ಅವರು ನಮ್ಮ ತಾಯಿ ಸಾರ್ !!!!!!: ನಾಗಸಿಂಹ ಜಿ ರಾವ್

ಕೆಲವೊಮ್ಮೆ ನಮಗಾಗುವ ಮುಜುಗರವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ಅಂತಹ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕು ಅನ್ನುವುದೂ ಕಲ್ಪನೆಗೆ ಮೀರಿದ ಸಂವಹನಾ ಸಾಮರ್ಥ್ಯ. ಇಂತಹ ಒಂದು ಪ್ರಸಂಗ ನಾನು ಎದುರಿಸಿದೆ. ಆ ಪ್ರಸಂಗವನ್ನು ಸಮರ್ಥವಾಗಿ ನಿಭಾಯಿಸಲಿಲ್ಲ ಎಂಬುದು ನನ್ನ ಅನಿಸಿಕೆ. ನನ್ನ ಹುಟ್ಟೂರು ಹಾಸನದ ಬಾಲಕರ ಬಾಲಭವನದಿಂದ ನನಗೊಂದು ಅಹ್ವಾನ ಬಂದಿತ್ತು, ಆ ಬಾಲಕರ ಬಾಲಭವನದ ಸಿಬ್ಬಂದಿಗಳಿಗೆ ಮತ್ತು ಮಕ್ಕಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಅಲ್ಲಿ ಮಕ್ಕಳ ರಕ್ಷಣಾ ನಿಯಮಗಳನ್ನು ಸಿದ್ಧಪಡಿಸಲು … Read more

ವಾಸು ಸಿಕ್ಕಿದ್ದು…. !!!!: ನಾಗಸಿಂಹ ಜಿ ರಾವ್

ಸಿಂಹಾವಲೋಕನ 5 ಸಮುದಾಯದ ಪುಲಪೇಡಿ ನಾಟಕದ ತಾಲೀಮಿನ ಸಮಯದಲ್ಲಿ ಒಂದು ಘಟನೆ ನಡೆಯಿತು. ನಾನು ಲಿಂಗದೇವರು ಹಳೆಮನೆಯವರ ಜೊತೆ ನನ್ನ ಪಾತ್ರದ ಬಗ್ಗೆ ಮಾಹಿತಿ ಕೇಳುತ್ತಾ ನಿಂತಿದ್ದೆ. ಆಗ ನನಗಿಂತ ಸ್ವಲ್ಪ ದೊಡ್ಡ ಹುಡುಗ ಬಂದು ” ನೀವು ನಾಗಸಿಂಹ ಅಲ್ವ ?? ” ಎಂದು ಕೇಳಿದ, ನನಗೆ ಆಶ್ಚರ್ಯ, ಮೈಸೂರಿಗೆ ಬಂದು ಇನ್ನೂ ನಾಲ್ಕು ತಿಂಗಳು ಆಗಿಲ್ಲ ಯಾರಪ್ಪ ಇವರು ? ನನ್ನ ಹೆಸರು ಇವರಿಗೆ ಹೇಗೆ ಗೊತ್ತು? ಹೌದು ನಾನೆ ನಾಗಸಿಂಹ, ನೀವು ಯಾರು … Read more

ಅನಾಥ ಭಗವಂತ ನೀ ಅವ್ಯಕ್ತನಾಗು: ನಾಗಸಿಂಹ ಜಿ ರಾವ್

ಸಿಂಹಾವಲೋಕನ 4 ವೇಣುಜೀ ಅವರಿಂದ ರಚಿತವಾದ “ಅನಾಥ ಭಗವಂತ ನೀ ಅವ್ಯಕ್ತನಾಗು” ನಾಟಕವು ಕೇವಲ ಒಂದು ನಾಟಕವಲ್ಲ, ಒಂದು ಸಾಮಾಜಿಕ ಕನ್ನಡಿಯಾಗಿದೆ. ಈ ನಾಟಕವು ಸುಳ್ಳು ಭಕ್ತಿಯನ್ನು, ದೇವರ ಹೆಸರಿನಲ್ಲಿ ವಂಚನೆ ಮಾಡುವವರನ್ನು ಬಯಲಿಗೆ ಎಳೆಯುವ ಗುರಿಯನ್ನು ಹೊಂದಿದ್ದು, ಭಗವಂತನೇ ಭೂಮಿಗೆ ಬಂದರೆ ಎಂಥ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಥಾಹಂದರದ ಮೂಲಕ ಸಮಾಜದ ಕೊಳಕು ಮುಖವನ್ನು ತೆರೆದಿಡುತ್ತದೆ. ನಾಟಕದ ಕೇಂದ್ರ ಬಿಂದುವಾಗಿರುವ ಭಗವಂತ (ಧೀರನಾಥ -ವಿಷ್ಣು, ನಾಗಭೂಷಣ – ನಾರದ ), ದೀರ್ಘ ನಿದ್ದೆಯಿಂದ ಎದ್ದಾಗ ತನ್ನ … Read more

ವೆಂಕಟೇಶ್ ಸಲೂನ್: ಮಕ್ಕಳ ಹಕ್ಕುಗಳ ಕೋಟೆ !!!!!!: ನಾಗಸಿಂಹ ಜಿ ರಾವ್

ಲಿಂಗರಾಜಪುರಂ ಬಸ್‌ನಿಲ್ದಾಣದ ಬಳಿ ಗದ್ದಲದ ರಸ್ತೆಯೊಂದಿಗೆ, ಒಂದು ಸಣ್ಣ ಹೇರ್ ಕಟಿಂಗ್ ಸಲೂನ್ ಇದೆ. ವೆಂಕಟೇಶ್ವರ ಸಲೂನ್—ಚಿಕ್ಕದಾದರೂ, ಲಿಂಗರಾಜಪುರಂ ಹೃದಯದಲ್ಲಿದೆ. ಅದರ ಮಾಲೀಕ ವೆಂಕಟೇಶ್‌ರವರ ಮುಗುಳುನಗೆ, ಗ್ರಾಹಕರಿಗೆ ಕೇವಲ ಕೂದಲು ಕತ್ತರಿಸುವುದು ಮಾತ್ರವಲ್ಲ ಅದರ ಜೊತೆಗೆ ಸಣ್ಣ ಮಾತುಕತೆಯ ಸಂತೋಷವನ್ನೂ ಒದಗಿಸುತ್ತಿತ್ತು. ಆದರೆ ಈ ಸಲೂನ್‌ ಮುಂದೆ ಕೇವಲ ಕೂದಲು ಕತ್ತರಿಸುವ ಜಾಗವಾಗಿ ಉಳಿಯಲಿಲ್ಲ ; ಇದು ಮಕ್ಕಳ ಹಕ್ಕುಗಳಿಗಾಗಿ, ಮಕ್ಕಳ ರಕ್ಷಣೆಗಾಗಿ ಪ್ರಚಾರ ಮಾಡುವ ಒಂದು ಕಿರು ಕ್ರಾಂತಿಯ ಕೇಂದ್ರ ವಾಯಿತು.ಆಗ ನಾನು, ಚೈಲ್ಡ್ ರೈಟ್ಸ್ … Read more

ಅಂಕ ಪ್ರಯಾಣ: ನಾಗಸಿಂಹ ಜಿ ರಾವ್

ಸಿಂಹಾವಲೋಕನ 3 “ಪುಲಪೇಡಿ” ಎಂಬ ಸಮುದಾಯ ತಂಡದ ನಾಟಕದಲ್ಲಿ ಭಾಗವಹಿಸಿದ ನಂತರ, ನನ್ನ ಶಾರದಾವಿಲಾಸ ಕಾಲೇಜಿನ ಸಹಪಾಠಿಗಳು ಮತ್ತು ಅಧ್ಯಾಪಕರೆಲ್ಲರೂ ನನ್ನನ್ನು ಗುರುತಿಸತೊಡಗಿದರು. “ಮುಂದಿನ ನಾಟಕ ಯಾವಾಗ?” ಎಂಬ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಆದರೆ, ಆ ಪ್ರಶ್ನೆಗೆ ಉತ್ತರವೇ ನನಗೆ ತಿಳಿದಿರಲಿಲ್ಲ. ಒಂದು ದಿನ ಕಾಲೇಜ್ ಮುಗಿಸಿಕೊಂಡು ಮನೆಗೆ ಹೋಗುವಾಗ, ಚಾಮುಂಡಿಪುರಂ ವೃತ್ತದಲ್ಲಿ ಪಾಪು ಎದುರಾದರು. “ಏನ್ರಿ, ಹೇಗಿದ್ದೀರಾ? ನಾಟಕ ಮಾಡ್ತೀರಾ?” ಎಂದು ಕೇಳಿದರು. “ಹೂ, ಮಾಡ್ತೀನಿ, ” ಎಂದೆ. “‘ಬೆಲೆ ಇಳಿದಿದೆ’ ಎಂಬ ಬೀದಿನಾಟಕದ ರಿಹರ್ಸಲ್ … Read more

293K CRC: ನಾಗಸಿಂಹ ಜಿ ರಾವ್

ನನ್ನ ಮನೆಯಿಂದ ಕಚೇರಿಗೆ 32 ಕಿಮೀ ದೂರ, 41 ಸ್ಟಾಪ್‌ಗಳು, 7:30ರ ಬಸ್‌ನಲ್ಲಿ ದಿನವೂ ಶಾಲಾ ಮಕ್ಕಳ ಜೊತೆಗಿನ ಪ್ರಯಾಣ. ಆರಂಭದಲ್ಲಿ, ಜನಜಂಗುಳಿಯಿಂದಾಗಿ ಬಸ್‌ನಲ್ಲಿ ಸೀಟು ಸಿಗದೆ ನಿಂತೇ ಪ್ರಯಾಣಿಸಬೇಕಿತ್ತು. ಕಚೇರಿಗೆ ತಲುಪುವಷ್ಟರಲ್ಲಿ ಸುಸ್ತಾಗಿರುತ್ತಿತ್ತು. ಆದರೆ, ಈ ಸವಾಲನ್ನು ಒಂದು ಅವಕಾಶವಾಗಿ ನಾನು ಪರಿವರ್ತಿಸಿಕೊಂಡ ಪ್ರಕರಣವೇ 293K CRCಯ ಜನನ. ಬಸ್‌ನಲ್ಲಿ ಪ್ರತಿದಿನ ಮಕ್ಕಳ ಗಲಾಟೆ, ನಾನು ಕೆಲವು ಮಕ್ಕಳನ್ನು ಅವರ ಶಾಲೆಯ ಬಗ್ಗೆ. ಆಟದ ಬಗ್ಗೆ ಪಾಠದ ಬಗ್ಗೆ ಚರ್ಚೆಗಳಿಂದ ಅವರ ಪರಿಚಯ ಸಂಪಾದಿಸಿದೆ. ಪ್ರತಿದಿನ … Read more

ಅಳಬೇಡ ಕಂದ ಅಳಬೇಡ: ನಾಗಸಿಂಹ ಜಿ ರಾವ್

ಕೊಳ್ಳೇಗಾಲದಲ್ಲಿ ಎರಡು ದಿನಗಳ ಕಾಲ ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ನೀಡಿದ ನಂತರ, ನಾನು ಮೈಸೂರಿನಿಂದ ಬೆಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಬಸ್‌ನಲ್ಲಿ ಜನಸಂದಣಿ ಇರಲಿಲ್ಲ; ಕೆಲವೇ ಪ್ರಯಾಣಿಕರು ಚದುರಿದಂತೆ ಕುಳಿತಿದ್ದರು. ನನ್ನ ಸೀಟಿನ ಮುಂದೆ ಒಬ್ಬ ಯುವತಿ, ಸುಮಾರು ೨೫-೨೬ ವರ್ಷದವಳು, ಒಂದು ವರ್ಷದ ಮಗುವಿನೊಂದಿಗೆ ಕುಳಿತಿದ್ದಳು. ಮಗುವಿನ ಮುಗ್ಧ ಮುಖ, ಆದರೆ ಸ್ವಲ್ಪ ದುರ್ಬಲವಾಗಿ ಕಾಣುವ ದೇಹ, ನನ್ನ ಗಮನ ಸೆಳೆಯಿತು. ಬಸ್ ಹೊರಟ ಕೆಲವೇ ಕ್ಷಣಗಳಲ್ಲಿ, ಮಗು ಜೋರಾಗಿ ಅಳಲು ಆರಂಭಿಸಿತು. ಆ ತಾಯಿ … Read more

ಸಿಂಹಾವಲೋಕನ 1: ನಾಗಸಿಂಹ ಜಿ ರಾವ್

ರಂಗಭೂಮಿ ಅನುಭವಗಳು ಹತ್ತನೇ ತರಗತಿಯ ನಂತರ ಮೈಸೂರಿಗೆ ಕಾಲಿಟ್ಟಾಗ, ಒಂದು ಹೊಸ ಜಗತ್ತಿನ ದ್ವಾರ ತೆರೆಯುವ ಸೂಕ್ಷ್ಮ ಗುಂಗಿನಲ್ಲಿದ್ದೆ. ಚಿಕ್ಕ ವಯಸ್ಸಿನಿಂದಲೂ ನಾಟಕದ ಮೇಲಿನ ಒಲವು ನನ್ನಲ್ಲಿ ಒಡಮೂಡಿತ್ತು. ಸಿನಿಮಾ ನೋಡಿಕೊಂಡು ಮನೆಗೆ ಬಂದ ಮೇಲೆ, ನಾನು ಮತ್ತು ನನ್ನ ಅಕ್ಕ ತಮ್ಮಂದಿರೊಂದಿಗೆ ಆ ದೃಶ್ಯಗಳನ್ನು ಮನೆಯ ಅಂಗಳದಲ್ಲಿ ಅಭಿನಯಿಸುತ್ತಿದ್ದೆವು. ಆ ಕ್ಷಣಗಳಲ್ಲಿ, ನಾನೇ ಒಬ್ಬ ನಾಯಕನಂತೆ, ಖಳನಾಯಕನಂತೆ, ಒಂದು ಕಾಲ್ಪನಿಕ ಜಗತ್ತಿನಲ್ಲಿ ಮಿಂದೇಳುತ್ತಿದ್ದೆ. ಆದರೆ, ನಿಜವಾದ ನಾಟಕದ ರುಚಿಯನ್ನು ನಾನು ಮೊದಲ ಬಾರಿಗೆ ಸವಿದದ್ದು ಹತ್ತನೇ … Read more

ಬಾಗಿಲು ತೆಗೆಯೇ ಪುಟ್ಟಕ್ಕ !!!!: ನಾಗಸಿಂಹ ಜಿ ರಾವ್

ಒಂದು ರಾತ್ರಿ, ಸುಮಾರು ಹತ್ತು ಗಂಟೆಯ ವೇಳೆಗೆ, ನನ್ನ ಮೊಬೈಲ್‌ನಲ್ಲಿ ಒಬ್ಬ ಪರಿಚಿತರ ಕರೆ ಬಂತು. ಆ ಧ್ವನಿಯಲ್ಲಿ ಆತಂಕ, ಭಯ ಮತ್ತು ಅಸಹಾಯಕತೆಯ ಛಾಯೆ ಸ್ಪಷ್ಟವಾಗಿತ್ತು. ಕರೆ ಮಾಡಿದವರು ಶಾಂತಿ (ಬದಲಾಯಿಸಿದ ಹೆಸರು), ಒಂಟಿ ತಾಯಿಯಾಗಿ ತನ್ನ ಹದಿಹರೆಯದ ಮಗಳು ಸುಮಿತಾಳನ್ನು (ಬದಲಾಯಿಸಿದ ಹೆಸರು) ಬೆಳೆಸುತ್ತಿದ್ದವರು. “ಸಾರ್, ದಯವಿಟ್ಟು ಸಹಾಯ ಮಾಡಿ! ಸುಮಿತಾ ತಡವಾಗಿ ಮನೆಗೆ ಬಂದಿದ್ದಕ್ಕೆ ಬೈದೆ. ಕೋಪದಲ್ಲಿ ರೂಮ್‌ಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡಿದಾಳೆ. ಎಷ್ಟು ಕರೆದರೂ ತೆಗೆಯುತ್ತಿಲ್ಲ. ಏನಾದರೂ ಮಾಡಿಕೊಂಡರೆ ಅಂತ … Read more

”ಹಕ್ಕು ಇದ್ರೆ ನಾವು ಬದುಕುತ್ತೇವಾ ಸಾರ್ ? ”: ನಾಗಸಿಂಹ ಜಿ ರಾವ್

ಒಂದು ವಾರದ ಹಿಂದೆ ಮನೆಗೆ ಬಂದಾಗ, ಎದುರಿನ ತೋಟದಲ್ಲಿ ಏನೋ ಕಾಣೆಯಾಗಿದೆ ಎಂದು ಅನಿಸಿತು. ಕುತೂಹಲವನ್ನು ತಡೆಯಲಾಗದೆ ತೋಟದೊಳಗೆ ನಡೆದು, ಸುತ್ತಲೂ ಕಣ್ಣಾಡಿಸಿದೆ. ಆ ಕ್ಷಣದಲ್ಲಿ ಹೃದಯವೇ ನಿಂತ ಅನುಭವ ಆಯಿತು —ನಮ್ಮ ಪ್ರೀತಿಯ ನಲ್ಲಿಕಾಯಿ ಮರದ ಒಂದು ಭಾಗವನ್ನು ಕತ್ತರಿಸಲಾಗಿತ್ತು. ತೆಂಗಿನ ಮರ ಹಾಗೂ ಹೊಂಗೆಯ ಮರದ ತೋಳಿನಡಿಯಲ್ಲಿ ಹನ್ನೆರಡು ವರ್ಷಗಳಿಂದ ಗಗನಕ್ಕೆ ಎದ್ದು ನಿಂತಿದ್ದ ಆ ಮರದ ಕೊಂಬೆಗಳು ಈಗ ಕಾಂಪೌಂಡ್‌ನಾಚೆಗಿನ ವಿದ್ಯುತ್ ತಂತಿಗೆ ತಾಗದಂತೆ “ಟ್ರಿಮ್” ಮಾಡಲ್ಪಟ್ಟಿದ್ದವು. ಆದರೆ, ಆ ಮರದ ಕತ್ತರಿಯ … Read more

”ನಾಗಸಿಂಹ ಗುರುಗಳು”: ನಾಗಸಿಂಹ ಜಿ ರಾವ್

ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಂಪಿಗಿರಾಮ ನಗರದ SCM ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಈ ಕೇಂದ್ರವು ಸ್ವಯಂ ಸೇವಾ ಸಂಸ್ಥೆಗಳಿಗೆ ಚಿರಪರಿಚಿತವಾದ ಸ್ಥಳವಾಗಿದ್ದು, ಇಲ್ಲಿ ತರಬೇತಿಗಳು, ಸಮಾಲೋಚನೆಗಳು, ಮತ್ತು ಸಮ್ಮೇಳನಗಳು ನಿರಂತರವಾಗಿ ನಡೆಯುತ್ತವೆ. ಆ ದಿನ ನಾನು ಒಂದು ಸ್ವಯಂ ಸೇವಾ ಸಂಸ್ಥೆಯ ಸದಸ್ಯರಿಗೆ ಮಕ್ಕಳ ರಕ್ಷಣಾ ನೀತಿಯ ಬಗ್ಗೆ ಮಾಹಿತಿ ನೀಡಲು ತೆರಳಿದ್ದೆ. ಅದೇ ವೇಳೆ ಅಲ್ಲಿ ಮತ್ತೊಂದು ಕಾರ್ಯಕ್ರಮವೂ ನಡೆಯುತ್ತಿತ್ತು—ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕ್ರಿಶ್ಚಿಯನ್ ಫಾದರ್‌ಗಳ ಸಮಾಲೋಚನೆ. ಊಟದ ಸಮಯದಲ್ಲಿ SCMನ … Read more

ವಿಜ್ಞಾನ ಭವನದಲ್ಲಿ ಮಕ್ಕಳ ಹಕ್ಕುಗಳ ಭಾಷಣ : ಒಂದು ಜೀವನ ಪಾಠ: ನಾಗಸಿಂಹ ಜಿ ರಾವ್

2011ರಲ್ಲಿ ದೆಹಲಿಯ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (NIPCCD) ಆಯೋಜಿಸಿದ್ದ ಒಂದು ತಿಂಗಳತರಬೇತಿಯಲ್ಲಿಭಾಗವಹಿಸಿದ್ದೆ. NIPCCD ನಮ್ಮ ದೇಶದ ಒಂದು ಪ್ರಮುಖ ಸಂಸ್ಥೆಯಾಗಿದ್ದು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ತರಬೇತಿ, ಸಂಶೋಧನೆ, ಮತ್ತು ನೀತಿ ರೂಪಿಸುವಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ಮತ್ತು ರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕಲ್ಯಾಣವನ್ನು ಪ್ರೋತ್ಸಹಿಸುವುದಲ್ಲದೆ ಸರ್ಕಾರೀ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರಿಗೆ ನಿರಂತರವಾಗಿ ತರಬೇತಿಗಳನ್ನು ಆಯೋಜನೆ ಮಾಡುತ್ತಿರುತ್ತದೆ. ನಾನು … Read more

ನಮ್ಮ ಇಂದ್ರತ್ತೆ: ಒಂದು ಪುಸ್ತಕದ ಹುಚ್ಚಿನ ಕಥೆ: ನಾಗಸಿಂಹ ಜಿ ರಾವ್

ನನ್ನ ಒಂಬತ್ತನೇ ತರಗತಿಯ ದಿನಗಳು ಒಂದು ಸಾಹಸಕಥೆಯಂತಿತ್ತು. ಆಗ ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿ, ಆದರೆ ನನ್ನ ಒಳಗೊಂದು ವಿಶಾಲವಾದ ಜಗತ್ತಿತ್ತು—ಪುಸ್ತಕಗಳ ಜಗತ್ತು. ಆ ಜಗತ್ತಿನಲ್ಲಿ ನಾನು ಸಾಹಸಿಯಾಗಿರುತ್ತಿದ್ದೆ, ಕಾಲ್ಪನಿಕ ದೇಶಗಳಲ್ಲಿ ವಿಹರಿಸುತ್ತಿದ್ದೆ, ಕತೆಗಳ ರಸದೌತಣದಲ್ಲಿ ಮಿಂದೇಳುತ್ತಿದ್ದೆ. ಆದರೆ, ಈ ಜಗತ್ತಿನ ದ್ವಾರವನ್ನು ತೆರೆಯಲು ನನಗೊಂದು ದೊಡ್ಡ ಸವಾಲಿತ್ತು—ನಮ್ಮ ಇಂದ್ರತ್ತೆ. ಇಂದ್ರತ್ತೆ ಒಬ್ಬ ಸಾಮಾನ್ಯ ಗೃಹಿಣಿ ಅಲ್ಲ . ಅವರು ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರು, ಮಕ್ಕಳಿಗೆ ಸಂಗೀತದ ಸೊಗಸಾದ ಲೋಕವನ್ನು ಪರಿಚಯಿಸುತ್ತಿದ್ದರು. ಅವರ ಕಂಠದಿಂದ ಹೊರಬರುವ ಶಾಸ್ತ್ರೀಯ … Read more

ವಿಶ್ವಸಂಸ್ಥೆಗೆ ಮಕ್ಕಳಿಂದ ವರದಿ: ಒಂದು ರಾತ್ರಿಯ ಕಥೆ: ನಾಗಸಿಂಹ ಜಿ ರಾವ್

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು 1989ರಲ್ಲಿ ಜಾರಿಗೆ ಬಂದಾಗಿನಿಂದ, ಸಹಿ ಹಾಕಿದ ಪ್ರತಿ ದೇಶವು ಐದು ವರ್ಷಗಳಿಗೊಮ್ಮೆ ತಮ್ಮ ದೇಶದ ಮಕ್ಕಳ ಹಕ್ಕುಗಳ ಜಾರಿ ಬಗ್ಗೆ ವರದಿಯನ್ನು ಸಿದ್ಧಪಡಿಸಿ ವಿಶ್ವಸಂಸ್ಥೆಗೆ ಸಲ್ಲಿಸಬೇಕು. ಈ ವರದಿಯನ್ನು ‘ಕಂಟ್ರಿ ರಿಪೋರ್ಟ್’ ಎಂದು ಕರೆಯಲಾಗುತ್ತದೆ. ಭಾರತವು 1992ರಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಿತು ಮತ್ತು 1997ರಲ್ಲಿ ಮೊದಲ ವರದಿಯನ್ನು ಸಲ್ಲಿಸಿತು. ಎರಡನೇ ವರದಿಯನ್ನು 2003-24ರ ಅವಧಿಯಲ್ಲಿ ಸಿದ್ಧಪಡಿಸಲಾಯಿತು. ಒಡಂಬಡಿಕೆಯ ಪರಿಚ್ಛೇದ 45ರ ಪ್ರಕಾರ, ಸರ್ಕಾರದ ವರದಿಗೆ ಪರ್ಯಾಯವಾಗಿ, ದೇಶದ ಮಕ್ಕಳ ಪರಿಸ್ಥಿತಿಯ … Read more

”ಒಂಟಿ ಶೂನ ಸಾಹಸ”: ನಾಗಸಿಂಹ ಜಿ ರಾವ್

ಜೀವನದಲ್ಲಿ ಕೆಲವು ಅವಕಾಶಗಳು ಎಲ್ಲಿಂದ ಬರುತ್ತವೆ ಹೇಗೆ ಬರುತ್ತವೆ ಎಂಬುದನ್ನು ಊಹಿಸಲು ಅಸಾಧ್ಯ. ಅವಕಾಶಗಳೊಂದಿಗೆ ಸವಾಲುಗಳು ಇರುತ್ತವೆ ಇದು ನನ್ನ ಅನುಭವ ನಾನು ಒಂದು ದಿನ ಮಧ್ಯಾಹ್ನ ಕಚೇರಿಯಲ್ಲಿ ಕುಳಿತಿದ್ದಾಗ ಒಂದು ದೊಡ್ಡ ಅವಕಾಶ ನನ್ನ ಬಾಗಿಲು ತಟ್ಟಿತು. ರಾಜ್ಯದ ಪ್ರಸಿದ್ಧ ಅಂಗವಿಕಲರ ಸಂಸ್ಥೆ APD ಇಂದ ಕರೆ ಬಂದಿತ್ತು ”ನಾಗಸಿಂಹ ಸಾರ್ ನಮ್ಮ ಸಂಸ್ಥೆಯ ಶಾಲೆಯ ಮಕ್ಕಳು ‘ಯೂಥ್ ಎಕ್ಸ್ಚೇಂಜ್’ ಕಾರ್ಯಕ್ರಮದ ಅಡಿಯಲ್ಲಿ ಸ್ಕಾಟ್ಲೆಂಡ್‌ಗೆ ಹೋಗುತ್ತಿದ್ದಾರೆ ಅಲ್ಲಿ ನಮ್ಮ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಬೇಕು … Read more

ಅಪ್ಪು ಅಣ್ಣನ ಮೇಲೆ ಕೇಸ್ ಮಾಡ್ತೀಯೇನೋಲೆ …. !!!!: ನಾಗಸಿಂಹ ಜಿ ರಾವ್

(ಪುನೀತ್ ರಾಜ್‌ಕುಮಾರ್ ರವರ ಹುಟ್ಟುಹಬ್ಬ ಮಾರ್ಚ್ ೧೭, ಈ ಸಂದರ್ಭದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಸ್ಮರಿಸಿ ಈ ನೆನೆಪು ….) ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ನಮ್ಮ ರಾಜ್ಯದಲ್ಲಿ ಜಾರಿಯಾಗಿದ್ದು ಹಲವಾರು ಪ್ರತಿಭಟನೆ ಹಾಗೂ ಗೊಂದಲದ ನಡುವೆ ಈ ಕಾಯ್ದೆಗೆ ಸೂಕ್ತ ಪ್ರಚಾರವೇ ಇರಲಿಲ್ಲ. ಆದರೆ ಈ ಕಾಯ್ದೆಯ ವಿಭಾಗ ೧೨.೧.ಅ ಅಪಾರ ಪ್ರಚಾರ ಪಡೆದಿತ್ತು ಹಾಗೂ ಬಹಳ ಜನಪ್ರಿಯ ಸಹ ಆಗಿತ್ತು. ವಿಭಾಗ ೧೨.೧.ಅ ಯ ಪ್ರಕಾರ … Read more

ಗಾಂಜಾ ವ್ಯಸನಿಗಳು. . !!!!: ನಾಗಸಿಂಹ ಜಿ ರಾವ್

”ಮಕ್ಕಳಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೩೩ ಮಕ್ಕಳನ್ನು ಮಾದಕಪದಾರ್ಥಗಳಿಂದ ರಕ್ಷಿಸಬೇಕು ಎಂದು ಹೇಳಿದೆ. ಮಾದಕ ಪದಾರ್ತಗಳಿಗೆ ಮಕ್ಕಳು ಬಲಿಯಾಗದಿರುವಂತೆ ಮಾಡುವುದು ಮಕ್ಕಳಹಕ್ಕು. ನೀವು ಯೋಚಿಸಬೇಡಿ ಸಾರ್ ನಾವು ನಿಮ್ಮ ಶಾಲೆಗೆ ಬಂದು ಮಾದಕ ಪದಾರ್ಥಗಳಿಗಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಶಾಲೆಯ ಮಕ್ಕಳಿಗೆ ಅರಿವು ಮೂಡಿಸುತ್ತೇವೆ” ಎಂದು ಮಾರೇನಹಳ್ಳಿ ಸರ್ಕಾರೀ ಹಿರಿಯ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಿಗೆ ಭರವಸೆ ನೀಡಿದೆ, ತಮ್ಮ ಶಾಲೆಯ ಮಕ್ಕಳು ಬೀಡಿ, ಸಿಗರೇಟುಗಳಿಗೆ ಬಲಿಯಾಗುತ್ತಿದ್ದಾರೆ, ಅವರಿಗೆ ಅರಿವು ಮೂಡಿಸಿ ಎಂದು ನಮ್ಮನ್ನು ಆಹ್ವಾನಿಸಲು ದೂರದ ಮಾರೇನಹಳ್ಳಿಯಿಂದ ನಮ್ಮ … Read more

ತನಿಖಾ ಸಮಿತಿಯ ಸದಸ್ಯ. . . . !!!!!: ನಾಗಸಿಂಹ ಜಿ ರಾವ್

”ನಾಗಸಿಂಹ ಏನ್ರಿ ?” ”ಹೌದು ನೀವು ಯಾರು ಸರ್ ?” ”ಪೊಲೀಸ್ ಕಮಿಷನರ್ ಆಫೀಸ್ ಇಂದ ಫೋನ್ ಮಾಡಿದೀನಿ, ನಿಮ್ಮ ಮೇಲೆ ಸರ್ಕಾರೇತರ ಶಾಲೆಯ ಸಂಘದ ಅಧ್ಯಕ್ಷರು ದೂರು ಕೊಟ್ಟಿದ್ದಾರೆ, ನೀವು ಅವರ ಶಾಲೆಗೆ ನುಗ್ಗಿ ಗಲಾಟೆ ಮಾಡಿ, ಮಕ್ಕಳಿಗೆ, ಶಿಕ್ಷಕರಿಗೆ ಬೆದರಿಕೆ ಹಾಕಿದೀರಾ, ಅತಿಕ್ರಮಣ ಪ್ರವೇಶ ಮಾಡಿದ್ದೀರಾ ಅಂತ ದೂರು ಕೊಟ್ಟಿದ್ದಾರೆ, ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ನೀವು ಕಮಿಷನ್ ಆಫೀಸ್ ಗೆ ಬಂದು ಹೇಳಿಕೆ ಕೊಡಿ ” ಫೋನ್ ಕಟ್ ಆಯಿತು. ನನಗೆ ಸಹಜವಾಗಿಯೇ … Read more

ನಿಮ್ಮ ಮಕ್ಕಳು.. ನೀವೇ ಹೊಣೆ !!!: ನಾಗಸಿಂಹ ಜಿ ರಾವ್

‘ ಸಾರ್ ನಮ್ಮ ಮಕ್ಕಳನ್ನ ಶಾಲೆಯಿಂದ ಹೊರಗಡೆ ಹಾಕಿದ್ದಾರೆ, ಸಹಾಯ ಮಾಡಿ ಸಾರ್ ”ಹೀಗೆ ಪೋಷಕರ ಕರೆ ಬಂತು, ಸುಮಾರು ಎಂಟು ಜನ ಏಳನೇ ತರಗತಿಯ ಮಕ್ಕಳನ್ನು ಸರಿಯಾಗಿ ಓದು ಬಾರದವರು ಎಂದು ವಸಂತನಗರದ ಸರಸ್ವತಿ ಶಾಲೆಯಿಂದ ಹೊರಗಡೆ ಕಳಿಸುವ ತೀರ್ಮಾನವನ್ನ ಶಾಲೆಯ ಆಡಳಿತ ಮಂಡಳಿ ಮಾಡಿದ್ದರು. ಪೋಷಕರನ್ನು ಕರೆದು ಟಿಸಿ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು. ಕೆಲವು ಪೋಷಕರಿಗೆ ಟಿಸಿ ಕೊಟ್ಟುಬಿಟ್ಟಿದ್ದರು. ಈ ಮಕ್ಕಳಿಗೆ ಓದಲು ಬರುವುದಿಲ್ಲ ಎಂದು ಸರಸ್ವತಿ ಶಾಲೆಯಿಂದ ಹೊರಗಡೆ ಹಾಕಿದ್ದಾರೆ ನಾವೂ … Read more

ತಾಕತ್ತಿದ್ರೆ ಒಂದಿನ ಕ್ಲಾಸ್ ಮಾಡಿ ..!!!!!!!!: ನಾಗಸಿಂಹ ಜಿ ರಾವ್

ಶಾಲೆಗಳಲ್ಲಿ ದೈಹಿಕ ಶಿಕ್ಷೆ ಇಂದಾಗಿ ಇಡೀ ದೇಶದಲ್ಲಿ ಸುಮಾರು ೩೦% ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಅನ್ನೋ ಒಂದು ಕಹಿ ಸತ್ಯವನ್ನ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ ತನ್ನ ಒಂದು ವರದಿಯಲ್ಲಿ ತಿಳಿಸಿತ್ತು. ಶಾಲೆಗಳಲ್ಲಿ ದೈಹಿಕ ಶಿಕ್ಷೆ ನೀಡದೆ ಹೇಗೆ ಪಾಠ ಮಾಡಬಹುದು ಅನ್ನುವ ಕೈಪಿಡಿಯನ್ನು ಸಿದ್ದಪಡಿಸಿ ಪ್ರತಿ ರಾಜ್ಯದ ಶಾಲೆಗಳಲ್ಲಿ ತರಬೇತಿ ನೀಡಿ ಎಂದು ತಿಳಿಸಿತ್ತು. ಅದೂ ಅಲ್ಲದೆ ಕೈಪಿಡಿಯನ್ನು ಕುರಿತು ಶಿಕ್ಷಕರಿಗೆ ತರಬೇತಿ ನೀಡಲು ಹೈದರಾಬಾದ್‌ನಲ್ಲಿ ತರಬೇತುದಾರರ ತರಬೇತಿಯನ್ನು ಆಯೋಗ ಏರ್ಪಡಿಸಿತ್ತು. ಮೂರುದಿನಗಳ ಈ ತರಬೇತಿಗೆ … Read more