ಗೌರೀ ಹುಣ್ಣಿವೆ: ಡಾ. ವೃಂದಾ ಸಂಗಮ್
ಬಾಲ್ಯದೊಳಗಿನ ಸುಂದರ ನೆನೆಪುಗಳನ್ನು ಹೆಕ್ಕಿ, ನಕ್ಕು ನಲಿಯದ ಜನರೇ ಇಲ್ಲ ಅಥವಾ ಅಂತಹ ಬಾಲ್ಯದ ಅನುಭವದ ಶ್ರೀಮಂತಿಕೆ ಇಲ್ಲದ ವ್ಯಕ್ತಿ ಬದುಕು ಪೂರ್ಣವಾಗಿರುವುದಿಲ್ಲ ಎಂದೇ ಹೇಳಬೇಕು. ಬಾಲ್ಯದಲ್ಲಿನ ಯಾವುದೋ ಒಂದು ಚಿಕ್ಕ ಚಿತ್ರವೂ ನಮಗೆ ರವಿವರ್ಮನ ಚಿತ್ರಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿರುತ್ತಿತ್ತು. ಯಾರೋ ಹಾಡಿದ ಒಂದು ಹಾಡನ್ನು ಮೂರು ನಾಲ್ಕು ಬಾರಿ ಹಾಡಿ, ಕಲಿತು ಬಿಡುತ್ತಿದ್ದ ದಿನಗಳು. ಯಾವುದೊಂದು ನಾಟಕ, ಹಾಡು, ಡ್ಯಾನ್ಸು ಏನೇ ನೋಡಿದರೂ, ಅದನ್ನು ಕಲಿತು ಬಿಡುತ್ತಿದ್ದೆವು. ಅದರ ಅನುಕರಣೆಯಲ್ಲಿಯೂ ನಮ್ಮದೊಂದು ಅನುಭವದ ಸ್ವಂತಿಕೆಯನ್ನು ಸೇರಿಸುತ್ತಿದ್ದ … Read more