“ದೇಶ ದೇಶದಾರತಿ ಬಂದೋ”: ಗೋಳೂರ ನಾರಾಯಣಸ್ವಾಮಿ

ಅಕ್ಕ ಮಾರಮ್ಮ ಗುಡಿಗಾ ಚಿಕ್ಕವೆರೆಡು ಗಿಳಿಬಂದೋ….ಕಪ್ಪು ತುಂಬಿವೋ ಗುಡಿಗೆಲ್ಲಾಕಪ್ಪು ತುಂಬಿವೋ ಗುಡಿಗೆಲ್ಲಾ ಮಾರಮ್ಮ-ಬಣ್ಣ ಬಳದಾವೋ ಗುಡಿಗೆಲ್ಲದೇಶ ದೇಶದಾರತಿ ಬಂದೋ|| ಹಟ್ಟಿ ಮುಂದ ಹರಡಿಕೊಂಡಿದ್ದ ಸೂಜಿ ಮಲ್ಲುಗ ಚಪ್ಪರದ ಕೆಳಗೆ ಕುಳಿತು ಇದುವರೆಗೂ ನಾನು ನಮ್ಮ ಸೀಮೆಯೊಳಗೆ ಎಲ್ಲೂ ಕ್ಯೋಳದೇ ಇರುವ ಈ ಅಪರೂಪದ ಸಾಲುಗಳನ್ನು ಹಾಡುತ್ತಿದ್ದ ನಮ್ಮಜ್ಜಿ ಪುಟ್ಟಸಿದ್ದಮ್ಮನ ಈ ಹಾಡು, ಈ ಹಾಡಿನ ಮೇಲು ಸ್ವರವ ಕೇಳಿ ನನ್ನೆದೆಯೊಳಗಿಂದೆದ್ದ ಸಂಕಟಕ್ಕೆ ಕೊನೆಯಿಲ್ಲದಾಯಿತು. ಆಗ ತಾನೇ ಗದ್ದ ಕೆಲಸದಿಂದ ಬಂದ ನನ್ನ ನೋಡಿದ ಅಜ್ಜಿ ತಾನು ಹಾಡುತ್ತಿದ್ದ … Read more

ಶಿಸ್ತು ಮತ್ತು ನಾವು: ಪರಮೇಶ್ವರಿ ಭಟ್

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸುಭಾಷಿತಗಳು, ನೀತಿ ವಾಕ್ಯಗಳು ಇರುವುದು ಎಲ್ಲಿ ಅಂತ ಕೇಳಿದರೆ ಭಾರತದಲ್ಲಿ ಅಂತ ಸುಲಭವಾಗಿ ಹೇಳಿಬಿಡಬಹುದು. ಬೇರೆ ದೇಶಗಳಲ್ಲಿಯೂ ಇರಬಹುದು, ಆದರೆ ನಮ್ಮಲ್ಲಿ ಇರುವಂತಹ ನೀತಿಕಥೆಗಳು ವಿಶ್ವದಾದ್ಯಂತ ಹೆಸರು ಪಡೆದಿವೆ. ಕೆಲವು ವರ್ಷಗಳ ಹಿಂದೆ ನೋಬೆಲ್ ಪುರಸ್ಕಾರ ಪಡೆದ ಯುಗೋಸ್ಲಾವೀಯಾದ ಸಾಹಿತಿಯೊಬ್ಬ “ನಾನು ಭಾರತದ ಜಾತಕದ ಕಥೆಗಳನ್ನು, ಪಂಚತಂತ್ರದ ಕಥೆಗಳನ್ನು ಓದಿ ಬೆಳೆದವನು” ಅಂತ ಹೇಳಿದಾಗ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಹೆಮ್ಮೆಯೂ ಆಯಿತು. ಹಿಂದಿನ ಕಾಲದಲ್ಲಿ ಅನುವಾದಿತ ಪುಸ್ತಕಗಳ ಮುಖಾಂತರವೇ ಇತರ ಭಾಷೆಗಳ … Read more

ಗಜಲ್ ಜುಗಲ್ ಬಂದಿ

1) ಹೈ.ತೋ ಅವರ ಗಜಲ್ ; ದಿಂಬಿನೊಳಗೆ ನಲುಗಿಹೋದ ನೋವುಗಳೆಷ್ಟೋ..ಎದೆಯೊಳಗೆ ಕಮರಿಹೋದ ಕನಸುಗಳೆಷ್ಟೋ. ಎಷ್ಟೊಂದು ಚೀತ್ಕಾರಗಳು ನಿಟ್ಟುಸಿರು ನುಂಗಿದೆಮನದೊಳಗೆ ಹಿಡಿದಿಟ್ಟ ಕಹಿ ವೇದನೆಗಳೆಷ್ಟೋ ನೋವುಂಡ ಹೃದಯ ಒಡೆದು ಹೋಗಿದೆ ಗೆಳೆಯಾಬಾಧೆ ಹೆತ್ತು ಎದೆಯ ಆವರಿಸಿದ ವಿರಹಗಳೆಷ್ಟೋ ಕತ್ತಲೆ ಚಿಮ್ಮಿ ತತ್ತರಿಸುವ ತಾರೆಗಳಿಗೆ ಕಡಿವಾಣವಿಲ್ಲಸಾವ ನೋವಿನ ಕಡು ಸಂಕಟಗಳ ಭಾವಗಳೆಷ್ಟೋ ನನ್ನದೆಯಾಳದಲ್ಲಿ ಚಿತೆಗಳ ಚಿತ್ತಾರˌ ವಿವಿಧ ಆಕಾರಹೃದಯದಲಿ ಹೆಪ್ಪಾದ ನಿಕೃಷ್ಟ ಆ ನಿಂದನೆಗಳೆಷ್ಟೋ ನಿತ್ಯ ಸೃಂಗಾರ ಚೆಲುವ ಅಲಂಕಾರ ಎಲ್ಲವೂ ಅವನಿಗಾಗಿನಿರೀಕ್ಷೆಯ ನಿರಾಶೆಯಲ್ಲಿ ಬದಲಿಸಿದ ಮಗ್ಗಲುಗಳೆಷ್ಟೋ ನನ್ನೊಳಗೆ ನನ್ನನ್ನು … Read more

“ಹೀಗೊಂದು ಪ್ರೇಮ ಕಥೆ. . !” : ಅರವಿಂದ. ಜಿ. ಜೋಷಿ.

ಹುಡುಗ:-“I, love you, . . ನೀನು ನನ್ನನ್ನು ಪ್ರೀತಿಸುವೆಯಾ?. . ಹಾಗಿದ್ದರೆ ನಾ ಹೆಳಿದ ಹಾಗೆ “ಏ ಲವ್ ಯು”ಅಂತ ಹೇಳು.ಹುಡುಗಿ:-” ನಿನ್ನ ಪ್ರಶ್ನೆಗೆ ಉತ್ತರೀಸುವೆ. . . ಆದರೆ ಒಂದು ಕಂಡೀಷನ್ ಮೇರೆಗೆ”ಹುಡುಗ, :-“ಆಯ್ತು. . ಅದೇನು ಕಂಡೀಷನ್ , ಹೇಳು”ಹುಡುಗಿ:-“ನೀನು ಬದುಕಿನುದ್ದಕ್ಕೂ ನನ್ನ ಜೊತೆ ಇರುವುದಾದರೆ ಮಾತ್ರ ಉತ್ತರಿಸುವೆ.ಹುಡುಗ:-(ಮುಗುಳು ನಗೆ ನಗುತ್ತ) “ಅಯ್ಯೋ. . ಪೆದ್ದೇ ಇದೂ ಒಂದು ಕಂಡೀಷನ್ನಾ? ನಾನಂತೂ ತನು-ಮನದಿಂದ ನಿನ್ನವನಾಗಿದ್ದೇನೆ, ಇಂತಹುದರಲ್ಲಿ ನಿನ್ನ ಬಿಟ್ಟು ನಾ ಎಲ್ಲಿ ಹೋಗಲಿ?”ಹುಡುಗಿಗೆ, … Read more

“ಕತ್ತಲ ಹೂವು” ನೀಳ್ಗತೆ (ಭಾಗ ೪): ಎಂ.ಜವರಾಜ್

-೪- ಮದ್ಯಾಹ್ನದ ಚುರುಚುರು ಬಿಸಿಲು. ಊರಿನ ಮುಂಬೀದಿ ಹಳ್ಳ ಕೊಳ್ಳ ಕಲ್ಲು ಮಣ್ಣಿಂದ ಗಿಂಜಿಕೊಂಡು ಕಾಲಿಟ್ಟರೆ ಪಾದ ಮುಳುಗಿ ಧೂಳೇಳುತ್ತಿತ್ತು. ಮಲ್ಲ ಮೇಷ್ಟ್ರು ಮನೆಯ ಎರಡು ಬ್ಯಾಂಡಿನ ರೇಡಿಯೋದಲ್ಲಿ ಪ್ರದೇಶ ಸಮಾಚಾರ ಬಿತ್ತರವಾಗುತ್ತಿತ್ತು. ಆಗ ಬಿಸಿಲ ಝಳಕ್ಕೆ ತಲೆ ಮೇಲೆ ಟವೆಲ್ ಇಳಿಬಿಟ್ಟು ಲಳಲಳ ಲಳಗುಟ್ಟುವ ಕ್ಯಾರಿಯರ್ ಇಲ್ಲದ ಅಟ್ಲಾಸ್ ಸೈಕಲ್ಲಿ ಭರ್ರಂತ ಬಂದ ಮಂಜ ಉಸ್ಸಂತ ಸೈಕಲ್ ಇಳಿದು ತಲೇಲಿದ್ದ ಟವೆಲ್ ಎಳೆದು ಬೆವರು ಒರೆಸಿಕೊಂಡು ತೆಂಗಿನ ಮರ ಒರಗಿ ನಿಂತಿದ್ದ ನೀಲಳನ್ನು ಒಂಥರಾ ನೋಡಿ … Read more

ಚಲಿಸುವ ಪಾತ್ರಗಳ ಮಾಸ್‌ ಕತೆಗಳ “ತಿರಾಮಿಸು”: ಡಾ. ನಟರಾಜು ಎಸ್‌ ಎಂ

ಶಶಿ ತರೀಕೆರೆ ಕನ್ನಡದ ಭರವಸೆಯ ಯುವ ಕತೆಗಾರ. ಈಗಾಗಲೇ ಯುವ ಬರಹಗಾರರ ಸೃಜನಶೀಲ ಬರಹಗಳಿಗೆ ನೀಡುವ ಟೋಟೋ ಪುರಸ್ಕಾರ, ಹಾಗು ಅವರ ಚೊಚ್ಚಲ ಪುಸ್ತಕ “ಡುಮಿಂಗ”ಕ್ಕೆ ಛಂದ ಪುಸ್ತಕ ಬಹುಮಾನ ಸೇರಿದಂತೆ ಇತರ ಬಹುಮಾನಗಳು ಕೂಡ ಲಭಿಸಿದೆ. ತಮ್ಮ ಮೊದಲ ಪುಸ್ತಕ “ಡುಮಿಂಗ” ಪ್ರಕಟವಾದ ನಾಲ್ಕು ವರ್ಷಗಳ ನಂತರ ಶಶಿಯವರು ತಮ್ಮ ಎರಡನೇ ಕಥಾ ಸಂಕಲನ “ತಿರಾಮಿಸು” ವನ್ನು ಹೊರತಂದಿದ್ದಾರೆ. ತಮ್ಮ ಸಾಹಿತ್ಯ ಪಯಣದ ಜೊತೆಜೊತೆಗೆ, ತಮ್ಮ ಪ್ರಕಾಶನದ ಮೂಲಕ ಕನ್ನಡದ ಯುವ ಬರಹಗಾರರನ್ನು ಮುನ್ನೆಲೆಗೆ ತರಲು … Read more

ತ್ವಾಡದ ಶಿಕಾರಿ: ಡಾ. ದೋ. ನಾ. ಲೋಕೇಶ್

ಬಿಲಕ್ಕೆ ನೀರು ಬಿಟ್ಟಿದ್ದೇ ತಡ ಬುಳ, ಬುಳ, ಬುಳಾಂತ ನೀರಲ್ಲಿ ಗುಳ್ಳೆ ಬಂದ ತಕ್ಷಣವೇ ಪಂಚೇಂದ್ರಿಯಗಳೆಲ್ಲ ಎಚ್ಚರವಾಗಿ ಕೈಲಿದ್ದ ಗುದ್ದಲಿಯನ್ನು ಒನಕೆ ಓಬವ್ವನ ಭಂಗಿಯಲ್ಲಿ ಎತ್ತಿ ನಿಂತು ಕಾಯುತ್ತಾ, “ಈ ಬಿಲದಲ್ಲಿ ಪಕ್ಕಾ ತ್ವಾಡ ಐತೆ ಕಣೋ ಅಂದ” ನಟಿ ಅಣ್ಣ. ಉಪ್ಪು ಖಾರ ಹಚ್ಚಿ ಬೆಂಕಿಲಿ ಸುಟ್ಟ ತ್ವಾಡದ ಬಾಡಿನ ರುಚಿ ನೆನೆಯುತ್ತಾ ಬಾಯಲ್ಲಿ ಉದ್ಭವಿಸಿದ ಜೊಲ್ಲನ್ನು ನುಂಗಿ ತದೇಕ ಚಿತ್ತದಿಂದ ಬಿಲದ ಕಡೆ ನೋಡುತ್ತಾ ತೊಡ ಹೊರಬರುವುದನ್ನೇ ಕಾಯುತ್ತಾ ನಿಂತೆ. ಹಿಂದೆಲ್ಲ ಬಯಲುಸೀಮೆಯ ರೈತ … Read more

“ಕಿಂಚಿತ್ತೇ ಸಹಾಯ!”: ರೂಪ ಮಂಜುನಾಥ

ಈ ಕತೆಯ ನಾಯಕಿ ಸುಮ ಆ ದಿನ ಕೂಡಾ ಪಕ್ಕದ ಮನೆಯ ಆ ಹೆಂಗಸು ತನ್ನ ಗಂಡನ ಆಟೋನಲ್ಲಿ ಕೂತು ಕೆಲಸಕ್ಕೆ ಹೋಗುವುದನ್ನ ಕಂಡು”ಅಬ್ಬಾ, ಅದೇನು ಪುಣ್ಯ ಮಾಡಿದಾಳಪ್ಪಾ. ಅವರ ಮನೆಯವರು ಏನೇ ಕೆಲಸವಿದ್ದರೂ ಸರಿಯೆ, ಸಮಯಕ್ಕೆ ಸರಿಯಾಗಿ ಬಂದು ಹೆಂಡತಿಯನ್ನ ಆಟೋನಲ್ಲಿ ಕೂರಿಸಿಕೊಂಡು ಕೆಲಸಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರ್ತಾರೆ. ಅಯ್ಯೋ, ನಮ್ ಮನೇಲೂ ಇದಾರೇ ದಂಡಕ್ಕೆ!ಏನೇ ಕಷ್ಟ ಪಡ್ತಿದ್ರೂ ಕ್ಯಾರೇ ಅನ್ನೋಲ್ಲ. ಇತ್ತೀಚೆಗಂತೂ ಬಲ್ ಮೋಸ ಆಗೋಗಿದಾರೆ! ನಾನು ಗಾಡಿ ಕಲಿತಿದ್ದೇ ತಪ್ಪಾಯಿತೇನೋ! ಏನ್ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೩): ಎಂ.ಜವರಾಜ್

-೩- ಅವತ್ತು ಮಳೆ ಜೋರಿತ್ತು. ಬಿರುಗಾಳಿ. ಶಿವಯ್ಯನ ಮನೆಯ ಮಗ್ಗುಲಿಗಿದ್ದ ದೊಡ್ಡ ವಯನುಗ್ಗೆ ಮರ ಬೇರು ಸಮೇತ ಉರುಳಿತು. ಮರದ ರೆಂಬೆ ಕೊಂಬೆಗಳು ಮನೆಯ ಮೇಲೂ ಬಿದ್ದು ಕೈಯಂಚು ನುಚ್ಚಾಗಿದ್ದವು. ಮಳೆಯಿಂದ ಮನೆಯೆಲ್ಲ ನೀರು ತುಂಬಿತ್ತು. ಶಿವಯ್ಯ, ಅವನ ಹೆಂಡತಿ ಸಿದ್ದಿ ಮಕ್ಕಳನ್ನು ತಬ್ಬಿಕೊಂಡು ಕೊಟ್ಟಿಗೆ ಮೂಲೇಲಿ ನಿಂತು ಸೂರು ನೋಡುವುದೇ ಆಯ್ತು. ಪಕ್ಕದ ಗೋಡೆಯಾಚೆ ಅಣ್ಣ ನಿಂಗಯ್ಯನ ಮನೆಯಲ್ಲಿ ಆರು ತಿಂಗಳ ಹೆಣ್ಗೂಸು ಕರ್ರೊ ಪರ್ರೊ ಅಂತ ಒಂದೇ ಸಮ ಅರಚುತ್ತಿತ್ತು. ಶಿವಯ್ಯ ‘ಅಣ್ಣ.. ಅಣೈ … Read more

ಪಂಜು ಕಾವ್ಯಧಾರೆ

ಅವಳು ಅಂಧಕಾರದಿಅನುದಿನವ ದೂಡಿದಳುಒಂದೇ ತೆರದಿತನ್ನ ಪಯಣವ ನಡೆಸಿದಳುಬಾಳಿನಲ್ಲಿ ಸುಖ ದುಃಖ ಏನೆಂದರೆಮುಗುಳ್ನಗುವಳುಎಲ್ಲವೂ ಇದ್ದು ಇಲ್ಲವೆಂಬಂತೆ….. ತನ್ನೆಲ್ಲಾ ನೋವ ಮರೆತಳುಆಸೆ ಕನಸುಗಳ ಬಚ್ಚಿಟ್ಟಳುಕಂಬನಿಯ ಹೊರಸೂಸದಂತೆಕಣ್ಣಂಚಿನಲ್ಲಿ ಇಟ್ಟವಳು….. ಮನದಲ್ಲಿ ನೂರು ವೇದನೆಮುಖದಲ್ಲಿ ಒಂದು ತೋರದೆಸಹನೆಯ ಮೂರುತಿಸದಾ ಹಸನ್ಮುಖಿಯಂತೆ….. ಆದರವಳ ಕಣ್ಣೋಟವುಸಾವಿರ ಕಥೆಗಳ ಹೇಳುತಿಹವು…..ಆಕಾಶದೆತ್ತರದ ಗುಣದವಳುಪಾತಾಳಕ್ಕದುಮಿದರು ಮುಳುಗಲಿಲ್ಲಬೆಳಗಿದಳು ತಾನಿರುವಲೆಲ್ಲ….. *ಮತ್ತೆ ಮುಂಜಾವು ತುಸು ನಸುಕಿನಲ್ಲಿ ಕೂಗುತ್ತಿದೆ ಕೋಳಿಎದ್ದೇಳಿ ಬೆಳಗಾಯಿತ್ತೆಂದು…ಹಕ್ಕಿಗಳ ಕಲರವ…ಅಂಬಾ ಎನ್ನುವ ಕೂಗು…ಕರ್ಣಗಳ ಸೆಳೆಯುತ್ತಿವೆ… ದಟ್ಟರಣ್ಯವ ಸೀಳಿತೆಂಗು ಮಾಮರಗಳನಡುವೆ ಭೂಮಿಗಿಳಿದಾಯಿತು ರವಿಕಿರಣ…ನಿನ್ನೆಯ ಕೆಲಸಕ್ಕೆ ಜೋತುಬಿದ್ದನರನಾಡಿಗಳ ಪುನಶ್ಚೇತನಗೊಳಿಸೆಮತ್ತೆ ಬಂದಿದೆ ಮುಂಜಾವು… ಘಮ ಘಮಿಸುವ … Read more

“ಕರುಳಿನ ಕರೆ”: ರೂಪ ಮಂಜುನಾಥ

ಆ ದಿನ ಮನೆಯ ಒಡತಿ ಪ್ರೇಮ, ನಾಟಿಕೋಳಿ ಸಾರಿನ ಜೊತೆಗೆ ಬಿಸಿಬಿಸಿ ಮುದ್ದೆ ಮಾಡಿದ್ದಳು. ಆದಾಗಲೇ ರಾತ್ರೆ ಎಂಟೂವರೆ ಆಗಿತ್ತು. “ಅಮ್ಮಾವ್ರೇ ನಾನು ಮನೆಗೆ ಹೊಂಡ್ಲಾ?ವಾರದಿಂದ್ಲೂವ ಒಟ್ಟಿರ ಬಟ್ಟೆ ಸೆಣಿಯಕೇಂತ ವತ್ತಾರೇನೇ ನೆನೆಯಾಕಿ ಬಂದೀವ್ನಿ. ಈಗ್ ಓಗಿ ಒಗ್ದು ಒಣಾಕಬೇಕು”, ಎಂದು ಮನೆಯೊಡತಿಯ ಅಪ್ಪಣೆಗಾಗಿ ಕಾಯುತ್ತಾ ಅಡುಗೆ ಕೋಣೆಯ ಮುಂದೆ ನಿಂತಳು ಶಿವಮ್ಮ. ಅದಕ್ಕೆ ಪ್ರೇಮ, ”ಚಿನ್ಮಯ್ ಗೆ ತಿನ್ನಿಸಿ ಆಯ್ತಾ ಶಿವಮ್ಮಾ?”, ಅಂದ್ಲು. ಅದಕ್ಕೆ ಶಿವಮ್ಮ, ಕಂಕುಳಲ್ಲಿ ಎತ್ತಿಕೊಂಡ ಕೂಸನ್ನೇ ವಾತ್ಸಲ್ಯಪೂರಿತಳಾಗಿ ನೋಡುತ್ತಾ, ”ಊ ಕಣ್‌ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೨): ಎಂ.ಜವರಾಜ್

-೨- ಸಂಜೆ ನಾಲ್ಕರ ಹೊತ್ತು. ಚುರುಗುಟ್ಟುತ್ತಿದ್ದ ಬಿಸಿಲು ಸ್ವಲ್ಪ ತಂಪಾದಂತೆ ಕಂಡಿತು. ಕಾಡಿಗೆ ಹೋಗಿದ್ದ ಹಸು ಕರು ಕುರಿ ಆಡುಗಳು ಊರನ್ನು ಪ್ರವೇಶ ಮಾಡುತ್ತಿದ್ದವು. ಅದೇ ಹೊತ್ತಲ್ಲಿ ಉದ್ದದ ಬ್ಯಾಗು ನೇತಾಕಿಕೊಂಡು ಕೈಯಲ್ಲಿ ಕಡ್ಲೇಕಾಯಿ ಪೊಟ್ಟಣ ಹಿಡಿದು ಒಂದೊಂದಾಗಿ ಬಿಡಿಸಿ ಬಿಡಿಸಿ ಮೇಲೆ ಆಂತುಕೊಂಡು ಕಡ್ಲೇಬೀಜ ಬಾಯಿಗಾಕಿ ತಿನ್ನುತ್ತಾ ಸ್ಕೂಲಿಂದ ಬರುತ್ತಿದ್ದ ಚಂದ್ರನಿಗೆ, ಹಸು ಕರು ಕುರಿ ಆಡುಗಳ ಸರದಿಯ ನಂತರ ಮೇವು ಮೇಯ್ಕೊಂಡು ಮಲಕಾಕುತ್ತ ಹೊಳೆ ಕಡೆಯಿಂದ ಒಕ್ಕಲಗೇರಿಯ ಕಡೆ ಹೋಗುತ್ತಿದ್ದ ಲಿಂಗಾಯಿತರ ಹಾಲು ಮಾರುವ … Read more

ʼಕುಲುಮೆʼ ಬೆಳಗಿದ ಬಾಳು: ಎಂ ನಾಗರಾಜಶೆಟ್ಟಿ

ʼಕುಲುಮೆʼ ದಸ್ತಗಿರ್ ಸಾಬ್, ಕೋಡಿಕ್ಯಾಂಪ್ ತರೀಕೆರೆ ಇವರ ಜೀವನ ವೃತ್ತಾಂತ- ಬಿಕ್ಕಲಂ ರಹಮತ್ ತರೀಕೆರೆ. ಹೀಗೆಂದರೆ ಪ್ರಾಧ್ಯಾಪಕ, ವಿಮರ್ಶಕ, ಸಂಶೋಧಕ, ಪ್ರಬಂಧಕಾರ ರಹಮತ್ ತರೀಕೆರೆ ಅವರ ಬಾಳಚಿತ್ರಗಳ ʼಕುಲುಮೆʼಗೆ ಕಿಂಚಿತ್ತೂ ಊನವಾಗುವುದಿಲ್ಲ; ಬದಲು ಹೆಚ್ಚು ಅರ್ಥಪೂರ್ಣವಾಗುತ್ತದೆ. ಕಾರಣ: ರಹಮತ್ ತರೀಕೆರೆಯವರ ಆತ್ಮಕಥನ ʼಕುಲುಮೆʼಯ ಪ್ರತಿ ಅಧ್ಯಾಯದಲ್ಲೂ ದಸ್ತಗಿರ್ ಸಾಬರಿದ್ದಾರೆ. ಕುಲುಮೆ ದತ್ತಣ್ಣ ಎನ್ನುವ ಖ್ಯಾತಿಯ, ಸಾವ್ಕಾರ್ರೆ ಎಂದರೆ ಬೀಗುವ ದಸ್ತಗಿರ್ ಸಾಬ್, ಕುಲುಮೆ ಮತ್ತು ಬೇಸಾಯವನ್ನುಮೂಲ ವೃತ್ತಿ ಮಾಡಿಕೊಂಡಿದ್ದರೂ ಹೊಟ್ಟೆಪಾಡಿಗಾಗಿನೂರೆಂಟು ವೇಷ ತೊಡಲು ಹಿಂಜರಿಯದವರು. ಸರ್ಕಸ್ ಕಂಪೆನಿ … Read more

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುವ ಸಿನಿಮಾ – ಜವಾನ್: ಚಂದ್ರಪ್ರಭ ಕಠಾರಿ

. ಕಳೆದ ವರ್ಷಗಳಲ್ಲಿ ತೆರೆಕಂಡ ಬಾಹುಬಲಿ, ಕೆಜಿಎಫ್‌, ಪುಷ್ಪದಂಥ ಸೂಪರ್‌ ಹುಮನ್ ಅಂದರೆ ಎಂಥದ್ದೇ ಕಷ್ಟಗಳು ಎದುರಾದರೂ ತನ್ನ ದೈಹಿಕ ಶಕ್ತಿ, ಬುದ್ದಿಮತ್ತೆಯಿಂದ ನಿವಾರಿಸುವ ಅತೀವ ಆತ್ಮವಿಶ್ವಾಸದ ಮ್ಯಾಚೊ(macho) ಸಿನಿಮಾಗಳು ಪ್ಯಾನ್‌ ಇಂಡಿಯಾ ಪ್ರದರ್ಶನಗೊಂಡು ನೂರಾರು ಕೋಟಿಗಳ ಲಾಭವನ್ನು ಗಳಿಸಿದವು. ಮಿಸ್ಸಾಯ(messiah) ಅಥವಾ ಸರ್ವರ ಸಕಲ ಸಂಕಷ್ಟಗಳಿಗೆ ಏಕೈಕ ನಿವಾರಕನಾಗಿ ರೂಪಿತವಾಗಿರುವ ಇಂತಹ ಸಿನಿಮಾಗಳಲ್ಲಿ ಹಿಂಸೆ, ರಕ್ತಪಾತ ಕಣ್ಣಿಗೆ ರಾಚುವಷ್ಟು ಅತಿಯಾಗಿ ಕಂಡು ಬಂದಿದ್ದರೂ ಪ್ರೇಕ್ಷಕರು ಅದನ್ನೇ ಮನೋರಂಜನೆಯಾಗಿ ಸಂಭ್ರಮಸಿದ್ದು ಸಮಾಜ ಮನೋವಿಜ್ಞಾನ ಅಧ್ಯಯನಕ್ಕೆ ಒಳಪಡುವಂಥ ವಿಷಯ. … Read more

ಮೂರು ಕವನಗಳು: ದಯಾನಂದ ರೈ ಕಳ್ವಾಜೆ

“ಮೌನ ತಪ್ಪಿದ ಹಾದಿ”.. ಮೆಲ್ಲುಲಿದು ಪಾದಸರಮೌನವಾಯಿತು ಮತ್ತೆಅವಳ ಪಾದದಿ ಮಲಗಿ ಸದ್ದಿಲ್ಲದೇ…ಅವಳಿರುವ ಸೂಚನೆಗೆನಲಿವ ಗೆಜ್ಜೆಯೆ ದನಿಯುನಿಂತಲ್ಲೆ ಮೈ ಮರೆತು ಕಲ್ಲಾದಳೇಕೆ?!ಯಾರದೋ ಕಾಯುವಿಕೆಬಿಟ್ಟ ಕಿವಿ ಬಿರು ನೋಟಆಗಾಗ ಅವಳಿದಿರುಯಾರ ಕಡೆಗೇ…?ಸಹಜ ಸುಂದರಿಯವಳುನೀಳಕೇಶದ ರಾಶಿ…ಇನಿತಿಲ್ಲ ನವಯುವಗದಥಳಕು ಬಳುಕೂ…ಕಲ್ಲ ಚಪ್ಪಡಿಯಲ್ಲಿ ಬಿಮ್ಮನೇ ಪವಡಿಸುತಕಣ್ಣೆಡೆಯ ಕೇಶವನು ಕಿವಿಗಿಟ್ಟಳು..ಕಣ್ಣಂಚು ನೀರಹನಿಕೈ ಬಿಗಿದ ಫೋನೊಂದುಆಗಾಗ ಅದರೆಡೆಗು ಹರಿದ ದೃಷ್ಟಿ….ಬಂತೊಂದು ಸಂದೇಶಮರೆತು ಬಿಡು ನನ್ನಿದಿರಕಾಯದಿರು ನನ್ನೊಲವಮೂಗಿಯನು ಕೈಹಿಡಿದು ನಾ ಬಾಳಲಾರೆ…ಬಿಗಿದ ಗಂಟಲು ಬೇನೆಅಳುವಿಗೂ ದನಿಯಿಲ್ಲಬಿಕ್ಕಿದಳು ಮೌನದಲಿ ಹಾಯೆನಿಸುವಷ್ಟು..ಪಾದಸರ ಕಂಪಿಸಿತುಮತ್ತೆ ಚೇತನವಾಯ್ತುಹದಗೆಟ್ಟ ಭಾವದಲಿ ಪುಟಿದೆದ್ದಳೂ…ಕಡಲಾಚೆ ಮರೆಯಾದಸಂಜೆಗೆಂಪಿನ ಸೂರ್ಯಬಸಿದ ರಕ್ತದ … Read more

ಪಂಜು ಕಾವ್ಯಧಾರೆ

ಮಿಡ್ ನೈಟ್ @ಪ್ರೀಡಂ ಹೀಗೆ ಏಕಾಂತದಲ್ಲಿಇರಲು ಯಾವಾಗಲೂನನಗೆ ಇಷ್ಟಇದು, ಅವನು ಬಿಟ್ಟು ಹೋದಹಲವುಗಳಲ್ಲಿ ಇದು ಕೂಡ. ಪ್ರತಿ ರಾತ್ರಿ ಎರಡು ಪೆಗ್ ವೈನ್ಮತ್ತವನ ಖಾಲಿ ನೆನಪುಇಷ್ಟೇ, ಚಂದ್ರನ ಆಸರೆಯಲ್ಲಿಮಧು ಹೀರುತ್ತಾ,ತೇಲುತ್ತಾ ಹಾಗೆ ಒರಗಿಕೊಳ್ಳುವೆ. ಒಮ್ಮೊಮ್ಮೆ ಅವನೊಂದಿಗೆ ಕಳೆದತುಂಟ ಪೋಲಿ ನೆನಪುಗಳುಬೇಡವೆಂದರುನನ್ನ ಅಂಗಾಲಿಗೆ ಮುತ್ತಿಡುತ್ತಾಬಲವಂತವಾಗಿ ಕಾಡಿಸುತ್ತವೆ. ಹೂ ಮುಗುಳಿಗೆತಾಕಿಸಿದ ಅವನ ಕಿರುನಾಲಿಗೆ ರುಚಿ,ಮತ್ತೆ ಮತ್ತೆಕವಾಟಗಳೆರಡು ಬಯಸುತ್ತವೆ. ಸಿಕ್ಕು ಬಿದ್ದಕೂದಲಲ್ಲಿ ಅವನಾಡಿಸಿದಕಿರು ಬೆರಳಾಟಮತ್ತೆ ಬೇಕನಿಸುತ್ತದೆ. ಹೀಗೀಗ ಬರೀ ಖಾಲಿ,ಎರಡು ಪೆಗ್ ವೈನ್ ಜೊತೆಅವನ ನೆನಪಿನೊಂದಿಗೆಹಾಗೊಮ್ಮೆ ಹಿಗೊಮ್ಮೆಬೆರಳುಗಳು ಇಣುಕಿ ಬಂದಾಗಲೇಚಿಂತೆ ಕಳೆದು … Read more

ಅತೀ ಕಡಿಮೆ ದರದಲ್ಲಿ ಅಮರನಾಥನ ಯಾತ್ರೆ ಹಾಗೂ ದೇವರ ದಯೆಯನ್ನು ಕಣ್ಣಾರೆ ಕಂಡದ್ದು..: ಶ್ರೇಯ ಕೆ ಎಂ

ಪ್ರವಾಸ, ದೇಶ ಸುತ್ತು ಕೋಶ ಓದು ಎನ್ನುವ ನಾಣ್ಣುಡಿಯಂತೆ ಪುಸ್ತಕ ಓದುವುದು ಚಿಕ್ಕಂದಿನಿಂದ ಇದ್ದ ಹವ್ಯಾಸ, ಅದರ ಜೊತೆ ದೇಶ ಸುತ್ತುವುದು ಕೂಡ. ಅಂದರೆ ಚಿಕ್ಕಂದಿನಿಂದ ನಮ್ಮ ಕರ್ನಾಟಕದ ಪ್ರತೀ ಪ್ರದೇಶವನ್ನು ಸುತ್ತಿದ್ದೇನೆ. ಆದರೆ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಇಡೀ ಭಾರತ ಸುತ್ತುವುದು ಕೂಡ ಒಂದು ಕನಸು. ಈ ಕನಸಿಗೆ ಸಾಕಾರಗೊಂಡಿದ್ದು ಮೊನ್ನೆಯ ಅಮರನಾಥ ಯಾತ್ರೆ. ಕರ್ನಾಟಕದಿಂದ ಶುರುವಾಗಿ,ದೆಹಲಿ, ಅಂಬಾಲ, ಕಾಟ್ರಾ,ಕಾಶ್ಮೀರ, ರಾಜಸ್ತಾನ್, ಗುಜರಾತ್ ಹೀಗೆ ಭಾರತ ವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರೀತಿಯಲ್ಲಿ … Read more

“ಎಲಿಜಿಬಲ್ ಬ್ಯಾಚುಲರ್ “: ರೂಪ ಮಂಜುನಾಥ, ಹೊಳೆನರಸೀಪುರ.

ಕಸದಿಂದ ರಸ ಮಾಡುವ ಕುಶಲತೆಯಿಂದ ತನ್ನ ಬೆವರಿನ ಮಣ್ಣಿನಿಂದ ಸುಂದರ ಬಾಲನನ್ನು ತಿದ್ದಿತೀಡಿದ ಲೋಕದ ಮೊತ್ತಮೊದಲ ಕ್ರಿಯೆಟಿವ್ ಅಂಡ್ ಇನ್ನೋವೇಟಿವ್ ಹೆಣ್ಣು ಜಗನ್ಮಾತೆ ಪಾರ್ವತಿಯಾದರೆ, ಏನೋ ಅಚಾತುರ್ಯದಿಂದ, ತನ್ನಿಂದಲೇ ತರಿದು ಹೋದ ಪುತ್ರನ ಮುಂಡಕ್ಕೆ, ಆನೆಯ ರುಂಡವನ್ನು ಸೇರಿಸಿದ ಮೊತ್ತಮೊದಲ ಟ್ರಾಸ್ಪ್ಲಾಂಟ್ ಸರ್ಜನ್ ನಮ್ಮ ಡಾ॥ಶಿವಪ್ಪನವರು!ಇಂಥ ಅಸಾಧ್ಯರ ಪುತ್ರನಾದ ಮೇಲೆ ನಮ್ಮ ಕರಿವದನ, ವಿನಾಯಕ ಸಾಧಾರಣವಾದ ಹೀರೋ ಆಗಲು ಸಾಧ್ಯವೇ? ಹ್ಯೂಮರಸ್, ಕ್ಲೆವರ್, ಜೋವಿಯಲ್, ಡಿಪ್ಲೊಮೆಟಿಕ್, ಸ್ಮಾರ್ಟ್, ವೈಸ್, ಒಟ್ಟಿನಲ್ಲಿ ಟೋಟಲೀ ಎಲ್ಲ ವಿಚಾರದಲ್ಲಿಯೂ ಜೀನಿಯಸ್ ಗುಣಗಳಿಂದ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧): ಎಂ.ಜವರಾಜ್

-೧- ಸಂಜೆ ಆರೋ ಆರೂವರೆಯೋ ಇರಬಹುದು. ಮೇಲೆ ಕಪ್ಪು ಮೋಡ ಆವರಿಸಿತ್ತು. ರಿವ್ವನೆ ಬೀಸುವ ಶೀತಗಾಳಿ ಮೈ ಅದುರಿಸುವಷ್ಟು. ಕಪ್ಪುಮೋಡದ ನಿಮಿತ್ತವೋ ಏನೋ ಆಗಲೇ ಮಬ್ಬು ಮಬ್ಬು ಕತ್ತಲಾವರಿಸಿದಂತಿತ್ತು. ಕೆಲಸ ಮುಗಿಸಿ ಇಲವಾಲ ಕೆಎಸ್ಸಾರ್ಟೀಸಿ ಬಸ್ಟಾಪಿನಲ್ಲಿ ಮೈಸೂರು ಕಡೆಗೆ ಹೋಗುವ ಸಿಟಿ ಬಸ್ಸಿಗಾಗಿ ಕಾಯುತ್ತಿದ್ದ ಚಂದ್ರನಿಗೆ ಮನೆ ಕಡೆ ದಿಗಿಲಾಗಿತ್ತು. ಆಗಲೇ ಒಂದೆರಡು ಸಲ ಕಾಲ್ ಬಂದಿತ್ತು. ಬೇಗನೆ ಬರುವೆ ಎಂದು ಹೇಳಿಯೂ ಆಗಿತ್ತು. ಹಾಗೆ ಹೇಳಿ ಗಂಟೆಯೇ ಉರುಳಿತ್ತು. ಸಮಯ ಕಳಿತಾ ಕಳಿತಾ ಮನೆ ಕಡೆ … Read more