ಅವ ಇನ್ನೆಂದೂ ಮರಳಿ ಬರಲಾರ: ಶೀಲಾ ಅರಕಲಗೂಡು

ರವಿ ಬೆಳಗೆರೆ ಎಂಬ ದೈತ್ಯ ಶಕ್ತಿ, ಪ್ರಖರ ಬೆಳಕು, ಬತ್ತದ ಪ್ರೀತಿಯ ಒರತೆ, ಅಕ್ಷರ ಮಾಂತ್ರಿಕ, ಇತ್ಯಾದಿ, ಇತ್ಯಾದಿ …… ಇದೇ ಮಾರ್ಚ್ 15ಕ್ಕೆ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಮ್ಮ ನಡುವೆ ಇಲ್ಲವೇ ಇಲ್ಲ! ಏನೋ ಆತುರವಿರುವಂತೆ ಅರವತ್ತೆರಡು ವರ್ಷಗಳಲ್ಲೇ ನೂರು ವರ್ಷಗಳಲ್ಲಿ ಮಾಡಬಹುದಾದುದನ್ನು ಮಾಡಿ, ನೋಡ ನೋಡುತ್ತಿದ್ದಂತೆ ಮರೆಯಾಗಿ ಹೋಗಿರುವುದು ಇಂದಿಗೂ ನಂಬಲಾಗುತ್ತಿಲ್ಲ. ಇಷ್ಟು ಬೇಗ ಅಲ್ಲೆಲ್ಲೋ ಹೋಗಿ ಮಾಡುವುದಿತ್ತಾದರೂ ಏನನ್ನು? ಏನು ಮಾಡುತ್ತಿರಬಹುದು ಈಗಲ್ಲಿ? ಇಷ್ಟೆಲ್ಲ ಜನ ಆತನಿಗಾಗಿ ಹಂಬಲಿಸಿ ನೆನೆಯುತ್ತಿರುವಾಗ ಅಲ್ಲಿ … Read more

ಅಗಲಿದ ಗೆಳೆಯನ ನೆನೆಯುತ್ತ…: ಅಶೋಕ ಶೆಟ್ಟರ್

ನನ್ನ ತುಂಬ ಹಳೆಯ ಗೆಳೆಯ, ನನಗಿರುವ ಕೆಲವೇ ಕೆಲವು ಏಕವಚನದ ಮಿತ್ರರಲ್ಲೊಬ್ಬ, ಲೇಖಕ, ಪತ್ರಕರ್ತ ರವಿ ಬೆಳಗೆರೆ ಅನಿರೀಕ್ಷಿತವಾಗಿ ಮತ್ತು ಅಕಾಲಿಕವಾಗಿ ಅಗಲಿದ್ದಾನೆ. ತನ್ನ ಆಪ್ತರು, ಸ್ನೇಹಿತರು, ಸಿಬ್ಬಂದಿ, ಕುಟುಂಬದ ಸದಸ್ಯರು ಬಂಧು-ಬಳಗದಲ್ಲಿ ಒಂದು ಶೂನ್ಯ ಭಾವವನ್ನುಳಿಸಿ ಹೊರಟುಹೋಗಿದ್ದಾನೆ. ಧಾರವಾಡದ ಕರ್ನಾಟಕ ಕಾಲೇಜಿನ ಪದವಿ ವಿದ್ಯಾಭ್ಯಾಸದ ಅವಧಿಯ ಮೂರು ವರ್ಷಗಳನ್ನು ಗೆಳೆಯ ಗೆಳತಿಯರ ಬೆಚ್ಚಗಿನ ಸ್ನೇಹದ ನಡುವೆ ಕಳೆದಿದ್ದ ನಾನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಪ್ರವೇಶ ದ್ವಾರದಲ್ಲಿ ಮೆಟ್ಟಿಲ ಮೇಲೆ … Read more

ಭಾವಕ ಮನಸ್ಸಿನ ಬುದ್ಧಿವಂತ ರವಿ: ಭುವನೇಶ್ವರಿ ಹೆಗಡೆ

ಎಂಭತ್ತರ ದಶಕದ ಕೊನೆಯ ಭಾಗ. ನಾನಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಎಂ ಎ. ಓದಲು ಬಂದವಳು. ಉತ್ತರ ಕನ್ನಡದ ಅನೇಕ ಹುಡುಗಿಯರು ನನ್ನಂತೆ ಹಾಸ್ಟೆಲಿನಲ್ಲಿ ಇದ್ದುದು ನಮ್ಮದೊಂದು ಗುಂಪು ರೆಡಿಯಾಗಿತ್ತು. ಶಿರಸಿಯ ನಮ್ಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು ಹಾಗೂ ನಾವು ಸೇರಿ ಕಟ್ಟಿದ ಸಾಹಿತ್ಯ ಬಳಗ ನನ್ನಲ್ಲಿ ಒಬ್ಬ ಭಾಷಣಕಾರಳನ್ನು ಹುಟ್ಟುಹಾಕಿತ್ತು. ಧಾರವಾಡದಲ್ಲಿಯೂ ಅದರ ವರಸೆ ಬಿಡದೆ ವಿಶ್ವವಿದ್ಯಾನಿಲಯ ಮಟ್ಟದ ಚರ್ಚಾ ಸ್ಪರ್ಧೆ ಗಳಿಗೆ ಹೆಸರು ಕೊಡುತ್ತಿದ್ದೆ. ಒಂದಲ್ಲ ಹಲವು ಚರ್ಚಾಸ್ಪರ್ಧೆಗಳಲ್ಲಿ ನಾನು ಭಾಗವಹಿಸಿದೆ. ಆಗೆಲ್ಲ … Read more

ಒಂದು ಸ್ನೇಹದ ಸುತ್ತ…: ವಿದ್ಯಾ ಭರತನಹಳ್ಳಿ

” ವಿದ್ಯಾ ಊಟ ಕೊಡೆ” ದೊಡ್ಡದಾದ ಧ್ವನಿ ಕೇಳಿಸಿತು. ಇದು ರವಿಯವರ ಧ್ವನಿಯೆಂದು ಗೊತ್ತಾಗಿ ಕೈ ತೊಳೆಯುತ್ತಿದ್ದವಳು ಓಡಿ ಬಂದೆ. ದೊಡ್ಡಪ್ಪ ಅನ್ನುತ್ತಾ ಮಗಳು ಪೂರ್ವಿಯೂ ಹೊರಬಂದಳು. ಉಮೇಶ್ ಮತ್ತು ವಾದಿರಾಜ ಅವರನ್ನು ವ್ಹೀಲ್ ಚೇರಲ್ಲಿ ಕುಳಿಸಿಕೊಂಡು ಒಳಗೆ ಕರೆದುಕೊಂಡು ಬರುತ್ತಿದ್ದರು. “ನಿಮ್ಮನ್ನ ನೋಡ್ಬೇಕು ಅನಸ್ತು ಬಂದ್ಬಿಟ್ನೆ. ” ಅಂದರು. ಒಂದು ಕಾಲದಲ್ಲಿ ಸಿಂಹದಂತಿದ್ದವರು ಅದೇ ಧ್ವನಿ ಇದ್ದರೂ ಮಗುವಿನಂತೆ ಕುಳಿತಿದ್ದು ನೋಡಿ ಸಂಕಟವಾಗುತ್ತಿದ್ದಾಗ, ಪೂರ್ವಿಯ ಹತ್ತಿರ ಅವಳ ಉದ್ಯೋಗ, ಮುಂದಿನ ಓದು ಎಲ್ಲ ವಿಚಾರಿಸಿದರು. ನನ್ನ … Read more

ಮುಳುಗದ ರವಿ…..: ಶೋಭಾ ಶಂಕರಾನಂದ

“ಪ್ರಿಯ ವೀಕ್ಷಕರೇ”…ಎಂದ ಕೂಡಲೇ…!!!! ಕೇಳುಗರು ಮತ್ತು ನೋಡುಗರೆಲ್ಲರೂ ಒಂದು ಕ್ಷಣ ತಮ್ಮನ್ನೇ ಮರೆತು ಮಂತ್ರ ಮುಗ್ಧರಂತೆ ಅತ್ತ ಗಮನವಿಟ್ಟು ಕೇಳಬೇಕು, ನೋಡಬೇಕು, ಹಾಗಿತ್ತು ಆ ಧ್ವನಿಯ ಆತ್ಮೀಯತೆ ಮತ್ತು ಗತ್ತು. ಆ ಧ್ವನಿ ಇನ್ನಿಲ್ಲ ಎಂದಾಗ ಏನೋ ಒಂಥರಾ ಸಂಕಟ ಮತ್ತು ತಳಮಳ. ಕಾರಣ… ಬಹುಶಃ ನಂಗೂ ಗೊತ್ತಿಲ್ಲ…..!!!??? ತಮ್ಮ ಬದುಕಿನುದ್ದಕ್ಕೂ ಬರವಣಿಗೆಯ ಮೂಲಕ ಹೋರಾಟವನ್ನೇ ಮಾಡುತ್ತಾ , ಹೇಳುವ ವಿಷಯವನ್ನು ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿ, ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಅವರ … Read more

ಬೆಳಗಿದ ರವಿಗೊಂದು ಅಕ್ಷರ ಮಾಲೆ: ಸಾವಿತ್ರಿ ಹಟ್ಟಿ

ರವಿ ಬೆಳಗೆರೆ ಅವರ ಬಗ್ಗೆ ಎಲ್ಲವನ್ನೂ ಬರೆಯುವುದೆಂದರೆ ಸಾಗರದ ನೀರನ್ನು ಕೊಡದಲ್ಲಿ ಹಿಡಿದಿಡುವೆನೆಂಬ ಹುಂಬತನ. ಅವರ ಪತ್ರಿಕೆಗಳು ಮತ್ತು ಲೇಖನಗಳನ್ನು ಓದಿ ಅವರನ್ನು ಪೂರಾ ಅರ್ಥ ಮಾಡಿಕೊಂಡಿದ್ದೇವೆ ಎನ್ನುವವರಿಗೆ ಅವರ ಬಗ್ಗೆ ತಿಳಿಯದ ಸಂಗತಿಗಳೂ ಹಲವು ಇವೆ ಅಂತ ಹೇಳಬಹುದು. ಅವರ ಲೇಖನಗಳೆಂದರೆ ಸ್ಫೂರ್ತಿಯ ಚಿಲುಮೆಗಳು. ಖಾಸ್ ಬಾತ್ ಮತ್ತು ಬಾಟಮ್ ಐಟಮ್ ಅಂಕಣಗಳನ್ನು ಓದಲೆಂದೇ ಮುಂದಿನ ಸಂಚಿಕೆಗಾಗಿ ಕಾಯ್ದು ನಿಲ್ಲುತ್ತಿದ್ದ ಅಗಾಧ ಸಂಖ್ಯೆಯ ಓದುಗ ಅಭಿಮಾನಿಗಳು ಅವರಿಗಿದ್ದರು. ಆ ಬಳಗದಲ್ಲಿ ನಾನೂ ಒಬ್ಬಳು. ಬದುಕಿನಲ್ಲಿ ನೊಂದ … Read more

ದಿಲ್ ನೆ ಫಿರ್ ಯಾದ್ ಕಿಯಾ….: ಪಿ.ಎಸ್. ಅಮರದೀಪ್.

ಫೆಬ್ರವರಿ-21, 1998. ಆ ದಿನ ಎಂತದೋ ಬೇಸರ. ಅನಾಹುತ ಮಾಡಿಕೊಳ್ಳುವಂಥ ಯಾವ ಸೀರಿಯಸ್ಸೂ ಇಲ್ಲ. ಆದರೂ ಜಗತ್ತು ತಲೆ ಮೇಲೆ ಬಿದ್ದೋರ ಥರಾ ಶನಿವಾರ ಆಫೀಸ್ ಮುಗಿಸಿಕೊಂಡವನೇ ಬಳ್ಳಾರಿಯ ರಾಯಲ್ ಸರ್ಕಲ್ ದಾಟಿದರೆ ಈಗಿನ ಹಳೇ ಬಸ್ ನಿಲ್ದಾಣದ ತನಕ ಕಾಲೆಳೆದುಕೊಂಡು ಹೊರಟೆ. ನಿಲ್ದಾಣದಿಂದ ಹೊರಬಂದ ಬಸ್ಸಿನ ಬೋರ್ಡ್ ನೋಡಿದೆ. ಮಂತ್ರಾಲಯ ಅಂತಿತ್ತು. ಯಾಕೆ ಹೋಗಬೇಕೆನ್ನಿಸಿತೋ ಏನೋ. ಸೀದಾ ಬಸ್ ಹತ್ತಿ ಕುಳಿತೆ. Actually, ನಾನು ಆ ದಿನ ಹಗರಿಬೊಮ್ಮನಹಳ್ಳಿಗೆ ಹೊರಡಬೇಕಿತ್ತು. ಹತ್ತಿ ಕುಳಿತದ್ದು ಮಾತ್ರ ಮಂತ್ರಾಲಯದ … Read more

ಆಪ್ತ ಬೆಳಗೆರೆ: ರವಿ ಶಿವರಾಯಗೊಳ

ರವಿ ಬೆಳಗೆರೆ ದೈತ್ಯ ಬರಹಗಾರ. ಅಕ್ಷರ ಮಾಂತ್ರಿಕ. ಸಹಸ್ರಾರು ಓದುಗರ ಹುಟ್ಟು ಹಾಕಿದ ಪ್ರತಿಭಾವಂತ ಲೇಖಕ. ಮುಂದೆಂದೂ ಮತ್ತೊಬ್ಬ ರವಿ ಬೆಳಗೆರೆಯನ್ನ ಕಾಣಲಾರೆವು. ಪತ್ರಿಕೋದ್ಯಮದಲ್ಲಿ ಬರವಣಿಗೆಯಲ್ಲಿ ಸ್ವಂತ ಪ್ರತಿಭೆ ಮುಂಖಾಂತರವೆ ಹೆಮ್ಮರವಾಗಿ ಬೆಳೆದು ನಿಂತ ಗಟ್ಟಿಗ ರವಿ ಬಾಸ್. ಕೂತು ಬರೆಯುವ; ಗಂಟೆ ಗಂಟೆಗಟ್ಟಲೆ ಓದುವ ಓದಿದ್ದನ್ನು ಇಷ್ಟವಾದದ್ದನ್ನು ತನ್ನದೇ ಓದುಗರೊಂದಿಗೆ ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮನೋಭಾವದ ವ್ಯಕ್ತಿ. ಮಿತ್ರರನ್ನ ಓದುಗರನ್ನ ಹಿಂಬಾಲಕರ ಸಮ ಸಮಸಂಖ್ಯೆಯಲ್ಲಿ ಶತ್ರುಗಳನ್ನೂ ಹೊಂದಿದ್ದ ರವಿ ಬೆಳಗೆರೆ ಕಡೆಗೂ ಯಾರಿಗೂ ಜಗ್ಗದೆ ಬಗ್ಗದೆ ತನ್ನಿಷ್ಟದಂತೆ … Read more

”ಬೆಳಗೆರೆಯೂ, ಅಜ್ಞಾತ ಓದುಗದೊರೆಯೂ: ಒಂದು ಖಾಸ್ ಬಾತ್!”: ಪ್ರಸಾದ್‌ ಕೆ.

ರವಿಯವರ ಅಕ್ಷರಜಗತ್ತಿನ ಬಗ್ಗೆ ನನಗಾದ ಮೊದಲ ಪರಿಚಯವೆಂದರೆ ‘ಬಾಟಮ್ ಐಟಮ್’ ಸರಣಿ. ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ರವಿ ಬೆಳಗೆರೆ ಆಗಲೇ ಖ್ಯಾತ ಲೇಖಕರಾಗಿದ್ದರು. ಅವರ ಕೃತಿಗಳು ಆವತ್ತಿಗೇನೇ ಬೆಸ್ಟ್ ಸೆಲ್ಲರ್ಸ್. ಅಂದಿನ ನನ್ನ ಸೀಮಿತ ಅರಿವಿನ ಪ್ರಕಾರ ರವಿ ಸಾರಥ್ಯದ ಪತ್ರಿಕೆ ‘ಹಾಯ್ ಬೆಂಗಳೂರು’ ಚೆನ್ನಾಗಿ ಓಡುತ್ತಿತ್ತು. ಇನ್ನು ‘ಕ್ರೈಂ ಡೈರಿ’ ಮತ್ತು ‘ಎಂದೂ ಮರೆಯದ ಹಾಡು’ ಟಿವಿ ಕಾರ್ಯಕ್ರಮಗಳಿಂದ ರವಿಯವರು ರಾಜ್ಯದಾದ್ಯಂತ ಮನೆಮಾತೂ ಆಗಿದ್ದರು. ಹೀಗಿದ್ದರೂ ಇಂಗ್ಲಿಷ್ ನಲ್ಲಿ living under the … Read more

ಮರೆಯಲಾಗದ ಮಾತಿನ ಮಲ್ಲ: ಪರಮೇಶ್ವರಪ್ಪ ಕುದರಿ

“ ರವಿ ಬೆಳಗೆರೆ “ ಹೆಸರೇ ಒಂದು ರೋಮಾಂಚನ ! ಕನ್ನಡ ಪತ್ರಿಕಾರಂಗ ಕಂಡ ಅದ್ಭುತ ಪ್ರತಿಭಾವಂತ ಬರಹಗಾರ ರವಿ ಬೆಳಗೆರೆ. ಅವರ “ ಹಾಯ್ ಬೆಂಗಳೂರು “ ಪತ್ರಿಕೆಯ ಹೆಸರೂ ವಿಶಿಷ್ಟ , ಆ ಪತ್ರಿಕೆಯ ಕಪ್ಪು – ಬಿಳುಪು ರೂಪ ವಿನ್ಯಾಸವೂ ವಿಭಿನ್ನ ! ಪ್ರಾರಂಭದ ದಿನಗಳಲ್ಲಿ ಪತ್ರಿಕೆಯ ರೂಪು – ರೇಷೆಗಳನ್ನು ನೋಡಿದವರು ಆಡಿಕೊಂಡದ್ದೇ ಹೆಚ್ಚು. ಆದರೆ ರವಿ ಸರ್ ತಮ್ಮ ಬರವಣಿಗೆಯ ವಿಶಿಷ್ಟ ಶೈಲಿಯಿಂದ ನಾಡಿನ ಮನೆ ಮಾತಾದರು. ಮೊದ ಮೊದಲು … Read more

ರವಿ ಕಾಣದ್ದನ್ನ “ರವಿ” ಕಂಡ’: ನಂದಾದೀಪ, ಮಂಡ್ಯ

ಓದೊ ಹಸಿವು, ಬರೆಯೊ ದರ್ದು, ತಲೆಗೆ ಬಂದಿರೋದನ್ನ ಬರ್ದು ಗೀಚಿಬಿಡಬೇಕು ಅನ್ನೊ ಉನ್ಮಾದ ಬರೋದು ರವಿಬೆಳೆಗೆರೆಯವರ ಪುಸ್ತಕ ಓದಿದಾಗಲೆ..! ಅದೇನ್ ಬರಿತಾನ್ರಿ..! ಮೆದುಳಿಗೆ ಕೈ ಹಾಕಿ ಮನಸಿನೊಂದಿಗೆ ಮಾತನಾಡಿ ಹೃದಯಗೂಡಲ್ಲಿ ಬೆಚ್ಚಗೆ ಕಥೆಗಳ ಇಳಿಸಿಬಿಡ್ತಾನೆ..! ಹೀಗೆ ಅವರ ಪುಸ್ತಕ ಓದಿದವರು ಮಾತಾಡೋದು..! ಯಾವುದಕ್ಕೂ ಮಿತಿ ಇಲ್ಲ.. ಪ್ರೀತಿ, ಪ್ರೇಮ, ಕಾಮ, ಚರಿತ್ರೆ, ರಕ್ತ, ಕ್ರೈಂ, ಮಾಟಮಂತ್ರ, ಇತಿಹಾಸ, ಬದುಕಿನ ಚಿತ್ರಣ, ರಾಜಕೀಯ ಯಾವುದಕ್ಕೂ ಯಾವುದೇ ಮುಲಾಜಿಲ್ಲದೆ ಬರೆದು ಓದುವ ಗೀಳಿಗೆ ಸಲೀಸಾಗಿ ಹಚ್ಚಿಬಿಡುವ ಅಕ್ಷರ ಲೋಕದ ಮಾಂತ್ರಿಕ … Read more

ರವಿಯನ್ನು ಎಲ್ಲರು ಇಷ್ಟಪಡುತ್ತಾರೆ ಅನ್ನುವ ಸಂಭ್ರಮ: ಗಿರಿಜಾ ಜ್ಞಾನಸುಂದರ್

ರವಿ ಬೆಳಗೆರೆ – ಈ ಹೆಸರಿನಲ್ಲಿ ಒಂದು ಶಕ್ತಿ, ಒಂದು ಆತ್ಮೀಯತೆ, ಒಂದು ಹೆಸರಿಸಲಾಗದ ಭಾವನೆ, ಎಲ್ಲಕ್ಕಿಂತ ಹೆಚ್ಚಾಗಿ ಒಂದು ಸಂಬಂಧ. ಸುಮಾರು ೨೮-೩೦ ವರ್ಷಗಳ ಹಿಂದೆ ಕರ್ಮವೀರ ಪತ್ರಿಕೆಯನ್ನು ಓದುತ್ತಿದ್ದ ನನಗೆ ರವಿ ಅವರ ಪರಿಚಯ ಅವರ ಲೇಖನಗಳ ಮೂಲಕ ಆಯಿತು. ಹದಿವಯಸ್ಸಿನಲ್ಲಿ ಮನಸ್ಸಿನ ತೊಳಲಾಟ, ಭಾವನೆಗಳ ಏರು ಪೆರು, ಸಮಾಜದಲ್ಲಿ ವ್ಯಕ್ತಿತ್ವದ ಮೌಲ್ಯ, ಹೀಗೆ ಅನೇಕ ವಿಷಯಗಳಲ್ಲಿನ ಗೊಂದಲಗಳನ್ನು ನನಗೆ ಗೊತ್ತಿಲ್ಲದಂತೆ ತಿಳಿಹೇಳುತ್ತಿದ್ದ ಲೇಖನಗಳನ್ನು ರವಿ ಬರೆಯುತ್ತಿದ್ದರು. ತೃತೀಯ ಲಿಂಗಿಗಳ ಬಗ್ಗೆ ಅವರು ಬರೆದ … Read more

ನಮ್ಮ ಮನೆಯಲ್ಲಿ ರವೀ ಮೂಡಿದ್ದಾನೆ!: ದೀಕ್ಷಿತ್ ಕುಮಾರ್ ಕೆ. ಎಂ

ಯಾಕೋ ಗೊತ್ತಿಲ್ಲ ಇಂದಿಗೂ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ ನಮ್ಮ ಮನೆಯ ಸದಸ್ಯರಲ್ಲಿ ಯಾರೋ ಒಬ್ಬರು ನನ್ನನ್ನು ಅಗಲಿ ಹೋಗಿದ್ದರೂ ಇಷ್ಟು ಹೊತ್ತಿಗೆ ಚೇತರಿಸಿಕೊಂಡು ಸದೃಢನಾಗುತ್ತಿದ್ದೆನೇನೊ? ಆದರೆ ನಾನು ಕಳೆದುಕೊಂಡದ್ದು ಒಬ್ಬ ದೈತ್ಯ ಪ್ರತಿಭೆಯನ್ನು, ನಾ ಲೇಖನಿ ಹಿಡಿದು ಬರೆಯಲು ಕಾರಣರಾದವರನ್ನು, ನನ್ನ ಪ್ರಬುದ್ಧ ಮಾತುಗಳ ಹಿಂದಿನ ಗುರುವನ್ನು ಹಾಗೂ ನನ್ನ ಕಿಂಚಿತ್ತು ಸಾಧನೆಯ ಹಿಂದಿನ ಸ್ಫೂರ್ತಿದಾಯಕರನ್ನು! ಅವರು ಕಾಲವಾದ ನಂತರ ಅವರನ್ನು ಕುರಿತು ಪುಂಕಾನುಪುಂಕ ಬರೆಯಲು ನಿರ್ಧರಿಸಿ ಹಠಕ್ಕೆ ಬಿದ್ದು ಟೇಬಲ್ ನ ಮೇಲೆ ಹಾಳೆ ಹರವಿಕೊಂಡು ಕುಳಿತರೂ … Read more

ಹೇಳಿ ಹೋಗು ಕಾರಣ: ಭಾರ್ಗವಿ ಜೋಶಿ

ನಾ ಓದಿದ್ದ ಕೆಲವೇ ಕೆಲವು ಕಾದಂಬರಿಗಳಲ್ಲಿ ತೀರಾ ಕಾಡಿ, ಅಳಿಸಿದ ಕಾದಂಬರಿ ಇದು. ಹಿಂದೆ ಒಮ್ಮೆ ಆವರಣ ಓದಿದಾಗ ವಿಚಿತ್ರ ಆವೇಶ, ಉದ್ವೇಗ. ಆದರೆ ಇದರ ಭಾವವೇ ಬೇರೆ. ಪ್ರೀತಿ ಪ್ರೀತಿ. ಹಿಮೂನ ಪ್ರೀತಿ ಉಕ್ಕಿ ಹರಿಯುತ್ತದೆ. ಹಿಮೂ ಎಂಬ ಪ್ರಾರ್ಥನಾ ಳ ದೇವರು, ತಂದೆಯಂತೆ ಅವಳಿಗೆ ಹೊಸ ಜೀವನ ಕೊಟ್ಟು ಶಿವಮೊಗ್ಗ ಕೇ ಕರೆದು ತರುತ್ತಾನೆ. ಸೋದರನಂತೆ ಯಾವತ್ತು ಅವಳ ಆರೈಕೆ ಮಾಡುತ್ತಾನೆ. ಗೆಳೆಯನಂತೆ ಅವಳ ಕನಸಿಗೆ ಬಣ್ಣ ತುಂಬುತ್ತಾನೆ, ಗುರುವಿನಂತೆ ದಾರಿ ತೋರುತ್ತಾನೆ. ಪ್ರಿಯಕರನಂತೆ … Read more

ರವಿಬೆಳಗೆರೆಯವರನ್ನು ನೆಗ್ಲೆಕ್ಟ್ ಮಾಡಲಿಕ್ಕಂತೂ ಸಾಧ್ಯವಿಲ್ಲ: ನಟರಾಜು ಮೈದನಹಳ್ಳಿ

‘ರವಿ ಬೆಳಗೆರೆ’ ಈ ಹೆಸರು ಗೊತ್ತಿರದ ಕನ್ನಡಿಗನೇ ಇಲ್ಲ ಎನ್ನಬಹುದು. ಬಿಸಿಲು ನಾಡಿನ ಬಳ್ಳಾರಿಯಲ್ಲಿ ದಿನಾಂಕ: 15-03-1958 ರಂದು ಪಾರ್ವತಮ್ಮ ಟೀಚರ್ ಮಗನಾಗಿ ಹುಟ್ಟಿ, ಕಡು ಕಷ್ಟಗಳನ್ನು ಅನುಭವಿಸಿ, ಮುನ್ನೂರು ಚಿಲ್ಲರೆ ರೂ.ಗಳೊಂದಿಗೆ ಬೆಂಗಳೂರು ಎಂಬ ಮಾಯಾನಗರಿಗೆ ಬಂದು, ಅನೇಕ ಬವಣೆಗಳನ್ನು ಅನುಭವಿಸಿ, ಪತ್ರಿಕೋದ್ಯಮದ ದೈತ್ಯನಾಗಿ, ಅಕ್ಷರ ಮಾಂತ್ರಿಕನಾಗಿ ಬೆಳೆದಿದ್ದು ಒಂದು ಯಶೋಗಾಥೆ. ರವಿ ಬೆಳಗೆರೆ ಒಬ್ಬ ಬಹುಮುಖ ಪ್ರತಿಭೆ. ಇವರು ಪತ್ರಕರ್ತ, ಸಂಪಾದಕ, ಕತೆಗಾರ, ಕಾದಂಬರಿಕಾರ, ಸಿನಿಮಾ ನಟ, ಟಿವಿ ನಿರೂಪಕ ಇತ್ಯಾದಿ. ಪತ್ರಕರ್ತ ಆಗುವುದಕ್ಕೆ … Read more

ರವಿ ಬೆಳಗೆರೆಯವರ ನೆನಪಿನ ವಿಶೇಷ ಸಂಚಿಕೆಗಾಗಿ ಲೇಖನಗಳ ಆಹ್ವಾನ

ಸಹೃದಯಿಗಳೇ, ಮಾರ್ಚ್ 15 ಖ್ಯಾತ ಬರಹಗಾರರಾದ ರವಿ ಬೆಳಗೆರೆಯವರು ಹುಟ್ಟಿದ ದಿನ. ಆ ದಿನ ಅವರ ನೆನಪಿನ ವಿಶೇಷ ಸಂಚಿಕೆಯನ್ನು ಪಂಜು ತರಲು ಬಯಸುತ್ತದೆ. ಅವರ ಕುರಿತ ಅವರ ಪುಸ್ತಕಗಳ ಕುರಿತ ನಿಮ್ಮ ಲೇಖನಗಳನ್ನು ಮಾರ್ಚ್ 14, 2021 ರ ಒಳಗೆ ನಮಗೆ ಕಳುಹಿಸಿ. ನಿಯಮಗಳು: ಲೇಖನಗಳು ನಿಮ್ಮ ಸ್ವಂತ ಬರಹವಾಗಿರಬೇಕು ಕನಿಷ್ಟ 500 ಪದಗಳ ಬರಹವಾಗಿರಬೇಕು ಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು. ಬರಹಗಳು ಯೂನಿಕೋಡ್ ನಲ್ಲಿದ್ದರೆ ಒಳ್ಳೆಯದು. ಪಿಡಿಎಫ್ ನಲ್ಲಿರುವ ಬರಹಗಳನ್ನು … Read more

ರಾಷ್ಟ್ರೀಯ ವಿಜ್ಞಾನ ದಿನ: ಡಾ.ಅವರೆಕಾಡು ವಿಜಯ ಕುಮಾರ್

1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಶನ್(ಎನ್. ಸಿ. ಎಸ್. ಟಿ. ಸಿ.) ಭಾರತ ಸರ್ಕಾರಕ್ಕೆ ಫೆಬ್ರವರಿ 28 ರಂದು ‘ ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲು ಮನವಿಯನ್ನು ಸಲ್ಲಿಸಿತ್ತು.ಈ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರ ಪ್ರತಿ ವರ್ಷ ಫೆಬ್ರವರಿ 28 ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಿಸಿತು.ಮೊದಲ ಬಾರಿಗೆ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು 28 ಫೆಬ್ರುವರಿ 1987 ರಂದು ಆಚರಣೆಗೆ ತರಲಾಯಿತು.ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ … Read more

ಮತ್ತೊಂದು ಮಹಾಭಾರತ (ಭಾಗ ೧): ಡಾ.ಸಿ.ಎಂ.ಗೋವಿಂದರೆಡ್ಡಿ

ಅರಿಕೆ ಹಸ್ತಿನಾವತಿ ಶಂತನು ಸತ್ಯವತಿಯರ ಪ್ರೇಮ ಪ್ರಸಂಗ -ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು.ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ.ಇಲ್ಲಿ ಚಂದ್ರವಂಶದ ಅರಸ ದುಷ್ಯಂತ ಹಾಗೂ ಶಕುಂತಲೆಯರ ಮಗನಾದ ಭರತನ ಪರಂಪರೆಯಲ್ಲಿ ಜನಿಸಿದಂತಹ ಪ್ರದೀಪನ ಮಗನಾದ ಶಂತನು ಮಹಾರಾಜನು ರಾಜ್ಯವಾಳುತ್ತಿದ್ದನು. ಇವನು ಒಮ್ಮೆ ಬೇಟೆಯಾಡಲಿಕ್ಕೆಂದು ಕಾಡಿಗೆ ಹೊರಟವನು ಆಯಾಸ ಪರಿಹಾರಾರ್ಥವಾಗಿ ಗಂಗಾನದಿಯ ತೀರದಲ್ಲಿ ವಿಶ್ರಮಿಸುತ್ತಿರುವಾಗ ಪರಮ ಸುಂದರಿಯಾದ ಗಂಗಾದೇವಿಯೆಂಬ ಹೆಣ್ಣನ್ನು ಕಂಡು ಅವಳ ರೂಪಸಂಪತ್ತಿಗೆ ಮರುಳಾದ- -ಡಾ.ಸಿ.ಎಂ.ಗೋವಿಂದರೆಡ್ಡಿ ಮುಂದುವರೆಯುವುದು.. … Read more

ಪಂಜು ಹುಟ್ಟುಹಬ್ಬದ ಫೇಸ್ ಬುಕ್‌ ಚಾಲೆಂಜ್

ಜನವರಿ ೨೧ ಪಂಜು ಮ್ಯಾಗಜಿನ್‌ ಹುಟ್ಟಿದ ದಿನ.ಪಂಜುವಿನ ಒಂಬತ್ತನೇ ಹುಟ್ಟಹಬ್ಬದ ದಿನವನ್ನು ನಾವು ನೀವು ಎಲ್ಲರೂ ಸೇರಿ ಆಚರಿಸೋಣ.ಪಂಜುವಿನ ಕುರಿತು ನಿಮಗೆ ಅನಿಸಿದ್ದನ್ನು ಅಥವಾ ಪಂಜುವಿನಲ್ಲಿ ನೀವು ಓದಿದ/ಬರೆದ ಯಾವುದಾದರೊಂದು ಬರಹದ ಒಂದಷ್ಟು ಸಾಲುಗಳನ್ನು ಓದಿ ಪುಟ್ಟ ವಿಡಿಯೋ ಮಾಡಿಆ ವಿಡಿಯೋವನ್ನು ಫೇಸ್‌ ಬುಕ್‌ ನಲ್ಲಿ #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ಬಳಸಿ ಅಪ್‌ ಲೋಡ್‌ ಮಾಡಿಈ ಚಾಲೆಂಜ್‌ ಸ್ವೀಕರಿಸಲು #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ನೊಂದಿಗೆ ನಿಮ್ಮ ಗೆಳೆಯರನ್ನು ಟ್ಯಾಗ್‌ ಮಾಡಿ ನಾಮಿನೇಟ್‌ ಮಾಡಿ.‌ಕನ್ನಡದ ಬರಹಗಳು … Read more

ನಮ್ಮ ಜಿಲ್ಲೆಯ ಗಜಲ್ ಕಾರರು… (ಭಾಗ ೧): ವೇಣು ಜಾಲಿಬೆಂಚಿ

ಗಜಲ್ ಬರೆಯುವ ವಿಷಯದಲ್ಲಿ ಬಹಳಷ್ಟು ಪಳಗಿದ ಕೈಗಳು ನಮ್ಮಲ್ಲಿ ಸಾಕಷ್ಟಿವೆ. . . . (ಇಲ್ಲಿ ಕೇವಲ ನಮ್ಮ ರಾಯಚೂರು ಜಿಲ್ಲೆಯನ್ನು ಸೀಮಿತವಾಗಿಟ್ಟುಕೊಂಡು ಹೇಳುವ ಪ್ರಯತ್ನ ಹಾಗೂ ಈ ಬರಹದ ಹಿಂದೆ ಯಾವ ಉದ್ದೇಶವೂ ಇಲ್ಲ. . . ಕೇವಲ ವಿಚಾರ ವಿನಿಮಯ ಮಾತ್ರ) ನಮ್ಮ ಭಾಗದ ಹೆಮ್ಮೆಯ ಗರಿಮೆ ದಿವಂಗತ ಶಾಂತರಸರನ್ನು ಈ ಗಜಲ್ ವಿಷಯದಲ್ಲಿ ಮೂಲ ಸಂಸ್ಥಾಪಕರಾಗಿ ನಾವು ಕಾಣುತ್ತೇವೆ. . ತರುವಾಯ ಶ್ರೀಮತಿ ಎಚ್. ಎಸ್ ಮುಕ್ತಾಯಕ್ಕ, ತರುವಾಯ ದಿವಂಗತ ಶ್ರೀ ಜಂಬಣ್ಣ … Read more

ಪ್ರಾಣಿ ಪಕ್ಷಿಗಳಲ್ಲಿ ಸಂವಹನ: ಡಾ. ಯುವರಾಜ ಹೆಗಡೆ

ಆಧುನೀಕರಣದ ಕಪಿಮುಷ್ಠಿಗೆ ಸಿಕ್ಕು ನಲುಗಿದ ಪಶ್ಚಿಮ ಘಟ್ಟದ ಹೆಬ್ಬಾಗಿಲಿಗೆ ರಸ್ತೆ ಅಗಲೀಕರಣವೆಂಬ ನೆಪವೊಡ್ಡಿ ಟಿಂಬರ್ ಲಾಬಿಯವರು ಲಗ್ಗೆ ಇಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿಯ ಬೃಹದಾಕಾರದ ಮರಗಳು ನೆಲಕ್ಕುರುಳುತ್ತಾ ಇರುವಾಗ ಒಂದೂವರೆ ಶತಮಾನದಷ್ಟು ಹಳೆಯ ಮಾಮರದ ಸರದಿ ಬಂದೇ ಬಿಟ್ಟಿತು. ಮರದ ಬುಡಕ್ಕೆ ಮರ ಕಡಿಯುವ ಯಂತ್ರವನನ್ನಿಟ್ಟು ಗಿರ ಗಿರನೆ ಶಬ್ಧ ಮಾಡುತ್ತಿದ್ದಂತೆ ಮರದ ಪೊಟರೆಯಿಂದ ಹೊರಬಂದು ಗಿಳಿಗಳೆರಡು ಕಿಟಾರನೆ ಕೂಗುತ್ತಾ ಸಂಕಟಪಡುತ್ತಿದ್ದವು. ಕೆಲವೇ ನಿಮಿಷದಲ್ಲಿ ಮಾವಿನ ಮರ ದರೆಗುರುಳುತ್ತಿದ್ದಂತೆ ಪೊಟರೆಯಲ್ಲಿದ್ದ ಇನ್ನು ಪುಕ್ಕವೂ ಹುಟ್ಟದ 3 ಗಿಣಿ ಮರಿಗಳು … Read more

ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಜನ್ಮದಿನ: ಡಾ. ಅವರೆಕಾಡು ವಿಜಯ ಕುಮಾರ್

ಸ್ವಾಮಿ ವಿವೇಕಾನಂದರು 1863 ಜನವರಿ 12 ರಂದು ಕಲ್ಕತ್ತಾ ನಗರದಲ್ಲಿ ಜನಿಸಿದರು. ನರೇಂದ್ರನಾಥ ದತ್ತ ಎಂಬುದು ಇವರ ಹುಟ್ಟಿದ ಹೆಸರು. ಕಾಲಕ್ರಮೇಣ ಅದು ಬದಲಾಗಿ ವಿವೇಕನಂದವಾಯಿತು. ತಂದೆ ವಿಶ್ವನಾಥ ದತ್ತ ಇವರು ಕಲ್ಕತ್ತದ ಉಚ್ಚನ್ಯಾಯಾಲಯದಲ್ಲಿ ಅಟಾರ್ನಿಯಾಗಿ ಸೇವೆಸಲ್ಲಿಸುತ್ತಿದ್ದರು. ತಾಯಿ ಭುವನೇಶ್ವರಿ ದೇವಿ. ಅಜ್ಜ ದುರ್ಗಾ ಚರಣ್ ದತ್ತ, ಇವರು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಸಾಹಿತಿಯಾಗಿದ್ದರು. ತನ್ನ 25ನೇ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಕೊಲ್ಕತ್ತ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಶಿಕ್ಷಣವನ್ನು ಪಡೆದರು. 1884 … Read more

“ಸಮಾನತೆಯ ಹರಿಕಾರ” ಕುವೆಂಪು: ಡಾ. ಅವರೆಕಾಡು ವಿಜಯ ಕುಮಾರ್

ಪ್ರತಿಯೊಂದು ಮಗುವೂ ಹುಟ್ಟುತ್ತಲೇವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವ’ನನ್ನಾಗಿ ಮಾಡುತ್ತೇವೆ.ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ಶಿಕ್ಷಣದ ಕರ್ತವ್ಯವಾಗಬೇಕು. -ಕುವೆಂಪು ಪ್ರಕೃತಿಯ ತಾಣವಾದ ಮಲೆನಾಡಿನ ಅಪ್ರತಿಷ್ಠಿತ ಮನೆತನ ಒಂದರಲ್ಲಿ 1904, ಡಿಸೆಂಬರ್ 29ರಂದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ ಶ್ರೀ ವೆಂಕಟಪ್ಪ ಮತ್ತು ಶ್ರೀಮತಿ ಸೀತಮ್ಮ ಅವರ ಬಾಳಿನ ಬೆಳಕಾಗಿ ಪುಟ್ಟಪ್ಪನವರು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಗ್ರಾಮದಲ್ಲಿ ಬೆಳೆದವರು ವಿಶ್ವಮಾನವರಾಗಿ ವಿಜೃಂಭಿಸಿ ಇತಿಹಾಸ ಪುಟದ ಸ್ವರ್ಣ ಅಕ್ಷರಗಳಲ್ಲಿ ಸೇರ್ಪಡೆಯಾದರು. ಆಗಿನ ಕಾಲದ ಬಡತನ, ದಾರಿದ್ರ್ಯ, ಅಸಾಯಕತೆ ಇವುಗಳನ್ನು … Read more

ಕಿರುಗತೆಗಳು: ಜಯಂತ್ ದೇಸಾಯಿ

ಬಣ್ಣದ ಬಾರಿಗೆ( ಬಣ್ಣದ ಪೊರಕೆ) ಬಾರಿಗೆಮ್ಮೋ ಬಾರಿಗೆ 30 ರೂಪಾಯಿಗೆ ಜೊತಿ ಬಾರಿಗೆ ಸ್ವಲ್ಪವೇ ಅವ ನೋಡ್ರೆಮ್ಮೋ ಅಂತ ಕೂಗುತ್ತಾ ಹಳ್ಳಿಯ ಸಂದಿಸಂದಿಯ ಒಳಗೆ ನುಗ್ಗಿ ಹೋಗುತ್ತಿದ್ದ ಶರಣಪ್ಪ ನ ದ್ವನಿ ಕೇಳಿ ನಿರ್ಮಲ ನುಡಿದಳು ಹೇ ನಿಂದ್ರಪ್ಪ ನಿಂದ್ರು ಹೆಂಗ್ ಕೊಟ್ಟಿ ಅಂದಿ, 30 ರೂಪಾಯಿಗೆ ಅಂದ್ರ ಭಾಳಾ ಫೀರೆ ಆತು ಕಡಿಮೆ ಮಾಡು, ನೋಡಿದ್ರ ನಾಕು ಕಡ್ಡಿ ಇಲ್ಲ ಇದ್ರಾಗ, ಅವ್ವ ಹಂಗನ್ನ ಬ್ಯಾಡ ಗಿರಿ ಗಿರಿ ಹಾಕಿ ಎಳೆದು ಎಳೆದು ತೀಡಿ ನೆಲಕ್ಕೆ … Read more

ಇಹಕ್ಕೂ ಮನಕ್ಕೂ ಬೆಳಕ ಸುರಿವ ದೀಪಾವಳಿ: ಗೌರಿ.ಚಂದ್ರಕೇಸರಿ, ಶಿವಮೊಗ್ಗ

ಜಗದ ಕತ್ತಲೆಯನ್ನೆಲ್ಲ ಹೊಡೆದೋಡಿಸುವ ಬೆಳಕು ಯಾರಿಗೆ ತಾನೆ ಇಷ್ಟವಿಲ್ಲ? ಝಗಮಗಿಸುವ ದೀಪಗಳ ಹಬ್ಬವಾದ ದೀಪಾವಳಿ ಎಂದರೆ ಬಾಲ್ಯದಿಂದಲೂ ಏನೋ ಒಂದು ಆಕರ್ಷಣೆ. ಕಳೆದು ಹೋದ ಅದೆಷ್ಟೋ ದೀಪಾವಳಿಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ಈಗಿನ ತರಾವರಿ ಬಣ್ಣದ ಬಲ್ಬುಗಳ ದೀಪಗಳು ಹಿಂದಿನ ಮಣ್ಣಿನ ಹಣತೆಗಳ ಮುಂದೆ ಮಸುಕಾಗಿ ಬಿಡುತ್ತವೆ. ದೀಪಾವಳಿ ಇನ್ನೂ ತಿಂಗಳಿರುವಾಗಲೇ ಮನೆಯಲ್ಲಿ ಸಡಗರ ಪ್ರಾರಂಭವಾಗುತ್ತಿತ್ತು. ಸೊಂಟಕ್ಕೆ ಸೆರಗನ್ನು ಸಿಕ್ಕಿಸಿ ಉದ್ದವಾದ ಕೋಲೊಂದಕ್ಕೆ ಹಳೆಯ ಬಟ್ಟೆಯನ್ನು ಕಟ್ಟಿ ಜೇಡರ ಬಲೆಗಳನ್ನೆಲ್ಲ ಅವ್ವ ತೆಗೆಯುತ್ತಿದ್ದಳು. ನಂತರ ಅದೇ … Read more

ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ..: ವಿನಾಯಕ ಅರಳಸುರಳಿ

ದೀಪಾವಳಿ ಮರಳಿ ಬಂದಿದೆ. ಆಫೀಸಿನ ಬಾಸಿನ ಟೇಬಲ್ ಮೇಲೀಗ ರಜೆಯ ಅರ್ಜಿಗಳೆಲ್ಲ ನಾ ಮೊದಲು, ತಾ ಮೊದಲು ಎಂದು ತಳ್ಳಾಡುತ್ತಾ ಸಾಲಾಗಿ ನಿಂತಿವೆ. ಯಾರಿಗೆ ಕೊಡುವುದು, ಯಾರಿಗೆ ಬಿಡುವುದು ಎಂದು ಯೋಚಿಸುತ್ತಿರುವಾಗಲೇ ಅವರ ಹೆಂಡತಿ ಕಾಲ್ ಮಾಡಿದ್ದಾರೆ. ‘ಹಬ್ಬಕ್ಕೆ ಊರಿಗೆ ಹೋಗಲಿಕ್ಕಿದೆ. ಟಿಕೇಟು ಬುಕ್ ಮಾಡೋದು ಮರೀಬೇಡಿ!” ಎಂದು ನೆನಪಿಸಿದ್ದಾಳೆ. ಹೀಗೆ ಬಾಸೆಂಬ ಬಾಸೇ ರಜೆ ಹಾಕಿ ಹೋದ ಆಫೀಸಿನಲ್ಲಿ ಕೆಲವರಿಗಷ್ಟೇ ರಜೆ ಮಂಜೂರಾಗಿದೆ. ಅವರೆಲ್ಲ ಸಂಭ್ರಮದಲ್ಲಿ ಊರಿನ ಬಸ್ಸು ಹತ್ತುತ್ತಿದ್ದರೆ ರಜೆ ಸಿಗದ ಹತಾಷರು ಹೊರಟವರಿಗೆ … Read more

ದೀಪಾವಳಿ ವಿಶೇಷಾಂಕಕ್ಕೆ ಲೇಖನ ಆಹ್ವಾನ

ಸಹೃದಯಿಗಳೇ, ಈ ವರ್ಷದ ದೀಪಾವಳಿ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ನವೆಂಬರ್ 13 ರ ಸಂಜೆಯೊಳಗೆ ತಲುಪಲಿ… ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ… ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿಪಂಜು ಬಳಗhttps://panjumagazine.com/ ನಮ್ಮ ಇ ಮೇಲ್‌ ವಿಳಾಸ: editor.panju@gmail.com, smnattu@gmail.com ವಿ.ಸೂ.: ಪಂಜು ಅಪ್ರಕಟಿತ ಬರಹಗಳನ್ನಷ್ಟೇ ಸ್ವೀಕರಿಸುತ್ತದೆ. ಲೇಖಕರು ಕಳುಹಿಸುವ ಲೇಖನವು ಬ್ಲಾಗ್, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಬರಹವನ್ನು ಸ್ವೀಕರಿಸುವುದಿಲ್ಲ.

ಡಾರ್ಕ್‍ವೆಬ್: ಸಾಮಾನ್ಯರಿಗೆ ನಿಲುಕದ ನಕ್ಷತ್ರ: ಚಾರು ಮಂಜುರಾಜ್

ನಮಗಿಷ್ಟವಾದುದನ್ನು ಆನ್‍ಲೈನ್‍ನಲ್ಲಿ ತರಿಸಿಕೊಳ್ಳುವಾಗಲೋ ಸ್ನೇಹಿತರಿಗಾಗಿ ಉಡುಗೊರೆಗಳನ್ನು ಕೊಳ್ಳುವಾಗಲೋ ಗೂಗಲ್‍ನಲ್ಲಿ ಕಾಣುವ ಪುಟಗಳು ಸರ್‍ಫೇಸ್ ವೆಬ್. ಅಂದರೆ ನಾವು ಗೂಗಲ್‍ನಲ್ಲಿ ಜಾಲಾಡುವಾಗ ಅದರಲ್ಲಿ ತೆರೆದುಕೊಳ್ಳುವ ಪ್ರತಿಯೊಂದು ಪುಟವೂ ಇಂಥ ಸರ್‍ಫೇಸ್ ವೆಬ್ಬೇ! ದಿನನಿತ್ಯ ನಾವು ಅಂತರ್ಜಾಲದೊಂದಿಗೆ ವ್ಯವಹರಿಸುವಾಗ ಕೇವಲ ಶೇಕಡ ಒಂದರಷ್ಟು ಮಾತ್ರ ಮಾಹಿತಿಯನ್ನು ಎಕ್ಸ್‍ಪ್ಲೋರ್ ಮಾಡುತ್ತಿರುತ್ತೇವೆ. ಉಳಿದ ಶೇಕಡ 96 ರಿಂದ 99 ರಷ್ಟು ಮಾಹಿತಿಗಳು ಡೀಪ್‍ವೆಬ್ ಮತ್ತು ಡಾರ್ಕ್‍ವೆಬ್‍ಗಳಲ್ಲಿ ಅಡಗಿರುತ್ತವೆ. ಎರಡಂತಸ್ತಿನ ಕಟ್ಟಡವೊಂದರಲ್ಲಿ ಮೇಲೆ ಕಾಣುವುದೇ ನಾವು ಜಾಲಾಡುವ ತಾಣಗಳು, ಆನಂತರದ್ದು ಡೀಪ್‍ವೆಬ್. ಅದರ ಕೆಳಗಿರುವುದೇ … Read more

ಹೆಬ್ಬಲಸು : ಅಪರೂಪದ ಕಾಡುಹಣ್ಣು: ಚರಣಕುಮಾರ್ ಮತ್ತು ಡಾ. ಶ್ರೀಕಾಂತ್ ಗುಣಗಾ

ಹೆಬ್ಬಲಸು : ಅಪರೂಪದ ಕಾಡುಹಣ್ಣುArtocarpus hirsutus Lam.ಕುಟುಂಬ: ಮೊರೇಸಿ ವಿತರಣೆ: ಭಾರತೀಯ ಮೂಲದ ಬೃಹದ್ಧಾಕಾರದ ವೃಕ್ಷ ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣ ಮತ್ತು ಅರೆ-ನಿತ್ಯಹರಿಧ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಪರಿಚಯ: ನೇರವಾಗಿ ಬೆಳೆಯುವ ಎತ್ತರದ ಮರ. ಕಂದು ಬಣ್ಣದ ತೊಗಟೆ. ತೊಗಟೆಯ ಮೇಲೆ ಸಣ್ಣ ವಾತರಂದ್ರಗಳು. ಗಾಯವಾದ ತೊಗಟೆಯಿಂದ ಹೊರಸೂಸುವ ಹಾಲಿನಂತ ಅಂಟು ಸೊನೆ. ಅಗಲವಾದ ಹುರುಬುರುಕಿನ ಎಲೆಗಳು ಕಡು ಹಸಿರಿನಿಂದ ಕೂಡಿವೆ. ಎಲೆಗಳ ಮೇಲೆ ಅಚ್ಚಾಗಿ ಮೂಡಿರುವ ನರಗಳಿವೆ. ಗಂಡು ಮತ್ತು ಹೆಣ್ಣು ಹೂವುಗಳು ಬೇರೆ ಬೇರೆಯಾಗಿರುತ್ತವೆ. … Read more