“ಅಂತರಂಗದೊಳಗಣ ಉರಿ ತಾಕಿದಾಗ”: ಪ್ರಶಾಂತ್ ಬೆಳತೂರು
-೧-ಎಳೆತನದಲ್ಲಿ ಆಡಿ ನಲಿವಾಗಎತ್ತರದ ನಿಲುವಿನ ಅಜ್ಞಾತ ಮನುಷ್ಯನೊಬ್ಬನನ್ನ ಕಂಡು ದೂರ ನಿಲ್ಲು ಪೀಡೆ ಎಂದ..ಯಾಕೆಂದು ತಿಳಿಯದೆ ಕಸಿವಿಸಿಯಾಗಿದೂರ ಸರಿದು ನಿಂತೆ..! ಅಂಗನವಾಡಿಯ ಅಂಗಳಕೆ ಕಾಲಿಟ್ಟಾಗಅಲ್ಲಿಯ ನನ್ನೂರಿನ ಹೆಂಗಸೊಬ್ಬಳುನನ್ನನ್ನು ನನ್ನ ಕೇರಿಯ ಓರಿಗೆಯವರನ್ನುಒಂದೇ ಸಾಲಿನಲ್ಲಿ ಯಾಕೆ ಕೂರಿಸುತ್ತಿದ್ದಾಳೆಂದುಮೊದಮೊದಲಿಗೆ ಅರ್ಥವಾಗುತ್ತಿರಲಿಲ್ಲ..! ಬರುಬರುತ್ತಾ..ನಮ್ ಮೇಷ್ಟ್ರು ಅರ್ಥ ಮಾಡಿಸಿದರುತರಗತಿಯಲ್ಲಿ ಕಲಿಯುವಾಗ ಪದೇ ಪದೇಅಣಕಿಸುವ ಮೇಷ್ಟ್ರುದನ ತಿಂದು ತಿಂದು ದನದ ಹಾಗೆ ಬೆಳಿದಿದ್ದೀರಿಮೆದುಳಿನಲ್ಲಿ ಬರೀ ಗೊಬ್ಬರ ತುಂಬಿದೆಯೆಂದುಜರಿದು ಮಾತಾಡುವಾಗಲೆಲ್ಲಾಎದೆಗೆ ನಾಟುತ್ತಿತ್ತು..! ಆಮೇಲಾಮೇಲೆ ಮೇಡಂಒಬ್ಬರು..ಮನೆಯ ಪಡಸಾಲೆಯಲ್ಲಿ ಸಂಜೆ ಸ್ಪೆಷಲ್ ಕ್ಲಾಸ್ಮಾಡುತ್ತೇನೆಂದು ಕರೆದಾಗನಾನು ಹಾಜರಾಗುತ್ತಿದ್ದೆಒಮ್ಮೆ ಅವರ ಗಂಡ … Read more