ಕುವೆಂಪು ಯುವ ಮಂಥನ ಲೇಖನ ಸ್ಪರ್ಧೆಗೆ ಆಹ್ವಾನ

ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಬುಕ್ ಬ್ರಹ್ಮ ಸಂಸ್ಥೆ ಜಂಟಿಯಾಗಿ “ಕುವೆಂಪು: ಯುವ ಮಂಥನ” ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. ಕುವೆಂಪು ಅವರ ನಾಡು ನುಡಿ ಚಿಂತನೆ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ದೃಷ್ಟಿ, ಅಧ್ಯಾತ್ಮಿಕ ಮನೋಧರ್ಮಗಳನ್ನು ಅರಿಯುವ ಬಗೆಗಳನ್ನು ಈ ಲೇಖನಗಳು ಒಳಗೊಂಡಿರಲಿ.

ನಿಯಮಗಳು: ಲೇಖನಗಳು ವಿಮರ್ಶಾತ್ಮಕ ಒಳನೋಟಗಳನ್ನು ಹೊಂದಿರಬೇಕು. 2000 ಪದಗಳನ್ನು ಮೀರದಂತಿರಲಿ. ಲೇಖಕರ ವಯಸ್ಸು 35 ವರ್ಷಗಳನ್ನು ಮೀರದಂತಿರಬೇಕು. ಲೇಖನಗಳು ಎಲ್ಲಿಯೂ ಪ್ರಕಟವಾಗಿರಬಾರದು.

ಮೊದಲ ಬಹುಮಾನ 5 ಸಾವಿರ + 3 ಸಾವಿರ ಮೊತ್ತದ ಪುಸ್ತಕ, ಎರಡನೇ ಬಹುಮಾನ 3 ಸಾವಿರ+ 2 ಸಾವಿರ ಮೊತ್ತದ ಪುಸ್ತಕ, ಹಾಗೂ ಮೂರನೇ ಬಹುಮಾನ 2 ಸಾವಿರ + 1 ಸಾವಿರ ಮೊತ್ತದ ಪುಸ್ತಕಗಳನ್ನು ನೀಡಲಾಗುವುದು.

ಕುವೆಂಪು ಅವರ ಈ ಕೆಳಗಿನ ಲೇಖನಗಳನ್ನು ಆಧರಿಸಿ ಬರೆಯಿರಿ.

  1. ವಿಚಾರಕ್ರಾಂತಿಗೆ ಆಹ್ವಾನ
  2. ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ
  3. ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ
  4. ಸಂಸ್ಕೃತಿ ಕರ್ನಾಟಕ
  5. ಜನತಾಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ
  6. ವಿದ್ಯಾರ್ಥಿಗಳಿಗೇಕೆ ಸಾಹಿತ್ಯ
  7. ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆ
  8. ಬಹುಜಿಹ್ವಾ ಭಾರತಿಗೆ ಐಕ್ಯತೆಯ ಆರತಿ

ಟೈಪಿಸಲ್ಪಟ್ಟ ಲೇಖನಗಳು 15 ಡಿಸೆಂಬರ್ ಒಳಗಾಗಿ ನಮ್ಮನ್ನು ತಲುಪಬೇಕು. ಆಯ್ದ ಅತ್ಯುತ್ತಮ ಲೇಖನಗಳನ್ನು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು.

ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ: ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ, ಮೂರನೇ ಮಹಡಿ, ಆರ್.ಕೆ ಕಾಂಪ್ಲೆಕ್ಸ್, ಕೆಎಸ್‌ಎಸ್‌ಐಡಿಸಿ ಕಾಂಪೌಡ್, ಎಲೆಕ್ಟ್ರಾನಿಕ್ಸ್ ಸಿಟಿ ಫೇಸ್-1, ಬೆಂಗಳೂರು ಕರ್ನಾಟಕ 560100. ಮೊಬೈಲ್‌ ನಂಬರ್ : 7892608118, ಇಮೇಲ್ ಐಡಿ: nimagaagi@bookbrahma.com


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x