ನಿಲುಗನ್ನಡಿ ಪುಸ್ತಕ ಕುರಿತು ಕುಂ.ವೀ.ಅವರ ಅನಿಸಿಕೆ
ಸಹಸ್ರಾರು ವರ್ಷಗಳ ಹಿಂದೆಯೇ ‘ಮಸ್ಕಿ’ ಸಾಮ್ರಾಟ್ ಅಶೋಕನನ್ನು ಆಕರ್ಷಿಸಿದ ರಾಜ್ಯದ ಪ್ರಾಚೀನಾತಿ ಪ್ರಾಚೀನ ಸ್ಥಳ. ಆದರೆ ಸ್ವಾತಂತ್ರ್ಯೋತ್ತರವಾಗಿ ಮಸ್ಕಿ, ‘ಕೋಡಗುಂಟಿ’ ಎಂಬ ಹೆಸರಿನಿಂದ ಸಾಹಿತ್ಯಿಕವಾಗಿ ಹೆಸರಾಗಿದೆ. ಇಲ್ಲಿನ ಈ ಫ್ಯಾಮಿಲಿಗೆ ಸಾಂಸ್ಕೃತಿಕ ಹಿನ್ನಲೆ ಇದೆ, ಸದಭಿರುಚಿ ವ್ಯಕ್ತಿತ್ವವಿದೆ. ಬಸವರಾಜ ಮತ್ತು ಅವರ ತಂಗಿ ರೇಣುಕಾ, ಬಂಡಾರ ಹೆಸರಿನ ಪ್ರಕಾಶನ ಸಂಸ್ಥೆ ಆರಂಭಿಸಿದವರು, ತನ್ಮೂಲಕ ಸದಭಿರುಚಿ ಕಿತಾಬುಗಳನ್ನು ಪ್ರಕಟಿಸಿದವರು, ಈ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಯುವ ಮನಸ್ಸುಗಳನ್ನು ಪ್ರೋತ್ಸಾಹಿಸಿದವರು. ರೇಣುಕಾಳ ಚಟವಟಿಕೆಗಳನ್ನು ಹಲವು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಿರುವೆ. … Read more