ದಿಕ್ಕುಗಳು (ಭಾಗ ೧): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀಯ ತಾಯಿಯ ಖಾಯಿಲೆ ಗುಣ ಆಗಲಿಲ್ಲ. ಸಕ್ಕರೆ ಕಾಯಿಲೆ ಪೀಡಿತಳಾಗಿದ್ದ ಆಕೆಯ ಕಾಲಿಗೆ ಏನೇನೋ ಔಷಧ ಕೊಡಿಸಿದರೂ ಗಾಯ ಮಾಯಲೇ ಇಲ್ಲ. ಏಳೆಂಟು ವರ್ಷಗಳಿಂದ ಕೀವು ಸೋರಿ ಸೋರಿ ಶಾಂತಮ್ಮ ಕಡ್ಡಿಯಂತಾಗಿದ್ದಳು. ಕೊನೆಗೂ ಆ ದಿನ ಆಕೆಯ ಜೀವ ಹಾಸಿಗೆಯಲ್ಲೇ ಹೋಗಿತ್ತು. ತಾಯಿಗೆ ಮಣ್ಣು ಕೊಟ್ಟು ಮನೆಗೆ ಬಂದ ಅನುಶ್ರೀಗೆ ಜೀವನ ಶೂನ್ಯವೆನ್ನಿಸಿತ್ತು. “ಜಡ್ಡಾಗ್ಲಿ ಜಾಪತ್ರಾಗ್ಲಿ ಅವ್ವ ಇರಬೇಕಾಗಿತ್ತು” ಅಂತ ಮೊಣಕಾಲ ಮೇಲೆ ಮುಖವಿರಿಸಿಕೊಂಡು ಹುಡುಗಿ ಕಂಬನಿ ಸುರಿಸುತ್ತಾ ಇತ್ತು. ಆಜೂಬಾಜೂದವರು ಹೇಳುವಷ್ಟು ಸಮಾಧಾನ ಹೇಳಿದರು. ನಿಧಾನಕ್ಕೆ … Read more

ನಿಲುವಂಗಿಯ ಕನಸು (ಅಧ್ಯಾಯ ೧೮-೧೯): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೮: ಕೆಂಗಣ್ಣಪ್ಪನ ಔಷಧೋಪಚಾರ ನೀರು ಕುಡಿದು ವಿಶ್ರಮಿಸಿದ ದನಗಳನ್ನು ಬೆಟ್ಟದ ಕಡೆ ತಿರುಗಿಸಿದ ಚಿನ್ನಪ್ಪ ಬೆಟ್ಟದ ನೆತ್ತಿಯ ಹಕ್ಕೆಯ ಗೌಲು ಮರದ ನೆರಳಲ್ಲಿ ಕುಳಿತು ವಿಶ್ರಮಿಸತೊಡಗಿದ.ಸುಬ್ಬಪ್ಪ ದೊಡ್ಡ ಕೆಲಸಗಳನ್ನೆಲ್ಲಾ ಮುಗಿಸಿ ಕೊಟ್ಟು ಹಿಂದಿನ ದಿನ ಸಂಜೆಯಷ್ಟೇ ಊರಿಗೆ ಹೋಗಿದ್ದ, ಇತ್ತೀಚಿನ ಕೆಲವೇ ದಿನಗಳಲ್ಲಿ ಒದಗಿ ಬಂದ ಅನುಭವಗಳು ಹಾಗೂ ಭಾವ ಮೈದುನನೊಂದಿಗಿನ ಮಾತುಕತೆಗಳು ಗಂಡ ಹೆಂಡಿರಿಬ್ಬರಿಗೆ ಬದುಕಿನ ಕೆಲವು ಹೊಸ ಪಾಠಗಳನ್ನು ಕಲಿಸಿದ್ದವು.ಆ ಸಾರಗಳೊಳಗಿನ ಗೂಡಾರ್ಥಗಳು ತಿಳಿಯದಿದ್ದರೂ ಒಟ್ಟು ಸಾರಾಂಶ ಅವರ ಅರಿವಿಗೆ ಬಂದಿತ್ತು.ಇಂದಿನ ಸಾಮಾಜಿಕ … Read more

ನಿಲುವಂಗಿಯ ಕನಸು (ಅಧ್ಯಾಯ ೧೬-೧೭): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೬: ಹೊನ್ನೇಗೌಡನ ಟೊಮೆಟೋ ತೋಟ ತೀವ್ರಗತಿಯಲ್ಲಿ ಜರುಗಿದ ಘಟನಾವಳಿಗಳ ಹೊಡೆತದಿಂದ ಚೆನ್ನಪ್ಪನ ಮನ್ನಸ್ಸು ವಿಚಲಿತವಾಗಿತ್ತು. ಮಂಕು ಬಡಿದವರಂತೆ ಕುಳಿತ ಗಂಡನನ್ನು ಕುರಿತು ‘ಅದೇನೇನು ಬರುತ್ತೋ ಬರಲಿ ಎದುರಿಸೋಕೆ ತಯಾರಾಗಿರಣ. ನೀವು ಹಿಂಗೆ ತಲೆ ಕೆಳಗೆ ಹಾಕಿ ಕೂತ್ರೆ ನಮ್ಮ ಕೈಕಾಲು ಆಡದಾದ್ರೂ ಹೆಂಗೆ? ಈಗ ಹೊರಡಿ, ದೊಡ್ಡೂರಿನಲ್ಲಿ ಏನೇನು ಕೆಲ್ಸ ಇದೆಯೋ ಮುಗಿಸಿಕಂಡು ಬನ್ನಿ. ನಾನೂ ಅಷ್ಟೊತ್ತಿಗೆ ಮನೆ ಕೆಲಸ ಎಲ್ಲಾ ಮುಗ್ಸಿ ಬುತ್ತಿ ತಗಂಡ್ ಹೋಗಿರ್ತೀನಿ’. ಸೀತೆ ಗಂಡನಿಗೆ ದೈರ್ಯ ತುಂಬುವ ಮಾತಾಡಿದಳು. ನಂತರ ಸುಬ್ಬಪ್ಪನ … Read more

ನಿಲುವಂಗಿಯ ಕನಸು (ಅಧ್ಯಾಯ ೧೪-೧೫): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೪: ಸಮೂಹ ಸನ್ನಿ ಚಿನ್ನಪ್ಪ ಕ್ಷಣ ತಬ್ಬಿಬ್ಬಾದ. ಸಮಸ್ಯೆಯ ಗೊಸರಿನ ಮೇಲೆ ಕಾಲಿಟ್ಟಿದ್ದೇನೆ. ಕಾಲಕ್ರಮದಲ್ಲಿ ಭಾರ ಹೆಚ್ಚಾಗಿ ಅದರಲ್ಲಿ ಹೂತು ಹೋಗಿ ಬಿಟ್ಟರೆ, ಶರೀರ ಭಯದಿಂದ ಸಣ್ಣಗೆ ಅದುರಿದಂತೆನಿಸಿತು. ಅಂಗೈಯಲ್ಲಿದ್ದ ಕರಿಮಣಿ ಸರವನ್ನೊಮ್ಮೆ ವಿಷಾದದಿಂದ ನೋಡಿ ನಂತರ ಪ್ಯಾಂಟಿನ ಜೇಬಿನಲ್ಲಿ ಇಟ್ಟಿಬಿಟ್ಟು ರಸ್ತೆಗೆ ಇಳಿದ.ಎದುರಿಗೇ ಪ್ರಭಾಕರನ ಬ್ರಾಂಡಿ ಷಾಪು ಕಾಣುತ್ತಿತ್ತು. ಈವತ್ತು ಸಂತೆಯ ದಿನವಾಗಿದ್ದರೆ ವಾಡಿಕೆಯಂತೆ ಸಂಜೆ ಅಲ್ಲಿ ಸ್ನೇಹಿತರೊಂದಿಗೆ ಕುಳಿತು ಬ್ರಾಂದಿ ಗುಟುಕರಿಸುತ್ತಾ ನನ್ನ ಸಮಸ್ಯೆಯನ್ನು ಅವರ ಮುಂದಿಟ್ಟು ಮನಸ್ಸು ಹಗುರಮಾಡಿ ಕೊಳ್ಳಬಹುದಿತ್ತಲ್ಲ!ಚಿನ್ನಪ್ಪನ ಮನಸ್ಸಿನಲ್ಲಿ … Read more

ನಿಲುವಂಗಿಯ ಕನಸು (ಅಧ್ಯಾಯ ೧೨-೧೩): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೨: ಒಬ್ಬ ರೈತನ ಆತ್ಮಹತ್ಯೆ ಸೀಗೆಕಾಯಿ ಗೋದಾಮಿನ ಮುಂದುಗಡೆ ರಸ್ತೆಗೆ ತೆರೆದುಕೊಂಡಂತೆ ಉಳಿದ ಸೈಟ್ ಕ್ಲೀನ್ ಮಾಡಿಸಿ ಪಿಲ್ಲರ್ ಏಳಿಸಿ ಬಿಟ್ಟಿದ್ದ ಜಾಗದಲ್ಲಿ ಮೂರು ಮಳಿಗೆಗಳು ತಲೆಯೆತ್ತಿದವು. ಒಂದರಲ್ಲಿ ಶ್ರೀ ನಂದೀಶ್ವರ ಟ್ರೇಡರ್ಸ್ (ಗೊಬ್ಬರ ಮತ್ತು ಔಷಧಿ ವ್ಯಾಪಾರಿಗಳು) ಎಂಬ ಅಂಗಡಿ ಉದ್ಘಾಟನೆಯಾಯಿತು.ಕತ್ತೆರಾಮನ ಯೋಜನೆ ಅಷ್ಟಕ್ಕೆ ನಿಂತಿರಲಿಲ್ಲ. ಆ ಇಡೀ ಜಾಗವನ್ನೆಲ್ಲಾ ಬಳಸಿಕೊಂಡು ಒಂದು ಕಾಂಪ್ಲೆಕ್ಸ್ ಕಟ್ಟಲು ನೀಲನಕ್ಷೆ ತಯಾರು ಮಾಡಿ ಇಟ್ಟುಕೊಂಡಿದ್ದ.ಅದರಲ್ಲಿ ಮುಖ್ಯರಸ್ತೆಗೆ ತೆರೆದುಕೊಂಡAತೆ ಆರು ಮಳಿಗೆಗಳು, ಹಿಂದುಗಡೆ ಶೆಡ್ ಇರುವ ಕಡೆಗೆ ಒಂದು ವಾಸದ … Read more

ನಿಲುವಂಗಿಯ ಕನಸು (ಅಧ್ಯಾಯ ೧೦-೧೧): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೦: ಕತ್ತೆಯ ಅಂಗಡಿ ಇನ್ನೇನು ನಾಳೆ ನಾಡಿದ್ದರಲ್ಲಿ ಅಪ್ಪಣಿ ಬಂದ್‍ಬಿಡ್ತಾನೆ. ಈ ಸರ್ತಿ ಒಂದ್ ನಾಲ್ಕು ದಿನ ಇಟ್ಟುಕೊಂಡು ಬೇಲಿ, ಮೆಣಸಿನ ಪಾತಿ, ನೀರಿನ ಗುಂಡಿ ಎಲ್ಲಾ ಮಾಡಿಸಿಕೊಂಡೇ ಕಳಿಸ್ಬೇಕು… ಹತಾರ ಎಲ್ಲಾ ಹೊಂದಿಸಿ ಇಟ್ಗಳಿ. ನಿಮಗೇನು, ಕೋಲ್ ತಗಂಡು ದನಿನ ಹಿಂದುಗಡೆ ಹೊರಟು ಬಿಡ್ತೀರಿ. ಗುದ್ದಲಿ ಕೆಲಸ ಎಲ್ಲಾನೂ ನಾನೇ ಮಾಡಕ್ಕಾಗುತ್ತಾ…ಸೀತೆಯ ಗೊಣಗಾಟ ನಡೆದಿತ್ತು.ರಾತ್ರಿಯ ಊಟ ಮುಗಿಸಿ ದಿಂಬಿಗೆ ತಲೆಕೊಟ್ಟ ಚಿನ್ನಪ್ಪನಿಗೆ ಮಾಮೂಲಿನಂತೆ ಕೂಡಲೇ ನಿದ್ದೆ ಹತ್ತಲಿಲ್ಲ.‘ಸೀತೆ ಹೇಳುವುದು ಸರಿ. ಎಲ್ಲಾ ಹತಾರ ಹೊಂದಿಸಿಕೊಳ್ಳಬೇಕು. … Read more

ನಿಲುವಂಗಿಯ ಕನಸು (ಅಧ್ಯಾಯ ೮-೯): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೮: ತೋಟ ಹಾಳಾಗುವ ಕಾಲಕ್ಕೆ… ‘ನಿಮ್ಮತ್ತೆ ನಿನ್ನ ಗಂಡನ್ನ ಏಳನೇ ಕ್ಲಾಸಿಗೇ ಬಿಡಿಸುವ ಬದಲು ಇನ್ನಷ್ಟು ಓದಿಸಬೇಕಾಗಿತ್ತು ಕಣಕ್ಕ. ಒಳ್ಳೆಯ ಸಾಹಿತ್ಯಗಾರ ಆಗಿಬಿಡೋರು’ ಸುಬ್ಬಪ್ಪ ಅಕ್ಕನನ್ನು ಕಿಚಾಯಿಸಿದ. ಸೀತೆ ನಾಚಿ ತಲೆ ತಗ್ಗಿಸಿದಳು.‘ನೋಡು ಹೇಗೆ ಈಗ ಇಲ್ಲೇ ನಡೆದ ಹಂಗೆ ಹೇಳಿಬಿಟ್ರು!… ಬಹಳ ಇಂಟರೆಸ್ಟ್ ಆಗಿಬಿಡ್ತು’ ಎನ್ನುತ್ತಾ ಭಾವನ ಕಡೆ ತಿರುಗಿ ‘ಮುಂದೇನಾಯ್ತು ಹೇಳಿಬಿಡಿ… ಈ ಜಾಗನೂ ಒಳ್ಳೆ ಚಂದಾಗೈತೆ. ಇಲ್ಲೇ ಇನ್ನೊಂದು ಗಂಟೆ ಇದ್ದು ಹೋಗಣ’ ಎಂದ.ಆ ಕಡೆ ಮರಳಿನ ದಂಡೆ ಕಡೆ ನೋಡಿ, ದನಗಳು … Read more

ನಿಲುವಂಗಿಯ ಕನಸು (ಅಧ್ಯಾಯ ೬-೭): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೬: ಕೃಷಿ ಎಂಬ ಧ್ಯಾನ ಹೊಳೆಗೆ ಇಳಿದ ದನಗಳು ಬೆಳಗಿನ ಬಾಯಾರಿಕೆ ನೀಗಿಕೊಂಡು, ಹಾಗೆಯೇ ಸ್ವಲ್ಪ ದೂರ ಹೊಳೆಯೊಳಗೇ ಮುದದಿಂದ ನಡೆದು, ಬಲದ ದಂಡೆಗೆ ಹತ್ತಿ, ಅಲ್ಲಿಂದ ಮತ್ತೊಂದು ದಿಣ್ಣೆ ಏರತೊಡಗಿದವು. ಎರಡು ಪರ್ಲಾಂಗ್ ನಡೆದರೆ ಮತ್ತೊಂದು ತಳಾರ ಜಾಗ. ಕಡಿದಾದ ದಿಣ್ಣೆ ಏರಿ ದಣಿದ ದನಗಳು ದಾರಿಯಲ್ಲಿ ಮುಂದೆ ಹೋಗದೆ ವಿಶಾಲವಾದ ಆ ತಳಾರದಲ್ಲಿ ಮೇಯತೊಡಗಿದವು.ಅಕ್ಕನೊಂದಿಗೆ ಲಘುವಾಗಿ ಕೀಟಲೆ ಮಾಡುತ್ತಾ ಬರುತ್ತಿದ್ದ ಸುಬ್ಬಪ್ಪ ದನಗಳು ಮುದದಿಂದ ಮೇಯುತ್ತಿದ್ದುದನ್ನು ನೋಡಿ, ‘ಓಹೋ, ಇದಕ್ಕೇ ನಮ್ಮ ಭಾವ … Read more

ನಿಲುವಂಗಿಯ ಕನಸು (ಅಧ್ಯಾಯ ೪-೫): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೪: ನನಗೊಂದು ನೈಂಟಿ ಕೊಡಿಸಿ! ಸೀತೆ ಯಾವ ವಿಚಾರದಲ್ಲೂ ಅತಿಯಾಸೆ ಉಳ್ಳವಳಲ್ಲ. ಬಟ್ಟೆ ಬರೆಯಲ್ಲೂ ಅಷ್ಟೇ. ಅವಳ ಬಳಿ ಇರುವವೇ ಮೂರು ವಾಯಿಲ್ ಸೀರೆ! ಎಲ್ಲಾದರೂ ಹೊರಗೆ ‘ಹೋಗಿ ಬರಲು’ ಹೊರಟಾಗ ಮಾತ್ರ ಅವುಗಳಲ್ಲೊಂದು ಟ್ರಂಕಿನಿಂದ ಹೊರಬರುತ್ತದೆ. ಉಪಯೋಗ ಮುಗಿದ ಕೂಡಲೇ ಒಗೆದು ಮಡಚಿ ಟ್ರಂಕಿನಲ್ಲಿಟ್ಟುಬಿಡುತ್ತಾಳೆ. ಇನ್ನೆರಡು ಸವೆದುಹೋದ ಹಳೆಯ ಸೀರೆ ತೋಟ ಗದ್ದೆಯ ಕೆಲಸದ ವೇಳೆ ಉಡಲು. ಇನ್ನು ಟ್ರಂಕಿನ ತಳ ಸೇರಿ ಕುಳಿತಿರುವ ರೇಷ್ಮೆ ಸೀರೆ! ತನ್ನ ಮದುವೆಯ ಧಾರೆಯ ವೇಳೆ ಧರಿಸಿದ್ದ … Read more

ನಿಲುವಂಗಿಯ ಕನಸು (ಅಧ್ಯಾಯ ೧-೩): ಹಾಡ್ಲಹಳ್ಳಿ ನಾಗರಾಜ್

‌ ಅಧ್ಯಾಯ ೧: ಮೊಳಕೆಯೊಡೆಯಿತು ಎರಡೊಂದ್ಲ ಎರಡು…ಎರಡೇಡ್ರ್ಳ ನಾಲ್ಕು…ಊರ ಪ್ರಾಥಮಿಕ ಶಾಲೆಯ ಕಡೆಯಿಂದ ಸಮೂಹಗಾನದಂತೆ ರಾಗವಾಗಿ ಹೊರಟ ಮಕ್ಕಳ ಧ್ವನಿ ಪಶ್ಚಿಮದ ಕಾಡಲ್ಲಿ ಕ್ಷಣಕಾಲ ಅನುರಣಿಸಿ ಹಿಂತಿರುಗಿ ಸೀತೆಯ ಕಿವಿಯಲ್ಲಿಳಿದು ಹೃದಯದಲ್ಲಿ ದಾಖಲಾಗತೊಡಗಿತು. ಅದರಲ್ಲಿ ತನ್ನ ಮಗಳು ಪುಟ್ಟಿಯ ಧ್ವನಿಯೂ ಸೇರಿದಂತೆ ಕಲ್ಪಿಸಿಕೊಂಡು ಕ್ಷಣಕಾಲ ಪುಳಕಿತಳಾದಳು.ಪುಟ್ಟಿಗೆ ಈಗಾಗಲೇ ನಾಲ್ಕು ವರ್ಷ ತುಂಬಿದೆ. ಬರುವ ವರ್ಷ ಈ ದಿನಕ್ಕೆ ಅವಳೂ ಅಲ್ಲಿ ನಿಂತು ಮಕ್ಕಳೊಂದಿಗೆ ಮಗ್ಗಿ ಹೇಳುವಂತಾಗುತ್ತಾಳೆ. ‘ಅವ್ವನ ಮನೆಯಿಂದ ಅವಳನ್ನು ಕರೆತಂದು ಇದೇ ಶಾಲೆಗೆ ಸೇರಿಸಬೇಕು. ಹಳ್ಳಿಯ … Read more

ಮರೆಯಲಾಗದ ಮದುವೆ (ಕೊನೆಯ ಭಾಗ): ನಾರಾಯಣ ಎಮ್ ಎಸ್

ಅಯ್ಯರೊಂದಿಗೆ ಮಾತಾಡಿದ್ದು ಎಲ್ಲರಿಗೂ ಸಮಾಧಾನ ತಂದಿತ್ತು. ತನಿಯಾವರ್ತನದ ನಂತರ ಸಿಂಧು ಭೈರವಿ, ತಿಲಂಗ್ ಮತ್ತು ಶಿವರಂಜನಿಯಲ್ಲಿ ಹಾಡಿದ ದೇವರನಾಮಗಳು ಮುದ ಕೊಟ್ಟವು. ಕಛೇರಿ ಕೊನೆಯ ಭಾಗ ತಲುಪಿದ್ದರಿಂದ ಮೈಕು ಹಿಡಿದ ಮೋಹನ ವೇದಿಕೆ ಹತ್ತಿದ. ನೇದನೂರಿಯವರಿಂದ ಪ್ರಾರಂಭಿಸಿ, ಒಬ್ಬೊಬ್ಬರಾಗಿ ಪಿಟೀಲು, ಮೃದಂಗ, ಖಂಜಿರ ಮತ್ತು ತಂಬೂರಿಯಲ್ಲಿ ಸಾಥ್ ನೀಡಿದ ಪ್ರತಿಯೊಬ್ಬ ಕಲಾವಿದರ ಬಗ್ಗೆಯೂ ಒಂದೆರಡು ಒಳ್ಳೆಯ ಮಾತನಾಡಿ ಧನ್ಯವಾದ ಅರ್ಪಿಸಿದ. ಒಬ್ಬೊಬ್ಬರಿಗೂ ಧನ್ಯವಾದ ಹೇಳಿದ ಬೆನ್ನಲ್ಲೇ ಕ್ರಮವಾಗಿ ಆಯಾ ಕಲಾವಿದರಿಗೆ ಕೃಷ್ಣಯ್ಯರ್ ಖುದ್ದು ತಮ್ಮ ಹಸ್ತದಿಂದ ಸೂಕ್ತ … Read more

ಮರೆಯಲಾಗದ ಮದುವೆ (ಭಾಗ 15): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ ಹೇಗಾದರೂ ಮದುವೆ ಪೂರೈಸಬೇಕೆಂದು ಗಟ್ಟಿಮನಸ್ಸಿನಿಂದ ಭಾವನೆಗಳನ್ನು ನಿಗ್ರಹಿಸಿಕೊಂಡಿದ್ದ ಅಯ್ಯರ್ ಕುಟುಂಬವರ್ಗದವರಿಗೆ ಮದುವೆ ಮುಗಿದೊಡನೆ ಮನೆಯೊಡಯನ ಅನುಪಸ್ಥಿತಿಯಲ್ಲಿ ಮದುವೆ ನಡೆಸಿದ ಬಗ್ಗೆ ಪಾಪ ಪ್ರಜ್ಞೆ ಕಾಡತೊಡಗಿತು. ಆವರೆಗೂ ಮಡುಗಟ್ಟಿದ್ದ ಸಂಕಟದ ಕಟ್ಟೆಯೊಡೆದು ಒಂದಿಬ್ಬರು ಮೆಲ್ಲನೆ ಬಿಕ್ಕತೊಡಗಿದರು. ಮದುವೆ ನಡೆದ ಗ್ರೌಂಡ್ ಫ್ಲೋರಿನ ಹಾಲಿನಲ್ಲಿ ಮದುವೆಗೆ ಬಂದಿದ್ದ ಅನೇಕ ಅತಿಥಿಗಳು ಇನ್ನೂ ಕುಳಿತಿದ್ದನ್ನು ಗಮನಿಸಿದ ಮರಳಿಯವರಿಗೆ ಅವರೆದುರು ಮುಜುಗರ ಉಂಟಾಗುವುದು ಬೇಡವಿತ್ತು. ಮದುವೆ ಮಂಟಪದೆದುರು ಹಾಗೆ ಹೆಂಗಸರು ಕುಳಿತು ಅಳುವುದು ವಿವಾಹಿತ ವಧೂವರರಿಗೆ ಶ್ರೇಯಸ್ಸಲ್ಲವೆಂದು ಹೇಳಿ ಎಲ್ಲರನ್ನೂ ಮೂರನೆ … Read more

ಮರೆಯಲಾಗದ ಮದುವೆ (ಭಾಗ 14): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ ತಿಂಡಿ ಮುಗಿಸಿ ಸುಬ್ಬು, ಮುರಳಿ, ಸೀತಮ್ಮನವರು, ಮೋಹನ ಮತ್ತು ಕೃಷ್ಣಯ್ಯರ್ ಸ್ವಾಮಿ ಸರ್ವೋತ್ತಮಾನಂದರ ಆಶ್ರಮಕ್ಕೆ ಕಾರಿನಲ್ಲಿ ಹೊರಟರು. ಸುಮಾರು ಹದಿನೈದು ಮೈಲು ದೂರದ ಆಶ್ರಮವನ್ನು ತಲುಪಲು ಅರ್ಧ ಘಂಟೆಯಾಗಬಹುದೆಂದು ಡ್ರೈವ್ ಮಾಡುತ್ತಿದ್ದ ಮೋಹನ ಹೇಳಿದ. ಸ್ವಾಮೀಜಿಯೊಂದಿಗೆ ಸಮಾಲೋಚಿಸಿ ಮದುವೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುರಳಿಯವರ ನಿರ್ಧಾರ ಸುಬ್ಬುವಿಗೆ ಸಮಾಧಾನ ತಂದಿರಲಿಲ್ಲ. ಆದರೆ ಸಾಧುಸಂತರ ಬಗ್ಗೆ ತನ್ನ ತಾಯಿಗಿದ್ದ ಅಪಾರ ಶ್ರದ್ಧಾಭಕ್ತಿಯ ಅರಿವಿದ್ದುದರಿಂದ ಈ ವಿಚಾರದಲ್ಲಿ ತನಗೆ ಅಮ್ಮನ ಬೆಂಬಲ ಸಿಕ್ಕುವ ನಂಬಿಕೆಯಿರಲಿಲ್ಲ. ಇನ್ನು ಮುರಳಿ ಚಿಕ್ಕಪ್ಪನ … Read more

ಮರೆಯಲಾಗದ ಮದುವೆ (ಭಾಗ 13): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೧೨- ಚಿನ್ನಪ್ಪ ಮತ್ತು ಅಯ್ಯರ್ ಮುಂಜಾನೆ ಬೇಗನೆದ್ದು ನಿತ್ಯಕರ್ಮಗಳನ್ನು ಮುಗಿಸಿ ಉಪಹಾರ ಸೇವಿಸಿ ಗೂಡೂರಿಗೆ ಹೊರಟಾಗ ಅಯ್ಯರ್ ಭಾವುಕರಾದರು. ಅಯ್ಯರ್ ಕಣ್ಣಲ್ಲಿ ನೀರಾಡಿದ್ದು ಕಂಡು ಚಿನ್ನಪ್ಪನ ಹೆಂಡತಿಗೆ ಮುಜುಗರವಾಗಿ ಕಸಿವಿಸಿಗೊಂಡಳು. ಅಯ್ಯರ್ ಚಿನ್ನಪ್ಪನ ಮಗುವನ್ನೆತ್ತಿಕೊಂಡು ಮುತ್ತಿಕ್ಕಿ ತಮ್ಮ ಮನದಾಳದಿಂದ ಒಮ್ಮೆ ಹೆಂಡತಿ ಮಗುವಿನೊಂದಿಗೆ ತಮ್ಮ ಮನೆಗೆ ಬರಬೇಕೆಂದು ಚಿನ್ನಪ್ಪನಿಗೆ ಆಗ್ರಹಮಾಡಿ ಹೇಳಿದರು. ರಾತ್ರಿ ಚಿನ್ನಪ್ಪನ ಋಣ ತೀರಿಸಲಾಗದಿದ್ದರೂ ಪಡೆದ ಉಪಕಾರಕ್ಕೆ ಪ್ರತಿಯಾಗಿ ಏನಾದರೂ ಮಾಡಬೇಕೆಂದುಕೊಂಡದ್ದು ನೆನಪಾಗಿ ಒಂದು ಕಾಗದದಲ್ಲಿ ಅವನ ವಿಳಾಸ ಬರೆದುಕೊಡುವಂತೆ ಚಿನ್ನಪ್ಪನಿಗೆ ಹೇಳಿದರು. … Read more

ಮರೆಯಲಾಗದ ಮದುವೆ (ಭಾಗ 12): ನಾರಾಯಣ ಎಮ್ ಎಸ್

“ಸಾರ್… ರೈಲ್ವೇಸಿಂದ ಫೋನು, ಅದ್ಯಾವ್ದೋ ಕಾವ್ಲೀ ಅನ್ನೋ ಸ್ಟೇಷನ್ನಲ್ಲಿ ಯಾವ್ದೋ ವಯ್ಸಾಗಿರೋರ ಹೆಣಾ ಸಿಕ್ಕಿದ್ಯಂತೇ…ಈಗ್ಲೇ ಯಾರಾರೂ ಬಾಡಿ ಐಡೆಂಟಿಫೈ ಮಾಡಕ್ಕೋಗ್ಬೇಕಂತೆ” ರಿಸೆಪ್ಷನ್ ಕೌಂಟರಿನಿಂದ ಯಾವನೋ ಅವಿವೇಕಿ ಗಟ್ಟಿಯಾಗಿ ಕಿರುಚಿದ್ದ. ಲಾಬಿಯಿಡೀ ನೀರವ ಮೌನ ಆವರಿಸಿತು. ಪಾಪ ಸೀತಮ್ಮನವರ ಹೊಟ್ಟೆ ತಳಮಳಗುಟ್ಟಿತು. ಮೆಲ್ಲನೆ ತಮ್ಮ ಎಡಕುಂಡೆಯನ್ನೆತ್ತಿ ಸುಧೀರ್ಘವಾಗಿ ’ಠುಯ್ಯ್…………………’ ಎಂದು ತಾರಕಸ್ಥಾಯಿಯಲ್ಲಿ ಸದ್ದು ಹೊರಡಿಸಿ ಕಣ್ಣು ತೇಲಿಸಿಬಿಟ್ಟರು. ಮೊಮ್ಮಗ ಕಣ್ಣನ್ ಕಣ್ಣರಳಿಸಿ ಸುರುಳಿಯಾಗಿಸಿದ ಅಂಗೈಯನ್ನು ಬಾಯಿನ ಸುತ್ತ ಹಿಡಿದು ’ಠುಯ್ಯ್…………………’ ಎಂದು ನಕಲು ಮಾಡಿ ಪಕಪಕನೆ ನಕ್ಕ. ಇದರಿಂದ … Read more