ಗಡಿ: ಶ್ರೀಪ್ರಸಾದ್

ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ತ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು ಅಲ್ಲದಿದ್ದರೂ ಒಂದೆರಡು ತಲೆಮಾರು ಕೂತು ತಿನ್ನೋವಷ್ಟು ಆಸ್ತಿ ಅಂತೂ ಇತ್ತು. ಲಿಂಗೇ ಗೌಡರು ಹೋಗಿ 3 ವರ್ಷ ಆಯ್ತು… ಅಲ್ಲಿಂದಲೇ ಶುರುವಾಗಿದ್ದು ಮಕ್ಕಳಿಬ್ಬರ ನಡುವೆ ಆಸ್ತಿಯ ಕುರಿತು ಶೀತಲ ಸಮರ… ಮುಂದೆ ತಗಾದೆ ಬೇಡ ಅಂದುಕೊಂಡು ದೊಡ್ಡ ಗೌಡರು … Read more

ಲವ್ ಕ್ರುಷಾದ್: ಎಫ್ ಎಂ ನಂದಗಾವ

ರಾಜ್ಯದ ಸಚಿವ ಸಂಪುಟದ ನಡುವಯಸ್ಸಿನ ಹಿರಿಯ ಸದಸ್ಯ, ಗೃಹ ಖಾತೆಯ ಜವಾಬ್ದಾರಿ ಹೊತ್ತ ಸಚಿವ ಕೆ.ಟಿ.ಕಿರಣ ಅವರು, ಅಂದು ಸಂಗಮನೂರು ನಗರ ಪೊಲೀಸ್ ಠಾಣೆಗೆ ಭೇಟಿಕೊಡುವವರಿದ್ದರು. ಸಮಯ ನಿಗದಿ ಆಗಿರಲಿಲ್ಲ. ಊರಲ್ಲಿನ ಅವರ ಪಕ್ಷದ ನಾಯಕ ಹಿರಿಯಣ್ಣ ನಾಯ್ಕ ಎಂಬುವವರ ಮಗಳು ಮಂಗಳಾಳ ಮದುವೆಗೆ ಅವರು ಬಂದಿದ್ದರು. ಅವರ ಈ ಖಾಸಗಿ ಭೇಟಿಯನ್ನು ಅಧಿಕೃತಗೊಳಿಸುವ ಉದ್ದೇಶದಿಂದ ಸಂಗಮನೂರು ನಗರ ಪೊಲೀಸ್ ಠಾಣೆಯ ಭೇಟಿಯ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ಬಾಲ್ಯದಿಂದಲೇ ಸಂಘಟನೆಯ ಶಾಖೆಯಲ್ಲಿ ಪ್ರಾಥಮಿಕ ಸದಸ್ಯತ್ವ ಹೊಂದಿ, ಅದರಲ್ಲಿಯೇ ಬೆಳೆಯುತ್ತಾ … Read more

ಜೀವನ ಮಕರಂದ: ಕೋಡಿಹಳ್ಳಿ ಮುರಳೀಮೋಹನ್

ತೆಲುಗು ಮೂಲ: ವಿಜಯ ಶ್ರೀಮುಖಿಕನ್ನಡ ಅನುವಾದ: ಕೋಡಿಹಳ್ಳಿ ಮುರಳೀಮೋಹನ್ “ಅಮ್ಮಾ, ಕೈವಲ್ಯಾ! ಅಭಿನವ್ ಕಾಲ್ ಮಾಡಿದ್ರು.. ನಿನ್ನ ಜೊತೆ ಮಾತಾಡೋಣ ಅಂತ ಎರಡು ಮೂರು ಸಾರಿ ಮಾಡಿದ್ರೂ ನೀನು ಲಿಫ್ಟ್ ಮಾಡ್ಲಿಲ್ಲ ಅಂತೆ?” ಕರೆದು ಕೇಳಿದ್ರು ರಾಮಚಂದ್ರ.“ಹೌದಾ ಅಪ್ಪಾ? ನನ್ನ ಮೊಬೈಲ್ ಬೆಡ್‌ರೂಮ್‌ನಲ್ಲಿದೆ. ನಾನು ಅಮ್ಮ, ಅಕ್ಕ ಅವರ ಜೊತೆ ಮಾತಾಡ್ತಾ ಅಡುಗೆಮನೆಯಲ್ಲಿದ್ದೆ. ಹೋಗಿ ನೋಡ್ತೀನಿ” ತಂದೆಯೊಂದಿಗೆ ಹೇಳುತ್ತಲೇ ಬೆಡ್‌ರೂಮ್‌ಗೆ ಹೋದಳು ಕೈವಲ್ಯ. “ನನ್ನಗೆ ಕಾಲ್ ಮಾಡಿದ್ರಂತೆ? ನಾನು ನೋಡಲೇ ಇಲ್ಲ, ಮೊಬೈಲ್ ಇನ್ನೊಂದು ರೂಮ್‌ನಲ್ಲಿದೆ” ಕಾಲ್ … Read more

ಅಮ್ರಾವತಿಯ ಗಂಡ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

“ಮುಂಗಾಲಿನ ಮ್ಯಾಲೆ ನಡೆಯೋ ಹೆಂಗ್ಸು ಮೂರೊಲೇ ಗುಂಡು ಒಂದ್ಕಡೆ ಇಕ್ಕಲ್ಲ, ಯಿಟ್ನೊತ್ಗೇ ಒಲೆ ಕಿತ್ತಾಕಿ ಮುಂಗೈನ ತಿಕುಕ್ಕೆ ಸೀಟ್ಕಂಡು ಮುಂದ್ಲೂರಿಗೆ ವೋತಾಳೆ, ನೀನು ಅಂಗೇ ಕಣೇಳೇ ಬಿತ್ರೀ ಆಹ ಹ ಹಾ… ಹೆಂಗ್ ವನಿತಾಳ್ನೋಡು ಇವುಳ್ ವೈಯ್ಯಾರುಕ್ಕೆ ನನ್… ” ಮಲ್ಲಕ್ಕ ಕುಂತಲ್ಲೇ ಕೊಸರಾಡತೊಡಗಿದಳು, ಅವಳ ಆವೇಶ, ಆಕ್ರೋಶ ಎಷ್ಟಿತ್ತೆಂದರೆ ಅವಳು ಕುಂತಿರೋ ಜಾಗಕ್ಕೆ ಗಾರೆ ಬಳಿಯದೇ ಬರೀ ಮಣ್ಣಿನ ನೆಲವಾಗಿದ್ದಿದ್ರೇ ಅವಳ ಕೊಸರಾಟಕ್ಕೆ ಅವಳ ಕುಂಡಿಯಷ್ಟಗಲವೂ ನೆಲ ತೂತು ಬಿದ್ದು ನೆಲದೊಳಗೆ ವೊಲ್ಟೋಗಿರೋಳು, ಇವಳ ಕೊಸರಾಟ … Read more

ಮೇಷ್ಟ್ರು ರವಿ, ರಾಜಿ ಮತ್ತು ಮಗ ರವಿರಾಜ: ಲಿಂಗರಾಜು ಕೆ ಮಧುಗಿರಿ

ಅಗ್ರಹಾರಕ್ಕೆ ವರ್ಗವಾಗಿ ಬಂದ ರವಿಯನ್ನು, “ಆ ಶಾಲೆಯನ್ಯಾಕೆ ತೆಗೆದುಕೊಂಡೆ ಗುರು? ನೆಕ್ಸ್ಟ್ ಅಕಾಡೆಮಿಕ್ ಇಯರ್‌ಗೆ ನೀನು ಹೆಚ್ಚುವರಿ ಆಗೋದು ಪಕ್ಕಾ. ಆ ಹೆಸ್ರಿಗೂ ಆ ಊರ್ಗೂ ಸಂಬಂಧಾನೇ ಇಲ್ಲ. ಊರಿನ ತುಂಬೆಲ್ಲಾ ಇರೋದು ಮಾದಿಗ್ರು, ಹೊಲೇರು, ಕುರುಬ್ರು, ಮಡಿವಾಳ್ರೇ. ಗೊತ್ತಲ್ಲಾ ಅವ್ರೆಂಗೆ ಅಂತಾ?”, ಹೀಗೆ ತುಟಿಗೆ ಇಷ್ಟಿಷ್ಟೇ ವೋಡ್ಕಾನಾ ಮುತ್ತಿಡ್ತಾ, ರವಿಯ ಕಸಿನ್, ಕುಮಾರ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ. ರವಿ, ಅಗ್ರಹಾರದ ಹೆಸರಿನಿಂದ ಹಾಗೂ ಕೌನ್ಸೆಲಿಂಗ್ ನಲ್ಲಿ ಉಳಿದ ಒಂದೇ ಒಂದು ಶಾಲೆ ಇದಾಗಿದ್ದುದರಿಂದ ಅನಿವಾರ್ಯವಾಗಿ … Read more

ಕಿರು ಕತೆಗಳು: ಸುಜಾತಾ ಎಸ್ ಹೆಗಡೆ ದಂಟಕಲ್

ಅಂತರ್ಗತ “ಲೇ ಭಾವನಾ ಎಲ್ಲೆ ಇದ್ದೀಯಾ ? ನನಗೆ ಕೆಲಸಕ್ಕೆ ಹೊರಡೋಕೆ ಸಮಯ ಆಯ್ತು. ಚಿನ್ನುಗೆ ಬೇರೆ ಸಮವಸ್ತ್ರ ಹಾಕಿಲ್ಲಾ. ಅವನನ್ನ ಶಾಲೆಗೆ ಬಿಟ್ಟು ನಾನು ತಲುಪೋದು ಯಾವಾಗಾ ?. ಹರ್ಷ ಏರು ಧ್ವನಿಯಲ್ಲಿ ಕೂಗಿದಾಗಲೇ ವಾಸ್ತವಕ್ಕೆ ಬಂದಳು. ಅವಸರವಸರವಾಗಿ ಉಕ್ಕುತ್ತಿದ್ದ ಹಾಲಿನ ಪಾತ್ರೆಯ ಉರಿಯನ್ನು ನಂದಿಸಿದಳು. ಅಡಿಗೆ ಮನೆಯ ಬಾಗಿಲಿಗೆ ಬಂದ ಪತಿಯನ್ನು ಕಂಡು ಮುಖ ಬಾಡಿಸಿಕೊಂಡಳು. ಕಣ್ಣಾಲಿಗಳು ತುಂಬಿಕೊಂಡವು. ಭಾವುಕಳಾದ ಹೆಂಡತಿಯನ್ನು ಕಂಡು ಸ್ವಲ್ಪ ಮೆತ್ತಗಾದ. “ಇದೇನೆ ಭಾವನಾ ? ಇಷ್ಟಕ್ಕೆಲ್ಲ ಯಾರಾದ್ರು ಕಣ್ಣೀರು … Read more

ಮೂಗು ಸುಂದರಿಯೂ ಕಪ್ಪು ಹುಡುಗನೂ: ಎಂ ನಾಗರಾಜ ಶೆಟ್ಟಿ

ಹಾರ ಹಾಕಿ, ಧಾರೆ ಎರೆದು ಅಕ್ಷತೆ ಕಾಳು ಹಾಕುವುದನ್ನೇ ಕಾದಿದ್ದ ಅವಸರದ ಅನೇಕ ಆಮಂತ್ರಿತರು ಶುಭಕೋರಲು ಸಭಾಂಗಣದಿಂದ ಎದ್ದು ವೇದಿಕೆಯ ಎಡಭಾಗದಲ್ಲಿ ಒತ್ತೊತ್ತಾಗಿ ನೆರೆದುದನ್ನು ಕಂಡು ʼ ಸ್ವಲ್ಪ ತಾಳಿ ʼ ಎಂದು ಸುಧಾರಿಸಿಕೊಂಡು ಬರಲು ಮದುಮಕ್ಕಳನ್ನು ವೇದಿಕೆಯ ಪಕ್ಕದ ಕೋಣೆಗಳಿಗೆ ಕಳಿಸಿ ಕೊಡಲಾಯಿತು. ಹೆಚ್ಚೆಚ್ಚು ಜನ ಸೇರುತ್ತಿದ್ದಂತೆಲ್ಲಾ ಸರತಿಯ ಮುಂದಿದ್ದ ಆತುರಗಾರರು ʼ ಬೇಗ ಬರಕ್ಕೆ ಹೇಳಿ ʼ ಎಂದು ತಾಳ್ಮೆಗೆಟ್ಟು ಕೂಗುವುದನ್ನು ಕಂಡು, ಜನ ಅವಸರ ಮಾಡುತ್ತಿದ್ದಾರೆ ಬೇಗ ಬರಬೇಕಂತೆ ಎಂದು ಮದುಮಕ್ಕಳಿಗೆ ಹೇಳಿ … Read more

ಜ್ವಾಳಾ ಕೊಳ್ಳಾಗ..: ಎಫ್ ಎಂ ನಂದಗಾವ

“ಅಂಕಲ್ ಅಂಕಲ್, ಈ ಕೇಕ್ ಟೇಸ್ಟ್ ಮಾಡಿ ನೋಡ್ರಿ.’’ ನಮ್ಮೂರಾಗ, ಎಲ್ಲಾರೂ ನನ್ನ ಅಜ್ಜಾರ ಅಜ್ಜಾರ ಅಂತಾರ. ಇದ್ಯಾರಪಾ, ಇಲ್ಲ ನನ್ನ ಅಂಕಲ್ ಅಂತ ಕರಿಲಿಕ್ಹತ್ತಾರ? ನಾ ಇಲ್ಲ ಬಂದ ಮ್ಯಾಲ, ಹರೆಯ ಹಿಂದಕ್ಕ ಬರಾಕಹತ್ತದ ಏನೋ? ಮೊನ್ನಿ, ಮಗಾ ತನ್ನ ಕೂದಲಿಗೆ ಬಣ್ಣಾ ಹಚ್ಚೂ ಮುಂದ ನನ್ನ ತಲಿ ಕೂದಲಿಗೂ ಸ್ವಲ್ಪ ಬಣ್ಣ ಬಳಿದಿದ್ದ, ಮೊದಲ ಮುದುಕರು ತದಕರು ಬಣ್ಣಾ ಹಚ್ಚಕೋತಿದ್ದರು. ಈಗ, ಅಲ್ಲೊಂದ ಇಲ್ಲೊಂದ ಬಿಳಿ ಕೂದಲ ಬಂದ ಹರೆದವರ ಬಾಳ ಮಂದಿ ಕರಿ … Read more

ಒಂದು ಪ್ರೇಮ ಕತೆ: ಜೆ.ವಿ.ಕಾರ್ಲೊ

ಮೂಲ ಕತೆ: The Lady with the dog ಲೇಖಕರು: ಆಂಟೊನ್ ಚೆಕೊವ್ ಅನುವಾದ: ಜೆ.ವಿ.ಕಾರ್ಲೊ ಅಪರಿಚಿತ ಹೆಣ್ಣುಮಗಳೊಬ್ಬಳು ಒಂದು ಪುಟ್ಟ ನಾಯಿಯೊಂದಿಗೆ ಕಡಲತೀರದ ಮೇಲೆ ಅಡ್ಡಾಡುತ್ತಿರುವ ಬಗ್ಗೆ ಜನರು ಮಾತನಾಡತೊಡಗಿದರು. ಕಳೆದ ಹದಿನೈದು ದಿನಗಳಿಂದ ಯಾಲ್ಟಾದಲ್ಲಿ ತಂಗಿದ್ದ ಡಿಮಿಟ್ರಿ ಡಿಮಿಟ್ರಿಚ್ ಗುರೊವ್‌ನಿಗೆ ಹೊಸದಾಗಿ ಕಡಲ ತೀರಕ್ಕೆ ಬಂದಿರುವ ಈ ಹೆಣ್ಣುಮಗಳ ಬಗ್ಗೆ ಆಸಕ್ತಿ ಕೆರಳಿತು. ಕಡಲ ತೀರಕ್ಕೆ ಎದುರಾಗಿ ವೆರ್ನಿ ಹೋಟಲಿನ ಎತ್ತರದ ಮಂಟಪದ ಮೇಳೆ ಕುಳಿತಿದ್ದ ಅವನಿಗೆ ತಲೆಗೆ ಟೋಪಿ ಧರಿಸಿದ್ದ, ಮಧ್ಯಮ ಎತ್ತರದ … Read more

ಕಲಿತ ಅಕ್ಷರ ಕಣ್ತೆರಿಸಿದಾಗ !: ಶರಣಗೌಡ ಬಿ.ಪಾಟೀಲ ತಿಳಗೂಳ ಕಲ್ಬುರ್ಗಿ

ಕತ್ತಲು ಸರಿದು ಬೆಳಕು ಹರಿಯುತ್ತಿದ್ದಂತೆ ಪರ್ವತಪೂರ ಜನ ಎದ್ದು ತಮ್ಮ ತಮ್ಮ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು. ಎಲ್ಲರಂತೆ ಅಗಸಿ ಮನಿ ಶಿವನಾಗನೂ ಎದ್ದು ಪಕ್ಕದಲ್ಲಿ ಮಲಗಿದ್ದ ತನ್ನ ಹೆಂಡತಿ ಶಿವಗಂಗವ್ವಳಿಗೂ ಎಬ್ಬಿಸುತ್ತಾ ಇನ್ನೂ ಎಷ್ಟೋತನಕ ಮಲಗತಿ ಕೆಲಸಾ ಮಾಡೇಳು ದಿನಾ ನಾನು ಎಬ್ಬಿಸೋ ತನಕ ಏಳೋದೇ ಇಲ್ಲ ನನಗಿಂತ ನೀನೇ ಜಲ್ದಿ ಏಳಬೇಕಿಲ್ಲ ಎಂದಾಗ ಅವಳು ಎಚ್ಚರಗೊಂಡು ಕಣ್ಣು ತಿಕ್ಕಿಕೊಳ್ಳುತ್ತಾ ಹಾಸಿಗೆ ಮೇಲೆ ಸ್ವಲ್ಪ ಹೊತ್ತು ಕುಳಿತು ನಂತರ ಕೌದಿ ಮಡಚಿ ಅವು ಒಂದರ ಮೇಲೆಂದು ವಯ್ನಾಗಿಟ್ಟು … Read more

ಯೇಸುಸ್ವಾಮಿ ಬೆಳ್ಳಗಿದ್ರಾ?: ಎಫ್.ಎಂ.ನಂದಗಾವ

ಅಪ್ಪಾ ಅಪ್ಪಾ, ಯೇಸುಸ್ವಾಮಿ ಮತ್ತ ಅವರ ಅಪ್ಪಾ ಜೋಸೆಫ್ ಮತ್ತು ತಾಯಿ ಮರಿಯಾಮಾತೆ ಬೆಳ್ಳಗಿದ್ರಾ?’’ ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದ ಮಗ, ಮನೆಗೆ ಬಂದ ಕೂಡಲೇ ಅಪ್ಪನ ಮುಂದೆ ಈ ಪ್ರಶ್ನೆ ಇಟ್ಟಿದ್ದ. ಅಪ್ಪ ಮಾಸ್ಟರ್ ಇನ್ನಾಸಪ್ಪ, ಮುಸಿಪಾಲಟಿಯ ಒಂಬತ್ತನೇ ವಾರ್ಡಿನ ಶಾಲೆಯ ಒಂಬತ್ತನೇ ತರಗತಿಯ ಕೊನೆಯ ಪಿರಿಯಡ್ ನಲ್ಲಿ ಅಬ್ರಹಾಂ ಲಿಂಕನ್ನರ ಬಗ್ಗೆ ಪಾಠ ಮಾಡಿ ಬಂದಿದ್ದ. ಸುಮಾರು ಮೂರು ಶತಮಾನಗಳ ಹಿಂದೆ ಬ್ರಿಟಿಷರ ಆಡಳಿತದಿಂದ ಮುಕ್ತಗೊಂಡ, ಉತ್ತರ ಅಮೆರಿಕದ ವಿವಿಧ ರಾಜ್ಯ (ಸಂಸ್ಥಾನ)ಗಳ ದೇಶ `ಅಮೆರಿಕ … Read more

ಅಮಾಯಕ ರಾಮು: ಅಜಯ್ ಕುಮಾರ್ ಎಂ ಗುಂಬಳ್ಳಿ

ರಾಮು ಚೇಷ್ಟೆ ಹುಡುಗನಲ್ಲ. ಹೆದರಿಕೆ ಜಾಸ್ತಿ ಇದ್ದವನು. ತರಗತಿಯಲ್ಲಿ ಯಾರು? ಗಲಾಟೆ ಮಾಡಿದರು ಸುಮ್ಮನಿದ್ದುಬಿಡುವ ಸ್ವಭಾವ. ಅವನೊಟ್ಟಿಗೆ ಯಾವಾಗಲೂ ಕೂರುತ್ತಿದ್ದ ಡೋಲು ಕೆಂಪಣ್ಣನ ಮಗ ಡೂಕ ಪೆದ್ದುತನದ ಹೈದ. ತಾನೇ ಏನಾದರೂ ಮಾಡಿ ಸುಮ್ಮನೆ ಹಲ್ಲು ಕಿರಿಯುತ್ತ ಅವರಿವರ ಹತ್ತಿರ ಬೈಸಿಕೊಳ್ಳುತ್ತಿದ್ದ. ಮೇಷ್ಟರುಗಳಿಂದ ‘ಇವನು ಸ್ಕೂಲಿಗೆ ಬರೋದೆ ದಂಡ’ ಎನಿಸಿಕೊಂಡರೂ ಬರುತ್ತಿದ್ದ. ನೇರವಾಗಿ ‘ನಿಮ್ಮ ಮಗನನ್ನು ಇಸ್ಕೂಲಿಗೆ ಕಳಿಸಬೇಡಿ’ ಎಂದು ಹೇಳುವ ಹಾಗಿರಲಿಲ್ಲ. ಒಂದನೇ ತರಗತಿಯನ್ನು ಎರಡು ಸಲ ಓದಿ ಈಗ ತನಗಿಂತ ಎರಡು ವರ್ಷ ಕಿರಿಯ … Read more

ಹೀಗೊಂದು ಕನಸು: ರಾಜೇಂದ್ರ ಬಿ. ಶೆಟ್ಟಿ.

ಹೀಗೇ ಬಿದ್ದುಕೊಂಡು ಎಷ್ಟು ದಿನಗಳದವು ಎಂದು ನೆನಪಿಲ್ಲ. ಯಾರನ್ನಾದರೂ ದಿನ ಇಲ್ಲವೇ ತಾರೀಕು ಕೇಳಿದರೆ, “ನಿಮಗೆ ಯಾವ ತಾರೀಕಾದರೇನು, ಯಾವ ದಿನವಾದರೂ ಏನು?” ಅನ್ನುವ ಉಡಾಫೆಯ ಉತ್ತರಗಳು. ಎಷ್ಟೋ ಸಲ ಹಗಲು ಯಾವುದು, ರಾತ್ರಿ ಯಾವುದು ಎಂದು ಗೊತ್ತಾಗುತ್ತಿಲ್ಲ. ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದಾರೆ – ನನ್ನ ನರಳಾಟ ಬೇರೆಯವರಿಗೆ ಕೇಳುವುದು ಬೇಡ ಎಂದು. ಯಾರೋ ನನ್ನನ್ನು ಮೇಲಕ್ಕೆ ಎಳೆಯುತ್ತಿದ್ದಾರೆ. ಸುತ್ತಲೂ ನೀಲ ಆಕಾಶ. ಯಾರೂ ಕಾಣುತ್ತಿಲ್ಲ. ಒಂದು ರೀತಿಯ ಶಾಂತ ಪರಿಸ್ಥಿತಿ. ನಾನು ಸತ್ತಿದ್ದೇನೆಯೇ? ಒಮ್ಮೆಲೇ ಕತ್ತಲು. … Read more

ಸ್ವಾಮಿ ಆಲದ ಮರದಪ್ಪ: ಎಫ್. ಎಂ. ನಂದಗಾವ

ಚಿಕ್ಕ ಸ್ವಾಮ್ಯಾರು ರಾಯಪ್ಪ ಅವರು ಜ್ವರ ಹಿಡಿದು ಮಲಗಿದ್ದರು. `ನಿನ್ನೆ ರಾತ್ರಿಯವರೆಗೂ ಚೆನ್ನಾಗಿಯೇ ಇದ್ದ ಚಿಕ್ಕ ಸ್ವಾಮ್ಯಾರು ರಾಯಪ್ಪರಿಗೆ ಇಂದು ಬೆಳಿಗ್ಗೆ ಆಗುವಷ್ಟರಲ್ಲಿ ಏನಾಯಿತು?’ ಅಡುಗೆ ಆಳು ಸಿಲ್ವಿಯಾ ಚಿಂತಿಸತೊಡಗಿದ್ದಳು. ಗಂಡ ಉಪದೇಶಿ ಆರೋಗ್ಯಪ್ಪ ಗುಡಿಯಲ್ಲಿ ಪೂಜೆಗೆ ಸಿದ್ಧತೆ ಮಾಡಲು ಹೋದಾಗ, ಅವನ ಹೆಂಡತಿ ಅಡುಗೆ ಆಳು ಸಿಲ್ವಿಯಾ ಕೊಟ್ಟಿಗೆಯನ್ನು ಸ್ವಚ್ಛ ಮಾಡಿ ದನಕರುಗಳಿಗೆ ಹುಲ್ಲು ಹಾಕಿ ಗುರುಗಳ ಮನೆಗೆ ಬಂದಿದ್ದಳು. ಹೊಸದಾಗಿ ತಾಯಿ ಸಂತ ಥೆರೇಸಮ್ಮರ ಗುಡಿ ಮತ್ತು ಪಕ್ಕದಲ್ಲಿ ಗುರುಗಳ ಮನೆಯನ್ನು ಕಟ್ಟಿದಾಗ, ಹಿಂದೆ … Read more

ಪೋಸ್ಟ್ ಮ್ಯಾನ್ ಗಂಗಣ್ಣ (ಕೊನೆಯ ಭಾಗ)”: ಎಂ.ಜವರಾಜ್

-13- ಆ ಗುಡುಗು ಸಿಡಿಲು ಮಿಂಚು ಬೀಸುತ್ತಿದ್ದ ಗಾಳಿಯೊಳಗೆ ಉದರುತ್ತಿದ್ದ ಸೀಪರು ಸೀಪರು ಮಳೆಯ ಗವ್ಗತ್ತಲೊಳಗೆ ಮನೆ ಸೇರಿದಾಗ ಎಲ್ಲರೂ ನಿದ್ರೆಗೆ ಜಾರಿದ್ದರು. ಚಿಲಕ ಹಾಕದೆ ಟೇಬಲ್ ಒತ್ತರಿಸಿ ಹಾಗೇ ಮುಚ್ಚಿದ್ದ ಬಾಗಿಲು ತಳ್ಳಿ ಒಳ ಹೋಗಿ ಮೊಂಬತ್ತಿ ಹಚ್ಚಿದೆ. ಕರೆಂಟ್ ಬಂದಾಗ ಮೊಬೈಲ್ ಚಾರ್ಜ್ ಆಗಲೆಂದು ಪಿನ್ ಹಾಕಿ ಒದ್ದೆಯಾದ ಬಟ್ಟೆ ಬಿಚ್ಚಿ ಬದಲಿಸಿ ಕೈಕಾಲು ಮುಖ ತೊಳೆದು ಉಂಡು ಮಲಗಿದವನಿಗೆ ರಾತ್ರಿ ಪೂರಾ ಬಸ್ಟಾಪಿನಲ್ಲಿ ಷಣ್ಮುಖಸ್ವಾಮಿ ಗಂಗಣ್ಣನ ಬಗ್ಗೆ ಆಡಿದ ಮಾತಿನ ಗುಂಗು. ಆ … Read more

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 12)”: ಎಂ.ಜವರಾಜ್

-೧೨-ಕರೋನಾ ನಂತರ ಆಫೀಸಲ್ಲಿ ಕೆಲಸವೂ ಹೆಚ್ಚಾಗಿತ್ತು. ಸರ್ಕಾರದ ನಿಯಮಾವಳಿ ಬದಲಾಗಿತ್ತು. ಕರೋನಾ ಭೀತಿಯಲ್ಲೆ ಮನೆಯಲ್ಲಿ ಅದು ಇದು ಕೆಲಸ ಮುಗಿಸಿ ಬೆಳಗ್ಗೆ ಆರೇಳು ಗಂಟೆಗೆ ಮನೆ ಬಿಟ್ಟರೆ ಆಫೀಸ್ ಕೆಲಸ ಮುಗಿಸಿ ಎರಡೆರಡು ಬಸ್ ಹತ್ತಿ ಮನೆ ಸೇರುತ್ತಿದ್ದುದು ರಾತ್ರಿ ಒಂಭತ್ತು ಹತ್ತು ಗಂಟೆಯಾಗುತ್ತಿತ್ತು. ಈ ಒತ್ತಡದಲ್ಲಿ ಗಂಗಣ್ಣ ಸಿಕ್ಕಿದ್ದು ಮರೆತು ಹೋಗಿತ್ತು. ಆದರೆ ಮೊಬೈಲ್ ಓಪನ್ ಮಾಡಿ ಅದು ಇದು ನೋಡುವಾಗ ಗಂಗಣ್ಣನ ಫೋಟೋ ಕಣ್ಣಿಗೆ ಬಿದ್ದು ನೆನಪಾಗ್ತಿತ್ತು. ಅದು ಬಿಟ್ಟರೆ ಪೋಸ್ಟ್ ಆಫೀಸಲ್ಲಿ ಪೋಸ್ಟ್ … Read more

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 11)”: ಎಂ.ಜವರಾಜ್

-೧೧-ಮಾರನೆ ದಿನ ಹತ್ತನ್ನೊಂದು ಗಂಟೆಗೆಲ್ಲ ಬಂದ ಗಂಗಣ್ಣ ಶಿಶುವಾರದ ಜಗುಲಿಲಿ ಧೂಳೊಡೆದು ಕುಂತ. ಕಾಲೇಜಿಗೆ ಚಕ್ಕರ್ ಹೊಡೆದು ಕ್ಯಾಸ್ಟ್ ಸರ್ಟಿಫಿಕೇಟ್ ಮಾಡಿಸಲು ರೆಡಿಯಾಗಲು ತೆಂಗಿನ ಮರಕ್ಕೆ ಒರಗಿಸಿ ನಿಲ್ಲಿಸಿದ್ದ ಸೈಕಲ್ ಒರೆಸುತ್ತಿದ್ದೆ. ಇದೇನು ಗಂಗಣ್ಣ ಇವತ್ತು ಇಷ್ಟು ಬೇಗ ಬಂದಿದಾನೆ ಅಂತ ಅಂದುಕೊಳ್ಳುವುದಕ್ಕು ಅವನು “ಯೋ ಬಾರಪ್ಪ ಇಲ್ಲಿ” ಅನ್ನುವುದಕ್ಕು ಸರಿ ಹೋಯ್ತು. ನಾನು “ಏನ್ ಗಂಗಣ್ಣ ಇವತ್ತು ಇಷ್ಟು ಜಲ್ದಿ ಬಂದಿದಿಯಾ” ಅಂದೆ. ಅಷ್ಟೊತ್ತಿಗೆ ಶಿಶುವಾರದ ಮೇಡಂ ಹೊರ ಬಂದು “ಗಂಗಣ್ಣ ಗುಗ್ರಿ ಕಾಳು ತಿಂತಿಯ.. … Read more

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 10)”: ಎಂ.ಜವರಾಜ್

-೧೦-ನಮ್ಮ ಮುಳ್ಳೂರು ಚಿಕ್ಕಿಯ ತಂಗಿ ಮಗಳು ಮೂರು ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇವತ್ತೊ ನಾಳೆಯೊ ನಾಳಿದ್ದೊ ಆಗುವ ಹೆರಿಗೆ ನೋವು. ಡಾಕ್ಟರು ಯಾವುದನ್ನು ಸರಿಯಾಗಿ ಹೇಳದೆ ನಾಳೆ ಬನ್ನಿ ರಾತ್ರಿ ಬನ್ನಿ ಬೆಳಗ್ಗೆ ಬನ್ನಿ ಇದು ಹೆರಿಗೆ ನೋವಲ್ಲ ಅಂತ ಏನೇನೊ ಸಮಜಾಯಿಸಿ ನೀಡುತ್ತಿದ್ದರು. ಮುಳ್ಳೂರು ಚಿಕ್ಕಿಗೆ ತಂಗಿ ಮಗಳ ಕಷ್ಟ ನೋಡಲಾರದೆ ಬಿಕ್ಕಿ ಬಿಕ್ಕಿ ಅಳುತ್ತ ನನ್ನನ್ನು ಕರೆದು ಬೆಂಗಳೂರಿನ ತಂಗಿಗು ತಂಗಿ ಗಂಡನಿಗೂ ಅವರ ಮೂವರು ಗಂಡು ಮಕ್ಳಳಿಗೂ, ಮುಳ್ಳೂರಿನ ತನ್ನವ್ವಳಿಗೂ “ಎರ‌್ಗ … Read more

ಅಣ್ಣ ಮತ್ತು ಪರಿವರ್ತನೆ: ಬಿ.ಟಿ.ನಾಯಕ

ಅದೊಂದು ದಿನ ‘ಅಣ್ಣ’ರಂಗಣ್ಣನ ದರಬಾರು ನಡೆದಿತ್ತು. ಅಲ್ಲಿ ಸುಮಾರು ಹತ್ತರಿಂದ ಹದಿನೈದು ಆತನ ಚೇಲಾಗಳಿದ್ದರು. ಯಾವುದೋ ಗಹನವಾದ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಅವರ ಸಂಭಾಷಣೆ ಹೀಗಿತ್ತು;‘ಅಣ್ಣಾ …ನೀನು ಏನೋ ಹೇಳು, ಆ ಧೀರನ ಪಾಳ್ಯದ ಗೋವಿಂದಣ್ಣ ನಮ್ಮ ಏರಿಯಾಕ್ಕೆ ಬಂದು ಗಲಾಟೆ ಮಾಡಿ, ಸೀನನನ್ನ ಎತ್ತಾಕ್ಕೊಂಡು ಹೋಗಬಾರದಿತ್ತು. ಆತ ಹಾಗೆ ಮಾಡಿ ಅದರ ಕಳಂಕ ನಮ್ಮ ಮೇಲೆ ಹೊರಿಸುವುದಲ್ಲದೆ, ಲಾಭ ಕೂಡಾ ಮಾಡಿ ಕೊಂಡ’ ಎಂದ ರೇವ್ಯ.‘ಏಯ್ ಸುಮ್ಕಿರಲೇ, ಅವನು ಹಾಗ ಮಾಡಿದಾ ಅಂತ ಏನೋ … Read more