ಗೀತ ಸಂತ ಸುಬ್ಬಣ್ಣ: ಡಾ. ಹೆಚ್ ಎನ್ ಮಂಜುರಾಜ್
ಮಾನವನೆದೆಯಲಿ ಆರದೆ ಉರಿಯುತಿದ್ದ ಪ್ರಜ್ವಲಿಪ ಗೀತಜ್ಯೋತಿ ಶಿವಮೊಗ್ಗ ಸುಬ್ಬಣ್ಣ ಎಂಬ ಸುಗಮ ಸಂಗೀತದರಸ ಮೊನ್ನೆ ಶಾಂತವಾದರು. ಕನ್ನಡ ಸುಗಮ ಸಂಗೀತವನು ಜನಪ್ರಿಯಗೊಳಿಸಿದವರು ಅವರು. ಸಿ ಅಶ್ವತ್ಥ್ ಅವರ ಹೆಸರಿನೊಂದಿಗೆ ಬೆಸೆದಿದ್ದ ತಂತು. ತಮ್ಮ ಎಂಬತ್ನಾಲ್ಕರ ವಯೋಮಾನದಲಿ ಅಸ್ತಂಗತರಾದ ಹಾಡು ಪಾಡಿನ ನೇಸರನೀತ. ಇವರ ನಿಜ ನಾಮಧೇಯ ಜಿ ಸುಬ್ರಹ್ಮಣ್ಯಂ. ತಂದೆ ಗಣೇಶರಾವ್, ತಾಯಿ ರಂಗನಾಯಕಮ್ಮ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲಿ 1938 ರಲಿ ಜನಿಸಿದರು. ಪ್ರತಿದಿನವೂ ಪೂಜೆ ಪುರಸ್ಕಾರ ನಡೆಯುತಿದ್ದ ಮನೆತನ. ತಾತನವರಾದ ಶಾಮಣ್ಣನವರು ಸಂಗೀತ ಕೋವಿದರು. … Read more