”ಬೆಳಗೆರೆಯೂ, ಅಜ್ಞಾತ ಓದುಗದೊರೆಯೂ: ಒಂದು ಖಾಸ್ ಬಾತ್!”: ಪ್ರಸಾದ್ ಕೆ.
ರವಿಯವರ ಅಕ್ಷರಜಗತ್ತಿನ ಬಗ್ಗೆ ನನಗಾದ ಮೊದಲ ಪರಿಚಯವೆಂದರೆ ‘ಬಾಟಮ್ ಐಟಮ್’ ಸರಣಿ. ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ರವಿ ಬೆಳಗೆರೆ ಆಗಲೇ ಖ್ಯಾತ ಲೇಖಕರಾಗಿದ್ದರು. ಅವರ ಕೃತಿಗಳು ಆವತ್ತಿಗೇನೇ ಬೆಸ್ಟ್ ಸೆಲ್ಲರ್ಸ್. ಅಂದಿನ ನನ್ನ ಸೀಮಿತ ಅರಿವಿನ ಪ್ರಕಾರ ರವಿ ಸಾರಥ್ಯದ ಪತ್ರಿಕೆ ‘ಹಾಯ್ ಬೆಂಗಳೂರು’ ಚೆನ್ನಾಗಿ ಓಡುತ್ತಿತ್ತು. ಇನ್ನು ‘ಕ್ರೈಂ ಡೈರಿ’ ಮತ್ತು ‘ಎಂದೂ ಮರೆಯದ ಹಾಡು’ ಟಿವಿ ಕಾರ್ಯಕ್ರಮಗಳಿಂದ ರವಿಯವರು ರಾಜ್ಯದಾದ್ಯಂತ ಮನೆಮಾತೂ ಆಗಿದ್ದರು. ಹೀಗಿದ್ದರೂ ಇಂಗ್ಲಿಷ್ ನಲ್ಲಿ living under the … Read more