ಕೃಷ್ಣೆಗೊಂದು ಪ್ರಶ್ನೆ: ಡಾ. ಗೀತಾ ಪಾಟೀಲ, ಕಲಬುರಗಿ

ನಮ್ಮ ಹಿಂದೂ ಧರ್ಮದ ಶ್ರೇಷ್ಠ ಮಹಾಕಾವ್ಯ ಮಹಾಭಾರತ! ಕೌರವ ಮತ್ತು ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದ ಫಲಿತಾಂಶವನ್ನು ವಿಸ್ತಾರವಾಗಿ ವಿವರಿಸುವ ಈ ಮಹಾಕಾವ್ಯದಲ್ಲಿ ನಾವು ಓದಿದ, ಕೇಳಿದ ಕೆಲವು ಪಾತ್ರಗಳು ವಿಶಿಷ್ಟ ಹಾಗೂ ಇಂದಿಗೂ ನಿಗೂಢವಾಗಿವೆ. ಅಂತಹ ಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು!! ದ್ರೌಪದಿ ದ್ರುಪದ ಮಹಾರಾಜನ ಮಗಳು, ದ್ರುಷ್ಟದ್ಯುಮ್ನನ ತಂಗಿ, ಪಾಂಡುರಾಜನ ಸೊಸೆ! ರಾಜಾಧಿರಾಜರನ್ನು ಗೆದ್ದು ರಾಜಸೂಯ ಯಾಗ ಮಾಡಿದ ವೀರರೈವರ ಪಟ್ಟದ ರಾಣಿ,, ಚಕ್ರವರ್ತಿನಿ! ಸೌಂದರ್ಯದಲ್ಲಿ, ವೈಭವದಲ್ಲಿ ಅವಳಿಗೆ ಸಮನಾದವರೇ ಇಲ್ಲ ಎನ್ನಿಸಿಕೊಂಡವಳು!! … Read more

ಕಾಫಿ ಆಯ್ತಾ ಎನ್ನುತ್ತಲೇ ಇಳಿಸಂಜೆಯಲಿ ಮರೆಯಾಗಿ ಹೋದ ಕಿರಣ: ನಂದಾದೀಪ, ಮಂಡ್ಯ

ಎದೆಯ ಗೂಡಿನಲಿ ಭಾವನೆಯ ದೀಪ ಹೊತ್ತಿಸಿ, ಒಲವಿನ ಕಿರಣವ ಎಲ್ಲೆಡೆ ಹರಡಿ ತಮ್ಮ ಸತ್ಕಾರ್ಯದ, ಸವಿ ಮಾತಿನಲೆ ಎಲ್ಲರ ಮನದಲಿ ತಮ್ಮದೇ ಆದ ಸ್ಥಾನ ಗಳಿಸಿಕೊಂಡ ಕವಿ, ಲೇಖಕ, ಚಿತ್ರಕಲಾವಿದ, ಕಾದಂಬರಿಕಾರರು ಕಿರಣ ದೇಸಾಯಿಯವರು.. ಇವರು 17-07-1981ರಲ್ಲಿ ಬೆಳಗಾವಿಯ ಕಿತ್ತೂರಿನಲ್ಲಿ ಜನಿಸಿದರಾದರು.. ಬೆಳೆದಿದ್ದು ಮಾತ್ರ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ.. ತಂದೆ ಭಾಳಸಾಹೇಬ ದೇಸಾಯಿ, ತಾಯಿ ಲಕ್ಷ್ಮಿಬಾಯಿ ದೇಸಾಯಿ.. ವಿದ್ಯಾ ಪ್ರಸಾರಕ ಸಮಿತಿಯ C S ಬೆಂಬಳಗಿ ಕಲಾ ಕಾಲೇಜು, ರಾಮದುರ್ಗದಲ್ಲಿ ಬಿ. ಎ, ಬಿ.ಎಡ್ ವ್ಯಾಸಂಗ ಮಾಡಿರುವ … Read more

‘ವಾಗರ್ಥಗಳ ರಥಕ್ಕೆ ಭಾವದಗ್ನಿಯ ಪಥ…..’: ಡಾ. ಹೆಚ್ ಎನ್ ಮಂಜುರಾಜ್

ಒಂದು ಹಂತ ಕಳೆದ ಮೇಲೆ ಎಲ್ಲವೂ ಎಲ್ಲಕೂ ಅರ್ಥ ಬರುತ್ತದೆ ಅಥವಾ ಅದುವರೆಗೆ ನಾವು ಕೊಟ್ಟು ಕೊಂಡಿದ್ದ ಅರ್ಥ ಹೋಗುತ್ತದೆ. ಮೂಲತಃ ಅರ್ಥ ಎಂಬುದೇ ಸಾಪೇಕ್ಷವಾದುದು; ನಿರಪೇಕ್ಷವಲ್ಲ! ಇದುವರೆಗಿನ ಭಾಷಾವಿಜ್ಞಾನದ ಅಧ್ಯಯನವು ಅರ್ಥವನ್ನು ಪದಗಳಲ್ಲಿ ಅಥವಾ ವಾಕ್ಯಗಳಲ್ಲಿ ಹುಡುಕುತ್ತಾ ಬಸವಳಿದಿದೆ. ಮಾತಿನಾಚೆಗೂ ಇರುವ ಅರ್ಥಸಾಧ್ಯತೆಗಳನ್ನು ಅರಿಯುವುದಾದರೂ ಹೇಗೆ? ಆಗ ಮನೋವಿಜ್ಞಾನ ಮತ್ತು ತತ್ತ್ವಜ್ಞಾನಗಳು ನಮ್ಮ ನೆರವಿಗೆ ಬರಬಹುದಾಗಿದೆ.‘ವಾಗರ್ಥವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ, ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ’ ಎಂದು ಮಹಾಕವಿ ಕಾಳಿದಾಸನು ತನ್ನ ರಘುವಂಶ ಮಹಾಕಾವ್ಯದ … Read more

ಡೊಂಟ್ ವರಿ, ಒಮ್ಮೊಮ್ಮೆ ಹೀಗೂ ಆಗುವುದು: ಮಧುಕರ್ ಬಳ್ಕೂರ್

“ಏನ್ ಸರ್ ಸಮಾಚಾರ ? ಮತ್ತೇನ್ ಡ್ಯೂಟಿಗ್ ಹೊರಟ್ರಾ..? ಏನಿಲ್ಲ ಸರ್, ನೀವು ಯಾರನ್ನಾದ್ರು ಲವ್ ಮಾಡಿದೀರಾ..? ಇಲ್ವಾ…? ಹಾಗಿದ್ರೆ ನೀವು ವೇಸ್ಟ್ ಬಿಡಿ ಸಾರ್. ನಾನು ಈ ಪ್ರೀತಿ ಗೀತಿ ಅಂತೆಲ್ಲಾ ಅದೆಷ್ಟು ಸರ್ಕಸ್ ಮಾಡಿದೀನಿ ಗೊತ್ತಾ? ಬಿಡಿ, ನಿಮಗೆಲ್ಲಾ ಅದು ಎಲ್ಲಿ ಅರ್ಥ ಆಗ್ಬೇಕು? ಅನುಭವ ಇದ್ರೆ ತಾನೆ..” ಹಾಗಂತ ಅವನು ವ್ಯಂಗವಾಡುತ್ತಲೇ ಹೋದ. ಜೊತೆಗಿದ್ದವರು ಅದೇ ವ್ಯಂಗದಲ್ಲಿ ಜೋರಾಗಿ ನಗತೊಡಗಿದರು. ಆ ಒಂದು ಕ್ಷಣಕ್ಕೆ ಏನನ್ನಬೇಕೆನ್ನುವುದ ತಿಳಿಯದೆ ಮುಜುಗರಕ್ಕೊಳಗಾಗುತ್ತೀರಿ. ಮೊದಲೇ ಡ್ಯೂಟಿಗೆ ಹೊರಟಿದ್ದೀರಿ. … Read more

ಅಮ್ಮ ಅನ್ನೋ ಎರಡು ಅಕ್ಷರ: ದೀಪಾ ಜಿ. ಎಸ್.

ಅಮ್ಮ ಅಂದ್ರೆ ಒಂದು ಜೀವಕ್ಕೆ ಜೀವ ತುಂಬೋ ತ್ಯಾಗಮಯಿನೇ ಅಮ್ಮ. ನಾನು ಈ ಭೂಮಿಗೆ ಕಾಲಿಟ್ಟ ಕ್ಷಣದಿಂದ ಹಿಡಿದು ಇಲ್ಲಿಯವರೆಗೂ ನನ್ನ ಜೀವನದಲ್ಲಿ ಒಂದೊಂದು ಕ್ಷಣ ಒಂದೊಂದು ಕಲಿಕೆಯನ್ನು ಕಳಿಸಿದವಳೇ ಅಮ್ಮ. ನನ್ನ ಮೊದಲನೆಯ ಗುರು, ಮೊದಲನೆಯ ಸ್ನೇಹಿತೆ, ಎಲ್ಲಾನು ಅವಳೇ. ಜೀವನದಲ್ಲಿ ಕಷ್ಟಕ್ಕೆ ಎಡವಿ ಬಿದ್ದಾಗ ಮೊದಲು ನೆನಪಾಗೋದೇ ಅಮ್ಮ. ಅಮ್ಮ ಅನ್ನೋ ಪದದಲ್ಲೇ ಅಮೃತಾನೆ ತುಂಬಿರುವಾಗ ನನ್ನ ಹತ್ತಿರಾನೂ ಸಾವು ಅನ್ನೋ ಪದಾನೇ ಸುಳಿಯೋಲ್ಲ. ಅಮ್ಮ ಅನ್ನೋ ಒಂದು ಜೀವ ಇದ್ರೆ ಸಾಕು ಇಡೀ … Read more

ಹದಿಹರೆಯದ ಮಕ್ಕಳು ಮತ್ತು ಪೋಷಕರು: ಪ್ರವೀಣ ಶೆಟ್ಟಿ, ಕುಪ್ಕೊಡು

ದೃತಿ ಯಾಕೋ ತುಂಬಾ ಕಾಡ್ತಾ ಇದ್ದಾಳೆ. ಹೌದು ದೃತಿ “ದ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನ ಮುಖ್ಯ ಪಾತ್ರಧಾರಿ ಶ್ರೀಕಾಂತ್ ತಿವಾರಿಯ ಮಗಳು. ತಂದೆ – ತಾಯಿ ಇಬ್ಬರೂ ತಮ್ಮ ತಮ್ಮ ಕೆಲಸಗಳ ನಡುವೆ ಬ್ಯೂಸಿಯಾಗಿರುವಾಗ ಮಕ್ಕಳ ಮೇಲೆ ಗಮನ ಕಡಿಮೆಯಾಗಿ ಮಕ್ಕಳು ಕೆಟ್ಟ ಹಾದಿ ತುಳಿದರೂ ತಂದೆ ತಾಯಿಗೆ ಅದರ ಬಗ್ಗೆ ಕಿಂಚಿತ್ತೂ ಗಮನವಿರುವುದಿಲ್ಲ. ಮಗಳು ಬಾಯ್ ಫ್ರೆಂಡ್ ಎಂದು ಅಲೆಯುತ್ತಿರುವಾಗಲೂ, ಓದುವುದನ್ನು ಬಿಟ್ಟು ಇಡೀ ದಿನ ಮೊಬೈಲ್ ನಲ್ಲಿ ಚಾಟಿಂಗ್ ಮಾಡುವುದನ್ನೂ ಹೆತ್ತವರು … Read more

ನಾ ಕಂಡ ಸಂತೆ: ಮಂಜು ನವೋದಯ

ಶುದ್ದ ನಗರಿಕರಣದಿಂದ ದೈತ್ಯ ನಗರಗಳು ಯಾಂತ್ರಿಕವಾಗಿ ಮುನ್ನೆಡೆಯುವ ಇಂದಿನ ಜೀವನ ಶೈಲಿ ಅದೇಕೋ ನನಗೆ ಹಿಡಿಸಲಾರದಷ್ಟು ಯಾತನೆ ಪಡಿಸುತ್ತೆ. ಅದೇ ಹಳ್ಳಿಗಳ ಗ್ರಾಮೀಣ ಬದುಕು ರೀತಿರಿವಾಜುಗಳು, ರಾಜಕೀಯದ ಒಳಪಟ್ಟುಗಳು, ಅಣ್ಣ ತಮ್ಮರ ವ್ಯಾಜ್ಯ, ಜಾತ್ರೆಯ ಬಾಡೂಟ- ಇಂತಹ ಹಲವಾರು ನಿದರ್ಶನಗಳು ಗ್ರಾಮ್ಯ ಸಮಾಜದ ಜೀವಂತಿಕೆಯನ್ನು ಹಾಗೂ ಬದುಕಿನ ಶ್ರೀಮಂತಿಕೆಯನ್ನು ಹೆಜ್ಜೆ- ಹೆಜ್ಜೆಗೂ ಪ್ರತಿಪಾದಿಸುತ್ತವೆ. ನಮ್ಮ ಊರಿನ ಆಜುಬಾಜಿನ ಸುಮಾರು 30 ಹಳ್ಳಿಗಳ ಜನರು ತಮ್ಮ ಜಾನುವಾರು, ಬೆಳ್ಗೆ ಹಾಗೂ ದೈನಂದಿನ ಅವಶ್ಯಕ ವಸ್ತುಗಳ ಖರೀದಿ ಹಾಗೂ ಬಿಕರಿ … Read more

ಕನ್ನಡ ಶಾಯಿರಿಗಳು – ಒಂದು ಅವಲೋಕನ: ಪರಮೇಶ್ವರಪ್ಪ ಕುದರಿ

ಕನ್ನಡ ಸಾರಸ್ವತ ಲೋಕವು ಕಥೆ, ಕಾದಂಬರಿ, ನಾಟಕ, ಮಹಾಕಾವ್ಯ, ಕವನ, ಸಣ್ಣ ಕಥೆ, ಹನಿಗವನ ಇನ್ನೂ ಹಲವಾರು ಪ್ರಕಾರಗಳಿಂದ ಶ್ರೀಮಂತವಾಗಿದೆ. ಈ ಶ್ರೀಮಂತ ಪರಂಪರೆಗೆ ಇತ್ತಿಚಿನ ಸೇರ್ಪಡೆ ಎಂದರೆ ಕನ್ನಡ ಶಾಯಿರಿಗಳು. ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಪರಿಯನ್ನು ಶಾಯಿರಿ ಎನ್ನಬಹುದು.ಇದನ್ನು ಓದಿಯೇ ಸವಿಯಬೇಕು! ಶಾಯಿರಿ ಎಂಬ ಪದವು ಅರೇಬಿಕ್ ಭಾಷೆಯ “ ಶೇರ್” ಎಂಬ ಪದದ ರೂಪಾಂತರವಾಗಿದೆ. ಶೇರ್ ಪದದ ಅರ್ಥ ಎರಡು ಸಾಲಿನ ಪದ್ಯ ಎಂದಾಗುತ್ತದೆ. ನಮಗೆ ಬಹಳ ಸಂತೋಷವಾದಾಗ, ಮತ್ತು ಬಹಳ … Read more

ಹೆಸರಿನಲ್ಲೇನಿದೆ: ಡಾ. ವೃಂದಾ. ಸಂಗಮ್

ಎಂದಿನಂತೆ ಆಫೀಸಿಗೆ ಹೋಗಿ, ಕಂಪ್ಯೂಟರ್ ತೆಗೆಯುತ್ತಿದ್ದೆ, ನಮ್ಮ ದತ್ತಾಂಶ ನಮೂದಕಿ (ಟೈಪಿಸ್ಟ್) ಒಬ್ಬರು ಬಂದವರೇ, ” ಮೇಡಂ, ನಿನ್ನೆ ಪತ್ರಗಳಲ್ಲಿ ಇದೊಂದು ಬಾಕಿ ಇದೆ, ಟೈಪ್ ಆಗಿಲ್ಲ.” ಎಂದರು. “ಯಾಕೆ” ಎಂದೆ. “ಮೇಡಂ, ಅವರ ಹೆಸರು ಚಿಂತಾಮಣಿ ಎಂದಿದೆ, ಶ್ರೀ ಅಂತ ಬರೀಬೇಕೋ, ಶ್ರೀಮತಿ ಅಂತ ಬರೀಬೇಕೋ ತಿಳೀಲಿಲ್ಲ. ಅದು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯ ಪತ್ರ. ಇಂದೇ ಕೊನೆಯ ದಿನ. ಕಳಿಸಲೇ ಬೇಕು ಇವೊತ್ತು. ಏನು ಬರೀಲಿ, ಶ್ರೀ ಅಥವಾ ಶ್ರೀಮತಿ” ಎಂದು ಕೇಳಿದರು. ಅವರ … Read more

ಶ್ರೀ. ಗಣಪತ್ ಕಾಕೋಡೇಜಿ, ನಮ್ಮ ಕಾಲೋನಿಯ ಭರವಸೆಯ ಪೋಸ್ಟ್ಮನ್ !: ಎಚ್. ಆರ್. ಲಕ್ಷ್ಮೀವೆಂಕಟೇಶ್

ಕಾಕೋಡೆ ಅವರನ್ನು ನಾನು ಸುಮಾರು ೧೦ ವರ್ಷಕ್ಕೂ ಹೆಚ್ಚು ಸಮಯದಿಂದ ಬಲ್ಲೆ ಎಂದರೆ ತಪ್ಪಾಗಲಾರದು. ನಮ್ಮ ಹಿಮಾಲಯ ಕಾಲೋನಿಯ ಭರವಸೆಯ ಪೋಸ್ಟ್ಮನ್ ಎಂದು ಅವರನ್ನು ಕರೆಯಲು ಹಲವು ಕಾರಣಗಳೂ ಇವೆ. ತನ್ನ ವೃತ್ತಿಯಲ್ಲೂ ಕೆಲವು ಮಹತ್ವವೆಂದು ನಾನು ಕರೆಯುವ (ಬೇರೆಯವರಿಗೆ ಇದು ಅಷ್ಟು ಮುಖ್ಯವಾಗಿ ಕಾಣಿಸದೆ ಇರಬಹುದು) ಕಾರ್ಯಗಳನ್ನು ಅವರು ಮಾಡಿದ್ದಾರೆ ಎಂದರೆ ಸುಳ್ಳಲ್ಲ. ಯಾವುದೇ ಕೆಲಸ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅದನ್ನು ಎಷ್ಟು ಜನ ಗುರುತಿಸುತ್ತಾರೆ ಎನ್ನುವುದು ಮುಖ್ಯ. ವರ್ಷ ೨೦೦೮ ರಲ್ಲಿ ನಾವು … Read more

ಅಮ್ಮಾ ಎಂದರೆ ಏನೋ ಹರುಷವು: ಶಿವಲೀಲಾ ಹುಣಸಗಿ ಯಲ್ಲಾಪುರ

ಸೀರೆಯಂಚ ಹಿಡಿದು ತಪ್ಪೆಗಾಲ ಹಾಕಿ ಸೀರೆಯ ತೊಡರಿಸಿ ಕೊಂಡು ಬಿದ್ದಾಗ ಅಮ್ಮಾ‌ ಎಂದಾಗ ಗಾಬರಿಗೊಂಡು‌ ಜೋರಾಗಿ ಅಳುವ ನನ್ನ ಎತ್ತಿಕೊಂಡು ಎದೆಗಪ್ಪಿಕೊಂಡು ಪೆಟ್ಟಾಯಿತಾ ಮುದ್ದು ಎಂದು ಮುತ್ತಿಡುತ್ತ, ಬಿದ್ದ ಜಾಗವನ್ನೊಮ್ಮೆ ಇನ್ನೊಮ್ಮೆ ಬಡಿದು ಕಣ್ಣೀರು ಒರೆಸುತ್ತ ಎದೆಗವುಚಿ ಎದೆಹಾಲುಣಿಸುವಾಗ ಎಲ್ಲಿಲ್ಲದ ಸಂತಸ. ಅಮ್ಮನಿಗೆ ಅತ್ತು ಕರೆದು ಯಾಮಾರಿಸಿ ಹಾಲು ಕುಡಿವ ಕಾಯಕ ನನಗೆ ಹೊಸದಲ್ಲ. ಐದು ವರುಷ ಕಳೆದರೂ ಅಮ್ಮ ಒಮ್ಮೆಯು ಗದರಿಸಿಲ್ಲ. ಹಾಲುಣಿಸುವುದ ಬಿಟ್ಟಿಲ್ಲ. ಶಾಲೆಗೆ ಹೋಗುವಾಗ ಪುಟ್ಟ ಕಿರುಬೆರಳ ತೋರಿಸುತ್ತ ಪ್ರೀತಿ ಬರುವಷ್ಟು ಮುದ್ದು … Read more

ಪ್ರಕೃತಿಯೊಂದಿಗೆ ಅನುಬಂಧ ; ಕೋವಿಡ್ ಗೆ ನಿರ್ಬಂಧ: ಗಾಯತ್ರಿ ನಾರಾಯಣ ಅಡಿಗ

ಅದ್ಭುತ ಮತ್ತು ಅಪೂರ್ವವಾದ ಈ ಭೂಮಂಡಲ ಆನೇಕ ವೈಚಿತ್ರ್ಯಗಳಿಂದ ಕೂಡಿದ ಸಕಲ ಜೀವರಾಶಿಗಳಿಗೂ ಆಶ್ರಯತಾಣವಾಗಿದೆ. ಆದರೆ ಹದಗೆಟ್ಟಿರುವುದು ಕೇವಲ ಮಾನವನಿಂದ ಮಾತ್ರ. ಪ್ರಕೃತಿ ನೀಡುವ ಮೂಲ ಅವಶ್ಯಕತೆಗಳಾದ ನೀರು, ಆಹಾರ, ಗಾಳಿಯನ್ನು ನಂಬಿಕೊಂಡು ಸಕಲ ಚೈತನ್ಯಗಳು ಜೀವನ ನಡೆಸುತ್ತಿವೆ. ಪ್ರಕೃತಿ ಮಾತೆಯೂ ಕೂಡ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ವಸಂಕುಲಗಳನ್ನು ರಕ್ಷಿಸುತ್ತಿದ್ದಾಳೆ. ಆದರೆ ಇಂದೇಕೋ ಆಕೆ ರೌದ್ರಾವತಾರ ತಾಳಿದಂತಿದೆ. ಮನುಷ್ಯನ ಮಿತಿಮೀರಿದ ಸ್ವಾರ್ಥ ಚಟುವಟಿಕೆಗಳು ಆಕೆಯ ಸಹನೆಯನ್ನು ಕದಡಿವೆ. ಆಧುನಿಕತೆಯ ಮೊರೆಹೊಕ್ಕ ಮಾನವ ತಂಗಾಳಿಯ ವೃಕ್ಷಗಳನ್ನು ಕಡಿದು ಗಗನಚುಂಬಿ … Read more

ಯೋಚನೆಗಳು ಸ್ವತಂತ್ರವಾಗದ ಹೊರತು ಪ್ರಜಾಪ್ರಭುತ್ವ ಅತಂತ್ರ: ಮಧುಕರ್ ಬಳ್ಕೂರ್

ಇದು ಭಾರತೀಯರ ಹುಟ್ಟುಗುಣವೋ ಇಲ್ಲಾ ಕೆಟ್ಟಚಾಳಿಯೋ, ಒಂದಿಷ್ಟು ಗೌಜು ಗಲಾಟೆ ಜಟಾಪಟಿಯಂತ ಸ್ಥಳಗಳಲ್ಲಿ ಜೋರಾದ ಮಾತುಗಳು ಕೇಳಿಬಂದರೆ ಸಾಕು, ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಅಲ್ಲಿ ನೆರೆದು ಬಿಡುವುದು. ಒಂದು ಬಗೆಯ ಕೆಟ್ಟ ಕೂತೂಹಲದಲ್ಲಿ ಬಿಟ್ಟಿ ಎಂಟರ್ಟೈನ್ ಮೆಂಟ್ ಅಂತ ಮಜಾ ತಗೊಳ್ಳೊರು ಕೆಲವರಾದರೆ, ಜಗಳದ ಕಾರಣವನ್ನೆ ಅರಿಯದೆ ಮಧ್ಯೆ ಪ್ರವೇಶಿಸಿ ಹಿರೋಯಿಸಂ ತೊರಿಸಲು ಹಾತೊರೆಯುವ ಇನ್ನು ಕೆಲವರು. ಬಹುತೇಕ ಸಂಧರ್ಭಗಳಲ್ಲಿ ಅಲ್ಲಿ ವಿಷಯವೇ ಇರುವುದಿಲ್ಲ. ಏನ್ ಲುಕ್ ಕೊಡ್ತಾ ಇದ್ದೀಯಾ, ಹೆಂಗೈತೆ ಮೈಗೆ ಅನ್ನೊ ರೇಂಜ್ ನಲ್ಲೆ … Read more

ಬದುಕಲ್ಲಿ ಸ್ಪಷ್ಟತೆ ಇರಲಿ, ಪಡೆಯುವ ಉತ್ತರದಲ್ಲೂ ಏಳುವ ಪ್ರಶ್ನೆಗಳಲ್ಲೂ: ಮಧುಕರ್ ಬಳ್ಕೂರ್

ಅವನು : “ನನಗೂ ಬರೀಬೇಕು ಅಂತಾ ತುಂಬಾ ಆಸೆ ಸರ್. ಆದರೆ ಏನ್ಮಾಡೋದು? ಕೆಲಸದ ಒತ್ತಡ, ಬ್ಯುಸಿ. ಟೈಮೆ ಸಿಗಲ್ಲ ನೋಡಿ. ಡ್ಯೂಟಿ ಮುಗಿಸಿ ಮನೆಗ್ ಬಂದ್ ಮೇಲಂತೂ ಅದು ಇದು ಅಂತಲೆ ಆಗೊಗುತ್ತೆ. ಇನ್ನೆಲ್ಲಿ ಸರ್ ಬರೆಯೋದು..?” ಅವರು : “ಓ ಹೌದಾ, ಮನೆಗೆ ಬಂದ್ ಮೇಲೆ ಬಹಳ ಕೆಲ್ಸ ಇರುತ್ತೆ ಅನ್ನಿ ..?” ಅವನು : ” ಹಾಗೆನಿಲ್ಲ, ಡ್ಯೂಟಿ ಮಾಡಿ ದೇಹ ದಣಿದಿರತ್ತೆ ನೋಡಿ. ಹಾಸಿಗೆಗೆ ಹೋಗಿ ಒಂದ್ ಅರ್ಧ ಗಂಟೆ ಮಲಗಿರ್ತಿನಿ. … Read more

ನಿರಾಳ ಭಾವ: ವಸುಂಧರಾ ಕದಲೂರು

ಇಪ್ಪತ್ತಾರರ ಟಿಕೇಟಿಗೆ ನಾನು ಐದುನೂರು ರೂಪಾಯಿ ನೋಟು ಕೊಟ್ಟೆ. ಕಂಡಕ್ಟರ್ ‘ಚಿಲ್ಲರೆ ಇಲ್ವೇನ್ರಿ?’ ಗೊಣಗಾಡುತ್ತಲೇ ಚೀಟಿ ಹಿಂದೆ ನಾನೂರಎಪ್ಪತ್ನಾಲ್ಕು ಎಂಬ ಅಂಕಿಗಳನ್ನು ಗೀಚಿ ‘ಸರಿಯಾಗಿ ಚಿಲ್ಲರೆ ತರಕಾಗಲ್ವೇನ್ರೀ’ ಎನ್ನುತ್ತಾ ಟಿಕೇಟಿಕೆ ಕೈ ಚಾಚಿದ ನನ್ನ ಅಂಗೈಗೆ ತುಸು ಬಿರುಸಿನಿಂದಲೇ ತುರುಕಿ ಮುಂದೆ ಹೋದರು. ಬಸ್ಸಿನೊಳಗಿದ್ದವರ ಮುಂದೆ ಕಂಡಕ್ಟರ್ ಹೀಗೆ ಮಾಡಿದಕ್ಕೆ ಪಿಚ್ ಎನಿಸಿದರೂ ನನ್ನದೇ ತಪ್ಪೆನಿಸಿದ್ದರಿಂದ ಸುಮ್ಮನಾದೆ. ಆದರೆ ಬೆಳಿಗ್ಗೆ ಮನೆಯಿಂದ ಹೊರಟಾಗ ಬಸ್ಸಿನಲ್ಲಿ ಹೊರಡಬೇಕಾಗುತ್ತೆ ಎಂದುಕೊಂಡಿರಲಿಲ್ಲ. ಸಮಯಕ್ಕೆ ಸರಿಯಾಗಿ ಸ್ಕೂಟರ್ ಸ್ಟಾರ್ಟೇ ಆಗಲಿಲ್ಲ. ಕ್ಯಾಬ್ ಗೆ … Read more

ಉಗುಳುವುದೂ ಒಂದು ಕಲೆ ; ಬೇಡವಾದ ಅಗುಳನು: ಸುಂದರಿ ಡಿ.

ಉಗುಳುವುದು ಎಂದೊಡನೇ ಬಾಯಿಯ ಮುಖೇನ ಬೇಡವಾದ ಎಂಜಲನು ಹೊರಹಾಕುವ ಕ್ರಿಯೆ ಎಂದೇ ಗ್ರಹಿಸುವ ನಾವು ಉಗುಳುವ ಕ್ರಿಯೆಯನ್ನು ಸೀಮಿತಾರ್ಥದಲ್ಲಿ ಬಳಸುತ್ತಿದ್ದೇವೆ ಎನಿಸುತ್ತದೆ. ಏಕೆಂದರೆ ಬೇರೆಯವರನ್ನು ಬೈಯ್ಯುವ, ನಮಗೆ ಬೇಡವಾದವರನ್ನು ಬಿಡುವ ಕ್ರಿಯೆಯನ್ನೂ ಈ ಪರಿಭಾಷೆಯಲೇ ಕರೆಯುವುದು ರೂಢಿ. ಆದರೆ ಬೇಡವಾದುದನು ಹೊರ ಹಾಕುವ ಕ್ರಿಯೆಯನ್ನೇ ಉಗುಳುವುದು ಎಂದು ಗ್ರಹಿಸಬೇಕಾಗುತ್ತದೆ ಎಂದು ನನಗನಿಸುತ್ತದೆ. ಇದೊಂದು ನುಡಿಗಟ್ಟೆಂಬುದನು ತಕ್ಷಣಕೆ ನಾವು ಮರೆತಿರುತ್ತೇವೆ. ಜೀವರಾಶಿಯಲಿ ಈ ಸಂಗತಿ ಕ್ಷಣ ಕ್ಷಣವೂ ಜರುಗುತ್ತಲೇ ಇರುತ್ತದೆ. ನಮ್ಮ ದೇಹದ ಪ್ರತಿಯೊಂದು, ಪ್ರತಿಯೊಂದೂ ಅಂಗೋಪಾಂಗಗಳೂ ಕೂಡಾ … Read more

ಹೆಣ್ಣು ಕೇವಲ ಹೆರುವ ಯಂತ್ರವಲ್ಲ: ಗಾಯತ್ರಿ ನಾರಾಯಣ ಅಡಿಗ

” ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ” ಪ್ರತಿ ಹೆಣ್ಣು ಸುಶಿಕ್ಷಿತಳಾಗಿ ತನ್ನ ಕುಟುಂಬ ಮತ್ತು ಇಡೀ ಸಮಾಜವನ್ನು ಸಂಸ್ಕಾರಯುತವನ್ನಾಗಿ ರೂಪಿಸುತ್ತಾಳೆ. ಮುಂದುವರೆದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆಯು ಪುರುಷನಿಗೆ ಸಮಾನಳು. ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಮಹಿಳೆಯು ಮನೆ, ಮಕ್ಕಳು, ಕುಟುಂಬ ನಿರ್ವಹಣೆ, ಹಬ್ಬ ಹರಿದಿನಗಳು, ಸಂಪ್ರದಾಯಗಳು, ಕಟ್ಟುಪಾಡುಗಳು, ಪರಂಪರೆಗಳು, ಅರೋಗ್ಯ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಸಫಲತೆಯನ್ನು ಕಂಡಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀ ತನ್ನ ಮನೆಯ ಪರಿಸ್ಥಿತಿಯನ್ನು ನಾಜೂಕಾಗಿ … Read more

ಇದು‌ ಮುಗಿಯದ ಕತೆ; ಮನ- ಮನೆಗಳ ವ್ಯಥೆ!: ಡಾ.ಗೀತಾ ಪಾಟೀಲ

ಇಂದಿನ ದಿನಗಳ ಅನೇಕ ಗಂಭೀರವಾದ ಸಾಮಾಜಿಕ ಸಮಸ್ಯೆಗಳಲ್ಲಿ ಹಿರಿಯರ ಆರೈಕೆ ಹಾಗೂ ನಿರ್ವಹಣೆಯೂ ಒಂದು. ಜೀವನೋಪಾಯ, ಅವಕಾಶಗಳಿಗಾಗಿ ಬೇರೆಯಾಗುತ್ತಿರುವ ಕುಟುಂಬದ ಸದಸ್ಯರು, ಹಬ್ಬ, ಹರಿದಿನ, ಮದುವೆ, ಶವಸಂಸ್ಕಾರ ಮೊದಲಾದ ಕೌಟುಂಬಿಕ ಪರಿಸ್ಥಿತಿಗಳಿಗೂ ಸಹ ಜೊತೆ ಸೇರಲಾಗದಷ್ಟು ಸಾವಿರಾರು ಮೈಲು ದೂರ ನೆಲೆಸಿರುವ ಕುಟುಂಬಗಳು, ಬಡತನ, ಆರ್ಥಿಕ ಸಮಸ್ಯೆಗಳು, ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿತ್ವ ಹಾಗೂ ಮಾನಸಿಕ ಸಂಘರ್ಷಗಳು, ಒಂಟಿ ಜೀವಿಗಳ ಕಳವಳವನ್ನಿರಿಯದ ಕರುಳ ಬಳ್ಳಿಗಳು, ! ಇವೆಲ್ಲವುಗಳ ನಡುವೆ ಸಿಲುಕಿರುವ ಈ ವಿಷಯ ನಿಜಕ್ಕೂ ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ … Read more

ಎಂದೂ ಬಾಡದ ಮಂದಾರ: ಸುಂದರಿ ಡಿ,

ಮುಳುಗಿ ಉಸಿರುಕಟ್ಟುವ ಅತಿಯಲಿ ಬದುಕಲೋಸುಗವೇ ನಗೆಗಡಲ ಆಳದಿಂದ ಮೇಲೆದ್ದು ಬಂದು ಅದರಲಿ ತೇಲಿದ ಆ ದಿನಗಳ ಅದೆಂತು ಮರೆಯಲು ಸಾಧ್ಯ! ಆ ಸವಿದಿನಗಳ ಮರೆಯುವುದಾದರೂ ಏತಕ್ಕೇ.. ಮರೆಯಬಾರದು. ಏಕೆಂದರವು ಲಾಡುವಿನಲಿ ಸಿಗುವ ಕರ್ಬೂಜದ ಬೀಜಗಳಂತೆ, ಛಳಿಯಲಿ ಆಗ ತಾನೇ ಹದವಾಗಿ ಹುರಿದು ಬೆಲ್ಲದೊಡನೆ ಮೆಲ್ಲಲೆಂದೇ ಕೊಟ್ಟ ಕಡಲೇ ಬೀಜದಂತೆ, ಬಿರಬಿಸಿಲ ದಾರಿಯಲಿ ಹೊಂಗೆಯ ನೆರಳೊಂದು ಸಿಕ್ಕಂತೆ, ದಣಿದ ಜೀವಕೆ ನೀರುಮಜ್ಜಿಗೆಯ ನಿರಾಳವಾಗಿ ಕುಡಿಯಲು ಅವಕಾಶ ಸಿಕ್ಕಂತೆ ಇವುಗಳ ಅನುಭವಿಸದ ಭವಿ ಯಾರಿದ್ದಾರು!. ಬಿದ್ದು ಬಿದ್ದು, ಎದ್ದು ಬಿದ್ದು … Read more

ನೀನು ಅಣ್ಣನಲ್ವಾ…: ಸಿಂಧು ಭಾರ್ಗವ್ ಬೆಂಗಳೂರು

ಮಧ್ಯಾಹ್ನ ಸುಮಾರು ಮೂರು ಗಂಟೆಯಾಗಿರಬಹುದು. ಶ್ಯಾಮರಾಯರು ಮನೆಯಿಂದ ಹೊರಬಂದು, ಕಮಲಿಯಲ್ಲಿ ಮಾತಿಗಿಳಿದರು… “ಅಲ್ಲಾ…‌ನಾವೆಲ್ಲ ವಯಸ್ಸಾದವರು. ಊಟ‌ ಮಾಡಿ ಮಲಗೋ ಸಮಯ.. ನಿಮ್ಮ ಮಕ್ಕಳಿಗೆ ಶಾಲೆ ಇಲ್ಲ‌ ನಿಜ… ಆದರೆ ಗಲಾಟೆ ಮಾಡಬಾರದು ಅಂತ‌ ಒಂದು ಮಾತು ಹೇಳಬಾರದಾ?? ನನಗಂತೂ ಈ ಬಿಪಿ ,ಶುಗರ್ ನ ಮಾತ್ರೆ ತಿನ್ನೊದ್ರಿಂದ ಮಲಗಿದ್ರೆ ನಿದ್ದೇನೆ ಬರೋದಿಲ್ಲ… ಈ ಮಕ್ಕಳ ಗಲಾಟೆ ಸದ್ದು ಮಲಗೋಕೂ ಬಿಡೋದಿಲ್ಲ… ಯಾವಾಗಲೋ ಕರೆದು ಹೇಳಬೇಕು ಅಂತ ಎನಿಸಿದ್ದೆ….ಇಂದು ನೀನೇ ಸಿಕ್ಕಿದೆ ನೋಡು….” ಎಂದರು.. ಕಮಲಿಗೆ ಸಿಟ್ಟು ನೆತ್ತಿಗೇರಿತು. … Read more

ತಾಳ್ಮೆ: ಶರಧಿನಿ

ತಾಳ್ಮೆ, ಆದ್ದರಿಂದ ತಾಳ್ಮೆಯ ಬಗ್ಗೆ ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿಟ್ಟುಕೊಳ್ಳುವ ಮೊದಲ ವಿಷಯವೆಂದರೆ ಫಲಿತಾಂಶಕ್ಕಾಗಿ ಅಸಹಾಯಕತೆಯಿಂದ ಕಾಯುವುದು. ಆದರೆ ತಾಳ್ಮೆ ಎನ್ನುವುದು ನಾವು ಕೊನೆಯಲ್ಲಿ ನಿರೀಕ್ಷಿಸಿದ ಫಲಿತಾಂಶದ ಮೇಲೆ ಕೆಲಸ ಮಾಡುವ ಒಂದು ಕಲೆ ಎಂದು ಹೇಳಲು ಬಯಸುತ್ತೇನೆ. ನಾವು ಯಾವುದೇ ಹೊಸ ಸವಾಲನ್ನು ಕೈಗೆತ್ತಿಕೊಂಡಾಗ, ಹೆಚ್ಚಿನ ಬಾರಿ ನಾವು ನಮ್ಮ ಕೆಲಸವನ್ನು ಇತರರೊಂದಿಗೆ ಹೋಲಿಸಲು ಪ್ರಾರಂಭಿಸುತ್ತೇವೆ ಮತ್ತು ಇತರರಂತೆಯೇ ಕೆಲಸವನ್ನು ಪೂರೈಸಲು ಮತ್ತು ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕೊನೆಗೊಳ್ಳಲು ನಮ್ಮೊಳಗೆ ಒತ್ತಡದ ವಾತಾವರಣವನ್ನು ಸ್ಥಾಪಿಸುತ್ತೇವೆ. ಇಲ್ಲಿ ನಾವು … Read more

ರಾಷ್ಟ್ರೀಯ ‘ ಹುತಾತ್ಮರ ದಿನ ‘: ಡಾ.ಅವರೆಕಾಡು ವಿಜಯ ಕುಮಾರ್

ಜನವರಿ 30 ಈ ವಿಶೇಷ ದಿನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ, ದೇಶದ ಭವಿಷ್ಯಕ್ಕಾಗಿ, ದೇಶದ ಬೆಳವಣಿಗೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು, ಹೋರಾಡಿ ಮಡಿದ ರಾಷ್ಟ್ರೀಯ ವೀರ ನಾಯಕರುಗಳನ್ನು ನೆನೆಯುವ ದಿನ. ಭಾರತವು ಸೇರಿದಂತೆ ಜಗತ್ತಿನ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ರಾಷ್ಟ್ರೀಯ ದಿನವನ್ನು’ ಹುತಾತ್ಮರ ದಿನ’ ಅಥವಾ ‘ಸರ್ವೋದಯ ದಿನ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.ಭಾರತ ಸರ್ಕಾರದ ಆದೇಶದನ್ವಯ ದೇಶದಾದ್ಯಂತ ದೇಶದ ರಕ್ಷಣೆಯಲ್ಲಿ ಪ್ರಾಣತೆತ್ತ ಹುತಾತ್ಮರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದೇಶಕ್ಕಾಗಿ ಪ್ರಾಣತೆತ್ತವರ ತ್ಯಾಗಕ್ಕೆ ಎಂದೆಂದಿಗೂ … Read more

‘ಮಾತೆಂಬುದು ಜ್ಯೋತಿರ್ಲಿಂಗ’: ವಸುಂಧರಾ ಕದಲೂರು.

ನನ್ನ ಸ್ನೇಹಿತೆಯ ಸ್ನೇಹಿತೆ ಆಕೆ. ನನಗೂ ಒಂದೆರಡು ಬಾರಿಯ ಒಡನಾಟದಿಂದ ಪರಿಚಿತಳಾಗಿದ್ದಳು. ಕೆಲವು ದಿನಗಳ ಹಿಂದೆ ಒಂದು ಸಂಜೆ ನಾನು ಆಫೀಸು ಮುಗಿಸಿ ಮನೆಗೆ ಹೊರಡುವ ಸಮಯದಲ್ಲಿ ‘ಕಾಫಿ ಕುಡಿಯೋಣ ಎಲ್ಲಾದರೂ ಸಿಗಲು ಸಾಧ್ಯವಾ?’ ಎಂಬ ಮೆಸೇಜು ಮಾಡಿದ್ದಳು. ನಾನು ವರ್ಷಾರಂಭದಿಂದಲೇ ಚಹಾ- ಕಾಫಿ ಸೇವನೆ ಬಿಟ್ಟಿರುವುದಾಗಿ ಆಕೆಗೆ ಗೊತ್ತಿತ್ತು. ಆದರೂ ಬೇರೆ ಏನನ್ನೋ ಫೋನಿನಲ್ಲಿ ಹೇಳಿಕೊಳ್ಳಲಾರದ್ದಕ್ಕೆ ಕಾಫಿಯ ನೆವ ತೆಗೆದು ಮಾತನಾಡಲು ಕರೆದದ್ದಿರಬಹುದೆ? ಎಂಬುದು ನನಗೆ ಅರ್ಥವಾಗಿ, ’ಸರಿ, ಬರುವೆ. ಆದರೆ ‘ಕಾಫಿ ಡೇ‘ಗೆ ಹೋಗೋಣ. … Read more

ನಮ್ಮ ಜಿಲ್ಲೆಯ ಗಜಲ್ ಕಾರರು…(ಕೊನೆಯ ಭಾಗ): ವೇಣು ಜಾಲಿಬೆಂಚಿ

ಮತ್ತೋರ್ವ ಭರವಸೆಯ ಗಜಲ್ ಬರಹಗಾರರು ಶ್ರೀ ಪ್ರಕಾಶ ಬುದ್ದಿನ್ನಿಯವರು… ಅವರು ಬರೆದ ಗಜಲ್ ನ ಸಾಲು ಹೀಗಿದೆ… ” ನೀ ಬರುವೆಯೆಂದು ಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟ ರಾತ್ರಿನನ್ನೆದೆಯ ಬಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟ ರಾತ್ರಿ “ ಎಂತಹ ಮನೋಜ್ಞವಾದ ಸಾಲು… ರಾತ್ರಿ ಎಂಬುದೇ ಪ್ರೀತಿಯ ಸಲ್ಲಾಪಕ್ಕೆ ಕರೆಯುವ ವೇದಿಕೆ. . . ಅದರಲ್ಲೂ ದೀಪ ಹಚ್ಚಿಟ್ಟುಕೊಂಡು ಪ್ರಿಯತಮೆಯ ಬರುವಿಕೆಗಾಗಿ ಕಾಯುತ್ತಿರುವ ಪ್ರಿಯಕರ. ಆದರೆ ಎಷ್ಟು ಕಾದರೂ ಅವಳು ಬಂದಳಾ? ನಿರಾಶೆಯನ್ನೇ ಉಳಿಸಿತೆಂದು ಮುಂದಿನ … Read more

ಬಾಳಿ ಬದುಕಿದವರು: ಎಸ್.ಗಣೇಶ್, ಮೈಸೂರು.

ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರು ಮರಣ ಹೊಂದಿದರು, ಕುಟುಂಬದವರೆಲ್ಲಾ ಒಂದು ಕಡೆ ಸೇರಿ, ಮೃತರ ಆತ್ಮ ಶಾಂತಿಗಾಗಿ ಉತ್ತರಕ್ರಿಯೆಗಳನ್ನು ಹೇಗೆ ನೆರವೇರಿಸಬೇಕು? ದಾನಗಳನ್ನು ಏನು ಕೊಡಬೇಕು? ಪ್ರತ್ಯಕ್ಷ ದಾನಗಳನ್ನು ಕೊಡಬೇಕೋ? ಅದರ ವೆಚ್ಚವೆಷ್ಟು? ಎಲ್ಲಿ ಕರ್ಮಗಳನ್ನು ಮಾಡಬೇಕು? ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿತ್ತು.. ನಾನು ತದೇಕಚಿತ್ತದಿಂದ ಎಲ್ಲವನ್ನು ಗಮನಿಸುತ್ತಿದ್ದೆ, ಗುಂಪಿನಲ್ಲಿನ ಹಿರಿಯರೊಬ್ಬರು ಪ್ರತಿಯೊಂದು ಪ್ರಶ್ನೆಗಳಿಗೂ ಸಲಹೆಗಳನ್ನು ನೀಡುತ್ತಿದ್ದರು, ಅದನ್ನ ಉಳಿದವರು ಅನುಮೋದಿಸುತ್ತಿದ್ದರು.. ಒಟ್ಟಿನಲ್ಲಿ ಆ ಹಿರಿಯರ ಮಾತನ್ನು ಯಾರು ಮರು ಪ್ರಶ್ನಿಸುತ್ತಿರಲಿಲ್ಲ.. ಅವರ ಮಾತೇ ಅಂತಿಮವಾಗುತ್ತಿತ್ತು.. … Read more

ಬದಲಾವಣೆಯೊಂದಿಗೆ ಬದುಕು: ವೇದಾವತಿ. ಹೆಚ್. ಎಸ್.

ಅದೊಂದು ದಿನ ರಾಶಿ ಹಳೆಯ ಪುಸ್ತಕಗಳ ನಡುವೆ ಒಂದು ನೆನೆಪಿನ ಬುತ್ತಿಯಂತಿದ್ದ ಡೈರಿಯೊಂದು ನನ್ನ ಕೈಗೆ ಸಿಕ್ಕಿತ್ತು. ಆ ಡೈರಿಯು ೨೫ಸಂವಸ್ಸರವನ್ನು ಕಂಡು ಸಿಲ್ವರ್ದ ಜ್ಯೂಬಿಲಿಯ ಗಡಿಯನ್ನು ದಾಟಿತ್ತು. ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಂತೆ ಆ ಪುಟಗಳಲ್ಲಿ ನನ್ನ ಸ್ನೇಹಿತೆಯರ ಸುಂದರವಾದ ಒಂದೊಂದು ರೀತಿಯಲ್ಲಿರುವ ಹಸ್ತಾಕ್ಷರಗಳಿದ್ದವು. ಅದರಲ್ಲಿರುವ ಬರಹಗಳನ್ನು ಓದುತ್ತಾ ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಂತೆ ಡೈರಿಯ ಒಂದೊಂದು ಪುಟಗಳಲ್ಲೂ ವೈವಿಧ್ಯಮಯ ರೀತಿಯಲ್ಲಿ ನನ್ನ ಗುಣಗಾನವನ್ನು ಹೊಗಳಿ ಬರೆದ ಬರಹಗಳನ್ನು ನೋಡಿ ಒಮ್ಮೆ ಕಣ್ಣು ಮಂಜಾದರೆ, ಇನ್ನೊಮ್ಮೆ … Read more

ದಂತ ಪುರಾಣ: ಸಂಗೀತ ರವಿರಾಜ್

ಹಾಲು ಕುಡಿಯಲೊಲ್ಲದ ಮಗಳಿಗೆ ಪ್ರೇರೇಪಿಸಲು ಚಂದ್ರನ ತೋರಿಸಿ ಗಣಪತಿಯ ದಂತ ಮುರಿದದ್ದು ಹೇಗೆ ಗೊತ್ತಾ ಎಂಬ ಕತೆಯನ್ನು ಪ್ರಾರಂಭಿಸಿದೆ. ಆನೆ ತಲೆ ಜೋಡಿಸಿದ್ದನ್ನು ನೋಡಿ ನಕ್ಕ ಚಂದ್ರನಿಗೆ ಗಣಪತಿ ಸಿಟ್ಟಿನಿಂದ ತನ್ನ ಮುಖದ ದಂತವನ್ನು ತುಂಡರಿಸಿ ಎಸೆದ ಎಂದು ನನಗೆ ತಿಳಿದ ಗಣಪತಿಯ ‘ ದಂತ’ ಕತೆಯನ್ನು ಹೇಳಿ ಲೋಟ ಖಾಲಿ ಮಾಡಿಸಿದೆ. ಆದರೆ ಈಗ ನಾನು ಮನುಷ್ಯರ ದಂತದ ಕುರಿತ ಸ್ವಾರಸ್ಯಕರ ಕತೆಗಳನ್ನು ಹೇಳಹೊರಟಿರುವೆ. ದೇಹದ ಯಾವ ಅಂಗಕ್ಕು ಚಿಕ್ಕ ಗಾಯವಾದರು ಆ ದಿನ ಏನೋ … Read more

ಕಷ್ಟವೇ ದೇವರು………?: ದೀಪಾ ಜಿ.ಎಸ್

ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ನಾವುಗಳು ಯಾಕೆ ದೇವರನ್ನ ನೆನಪು ಮಾಡ್ಕೊಂತೀವಿ . ಅದೇ ನಾವು ಸಂತೋಷದಿಂದ ಇದ್ದಾಗ ದೇವರನ್ನ ನೆನಪು ಮಾಡ್ಕೊಳ್ಳೊದೇ ಇಲ್ಲ ಅಲ್ವಾ. ಜೀವನದಲ್ಲಿ ಕಷ್ಟಗಳು ಬಂದಾಗ ನಾವ್ ಯಾಕೆ ತಲೆ ಬಾಗಬೇಕು. ನಾವ್ ಯಾಕೆ ಕಷ್ಟಗಳಿಗೆ ಹೆದರ್ಬೇಕು……? ನಾವ್ ಯಾಕೆ ಕಷ್ಟಗಳಿಗೆ ಅಂಜಬೇಕು…..? ಕಷ್ಟಗಳು ಬಂದಾಗ ನಾವ್ ಯಾಕೆ ಹೆದರಿ ಕೂತ್ಕೋಬೇಕು….? ನಾವ್ ಯಾಕೆ ಅಳ್ಬೇಕು….? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಾಗ ಉತ್ತರ ನಮ್ಮಲ್ಲೇ ಇದೆ ಅಲ್ವ. ನಮ್ಮಲ್ಲೂ ಕೂಡ ಆ … Read more

ಬೆರಗೊಂದು ಕೊರಗಾಗಿ ಕಾಡಿದಾಗ…. : ಸುಂದರಿ ಡಿ.

ತನ್ನ ಪಾಡಿಗೆ ತಾನು ಹಾಡಿಕೊಂಡು, ಹನಿಗಳ ಚುಮುಕಿಸಿ, ಬಳುಕುತ ಬಿಸಿಲ ನೇರ ಕೋಲುಗಳ ಸ್ಪರ್ಶದಿಂದಲೇ ಮತ್ತಷ್ಟು ಹೊಳಪಿನಿಂದ ತನ್ನಾಳದ ಮರಳನೂ ಚಿನ್ನದಂತೆ ಹೊಳೆಯಿಸುತ, ಜುಳು-ಜುಳು ನಾದದೊಂದಿಗೇ ಹರಿಯುತಿದ್ದ ನೀರ ಬದಿಯಲಿ ತನ್ನ ಸೊಬಗತೋರುತ, ನೀರ ಸೊಬಗನೂ ಹೆಚ್ಚಿಸಲೆಂಬಂತೆ ಅದರ ಸತ್ವವನೇ ಹೀರಿ ನಿಜವಾದ ಹಸಿರೆಂದರೆ ಇದೇ ಎಂಬಂತೆ ಬೆಳೆದು ನಿಂತಿದ್ದ ಗಿಡಗೆಂಟೆಗಳು, ಅವುಗಳಲ್ಲಿ ಬೆಟ್ಟದ ಹೂವಿನಂತೆ ಇತರರನು ತಮ್ಮತ್ತ ಸೆಳೆವ ಯಾವ ಗೋಜಿಗೂ ಹೋಗದೆ ಬೇಲಿಯ ಹೂವೆಂದೇ ಕರೆಸಿಕೊಂಡರೂ ಸಹಜ ಸೌಂದರ್ಯದ ಕಾರಣವೊಂದರಿಂದಲೇ ತಮ್ಮತ್ತ ತಿರುಗಿ ನೋಡುವಂತೆ … Read more

ಮಾಸಗಳ ವೈಶಿಷ್ಟ್ಯ: ಗೀತಾ ಜಿ ಹೆಗಡೆ ಕಲ್ಮನೆ.

ಹೃದಯದ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹೂವಿನ ಘಮಲಿನ ಅರಿವಳಿಕೆಯಲ್ಲಿ ಮೈನವಿರೇಳಿಸುವ ಶೃಂಗಾರದ ಕನಸು ಹೆಣೆಯುತ್ತ ಅರಿವಿಲ್ಲದೆ, ಅರಿವಾಗದಂತೆ ಹೃದಯ ಸಿಂಹಾಸನದ ಮೆಟ್ಟಿಲು ಒಂದೊಂದಾಗಿ ನಿಧಾನವಾಗಿ ಹತ್ತಿ ತಳವೂರಿದ ಹರೆಯದ ವಸಂತ ಕಾಲದ ನೆನಪು ಎಂದಾದರೂ ಮರೆಯಲು ಸಾಧ್ಯವೆ.  ಅದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣವದು.  ಹೆಣ್ಣಾಗಲಿ ಗಂಡಾಗಲಿ ಹರೆಯದ ಹೊಸ್ತಿಲಲ್ಲಿ ಮನಸ್ಸು ಬೆಳೆದಂತೆಲ್ಲ ಕನಸೂ ಬೆಳೆಯುವುದು ಸ್ವಾಭಾವಿಕ.  ಅದಕ್ಕೆ ದಿನಕ್ಕೊಂದು ರೆಕ್ಕೆ ಪುಕ್ಕ.  ಬಣ್ಣ ಬಣ್ಣದ ಓಕುಳಿಯ ಸಿಂಪಡಿಕೆ.  ಹರೆಯದ ಕನಸುಗಳು ನೂರೆಂಟು.  ಅದು ಮಾತಿನಲ್ಲಿ ಅಥವಾ … Read more