸ್ಥಾನ್ ನಲ್ಲಿ ಒಳಗೆ ಹೋಗಿ, ದಿನದಲ್ಲಿ ಆದ ಅನುಭವಗಳನ್ನು ನಾಟಕದ ತರಹ ಜೋರಾಗಿ ಹೇಳುತ್ತಾ ತಮ್ಮ ಮನಸ್ಸಿಗೆ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ನಿದ್ದೆಬರುವಂತಾದರೆ, ಅಲ್ಲೇ ಯಾವುದಾದರೂ ಮರದ ಕೆಳಗೆ ಉರುಳಿಕೊಂಡು ನಿದ್ರಿಸುತ್ತಿದ್ದರು. ಹೀಗೆಯೇ ದಿನಗಳು ಉರುಳುತ್ತಿದ್ದಾಗ ಹಿಂದಿನಿಂದ ಅವರ ಕಣ್ಣಿಗೆ ಯಾರೋ ಬ್ಯಾಟರಿ ಬಿಟ್ಟು ಕರೆಯುತ್ತಿರುವ ಹಾಗೆ ಅನ್ನಿಸಿತು. ಅವರೇ ನಟ, ಅಶ್ರಫ್ ಖಾನ್, ಮೆಹಬೂಬ್ ಖಾನ್ ನಿರ್ಮಿಸಿದ ಕೂಲಿ ಎಂಬ ಚಿತ್ರದಲ್ಲಿ ನಟನಾಗಿ ಕೆಲಸಮಾಡಿದ್ದರು. ಅದೇ ಮೊಹಲ್ಲಾದ ವಾಸಿ. ೧೦ ವರ್ಷದ ಹುಡುಗ ಎಂಥ ಜೋಶ್ ನಿಂದ ಜೋರಾಗಿ ಹೇಳುತ್ತಿದ್ದಾನೆ ಎನ್ನುವುದು ಅವರಿಗೆ ಇಷ್ಟವಾಯಿತು. ‘ಹೀಗೆಯೇ ನಾನು ನಿರ್ದೇಶಿಸುವ ಒಂದು ನಾಟಕದಲ್ಲೂ ಇದೇ ಹುರುಪಿನಿಂದ ನೀನು ಹೇಳಬೇಕಾದ ಲೈನ್ ಗಳನ್ನು ಹೇಳಬೇಕಾಗುತ್ತದೆ. ಕುಬೂಲ್ ಹೈ’ ? ಎಂದು ಕೇಳಿದಾಗ, ಕಾದರ್ ಒಪ್ಪಿಕೊಂಡರು. ಅದೇ ಮೊಹಲ್ಲಾದಲ್ಲೇ ವಾಸವಾಗಿದ್ದ ಅಶ್ರಫ್ ಖಾನ್ ತಮ್ಮ ಮನೆಗೆ ಕರೆದುಕೊಂಡು ಹೋಗಿ ‘ವಾಮಕ್ ಅಝಾರ’ ಎನ್ನುವ ಇಬ್ಬರು ಪ್ರೀತಿಸುವ ಪ್ರೇಮಿಗಳ ಜೀವನವನ್ನು ಪ್ರತಿಬಿಂಬಿಸುವ ನಾಟಕದಲ್ಲಿ ಒಂದು ಪಾತ್ರ ಕೊಡಿಸಿದರು. ಅದರಲ್ಲಿ ಶೆಹಜಾದ ಎಂಬ ಎಳೆಯ ವಯಸ್ಸಿನ ರಾಜಕುಮಾರ ಕೂಗಿ ಏನನ್ನೋ ಹೇಳಬೇಕಾಗುತ್ತದೆ. ಈ ಕಾರ್ಯವನ್ನು ಖಾದರ್ ಖಾನ್ ನಿರೀಕ್ಷಿಸಿದ್ದಕ್ಕಿಂತ ಮಿಗಿಲಾಗಿ ಮಾಡಿ ಎಲ್ಲರನ್ನೂ ಮೆಚ್ಚಿಸಿದರು. ನಾಟಕ ಮುಗಿದಮೇಲೆ ಕಲಾ ಪ್ರೇಮಿಗಳು ಅವರ ಬಳಿಗೆ ಬಂದು ಅವರನ್ನು ಎತ್ತಿಕೊಂಡು ಎಲ್ಲ ಕಡೆ ಓಡಾಡಿದರು. ಈ ಘಟನೆಯಿಂದ ಕಾದರ್ ಖಾನ್ ರ ‘ಮೊರೇಲ್ ಬೂಸ್ಟ್ ‘ಆಯಿತು. ಜನ ಅವರ ಕೆಲಸವನ್ನು ಮೆಚ್ಚಿದ ಬಗೆ, ಹಾಗೂ ಜೀವನದ ಚಿಕ್ಕಪುಟ್ಟ ಯಶಸ್ಸಿನ ಸನ್ನಿವೇಶಗಳು ಕಾದರ್ ನ ಆತ್ಮ ಸ್ಥೈರ್ಯವನ್ನು ಹೆಚ್ಚಿಸಿ ನಾಟಕದಲ್ಲಿ ಪಾತ್ರವಹಿಸುವಷ್ಟು ಸಮಯ ಮನೆಯ ಜಂಜಾಟದಿಂದ ದೂರ ಉಳಿಯುವಂತಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತಿತ್ತು. ನಿಧಾನವಾಗಿ, ಓದು ಮೂಲೆಗೆ ಹೋಗಿ ನಟನೆ, ಚಿತ್ರಕಥೆ ಬರೆಯುವಿಕೆ, ಥಿಯೇಟರ್, ಅವರ ಕನಸಿನ ಆದ್ಯತೆಯ ವಿಷಯಗಳಾದವು. ಟೆಲೆಫೋನ್, ಮೊಬೈಲ್, ಇಂಟರ್ನೆಟ್ ಇಲ್ಲದ ಯುಗದಲ್ಲಿ ಆಕಾಶವಾಣಿಯವರು ಹೊಸಪ್ರತಿಭೆಗಳನ್ನು ರೇಡಿಯೋಕ್ಕೆ ತರಲು ಒಂದು ‘ಜಾಗೃತಿ’ ಎಂಬ ಸ್ಪರ್ಧೆಯನ್ನು ಆಯೋಜಿಸಿದ್ದರು. ಅನೇಕ ಸ್ಪರ್ಧಿಗಳ ಜತೆ ಕಾದ ರ್ ಖಾನ್ ರು ತಮ್ಮ ‘ಲೋಕಲ್ ಟ್ರೇನ್’ ಎಂಬ ಪ್ರಹಸನವನ್ನು ತಮ್ಮಜತೆ ಒಯ್ದಿದ್ದರು. ಗಜೇಂದ್ರ ಬೇಡಿ, ಕಾಮಿನಿ ಕೌಶಲ್, ಮೊದಲಾದ ನಿರ್ಣಾಯಕ ವರ್ಗದವರ ಸಮ್ಮುಖದಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರರಾದರು, ಬೇಡಿಯವರು ಕಾದರ್ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ತಮ್ಮ ಮಗ ನರಿಂದರ್ ‘ಜವಾನಿ ದಿವಾನಿ’ (ರಣಧೀರ್ ಕಪೂರ್, ಮತ್ತು ಜಯಭಾದುರಿ ಅಭಿನಯದ) ಎಂಬ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾನೆ, ಅದಕ್ಕೆ ಸ್ಕ್ರಿಪ್ಟ್ ಬರೆದುಕೊಡುವೆಯಾ ? ಎಂದು ಪ್ರಶ್ನಿಸಿ, ೩ ತಿಂಗಳ ಅವಧಿಯಲ್ಲಿ ಬರೆದು ಸಿದ್ಧಪಡಿಸಬೇಕೆಂದು ೧,೫೦೦ ರೂಪಾಯಿಗಳ ಅಡ್ವಾನ್ಸ್ ಹಣ ಕೊಟ್ಟರು. ಕಾದರ್ ಖಾನರಿಗೆ ತಮ್ಮ ಕಣ್ಣುಗಳನ್ನೇ ನಂಬದಂತಾಯಿತು. ಸರಳವಾದ ಕಥೆಗೆ ಮೂರುತಿಂಗಳ ಅವಧಿ ಹೆಚ್ಚೆಂದು ಅವರಿಗೆ ಅನ್ನಿಸಿ, ತಮ್ಮ ‘ಲ್ಯಾಮ್ಬ್ರೆಟ್ಟಾ ಸ್ಕೂಟರ್’ ತೆಗೆದುಕೊಂಡು ದಕ್ಷಿಣ ಬೊಂಬಾಯಿನ ಕ್ರಾಸ್ ಮೈದಾನ್ ಗೆ, ಹೋಗಿ ಮರವೊಂದರ ಕೆಳಗೆ ಕುಳಿತು, ೩ ಗಂಟೆಗಳಲ್ಲಿ ಬರೆದು ಪೂರೈಸಿ ನಿರ್ದೇಶರಿಗೆ ಒಪ್ಪಿಸಿದರು. ಹೀಗೆ ಬಾಲಿವುಡ್ ಗೆ ಕಾದರ್ ಖಾನ್ ರ ಪಾದಾರ್ಪಣೆಯಾಯಿತು.

ಕಾದರ್ ಖಾನರಿಗೆ ವಿಲನ್ ಮತ್ತು ಕಮೆಡಿಯನ್ ಪಾತ್ರಗಳನ್ನು ಸುಲಭವಾಗಿ ನಿರ್ವಹಿಸುವ ಕೌಶಲವಿತ್ತು. ಮಾರಾಮಾರಿ ಹೋರಾಟದ ಪಾತ್ರಗಳು, ಪ್ರೀತಿ/ ಪ್ರಣಯದ ರೋಲ್ ಗಳು, ಸಾಮಾಜಿಕ ಮತ್ತು ರಾಜಕೀಯವನ್ನಾಧರಿಸಿದ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿ ಒಂದು ವಿಕ್ರಮವನ್ನೇ ಸಾಧಿಸಿದ್ದಾರೆ. ಹಿಮ್ಮತ್ ವಾಲಾ ಚಿತ್ರದಲ್ಲಿ ಗೋವಿಂದನ ಜತೆ ನಟಿಸಿದ್ದರು. ಸ್ಕ್ರಿಪ್ಟ್ ಬರೆದಿದ್ದಕ್ಕೆ ೨ ಫಿಲಂ ಫೇರ್ ಅವಾರ್ಡ್ ದೊರೆಯಿತು. ಹೀಗೆ, ಕಾದರ್ ಖಾನ್ ಅವರ ನೈಜ ಶಕ್ತಿ, ಡಯಲಾಗ್ ಬರೆಯುವುದರಲ್ಲೇ ಕೇಂದ್ರೀಕೃತವಾಗಿತ್ತು. ಆಂಗಾರ್, ಮೇರಿ ಆವಾಜ್ ಸುನೋ,

ವರ್ಷ ೨೦೦೦ ನಂತರ ಚಲನ ಚಿತ್ರ ಇಂಡಸ್ಟ್ರಿಯ ತೀರಾ ಮಾಹೋಲ್ ಬದಲಾಗಿಹೋಗಿತ್ತು. ಅವರು ಎಂದೂ ಮಾಯೂಸ್, ನಿಶ್ಯಕ್ತರು, ಇಲ್ಲವೇ ಜೀವನದಲ್ಲಿ ಸೋತವ್ಯಕ್ತಿಯಂತೆ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಕೂಲಿ ಚಿತ್ರದ ಝಫರ್ ಪಾತ್ರ ನೆನೆಪಿಗೆ ತರುತ್ತಾರೆ.

ಪಾಲಿಟೆಕ್ನಿಕ್ ಒಂದರಲ್ಲಿ ತಿಂಗಳಿಗೆ ೪೦೦ ರೂಪಾಯಿ ವೇತನದ ಹುದ್ದೆಯಿತ್ತು. ‘ನೆಟ್ ವರ್ಕಿಂಗ್’ ಮಾಡಲು ಶುರುಮಾಡಿದರು. ಆಗಿನ ಬಾಲಿವುಡ್ ನಲ್ಲಿ ‘ಮನಮೋಹನ್ ದೇಸಾಯ್’ ಎಂಬ ಯಶಸ್ವಿ ನಿರ್ಮಾಪಕ ನಿರ್ದೇಶರಿದ್ದರು. ಕಾದರ್ ಖಾನ್ ಹೆಸರನ್ನು ಯಾರೋ ಅವರಿಗೆ ಸೂಚಿಸಿದಾಗ, ಹೊಸದಾಗಿ ಬಂದ ಹುಡುಗರನ್ನು ಅವರು ಹೆಚ್ಚು ಗಮನಿಸುತ್ತಿರಲ್ಲ. ಆದರೆ ಅವರ ಬಯೋ ಡೇಟಾ ಓದಿದಮೇಲೆ ಪ್ರಭಾವಿತರಾಗಿ, ತಮ್ಮ ರೋಟಿ ಎನ್ನುವ ಫಿಲಂ ಗೆ ಪಟ್ಕಥೆ ಬರೆದುಕೊಡಲು ಆದೇಶಿಸಿ, ೧, ೫೦೦ ರೂಪಾಯಿಗಳ ಅಡ್ವಾನ್ಸ್ ಹಣವನ್ನು ಅವರಿಗೆ ಕೊಟ್ಟರು. ತಾರಾಗಣದಲ್ಲಿ, ರಾಜೇಶ್ ಖನ್ನಾ, ಜಿತೇಂದ್ರ ಮತ್ತು ಮನೋಜ್ ಕುಮಾರ್ ಇದ್ದರು, ಹಿಂದೆ ಇದೇ ಹೆಸರಿನ ಮೆಹಬೂಬ್ ಖಾನ್ ನಿರ್ಮಿತ ಫಿಲಂ ನಲ್ಲಿ ಅಶ್ರಫ್ ಖಾನ್ ಅಭಿನಯಿಸಿದ್ದರು. ಅವರೇ ಖಾನ್ ರನ್ನು ಗುರುತಿಸಿ ಖಬರಿಸ್ಥಾನಕ್ಕೆ ಬಂದು ಸಹಾಯ ಮಾಡಿದ್ದರು. ಪ್ರಕಾಶ್ ಮೆಹ್ರಾರವರ ಪ್ರೊಡಕ್ಷನ್ ನಲ್ಲಿ ಕೆಲಸಕ್ಕೆ ಒಪ್ಪಿಕೊಂಡರು ಯಶ್ ಚೋಪ್ರಾ ಸಿನಿಮಾ, ‘ದಾಗ್’ ಈಗ ಅವರಿಗೆ ಕಾಲೇಜಿನ ಅಧ್ಯಾಪ ವೃತ್ತಿಯಲ್ಲಿ ಆಸಕ್ತಿ ಕಡಿಮೆಯಾಯಿತು. ಜನಪ್ರಿಯತೆ, ಹಣ, ಆಕರ್ಷಣೆಯಿಂದಾಗಿ ಬಾಲಿವುಡ್ ಹೆಚ್ಚು ಪ್ರಿಯವಾಯಿತು.’

‘ತಾಶ್ ಕೆ ಪತ್ತೆ’ ನಾಟಕವನ್ನು ಹಿರಿಯ ನಟ ಆಘಾ ನೋಡಿ ವಿಸ್ಮಿತರಾದರು. ಅವರು ತಮ್ಮ ಗೆಳೆಯ ದಿಲೀಪ್ ಕುಮಾರ್ ಹತ್ತಿರ ಹೋಗಿ ಕೆಲಸವನ್ನು ಬಹಳವಾಗಿ ಶ್ಲಾಘಿಸಿದರು. ದಿಲೀಪ್ ಕುಮಾರ್ ಕಾದರ್ ಖಾನ್ ರನ್ನು ಫೋನಿನಲ್ಲಿ ವಿಚಾರಿಸಿ ಅಭಿನಂದಿಸಿದರು. ನನ್ನ ಹೆಸರು ಯೂಸುಫ್ ಖಾನ್ ಎಂದು ; ನಿಮ್ಮ ಪಾತ್ರ ನೋಡಿ ಆನಂದಿಸಿದೆ, ‘ನಿಮಗೆ ಬಧಾಯಿ’ ಎಂದು ಹೇಳಿದಾಗ, ಕಾದರ್ ಖಾನ್ ಗೆ ಯಾರೆಂದು ಗೊತ್ತಾಗಲಿಲ್ಲ. ಯೂಸುಫ್ ಖಾನ್ ಅಂದರೆ ? ಅದಕ್ಕೆ ದಿಲೀಪ್ ಕುಮಾರ್ ಕೊಟ್ಟ ಜವಾಬು : “ನೀವು ಮೀಡಿಯಾದಲ್ಲಿ ಕೇಳುತ್ತಿರುತ್ತೀರಲ್ಲ ; ದಿಲೀಪ್ ಕುಮಾರ್ ಎನ್ನುವ ಹೆಸರು ; ನಾನೇ ಅವನು” ಎಂದು ಹೇಳಿದಾಗ, ಕಾದರ್ಖಾನ್ ಕೈನಲ್ಲಿದ್ದ ಟೆಲಿಫೋನ್ ರಿಸೀವರ್ ಇನ್ನೇನು ಕೆಳಗೆ ಬೀಳುವುದಿತ್ತು. ಹೇಗೋ ಸಂಭಾಳಿಸಿಕೊಂಡು, “ನೋಡಿ ಯೂಸುಫ್ ಭಾಯಿ ನಾಟಕವನ್ನು ನೋಡಲು ನಿಮಗೆ ಗೊತ್ತಿದ್ದಂತೆ ಕೆಲವು ವಸೂಲುಗಳಿರುತ್ತವೆ. ಪರದೆ ಮೇಲೇಳುವ ಮೊದಲು ಹಾಲಿನಲ್ಲಿ ಇರಬೇಕು. ಕೊನೆಯಲ್ಲಿ ಪರದೆ ಬಿದ್ದನಂತರ ಥಿಯೇಟರ್ ನಿಮ್ದ ಹೊರಗೆ ಹೋಗಬೇಕು. ಇದು ನನ್ನ ಅನ್ನಿಸಿಕೆ. ನೋಡಿ. ಬೇಜಾರು ಮಾಡಿಕೊಳ್ಳಬೇಡಿ, ಒಪ್ಪಿಗೆಯಾದರೆ ಮಾತ್ರ ಬನ್ನಿ, ನಿಮಗೆ ಸ್ವಾಗತ,” ಎಂದಾಗ ದಿಲೀಪ್ ನಕ್ಕು, ‘ಗೊತ್ತಾಯಿತು ನೀವು ಹೇಳಿದದ್ದು ನನಗೆ ಅರ್ಥವಾಗಿದೆ. ಹಾಗೆಯೇ ಆಗಲಿ’; ಎಂದಿದ್ದರು.

ವಾಗ್ದಾನ ಮಾಡಿದಂತೆಯೇ ದಿಲೀಪ್ ಕುಮಾರ್ ನಾಟಕ ಶುರುವಾಗುವುದಕ್ಕಿನ ಮೊದಲೇ ಹಾಜರಿದ್ದರು. ಅವರು ನಾಟಕ ನೋಡಿ ಬಹಳ ಪ್ರಭಾವಿತರಾದರು. ಜನತಾ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾ, ‘ಸ್ಟ್ಯಾಂಡಿಂಗ್ ಒವೇಶನ್’ ಕೊಟ್ಟರು. ಷೋ ಮುಗಿದಮೇಲೆ ದಿಲೀಪ್ ಕುಮಾರ್ ಮನೆಗೆ ಹೋಗದೆ, ಸ್ಟೇಜಿನ ಮೇಲೆ ಬಂದು ಕಾದಿರ್ ಖಾನ್ ರನ್ನು ಅಭಿನಂದಿಸಿ, ತಮ್ಮ ಮುಂದಿನ ಎರಡು ಚಿತ್ರಗಳಲ್ಲಿ ಸಗಿನ ಮತ್ತು ಬೈರಾಗ್ ರೋಲ್ ಆಫರ್ ಮಾಡುವುದಾಗಿ ಭರವಸೆಕೊಟ್ಟರು.

೧೯೭೦ ರಿಂದ ೨೧ ನೆಯ ಶತಮಾನದ ಶುರುವಿನವರೆಗೆ, ರಾಜೇಶ್ ಖನ್ನಾ ಮನಮೋಹನ್ ದೇಸಾಯಿ ನಿರ್ಮಿತ, (೧,೨೧,೦೦೦ ರೂಪಾಯಿಗಳ ಅಡ್ವಾನ್ಸ್ ಪಡೆದಿದ್ದರು.) ೧೯೭೪ ರ ರೋಟಿ ಚಿತ್ರದ ಕಥೆಯನ್ನು ಬರೆದ ನಂತರ ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ಜಿತೇಂದ್ರ, ಫಿರೋಜ್ ಖಾನ್, ಮಿಥುನ್ ಚಕ್ರವರ್ತಿ, ಅನಿಲ್ ಕಪೂರ್ ಮತ್ತು ಗೋವಿಂದ, ಕಾಮೆಡಿ ಗೋವಿಂದ, ಶಕ್ತಿ ಕಪೂರ್, ಜಾನಿ ಲಿವರ್, ಅಮರೀಶ್ ಪುರಿ, ಪ್ರೇಮ್ ಚೋಪ್ರಾ, ಆಮ್ ಜಾದ್ ಖಾನ್, ಅನುಪಮ್ ಖೇರ್, ೧೯೭೦ ರಲ್ಲಿಯೇ ಆಜ್ರಾ ಖಾನ್ ಎಂಬ ಹುಡುಗಿಯನ್ನು ಮದುವೆಯಾದರು. ಆಕೆ ಮೀಡಿಯಾದ ಮುಂದೆ ಕಾಣಿಸಿಕೊಳ್ಳಲು ನಾಚುವ ಹೆಂಗಸು. ಒಳ್ಳೆಯ ಗೃಹಿಣಿಯಾಗಿ ಅವರ ಪರಿವಾರಕ್ಕೆ ಬೆಂಬಲ ಕೊಡುತ್ತಿದ್ದರು.

ಕಾದರ್ ಖಾನ್ ವರ್ಷ ೨೦೦೧ ರಲ್ಲಿ ಹಸ್ನಾ ಮತ್ ಎಂಬ ಟೆಲಿವಿಷನ್ ಧಾರಾವಾಹಿಯನ್ನು ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಆರಂಭಿಸಿದ್ದರು.

ರಾಜೇಶ್ ಖನ್ನರ ಜೊತೆಗೆ, ದಾಗ್ ಚಿತ್ರವನ್ನು ಪ್ರಾರಂಭಿಸಿದರು, ರಾಜೇಶ್ ಖನ್ನಾ ನಾಯಕರಾಗಿ, ಮತ್ತು ಕಾದರ್ ಖಾನ್ ಅಡ್ವೊಕೇಟ್ ಆಗಿ,

  • ದಿಲ್ ದಿವಾನ,
  • ಮೊಕದ್ದರ್ ಕ ಸಿಕಂದರ್,
  • ನಟ್ವರ್ಲಾಲ್

೧೯೮೪ ನಂತರ,

ಸಪೋರ್ಟಿನ್ಗ್ ರೋಲ್ ಮಾಸ್ಟರ್ಜಿ, ಧರಮ್ ಅಧಿಕಾರಿ, ನಸೀಹತ್, ದೋಸ್ತಿ ದುಶ್ಮನಿ, ಘರ್ ಸಂಸಾರ್, ಲೋಹ, ಇನ್ಸಾನಿಯತ್ ಕೆ ದುಷ್ಮನ್, ಇನ್ಸಾಫ್ ಕಿ ಪುಕಾರ್, ಖುದ್ ಗರ್ಜ್, ಶೇರ್ನಿ ಖುನ್ ಭಾರಿ ಮಾಂಗ್, ಸೋನೇ ಪೆ ಸುಹಾಗ್, ವರ್ದಿ,

೧೯೮೮ ರ ನಂತರ :

ಕರ್ಜ್ ಮೈನೆ ಚುಕಾನಾ ಹೈ, ನಲ್ಲಿ ಮುಖ್ಯ ಭೂಮಿಕೆಯಲ್ಲಿ ಜೈಸಿ ಕರ್ನಿ, ವೈಸಿ ಭರ್ನಿ, ಬೀವಿ ಹೋತೋ ಐಸೀ, ಘರ್ ಹೊ ತೊ ಐಸಾ, ಹಮ್ ಹೈ ಕಮಾಲ್ ಕೆ, ಬಾಪ್ ನಂಬ್ರಿ, ಬೇಟಾ ದಸ್ ನಂಬ್ರಿ,
ಅಸ್ರಾನಿ, ಶಕ್ತಿಕಪೂರ್, ಜಾನಿ ಲಿವರ್ ಅಮ್ರಿಶ್ ಪುರಿ, ಪ್ರೇಮ್ ಚೋಪ್ರಾ, ಆಮ್ಜಾದ್ಖಾನ್, ಮುಂತಾದವರ ಜತೆ, ಕಾಮೆಡಿ ಮಾಡಲು ಪ್ರಯತ್ನಿಸಿದಾಗ
೧. ಹಿಮ್ಮತ್ವಾಲ ೨. ಆಜ್ ಕಾ ದೌರ್,

೧೯೮೯ ರಲ್ಲಿ :

ಕಿಶನ್ ಕನ್ಹಯ್ಯಾ, ಹಮ್, ಘರ್ ಪರಿವಾರ, ಬೋಲ್ ರಾಧಾ ಬೋಲ್,

೧೯೯೦ ರಲ್ಲಿ :

ಆಂಖೆ, ತಕ್ದೀರ್ವಾಲಾ, ಮೈ ಖಿಲಾರಿ, ತುಮ್ ಅನಾರಿ, ದುಲ್ಹೆ ರಾಜ, ಕೂಲಿ ನಂ. ಸಾಜನ್ ಚಲೇ ಸಸುರಾಲ್, ಸೂರ್ಯವಂಶಂ, ಜುದಾಯ್, ಆಂಟಿ ನಂ. ಬಡೇ ಮಿಯಾ, ಛೋಟೆ ಮಿಯಾ, ರಾಜ ಬಾಬು, ಖುದ್ದರ್, ಛೋಟೆ ಸರ್ಕಾರ್, ಘರ್ವಾಲಿ ಬಾಹರ್ವಾಲಿ, ಹೀರೊ ಹಿಂದೂಸ್ತಾನಿ, ಸಿರ್ಫ್ ತುಮ್, ಅನಾರಿ ನಂ ೧,

ಕಾದರ್ ಖಾನ್ ಅಭಿನಯವನ್ನು ಚಿತ್ರಗಳಲ್ಲಿ ಮೆಚ್ಚಿ ಹಿಮ್ಮತ್ ವಾಲಾ, ಆಂಖೆ, ಕೂಲಿ ನಂಬರ್ ೧,

೧೯೯೦ ರ ತರುವಾಯ ಕಾಮೆಡಿ ಧಾರಾವಾಹಿಗಳಲ್ಲಿ ಪಾತ್ರ, ಆಂಖೆ, ತಕ್ದೀರ್ವಾಲಾ, ಮೈ ಖಿಲಾಡಿ ತೂ ಅನಾಡಿ, ದುಲ್ಹೇರಾಜ, ಕೂಲಿ ನಂಬರ್ ೧, ಸಾಜನ್ ಚಲೇ ಸಸುರಾಲ್,ಸೂರ್ಯವಂಶಂ,ಜುದಾ, ಆಂಟಿ ನಂಬರ್ ೧, ಬಡಾ ಮಿಯಾ, ಛೋಟಾ ಮಿಯಾ, ಛೋಟೆ ಸರ್ಕಾರ್, ಘರ್ವಾಲೀ ಬಾಹರ್ವಾಲೀ,

ರಾಜೇಶ್ ಖನ್ನಾ ಕೆರಿಯರ್ ನ ಪ್ರಾರಂಭದ ರೋಲ್, ದಾಗ್ ಚಿತ್ರದಲ್ಲಿ ಅಡ್ವೊಕೇಟ್ ರೋಲ್, ದಿಲ್ ದಿವಾನ, ಮೊಕದ್ದರ್ ಕಾ ಸಿಕಂದರ್, ಮಿ. ನಟ್ವರ್ ಲಾಲ್, ಪೋಷಕ ನಟನೆ,

ರಾಜೇಶ್ ಖನ್ನಾ ತಮ್ಮ ರೋಟಿ ಚಿತ್ರದಲ್ಲಿ ಸಂವಾದ ಲೇಖಕನಾಗಿ ಮೊದಲು ಬ್ರೇಕ್ ಕೊಟ್ಟಿದ್ದು. ಮುಂದೆ ಮಹಾ ಚೋರ್, ಛಲಿಯ ಬಾಬು, ಧರಮ್ ಕಾಂಟ, ಫಿಫ್ಟಿ ಫಿಫ್ಟಿ, ನಯಾ ಕದಂ, ಮಾಸ್ಟರ್ಜಿ, ನಸೀಹತ್, ಪ್ರತಿಚಿತ್ರವೂ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿತ್ತು. ಬೇರೆ ಚಿತ್ರಗಳಿಗೆ ಪಟ್ಕಥೆ ಬರೆಯಲು ಸಹಾಯಮಾಡಿದರು ಹಿಮ್ಮತ್ ವಾಲಾ ಚಿತ್ರದಲ್ಲಿ ಜಿತೇಂದ್ರ, ಜಾನಿ ದೋಸ್ತ್, ಸರ್ಫರೋಶ್, ಜಸ್ಟಿಸ್ ಚೌಧರಿ, ಫರ್ಜ್ ಔರ್ ಕಾನೂನ್ ಜೀವೋ ಔರ್ ಜೀನೋ ದೊ, ಟೋಫ, ಹೈಸಿಯತ್ ,
ಮನಮೋಹನ್ ದೇಸಾಯ್ ಮತ್ತು ಪ್ರಕಾಶ್ ಮೆಹ್ರಾ, ಜತೆ ಸೇರಿ, ಅವರ ಚಿತ್ರಗಳಿಗೆ ಸಂವಾದ ಬರೆದರು. ಅಮಿತಾಭ್ ಬಚ್ಚನ್ ನಟಿಸಿದ, ಇಬ್ಬರ ಬಳಿಯೂ ಕೆಲಸಮಾಡುತ್ತಿದ್ದರು.
ಮನಮೋಹನ್ ದೇಸಾಯ್ : ಧರಮ್ ವೀರ್, ಗಂಗಾ ಜಮುನಾ ಸರಸ್ವತಿ, ಕೂಲಿ, ದೇಶ್ ಪ್ರೇಮಿ, ಸುಹಾಗ್, ಪರ್ವರಿಶ್, ಮತ್ತು ಅಮರ್ ಅಕ್ಬರ್ ಆಂಥೋನಿ,
ಪ್ರಕಾಶ್ ಮೆಹ್ರಾ : ಜ್ವಾಲಾ ಮುಖಿ, ಶರಾಬಿ, ಲಾವಾರಿಸ್, ಮತ್ತು ಮುಕದ್ದರ್ ಕಾ ಸಿಕಂದರ್, ಕಾದರ್ ಖಾನ್ ಬರೆದುಕೊಟ್ಟ ಜನಪ್ರಿಯ ಪಟ್ಕಥೆ ಗಳು, ಮಿಸ್ಟರ್ ನಟ್ವರ್ಲಾಲ್, ಖೂನ್ ಪಸೀನ, ದೋ ಔರ್ ದೊ ಪಾಂಚ್, ಸತ್ತೇ ಫೆ ಸತ್ತಾ, ಇಂಕ್ವಿಲಾಬ್, ಗಿರಫ್ತಾರ್, ಹಮ್ ಮತ್ತು ಅಗ್ನಿ ಪಥ್ ( ಅಮಿತಾಭ್ ರಿಗೆ ರಾಷ್ಟೀಯ ಫಿಲಂ ಪ್ರಶಸ್ತಿ ದೊರೆಯಿತು)

ದಕ್ಷಿಣ ಭಾರತದ ಫಿಲಂ ನಿರ್ಮಾಣ ಸಂಸ್ಥೆ ‘ಪದ್ಮಾಲಯ’ ಕಾದರ್ ಖಾನ್ ರವರಿಂದ ತಮ್ಮ ತೆಲುಗು ಚಿತ್ರಗಳ ಚಿತ್ರಕಥೆ ಹಿಂದಿಯಲ್ಲಿ ಬರೆಸಲು ಕಾದರ್ ಖಾನ್ ರನ್ನು ಇಷ್ಟಪಡುತ್ತಿತ್ತು. ನಾರಾಯಣ ರಾವ್ ದಾಸರಿ, ಕೆ. ಬಾಪಯ್ಯ, ಕೆ. ರಾಘವೇಂದ್ರ ರಾವ್, ಟಿ. ರಾಮ ರಾವ್, ದಾಸರಿ ನಾರಾಯಣ ರಾವ್, ಡಿ. ರಾಮ ನಾಯಿಡು, ಕಾದರ್ ಖಾನ್ ರನ್ನು ತಮ್ಮ ತೆಲುಗು ಹಿಂದಿ ಚಿತ್ರಗಳನ್ನು ರಿಮೇಕ್ ಮಾಡುವಾಗ ಅನುವಾದ ಕಾರ್ಯದಲ್ಲಿ ನೆರವಾಗುತ್ತಿದ್ದರು.

ಹಿಮ್ಮತ್ವಾಲಾ, (೧೯೮೩) ಜಸ್ಟಿಸ್ ಚೌಧರಿ (೧೯೮೩) ಹೈಸಿಯತ್ (೧೯೮೪) ಸಿಂಘಾಸನ್ (೧೯೮೬) ಹಿಂದು ಪತ್ರಿಕೆಯ ಪ್ರಕಾರ, ಕಾದರ್ ಖಾನ್ ಕೇವಲ ಪದಕ್ಕೆ ಪದ ಹಿಂದಿ ಭಾಷೆಗೆ ತರ್ಜುಮೆ ಮಾಡದೇ, ಉತ್ತರ ಭಾರತದ ರೀತಿ-ರಿವಾಜುಗಳು, ಮತ್ತು ಸಾಂಸ್ಕೃತಿಕ ಪರಿಸರಕ್ಕೆ ತಕ್ಕಹಾಗೆ, ಭಾಷೆಯನ್ನು ಬಳಸಿಕೊಂಡಿದ್ದಾರೆ.

೧೯೮೦- ೯೦ ರ ದಶಕದಲ್ಲಿ ನಿರ್ಮಿಸಿದ ಹೆಸರಾಂತ ಚಿತ್ರಗಳಿಗೆ ಚಿತ್ರಕಥೆ ಬರೆದರು.

ಮೇರಿ ಆವಾಜ್ ಸುನೋ,

ಆಂಗಾರ್,

ಜೇಲ್ ಯಾತ್ರಾ,

ಸತ್ತೇ ಪೆ ಸತ್ತಾ,

ಕಾತಿಲೋನ್ ಕೆ ಕಾತಿಲ್,

ವಕ್ತ್ ಕಿ ಆವಾಜ್,

ಕೂಲಿ ನಂಬರ್- ೧,

ಮೈ ಖಿಲಾರಿ ತೂ ಅನಾರಿ,

ಕಾನೂನ್ ಅಪ್ನಾ ಅಪ್ನಾ,

ಕರ್ಮ,

ಸುಲ್ತಾನತ್,

ಬಾಪ್ ನಂಬ್ರಿ ಬೇಟಾ ದಸ್ ನಂಬ್ರಿ,

ಹಮ್ ಶಕಲ್,

ಸಾಜನ್ ಚಲೇ ಸಸುರಾಲ್,

ಹೀರೊ ಹಿಂದೂಸ್ತಾನಿ,

ಆಂಟಿ ನಂಬರ್ ೧,

ರಾಜಾಜಿ.

ಖೂನ್ ಭಾರಿ ಮಾಂಗ್ (ರಾಕೇಶ್ ರೋಷನ್ ರವರ ಚಿತ್ರ)

ಬಜಾರ್,

ಖುದ್ಗರ್ಜ್

ಕಾದರ್ ಖಾನ್ ಗಳಿಸಿದ ಪ್ರಶಸ್ತಿಗಳು :

  • ಸಾಹಿತ್ಯ ಶಿರೋಮಣಿ ಪ್ರಶಸ್ತಿ, ಹಿಂದಿ ಚಲನ ಚಿತ್ರ ರಂಗಕ್ಕೆ, ಮತ್ತು ಭಾರತೀಯ ಸಿನಿಮಾಕ್ಕೆ ಮಾಡಿದ ಸೇವೆಯನ್ನು ಗುರುತಿಸಿ,
  • ಅಮೇರಿಕಾದ AFMI ಅಮೇರಿಕನ್ ಫೆಡೆರೇಶನ್ ಫಾರ್ ಮುಸ್ಲಿಮ್ಸ್ ಫ್ರಮ್ ಇಂಡಿಯಾ ಪ್ರಶಸ್ತಿ ಎರಡು ಬಾರಿ
  • ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ೨೬, ಜನವರಿ, ೨೦೧೯ ರಂದು ಪ್ರದಾನ ಮಾಡಲಾಯಿತು. ಕಾದರ್ಖಾನ್ ಜೀವನ ಪೂರ್ತಿ ಬೊಂಬಾಯಿನಲ್ಲಿ ಕಳೆದರೂ ಆರೋಗ್ಯ ಸುಧಾರಣೆಗೆಂದು ಕೆನಡಾದ ಟೊರಾಂಟೊ ನಗರಕ್ಕೆ ಹೋದರು. (ಕೆನಡಾದ ಪೌರತ್ವ ತೆಗೆದುಕೊಂಡರು) ಮೂರು ಮಕ್ಕಳು, ಸರ್ಫಾರಾಜ್ ಖಾನ್, ಷಾ ನವಾಜ್ ಖಾನ್, ಖುದ್ದರ್ (೨೦೨೧ ರಲ್ಲಿ ನಿಧನರಾದರು) ಸರ್ಫಾರಾಜ್ ಚಿತ್ರಗಳಲ್ಲಿ ನಟಿಸಿದ್ದರು. ಖಾನ್ ಕೆನಡಾ ದೇಶದಲ್ಲಿದ್ದಾಗ ‘ಹಜ್ ಯಾತ್ರೆ’ ಮಾಡಿಬಂದರು.

ಕಾದರ್ ಖಾನ್ ಅಭಿನಯಿಸಿದ ಕಟ್ಟಕಡೆಯ ಚಿತ್ರ :

ಕಾದರ್ ಖಾನ್ ನಟಿಸಿದ ಅವರ ಜೀವನದ ಕಟ್ಟಕಡೆಯ ಚಿತ್ರ, ‘ರಂಗೀಲಾ ರಾಜ’, ೨೦೧೯, ಜನವರಿ ೧೮ ರಲ್ಲಿ ರಿಲೀಸ್ ಆಯಿತು. ಕಾದರ್ ಖಾನ್, ೩೧, ಡಿಸೆಂಬರ್ ೨೦೧೮ ರ ಸಾಯಂಕಾಲ ೬ ಗಂಟೆಗೆ ಕೆನಡಾದ ಟೊರಾಂಟೊ ನಗರದಲ್ಲೇ ತಮ್ಮ ಜೀವನಕ್ಕೆ ಅಲ್ಬಿದ ಹೇಳಿದರು. ಗೋವಿಂದ ನಾಯಕನ ಪಾತ್ರ ವಹಿಸಿದ್ದರು. ನಿಧನರಾದ ಮೇಲೆ ಗೋವಿಂದ ಸಾರ್ವಜನಿಕ ಮೀಡಿಯಾದಲ್ಲಿ ಅವರ ಚಿತ್ರವನ್ನು ಪ್ರಕಟಿಸಿದರು.

ಉರ್ದು ಪದಗಳ ಅರ್ಥ :

ವಾಲಿದ್ : ತಂದೆ.
ವಾಲಿದ : ತಾಯಿ
ಅದಾಕಾರ್ : ಕಲಾವಿದ

ಕಾದರ್ ಖಾನ್ ಬರೆದ ಚಿತ್ರಗಳ ಡಯಲಾಗ್ ಗಳಲ್ಲಿ ಕೆಳಗಿನವು ಜನರಿಗೆ ಪ್ರಿಯವಾಗಿವೆ :

ಅಮರ್ ಅಕ್ಬರ್ ಅಂಥೋನಿ : ಐಸೆ ತೋ, ಆದ್ಮಿ ಲೈಫ್ ಮೇ ದೋ ಈಚ್ ಟೈಮ್ ಭಾಗ್ತಾ ಹೈ ; ಒಲಿಂಪಿಕ್ ಕ ರೇಸ್ ಹೊ, ಯಾ ಪೊಲೀಸ್ ಕ ಕೇಸ್ ಹೊ.
ಮುಖದ್ದರ್ ಕ ಸಿಕಂದರ್ : ಜಿಂದಾ ಹೈ ಒಹ್ ಲೋಗ್ ಜೋ ಮೌತ್ ಸೆ ಟಕ್ರಾತೇ ಹೈ. ಮುರ್ದೋನ್ ಸೆ ಬೆಹ್ತಾರ್ ಹೈ ಒಹ್ ಲೋಗ್ ಜೋ ಮೌತ್ ಸೆ ಘಬ್ರಾತೇ ಹೈ. ತಕ್ ದೀರ್ ತೆರೆ ಕದ್ಮೋಮ್ ಮೇ ಹೋಗಿ, ಔರ್ ತೂ ಮುಖದ್ದರ್ ಕ ಬಾದ್ ಷಾ ಹೋಗ.

ಹಿಮ್ಮತ್ ವಾಲಾ : ತುಮ್ಹಾರಿ ಲೂಟ್ ಮಾರ್ ಕೋ ಖತಂ ಕರ್ಕೆ, ತುಮ್ಹಾರಿ ಜಬರ್ದಸ್ತಿ ಕಿ ಹುಕೂಮತ್ ಕೋ ಉಜಾಡ್ನೇ ವಾಲಾ ಹಿಮ್ಮತ್ವಾಲಾ.

ಅಗ್ನಿ ಪಥ್ : ಯಹ್ ಛೆ ಫುಟ್ ಕಾ ಬಾಡಿ, ಲುಡ್ಕಾನೇ ಕೆಲಿಯೇ ಚಾರ್ಇಂಚ್ ಕ ಗೋಲಿ, ಕಮ್ಪಡ್ಗಯಾ ಮಾಲೂಮ್

ಅಮಿತಾಭ್ ಬಚ್ಚನ್ ಮತ್ತು ಕಾದರ್ಖಾನ್ ಮಧ್ಯೆ ಇರುಸು-ಮುರುಸು :

ಕಾದರ್ ಖಾನ್ ೧೯೯೦ ರ ದಶಕದಲ್ಲಿ ಡೇವಿಡ್ ಧಾವನ್ ರವರ ಚಿತ್ರಗಳಲ್ಲಿ , ಮಾಡಿದ ತಮಾಷೆಯ ರೋಲ್ ಗಳಿಗೆ ಹೆಸರುವಾಸಿಯಾಗಿದ್ದರು. ೧೯೭೦ ರ ಬಳಿಕ ಪಟ್ಕತೆ ಬರೆಯುವ ಕಲೆಯನ್ನು ಧೃಢ ಪಡಿಸಿಕೊಂಡು ಜನಪ್ರಿಯತೆ ಗಳಿಸಿದರು, ಮನಮೋಹನ್ ದೇಸಾಯ್ ಮತ್ತು ಪ್ರಕಾಶ್ ಮೆಹ್ರಾ ತಮ್ಮ ಚಿತ್ರಗಳಲ್ಲಿ ಕಾದರ್ ಖಾನ್ ಜತೆ ಕೊಲ್ಯಾಬೋರೇಷನ್ ಇಟ್ಟುಕೊಂಡು ಹೆಚ್ಚಾಗಿ ಅಮಿತಾಭ್ ಬಚ್ಚನ್ ರ ಚಿತ್ರಗಳಿಗೆ ಉಪಯೋಗಿಸುತ್ತಿದ್ದರು. ಅಮರ್ ಅಕ್ಬರ್ ಆಂಥೋನಿ, ಮುಕದ್ದರ್ ಕ ಸಿಕಂದರ್, ನಮಕ್ ಹಲಾಲ್, ಕೂಲಿ ಮುಂತಾದ ಚಿತ್ರಗಳು. ಒಮ್ಮೆ ಕಾದರ್ ಖಾನ್ ರಿಗೆ ಕಥಾ ಸಂಭಾಷಣೆ ಬರೆಯಲು ಮನ್ ಮೋಹನ್ ದೇಸಾಯ್ ೧.೨೧ ಲಕ್ಷ ಸಂಭಾವನೆಯನ್ನು ಕೊಟ್ಟರು. ಆಗಿನ ಕಾಲಕ್ಕೆ ಅದು ಅತಿದೊಡ್ಡ ರಖಂ ಆಗಿತ್ತು.

ಕಾದರ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಸುಮಾರು ಒಂದೇ ಸಮಯದಲ್ಲಿ ಹಿಂದಿ ಫಿಲಂ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದರು. ಅವರಿಬ್ಬರ ನಡುವಿನ ಸ್ನೇಹ ಸಂಬಂಧ ಚೆನ್ನಾಗಿತ್ತು. ಬರುಬರುತ್ತಾ ೧೯೮೦ ರ ಹೊತ್ತಿಗೆ ಅದು ಹಳಸಿಕೊಂಡಿತ್ತು. ದುಲ್ ಹೇ ರಾಜ ಚಿತ್ರದ ನಟ, ಬಿಗ್ ಬಿ. ರಾಜಕೀಯಕ್ಕೆ ಸೇರಿದಮೇಲೆ ಅವರ ನಡವಳಿಕೆಯೇ ಚರ್ಚಾಸ್ಪದವಾಗಿತ್ತು. ೧೯೮೪ ರಲ್ಲಿ ಗೆಳೆಯ ರಾಜೀವ್ ಗಾಂಧಿಯವರ ಜತೆ ಸೇರಿ, ರಾಜಕೀಯಕ್ಕೆ ಪ್ರವೇಶ ಮಾಡಿದರು. ೧೯೮೭ ರಲ್ಲಿ ನಿಭಾಯಿಸಲಾಗದೆ ವಾಪಸ್ಸಾದರು.

ಒಂದು ಇಂಟರ್ವ್ಯೂ ನಲ್ಲಿ ಕಾದರ್ ಖಾನ್, ಅಮಿತಾಭ್ ಬಚ್ಚನ್ ರನ್ನು ಅಮಿತ್ ಎಂದು ಸಂಬೋಧಿಸುತ್ತಿದ್ದರು. “ಹೀಗೆ ಕರೆದಾಗ ಯಾಕೋ ಅವರು ಇಷ್ಟಪಡದೆ ನನ್ನಿಂದ ದೂರವಾಗುತ್ತಾ ಹೋದರು. ಮೊದಲಿನಿಂದ ಕರೆಯುತ್ತಿದ್ದಂತೆ, ನಾನು ಒಮ್ಮೆ ಅಮಿತ್ ಎಂದು ಕರೆದಾಗ ಅವರಿಗೆ ಬೇಸರವಾಗಿದ್ದನ್ನು ಮುಖಚರ್ಯೆಯಿಂದ ಗಮನಿಸಿದೆ”.

ಇದಾದ ಮೇಲೆ ದಕ್ಷಿಣ ಭಾರತದ ನಿರ್ಮಾಪಕರೊಬ್ಬರು ಬೊಂಬಾಯಿನ ಸಿನಿಮಾ ಸ್ಟುಡಿಯೋ ಗೆ ಬಂದಾಗ ನನ್ನನ್ನು ಕೇಳಿದರು. ‘ನಿಮಗೆ ಸರ್ ಜೀ ಗೊತ್ತಿಲ್ಲವೇ ‘? ಅವರನ್ನ ಭೆಟ್ಟಿಯಾಗಿದ್ರಾ’ ? ನನಗೆ ಅಚ್ಚರಿಯಾಯಿತು. ‘ಯಾರಪ್ಪ ಸರ್ ಜಿ ಅಂದ್ರೆ,?’ ಎಂದಾಗ, ‘ನಾವ್ ಹೇಳ್ತಿರೋದು ಅಮಿತಾಭ್ ಬಚ್ಚನ್ ಸರ್ ಬಗ್ಗೆ.’ ಆಗ ನಾನು ಉತ್ತರಿಸಿದೆ, ‘ನಾನು ಅವರ್ನ ಅಮಿತ್ ಅಂತಲೇ ಕರ್ಯೋದು ; ಅವರು ನನ್ನ ಜಿಗರಿ ದೋಸ್ತ್ ‘. ‘ಇಲ್ಲ ನೀವು ಇನ್ ಮೇಲೆ ಅವರ್ನ ಸರ್ ಜೀ ಆಂತಾಲೇ ಕರಿಬೇಕು, ಅಮಿತ್ ಅಂತ ಕರಿಬೇಡಿ,’ ‘ಈಗ ಅವರು ದೊಡ್ಡ ನಟರಾಗಿದ್ದಾರೆ. ದೊಡ್ಡ ಮನುಷ್ಯರೂ ಸಹಿತ’. ಅಷ್ಟು ಹೊತ್ತಿಗೆ ಅಮಿತಾಭ್ ಅಲ್ಲಿಗೆ ಬಂದರು. ಎಲ್ಲರೂ ಅವರನ್ನು ಸುತ್ತುವರಿದು ‘ನಮಸ್ತೆ ಸರ್ಜಿ’ ಎಂದು ವಂದಿಸಿದರು. ಹಾಗೆಯೇ ನಾನೂ ಸಹಿತ ಅವರಿಗೆ ಸರ್ ಜಿ. ಎಂದು ಹೇಳಿ ಅಭಿನಂದಿಸುತ್ತೇನೆಂದು ಅವರು ಭಾವಿಸಿದ್ದರು. ನನಗೆ ಹಾಗೆ ಸುಳ್ಳು ಅಭಿನಯಮಾಡಲು ಸಾಧ್ಯವಾಗಲಿಲ್ಲ. ಮೊದಲಿಂದಲೂ ಅಮಿತಾಭ್ ಬಗ್ಗೆ ನನಗೆ ಗೌರವಾದರಗಳಿದ್ದವು. ಇದಾದಮೇಲೆ ಅವರು ನನ್ನನ್ನು ಕರೆಯುವುದನ್ನೇ ಬಿಟ್ಟರು. ನಾನೂ ಸಹಿತ ದೂರದಲ್ಲಿಯೇ ಇದ್ದೆ.

ಆಗಿನ ಸಮಯದ ಕಥಾ ಸಂವಾದ ಲೇಖಕರಾಗಿದ್ದ ಸಲೀಮ್- ಜಾವಿದ್ ಜೋಡಿಯಂತೆಯೇ ಕಾದರ್ಖಾನ್ ಸಹಿತ, ಅಮಿತಾಬ್ ರ ‘ಅಂಗ್ರಿ ಯಂಗ್ ಮ್ಯಾನ್ ಇಮೇಜನ್ನು ಮುಂದುವರೆಸಬಹುದಿತ್ತು’. ಇಂಟರ್ ವ್ಯೂ ಒಂದರಲ್ಲಿ ಕಾದರ್ಖಾನ್ ಅಮಿತಾಭ್ ರಿಗೆ ಇರುವ ಕರಿಷ್ಮಾ ಮತ್ತು ಕಂಠ ಸೌಷ್ಟವ, ತಮ್ಮಹಾಗೆಯೇ ಬರೆಯುವ ಲೇಖಕರಿಗೆ ಪೂರಕವಾಗಿ, ಸಹಾಯಕಾರಿಯಾಗಿತ್ತೆಂದು ಹೇಳುತ್ತಿದ್ದರು. ತಾವು ಅಮಿತಾಭ್ ರ ಹಾವ-ಭಾವಗಳನ್ನು ಅಭ್ಯಸಿಸಿ ಗಮನದಲ್ಲಿಟ್ಟುಕೊಂಡು ಪಟ್ಬತೆ ಬರೆಯುವಾಗ ಉಪಯೋಗಿಸುತ್ತಿದ್ದೇವೆಂದು ಖಚಿತಪಡಿಸಿದರು. “ಬಚ್ಚನ್ ರ ಮಾತಿನ ಧಾಟಿ ಎಲ್ಲರನ್ನು ಮೋಡಿಮಾಡುತ್ತದೆ. ಅದಕ್ಕಾಗಿ ಅವರು ಸಾಕಷ್ಟು ಶ್ರಮವಹಿಸಿದ್ದರು ಸಹಿತ. ನಾವು ಈ ಮೇರು ಗುಣಗಳನ್ನು ಸ್ವಲ್ಪ ಮೊನಚಾಗಿರಿಸಲು ಶ್ರಮಿಸುತ್ತಿದ್ದೆವು”. ಬೇರೆಯವರಂತೆ ಬಚ್ಚನ್ ತಮ್ಮ ಬಗ್ಗೆ ಸಂತುಷ್ಟರಾಗಿರದೆ. “ಜೀವನ ಪೂರ್ತಿ ನಟನೆಯನ್ನೇ ಅವಲಂಬಿಸಿರುವಾಗ ಆ ಕಸುಬನ್ನು ಸದಾ ಚೂಪಾಗಿ ಸಾಣೆಹಿಡಿಯುವ ಕೆಲಸ ಬಿಡುವಂತಿಲ್ಲ”. ಎಂದು ಅವರು ಹೇಳುತ್ತಿದ್ದರು.

ಕಾದರ್ಖಾನ್ ತಮ್ಮ ಜೀವನದ ಕೊನೆಯ ದಶಕದಲ್ಲಿ ಸೋಷಿಯಲ್ ಮೀಡಿಯಾ ಉಗ್ರ ದೃಷ್ಟಿಯಿಂದ ದೂರವಿದ್ದರು. ಕೆನಡಾ ರಾಷ್ಟ್ರದ ಟೊರಾಂಟೊ ನಗರದಲ್ಲಿ ಕಾದರ್ ಖಾನ್ ನಿಧನದ ತರುವಾಯ, ಅಮಿತಾಬ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಒಂದು ನೋಟ್ ಬರೆದು, ‘ತಮ್ಮ ಎಲ್ಲಾ ಜನಪ್ರಿಯ ಚಿತ್ರಗಳಿಗೆಲ್ಲಾ ಕಾದರ್ ಖಾನ್ ಸಂಭಾಷಣೆಯ ತೀಕ್ಷಣತೆಯೇ ಕಾರಣವಾಗಿತ್ತೆಂದು’ ಹೊಗಳಿಕೆಯ ಮಾತಾಡಿದರು. “೧೯೭೦ ರ ದಶಕದ ಅತ್ಯಂತ ಪ್ರಭಾವಿ ಫಿಲಂಗಳಿಗೆ ಸಂವಾದ ಬರೆಯುವುದರಲ್ಲಿ ಅವರು ಮುಂಚೂಣಿಯಲ್ಲಿದ್ದರು. ಖಾನ್ ರವರ ಮರಣದಿಂದ ತಮ್ಮ ಮನಸ್ಸಿಗೆ ತೀವ್ರವಾದ ನೋವಾಗಿದೆ. ಒಬ್ಬ ಆಪ್ತ ಗೆಳೆಯನೊಬ್ಬನನ್ನು ಕಳೆದುಕೊಂಡಂತೆ ಅನ್ನಿಸುತ್ತಿದೆ.” ಎಂದು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು. “ಕಾದರ್ ಖಾನ್ ಒಬ್ಬ ಉಮುದ ಅಭಿನಯಕರ್ತ, ಅತ್ಯುತ್ತಮ ಮೇರು ಶ್ರೇಣಿಯ ಸಂಭಾಷಣ ಲೇಖಕರಲ್ಲದೆ ಒಬ್ಬ ಗಣಿತಶಾಸ್ತ್ರಜ್ಞರೂ ಆಗಿದ್ದರು”.

-ಎಚ್ಚಾರೆಲ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Holalkere rangarao laxmivenkatesh

ಕಾದರ್ ಖಾನ್ ನನ್ನು ಮೊದಲು ನೋಡಿದಾಗ, ಯಾರೋ ಮಾಲಿ, ಗುಂಡಾ ಇರಬಹುದೇನೋ ಎನ್ನುವ ಅಭಿಪ್ರಾಯ ಬಂದರೆ ಆಶ್ಚರ್ಯವಲ್ಲ. ನನಗೂ ಹಾಗೆಯೇ ಅನ್ನಿಸಿತ್ತು. ಅಫ್ಘಾನಿಸ್ಥಾನದ ಪ್ರದೇಶದ ಫಸ್ಟುನ್ ಪ್ರಜಾತಿಗೆ ಸೇರಿದವ. ಬೊಂಬಾಯಿಗೆ ಒಂದು ವರ್ಷದ ಕೂಸಾಗಿರುವಾಗ ಬಂದು, ಮುಂಬಯಿನ ಕೊಳಚೆ ಪ್ರದೇಶ ಧಾರಾವಿಯಲ್ಲಿ ಪೋಷಕರ ಜತೆ ವಾಸಮಾಡುತ್ತಾನೆ. ಸುತ್ತಮುತ್ತಲು ಕೊಚ್ಚೆ, ದುರ್ವಾಸನೆ, ಹತ್ತಿರದಲ್ಲೇ ಸ್ಮಶಾನ, ಒಂದು ಮನೆ ಬಿಟ್ಟು ಮುಂದೆನಡೆದರೆ, ವೇಶ್ಯಾವಾಟಿಕೆಗಳು. ಅವರೆಲ್ಲ ಹೊರಗೆ ನಿಂತು ದೇಹಪ್ರದರ್ಶ ಮಾಡುವ ದೃಶ್ಯವನ್ನು ನಾವು ಬಿ ಇ ಎಸ್ ಟಿ ಬಸ್ಸಿನಲ್ಲಿ ಹೋಗುವಾಗ ವೀಕ್ಷಿಸಬಹುದು.
ಅಂತಹ ಕೊಳಕು ತಿಪ್ಪೆ ಎನ್ನಬಹುದಾದ ಜಾಗದಲ್ಲಿ ಬೆಳೆದ ಒಬ್ಬ ಬಾಲಕ ಮುನಿಸಿಪಲ್ ಸ್ಕೂಲಿನಲ್ಲಿ ಓದಿ, ಸ್ಮಶಾನದಲ್ಲಿ ಕಲಿತು, ರಾತ್ರಿ ನಿದ್ರಿಸಿ, ಸಿವಿಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಕಾಲೇಜಿನ ಶಿಕ್ಷಕನಾಗಿ ಮುಂದೆ ತನ್ನ ಸ್ವ ಸಾಮರ್ಥ್ಯದಿಂದ ಬಾಲಿವುಡ್ ನ ಹಿಂದಿ ಚಿತ್ರರಂಗದಲ್ಲಿ ಒಬ್ಬ ಅಸಾಮಾನ್ಯ ಕಥಾ ಸಂವಾದ ಲೇಖಕ, ನಟ, ಹಾಸ್ಯನಟ, ಮೊದಲಾದ ಗಳನ್ನು ನಿಭಾಯಿಸಿ ಒಬ್ಬ ಹುಡುಗಿಯನ್ನು ಮದುವೆಯಾಗಿ ಯಾವ ವಿವಾದಗಳಿಗೂ ಗುರಿಯಾಗದೆ ತನ್ನ ಹೆಸರನ್ನು ಸ್ಥಾಪಿಸಿದ ವ್ಯಕ್ತಿಯನ್ನು ಅಭಿನಂದಿಸಬೇಡವೇ ? ಇನ್ಯಾರಾದರೂ ಇದ್ದರೂ ಅಂತಹ ಪರಿಸರದಲ್ಲಿ ಲೈಂಗಿಕ ಹಗರಣಕ್ಕೆ ಬಲಿಯಾಗುತ್ತಿದ್ದರು. ಆದರೆ ಅವರ ತಾಯಿಯ ಮಾರ್ಗದರ್ಶನದಿಂದ ಕಾದರ್ ಖಾನ್ ಒಬ್ಬ ಮರ್ಯಾದಸ್ತ ಕಲಾವಿದನರಾಗಿ ತನ್ನ ಛಾಪನ್ನು ಮೂಡಿಸಿದ್ದಾರೆ.

Holalkere rangarao laxmivenkatesh

Thanks for publishing the above article, on Kadar khan.

2
0
Would love your thoughts, please comment.x
()
x