“ಪೋಸ್ಟ್ ಮ್ಯಾನ್ ಗಂಗಣ್ಣ” (ಭಾಗ ೧): ಎಂ.ಜವರಾಜ್

-೧- ಕರೋನ ಅಪ್ಪಳಿಸಿ ಜನ ಆಚೀಚೆ ಹೋಗಲೂ ಆಗದ ಸ್ಥಿತಿ. ಸರ್ಕಾರದ ಕಟ್ಟುನಿಟ್ಟಿನ ನಿಯಮಾವಳಿ. ಲಾಕ್ಡವ್ನ್ ಕಾರಣ ಜನಜೀವನವೇ ತತ್ತರಿಸಿತ್ತು. ನ್ಯೂಸ್ ಚಾನೆಲ್ಗಳ ಬ್ರೇಕಿಂಗ್ ನ್ಯೂಸ್ಗಳು, ಸೋಶಿಯಲ್ ಮೀಡಿಯಾಗಳ ಪೋಸ್ಟ್ಗಳು ಭೀತಿಯನ್ನು ಹುಟ್ಟಿಸಿದ್ದವು. ಈ ತತ್ತರದ ಭೀತಿಯಲ್ಲೇ ಸರ್ಕಾರಕ್ಕೆ ತನ್ನ ಬೊಕ್ಕಸದ ಚಿಂತೆಯಾಗಿತ್ತು. ಕೇಂದ್ರ ಸರ್ಕಾರದ ರಾಜ್ಯವಾರು ಸಡಿಲ ನಿಯಮಾವಳಿಗಳ ಅಡಿಯಲ್ಲಿ ಎಂದಿನಂತೆ ಜನರ ಓಡಾಟ ಕೆಲಸ ಕಾರ್ಯಗಳು ನಿಧಾನಕೆ ಎಂದಿನ ಸ್ಥಿತಿಗೆ ಮರಳತೊಡಗಿತು. ನನಗೂ, ಒಂದೂ ಒಂದೂವರೆ ತಿಂಗಳು ಮನೆಯಲ್ಲಿ ಕುಂತು ಕುಂತು ಲೈಫ್ ಇಷ್ಟೇನಾ..? … Read more

ಅಂಕಲ್ ಮತ್ತು ಮಿ. ಬ್ರೂಮ್‌ಫೀಲ್ಡ್: ಜೆ ವಿ ಕಾರ್ಲೊ

ಮೂಲ ಇಂಗ್ಲಿಷ್: ಜೇಮ್ಸ್ ಹೆರಿಯಟ್ಕನ್ನಡಕ್ಕೆ: ಜೆ ವಿ ಕಾರ್ಲೊ (ಬ್ರಿಟಿಷ್ ಪಶು ವೈದ್ಯಕೀಯ ಶಸ್ತ್ರಚಿಕಿತ್ಸಕರಾದ ಜೇಮ್ಸ್ ಆಲ್‌ಫ್ರೆಡ್ ವೈಟ್ (1916-1995) ಜೇಮ್ಸ್ ಹೆರಿಯಟ್ ಹೆಸರಿನಲ್ಲೇ ಹೆಚ್ಚು ಪರಿಚಿತರು. 1939ರಲ್ಲಿ ಗ್ಲಾಸ್ಗೊ ಪಶು ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದುಯಾರ್ಕ್‌ಷೈರ್‌ನಲ್ಲಿ ಸುಮಾರು 50 ವರ್ಷಗಳ ಕಾಲ ತಮ್ಮ ವೃತ್ತಿ ಜೀವನವನ್ನು ನಡೆಸಿದರು. ತಮ್ಮ 50ನೇ ವಯಸ್ಸಿನಲ್ಲಿ ಮಡದಿಯ ಒತ್ತಾಯದ ಮೇರೆಗೆ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಜೇಮ್ಸ್ ಹೆರಿಯಟ್ ಎಂಬ ಹೆಸರಿನಿಂದ ಬರೆಯತೊಡಗಿದರು. ಇಂಗ್ಲೆಂಡಿನಲ್ಲಿ ಪ್ರಕಟವಾದ ಅವರ ಎರಡು ಪುಸ್ತಕಗಳು … Read more

ಬಸ್ಸಿನಲ್ಲಿಯ ಕಳ್ಳಿ: ಶೈಲಜ ಮಂಚೇನಹಳ್ಳಿ

ಒಂದು ದಿನ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದ ನಾನು ಹಿಂದಿರುಗಲು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವ ಒಂದು ಖಾಸಗಿ ಬಸ್ಸಿನಲ್ಲಿ ಎರಡು ಸೀಟ್ ಇರುವ ಕಡೆ ಕಿಟಕಿಯ ಪಕ್ಕ ಕುಳಿತಿದ್ದೆ. ಸ್ವಲ್ಪ ಹೊತ್ತಾದ ನಂತರ ಇನ್ನೊಬ್ಬ ಹೆಂಗಸು ನನ್ನ ಪಕ್ಕದ ಸೀಟಿನಲ್ಲಿ ಕುಳಿತರು. ಕಿಟಕಿಯ ಪಕ್ಕದಲ್ಲಿ ಕುಳಿತಿದ್ದರಿಂದ ಎಂದಿನಂತೆ ನನ್ನ ಗಮನ ಹೊರಗಿನ ದೃಶ್ಯಗಳನ್ನು ಕಿಟಕಿಯಿಂದ ಇಣುಕಿ ನೋಡುವಂತೆ ಮಾಡಿತ್ತಾದ್ದರಿಂದ ಪಕ್ಕದಲ್ಲಿದ್ದವರ ಕಡೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಆಕೆ ಕುಳಿತು ಬಹುಶಃ ಒಂದೈದು ನಿಮಿಷವಾಗಿರಬಹುದು ಒಂದು ಮಗುವನ್ನು ಎತ್ತುಕೊಂಡಿದ್ದ … Read more

ಸಮಾಜಮುಖಿ ಕಥಾಪುರಸ್ಕಾರ-2023 ಫಲಿತಾಂಶ ಪ್ರಕಟ

ಬೆಂಗಳೂರಿನ ಸಮಾಜಮುಖಿ ಪ್ರಕಾಶನ ಏರ್ಪಡಿಸಿದ್ದ 2023ನೇ ಸಾಲಿನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಒಟ್ಟು 398 ಕಥೆಗಾರರು ಭಾಗವಹಿಸಿದ್ದರು. ಆರಂಭಿಕ ಸುತ್ತಿನ ಆಯ್ಕೆಯ ನಂತರ ಎರಡನೇ ಹಂತದ 50 ಕಥೆಗಳನ್ನು ಹೊಸ ಪೀಳಿಗೆಯ ಲೇಖಕ ಡಾ.ಕೆ.ಎಚ್.ಮುಸ್ತಾಫ ಹಾಗೂ ಅಂತಿಮ ಹಂತದ ಆಯ್ಕೆಯನ್ನು ಯುವ ಲೇಖಕಿ ಚೈತ್ರಿಕಾ ನಾಯ್ಕ ಹರ್ಗಿ ಮಾಡಿದ್ದಾರೆ. ತಲಾ ರೂ.5000 ನಗದು ಮತ್ತು ಪ್ರಶಸ್ತಿಪತ್ರ ಒಳಗೊಂಡ ‘ಸಮಾಜಮುಖಿ ಕಥಾ ಪುರಸ್ಕಾರ-2023’ಕ್ಕೆ ಆಯ್ಕೆಯಾಗಿರುವ ಐದು ಕಥೆ ಮತ್ತು ಕಥೆಗಾರರು: ಬಯಕೆ (ದೀಪಾ ಹಿರೇಗುತ್ತಿ), ಮುಝಫರ್ (ಎಂ.ನಾಗರಾಜ ಶೆಟ್ಟಿ), ಹಲ್ಲೀರ … Read more

ಆಳುವ ಪ್ರಭುತ್ವದ ಅಮಾನವೀಯ ನಡೆಯ ಘನಘೋರ ಚಿತ್ರಣದ ಸಿನಿಮಾ – ಫೋಟೋ: ಚಂದ್ರಪ್ರಭ ಕಠಾರಿ

ಕೊರೊನಾ ಕಾಲದ ವಲಸಿಗರ ಸಂಕಷ್ಟಗಳ ಕತೆಯ ‘ಫೋಟೋ’ ಸಿನಿಮಾ ಅಷ್ಟಾಗಿ ಪ್ರಚಾರಗೊಳ್ಳದೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಯುವ ನಿರ್ದೇಶಕ ಉತ್ಸವ್ ಗೋನಾವರ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸಿನಿಮಾವನ್ನು ಕಲೆಯಾಗಿ ಕಟ್ಟಿದ್ದಾರೆ. ಅಲ್ಲದೆ – ತನಗಿರುವ ಪ್ರತಿಭೆಯ ಜೊತೆಗೆ ಸಾಮಾಜಿಕ ಕಳಕಳಿ, ಬದ್ಧತೆಯನ್ನು ಮೆರೆದಿದ್ದಾರೆ.    ಉತ್ತರಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯ ಪುಟ್ಟ ಗ್ರಾಮದ ಬಾಲಕ ದುರ್ಗ್ಯ, ಶಾಲೆಯಲ್ಲಿದ್ದ ವಿಧಾನಸೌಧದ ಪಟ ಕಂಡು, ಅದರ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಬೇಕೆಂದು ಬಯಸುತ್ತಾನೆ. ಅದೇ ಹೊತ್ತಿಗೆ ಶಾಲೆಗೆ ಹದಿನೈದು … Read more

ಅರ್ಧ ಬಿಸಿಲು, ಅರ್ಧ ಮಳೆ, ಪೂರ್ಣ ಖುಷಿ, ಪೂರ್ಣ ಪೈಸಾ ವಸೂಲ್: ಜ್ಯೋತಿ ಕುಮಾರ್. ಎಂ(ಜೆ. ಕೆ.).

ರೈತ ಬೇಸಾಯ ಮಾಡಬೇಕು ಅಂದ್ರೆ, ಮುಂಗಾರಾ?, ಹಿಂಗಾರಾ?ಯಾವ ಬೆಳೆ ಬೆಳೆಯುವುದು, ಯಾವ ಮಣ್ಣಿಗೆ ಯಾವ ತಳಿ ಸೂಕ್ತ. ಮಣ್ಣಿನ ಪರೀಕ್ಷೆ ಮಾಡಿಸಬೇಕಾ? ಯಾವ ಯಾವ ಬೆಳೆಗಳಿಗೆ ಮತ್ತೆ ಯಾವ ಯಾವ ಮಣ್ಣಿನ ವಿಧಕ್ಕೆ ಯಾವ ಯಾವ ಗೊಬ್ಬರ ಸೂಕ್ತ, ಕೊಟ್ಟಿಗೆನೋ? ಸರ್ಕಾರಿ ಗೊಬ್ಬರನೋ?ವಿವಿಧ ರೀತಿಯ ಕಳೆ ಹಾಗೂ ಕೀಟಗಳ ನಿರ್ವಹಣೆ ಹೇಗೆ? ಇಷ್ಟೆಲ್ಲಾ ತಿಳಿದು ಮಾಡಿದ ಬೇಸಾಯಕ್ಕೆ ಉತ್ತಮ ಫಲ ಬಂದೆ ಬರುತ್ತೇ ಅನ್ನೋ ಗ್ಯಾರಂಟಿ ಇರುವುದಿಲ್ಲ. ಅಷ್ಟಿಲ್ಲದೇ ಹೇಳುತ್ತಾರೆಯೆ, “ಬೇಸಾಯ ನೀ ಸಾಯ, ನಿನ್ನ ಮನೆಯವರೆಲ್ಲ … Read more

ಮುಗುಳ್ನಗು ಒಂದನ್ನು ಎದೆಯಲ್ಲಿ ಬೆಳೆಯಲಿಕ್ಕೆ ಹಂಬಲಿಸುವವರ ಕಥೆಗಳ ಗುಚ್ಛ “ಮರ ಹತ್ತದ ಮೀನು”: ಡಾ. ನಟರಾಜು ಎಸ್.‌ ಎಂ.

ವಿನಾಯಕ ಅರಳಸುರಳಿಯವರು ಲೇಖಕರಾಗಿ ಕಳೆದ ಏಳೆಂಟು ವರ್ಷಗಳಿಂದ ಪರಿಚಿತರು. ಮೊದಲಿಗೆ ಕವಿತೆಗಳನ್ನು ಬರೆಯುತ್ತಿದ್ದವರು, ತದನಂತರ ಪ್ರಬಂಧ ಬರೆಯಲು ಶುರು ಮಾಡಿದರು. ನಂತರದ ದಿನಗಳಲ್ಲಿ ಕತೆಗಳನ್ನು ಸಹ ಬರೆಯುತ್ತಾ ಈಗ ತಮ್ಮ ಹತ್ತು ಕತೆಗಳಿರುವ “ಮರ ಹತ್ತದ ಮೀನು” ಕಥಾಸಂಕಲನವನ್ನು ಹೊರತಂದಿದ್ದಾರೆ. “ಮರ ಹತ್ತದ ಮೀನು” ಕೃತಿಯು 2023ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿ ಪಡೆದ ಕೃತಿಯಾಗಿದ್ದು ಓದುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆಯುತ್ತಿದೆ. ಈ ಪುಸ್ತಕಕ್ಕೆ ಲೇಖಕರಾದ ಮಣಿಕಾಂತ್‌ ಎ. ಆರ್.‌ ಮುನ್ನುಡಿ ಬರೆದಿದ್ದು, ಈ ಹೊತ್ತಿಗೆ … Read more

ಗಣಕರಂಗ (ರಿ), ಧಾರವಾಡ ಆಯೋಜಿಸಿರುವ ಕವನ ವಾಚನ ಅಥವಾ ಜನಪದ ಶೈಲಿಯಲ್ಲಿ ಗಾಯನ ಸ್ಪರ್ಧೆ

  #ಗಣಕರಂಗ (ರಿ), ಧಾರವಾಡ ಆಯೋಜಿಸುವ ವಿಶ್ವಜ್ಞಾನ ದಿನ ದ ಪ್ರಯುಕ್ತ ‘ಬಾಬಾಸಾಹೇಬ ಡಾ.ಅಂಬೇಡ್ಕರ್ ಕುರಿತ ಜಾನಪದ ಶೈಲಿಯ ಮುಕ್ತ ಕವನ ವಾಚನ ಮತ್ತು ಗಾಯನ ಸ್ಪರ್ಧೆಗೆ ಸ್ವಾಗತ . ಎಲ್ಲರಿಗೂ ಮುಂಚಿತವಾಗಿ (ಏಪ್ರಿಲ್-14) ವಿಶ್ವಜ್ಞಾನ ದಿನದ ಶುಭಾಶಯಗಳು. ಆತ್ಮೀಯರೇ, ನಿಮಗೆ ಈಗಾಗಲೇ ಗೊತ್ತಿರುವಂತೆ ಗಣಕರಂಗ (ರಿ), ಧಾರವಾಡ ಸಂಸ್ಥೆಯು ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳನ್ನು ಸಭಾವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳ ಆನ್-ಲೈನ್ ದಲ್ಲಿ ಯಶಸ್ವಿಯಾಗಿ ನಡೆಸಿದೆ. ಅದರ ಮುಂದುವರಿಕೆಯಾಗಿ, ಈಗ ಬರುವ ಏಪ್ರಿಲ್-14ರಂದು ‘ವಿಶ್ವಜ್ಞಾನ ದಿನ’ದ ಪ್ರಯುಕ್ತ ವಾಟ್ಸಪ್ … Read more

ಬದಲಾಗಿದೆ ಭಾರತದ ಬೌಲಿಂಗ್ ಹವಾಮಾನ!: ವಿನಾಯಕ‌ ಅರಳಸುರಳಿ,

ಮೊನ್ನೆ ಮಂಗಳವಾರ ಭಾರತ ಹಾಗೂ ಇಂಗ್ಲೆಂಡ್ ಗಳ ನಡುವೆ ಮ್ಯಾಚ್ ಇರುವುದು ಗೊತ್ತಿರಲಿಲ್ಲ. ಗೊತ್ತಾಗಿ ನೋಡುವಷ್ಟರಲ್ಲಿ ಪ್ರಸಿದ್ ಕೃಷ್ಣ ಎನ್ನುವ ಹೊಸ ಬೌಲರ್ ಪಾದಾರ್ಪಣೆ ಮಾಡಿ, ಅವರಿಗೆ ಆಂಗ್ಲರು ಮೂರು ಓವರ್ ಗೆ ಮೊವ್ವತ್ತೇಳು ರನ್ ಚಚ್ಚಿರುವುದು ಕಾಣಿಸಿತು. ಏನು ನಡೆಯುತ್ತಿದೆ ಇಲ್ಲಿ? ವರ್ಲ್ಡ್ ಕಪ್ ಗೆ ಕೆಲವೇ ತಿಂಗಳು ಇರುವಾಗ ಹೀಗೇಕೆ ಹೊಸ ಹೊಸ ಪ್ರಯೋಗ ಮಾಡ್ತಿದ್ದಾರೆ? ಇರುವವರಿಗೇ ಮತ್ತಷ್ಟು ಆಡುವ ಅವಕಾಶ ಕೊಟ್ಟು ಇಂತಿಂತವನು ಇಂತಿಂತಲ್ಲಿ ಎಂದು ಫಿಕ್ಸ್ ಮಾಡಬಾರದಾ ಎಂದುಕೊಳ್ಳುವಷ್ಟರಲ್ಲಿ ಅದೇ ಪ್ರಸಿದ್ … Read more

ಮಾತೆಂಬ ಜ್ಯೋತಿ ಮನವ ಬೆಳಗಲಿ: ಸುಂದರಿ ಡಿ.

ಜೀವಜಗತ್ತು ಹಲವು ವಿಸ್ಮಯಗಳ ಆಗರ. ಇಲ್ಲಿ ನಾವು ಕಂಡು ಅಚ್ಚರಿಯಿಂದ ಹುಬ್ಬೇರಿಸಿದ ಹಲವು ಸಂಗತಿಗಳು ನಮ್ಮ ಅರಿವಿಗೆ ಬಾರದೆಯೂ ಇರಬಹುದು. ನಮ್ಮ ಅರಿವಿಗೆ ಬಂದರೆ ಕುತ್ತಾಗಬಹುದೆಂಬ ಭಯಕ್ಕೆ ಜೀವಜಗತ್ತು ಹೊಸ ಪಾಠವನ್ನೇ ಈ ವೇಳೆಗೆ ಕಲಿತಿರಲೂಬಹುದು ಅಥವಾ ಅದೆಷ್ಟೋ ವಿಸ್ಮಯಗಳನು ಅರಿವಾಗುವ ಮೊದಲೇ ನಾವು ನಮ್ಮ ಪಾಪಕೂಪಗಳಿಂದ ಇಲ್ಲವಾಗಿಸಿರಲೂಬಹುದು. ಅದೇನೇ ಇರಲಿ ಮನುಷ್ಯ ತನ್ನ ಅರಿವಿಗನುಗುಣವಾಗಿ ಮತ್ತು ವಾಸಪ್ರಪಂಚದ ಕೆಲವು ವಿಸ್ಮಯಗಳನ್ನಷ್ಟೇ ಅರಿತಿರಲು ಸಾಧ್ಯ. ಏಕೆಂದರೆ ಆ ಪ್ರಮಾಣದ ವಿಸ್ಮಯಗಳ ಹೊದ್ದು ನಿಂತಿದೇ ಈ ಜಗತ್ತು. ಕವಿಗಳ … Read more

ನೋವು ಸಾವಾಗದಿರಲಿ..: ಪೂಜಾ ಗುಜರನ್. ಮಂಗಳೂರು

ಬದುಕು ಒಂದೊಂದು ಸಲ ಹೀಗಾಗಿ ಬಿಡುತ್ತದೆ.. ಯಾರು ಬೇಡ ಏನೂ ಬೇಡ ಹಾಗೇ ಎದ್ದು ಹೋಗಿಬಿಡಬೇಕು. ಯಾರ ಜಂಜಾಟವೂ ಬೇಡ ಅನಿಸುವಷ್ಟು ಬದುಕು ರೋಸಿ ಹೋಗಿರುತ್ತದೆ..ಈ ಯೋಚನೆ ಪ್ರತಿಯೊಬ್ಬನ ಬದುಕಿನಲ್ಲಿಯೂ ಒಂದಲ್ಲ ಒಂದು ದಿನ ಬಂದಿರುತ್ತದೆ. ಕೆಲವರು ಎದ್ದು ಹೋದರೆ ಇನ್ನು ಕೆಲವರು ಯೋಚನೆಯ ಆಯಾಮವನ್ನು ಬದಲಿಸಿ ಸುಮ್ಮನಿರುತ್ತಾರೆ. ಆದರೆ ಎಲ್ಲರ ನಿರ್ಧಾರಗಳು ಬದಲಾಗಿರುವುದಿಲ್ಲ. ಬದಲಿಗೆ ಅವರಿಗೆ ಈ ಬದುಕಲ್ಲಿ ಇನ್ನೇನೂ ಇಲ್ಲ ಅನ್ನುವುದೊಂದೆ ಯೋಚನೆಯಾಗಿರುತ್ತದೆ. ಈ ಯೋಚನೆಯ ಯೋಜನೆಗಳೆಲ್ಲ ಮುಕ್ತಾಯವಾಗುವುದು ಸಾವಿನಲ್ಲಿ. ಅತಿಯಾದ ಖಿನ್ನತೆ ಸಾವಿನ … Read more

ನಿನ್ನ ಪ್ರೀತಿಯಲ್ಲಿ ಯಾವಾಗ ಮುಳುಗಿ ಹೋದೆನೋ ಗೊತ್ತೇ ಆಗಲಿಲ್ಲ: ದಿನೇಶ್‌ ಉಡಪಿ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ನಲ್ಮೆಯ ಗೆಳೆಯ,ಸುಮಾರು ದಿನಗಳಿಂದ ಹಗಲು ರಾತ್ರಿಗಳ ಪರಿವೆಯಿಲ್ಲದೇ, ಹೇಳಬೇಕೋ ಬೇಡವೋ? ಎಂಬ ತೊಳಲಾಟದಲ್ಲಿ ಬಳಲಿ, ಹೇಳಲೇಬೇಕಾದದ್ದು ಏನಾದರೂ ಇದೆಯಾ? ಹೇಳಲೇ ಬೇಕಾ? ಹೇಳಿದರೆ ಏನಾಗಬಹುದು? ಹೇಳದೆ ಇದ್ದರೆ ಏನಾಗಬಹುದು? ನಾನೀಗ ಹೇಳಬೇಕಾಗಿದೆಯಾ? ಅಥವಾ ಕೇಳಬೇಕಾಗಿದೆಯಾ? ಎಂಬ ಉತ್ತರವೇ ಇಲ್ಲದ ಪ್ರಶ್ನೆಗಳ ಕಾಡಲ್ಲಿ ಸಿಲುಕಿ, ದಿಕ್ಕು ತಪ್ಪಿ ಕೊನೆಗೆ ಏನಾದರೂ ಆಗಲಿ, ಆಗದೆ ಆದರೂ ಇರಲಿ ಎಂಬ ನಿರ್ಧಾರಕ್ಕೆ ಬಂದು, ನಡುಗುವ ಕೈಗಳಿಂದ ಈ ಪತ್ರ ಬರೆಯುತ್ತಿದ್ದೇನೆ. … Read more

ನಿಮ್ಮ ನೋಡಲೆಂದೇ ನಾನು ಚರಂಡಿಗೆ ಬಿದ್ದಿದ್ದು ರೀ..: ನರೇಂದ್ರ ಎಸ್ ಗಂಗೊಳ್ಳಿ.

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ನಮಸ್ತೆ ಪ್ರತೀಕ್ಷಾ ಮೇಡಂ,ನನ್ನ ಪರಿಚಯ ಖಂಡಿತಾ ನಿಮಗೆ ನೆನಪಿರಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಜೀವಮಾನದಲ್ಲಂತೂ ನಿಮ್ಮ ನೆನಪನ್ನು ಬಿಡಲು ಖಂಡಿತಾ ಸಾಧ್ಯವಿಲ್ಲ. ಹಾಗಾಗಿಯೇ ಇದು ನಿಮಗೂ ಗೊತ್ತಿರಲಿ ಅಂತಂದುಕೊಂಡು ಈ ಪ್ರೀತಿಯ ಪತ್ರ ಬರೆಯುತ್ತಿದ್ದೇನೆ. ಅಸಲಿಗೆ ಮೂರು ಕತ್ತೆ ವಯಸ್ಸು ಅಂತಾರಲ್ಲಾ ಅಷ್ಟಾಗುತ್ತಾ ಬಂದರೂ ಮದುವೆ ಅಂದರೆ ದೂರವೇ ನಿಲ್ಲುತ್ತಿದ್ದವನು ನಾನು. ಅದೇಕೋ ಏನೋ ಹೊಸದೊಂದು ಜವಾಬ್ದಾರಿ ಯಾಕೆ ತಗೋ ಬೇಕು? ಈಗಿರುವ ಅದ್ಭುತ … Read more

ಮುಂದಿನ ಬೆಂಚಿನಿಂದ ಹಿಡಿದು ಕೊನೆ ಬೆಂಚಿನವರೆಗೂ ಎಷ್ಟೊಂದು ಹುಡುಗಿಯರಿದ್ದರೂ: ಕಪಿಲ ಪಿ ಹುಮನಾಬಾದೆ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ಲಾಸ್ಟ್ ಬೆಂಚ್ ಹುಡುಗಿಗೆ, ನಿನ್ನ ನಿರಾಕರಣೆಯ ನೋಟದಲ್ಲಿಯೂ ಸಹ ಪ್ರೀತಿಗೆ ಚಡಪಡಿಸುತ್ತಿರುವ ಜೀವವೊಂದರ ಮಾತುಗಳಿವು. ನೀನು ಕೂತೆದ್ದು ಹೋದ ಬೆಂಚಿನ ಮೇಲೆ, ಕ್ಲಾಸ್ ರೂಮ್ ಪೂರ್ತಿ ಖಾಲಿ ಆಗಿದ್ದಾಗ ನಾನು ಹೋಗಿ ಕೂತು ಬೆಚ್ಚನೆಯ ಸ್ಪರ್ಶವೊಂದು ಅನುಭವಿಸಿದ್ದೇನೆ. ಮೊನ್ನೆ ಮುಂಜಾನೆ ಯುನಿವರ್ಸಿಟಿಯ ಮೇನ್ ಗೇಟಿನ್ ರಸ್ತೆಯಲ್ಲಿ ನೀನು ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದೆ, ಗರಿ ಬಿಚ್ಚಿ ನಿಂತ ಆ ನಿನ್ನ ಹಸಿ ಕೂದಲುಗಳಲ್ಲೊಮ್ಮೆ ನನ್ನುಸಿರು ಸುಳಿದಾಡಿ ಬಂದಂತೆ … Read more

ನಿನ್ನ ಜೋಳಿಗೆಯಲ್ಲಿ ಪ್ರೇಮದ ಬುತ್ತಿ ಸದಾ ತುಂಬಿರುತ್ತೆ: ಸುಜಾತಾ ಲಕ್ಮನೆ

ಹಾಯ್ ದೊರೆ, ಎಲ್ಲಿಂದ ಶುರು ಮಾಡಲಿ? ಅದೇ ನೀ ಸಿಕ್ಕ ದಿನ ಕಣ್ಣ ಚುಂಗಲ್ಲಿ ನೀ ಎಸೆದ ಒಲವ ನೋಟವ ಪೋಣಿಸಿ ಎದುರಿಡಲೇ ಅಥವಾ ಕಳೆದ ಸವಿ ಕ್ಷಣಗಳ ನೆನಪ ನೇಯಲೇ? ಸುಂದರ, ಸಂತಸಮಯ ಕ್ಷಣಗಳು ದಿನದುದ್ದಕ್ಕೂ ಕಾಡಿ ಕಚಗುಳಿಯಿಡುವಾಗ ಮೈ ರೋಮಾಂಚನಗೊಳ್ಳುವ ಆ ಭಾವವನ್ನು ವರ್ಣಿಸೋದು ಹೇಗೆ? ಆ ದಿನಗಳಲ್ಲಿ ಭಾವಗಳು ತುಂಬಿ ತುಳುಕಿತ್ತು! ಎಲ್ಲ ಪೂರ್ಣವೂ ಚಂದ ನೋಡು. ಪೂರ್ಣ ಚಂದಿರ, ಆಡಿ ಮುಗಿವ ಮಾತಿನ ನಂತರದ ತುಂಬು ಮೌನ, ಕಣ್ತುಂಬುವ ನೋಟ; ಬೀಸಿ … Read more

ನಿನಗೆ ನನ್ನ ಮೇಲೆ ಒಲವಿದ್ದರೆ: ಪರಮೇಶ್ವರಿ ಭಟ್

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ಪ್ರಿಯ ಮಧುರಾ, ನಿನಗೆ ಯಾರಿವನು ಅಂತ ಆಶ್ಚರ್ಯ ವಾಗಬಹುದು. ನಾನು ನಿನ್ನನ್ನು ಮೆಚ್ಚಿದ ಒಬ್ಬ ಸುಸಂಸ್ಕೃತ ಹುಡುಗ. ಹೆದರಬೇಡ. ಪತ್ರವನ್ನು ಪೂರ್ತಿ ಓದು. ನಾನು ಒಬ್ಬ ಸಂಶೋಧನ ವಿದ್ಯಾರ್ಥಿ. ನೀನು ಕೂಡ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಿ ಎಂದು ತಿಳಿದುಕೊಂಡೆ. ನನ್ನ ನಿನ್ನ ಆಕಸ್ಮಿಕ ಭೇಟಿ ನಾನು ಮರೆತಿಲ್ಲ. ಈ ಪತ್ರ ಬರೆಯಲು ಅದುವೇ ನಾಂದಿಯಾಯಿತು ಗೊತ್ತಾ? ಹೇಗೆ ಅಂತೀಯಾ.. ಒಂದು ದಿನ ಲೈಬ್ರರಿಯಲ್ಲಿ … Read more

ಪಂಜುವಿನ ಯುಗಾದಿ ವಿಶೇಷಾಂಕ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ… ಪಂಜುವಿನ ಯುಗಾದಿ ವಿಶೇಷಾಂಕ ನಿಮ್ಮ ಓದಿಗೆ.. ಈ ಸಂಚಿಕೆಯಲ್ಲಿ…. ಕಾವ್ಯಧಾರೆ 1 ಮಮತಾ ಅರಸೀಕೆರೆ ಮೌಲ್ಯ ಎಂ. ಗೋವಿಂದ ಹೆಗಡೆ ಪ್ರವೀಣಕುಮಾರ್ .ಗೋಣಿ ಷಣ್ಮುಖ ತಾಂಡೇಲ್ ಬೀನಾ ಶಿವಪ್ರಸಾದ ಶಿವಕುಮಾರ ಕರನಂದಿ ಮಾ.ವೆಂ.ಶ್ರೀನಾಥ ನಂದೀಶ್ ಮಾಧವ ಕುಲಕರ್ಣಿ, ಪುಣೆ ಸಂದೀಪ ಫಡ್ಕೆ, ಮುಂಡಾಜೆ ವಿಭಾ ವಿಶ್ವನಾಥ್ ಜಹಾನ್ ಆರಾ ಎಚ್.ಕೊಳೂರು ಆದಿತ್ಯಾ ಮೈಸೂರು ರಂಜಿತ ದರ್ಶಿನಿ ಆರ್. ಎಸ್ ಯಲ್ಲಪ್ಪ ಎಮ್ ಮರ್ಚೇಡ್ ಕುರಿಯ ಕಾಲು: ಜೆ.ವಿ.ಕಾರ್ಲೊ ಉದಾತ್ತ ಜೀವಿ ಪ್ಲಾಟಿಪಸ್: … Read more

ಕಾವ್ಯಧಾರೆ 1

ಹುಡುಕಾಟ ಜಾರಿಯಲ್ಲಿದೆ …. ಮತ್ತೆ ಮತ್ತೆ ಕೆದಕಿ ವಿಶ್ವಸ್ಥ ಚಹರೆಯನ್ನು ಹುಡುಕುತ್ತೇನೆ ಅರಿವು ಸರಸರನೆ ತೆರೆಯುತ್ತೇನೆ ಪ್ರತೀ ಪುಟದಲ್ಲೂ ಅರಸುತ್ತೇನೆ ಅಲ್ಲಿರಬಹುದು.. ಇಲ್ಲವೇ !!? ಇಲ್ಲಂತೂ ಇದ್ದೇ ಇರಬಹುದು ಘಟ್ಟಿಗಿತ್ತಿಯರ ಮಾದರಿಗಳು ಬಂಡೆಯಂತಹ ಹೆಣ್ಣುಗಳು ಎಲ್ಲೆಲ್ಲಿ..? ಪುರಾಣದಲ್ಲಿ ಉಪನಿಷತ್ತುಗಳ ಕಣಜದಲ್ಲಿ ಭಾರತದಲ್ಲಿ, ರಾಮಾಯಣಗಳ ಹಂದರದಲ್ಲಿ ಮಹಾಕಾವ್ಯಗಳ ರಾಶಿಯಲ್ಲಿ ಬೈಬಲ್ಲು ಕುರಾನುಗಳ ಅಂತರಂಗದಲ್ಲಿ ಎಲ್ಲೆಲ್ಲಿದ್ದಾಳೆ ಆಕೆ ಎಲ್ಲೆ ಮೀರಿದಳೆ? ಚಲ್ಲಾಪಿಲ್ಲಿಯಾದಳೆ? ಮತ್ತೆ… ಮತ್ತೆ… ಧೀರ ಮಹಾಪುರುಷರು ಅಣಿ ಮಾಡಿಟ್ಟ ಗಲ್ಲಿಗೇರಿದಳೆ..? ಸಂಶೋಧನೆ ಕಂಗಾಲಾಗುತ್ತೇನೆ ಯಾವ ಪುಟದಲ್ಲೂ ದಿಟ್ಟೆಯರಿಲ್ಲ ಅಗ್ನಿದಿವ್ಯ … Read more

ಕುರಿಯ ಕಾಲು: ಜೆ.ವಿ.ಕಾರ್ಲೊ

ಕಿಟಕಿಯ ಪರದೆಗಳು ಇಳಿಬಿದ್ದಿದ್ದ ಬೆಚ್ಚನೆಯ ರೂಮಿನಲ್ಲಿ ಟೇಬಲ್ ಲ್ಯಾಂಪಿನ ಮಂದ ಬೆಳಕು ಒಂದು ವಿಶಿಷ್ಟ ವಾತಾವರಣ ಉಂಟುಮಾಡಿತ್ತು. ಅವಳು ಕುಳಿತಿದ್ದ ಕುರ್ಚಿಯ ಹಿಂಭಾಗದಲ್ಲಿದ್ದ ಸೈಡ್‍ಬೋರ್ಡಿನ ಮೇಲೆ ಒಂದು ಅರೆ ತುಂಬಿದ್ದ ವ್ಹಿಸ್ಕಿ ಬಾಟಲ್, ಎರಡು ಉದ್ದನೆಯ ಗ್ಲಾಸುಗಳು, ಸೋಡ ಮತ್ತು ಐಸ್ ತುಂಡುಗಳ ಥರ್ಮೋ ಬಕೆಟ್ ತಯಾರಾಗಿತ್ತು. ಅವಳ ಎದುರಿನ ಕುರ್ಚಿ ಇನ್ನೂ ಖಾಲಿ ಇತ್ತು. ಮೇರಿ ಮಲೋನಿ, ತನ್ನ ಪತಿ ಕೆಲಸದಿಂದ ಹಿಂದಿರುಗುವುದನ್ನೇ ಕಾಯುತ್ತಿದ್ದಳು. ಗಳಿಗೆಗೊಮ್ಮೆ ಅವಳ ದೃಷ್ಟಿ ಗೋಡೆಯ ಮೇಲಿದ್ದ ಗಡಿಯಾರದ ಕಡೆಗೆ ಹೊರಳುತ್ತಿತ್ತು. … Read more

ಉದಾತ್ತ ಜೀವಿ ಪ್ಲಾಟಿಪಸ್: ಅರ್ಪಿತ ಮೇಗರವಳ್ಳಿ

ಒ೦ದಾನೊ೦ದು ಕಾಲದಲ್ಲಿ ಆ ದೇವರು ಅನ್ನೋನಿಗೆ ಮೂರು ಬಗೆಯ ವಿಭಿನ್ನ ಜೀವಿಗಳನ್ನು ಸೃಷ್ಟಿಮಾಡುವ ಹುಕಿ ಬ೦ದಿತು. ಆ ಪ್ರಕಾರವಾಗಿ ದೇವರು ಮೊಟ್ಟಮೊದಲಿಗೆ ಸಸ್ತನಿಗಳನ್ನು ಸೃಷ್ಟಿಸಿ ಅವುಗಳಿಗೆ ನೆಲದ ಮೇಲೆ ಬದುಕುವ ಅವಕಾಶಮಾಡಿಕೊಟ್ಟನು. ಹಾಗೆಯೆ ವಾತಾವರಣದ ವಿಪರೀತಗಳಿ೦ದ ರಕ್ಷಿಸಿಕೊಳ್ಳಲು ಅವಕ್ಕೆ ತುಪ್ಪಳವನ್ನು ದಯಪಾಲಿಸಿದನು. ಎರಡನೆಯದಾಗಿ ಮೀನುಗಳನ್ನು ಸೃಷ್ಟಿಸಿದ ಭಗವ೦ತ, ಅವುಗಳನ್ನು ನೀರಿನಲ್ಲಿ ಸರಾಗವಾಗಿ ಈಜಾಡಲು ಬಿಟ್ಟು, ಉಸಿರಾಡಲು ಕಿವಿರುಗಳನ್ನು ನೀಡಿದನು. ತನ್ನ ಸೃಷ್ಟಿಕಲೆಯನ್ನು ಮು೦ದುವರೆಸಿದ ದಯಾಮಯಿ ಮೂರನೆಯದಾಗಿ ಹಕ್ಕಿಗಳನ್ನು ಸೃಷ್ಟಿಸಿ ಆಕಾಶದಲ್ಲಿ ಅನ೦ತವಾಗಿ ಹಾರಡಲು ಅವುಗಳಿಗೆ ರೆಕ್ಕೆಗಳನ್ನು ನೀಡಿದನು. … Read more

ಆರತಕ್ಷತೆ: ಅದಿತಿ ಎಂ. ಎನ್.

ದೂರದ ಸಂಬಂಧಿಯಾಗಿದ್ದ ಶಿವರಾಮನ ಮಗನ ಮದುವೆಯ ಕರೆಯೋಲೆ ತಲುಪಿದಾಗಿನಿಂದ ಜಯಣ್ಣ ಮೋಡದ ಮೇಲೆಯೇ ತೇಲುತ್ತಿದ್ದರು. ಹಣಕಾಸಿನ ವಿಚಾರದಲ್ಲಿ ತಾನೆಲ್ಲಿ, ಶಿವರಾಮನೆಲ್ಲಿ? ಆದರೂ ಅವನು ತನಗೆ ಮದುವೆಯ ಕರೆಯೋಲೆಯನ್ನು ಮರೆಯದೇ ಕಳಿಸಬೇಕೆಂದರೆ ತನ್ನ ಮೇಲೆ ಅವನಿಗೆ ಪ್ರೀತಿ, ವಿಶ್ವಾಸ ಇದೆಯೆಂದೇ ಅರ್ಥವಲ್ಲವೇ ಎನ್ನುವುದು ಜಯಣ್ಣನ ತರ್ಕವಾಗಿತ್ತು. ಅವರ ಉತ್ಸಾಹಕ್ಕೆ ತಕ್ಕ, ಮದುವೆಯ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿಯೇ ಇತ್ತು; ಅದೂ ಮನೆಯಿಂದ ಅಂದಾಜು ಐದಾರು ಕಿಲೋಮೀಟರ್ ದೂರದಲ್ಲಿದ್ದ ದೊಡ್ಡ ಛತ್ರದಲ್ಲಿ. ಹಾಗಾಗಿ ಜಯಣ್ಣ, ಮದುವೆಗೆ ಅಲ್ಲದಿದ್ದರೆ ಆರತಕ್ಷತೆಗಾದರೂ ಹೋಗಿಯೇ ಸಿದ್ಧ … Read more

ಅಚ್ಚೊತ್ತಿದಂಥ ಪ್ರೀತಿಗಾಗಿ ಕಂದುಬಣ್ಣದ ಕಣ್ಣಿನ ಟ್ಯಾಟೋ…..: ಪಿ.ಎಸ್. ಅಮರದೀಪ್.

ತುಂಬಾ ನಿಸ್ತೇಜವಾದವು ಕಣ್ಣುಗಳು. ರಣ ಬಿಸಿಲಿಗೋ, ಮನಸ್ಸು ಉಲ್ಲಾಸ ಕಳೆದುಕೊಂಡಿದ್ದಕ್ಕೋ ಗೊತ್ತಿಲ್ಲ. ಅಂತೂ ಕಣ್ಣುಗಳಲ್ಲಿ ಸೋತ ಭಾವ. ನೋಡುತ್ತಿದ್ದರೆ ಏನೋ ಚಿಂತೆಯಲ್ಲಿ ಮುಳುಗಿದನೇನೋ ಅನ್ನಬೇಕು. ಕಣ್ಣ ಕೆಳಗೆ ಕಪ್ಪು ಕಲೆ, ಚರ್ಮ ಸುಕ್ಕು, ತುಟ್ಟಿಯೂ ಕಪ್ಪಿಟ್ಟಂತೆ. ಸಿಗರೇಟು ಅತಿಯಾಗಿ ಸೇದುತ್ತಿದ್ದನಾ? ಅಥವಾ ಲೇಟ್ ನೈಟ್ ಪಾರ್ಟಿನಾ? ಅಳತೆ ಮೀರಿದ ಕುಡಿತವಾ? ನೇರವಾಗಿ ಕೇಳಿಬಿಡಲಾ? ಊಹೂಂ, ಕೇಳಿದರೆ ಅದಕ್ಕಿಂತ ದೊಡ್ಡ ಬೇಸರ ಮತ್ಯಾವುದು ಅವನಿಗಾಗದು. ಹೀಗೆ ಕಂಡಾಗಲೆಲ್ಲಾ “ಏನ್ಸಾರ್, ಯಾಕೋ ತುಂಬಾ ಸೊರಗಿದಿರಾ! ಹುಷಾರಿಲ್ವಾ?” ಅಂತ ಬೇರೆಯವರು ಕೇಳೋದು, … Read more

ವಿದ್ಯಾಕಾಶಿಯೊಳಗ ಉಗಾದಿ, ಬಾರೋ ವಸಂತ ಬಾ……..!!!!!: ಡಾ. ಅನಿರುದ್ಧ ಸು ಕುಲಕರ್ಣಿ

ವಿದ್ಯಾಕಾಶಿ ಧಾರವಾಡ, ರಾಜ್ಯದ ಎರಡನೇ ಸಾಂಸ್ಕೃತಿಕ ನಗರಿ, ಮಲೆನಾಡಿಗೆ ದ್ವಾರ ಅಂದ್ರೆ ಧಾರವಾಡ, ಧಾರವಾಡ ಅಂದ ಕೂಡಲೇ ಎಲ್ಲಾರಿಗೂ ಮೊದಲ ನೆನಪು ಆಗುದು ಧಾರವಾಡ ಪೇಢ, ಕರ್ನಾಟಕ ವಿಶ್ವವಿದ್ಯಾಲಯ, ಮಾಳಮಡ್ಡಿಯ ವನವಾಸಿ ರಾಮದೇವರ ಗುಡಿ, ಉತ್ತರಾದಿಮಠ, ಸಾಧನಕೇರಿಯ ಬೇಂದ್ರೆ ಅಜ್ಜ, ಗೋಪಾಲಪುರದ ಬೆಟಗೇರಿ ಕೃಷ್ಣ ಶರ್ಮ, ನುಗ್ಗಿಕೇರಿ ಹನುಮಪ್ಪ, ಸೋಮೇಶ್ವರ ಗುಡಿ, ವಿದ್ಯಾಗಿರಿ, ಧರ್ಮಸ್ಥಳ ಆಸ್ಪತ್ರೆ., ಇನ್ನು ಅನೇಕ ಅವ. ಹೋಳಿಹುಣ್ಣಿಮೆ ಮುಂದೆ ಹಳೆಯ ಡ್ರೆಸ್ ಯಾವ ಇರತಾವ ಅವನ್ನ ಸ್ವಲ್ಪ ಇಸ್ತ್ರಿ ಮಾಡಿ, ಬಣ್ಣ ಆಡಲಿಕ್ಕೆ … Read more

ಅಮಾವಾಸ್ಯೆ: ಗಿರಿಜಾ ಜ್ಞಾನಸುಂದರ್

“ಏ ಬೇಡ ಮಕ್ಕಳಾ, ಅವು ನಮ್ಮ ಸೀಬೆ ಮರಗಳಲ್ಲ, ಬೇರೆಯವರದ್ದು. ಅವರನ್ನು ಕೇಳದೆ ಹಾಗೆಲ್ಲ ಕೀಳಬಾರದು” ಎಂದು ಕಾಮಾಕ್ಷಿ ಕೂಗುತ್ತಿದ್ದರು ಮಕ್ಕಳ ಸೈನ್ಯ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಹಣ್ಣುಗಳನ್ನು ಕಿತ್ತು ತಮ್ಮ ಚೀಲಕ್ಕೆ ಹಾಕುವುದರಲ್ಲಿ ಮುಳುಗಿತ್ತು. ಒಟ್ಟು ಹತ್ತು ಮೊಮ್ಮಕ್ಕಳು ಸೇರಿ ಲಗ್ಗೆ ಹಾಕಿದ್ದರು. ರಜಕ್ಕೆ ಅಜ್ಜಿ ಮನೆಗೆ ಬಂದಿದ್ದ ಎಲ್ಲರು ಮಂಗಗಳಾಗಿದ್ದರು. ಅವರನ್ನು ಹಿಡಿಯುವುದಕ್ಕೆ ಸೀನ ಮಾವನಕೈಯಲ್ಲಿ ಮಾತ್ರ ಸಾಧ್ಯ ಆಗುತ್ತಿತ್ತು. ಅವರು ಶಾಲೆಯ ಮುಖ್ಯೋಪಾಧ್ಯಾಪಕರಾಗಿ ಮಕ್ಕಳ ಮೇಲೆ ಒಳ್ಳೆ ಹಿಡಿತ ಹೊಂದಿದ್ದರು. ಆದರೆ … Read more

ಮಗುವಿನ ಕಥೆ: ನಂದಾ ಹೆಗಡೆ

ಪ್ರೈಮರಿ ಸ್ಕೂಲ್ ಟೀಚರಾದ ನಾನು ಇಂದು ಶಾಲೆಯಿಂದ ಮನೆಗೆ ಬಂದರೂ ಶಾಲೆಯದೇ ಗುಂಗಿನಲ್ಲಿದ್ದೆ. ಆರನೇ ಕ್ಲಾಸ್ ನಲ್ಲಿ ಓದುತ್ತಿದ್ದ ಪ್ರಗತಿ ನನ್ನ ಯೋಚನೆಯ ವಿಷಯವಾಗಿದ್ದಳು. ಪ್ರಗತಿ ನಾನು ನೋಡುತ್ತಿದ್ದ ಹಾಗೆ ಚೂಟಿಯಾದ ಹುಡುಗಿ. ಓದುವುದರಲ್ಲಿ ಯಾವಾಗಲೂ ಮುಂದು. ಸಾಮಾನ್ಯವಾಗಿ ಅವಳು ಎಲ್ಲಾ ವಿಷಯಕ್ಕೂ ನೂರಕ್ಕೆ ನೂರು ಅಥವಾ ಅದರ ಆಜು ಬಾಜು ಅಂಕ ಗಳಿಸುತ್ತಿದ್ದಳು. ಆದರೆ ಈಗ ಎರಡು ಮೂರು ಪರೀಕ್ಷೆಗಳಲ್ಲಿ ಅಂಕಗಳ ಇಳಿಕೆಯಾಗತೊಡಗಿತ್ತು. ಏನೋ ಸ್ವಲ್ಪ ವ್ಯತ್ಯಾಸವಾಗಿರಬಹುದೆಂದು ನಾನೂ ವಿಶೇಷವಾಗಿ ಏನೂ ಹೇಳಿರಲಿಲ್ಲ. ಆದರೆ ಅರ್ಧ … Read more

ಕ್ಯಾಮೆರಾಮ್ಯಾನ್: ದಯಾನಂದ ರಂಗದಾಮಪ್ಪ

ಕ್ಯಾಮೆರಾ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾ ಅರಿವಿಲ್ಲದೆ ನಿದ್ರೆಗೆ ಜಾರಿದ್ದೆ. ಸ್ಟುಡಿಯೋದಲ್ಲಿನ ಫೋನಿನ ರಿಂಗಿನ ಸದ್ದು ನನ್ನನ್ನು ಎಚ್ಚರಿಸಿತು. ನಿದ್ದೆಗಣ್ಣಲ್ಲೇ ಫೋನ್ ಸ್ವೀಕರಿಸಿದೆ. ಅತ್ತ ಕಡೆಯಿಂದ Is this Colors Studios? May I speak to Saurabh ಅಂದ. ನಾನು yes Speaking ಅಂದೆ. ನಾನು ಡೇನಿಯಲ್ ಅಂತ, ನಾಳೆ ಮಧುವೆಗೆ ಒಂದು ಫೋಟೋಶೂಟ್ ಮಾಡಿಕೊಡ್ತಿರಾ ಪ್ಲೀಸ್. ಮುಂದಿನ ವಾರ ನನ್ನ ಮದುವೆ. ಸುಮಾರು ಸ್ಟುಡಿಯೊಸ್ ಗೆ ಕರೆ ಮಾಡಿದೆ ಆದರೆ ಎಲ್ಲ ಸ್ಟುಡಿಯೊಸ್ ಬುಕ್ ಆಗಿವೆ … Read more

ವಿಮಲಿ: ಎನ್, ಶೈಲಜಾ ಹಾಸನ

ಇಸ್ಕೋಲಿನಲ್ಲಿ ಏಳಿದ್ದ ವಿಸಯದ್ದ ಬಗ್ಗೆನೇ ಅವತ್ತೇಲ್ಲ ಯೋಚ್ನೆ ಮಾಡ್ಕಂಡು ಏಟು ವೊತ್ತಿಗೆ ಮನಿಗೋಯ್ತಿನೊ, ಏಟು ಬ್ಯಾಗ ಅವ್ವಂಗೆ ಆ ವಿಸಯ ತಿಳ್ಸಿ ನಮ್ಮನೆಗೂ ಒಂದು ಸೌಚಾಲ್ಯ ಮಾಡಿಸ್ಕೊತಿನೋ ಅಂತ ವಿಮಲಿ ಮನಸ್ಸಿನಲ್ಲೆ ಮಂಡಿಗೆ ತಿಂತಿದ್ದಳು. ಮನೆಗೆ ಬಂದವ್ಳೆ ಅವ್ವನ್ನ ಕಾಡೊಕೆ ಸುರು ಹಚ್ಕಂಡ್ಳು. “ಏಂತದೇ ಅದು ಸೌಚಲ್ಯ” ಅಂತ ಇಟ್ಟಿಗೆ ವೊತ್ತು ಸುಸ್ತಾಗಿದ್ದ ಪಾರು ರೇಕಂಡ್ಳು. ವಿಮಲಿ ಅತ್ಯೂತ್ಸಹದಿಂದ “ಅದೇ ಕನವ್ವ, ಕಕ್ಸದಮನೆ, ಇವತ್ತು ನಮ್ಮಿಸ್ಕೋಲಿನಲ್ಲಿ ದೊಡ್ಡವರೆಲ್ಲ ಬಂದು ಬಾಷ್ಣ ಮಾಡಿದ್ರು ಕನವ್ವ ಬಯಲಾಗೆ ಎಲ್ಡಕ್ಕೆ ವೋಗಬಾರದಂತೆ,ಅಂಗೆ … Read more

ಮಾನ ಕಾಪಾಡಿದ “ಫುಟೇಜ್”: ಚಂದ್ರೇಗೌಡ ನಾರಮ್ನಳ್ಳಿ

ಕೆಲವೊಮ್ಮೆ ಹೀಗಾಗುವುದುಂಟು. ಯಾರದೋ ತಪ್ಪಿಗೆ ಮತ್ತಾರಿಗೋ ಶಿಕ್ಷೆ, ಬಹುಮಾನ ನಿರೀಕ್ಷಿಸಿದ ಸಮಯದಲ್ಲಿ ಅವಮಾನ, ಕಾಣದ ಕೈಗಳ ಮೇಲಾಟ, ಸ್ಥಬ್ದ ತಿಳಿಗೊಳದಂತಿದ್ದ ದಿನಗಳಿಗೆ ಪ್ರಕ್ಷುಬ್ದ ಅಲೆಗಳ ಹೊಡೆತ. ಘಟನೆಯ ನೈಜತೆ ತಿಳಿಯುವವರೆಗೆ ತಳಮಳ. ಆಮೇಲೆ ಸಮಾಧಾನದ ಒಂದು ನಿಟ್ಟುಸಿರು. ಕಳೆದ ತಿಂಗಳು ಮಂಡ್ಯ ಜಿಲ್ಲೆಯ ಶ್ರೇಷ್ಠ ಕವಿಯೊಬ್ಬರ ಸ್ಮರಣಾರ್ಥ ನಡೆದ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದೆನು. ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿತ್ತು. ಬಿಡುವಿನಲ್ಲಿ ಹೊರಬಂದಾಗ ದಾಖಲೆ’ಯ ಪ್ರಕಾಶಕರೊಬ್ಬರು ಸಿಕ್ಕಿದರು. ಅವರನ್ನು ಮಾತನಾಡಿಸಿ ಫೋಟೋ ತೆಗೆಸಿಕೊಂಡೆವು. ಕೆಲವೇ ನಿಮಿಷಗಳಲ್ಲಿ ಉದ್ಘಾಟಿಸಿದ ಗಣ್ಯ ಸಾಹಿತಿಯೂ ಹೊರಬಂದರು. … Read more

ಸುಂದರ ಸಿಯಾಟೆಲ್: ಪ್ರಶಸ್ತಿ

ನಮಗೆ ಅದೇ ಹೆಸರೇಕೆ ಇಟ್ಟರು ಅನ್ನೋದರ ಹಿಂದೆ ನಮ್ಮಪ್ಪ ಹೇಳೋ ತರ ಪ್ರಸಿದ್ಧ ನಗರಗಳಿಗೂ ಆ ಹೆಸರುಗಳೇ ಯಾಕೆ ಬಂದವು ಅಂತ ಎಷ್ಟು ಸಲ ಯೋಚನೆ ಮಾಡಿರೋಲ್ಲ ನಾವು ? ಹೆಸರಲ್ಲೇನಿದೆ ಅಂದ್ರಾ ? ಪ್ರತೀ ನಗರಕ್ಕೂ ತನ್ನದೇ ಆದೊಂದು ಹೆಸರಿರುತ್ತೆ. ಆ ಹೆಸರೇಕೆ ಬಂತು ಅನ್ನೋದರ ಹಿಂದೊಂದು ಸುಂದರ ಕಥೆಯಿರುತ್ತೆ. ಹೆಸರ ಇತಿಹಾಸ ಥಟ್ಟನೆ ಗೋಚರಿಸದಿದ್ದರೂ ಕಾಲಗರ್ಭದಲ್ಲೆಲ್ಲೋ ಮರೆಯಾಗಿ ಕೆದಕುವವರಿಗಾಗಿ ಕಾದು ಕೂತಿರುತ್ತೆ. ದೇಶ ಸುತ್ತೋ ಜೋಶಿನಲ್ಲಿ ಸಿಕ್ಕಿದ್ದ ಸಿಯಾಟೆಲ್ಲಿಗೆ ಆ ಹೆಸರೇಕೆ ಬಂತೆನ್ನೋ ಪ್ರಶ್ನೆಯ … Read more

ನಮ್ಮತನವ ಉಳಿಸಿಕೊಳ್ಳೋಣ: ಸ್ಮಿತಾ ಮಿಥುನ್

ಹಬ್ಬ ಗಳು ಅಂದ್ರೆ ನನ್ಗೆ ತುಂಬಾ ಇಷ್ಟ, ಯಾಕೆ ಅಂದ್ರೆ ಆವತ್ತು ಸಂಭ್ರಮ ಪಡೋ ದಿನ ಹಬ್ಬಗಳ ಮಹತ್ವ ಗೊತ್ತಾಗಿದೆ ನಾನು ಇಲ್ಲಿ ಅಂದ್ರೆ ದೂರದ ಗಲ್ಫ್ ಗೆ ಬಂದ ಮೇಲೆ. ಹಬ್ಬಗಳು ನಮ್ಮತನದ ಪ್ರತೀಕ. ಇವತ್ತು ನಾವು ನಮ್ಮತನವನ ಯಾಕೋ ಬಿಟ್ಟು ಬಿಡುತಿದ್ದೇವೋ ಅಂಥ ಅನಿಸೋಕೆ ಶುರು ಆಗಿದೆ. ನಾವು ಅಂದ್ರೆ ಕನ್ನಡಿಗರೇ ಹೀಗೆನಾ ? ಯಾಕೆ ಅಂದ್ರೆ ನೀವು ಗುಜರಾತಿಗಳನ್ನ ನೋಡಿ ಎಲ್ಲಿ ಹೋದ್ರು ಅಲ್ಲಿ ಒಂದು ಸಣ್ಣ ಗುಜರಾತ್ ನ ನಿರ್ಮಿಸಿಬಿಡ್ತಾರೆ. ಆದ್ರೆ … Read more