ಅಂಕುರ ಪ್ರಕಾಶನ ಪ್ರಕಟಿಸಿರುವ ಡಾ.ಅರವಿಂದ ಪಟೇಲ್ ಅವರ “ಹಾಲು ಚೆಲ್ಲಿದ ಹೊಲ” ಕವನ ಸಂಕಲನವನ್ನು ಮಾರ್ಚ್ 20, ಭಾನುವಾರ, ಬೆಳಿಗ್ಗೆ 10.30ಕ್ಕೆ ಚಾಮರಾಜಪೇಟೆಯ ಐಎಂಎ ಸಭಾಂಗಣದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಜನಾರ್ಪಣೆ ಮಾಡಲಿದ್ದಾರೆ.
ಉಪಸ್ಥಿತಿ: ವಿಪ್ರೋ ಸಂಸ್ಥೆಯ ತರಬೇತಿ ವಿಭಾಗದ ಜಾಗತಿಕ ಮುಖ್ಯಸ್ಥರಾದ ಪಿ.ಬಿ.ಕೋಟೂರ, ವೈದ್ಯ ಲೇಖಕ ಡಾ.ಸಲೀಮ ನದಾಫ, ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ದಕ್ಷಿಣ ವಲಯ) ಉಪಾಧ್ಯಕ್ಷರಾದ ಸಿರಿಗೇರಿ ಪನ್ನರಾಜ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಸೌಮ್ಯಾ ಕೋಡೂರು, ಕವಿ ಡಾ.ಅರವಿಂದ ಪಟೇಲ್, ಪ್ರಕಾಶಕ ಚಂದ್ರಕಾಂತ ವಡ್ಡು.