ತವಕ ತಲ್ಲಣಗಳ ತಾಜಾಭಿವ್ಯಕ್ತಿ ; ಮೊಗೆದ ಬಾನಿಯ ತುಂಬ ತಿಳಿನೀರ ಬಿಂಬ: ಡಾ. ಹೆಚ್ ಎನ್ ಮಂಜುರಾಜ್
ಛದ್ಮವೇಷ- ಕವನ ಸಂಕಲನಕವಯಿತ್ರಿ- ಎಂ ಕುಸುಮ, ಹಾಸನಪ್ರಕಾಶಕರು: ರಚನ ಪ್ರಕಾಶನ, ಮೈಸೂರುಮೊದಲ ಮುದ್ರಣ: 2012ಬೆಲೆ: 80 ರೂಗಳು, ಒಟ್ಟು ಪುಟ: 128 ಈ ಕವನ ಸಂಕಲನವನ್ನು ಕವಯಿತ್ರಿಯಾದ ಶ್ರೀಮತಿ ಎಂ ಕುಸುಮ ಅವರು ಹೃದಯ ಶ್ರೀಮಂತಿಕೆಯುಳ್ಳ ಎಲ್ಲ ಮನುಜರಿಗೆ ಅರ್ಪಿಸಿದ್ದಾರೆ. ಶುದ್ಧ ಮಾನವತಾವಾದದಲ್ಲಿ ನಂಬುಗೆಯಿಟ್ಟ ಇವರ ಧ್ಯೇಯ ಮತ್ತು ಧೋರಣೆಗಳು ಇದರಿಂದಲೇ ಮನವರಿಕೆಯಾಗುತ್ತವೆ. ಇದು ಇವರ ಎರಡನೆಯ ಕವನ ಸಂಕಲನ. ಮೂಲತಃ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡದಲ್ಲಿ ತಮ್ಮ ಸೃಜನಾತ್ಮಕವನ್ನು … Read more